Watch Video
ಇಂದಿನ ಸಾಮಾಜಿಕ ಮಾಧ್ಯಮದ(social media) ಜಗತ್ತಿನಲ್ಲಿ 5 ನಿಮಿಷ ಇನ್ಸ್ಟಾಗ್ರಾಮ್ ಸ್ಕ್ರಾಲ್ ಮಾಡಿದರೆ, ನಾವು ಎಷ್ಟು ಬಡವರೆಂದು ತಿಳಿಯುತ್ತದೆ. ಒಬ್ಬರು ಬಂಗಲೆ ತೆಗೆದುಕೊಂಡಿದರೆ, ಇನ್ನೊಬ್ಬರು ಕಾರು ತೆಗೆದುಕೊಂಡಿರುತ್ತಾರೆ, ಒಬ್ಬರು ಪ್ರವಾಸಕ್ಕೆ(trip) ಹೋಗಿದ್ದಾರೆ, ಆದರೆ ನಾವು ಇಲ್ಲಿ ತರಕಾರಿ ಮಾರುವವನ ಹತ್ತಿರ ಜಗಳವಾಡುತ್ತಿದ್ದೇವೆ. ನಿಮಗೂ ಸಾಮಾಜಿಕ ಮಾಧ್ಯಮ ನೋಡಿದ ನಂತರ ಈ ರೀತಿ ಎನಿಸಿದರೆ ಕಮೆಂಟ್ ಮಾಡಿ. ಆದರೆ ನೀವು ಜೀವನದಲ್ಲಿ ಈ 10 ವಿಷಯಗಳನ್ನು ಮಾಡುತ್ತಿದ್ದರೆ, ಆರ್ಥಿಕವಾಗಿ ಮುಂದಿರುವಿರೆಂದರ್ಥವಾಗಿದ್ದು, ಸರಿಯಾದ ಮಾರ್ಗದಲ್ಲೇ ಇರುವಿರಾ. ಹೀಗಾಗಿ ಈ ಲೇಖನವನ್ನು ಕೊನೆವರೆಗೂ ನೋಡಿ ಮತ್ತು ಈ 10 ಚಿಹ್ನೆಗಳಲ್ಲಿ ನಿಮಗೆ ಯಾವುದೆಲ್ಲ ಹೋಲಿಕೆಯಾಯಿತು ಎಂಬುದನ್ನು ಕಮೆಂಟ್ನಲ್ಲಿ ತಿಳಿಸಿ.
ನಿಮ್ಮ ಮೇಲೆ ಯಾವುದೇ ರೀತಿಯ ಸಾಲವಿಲ್ಲ. ನಿಮಗೂ ಅನೇಕ ಬಾರಿ ಸಾಲದ ಮೇಲೆ ಕಾರನ್ನು ಖರೀದಿಸಲು, ಮನೆಯನ್ನು ಮಾಡಲು ಸೂಚಿಸುತ್ತಿದ್ದು, ನೀವು ಯಾವುದೇ ಸಾಲವನ್ನು ತೆಗೆದುಕೊಂಡಿರುವುದಿಲ್ಲ ಮತ್ತು ಭವಿಷ್ಯದಲ್ಲೂ ಯಾವುದೇ ರೀತಿಯ ಸಾಲವನ್ನು(bad debt) ತೆಗೆದುಕೊಂಡಿಲ್ಲದಿದ್ದರೆ, ನೀವು ಆರ್ಥಿಕವಾಗಿ ತುಂಬಾ ಚೆನ್ನಾಗಿದ್ದೀರಿ ಎಂದರ್ಥವಾಗಿದೆ. ಭಾರತದಲ್ಲಿ ಅಸುರಕ್ಷಿತ ಸಾಲಗಳು(unsecured loans) ತುಂಬಾ ವೇಗವಾಗಿ ಬೆಳೆಯುತ್ತಿದೆ ಎಂದು ಎಕನಾಮಿಕ್ ಟೈಮ್ಸ್ನಲ್ಲಿ(economic times) ತಿಳಿಸಲಾಗಿದೆ.
ಅಸುರಕ್ಷಿತ ಸಾಲ ಎಂದರೆ ನೀವು ಏನನ್ನು ಗಿರವಿ(pawn) ಇಡದೆ ಪಡೆಯುವ ಸಾಲವಾಗಿದೆ. ದೇಶದಲ್ಲಿ ಅತಿಯಾಗುತ್ತಿರುವ ಹಣದುಬ್ಬರ(inflation) ಮತ್ತು ಆರ್ಥಿಕ ನಿಧಾನಗತಿಯ ಬೆಳವಣಿಗೆಯಿಂದ(economic slow growth), ವಾರ್ಷಿಕ ಆದಾಯ 3 ರಿಂದ 10 ಲಕ್ಷ ಇರುವ ಮದ್ಯಮ ವರ್ಗದ ಜನರು, ಅದರಲ್ಲೂ ಯುವ ಇರುವವರು ಅಸುರಕ್ಷಿತ ಸಾಲ ತೆಗೆದುಕೊಳ್ಳುತ್ತಿರುವುದು ಹೆಚ್ಚುತ್ತಿದೆ.
