Watch Video
ಇದು ತುಂಬಾ ಹಳೆಯ ವಿಷಯವಾಗಿದೆ. 5 ಬಡ ವ್ಯಕ್ತಿಗಳು ಮರಳಿನ ಮೇಲೆ ಮಲಗಿದ್ದರು. ಮಧ್ಯರಾತ್ರಿಯಲ್ಲಿ ಒಂದು ಬೆಳಕಿನಿಂದ ಅವರು ಎದ್ದರು. ಅವರ ಮುಂದೆ ಒಂದು ಯಕ್ಷಿಣಿ(fairy) ಇತ್ತು. ಅದು, "ನೀವು 5 ಜನ ಒಂದೊಂದು ಆಸೆಯನ್ನು ಕೇಳಬಹುದು" ಎಂದು ಹೇಳಿತು. ಆಗ ಮೊದಲ ವ್ಯಕ್ತಿ, "ನನಗೆ ಕತ್ತೆಯ ಅವಶ್ಯಕತೆ ಇದೆ. ದಯವಿಟ್ಟು ಅದನ್ನು ಕೊಡಿ ಎಂದು ಕೇಳುತ್ತಾನೆ". ಸ್ವಲ್ಪ ಸಮಯದ ನಂತರ ಆ ಕತ್ತೆ ಅವನ ಮುಂದೆ ಬರುತ್ತದೆ. ಇನ್ನೊಬ್ಬ ವ್ಯಕ್ತಿಗೆ ಮೊದಲ ವ್ಯಕ್ತಿ ಮೂರ್ಖ ಎನಿಸಿತು. ಹೀಗಾಗಿ ಅವನು, "ನನಗೆ 10 ಕತ್ತೆಗಳು ಬೇಕು ಎನ್ನುತ್ತಾನೆ". ಆಗ ತಕ್ಷಣವೇ 10 ಕತ್ತೆಗಳು ಪ್ರತ್ಯಕ್ಷವಾಗುತ್ತವೆ.
ಮೂರನೇ ವ್ಯಕ್ತಿಗೆ ಮೊದಲ ಇಬ್ಬರು ದೊಡ್ಡ ಮೂರ್ಖರು ಅನಿಸಿತು. ನಾನು ದೊಡ್ಡದ್ದನ್ನು ಕೇಳುವೆನು ಎಂದುಕೊಂಡು, "ನನಗೆ ದೊಡ್ಡ ಜಮೀನು ಬೇಕು, ಅದರಲ್ಲಿ ಸಾವಿರಾರು ಒಂಟೆ, ಕತ್ತೆ, ವಾಸಿಸಲು ಗುಡಿಸಲು, ಅನಿಯಮಿತ ಆಹಾರ, ಕುಡಿಯಲು ನೀರು ಮತ್ತು 20 ರಿಂದ 30 ರಷ್ಟು ನೌಕರರನ್ನು ನೀಡಿ ಎನ್ನುತ್ತಾನೆ. ಆ ಮೂರನೇ ವ್ಯಕ್ತಿಗೂ ಅವೆಲ್ಲವೂ ಸಿಗುತ್ತದೆ. ನಾಲ್ಕನೇ ವ್ಯಕ್ತಿ ಮೂರನೇ ವ್ಯಕ್ತಿ ಚೆನ್ನಾಗಿ ಕೇಳಿದ ಎಂದುಕೊಂಡು, "ನಾನು ಅವನಿಗಿಂತ ಅತಿಯಾಗಿ ಹೇಗೆ ಕೇಳಲಿ" ಎಂದು ಯೋಚಿಸಲು ಪ್ರಾರಂಭಿಸಿದ. ಆಗ ಅವನು, "ನನ್ನನ್ನು ಈ ಭೂಮಿಯ ರಾಜನನ್ನಾಗಿ ಮಾಡು" ಎಂದು ಕೇಳಿದನು. ಆಗ ಅವನ ತಲೆಯ ಮೇಲೆ ಒಂದು ಕಿರೀಟ(crown) ಬರುತ್ತದೆ ಮತ್ತು ಅನೇಕ ಸಿಪಾಯಿಗಳು ಅವನಿಗೆ ಸಿಕ್ಕು ಅವನು ರಾಜನಾಗುತ್ತಾನೆ.
