Watch Video
ನೀವು ಬೃಹತ್ ವ್ಯಾಪಾರವನ್ನು(massive business) ಸೃಷ್ಟಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇಲ್ಲ ನಿಮ್ಮ ಈಗಿನ ವ್ಯಾಪಾರವನ್ನು 100M$(10 crore) ವ್ಯಾಪಾರವನ್ನಾಗಿ ಬೆಳೆಸಲು ಬಯಸಿದ್ದರೆ ಈ ಲೇಖನ ನಿಮಗೆ ಉತ್ತಮವಾಗಿದೆ. ನಾವು ಈ ಲೇಖನದಲ್ಲಿ ತಿಳಿಸುವ ಮಾಹಿತಿಯನ್ನು ಅನೇಕರು 1,000 ರೂ ಕೋರ್ಸ್‌ಸ್ ಮಾಡಿ ಮಾರುತ್ತಿದ್ದಾರೆ. ನಾವು ಇಂದು ತಿಳಿಸುವ ಪುಸ್ತಕದ ಹೆಸರು "100M$ ಆಫರ್ಸ್"(100M$ offers) ಆಗಿದೆ. ಇದನ್ನು ಅಲೆಕ್ಸ್ ಹಾರ್ಮೋಜಿ(alex hormozi) ಅವರು ಬರೆದಿದ್ದಾರೆ. ಅಲೆಕ್ಸ್ ಹಾರ್ಮೋಜಿ ಅವರ ಕಥೆಯು ತುಂಬಾನೇ ಆಸಕ್ತಿಕರವಾಗಿದೆ. ಇವರ ಬದುಕಿನಲ್ಲೂ ಹೋರಾಟ, ಮೋಸ, ಸಾಲ ಮತ್ತು ಕಠಿಣ ಸಮಯ ಬಂದಿವೆ. ಇದರ ನಂತರವೂ ಅವರು ಈ ಎಲ್ಲವನ್ನು ಮೀರಿ ಪ್ರತಿ ವರ್ಷ 100M$ ಗೂ ಅಧಿಕ ಗಳಿಸುತ್ತಿದ್ದಾರೆ. ಹಾಗಿದ್ದರೆ ಅವರು ಇದನ್ನು ಹೇಗೆ ಮಾಡಿದರು.
ಅವರು ವ್ಯಾಪಾರದಲ್ಲಿ ನೀಡಿದ "grand slam offer"ನಿಂದ ಇದು ಸಾಧ್ಯವಾಯಿತು. ಅವರು ತಿಳಿಸುವ ಆಫರ್ ಕೇಳಿದ ನಂತರ ಗ್ರಾಹಕರು ಬೇಡವೇನಲು ಸಾಧ್ಯವೇ ಇಲ್ಲ. ಅವರು ಗ್ರಾಂಡ್ ಸ್ಲಮ್ ಆಫರ್ ಸೃಷ್ಟಿಸುವ ಮತ್ತು ಇತರ ಅನೇಕ ವಿಷಯಗಳ ಬಗ್ಗೆ "100M$ ಆಫರ್" ಪುಸ್ತಕದಲ್ಲಿ ತಿಳಿಸಿದ್ದಾರೆ. ಅದನ್ನು ನಾವು ಇಂದು ಈ ಲೇಖನದಲ್ಲಿ ಶೇರ್ ಮಾಡಲಿದ್ದೇವೆ. ಈ ರೀತಿಯ ಲೇಖನಗಳನ್ನು ಓದಲು ಮಾಹಿತಿ ತಾಣ ವೆಬ್ಸೈಟ್ಗೆ ರಿಜಿಸ್ಟರ್ ಆಗಿ.
ಅಲೆಕ್ಸ್ ಹಾರ್ಮೋಜಿ ಜೊತೆ ಒಬ್ಬ ವ್ಯಾಪಾರಿ(businessman) ಇದ್ದಾನೆ ಎಂದು ಊಹಿಸಿಕೊಳ್ಳಿ. ಆ ವ್ಯಾಪಾರಿ, "ಅಲೆಕ್ಸ್, ನೀನು ಪ್ರತಿ ವರ್ಷ 100M$ ಗಿಂತ ಅಧಿಕ ಗಳಿಸುತ್ತಿದ್ದೀಯ. ಆದರೆ ನನ್ನ ವ್ಯಾಪಾರ ಅಧಿಕ ಬೆಳೆಯುತ್ತಿಲ್ಲ, ಇಲ್ಲ ಬೀಳುತ್ತಿಲ್ಲ. ಇದರ ಬಗ್ಗೆ ನೀನು ಏನನ್ನು ಸೂಚಿಸುವೆ" ಎಂದು ಕೇಳುತ್ತಾನೆ. ಅದಕ್ಕೆ ಅಲೆಕ್ಸ್ ಅವರು, "ಒಂದು ವ್ಯಾಪಾರ ಬೆಳೆಯಬೇಕು ಇಲ್ಲ ಬೀಳಬೇಕು ಹೊರತು ಮಧ್ಯದಲ್ಲಿ ಇರಲೇಬಾರದು. ನಿಮ್ಮ ವ್ಯಾಪಾರ ನಿಶ್ಚಲವಿದ್ದರೆ(stagnant) ಅದು ಅಳಿಯುತ್ತಿದೆ(die) ಎಂದರ್ಥ ಮತ್ತು ಅಳಿಯಲು 2 ಪ್ರಮುಖ ಕಾರಣಗಳಿವೆ. ಅದರಲ್ಲಿ ಮೊದಲನೆಯದ್ದು "not enough clients" ಮತ್ತು ಎರಡನೆಯದ್ದು "not enough cash/profits". ಅನೇಕರ ಹತ್ತಿರ ಗ್ರಾಹಕರು ಇರುತ್ತಾರೆ, ಆದರೆ ಲಾಭವನ್ನು ಗಳಿಸಲು ಸಾಧ್ಯವಾಗುತ್ತಿರುವುದಿಲ್ಲ.
ಇದನ್ನು ಓದಿ: ಅನ್‌ಫಕ್ ಯುವರ್ಸೆಲ್ಫ್ - ನಿಮ್ಮ ಬದುಕನ್ನು ಬದಲಾಯಿಸುವ ಪುಸ್ತಕಕೆಲವು ವ್ಯಾಪಾರ ಬೆಳೆಯಲು ಇಲ್ಲ ಅಳಿಯುತ್ತಿರುವ ವ್ಯಾಪಾರ ಬೆಳೆಯುವ ಹಂತಕ್ಕೆ ಬರಬೇಕೆಂದರೆ ಅವರ ಹತ್ತಿರ ಕೇವಲ 3 ಆಯ್ಕೆ ಇದೆ. ಅದರಲ್ಲಿ ಮೊದಲ ಆಯ್ಕೆ, ಅಧಿಕ ಗ್ರಾಹಕರನ್ನು(customers) ತರುವುದಾಗಿದೆ. ಎರಡನೆಯ ಆಯ್ಕೆ ಈಗಾಗಲೇ ಇರುವ ಗ್ರಾಹಕರ ಸರಾಸರಿ ಖರೀದಿ ಮೌಲ್ಯವನ್ನು(average purchase value) ಹೆಚ್ಚಿಸಬೇಕು. ಅಂದರೆ ಮೊದಲು 100 ರೂಪಾಯಿಯ ವಸ್ತು ಖರೀದಿಸುತ್ತಿದ್ದ ಗ್ರಾಹಕ ಈಗ 500 ರೂಪಾಯಿಯ ವಸ್ತುಗಳನ್ನು ಖರೀದಿಸಿದರೆ, ವ್ಯಾಪಾರದಲ್ಲಿ ಸ್ವಯಂ ಆಗಿ ಲಾಭ ಸಿಗುತ್ತದೆ. ಇನ್ನು ಮೂರನೇ ಆಯ್ಕೆ "to get them by more times". ಅಂದರೆ ಮೊದಲು 100 ರೂ ಕೊಟ್ಟು ಖರೀದಿಸುತ್ತಿದ್ದ ಗ್ರಾಹಕ ಪ್ರತಿ ತಿಂಗಳು 100 ರೂ ಕೊಟ್ಟು ಖರೀದಿಸುವಂತೆ ಮಾಡಿದರು ನಿಮ್ಮ ವ್ಯಾಪಾರ ಬೆಳೆಯಲು ಪ್ರಾರಂಭವಾಗುತ್ತದೆ.