ಈ ಆರ್ಟಿಕಲ್ನಲ್ಲಿ ಒಂದು ಉದಾಹರಣೆ ತಿಳಿಸಲಾಗಿದೆ. ಇದರಲ್ಲಿ ಒಬ್ಬ ಐಟಿ ವ್ಯಕ್ತಿಗೆ ತನ್ನ ಫೋನನ್ನು ಅಪ್ಗ್ರೇಡ್ ಮಾಡಿಕೊಳ್ಳಬೇಕಿತ್ತು. ಅವನ ಬಜೆಟ್ ಕೇವಲ 25,000 ರೂ ವಿತ್ತು. ಆದರೆ ಅವನು 2 ವರ್ಷಗಳಿಗೆ "no cost emi" ಮೇಲೆ, ಐಫೋನ್ ಖರೀದಿಸುತ್ತಾರೆ. ಅದರ ಬೆಲೆ ಭಾರತದಲ್ಲಿ 53,000 ರೂಗೂ ಹೆಚ್ಚಿದೆ. ಇದರಲ್ಲಿ ದೆಹಲಿಗೆ ಸಂಬಂದಿಸಿದ ಮಾರ್ಕೆಟಿಂಗ್ ಪ್ರೊಫೆಷನಲ್ನ ಉದಾಹರಣೆ ನೀಡಲಾಗಿದೆ. ಅವರಿಗೆ ಭಾರತದಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ "no cost emi" ತೆಗೆದುಕೊಂಡು ಬಾಲಿಯನ್ನು(bali) ಸುತ್ತಾಡಲು ಹೋದರು.
ಭಾರತದಲ್ಲಿನ ಯುವ ಪೀಳಿಗೆ ಇಂದು ಪ್ರಯಾಣಕ್ಕೆ ಅಧಿಕ ಖರ್ಚು ಮಾಡುತ್ತಿದೆ. ಏಕೆಂದರೆ ಇಂದು "travel now, pay later" ರೀತಿಯ ಅನೇಕ ಪೇಮೆಂಟ್ ಆಯ್ಕೆಗಳು ಬಂದಿದೆ. ಹೀಗಾಗಿ ನಿಮಗೆ ಬೇಕಾದ ವಸ್ತುವನ್ನು ಪೂರ್ತಿ ಹಣ ನೀಡಿ ಖರೀದಿಸುತ್ತಿದ್ದು, ಸಾಲ ತೆಗೆದುಕೊಂಡು ಪ್ರಯಾಣ ಮಾಡುತ್ತಿಲ್ಲವೆಂದರೆ ನೀವು ಆರ್ಥಿಕವಾಗಿ ತುಂಬಾ ಚೆನ್ನಾಗಿದ್ದೀರೆಂದರ್ಥವಾಗಿದೆ.
ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳುನೀವು ನಿಮ್ಮ ಮನೆ, ಟಿವಿ, ವೈಫೈ, ವಿದ್ಯುತ್ ಬಿಲ್ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ನೀಡುತ್ತಿದರೆ ಸಮಯಕ್ಕೆ ಸರಿಯಾಗಿ ನೀಡುತ್ತಿರುತ್ತೀರಾ. ನೀವು ತಡವಾಗಿ ಬಿಲ್ ಪೇ ಮಾಡುವ ಕಾರಣ ಶುಲ್ಕವನ್ನು(fees) ನೀಡುವ ಅವಶ್ಯಕತೆ ಬಂದಿಲ್ಲ. ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮೇಲೆ ಪ್ರತಿ ತಿಂಗಳು 3 ರಿಂದ 3.5 ರಷ್ಟು ಬಡ್ಡಿ ಇರುತ್ತದೆ. ಅಂದರೆ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ 10 ಸಾವಿರವಿದ್ದು, ಅಂತಿಮ ದಿನಾಂಕದ(due date) ಮೊದಲೇ ಪೇಮೆಂಟ್ ಮಾಡದಿದ್ದರೆ 350 ರೂ ಅಧಿಕ ನೀಡಬೇಕಾಗುತ್ತದೆ. ಹೀಗಾಗಿ ನೀವು ನಿಮ್ಮ ಎಲ್ಲಾ ಬಿಲ್ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿದ್ದರೆ, ನೀವು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ಕ್ರೆಡಿಟ್ ಸ್ಕೋರ್ ಕೂಡ ಸುಧಾರಿಸುತ್ತದೆ.
ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶನಿಮಗಾಗಿ ಆರೋಗ್ಯ ವಿಮೆ(health insurance) ಮತ್ತು ಅವಧಿ ವಿಮೆಯನ್ನು(term insurance) ತೆಗೆದುಕೊಂಡಿದ್ದರೆ, ನೀವು ಆಸ್ಪತ್ರೆಯ ಬಿಲ್ ಪಾವತಿಸುವ ಬಗ್ಗೆ ಚಿಂತಿಸಬೇಕಿಲ್ಲ. ಭಾರತದಲ್ಲಿ ಮೆಡಿಕಲ್ ಹಣದುಬ್ಬರ 14 ರಷ್ಟು ಇದ್ದು, ಭವಿಷ್ಯದಲ್ಲಿ ನಿಮಗೆನಾದರೂ ಅದರೆ, ಭಗವಂತನ ಕೃಪೆಯಿಂದ ಆ ರೀತಿ ಆಗದಿರಲಿ, ಆಗ ನಿಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ನೀವು ಅವಧಿ ವಿಮೆಯನ್ನು ತೆಗೆದುಕೊಂಡಿದ್ದಾರೆ, ನೀವು ಆರ್ಥಿಕವಾಗಿ ತುಂಬಾ ಗಟ್ಟಿ ಇದ್ದು, ಹಣಕಾಸು ಯೋಜನೆ ಕೌಶಲ್ಯಗಳು ತುಂಬಾ ಚೆನ್ನಾಗಿದೆ ಎಂದು ತಿಳಿಸುತ್ತದೆ.
ತುರ್ತು ನಿಧಿ ಎಂದರೆ ಕಷ್ಟದ ಸಮಯದಲ್ಲಿ ಬಳಸುವ ಹಣವಾಗಿದೆ. ನೀವು ಕೆಲಸ ತೊರೆದಾಗ, ವ್ಯಾಪಾರದಲ್ಲಿ ನಷ್ಟವಾದಾಗ, ಇಲ್ಲ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದು ನೀವು ಕೆಲಸ ಮಾಡಲು ಸಾಧ್ಯವಾಗದಿದ್ದಾಗ, ನಿಮ್ಮ ಕುಟುಂಬದ ತಿಂಗಳ ಖರ್ಚಿನಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು. ನಿಮ್ಮದು ತಿಂಗಳು 20,000 ರೂ ಖರ್ಚಿದೆ ಎಂದುಕೊಂಡರೆ, ಆಗ 3 ತಿಂಗಳ ತುರ್ತು ನಿಧಿ 60,000 ರೂ ಆಗುತ್ತದೆ. ಅದನ್ನು ಎಲ್ಲಿಯಾದರೂ ಉಳಿಸಿ ಇಟ್ಟಿರಿ. ಇದು ಕೂಡ ನೀವು ಆರ್ಥಿಕವಾಗಿ ತುಂಬಾ ಚೆನ್ನಾಗಿದ್ದೀರ ಎಂಬುದನ್ನು ತಿಳಿಸುತ್ತದೆ. ಏಕೆಂದರೆ ಇಂದು ತುಂಬಾ ಕಡಿಮೆ ಜನಗಳ ಹತ್ತಿರ ತುರ್ತು ನಿಧಿ ಇರುತ್ತದೆ.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1ನೀವು ಸ್ಟಾಕ್ನಲ್ಲಿ ಇಲ್ಲ, ಎಸ್ಐಪಿ(sip) ಮೂಲಕ ಇಂಟೆಕ್ಸ್ ಫಂಡ್(index fund) ಇಲ್ಲ ಮ್ಯೂಚುಯಲ್ ಫಂಡ್ನಲ್ಲಿ(mutual fund) ಹೂಡಿಕೆ ಮಾಡುತ್ತಿದ್ದಾರೆ, ದೀರ್ಘವದಿಯ ಯೋಚನೆ ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ. ಇದು ಕೂಡ ನೀವು ನಿಮ್ಮ ಬದುಕಿನಲ್ಲಿ ಚೆನ್ನಾಗಿದ್ದು, ಆರ್ಥಿಕವಾಗಿ ಸರಿ ಇದ್ದೀರಾ ಎಂದರ್ಥವಾಗಿದೆ. ಇದು ಏಕೆಂದರೆ ಭಾರತದಲ್ಲಿ ಕೇವಲ 3% ಜನರು ಮಾತ್ರ ಹೂಡಿಕೆ ಮಾಡುತ್ತಾರೆ.