ಐದನೇ ವ್ಯಕ್ತಿ ನಾನು ಇವರೆಲ್ಲರಿಗಿಂತ ಶಕ್ತಿಯುತವಾಗಲು(powerful) ಏನು ಕೇಳಿಕೊಳ್ಳಲಿ ಎಂದು ಯೋಚಿಸಲು ಪ್ರಾರಂಭಿಸಿದ. ನಂತರ ಅವನು ಆ ಯಕ್ಷಿಣಿಗೆ, "ನನಗೆ ನಿಮ್ಮ ಪೂರ್ತಿ ಶಕ್ತಿಯನ್ನು ನೀಡಿ" ಎಂದು ಕೇಳಿಕೊಂಡ. ಇದನ್ನು ಕೇಳಿದ ನಂತರ ಅವನು ಮರಳಿನ ಮೇಲೆ ಬರೆಬತ್ತಲೆ ನಿಂತಿರುತ್ತಾನೆ. ಅವನ ಪೂರ್ತಿ ಚರ್ಮ ಸುಟ್ಟು ಹೋಗಿರುತ್ತದೆ. ಏಕೆಂದರೆ ಯಕ್ಷಿಣಿಯ ಶಕ್ತಿಯನ್ನು ಆತನ ಶರೀರ ತಡೆಯಲಿಲ್ಲ. ಈ ಕಥೆಯ ಜೊತೆ ಒಂದು ಆಸಕ್ತಿಕರ ಪುಸ್ತಕದ ಅಧ್ಯಾಯ(chapter) ಶುರುವಾಗುತ್ತದೆ. ಅದರ ವಿವರವಾದ ಸಾರಾಂಶವನ್ನು ನಾನು ನಿಮಗೆ ತಿಳಿಸಲಿದ್ದೇನೆ.
ಆ ಪುಸ್ತಕದ ಹೆಸರೇ "100 to 1 in the stock market", ಇದನ್ನು ಥಾಮಸ್ ಫೆಲ್ಪ್ಸ್(thomas phelps) ಅವರು ಬರೆದಿದ್ದಾರೆ. ನೀವು ಕೆಲವು ಕಂಪನಿಗಳಲ್ಲಿ ಹೂಡಿಕೆ ಮಾಡಿ 100x ಬೆಳವಣಿಗೆಯನ್ನು ಕಾಣಲು ಬಯಸಿದ್ದರೆ, ಈ ಪುಸ್ತಕ ಅಂತ ಕಂಪನಿಗಳನ್ನು ಹುಡುಕಲು ಸಹಕರಿಸುತ್ತದೆ. ಈ ಪುಸ್ತಕ 1972 ರಂದು ಪ್ರಕಟವಾಗಿತ್ತು. ಆದರೆ ಇದರಲ್ಲಿ ತಿಳಿಸಿದ ತಂತ್ರಗಳು(strategies) ಷೇರು ಮಾರುಕಟ್ಟೆಯ ಮೇಲೆ ಆಸಕ್ತಿ ಹೊಂದಿರುವವರಿಗೆ ಸಂಬಂಧಿಸಿದೆ. ಈ ಲೇಖನದ ಪ್ರಾರಂಭದಲ್ಲಿ ಈ ಪುಸ್ತಕದಲ್ಲಿರುವ ಒಂದು ಕಥೆಯನ್ನು ನಿಮಗೆ ತಿಳಿಸಿದ್ದೆವು. ಆ ಕಥೆಯ ಪಾಠವೇನೆಂದರೆ ನೀವು ಕಡಿಮೆ ನಿರೀಕ್ಷೆ(exceptation) ಇಟ್ಟುಕೊಂಡಿದ್ದಾರೆ, ಕಡಿಮೆ ರಿಟರ್ನ್ ಬರುತ್ತದೆ. ಅದೇ ನೀವು ಅಧಿಕ ನಿರೀಕ್ಷೆ ಇಟ್ಟುಕೊಂಡು, ಆ ರೀತಿಯಲ್ಲೇ ತಂತ್ರಗಳನ್ನು ಮಾಡಿದರೆ 100x ರಿಟರ್ನ್ ಸಿಗುವ ಸಾಧ್ಯತೆ ಇರುತ್ತದೆ. ಅದೇ ನಾವು ತುಂಬಾ ದುರಾಸೆಗೆ(greedy) ಬಿದ್ದರೆ ಐದನೇ ವ್ಯಕ್ತಿಯ ರೀತಿ ಆಗುತ್ತದೆ. ಈ ಪುಸ್ತಕದ ಮೊದಲ ಪಾಠವೇ,