ಈ ಮೂರನ್ನು ಕೇಳಲು ತುಂಬಾನೇ ಸುಲಭವೆನಿಸುತ್ತದೆ, ಆದರೆ ಇವುಗಳನ್ನು ನಿಜವಾಗಿಸುವುದು ತುಂಬಾನೇ ಕಷ್ಟವಾಗಿದೆ. ಅದು ಕೇವಲ ಒಂದು ಸಮಸ್ಯೆಯಿಂದ ಆಗಿದೆ. ಅದುವೇ ಸರಕಿನ ಸಮಸ್ಯೆ(commodity problem) ಎಂದು ಅಲೆಕ್ಸ್ ಅವರು ಹೇಳುತ್ತಾರೆ. ಅನೇಕ ವ್ಯಾಪಾರಗಳು ಅವರ ವಸ್ತುಗಳನ್ನು ಸರಕಾಗಿ(commodity) ಮಾರುತ್ತಾರೆ. ಇದರಿಂದ ಅವರು ಬೆಲೆಯ(price) ಜಾಲದಲ್ಲಿ ಸಿಲುಕಿ ದಿವಾಳಿ(bankrupt) ಇಲ್ಲ, ಲಾಭವನ್ನು ಗಳಿಸುವುದಿಲ್ಲ.
ಇದಕ್ಕೆ ಒಂದು ಉದಾಹರಣೆ ತಿಳಿಸುತ್ತೇವೆ, ಇಬ್ಬರು ಕಿತ್ತಳೆಗಳನ್ನು(orange) ಮಾರುತ್ತಿದ್ದಾರೆ ಎಂದು ಭಾವಿಸಿ. ಆಗ ಯಾವುದೇ ಗ್ರಾಹಕ ಕಿತ್ತಳೆಯನ್ನು ಖರೀದಿಸಲು ಬಂದಾಗ 2 ಅಂಗಡಿಯನ್ನು ನೋಡುತ್ತಾರೆ ಮತ್ತು ಯಾರು ಕಡಿಮೆ ಬೆಲೆಗೆ ನೀಡುತ್ತಿರುತ್ತಾರೋ ಅವರ ಹತ್ತಿರ ಖರೀದಿಸುತ್ತಾರೆ. ಈ ಉದಾಹರಣೆ ತುಂಬಾ ಸರಳವಾಗಿದೆ. ಆದರೆ ಅನೇಕ ವ್ಯಾಪಾರಿಗಳು ಈ ತಪ್ಪನೆ ಮಾಡುತ್ತಾರೆ. ಅವರು ವಸ್ತುಗಳನ್ನು ಸರಕಾಗಿ ಮಾರುತ್ತಾರೆ. ಇದರಿಂದ ಹಲವು ಬಾರಿ ಅವರ ಬೆಲೆಯನ್ನು ಕಡಿಮೆ ಮಾಡಬೇಕಾಗುತ್ತದೆ. ತಮ್ಮ ಲಾಭವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಉದ್ಯಮಿಗಳು(entrepreneur) ಇಂದು ಇಲ್ಲ ನಾಳೆ ಮುಳುಗುತ್ತಾರೆ, ಇಲ್ಲ ಅಧಿಕ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ. ಆಗಿದ್ದರೆ ಈ ಸಮಸ್ಯೆಗೆ ಇರುವ ಪರಿಹಾರವೇನು?
ಇದಕ್ಕೆ ಇರುವ ಪರಿಹಾರವೆಂದರೆ, ನಿಮ್ಮ ವಸ್ತುವಿಗೆ "ಗ್ರಾಂಡ್ ಸ್ಲಾಮ್ ಆಫರ್" ನೀಡುವುದಾಗಿದೆ. ಇತರರೊಂದಿಗೆ ಹೋಲಿಕೆ ಮಾಡಲು ಸಾಧ್ಯವಾಗದ ರೀತಿಯ ಆಫರ್ ಅನ್ನು ನೀವು ನೀಡಬೇಕು. ಉದಾಹರಣೆಗೆ ಸಲೂನ್ನಲ್ಲಿ(salon) ಕೂದಲು ಕತ್ತರಿಸುವುದನ್ನು(hair cutting) ಸೇವೆಯಾಗಿ(service) ನೀಡುತ್ತಾರೆ. ಇದರಲ್ಲಿ ಒಬ್ಬ "ದೀಪಾವಳಿ ಉಚಿತ ಹೇರ್ ಕಟ್ ಆಫರ್" ತರುತ್ತಾನೆ ಎಂದುಕೊಳ್ಳಿ. ಇದರಲ್ಲಿ ಗಡ್ಡದ ಟ್ರಿಮ್(beard trim) ಇಲ್ಲ ಮಸಾಜ್ನ(massage) ಹಣ ತೆಗೆದುಕೊಂಡು ಹೇರ್ ಕಟ್ ರೀತಿಯ ಸೇವೆಯನ್ನು ಉಚಿತವಾಗಿ ಮೊದಲನೇ ಗ್ರಾಹಕರಿಗೆ ನೀಡಿ, ಒಂದು ವೇಳೆ ಹೇರ್ ಕಟ್ ಇಷ್ಟವಾಗದಿದ್ದಲ್ಲಿ ಪೂರ್ತಿ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ, ಆ ಸಲೂನ್ ವ್ಯಾಪಾರ ಇತರ ವ್ಯಾಪಾರಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಇದರಲ್ಲಿ ಒಂದು ಒಳ್ಳೆಯ ಆಫರ್ ಸೃಷ್ಟಿ ಮಾಡಿ, ಅದಕ್ಕೆ ಮೌಲ್ಯ ನೀಡಿ, ಖಾತರಿ(guarantee) ಕೊಟ್ಟು, ಪಾವತಿಯ ಆಯ್ಕೆ(pay option) ನೀಡಲಾಗಿದೆ. ಇದನ್ನು ಯಾರಾದರೂ ಮಾಡಿದರೆ ಮೂರು ಆಯ್ಕೆಯನ್ನು ತೃಪ್ತಿಪಡಿಸಿದಂತಾಗುತ್ತದೆ. ಅದೆಂದರೆ ಅನೇಕ ಗ್ರಾಹಕರು ಬರುತ್ತಾರೆ, ಸರಾಸರಿ ಖರೀದಿ ಮೌಲ್ಯ ಹೆಚ್ಚುತ್ತದೆ ಮತ್ತು ಅವರನ್ನು ಅನೇಕ ಬಾರಿ ಖರೀದಿಸುವಂತೆ ಮಾಡಬಹುದು. ನೀವು ಈ ರೀತಿಯ ಆಫರ್ ಸೃಷ್ಟಿಸಲು ಸಾಧ್ಯವಾದರೆ ಅನೇಕ ಗ್ರಾಹಕರನ್ನು ಆಕರ್ಷಿಸಿಸಬಹುದು.