ನೀವು ಯಾವಾಗಲೂ ಉದ್ಯೋಗ ಮತ್ತು ವ್ಯಾಪಾರದ ಜೊತೆಗೆ ಸಕ್ರಿಯ ಆದಾಯವನ್ನು(active income) ಯಾವ ರೀತಿ ಹೆಚ್ಚಿಸಬೇಕು ಎಂಬುದರ ಬಗ್ಗೆ ಯೋಚಿಸುತ್ತೀರಾ. ಏಕೆಂದರೆ ನೀವು ಆರ್ಥಿಕವಾಗಿ ಬೆಳೆಯಲು ಪ್ರತಿ ವರ್ಷ ನಿಮ್ಮ ಸಕ್ರಿಯ ಆದಾಯ ಹೆಚ್ಚುತ್ತಿರಬೇಕು ಎಂದು ತಿಳಿದಿದ್ದೀರಾ ಮತ್ತು ನಿಮ್ಮ ಸಕ್ರಿಯ ಆದಾಯವನ್ನು ಯಾವುದೇ ಒಳದಾರಿ(shortcut) ಇಲ್ಲದೆ ಪ್ರಾಮಾಣಿಕವಾಗಿ(genuine) ಬೆಳೆಸುವ ಬಗ್ಗೆ ಯೋಚಿಸುತ್ತಿದ್ದೀರಾ. ನೀವು ಈಗ ವಿದ್ಯಾರ್ಥಿಯಾಗಿದ್ದರೆ ಅಡ್ಡ ಕೆಲಸದ ಆದಾಯವನ್ನು ಗಳಿಸಲು ತುಂಬಾನೇ ಕಷ್ಟ ಪಡುತ್ತಿರುತ್ತೀರಾ. ಇದು ನಿಮ್ಮ ಅರ್ಥಶಾಸ್ತ್ರವನ್ನು(economics) ಕಡಿಮೆ ವಯಸ್ಸಿನಲ್ಲೇ ಕಲಿತಿದ್ದೀರಾ ಎಂಬುದನ್ನು ತಿಳಿಸುತ್ತದೆ. ಅಂದರೆ ಹಣವನ್ನು ಉಳಿಸಿ ಹೂಡಿಕೆ ಮಾಡಿ ಸಕ್ರಿಯ ಆದಾಯವನ್ನು ಹೆಚ್ಚಿಸುವ ಮಾದರಿಯನ್ನು(model) ಮಾಡುತ್ತಿರುವಿರಾ.
ಇದನ್ನು ಓದಿ: ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯನಿಮ್ಮ ಆದಾಯ ಹೆಚ್ಚಿದಂತೆ ನಿಮ್ಮ ಖರ್ಚುಗಳು ಹೆಚ್ಚಿದರೆ ಅದು ಜೀವನಶೈಲಿ ಹಣದುಬ್ಬರವಾಗಿದೆ. ನೀವು ಮುಂಚೆ 30,000 ರೂ ಗಳಿಸುತ್ತಿದ್ದು, ಅದರಲ್ಲಿ 10,000 ರೂ ಉಳಿಸುತ್ತಿದ್ದೀರಿ, ಆದರೆ ಇಂದು ನೀವು 40,000 ರೂ ಗಳಿಸುತ್ತಿರುವಿರಾ ಮತ್ತು ಕೇವಲ 10,000 ರೂ ವನ್ನು ಉಳಿಸುತ್ತಿರುವಿರಿ. ನಿಮ್ಮ ಆದಾಯ 33% ನಷ್ಟು ಹೆಚ್ಚಿದೆ. ಆದರೆ ನಿಮ್ಮ ತಿಂಗಳ ಖರ್ಚು 20,000 ರೂಯಿಂದ 30,000 ರೂ ವಾಗಿದೆ. ಅಂದರೆ ನಿಮ್ಮ ತಿಂಗಳ ಖರ್ಚು 50% ನಷ್ಟು ಹೆಚ್ಚಿದೆ. ನಿಮ್ಮ ತಿಂಗಳ ಖರ್ಚು ಸಮವಿದ್ದು ಜೀವನಶೈಲಿ ಹಣದುಬ್ಬರ ಹೆಚ್ಚಿಲ್ಲದಿದ್ದರೆ ನೀವು ಆರ್ಥಿಕವಾಗಿ ಚೆನ್ನಾಗಿದ್ದೀರಾ.