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1ಮೊದಲ ಕೆಲವು ಅಧ್ಯಾಯಗಳಲ್ಲಿ ಲೇಖಕರು ಹೂಡಿಕೆಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು(concept) ವಿವರಿಸುತ್ತಾರೆ. ಕೆಲವು ಸ್ಟಾಕ್ಗಳಲ್ಲಿ 100x ನಷ್ಟು ರಿಟರ್ನ್ ಸಾಧಿಸುವ ಸಂಭಾವ್ಯ ಇರುತ್ತದೆ. ನಾವು ಅಂತಹ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಿದರೆ ನಮ್ಮನ್ನು ಷೇರು ಮಾರುಕಟ್ಟೆಯಿಂದ ಶ್ರೀಮಂತರಾಗಲು ತಡೆಯಲು ಯಾರಿಗೂ ಸಾಧ್ಯವಿಲ್ಲ. ಪುಸ್ತಕದಲ್ಲಿ 1932 ರಿಂದ 1971 ರವರೆಗೆ, 100x ರಿಟರ್ನ್ ನೀಡಿದ ಅಮೇರಿಕಾದ ಕಂಪನಿಯ ಉದಾಹರಣೆಯನ್ನು ನೀಡಲಾಗಿದೆ ಮತ್ತು ಅವುಗಳಲ್ಲಿ ಇರುವ ಸಾಮಾನ್ಯ ಗುಣಲಕ್ಷಣಗಳ ಬಗ್ಗೆಯೂ ತಿಳಿಸಲಾಗಿದೆ. ಆದರೆ ನಾವು ಭಾರತದ ಕಂಪನಿಗಳ ಉದಾಹರಣೆಯನ್ನು ತಿಳಿಸಿ ಕಾನ್ಸೆಪ್ಟ್ಗಳನ್ನು ಸುಲಭ ಮಾಡುತ್ತೇವೆ.
ಟೈಟಾನ್ ಕಂಪನಿಯ ಉದಾಹರಣೆ ತೆಗೆದುಕೊಳ್ಳೋಣ. ಈ ಕಂಪನಿಯ ಸಾರ್ವಕಾಲಿಕ(all time) ರಿಟರ್ನ್ 66,567% ನಷ್ಟು ಇದೆ. ಅಂದರೆ ನೀವು ಕೇವಲ 1000 ರೂಪಾಯಿ ಹೂಡಿಕೆ ಮಾಡಿದ್ದರು, ಇಂದು ಅದರ ಮೌಲ್ಯ 6,60,600 ರೂಪಾಯಿ ಆಗಿರುತ್ತಿತ್ತು. ಹೀಗಾಗಿ ಮೊದಲ ವಿಷಯವೆನೆಂದರೆ ಷೇರು ಮಾರುಕಟ್ಟೆಯಲ್ಲಿ "ಮಾಂತ್ರಿಕ ಶಕ್ತಿಗಳು(magical powers)" ಇದ್ದೇ ಇರುತ್ತದೆ. ನಿಮ್ಮ ರಿಟರ್ನ್ ಅನ್ನು ಗರಿಷ್ಠ ಮಾಡಲು ಅವುಗಳನ್ನು ಬಳಸಲು ನಿಮಗೆ ಬರಬೇಕು.
ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳುಲೇಖಕರು ಪುಸ್ತಕದಲ್ಲಿ ಅನೇಕ ಬಾರಿ "ಹೂಡಿಕೆಯ ಮನೋವಿಜ್ಞಾನವನ್ನು(psychology of investing)" ವಿವರಿಸಿದ್ದಾರೆ ಮತ್ತು ಹೂಡಿಕೆದಾರರಿಗೆ ದೀರ್ಘಾವಧಿಯ ಹೂಡಿಕೆಯ ಮೇಲೆ ಗಮನ ಹರಿಸಲು ಹೇಳುತ್ತಾರೆ. ನೀವು ಪದೇ ಪದೇ ಸ್ಟಾಕ್ಗಳನ್ನು ಖರೀದಿಸಿ ಮತ್ತು ಮಾರುವುದನ್ನು(buy & sell) ತಪ್ಪಿಸಬೇಕು. ಏಕೆಂದರೆ ಅನೇಕ ಹೂಡಿಕೆದಾರರು ಷೇರು ಮಾರುಕಟ್ಟೆಯನ್ನು ಟೈಮ್ ಮಾಡಬಹುದು ಎಂದುಕೊಳ್ಳುತ್ತಾರೆ. ಅಂದರೆ ಅವರು ಮಾರ್ಕೆಟ್ ಈಗ ಮೇಲೇ ಇಲ್ಲ ಕೆಳಗೆ ಹೋಗುತ್ತದೆ ಎಂದು ಊಹಿಸುತ್ತಾರೆ ಮತ್ತು ಅದರ ಮೇಲೆ ಖರೀದಿಸುವ ಇಲ್ಲ ಮಾರುವುದನ್ನು ಮಾಡುತ್ತಾರೆ. ಪುಸ್ತಕದಲ್ಲಿ ಪೋರ್ಟ್ಫೋಲಿಯೋ ಹೋಲ್ಡ್ ಮಾಡಿ ಅಧಿಕ ರಿಟರ್ನ್ ಗಳಿಸಿದ ಅನೇಕ ಹೂಡಿಕೆದಾರರ ಉದಾಹರಣೆಯನ್ನು ತಿಳಿಸಲಾಗಿದೆ.
ಭಾರತದಲ್ಲಿ ಇದರ ಉದಾಹರಣೆ ತಿಳಿಸಬೇಕೆಂದರೆ. ಭಾರತದ ವಾರೆನ್ ಬಫೆಟ್(warren buffet) ಎಂದು ಕರೆಯುವ ದಿವಂಗತ ರಾಕೇಶ್ ಜುಂಜುನ್ವಾಲಾ(rakesh jhunjhunwala) ಅವರದ್ದು ಟೈಟಾನ್(titan) ಕಂಪನಿಯಲ್ಲಿ 11,000 ಕೋಟಿಯಷ್ಟು ಹೋಲ್ಡಿಂಗ್ ಇದೆ. ಆದರೆ ಅವರು ಟೈಟಾನ್ ಕಂಪನಿಯಲ್ಲಿ ಹೂಡಿಕೆ ಮಾಡಿದಾಗ ಆ ಕಂಪನಿ ಆರ್ಥಿಕವಾಗಿ ತುಂಬಾ ಹೋರಾಟ ಮಾಡುತ್ತಿತು. ಆರ್ಥಿಕ ವರ್ಷ 2001 ಮತ್ತು 2002ರಂದು ಕಂಪನಿಯ ಲಾಭ 23 ಕೋಟಿಯಿಂದ 13 ಕೋಟಿಗೆ ಬಂದಿತು. ಅಂದರೆ 44 ರಷ್ಟು ಕೆಳಗೆ ಬಂತು, ಮುಂದಿನ ವರ್ಷ 13 ಕೋಟಿಯಿಂದ 6 ಕೋಟಿಗೆ ಬಂದಿತು. ಅಂದರೆ 55 ರಷ್ಟು ಕೆಳಗೆ ಬಂತು. ಆದರೂ ರಾಕೇಶ್ ಜುಂಜುನ್ವಾಲಾ ಅವರಿಗೆ ಟೈಟಾನ್ನ ವ್ಯಾಪಾರದ ಮಾದರಿ(business model) ನಿಜವೆನ್ನಿಸಿತು(genuine). ಹೀಗಾಗಿ ಅವರು ಅಧಿಕ ಹೂಡಿಕೆ ಮಾಡಿ ದೀರ್ಘವಾದಿ ಹಿಡಿದಿಟ್ಟುಕೊಂಡರು. ರಾಕೇಶ್ ಅವರ ಯಶಸ್ಸಿನಲ್ಲಿ ಟೈಟನ್ ಕಂಪನಿಯ ದೊಡ್ಡ ಪಾತ್ರವಿದೆ.
ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳುಕಂಪನಿಯ ವಿಶ್ಲೇಷಣೆ(analysis) ಮಾಡದೆ ಅದರಲ್ಲಿ ಎಂದಿಗೂ ಹೂಡಿಕೆ ಮಾಡಬಾರದು ಎಂದು ಲೇಖಕರು ಹೇಳುತ್ತಾರೆ. ನೀವು ಕಂಪನಿಯ ಆರ್ಥಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಮೊದಲ ಹಂತವಾಗಿದೆ. ಇದರ ನಂತರ ಕಂಪನಿಯ ಬೆಳವಣಿಗೆಯ ಸಂಭಾವ್ಯದ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಹಲವಾರು ಆರ್ಥಿಕ ಅನುಪಾತಗಳು ಇದೆ. ಆದರೆ ಆರಂಭಿಗರು 3 ಆರ್ಥಿಕ ಅನುಪಾತಗಳ ಬಗ್ಗೆ ತಿಳಿದುಕೊಳ್ಳಬೇಕು.
ಈಗ ಒಂದೊಂದನ್ನು ಅರ್ಥಮಾಡಿಕೊಳ್ಳೋಣ,
ಕಂಪನಿ ತನ್ನ ಒಂದು ಶೇರ್ಗೆ ಎಷ್ಟು ಗಳಿಸುತ್ತಿದೆ ಎಂಬುದನ್ನು ಇದು ತಿಳಿಸುತ್ತದೆ. ಕಂಪನಿಯ ಇಪಿಎಸ್ ತಿಳಿಯಲು ನಿವ್ವಳ ಆದಾಯದಿಂದ(net income) ಬಾಕಿ ಇರುವ ಷೇರುಗಳನ್ನು(number of outstanding shares) ಭಾಗ ಮಾಡಿ.
eps= net income/number of outstanding shares
ಉದಾಹರಣೆಗೆ ಒಂದು ಕಂಪನಿಯ ನಿವ್ವಳ ಆದಾಯ 10 ಕೋಟಿ ಇದ್ದು, ಅದರ ಒಂದು ಲಕ್ಷ ಶೇರ್ ಇದ್ದರೆ ಕಂಪನಿ ಪ್ರತಿಯೊಂದು ಶೇರಿಗೆ 1000 ರೂಪಾಯಿ ಗಳಿಸುತ್ತಿದೆ ಎಂದರ್ಥ. ಇಪಿಎಸ್ ಸ್ಟಾಕ್ ವಿಶ್ಲೇಷಣೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಅದು ಕಂಪನಿಯ ಪ್ರದರ್ಶನ ಮತ್ತು ಲಾಭದಾಯಕತೆ ಬಗ್ಗೆ ತಿಳಿಸುತ್ತದೆ. ಒಂದೇ ರೀತಿಯ ವಲಯದಲ್ಲಿ(sector) ಹೋಲಿಸಲು ಇಪಿಎಸ್ ಸಹಕರಿಸುತ್ತದೆ. ಇದು ಯಾವ ಕಂಪನಿ ಅಧಿಕ ಆದಾಯವನ್ನು ಉತ್ಪಾದಿಸುತ್ತದೆ ಎಂಬುದನ್ನು ತಿಳಿಸುತ್ತದೆ.