ಅಲೆಕ್ಸ್ ಅವರು ಗ್ರಾಹಕಾರನ್ನು ಆಕರ್ಷಿಸಿಸಲೂ ಇದರ ಬದಲು ಇನ್ನೊಂದು ತಂತ್ರವನ್ನು ಬಳಸುತ್ತಾರೆ. ಅದುವೇ ಸಾಮಾಜಿಕ ಮಾಧ್ಯಮದಲ್ಲಿನ ಸಾವಯವ ಬೆಳವಣಿಗೆಯಾಗಿದೆ(organic growth). ಇದು ಏಕೆಂದರೆ ನಿಮ್ಮ ವ್ಯಾಪಾರವನ್ನು ನಿರ್ಮಿಸಲು, ಬ್ರ್ಯಾಂಡ್ ಕ್ರಿಯೇಟ್ ಮಾಡಲು ಅದು ತುಂಬಾನೇ ಮುಖ್ಯವಾಗಿದೆ.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1ಆಫರ್ಸ್ ನೀಡುವುದು ಮುಖ್ಯವಾಗಿದೆ. ಆದರೆ ಆಫರ್ಗಿಂತ ತುಂಬಾ ಮುಖ್ಯವಾಗಿರುವುದು ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳುವುದಾಗಿದೆ ಎಂದು ಅಲೆಕ್ಸ್ ಹೇಳುತ್ತಾರೆ. ಒಂದು ದೊಡ್ಡ ಸಂಸ್ಥೆಯ ಪ್ರಾಧ್ಯಾಪಕ(professsor) ಮಕ್ಕಳಿಗೆ ಒಂದು ಪ್ರೆಶ್ನೆಯನ್ನು ಕೇಳುತ್ತಾರೆ, "ನೀವು ವಡಾ ಪಾವ್ನ ಅಂಗಡಿಯನ್ನು ತೆರೆದಿದ್ದೀರ ಎಂದುಕೊಳ್ಳಿ ಮತ್ತು ನಿಮಗೆ ನಿಮ್ಮ ಪ್ರತಿಸ್ಪರ್ಧಿಗೆ(competitor) ಹೋಲಿಸಿದರೆ ಕೇವಲ ಒಂದು ಅನುಕೂಲ(advantage) ಸಿಕ್ಕಿದರೆ, ನೀವು ಯಾವ ಅನುಕೂಲವನ್ನು ತೆಗೆದುಕೊಳ್ಳುವಿರಾ" ಎಂದು ಕೇಳುತ್ತಾರೆ. ಇದಕ್ಕೆ ಅನೇಕರು, ಬೆಲೆಯ ಪ್ರಯೋಜನ(price advantage), ರುಚಿಯ ಪ್ರಯೋಜನ(taste advantage), ಗ್ರಾಹಕರ ಅನುಭವ(customer experience), ಗುಣಮಟ್ಟದ ಪ್ರಯೋಜನ(quality advantage), ಮೌಲ್ಯದ ಪ್ರಯೋಜನವನ್ನು(value advantage) ತೆಗೆದುಕೊಳ್ಳುವೆನು ಎಂದು ತಿಳಿಸುತ್ತಾರೆ. ಇದರ ನಂತರ ಆ ಪ್ರಾಧ್ಯಾಪಕ, "ನೀವು ನಿಮ್ಮ ಪ್ರತಿಸ್ಪರ್ಧಿಯಿಂದ ತೆಗೆದುಕೊಳ್ಳಬೇಕಾದ ಒಂದು ಅನುಕೂಲವೆನೆಂದರೆ, "to have a starving crowd" ಎಂದು ಹೇಳುತ್ತಾರೆ.
ಉದಾಹರಣೆಗೆ ನನ್ನ ಸ್ನೇಹಿತ ಉದ್ಯೋಗಕ್ಕೆ(job) ಸೇರಿದ್ದಾನೆ. ಆತನಿಗೆ ಅಲ್ಲಿನ ಸುತ್ತಮುತ್ತಲು ತಿನ್ನಲು ಯಾವುದೇ ರೀತಿಯ ಕ್ಯಾಂಟೀನ್ ಇಲ್ಲ. ಕೇವಲ ಒಂದೇ ಒಂದು ಕ್ಯಾಂಟೀನ್ ಇದೆ, ಅಲ್ಲಿ ಹೋಗಿ ಮಾತ್ರ ಅವನು ತಿಂಡಿಯನ್ನು ತಿನ್ನಬಹುದು. ಆತ ಅಲ್ಲಿನ ಆಹಾರ ಚೆನ್ನಾಗಿಲ್ಲ, ತುಂಬಾ ದುಬಾರಿಯಾಗಿದೆ ಎಂದು ಅನೇಕ ಬಾರಿ ಹೇಳುತ್ತಾನೆ. ಇಷ್ಟೆಲ್ಲಾ ದೂರು ನೀಡಿದ ನಂತರವೂ ಆತ ಅಲ್ಲೇ ಹೋಗಿ ತಿನ್ನುತ್ತಾನೆ. ಇದು ಏಕೆಂದರೆ ಆತನ ಹತ್ತಿರ ಯಾವುದೇ ರೀತಿಯ ಆಯ್ಕೆ ಇಲ್ಲ. ಆತನಿಗೆ ಹೊಟ್ಟೆ ಹಸಿದಾಗಲಿಲ್ಲ ಆ ಕ್ಯಾಂಟೀನ್ ಕಾಣುತ್ತದೆ. ಇದರಿಂದಲೇ ಆ ಕ್ಯಾಂಟೀನ್ ಅಧಿಕ ಲಾಭ ಗಳಿಸುತ್ತಿದೆ. ಇದುವೇ "ಹಸಿವಿನಿಂದ ಬಳಲುತ್ತಿರುವ ಗುಂಪಾಗಿದೆ(starving crowd)". ಉದಾಹರಣೆಗೆ ಒಬ್ಬ ಬಡ ವ್ಯಕ್ತಿ 100 ರೂ ಕೊಟ್ಟು ನೀರಿನ ಬಾಟಲ್ ಅನ್ನು ಖರೀದಿಸುವುದಿಲ್ಲ. ಅದೇ ಅವನು ಮರುಭೂಮಿಯಲ್ಲಿ ಇದ್ದು, ಅಲ್ಲಿ 100 ರೂಗೆ ನೀರಿನ ಬಾಟಲ್ ಸಿಗುತ್ತಿದ್ದರೆ ಖಂಡಿತವಾಗಿಯೂ ಅದನ್ನು ಖರೀದಿಸುವತ್ತಾನೆ. ಇದನ್ನೇ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದೆನ್ನುತ್ತಾರೆ.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುಹಸಿವಿನಿಂದ ಬಳಲುತ್ತಿರುವ ಜನಸಮೂಹಕ್ಕೆ ಉಪಚಾರಿಸಲು 4 ಸೂಚಕಗಳ(indicators) ಕಡೆಗೆ ಗಮನ ಹರಿಸಬೇಕು.