ನಮ್ಮ ಗೆಳೆಯರು ಯಾರು ಎಂಬುದು ನಮ್ಮ ಭವಿಷ್ಯದ ಬಗ್ಗೆ ತಿಳಿಸುತ್ತದೆ ಎಂಬುದನ್ನು ಬಾಲ್ಯದಲ್ಲಿ ಕೇಳಿದ್ದೇವೆ. ಆದರೆ ಇಂದು ನೀವು ಯಾವ ರೀತಿಯ ವಿಷಯಗಳನ್ನು(content) ನೋಡುತ್ತೀರ ಎಂಬುದು ನಿಮ್ಮ ಭವಿಷ್ಯದ ಬಗ್ಗೆ ತಿಳಿಸುತ್ತದೆ. ನೀವು ಶೈಕ್ಷಣಿಕ ವಿಷಯಗಳನ್ನು(educational content) ನೋಡುತ್ತಿದ್ದು, ಆರ್ಥಿಕತೆಯ ಬಗ್ಗೆ ಕಲಿಯುತ್ತಿದ್ದರೆ, ಇತರರಿಗೆ ಹೋಲಿಸಿದರೆ ನಿಮ್ಮ ಸಮಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೀರಾ. ಇಂದು ಜಗತ್ತು ತ್ವರಿತ ಮನರಂಜನೆಯ(quick entertainment) ಮೇಲೆ ಗಮನ ಹರಿಸುತ್ತಿದೆ. ಆದರೆ ನೀವು ಹೊಸದನ್ನು ಕಲಿಯಲು ಗಮನ ಹರಿಸುತ್ತಿರುವಿರಿ. ಇದು ಕೂಡ ನೀವು ಬದುಕಿನಲ್ಲಿ ಚೆನ್ನಾಗಿದ್ದೀರಾ ಎಂಬುದನ್ನು ತಿಳಿಸುತ್ತದೆ. ನೀವು ಯಾವ ರೀತಿಯ ಯೂಟ್ಯೂಬ್ ಚಾನೆಲ್ಗಳನ್ನು ಸಬ್ಸ್ಕ್ರೈಬ್ ಆಗಿದ್ದೀರಾ ಎಂಬುದನ್ನು ನೀವೇ ನೋಡಿ.
ನೀವು ಬದುಕಿನಲ್ಲಿ ಚೆನ್ನಾಗಿದ್ದೀರಾ ಇಲ್ಲವೇ ಎಂಬುದು ಎರಡು ಆಟದಿಂದ ತೀರ್ಮಾನಿಸಬಹುದು.
ಸ್ಥಿತಿ ಆಟದಲ್ಲಿ(status game) ನೀವು ಇತರ ವ್ಯಕ್ತಿಗೆ ಹೋಲಿಸಿದರೆ ಉತ್ತಮವಾಗಿ ಹೇಗೆ ಕಾಣಬಹುದು ಎಂಬುದನ್ನು ನೋಡುತ್ತೀರಾ. ಇದು ಅವರ ಹತ್ತಿರ ಇಲ್ಲದಿರುವುದು ನಿಮ್ಮ ಹತ್ತಿರ ಇದ್ದಾಗ ಸಾಧ್ಯವಾಗುತ್ತದೆ. ಅಂದರೆ ಇತರ ವ್ಯಕ್ತಿಗೆ ಹೋಲಿಸಿದರೆ ನಿಮ್ಮ ಮನೆ ಎಷ್ಟು ದೊಡ್ಡದಿದೆ? ಅದರಲ್ಲಿ ಎಷ್ಟು ಕೋಣೆಗಳಿವೆ? ನೀವು ಯಾವ ಕಾರನ್ನು ಓಡಿಸುತ್ತೀರಾ?, ಯಾವ ಬ್ರ್ಯಾಂಡ್ನ ಬಟ್ಟೆಯನ್ನು ಧರಿಸುತ್ತೀರಾ? ಎಂಬುದಾಗಿದೆ. ಇದು ನೀವು ಎಷ್ಟೊಂದು ಖುಷಿಯಾಗಿದ್ದೀರಾ ಎಂಬುದನ್ನು ತಿಳಿಸುತ್ತದೆ. ಸ್ಥಿತಿ ಆಟದಲ್ಲಿ ನೀವು ಒಬ್ಬ ವ್ಯಕ್ತಿ ಇಲ್ಲ ಗುಂಪಿನ ಜೊತೆ ಹೋಲಿಸಿಕೊಳ್ಳಬೇಕು(compare). ಅಂದರೆ ನೀವು ಯಾವಾಗಲೂ ಒಂದು ಸ್ಪರ್ಧಾತ್ಮಕ ಮನಸ್ಥಿತಿಯಲ್ಲಿ(competitive mindset) ಇರುತ್ತೀರಾ.
ಉದಾಹರಣೆಗೆ ನಿಮ್ಮ 4 ಸ್ನೇಹಿತರು ಇದ್ದಾರೆ, ನಾಲ್ವರು ಕೆಳ ಮಧ್ಯಮ ವರ್ಗಕ್ಕೆ(lower middle class) ಬರುತ್ತಾರೆ. ನೀವು ಐಫೋನ್ ಖರೀದಿಸಿದರೆ ಅದನ್ನು ನಿಮ್ಮ ಇತರ ಗೆಳೆಯರು ಖರೀದಿಸುವವರೆಗೂ ನಿಮಗೆ ಉತ್ತಮ ಅನುಭವವಾಗುತ್ತದೆ. ಯಾರಾದರೂ ನಿಮಗಿಂತ ಉತ್ತಮವಿದ್ದರೆ, ಆ ವ್ಯಕ್ತಿಯನ್ನು ನೀವು ಸ್ವಯಂ ಆಗಿ ದ್ವೇಷಿಸಲು ಪ್ರಾರಂಭಿಸುತ್ತೀರಾ. ಹೀಗಾಗಿ ಸ್ಥಿತಿ ಆಟವನ್ನು ಆಡಲೇಬೇಡಿ.