ಉದಾಹರಣೆಗೆ ಐಟಿ ಕಂಪನಿಯ ದೊಡ್ಡ ಕ್ಯಾಪ್ ವಿಭಾಗ(large cap section) ತೆಗೆದುಕೊಳ್ಳೋಣ. ಈ 7 ಕಂಪನಿಯ 1 ವರ್ಷದ ಐತಿಹಾಸಿಕ ಇಪಿಎಸ್(1 year historical eps) ಈ ರೀತಿಯಾಗಿ ಇದೆ. 1 ವರ್ಷದ ಐತಿಹಾಸಿಕ ಇಪಿಎಸ್ ಎಂದರೆ ಕಂಪನಿಯ ಆ ಒಂದು ವರ್ಷದ ಇಪಿಎಸ್ ಕಳೆದ ವರ್ಷಕ್ಕೆ ಹೋಲಿಸಿದರೆ ಎಷ್ಟು ಬೆಳೆದಿದೆ ಎಂಬುದನ್ನು ತಿಳಿಸುತ್ತದೆ. ಟಿಸಿಎಸ್ನ(tcs) ಇಪಿಎಸ್ 19 ರಷ್ಟು ಏರಿರುವುದನ್ನು ನೀವು ನೋಡುತ್ತಿರಬಹುದು. ಆರ್ಥಿಕ ವರ್ಷ 2022ರಲ್ಲಿ(fy 2022) ಟಿಸಿಎಸ್ನ ಇಪಿಎಸ್ 104.18 ರೂಪಾಯಿ ಇತ್ತು. ಆರ್ಥಿಕ ವರ್ಷ 2021ರಲ್ಲಿ(fy 2021) 87.04 ಇತ್ತು. ನಾವು ಇದರ ಶೇಕಡಾವಾರು(percentage) ಬೆಳವಣಿಗೆಯ ಲೆಕ್ಕಾಚಾರ ಮಾಡಿದರೆ ಅಂದರೆ,
104.18 - 87.04 / 87.04 * 100 ಮಾಡಿದರೆ ನಮಗೆ ಒಂದು ವರ್ಷದ ಐತಿಹಾಸಿಕ ಇಪಿಎಸ್ ಸಿಗುತ್ತದೆ.
ಟೆಕ್ ಮಹೀಂದ್ರಾದ(tech mahindra) ಇಪಿಎಸ್ ಕಳೆದ ವರ್ಷಕ್ಕಿಂತ 25ರಷ್ಟು ಏರಿರುವುದನ್ನು ನೀವು ನೋಡುತ್ತಿರಬಹುದು. ಟಿಸಿಎಸ್‌ಗೆ ಹೋಲಿಸಿದರೆ ಟೆಕ್ ಮಹೀಂದ್ರ ಒಳ್ಳೆಯ ದರದಲ್ಲಿ(rate) ಇಪಿಎಸ್ ಅನ್ನು ಹೆಚ್ಚಿಸಿಕೊಂಡಿದೆ.
ನಾವು ಕಂಪನಿಗಳು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ನೋಡಲು 6 ತಿಂಗಳ ರಿಟರ್ನ್ ಫಿಲ್ಟರ್ ಹಾಕಿದರೆ. ಟಿಸಿಎಸ್ನ 6 ತಿಂಗಳ ರಿಟರ್ನ್ 4.7 ರಷ್ಟು ಇದೆ. ಒಂದು ವರ್ಷದ ಇಪಿಎಸ್ ಬೆಳವಣಿಗೆ 19.68 ರಷ್ಟು ಇರುವುದನ್ನು ನೋಡಬಹುದು. ಅದೇ ಟೆಕ್ ಮಹೀಂದ್ರಾದ ಸ್ಟಾಕ್ ರಿಟರ್ನ್ 9.29 ರಷ್ಟು ಇದ್ದು, ಅದೇ ಒಂದು ವರ್ಷದ ಇಪಿಎಸ್ 25.27 ರಷ್ಟು ಇದೆ. ಈಗ ಯಾವ ಕಂಪನಿ ಚೆನ್ನಾಗಿ ನಿರ್ವಹಿಸಿದೆ ಎಂಬುದನ್ನು ನೀವು ಕಮೆಂಟ್ ಮಾಡಿ ತಿಳಿಸಿ.
ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶಇದು ತುಂಬಾ ಪ್ರಮುಖವಾದ ಅನುಪಾತವಾಗಿದೆ. ಈ ಅನುಪಾತ ಸ್ಟಾಕ್ ವಿಶ್ಲೇಷಣೆಯಲ್ಲಿ ತುಂಬಾನೇ ಸಹಕರಿಸುತ್ತದೆ. ಇದನ್ನು ಕ್ಯಾಲ್ಕುಲೇಟ್ ಮಾಡುವುದು ತುಂಬಾನೇ ಸುಲಭವಾಗಿದೆ.
pe= current market price of stock/eps
ಇನ್ಪೋಸಿಸ್ನ(infosis) pe ಅನುಪಾತ 26.30 ರಷ್ಟು ಇದೆ, ಅದೇ ಟಿಸಿಎಸ್ನ(tcs) pe ಅನುಪಾತ 30.68 ರಷ್ಟು ಇದೆ. ಇದರ ಅರ್ಥವೆನೆಂದರೆ, ಹೂಡಿಕೆದಾರರು ಕಂಪನಿಯ 1 ರೂಪಾಯಿ ಲಾಭಕ್ಕೆ ಇನ್ಫೋಸಿಸ್ಗೆ 26 ರೂಪಾಯಿ ಕೊಡಲು ಸಿದ್ದರಿದ್ದಾರೆ ಮತ್ತು ಟಿಸಿಎಸ್ಗೆ 30.68 ರೂಪಾಯಿ ಕೊಡಲು ಸಿದ್ದರಿದ್ದಾರೆ. ಯಾವುದೇ ಕಂಪನಿಯ pe ಅನುಪಾತ ಅಧಿಕವಿದ್ದಲ್ಲಿ, ಇದರ ಅರ್ಥ ಹೂಡಿಕೆದಾರರು ಇದು ಭವಿಷ್ಯದಲ್ಲಿ ಚೆನ್ನಾಗಿ ನಿರ್ವಹಿಸುತ್ತದೆ ಎಂಬ ಭರವಸೆಯನ್ನು ತಿಳಿಸುತ್ತದೆ. ಅದೇ pe ಅನುಪಾತ ಕಡಿಮೆ ಇದ್ದರೆ, ಹೂಡಿಕೆದಾರರಿಗೆ ಇದರ ಭವಿಷ್ಯದ ಬೆಳವಣಿಗೆಯ ಭರವಸೆ ತುಂಬಾ ಕಡಿಮೆ ಇದೆ ಎಂದು ಅನಿಸುತ್ತದೆ. ಒಂದು ವೇಳೆ pe ಅನುಪಾತ ತುಂಬಾನೇ ಅಧಿಕವಿದ್ದರೆ, ಆ ಸ್ಟಾಕ್ ಹೆಚ್ಚು ಮೌಲ್ಯಯುತವಾಗಿದೆ(overvalued) ಎಂದರ್ಥ. ಒಂದು ವೇಳೆ pe ಅನುಪಾತ ತುಂಬಾ ಕಡಿಮೆ ಇದ್ದು, ಆ ಕಂಪನಿಯ ಮೂಲಭೂತ(fundamental) ತುಂಬಾ ಗಟ್ಟಿ ಇದ್ದಾರೆ, ಆ ಸ್ಟಾಕ್ ಕಡಿಮೆ ಮೌಲ್ಯಯುತವಾಗಿದೆ(undervalued). ಅಂದರೆ ಇದರಿಂದ ನೀವು ಅಧಿಕ ಲಾಭವನ್ನು ಗಳಿಸಬಹುದು.