ನೀವು ಭಾರೀ ನೋವಿನಲ್ಲಿ ಇರುವ ಜನಗಳಿಗೆ ಸೇವೆ(serve) ಮಾಡಬೇಕು. ಉದಾಹರಣೆಗೆ ಒಬ್ಬನಿಗೆ ಅಧಿಕ ಹಲ್ಲು ನೋಯುತ್ತಿದ್ದರೆ, ಅದಕ್ಕೆ ನೋವು ನಿವಾರಕದ(pain killer) ಅವಶ್ಯಕತೆ ಇರುತ್ತದೆ. ಅವನಿಗೆ ಆಗ ಆ ಔಷಧಿ ಸಿಗದಿದ್ದಾಗ ಸಾವಿರ ರೂಪಾಯಿ ಕೊಟ್ಟು ಆಸ್ಪತ್ರೆಗೆ ಹೋಗುತ್ತಾನೆ. ಹೀಗಾಗಿ ನೀವು ಕೂಡ ನಿಮ್ಮ ಗುಂಪು ಭಾರೀ ನೋವಿನಲ್ಲಿ ಇರುವುದನ್ನು ನೋಡಿ. ಅದಕ್ಕೆ ನೋವು ನಿವಾರಕ ನೀಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡಿ.
ಆತನಿಗೆ ನೋವಿದ್ದು, ಹಣವಿಲ್ಲದಿದ್ದರೆ ಅದು ಒಳ್ಳೆಯ ಮಾರ್ಕೆಟಿಂಗ್(marketing) ಆಗುವುದಿಲ್ಲ. ಇದಕ್ಕೆ ಚಿಕ್ಕ ಉದಾಹರಣೆ ತಿಳಿಸಬೇಕೆಂದರೆ, ಮಳೆ ಬರುತ್ತಿದ್ದು ಒಬ್ಬನಿಗೆ ಛತ್ರಿಯ ಅವಶ್ಯಕತೆ ಇದೆ. ಆದರೆ ಅವನ ಹತ್ತಿರ ಹಣವಿಲ್ಲದ ಕಾರಣ, ಅವನು ಅಲ್ಲೇ ಪಕ್ಕದ ಅಂಗಡಿಯಲ್ಲಿರುವ ಛತ್ರಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊಳ್ಳುವ ಶಕ್ತಿಯು ಅವಶ್ಯಕವಾಗಿದೆ.
ಯಾರ ಹತ್ತಿರವಾದರೂ ಛತ್ರಿ ಇಲ್ಲದಿದ್ದರೆ ಅವರನ್ನು ಎಷ್ಟು ಸುಲಭವಾಗಿ ಟಾರ್ಗೆಟ್ ಮಾಡಬಹುದು ಎಂಬುದನ್ನು ನೋಡಿ. ಆಗಾ ಅವರ ಹತ್ತಿರ ಹೋಗಿ ಮನವರಿಕೆ ಮಾಡಿದರೆ ಅವರು ಛತ್ರಿಯನ್ನು ಖರೀದಿಸುತ್ತಾರೆ. ಹೀಗಾಗಿ ನೀವು ಯಾರಿಗೆ ಮಾರಲು ಹೋಗುತ್ತೀರೋ ಅವರು ಗುರಿ ಮಾಡಲೂ ಸುಲಭ ಇರಬೇಕು.
ಇದಕ್ಕೆ ಅಲೆಕ್ಸ್ ಅವರು, ಅವರ ಸ್ನೇಹಿತನ ಉದಾಹರಣೆ ತಿಳಿಸುತ್ತಾರೆ. ಆತ ಒಬ್ಬ ವಾಣಿಜ್ಯೋದ್ಯಮಿ ಆಗಿದ್ದು, ಒಳ್ಳೆಯ ಮೌಲ್ಯ(value), ಒಳ್ಳೆಯ ಆಫರ್ ನೀಡುತ್ತಿದ್ದನು. ಆದರೂ ಅವನು ಲಾಭದಾಯಕ ಇರಲಿಲ್ಲ, ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದು ಏಕೆಂದರೆ ಅವನು ಕುಗ್ಗುತ್ತಿರುವ ಮಾರುಕಟ್ಟೆಯಲ್ಲಿ(strinking market) ಇದ್ದಾನೆ. ಆತ ಪತ್ರಿಕೆ ಉದ್ಯಮದಲ್ಲಿ(newspaper industry) ಇದ್ದನು. ದಿನಪತ್ರಿಕೆಯ ಬೇಡಿಕೆ ಕಡಿಮೆ ಆಗುತ್ತಿರುವುದರಿಂದ ಆತ ಲಾಭವನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಅವನು ಮಾರ್ಕೆಟ್ ಬದಲಿಸಿ ಕೋವಿಡ್ನಲ್ಲಿ ಮಾಸ್ಕನ್ನು ಮಾರಲು ಪ್ರಾರಂಭಿಸಿದ, ನಂತರ ಅವನ ಎಲ್ಲ ಜ್ಞಾನ ಮತ್ತು ಕೌಶಲ್ಯ ಕೆಲಸಕ್ಕೆ ಬಂದು ಅಧಿಕ ಪ್ರಾಫಿಟ್ ಮಾಡಿದ. ಹೀಗಾಗಿ ನೀವು ಕೂಡ ಬೆಳೆಯುತ್ತಿರುವ ಮಾರ್ಕೆಟ್ ಮೇಲೆ ಗಮನ ಹರಿಸಿ.
ಇದಕ್ಕೆ ಈ ರೀತಿಯಾಗಿ ಫಾರ್ಮುಲವಿದೆ,
starving crowd(market) > offer strength > persuasion skill.
ನೀವು ಸರಿಯಾದ ಮಾರ್ಕೆಟ್ನಲ್ಲಿ ಒಳ್ಳೆಯ ಆಫರ್ ನೀಡಿ ಸೇವೆ ಮಾಡಿದರೆ, ಅದು ಶಕ್ತಿಯುತವಾಗಿದೆ.
ಇದು ಆ ವ್ಯಾಪಾರಿಗೆ ಅರ್ಥವಾಗುತ್ತದೆ. ಆಗ ಅವನು ನಾನು ಗ್ರಾಂಡ್ ಸ್ಲಮ್ ಆಫರ್ ಅನ್ನು ಹೇಗೆ ಸೃಷ್ಟಿ ಮಾಡಲಿ ಎಂದು ಕೇಳುತ್ತಾನೆ. ಇದಕ್ಕೆ ಅಲೆಕ್ಸ್ ಅವರು ಒಂದು ಮೌಲ್ಯ ಸಮೀಕರಣವನ್ನು(value equation) ತಿಳಿಸುತ್ತಾರೆ. ಅವರು, ನೀವು ಆಫರ್ನಲ್ಲಿ ಒಳ್ಳೆಯ ಮೌಲ್ಯ ನೀಡುವವರೆಗೆ ಗ್ರಾಂಡ್ ಸ್ಲಾಮ್ ಆಫರ್ ಸೃಷ್ಟಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅವರು ಅನೇಕ ಉದ್ಯಮಿಗಳು ಅಧಿಕ ಶುಲ್ಕ(charge) ವಿಧಿಸಲು ಹೆದರುತ್ತಾರೆ ಎಂದು ಹೇಳುತ್ತಾರೆ. ಆದರೆ ಅಲೆಕ್ಸ್ ಅವರು ನೀವು ಎಷ್ಟು ಅನುಕೂಲಕರವಾಗಿ ಆಫರ್ ಮಾಡಲು ಸಾಧ್ಯವೋ ಮಾಡಿ ಎಂದು ಹೇಳುತ್ತಾರೆ. ನೀವು ಬೇಕಾದರೆ ಒಂದು ಕೋಟಿಯಷ್ಟು ಶುಲ್ಕ ವಿಧಿಸಿ, ಆದರೆ ಅದಕ್ಕೆ ಅಷ್ಟೇ ಮೌಲ್ಯವನ್ನು ನೀಡಿ. ನೀವು ಅದರ ಮೌಲ್ಯಕ್ಕಿಂತ ಅಧಿಕ ಶುಲ್ಕ ವಿಧಿಸಬೇಡಿ.