ನೀವು ಸಂಪತ್ತಿನ ಆಟವನ್ನು(wealth game) ಆಡಬೇಕು. ಈ ಆಟದಲ್ಲಿ ನೀವು ವೈಯಕ್ತಿಕ ಆಟಗಾರನಾಗಿದ್ದು, ಸಮಾಜದ ಬಗ್ಗೆ ಯೋಚಿಸಬೇಡಿ. ನೀವು ಸರಿಯಾದ ಮಾರ್ಗದಲ್ಲೇ ಇದ್ದೀರಾ ಎಂದು ತಿಳಿದಿರುತ್ತದೆ, ಏಕೆಂದರೆ ಸ್ವಲ್ಪ ವರ್ಷದಲ್ಲಿ ನಿಮ್ಮ ಸಂಪತ್ತು ಬೆಳೆಯಲಿದೆ. ಇದರಲ್ಲಿ ನಿಮಗೆ ತುಂಬಾ ಖುಷಿಯಾಗುತ್ತದೆ. ಏಕೆಂದರೆ ನೀವು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಕಿಲ್ಲ. ನೀವು ನಿಮ್ಮೊಂದಿಗೆ ಸ್ಪರ್ಧಿಸುತ್ತಿರುವಿರಾ. ನಾವು ನಿಮ್ಮಗೆ ಉತ್ತಮ ಭಾವನೆ ಈಗಲೇ ಮೂಡಿಸುತ್ತೇವೆ. ನೀವು 10 ವರ್ಷದ ಹಿಂದೆ ಹೇಗಿದ್ದೀರಿ ಎಂಬುದನ್ನು ನೋಡಿ ಮತ್ತು ಈಗ ಹೇಗಿದ್ದೀರ ಎಂಬುದನ್ನು ನೋಡಿ. ನಿಮ್ಮ ಬೆಳವಣಿಗೆ ಪ್ರತಿದಿನ ಕಾಣುವುದಿಲ್ಲ. ಆದರೆ ನೀವು ಅದನ್ನು ವರ್ಷಗಳಲ್ಲಿ ಹೋಲಿಸಿದರೆ, ಎಷ್ಟು ಬೆಳೆದಿದಿರಾ ಎಂದು ತಿಳಿಯುತ್ತದೆ. ನೀವು ಸಂಪತ್ತಿನ ಆಟವನ್ನು ಆಡುತ್ತಿದ್ದಾರೆ ಆರ್ಥಿಕವಾಗಿ ಸರಿಯಾಗಿ ಇದ್ದೀರೆಂದರ್ಥವಾಗಿದೆ.
ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳುಅಂದರೆ ಉನ್ನತ ಆದಾಯ ವರ್ಗಕ್ಕೆ(top income category) ಬರಲು ಭಾರತದಲ್ಲಿ ಎಷ್ಟು ಆದಾಯ ಗಳಿಸಬೇಕು ಎಂಬುದಾಗಿದೆ. ಕೆಳಗಿನ ಫೋಟೋ ಭಾರತದಲ್ಲಿ ಜನರು ವಯಸ್ಸಿನ ಆಧಾರದ ಮೇಲೆ ಎಷ್ಟು ಗಳಿಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ. ನಮ್ಮ ಲೇಖನವನ್ನು 22 ರಿಂದ 44ನೇ ವರ್ಷದವರು ಅಧಿಕ ನೋಡುತ್ತಾರೆ. ಹೀಗಾಗಿ ಇವರ ಬಗ್ಗೆಯೇ ಚರ್ಚಿಸೋಣ.