ಉದಾಹರಣೆಗೆ ನೀವು ನಿಮ್ಮ ಸರ್ವಿಸ್ ಅನ್ನು ಮಾರುತ್ತಿದ್ದು ಅದಕ್ಕೆ 1 ಕೋಟಿ ಶುಲ್ಕ ವಿಧಿಸಿದ್ದೀರಾ ಎಂದುಕೊಳ್ಳಿ. ನಿಮ್ಮ ಈ ಸೇವೆಯಿಂದ ಮುಂದಿರುವವನು 2 ಕೋಟಿ ಮಾಡಲು ಸಾಧ್ಯವಾದರೆ, ನೀವು ಶುಲ್ಕ ವಿಧಿಸಿರುವುದರಲ್ಲಿ ತಪ್ಪಿಲ್ಲ. ಒಂದು ವೇಳೆ ನಿಮ್ಮ ಸೇವೆ ಅವರ ವ್ಯಾಪಾರದಲ್ಲಿ ಯಾವುದೇ ರೀತಿಯ ಪ್ರಯೋಜನಗಳನ್ನು ತರದೆ ಇದ್ದರೆ ನೀವು ಅಷ್ಟು ಶುಲ್ಕ ವಿಧಿಸುವುದು ಒಳ್ಳೆಯದಲ್ಲ. ಹೀಗಾಗಿ ಮೌಲ್ಯವನ್ನು ಸೃಷ್ಟಿ ಮಾಡುವುದು ಮುಖ್ಯವಾಗಿದೆ. ನೀವು ನಿಮಗೆ ಹಣ ನೀಡುವವನಿಗೆ ಅಧಿಕ ಮೌಲ್ಯ ನೀಡುವಷ್ಟು ಸಮರ್ಥನಾಗಿ. ಇದಕ್ಕೆ ನೀವು ಅಧಿಕ ಮೌಲ್ಯಯುತ ವಸ್ತುವನ್ನು ಸೃಷ್ಟಿಸಬೇಕು.
ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳುಅಧಿಕ ಮೌಲ್ಯ ಇರುವ ವಸ್ತುವನ್ನು ಸೃಷ್ಟಿಸಲು "ಮೌಲ್ಯ ಸಮೀಕರಣ" ವನ್ನು ಅರ್ಥಮಾಡಿಕೊಳ್ಳಿ. ಇದರಲ್ಲಿ 4 ಚರಾಂಶ(variable) ಬರುತ್ತವೆ. 2 ಚರಾಂಶ ಮೇಲಿದ್ದು ನೀವು ಇವುಗಳನ್ನು ಹೆಚ್ಚಿಸಿಕೊಳ್ಳಬೇಕು. ಇನ್ನು ಉಳಿದ 2 ಚರಾಂಶ ಕೆಳಗೆ ಇದ್ದು ನೀವು ಇವುಗಳನ್ನು ಕಡಿಮೆ ಮಾಡಿಕೊಳ್ಳಬೇಕು.
ಮೊದಲ ಚರಾಂಶ, "dream outcome" ಆಗಿದೆ. ಉದಾಹರಣೆಗೆ ಒಬ್ಬ ದಪ್ಪ ಇರುವ ವ್ಯಕ್ತಿ ತೆಳ್ಳಗಾಗಲು ಯೋಚಿಸಿದರೆ, ಆತನಿಗೆ ಕನಸಿನ ಫಲಿತಾಂಶ ತೆಳ್ಳಗಾಗುವುದಾಗಿದೆ. ನೀವು ನೀಡುವ ವಸ್ತುವಿನಿಂದ(product) ಆತನ ಆ ಕನಸು ಸಾಧ್ಯವಾದರೆ ಅದು ನಿಮ್ಮ ಮೊದಲ ಚರಾಂಶವಾಗಿದೆ. ನೀವು 100 ಕೆಜಿ ಯಿಂದ 70 ಕೆಜಿಯಾಗಲು ಸಹಾಯ ಮಾಡುತ್ತೀರಾ. ಆ ರೀತಿಯ ವಸ್ತು ಅಥವಾ ಸೇವೆ(service) ನಿಮ್ಮ ಹತ್ತಿರ ಇರಬೇಕು.
ಎರಡನೇ ಚರಾಂಶ, "perceived likelihood of achievement". ನೀವು ಜನರ ತೂಕವನ್ನು ಕಡಿಮೆ ಮಾಡುವ ವಸ್ತುವನ್ನು ಮಾಡಿದ್ದೀರಾ. ಆದರೆ ನಿಮ್ಮ ಮುಂದಿರುವ ವ್ಯಕ್ತಿಯು ಆ ವಸ್ತುವನ್ನು ಯಾವ ರೀತಿಯಲ್ಲಿ ಗ್ರಹಿಸುತ್ತಿದ್ದಾನೆ(persive). ಅವನು ನಿಮ್ಮ ವಸ್ತುವನ್ನು ಖರೀದಿಸಿ, ಎಷ್ಟು ಬೇಗನೇ ತನ್ನ ಕನಸನ್ನು ಸಾಧಿಸಬಹುದು. ಈ ಚರಾಂಶವನ್ನು ನೀವು ಹೆಚ್ಚಿಸಬೇಕು. ಅಂದರೆ ನಿಮ್ಮ ವಸ್ತುವಿನ ಮೇಲಿನ ಗ್ರಾಹಕರ ನಂಬಿಕೆಯನ್ನು ನೀವು ಹೆಚ್ಚಿಸಿದರೆ ನಿಮ್ಮ ವಸ್ತು ಮೌಲ್ಯಯುತವಾಗುತ್ತದೆ.
ಇನ್ನು ಮೂರನೇ ಚರಾಂಶ, "time delay" ಆಗಿದೆ. ಇದನ್ನು ನೀವು ಕಡಿಮೆ ಮಾಡಬೇಕು. ಉದಾಹರಣೆಗೆ ದಪ್ಪದಿಂದ ತೆಳ್ಳಗಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದಾಗಿದೆ. ನೀವು ಒಂದು ಮಾತ್ರೆ ನುಂಗಿ 100 ಕೆಜಿ ಯಿಂದ 70 ಕೆಜಿಯಷ್ಟು ಮಾಡುವ ಮಾಂತ್ರಿಕ ಮಾತ್ರೆಯನ್ನು(magical tablet) ಮಾಡಿದರೆ ಆ ವಸ್ತುವೂ ಅಧಿಕ ಮೌಲ್ಯಯುತವಿದ್ದು, ನೀವು ಕೋಟ್ಯಾಧಿಪತಿಯಾಗುತ್ತೀರಾ. ಇದು ಏಕೆಂದರೆ ನಿಮ್ಮ ಸಮಯ ವಿಳಂಬ ತುಂಬಾನೇ ಕಡಿಮೆ ಇದೆ.
ಇನ್ನು ನಾಲ್ಕನೇ ಚರಾಂಶ, "effort & sacrifice" ಆಗಿದೆ. ಮಾತ್ರೆ ನುಂಗುವುದು ತುಂಬಾನೇ ಸುಲಭವಾಗಿದೆ. ಅದರಲ್ಲಿ ಸಮಯ ಮತ್ತು ಶ್ರಮ ಇರುವುದಿಲ್ಲ. ಹೀಗಾಗಿ ಶ್ರಮವೆಷ್ಟು ಕಡಿಮೆ ಇರುತ್ತದೆಯೋ ಅಷ್ಟು ಒಳ್ಳೆಯದಾಗಿದೆ. ಅದೇ ನೀವು 100 ಕೆಜಿಯಿಂದ 70 ಕೆಜಿಯಾಗಲು ಕಷ್ಟ ಪಡಬೇಕೆಂದರೆ ಅದು ಕೂಡ ಜನರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ನಿಮ್ಮ ವಸ್ತುವಿನಿಂದ ಶ್ರಮ ಮತ್ತು ತ್ಯಾಗ ಕಡಿಮೆ ಇದ್ದರೆ, ಆಗ ಕೂಡ ನಿಮ್ಮ ವಸ್ತು ಶಕ್ತಿಯುತವಾಗುತ್ತದೆ. ಇದುವೇ ಮೌಲ್ಯ ಸಮೀಕರಣವಾಗಿದೆ.
ಇದನ್ನು ಇನ್ನೊಂದು ಉದಾಹರಣೆಯ ಮೂಲಕ ತಿಳಿಯೋಣ. 2 ವಸ್ತುವಿದೆ ಎಂದು ಭಾವಿಸಿ, ಒಂದು ವಸ್ತು ಧ್ಯಾನ(meditation) ಇನ್ನೊಂದು ಝೆನ್- ಎಕ್ಸ್(zen- x), ಇದು ಒತ್ತಡವನ್ನು ಕಡಿಮೆ ಮಾಡಲು ಇರುವ ಔಷಧಿಯಾಗಿದೆ. ಇದನ್ನು ವಿದೇಶಗಳಲ್ಲಿ ಅಧಿಕ ಬಳಸುತ್ತಾರೆ.
ಇದರಲ್ಲಿನ ಮೊದಲ ಚರಾಂಶ ಗುರಿಯನ್ನು ಸಾಧಿಸುವುದಾಗಿದೆ. ಇದರಲ್ಲಿ ಎರಡು ಸಹಾಯ ಮಾಡುವುದರಿಂದ 1- 1 ಪಾಯಿಂಟ್ ನೀಡುತ್ತೇವೆ.
ಇನ್ನು ಎರಡನೆಯದಾಗಿ, perceived likelyhood of achievement, ಧ್ಯಾನ ಮಾಡಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಮೇಲೆ ಜನರಿಗೆ ಅಷ್ಟು ನಂಬಿಕೆ ಇರುವುದಿಲ್ಲ. ಆದರೆ ಮಾತ್ರೆಯಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಜನಗಳಿಗೆ ಅಧಿಕ ನಂಬಿಕೆ ಇರುತ್ತದೆ. ಹೀಗಾಗಿ ಇದರಲ್ಲಿ ಝೆನ್- ಎಕ್ಸ್ ಗೆಲ್ಲುತ್ತದೆ.
ಮೂರನೇಯದಾಗಿ, time delay ಆಗಿದೆ. ಧ್ಯಾನವನ್ನು ನೀವು ಪದೇ ಪದೇ ಮಾಡುತ್ತಲೇ ಇರಬೇಕು. ಆಗ ಮಾತ್ರ ನಿಮ್ಮ ಒತ್ತಡವನ್ನು ಪೂರ್ತಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದರೆ ಝೆನ್- ಎಕ್ಸ್ನಿಂದ ನೀವು ಮಾತ್ರೆ ನುಂಗಿ ಸ್ವಲ್ಪ ಕ್ಷಣದ ನಂತರವೇ ಒತ್ತಡವು ಕಡಿಮೆಯಾಗುತ್ತದೆ. ಇದರಲ್ಲಿ ಸಮಯ ವಿಳಂಬ ಕಡಿಮೆ ಇರುವುದರಿಂದ ಝೆನ್- ಎಕ್ಸ್ ಗೆಲ್ಲುತ್ತದೆ.
ಇನ್ನು ನಾಲ್ಕನೆಯದ್ದು, effort and sacrifice, ಧ್ಯಾನವನ್ನು ಮಾಡಲು, ನೀವು ಸಮಯವನ್ನು ನೀಡಬೇಕು. ಇತರ ಎಲ್ಲವನ್ನೂ ಬಿಟ್ಟು ಧ್ಯಾನವನ್ನು ಆಯ್ಕೆ ಮಾಡಬೇಕು. ಹೀಗಾಗಿ ಇದರಲ್ಲಿ ಶ್ರಮವೂ ಅಧಿಕವಿದೆ. ಅದೇ ಝೆನ್- ಎಕ್ಸ್ನಲ್ಲಿ ಕೇವಲ ಮಾತ್ರೆ ನುಂಗುವುದು ಇರುವುದರಿಂದ ಶ್ರಮ ಕೂಡ ಕಡಿಮೆ ಇದೆ. ಇದರಲ್ಲೂ ಝೆನ್- ಎಕ್ಸ್ ಗೆಲ್ಲುತ್ತದೆ.
ಇದರಿಂದಾಗಿ ವಿದೇಶಗಳಲ್ಲಿ ಈ ಔಷಧಿ ಅಧಿಕ ಮಾರಾಟವಾಗುತ್ತಿದೆ. ಇದು ಬಿಲಿಯನ್ ಡಾಲರ್ ಇಂಡಸ್ಟ್ರಿಯಾಗಿದೆ. ಜನರಿಗೆ ಮೌಲ್ಯವನ್ನು ನೀಡುತ್ತಿದೆ. ಇದರಲ್ಲಿ ಆ ಮೌಲ್ಯ ಎಷ್ಟು ದಿನಗಳವರೆಗೆ ಇರುತ್ತದೆ ಎಂಬುದು ಪ್ರೆಶ್ನೆಯಲ್ಲ. ಇದರಿಂದ ಹಣ ಗಳಿಸಲು ಸಾಧ್ಯವಾಗುತ್ತಿದೆ ಮತ್ತು ನಾನು ಹಣವನ್ನು ಗಳಿಸುವುದು ಹೇಗೆ ಎಂಬುದನ್ನು ತಿಳಿಸಲು ಬಯಸಿದ್ದೇನೆ. ನಾನು ಧ್ಯಾನ ಮಾಡುವುದನ್ನೇ ಉತ್ತಮವೇನ್ನುತ್ತೇನೆ. ಆದರೆ ಯಾವುದು ಮಾರಾಟವಾಗುತ್ತಿದೆಯೋ ಅದನ್ನು ತಿಳಿಸುತ್ತಿರುವೆನು. ಹೀಗಾಗಿ ನೀವು ಒಂದು ಮೌಲ್ಯಯುತ ವಸ್ತುವನ್ನು ಮಾಡಲು ಬಯಸಿದರೆ ಈ 4 ಚರಂಶಗಳ ಮೇಲೆ ಗಮನ ಹರಿಸಬೇಕು.