ಮೊದಲಿಗೆ ನಾವು 25 ರಿಂದ 34 ವರ್ಷದವರಿನ ಸಂಬಳದ ಬಗ್ಗೆ ತಿಳಿಯೋಣ. ಇದರಲ್ಲಿ 10% ಗಿಂತ ಕಡಿಮೆ ಜನರು 3,900 ರೂ ಗಿಂತ ಕಡಿಮೆ ಗಳಿಸುತ್ತಾರೆ. 75% ಗಿಂತ ಅನೇಕರು 14,000 ರೂ ಗಿಂತ ಕಡಿಮೆ ಗಳಿಸುತ್ತಾರೆ ಮತ್ತು 90% ಜನರು 25,000 ರೂ ಗಿಂತ ಕಡಿಮೆ ಗಳಿಸುತ್ತಾರೆ. ಭಾರತದಲ್ಲಿ 25 ರಿಂದ 34 ವರ್ಷದ ಜನರ ಸರಾಸರಿ ಸಂಬಳ 10,000 ರೂ ಇದೆ. ನೀವು 25 ವರ್ಷಕ್ಕೆ ಮೇಲಿದ್ದು ನಿಮ್ಮ ಸಂಬಳ 25,000 ರೂ ವಿದ್ದರೆ ನೀವು 90% ಜನರಿಗಿಂತ ಮುಂದಿರುವಿರ. ಇದೇ ರೀತಿ ನಿಮ್ಮ ವಯಸ್ಸು 35 ರಿಂದ 44 ರ ಒಳಗೆ ಇದ್ದು 33,000 ರೂ ಗಳಿಸುತ್ತಿದ್ದಾರೆ, ನೀವು ನಿಮ್ಮ ಕೆಟಗರಿಯ 90% ಕ್ಕಿಂತಲೂ ಅಧಿಕ ಜನರಿಂದ ಮುಂದಿರುವಿರ. ಆದರೆ ನಮಗೆ ಈ ಸಿದ್ಧಾಂತದಿಂದ ಖುಷಿ ಸಿಗುವುದಿಲ್ಲ. ಏಕೆಂದರೆ ಮನೋವಿಜ್ಞಾನದಲ್ಲಿ ಸಾಮಾಜಿಕ ಹೋಲಿಕೆಯ(social comparison) ಸಿದ್ದಂತವಿದೆ. ಇದರ ಪ್ರಕಾರ ನಾವು ನಮ್ಮ ಯಶಸ್ಸನ್ನು ಇತರರ ಯಶಸ್ಸಿನಿಂದ ಹೋಲಿಕೆ ಮಾಡುತ್ತೇವೆ. ಇದನ್ನು ಆದಾಯಕ್ಕೆ ಹೋಲಿಸಿದರೆ ನಿಮಗೆ ಹತ್ತಿರ ಇರುವವರು ಎಷ್ಟು ಗಳಿಸುತ್ತಾರೆ ಎಂಬುದು ನೀವು ಯಾವ ರೀತಿ ಅನುಭವಿಸುತ್ತೀರಾ ಎಂಬುದನ್ನು ತಿಳಿಸುತ್ತದೆ. ನಿಮ್ಮ ಗೆಳೆಯರು ಪ್ರತಿ ತಿಂಗಳು 50,000 ರೂ ಗಳಿಸುತ್ತಿದ್ದು, ನೀವು 35,000 ರೂ ಗಳಿಸುತ್ತಿದ್ದಾರೆ. ನೀವು ಭಾರತದ ವಯಸ್ಸಿನ ವರ್ಗದ ಆದಾಯಕ್ಕಿಂತ ಅಧಿಕ ಗಳಿಸುತ್ತಿದ್ದರು. ನಿಮ್ಮ ಗೆಳೆಯರು ನಿಮಗಿಂತ ಅಧಿಕ ಗಳಿಸುತ್ತಿರುವುದರಿಂದ ನಿಮಗೆ ಒಳ್ಳೆಯ ಅನುಭವವಾಗುವುದಿಲ್ಲ.
ನಷ್ಟ ನಿವಾರಣೆ(loss aversion) ಎಂಬ ಒಂದು ಮನೋವಿಜ್ಞಾನ ಸಿದ್ದಂತವಿದೆ. ಇದರ ಪ್ರಕಾರ ನಮಗೆ ನಷ್ಟವಾದಾಗ ದುಃಖವಾಗುವಷ್ಟು ಲಾಭವಾದ ಖುಷಿಯಲ್ಲಿ ಸಿಗುವುದಿಲ್ಲ. ಅಂದರೆ ನಿಮಗೆ ನಿಮ್ಮ ಜೇಬಿನಿಂದ 100 ರೂ ಸಿಕ್ಕಾಗ ಆಗುವ ಖುಷಿಗಿಂತ ಅಧಿಕ ಬೇಸರ 100 ರೂ ಕಳೆದಾಗ ಆಗುತ್ತದೆ. ಇದೇ ರೀತಿ ನೀವು ನಿಮಗೆ ಹತ್ತಿರವಿರುವ ಜನಗಳಿಂದ ಅಧಿಕ ಗಳಿಸಿದರೆ, ಅದರಿಂದ ಸಿಗುವ ಖುಷಿಯು ಅಧಿಕವಿರುತ್ತದೆ. ಆದರೆ ಅವರಿಗಿಂತ ಕಡಿಮೆ ಗಳಿಸಿದರೆ, ಆ ದುಃಖ ತುಂಬಾನೇ ಇರುತ್ತದೆ.