ಇದನ್ನು ಓದಿ: ರಾಬರ್ಟ್ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summaryಈಗ ಒಂದು ಗ್ರಾಂಡ್ ಸ್ಲಾಮ್ ಆಫರ್ ಅನ್ನು ಸೃಷ್ಟಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ. ಇದಕ್ಕಾಗಿ ನೀವು 5 ಹಂತಗಳನ್ನು ಫಾಲೋ ಮಾಡಬೇಕು. ಅದರಲ್ಲಿ,
ಉದಾಹರಣೆಗೆ, ನೀವು ಆರೋಗ್ಯ ತರಬೇತುದಾರನಾಗಿದ್ದು(health coach) ನಿಮ್ಮ ಗ್ರಾಹಕನ ಗುರಿಯು ತೂಕವನ್ನು ಕಡಿಮೆ ಮಾಡಿಕೊಳ್ಳುವುದಾಗಿರುತ್ತದೆ. ಆತನಿಗೆ 6 ತಿಂಗಳಲ್ಲಿ 20 ಕೆಜಿ ಕಡಿಮೆ ಮಾಡಿಕೊಳ್ಳಬೇಕು. ಈ ರೀತಿಯಾಗಿ ನಿಮ್ಮ ಗ್ರಾಹಕನ ಕನಸಿನ ಗುರಿ ಏನು ಎಂಬುದನ್ನು ಗುರುತಿಸಿ.
ನಿಮ್ಮ ಗ್ರಾಹಕ ತನ್ನ ಕನಸಿನ ಗುರಿಯನ್ನು ಸಾಧಿಸಲು ಬರುವ ಎಲ್ಲಾ ಸಮಸ್ಯೆಗಳನ್ನು ವಿವರವಾಗಿ ಬರೆದಿಟ್ಟುಕೊಳ್ಳಿ. ಉದಾಹರಣೆಗೆ ಆತನಿಗೆ ಜಿಮ್ಗೆ ಹೋಗಲು ಸಾಧ್ಯವಾಗುವುದಿಲ್ಲ, ಆತನ ಆಹಾರ ಪದ್ಧತಿ(diet) ಸರಿ ಇರುವುದಿಲ್ಲ. ಈ ರೀತಿಯ ಎಲ್ಲಾ ಸಮಸ್ಯೆಗಳನ್ನು ಎಷ್ಟು ವಿವರವಾಗಿ ಮಾಡಿಕೊಳ್ಳಲು ಸಾಧ್ಯವೋ ಮಾಡಿ. ಇದು ನಿಮಗೆ 3 ಹಂತಕ್ಕೆ ಸಹಾಯ ಮಾಡುತ್ತದೆ.
ನೀವು ಪಟ್ಟಿ(list) ಮಾಡಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಪ್ರಾರಂಭಿಸಿ. ಉದಾಹರಣೆಗೆ ತೆಳ್ಳಗಾಗಲು ಆಹಾರ ಪದ್ಧತಿ ಪ್ರಮುಖವಾಗಿದೆ. ಆದರೆ ಅದಕ್ಕೆ ಆಹಾರ ಪದ್ಧತಿ ಫಾಲೋ ಮಾಡುವುದು ದುಬಾರಿಯಾಗುತ್ತದೆ. ಹಾಗಿದ್ದರೆ ಇದರ ಪರಿಹಾರ ಏನಿರಬಹುದು. ಇದರ ಬಗ್ಗೆ ಯೋಚಿಸಿ ಬರೆಯಲು ಪ್ರಾರಂಭಿಸಿ.
ಈ ರೀತಿಯಾಗಿ ಎಲ್ಲ ಪರಿಹಾರಗಳ ಪಟ್ಟಿಯನ್ನು ಮಾಡಿ.
ಅಂದರೆ ನೀವು ಪರಿಹಾರಗಳ ಪಟ್ಟಿಯಲ್ಲಿ ಬರೆದಿರುವುದನ್ನು ಯಾವ ರೀತಿ ವಿತರಣೆ(deliver) ಮಾಡುವಿರ! ಉದಾಹರಣೆಗೆ ಒಂದು ಅಗ್ಗದ ಆಹಾರ ಪದ್ಧತಿಯನ್ನು(cheap diet) ಸೃಷ್ಟಿಸಲು ಅವರ ಬದಲಿಗೆ ಶಾಪಿಂಗ್ ಮಾಡಿ, ಲಂಚ್ ಅನ್ನು ರೆಡಿ ಮಾಡಿ ಕೊಡಿ. ಇದು ಸ್ವಲ್ಪ ವಿಪರೀತವಾಗಿದೆ(extreme), ಆದರೂ ನಿಮಗೆ ಇದನ್ನು ತಿಳಿಸುತ್ತಿದ್ದೇನೆ. ಇಲ್ಲ ಒಂದು ವೀಡಿಯೋ ರೆಕಾರ್ಡ್ ಮಾಡುವ ಮೂಲಕ ಒಂದು ಅಗ್ಗದ ಆಹಾರ ಪದ್ಧತಿಯನ್ನು ಸೃಷ್ಟಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿ. ಇಲ್ಲ ಅವರೇ ಅಗ್ಗದ ಆಹಾರ ಪದ್ಧತಿಯನ್ನು ಮಾಡಲು ಒಂದು ಕಾರ್ಯಪುಸ್ತಕ(workbook) ಮಾಡಿ ಕೊಡಿ. ಅವರಿಗೆ ಕರೆ ಮಾಡುವ ಮೂಲಕವೂ ತಿಳಿಸಬಹುದು. ಇದೇ ರೀತಿಯಾಗಿ ವಿತರಣೆ ಮಾಡಲು ಬರುವ ಎಲ್ಲಾ ರೀತಿಯ ಒಳ್ಳೆಯ ಇಲ್ಲ ಕೆಟ್ಟ ಯೋಜನೆಗಳ ಒಂದು ಪಟ್ಟಿಯನ್ನು ಮಾಡಿ.
ನೀವು ವಿತರಣೆ ಪಟ್ಟಿಯನ್ನು ಮಾಡಿದ ನಂತರ ಆ ಪಟ್ಟಿಯಲ್ಲಿ ಇರುವ ಪ್ರತಿಯೊಂದನ್ನು ಈ 4 ಚತುರ್ಭುಜಗಳಲ್ಲಿ(quadrant) ಒಂದರಲ್ಲಿ ಹಾಕಿ ಅವೆಂದರೆ,
ನಿಮ್ಮ ಎಲ್ಲಾ ರೀತಿಯ ವಿತರಣೆ ಪಟ್ಟಿ ತೆಗೆದುಕೊಂಡು ಈ ನಾಲ್ಕರಲ್ಲಿ ಸೂಕ್ತ ಇರುವುದಕ್ಕೆ ಹಾಕಿ. ಉದಾಹರಣೆಗೆ ನೀವೇ ಶಾಪಿಂಗ್ ಮಾಡಿ, ಲಂಚ್ ಸೃಷ್ಟಿ ಮಾಡಿದರೆ ಅದು "high cost, high value"ನಲ್ಲಿ ಬರುತ್ತದೆ. ವೆಚ್ಚದಲ್ಲಿ ಹಣ ಮಾತ್ರ ಇರುವುದಿಲ್ಲ, ನಿಮ್ಮ ಸಮಯ ಮತ್ತು ಶಕ್ತಿ ಕೂಡ ಇರುತ್ತದೆ. "high cost, high value" ವಸ್ತುವೂ ಜನರಿಗೆ ಇಷ್ಟವಾಗುತ್ತದೆ. ಆದರೆ ಇದು ವಿಸ್ತರಿಸಲು(scalable) ಆಗುವುದಿಲ್ಲ, ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ನಿಮ್ಮ ವಿತರಣೆ ಪಟ್ಟಿ "low cost, high value" ಇದ್ದರೆ ಉತ್ತಮವಾಗಿದೆ. ನೀವು ಈ ರೀತಿಯಾಗಿ ಟ್ರಿಮ್ ಮತ್ತು ಸ್ಟಾಕ್ ಮಾಡಿ ಹಲವಾರು ವಸ್ತುಗಳನ್ನು ಸೃಷ್ಟಿ ಮಾಡಬಹುದು. ಇದರಿಂದ ನಿಮ್ಮ ವಸ್ತುವಿನಲ್ಲಿ ಏನನ್ನು ನೀಡುತ್ತೀರಿ ಎಂಬುದು ನಿಮಗೆ ಸ್ಪಷ್ಟವಾಗುತ್ತದೆ. ಇದು ಆಫರ್ ಸೃಷ್ಟಿ ಮಾಡಲು ಸಹಕರಿಸುತ್ತದೆ. ಒಬ್ಬರಿಗೆ ಆಹಾರ ಪದ್ಧತಿಯನ್ನು ಫಾಲೋ ಮಾಡಲು ಕಷ್ಟವಾದಾಗ ನೀವು ಈ ವಸ್ತುವನ್ನು ನೀಡಬಹುದು. ಈ 5 ಹಂತಗಳನ್ನು ಫಾಲೋ ಮಾಡುವುದರಿಂದ ಒಳ್ಳೆಯ ವಸ್ತು ಸೃಷ್ಟಿ ಆಗುವುದಲ್ಲದೆ, ಆಫರ್ ಮಾಡಿ ಜನರಿಗೂ ನೀಡಬಹುದು.
ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?ಈ 5 ಹಂತಗಳ ಜೊತೆಗೆ, 5 ಅಂಶಗಳನ್ನು ಸೇರಿಸಿದರೆ, ನಿಮ್ಮ ಗ್ರಾಂಡ್ ಸ್ಲಾಮ್ ಆಫರ್ ಸೃಷ್ಟಿಯಾಗುತ್ತದೆ. ಆಗಿದ್ದರೆ ಆ 5 ಅಂಶಗಳು ಯಾವುವು?
ಅಂದರೆ ನಿಮ್ಮ ವಸ್ತುವನ್ನು ಎಲ್ಲರಿಗೂ ಮಾರುತ ಕೂರಬೇಡಿ, ಅದರಲ್ಲಿ ಕೊರತೆ ಇರಲಿ. ಕೊರತೆ ಎಂದರೆ ವಸ್ತುಗಳನ್ನು ಸೀಮಿತವಾಗಿ(limited) ನೀಡುವುದಾಗಿದೆ. ಉದಾಹರಣೆಗೆ ನಿಗದಿತ ಸಮಯದ ಕೊಡುಗೆ(limited time offer) ಇರುವ ಕೈಗಡಿಯಾರಗಳು ಅಧಿಕ ಮಾರಾಟವಾಗುತ್ತದೆ. ಇದೇ ರೀತಿಯಾಗಿ ನಿಮ್ಮ ವಸ್ತುವಿನ ಕೊರತೆ ಇರಬೇಕು. ನೀವು ನಿಮ್ಮ ವಸ್ತುವನ್ನು ಎಲ್ಲರಿಗೂ ಮಾರಲು ಸಾಧ್ಯವಿಲ್ಲ.
ನಿಮ್ಮ ವಸ್ತುವನ್ನು ಖರೀದಿಸಲು ಜನರಿಗೆ ಅವಸರ ಇರಲೇಬೇಕು. ಒಂದು ವೇಳೆ ಅವಸರ ಇಲ್ಲವಾದಲ್ಲಿ ನಿಮ್ಮ ವಸ್ತುವು ಅಧಿಕ ಮಾರಾಟವಾಗುವುದಿಲ್ಲ.
ನೀವು ನೀಡುವ ವಸ್ತುವಿನ ಜೊತೆಗೆ ಇನ್ನಷ್ಟು ಹೆಚ್ಚುವರಿ ವಸ್ತುಗಳನ್ನು(extra products) ಕೊಟ್ಟರೆ ಅದು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಉದಾಹರಣೆಗೆ ನಾನು ಪೆನ್ ನೀಡುತ್ತಿದ್ದು, ಅದರ ಜೊತೆಗೆ ಪೆನ್ ಹೋಲ್ಡರ್ ಅನ್ನು ನೀಡಿದರೆ ಜನರಿಗೆ ಇದು ಇಷ್ಟವಾಗುತ್ತದೆ. ಪ್ರತಿಯೊಬ್ಬರಿಗೂ ಹೆಚ್ಚುವರಿ ಬೇಕಿರುತ್ತದೆ. ಹೀಗಾಗಿ ನೀವು ನಿಮ್ಮ ವಸ್ತುವಿನ ಜೊತೆಗೆ ಹೆಚ್ಚುವರಿ ವಸ್ತುಗಳನ್ನು ನೀಡಿದರೆ, ಇದು ನಿಮ್ಮ ವಸ್ತುವಿನ ಮೌಲ್ಯವನ್ನು ಹೆಚ್ಚಿಸುವುದಲ್ಲದೆ ಆಫರ್ ಅನ್ನು ಗಟ್ಟಿ ಮಾಡುತ್ತದೆ.
ನೀವು ಒಂದು ಒಳ್ಳೆಯ ವಸ್ತುವನ್ನು ಮಾಡಿದ್ದಾರೆ, ಖಾತರಿ(guarantee) ಕೊಡಲು ಹಿಂಜರಿಯಬೇಡಿ. ಇದರಿಂದ ನಿಮ್ಮ ಗ್ರಾಹಕರಿಗೆ ತೃಪ್ತಿ ಆಗುತ್ತದೆ.
ನಿಮ್ಮ ಆಫರ್ ಇಲ್ಲ ಸೇವೆಗೆ ಒಂದು ಒಳ್ಳೆಯ ಹೆಸರನ್ನು ನೀಡಿ. ಜನರನ್ನು ಆಕರ್ಷಿಸುವಂತಹ ಹೆಸರನ್ನು ನೀಡಿ.
ಇವೆಲ್ಲವನ್ನೂ ಮಾಡುವುದರಿಂದ ನಿಮ್ಮ ಒಂದು ಗ್ರಾಂಡ್ ಸ್ಲಾಮ್ ಆಫರ್ ಸೃಷ್ಟಿಯಾಗುತ್ತದೆ. ಇದಕ್ಕೆ ಇಲ್ಲವೆನ್ನೆಲು ಸಾಧ್ಯವೇ ಆಗುವುದಿಲ್ಲ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...