ಇದಕ್ಕೆ ಪರಿಹಾರವನ್ನು ವಾರೆನ್ ಬಫೆಟ್(warren buffet) ಅವರು ಚೆನ್ನಾಗಿ ತಿಳಿಸಿದ್ದಾರೆ. ಇದಕ್ಕೆ ಅವರು ಒಳ ಅಂಕಪಟ್ಟಿಯನ್ನು(inner scorecard) ಮಾಡಲು ಹೇಳುತ್ತಾರೆ. ನಿಮ್ಮ ಹತ್ತಿರ ಎರಡು ಪೇಪರ್ ಇದೆ ಎಂದುಕೊಳ್ಳಿ. ಒಂದು ಪೇಪರ್ನಲ್ಲಿ ಸಮಾಜ ಸಂಖ್ಯೆಯನ್ನು ನೀಡಿದರೆ, ಇನ್ನೊಂದರಲ್ಲಿ ನೀವೇ ಸಂಖ್ಯೆಯನ್ನು ನೀಡುತ್ತೀರಾ. ಸಮಾಜ ಸಂಖ್ಯೆಯನ್ನು ಕೊಡುವುದನ್ನು ಹೊರ ಅಂಕಪಟ್ಟಿ(outer scorecard) ಎನ್ನಲಾಗುತ್ತದೆ. ಇದು ನೀವು ಯಾವ ವಸ್ತುಗಳನ್ನು ಖರೀದಿಸುತ್ತಿದ್ದೀರ ಎಂಬುದರ ಮೇಲೆ ನಿಂತಿರುತ್ತದೆ. ನೀವು ನಿಮಗಾಗಿ ಸಂಖ್ಯೆಯನ್ನು ನೀಡುವುದನ್ನು ಒಳ ಅಂಕಪಟ್ಟಿ ಎನ್ನಲಾಗುತ್ತದೆ. ಇದರಲ್ಲಿ ನೀವು ಎಷ್ಟು ಬೆಳೆಯುತ್ತಿರ ಎಂಬುದರ ಮೇಲೆ ಸಂಖ್ಯೆಯನ್ನು ನೀಡುತ್ತೀರಾ.
ಉದಾಹರಣೆಗೆ ನಾನು ನನ್ನ ಚಾನೆಲ್ನಲ್ಲಿ(info mind kannada) ಬಿಡುವ ವೀಡಿಯೋಗಳಿಗೆ ಹೋಲಿಸಿದರೆ ಹೊರಗಿನ ಅಂಕಪಟ್ಟಿಯಲ್ಲಿ ಈ ವೀಡಿಯೋಗಳ ವೀಕ್ಷಣೆಯ(count) ಮೇಲೆ ತೆಗೆದುಕೊಂಡರೆ, ಫ್ಲಾಪ್(flop) ವೀಡಿಯೋಗಳಾಗಿದೆ. ಆದರೆ ನನ್ನ ಒಳ ಅಂಕಪಟ್ಟಿಯಲ್ಲಿ ಈ ವೀಡಿಯೋಗಳು ಯಶಸ್ಸನ್ನು ತಂದಿವೆ. ಏಕೆಂದರೆ ಈ ಎಲ್ಲಾ ವೀಡಿಯೋಗಳಲ್ಲೂ ನಾನು ನನ್ನ 200% ನೀಡಿದ್ದೇನೆ. ಮುಖ್ಯ ಇರುವ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದ್ದೇನೆ. ನಾನು ಈ ಎಲ್ಲ ವಿಷಯಗಳ ಮೇಲೆ ಸಾಕಷ್ಟು ಸಂಶೋಧನೆ ಮಾಡಿರುವುದರಿಂದ, ನನ್ನ ಜ್ಞಾನವೂ ಸಾಕಷ್ಟು ಸುಧಾರಿಸಿಕೊಂಡಿದೆ. ಹೀಗಾಗಿ ನೀವು ಹೊರ ಅಂಕಪಟ್ಟಿ ಬಿಟ್ಟು ಒಳ ಅಂಕಪಟ್ಟಿ ಮೇಲೆ ಗಮನ ಹರಿಸಿ. ಇದರಿಂದ ನಿಮ್ಮ ಬಗ್ಗೆ ನಿಮಗೆ ಉತ್ತಮವೆನಿಸುತ್ತದೆ.
ಇದಾಗಿತ್ತು ನೀವು ಆರ್ಥಿಕವಾಗಿ ಚೆನ್ನಾಗಿದ್ದೀರ ಎಂದು ತಿಳಿಸುವ 10 ಚಿಹ್ನೆ. ಇವುಗಳಲ್ಲಿ ಎಷ್ಟು ನಿಮಗೆ ಹೋಲಿಕೆಯಾಯಿತು ಎಂಬುದನ್ನು ಕಮೆಂಟ್ ಭಾಗದಲ್ಲಿ ತಿಳಿಸಿ. ತುಂಬಾ ಕಡಿಮೆ ಹೋಲಿಕೆಯಾಗುತ್ತಿದ್ದರೆ ಇನ್ನಷ್ಟನ್ನು ಫಾಲೋ ಮಾಡಲು ಪ್ರಯತ್ನಿಸಿ.
Explore all our Posts by categories.
Info Mind 2011
Info Mind 1651
See all comments...