ಇದು ನಮಗೆ ಕಂಪನಿಯ ಲಾಭದಾಯಕತೆಯನ್ನು(profitability) ಅಳತೆ ಮಾಡಲು ಸಹಕರಿಸುತ್ತದೆ.
roe= net income/shareholders equity
ಉದಾಹರಣೆಗೆ ಒಂದು ಕಂಪನಿಯ ನಿವ್ವಳ ಆದಾಯ 100 ಕೋಟಿ ಇದೆ ಮತ್ತು ಷೇರುದಾರರ ಇಕ್ವಿಟಿ 500 ಕೋಟಿ ಇದೆ ಎಂದುಕೊಳ್ಳಿ, ಆಗಿದ್ದರೆ roe ಈ ರೀತಿ ಇರುತ್ತದೆ,
100 ಕೋಟಿ/500 ಕೋಟಿ = 0.2 ಅಥವಾ 20%
ಇದರ ಅರ್ಥವೇನೆಂದರೆ ಷೇರುದಾರರು ಹಾಕುವ ಒಂದು ರೂಪಾಯಿಗೆ ಈ ಕಂಪನಿ 20 ಪೈಸೆಯಷ್ಟು ಲಾಭವನ್ನು ಗಳಿಸುತ್ತಿದೆ.
ಅಂದರೆ ನಿಮ್ಮ ಹೂಡಿಕೆಗೆ 100x ನಷ್ಟು ರಿಟರ್ನ್ ನೀಡುವ ಕಂಪನಿಗಳನ್ನು ಹುಡುಕುವುದು ಹೇಗೆ? ಇದಕ್ಕಾಗಿ ಲೇಖಕರು 3 ಮುಖ್ಯ ಅಂಶವನ್ನು ವಿವರಿಸುತ್ತಾರೆ.
ಆ ಕಂಪನಿ ತನ್ನ ಉದ್ಯಮದಲ್ಲಿ(industry) ಮಾರ್ಕೆಟ್ ಲೀಡರ್ ಆಗಿರಬೇಕು. ಅವರ ಹತ್ತಿರ ದೊಡ್ಡ ಸ್ಪರ್ಧಾತ್ಮಕ ಅನುಕೂಲತೆ(competitive advantage) ಇರಬೇಕು.
ಅಂದರೆ ದೀರ್ಘಾವಧಿಗೆ ಸಮರ್ಥನೀಯ ಇರಬಹುದಾದ ವ್ಯಾಪಾರವನ್ನು ಅದು ಮಾಡುತ್ತಿರಬೇಕು ಮತ್ತು ಅದರಲ್ಲಿ ದೀರ್ಘಾವಧಿಯಲ್ಲಿ ಹಣ ಗಳಿಸುವ ಅವಕಾಶ ಅಧಿಕವಿರಬೇಕು.
ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳುಲೇಖಕರ ಪ್ರಕಾರ ಒಂದು ಗುಂಪಿನಲ್ಲಿ ಎಲ್ಲರೂ ಕೌಶಲ್ಯಪೂರ್ಣ(skillful) ಇದ್ದಾಗ ಆ ಗುಂಪು ಗೆಲ್ಲಲು ಸಾಧ್ಯವಾಗುತ್ತದೆ. ಗುಂಪಿನ ನಾಯಕ ಗಟ್ಟಿಯಾಗಿರಬೇಕು.
ಇದಕ್ಕಾಗಿ ಏಷ್ಯನ್ ಪೇಂಟ್ಸ್ನ(asian paints) ಉದಾಹರಣೆ ತೆಗೆದುಕೊಳ್ಳೋಣ, ಏಷ್ಯನ್ ಪೇಂಟ್ಸ್ ಪೈಂಟ್ ಉದ್ಯಮದಲ್ಲಿ ಮಾರ್ಕೆಟ್ ಲೀಡರ್ ಆಗಿದೆ. ಬಲವಾದ ವಿತರಣಾ ಜಾಲ(strong distribution network) ಇರುವುದು ಇವರ ಸ್ಪರ್ಧಾತ್ಮಕ ಅನುಕೂಲತೆಯಾಗಿದೆ. ಏಷ್ಯನ್ ಪೇಂಟ್ಸ್ ಜೀವಮಾನದಲ್ಲಿ 23,359ರಷ್ಟು ರಿಟರ್ನ್ ನೀಡಿದೆ.
ಇದನ್ನು ಓದಿ: ರಾಬರ್ಟ್ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summaryಹೂಡಿಕೆದಾರರು ಕೇವಲ ಊಹಾಪೋಹದಿಂದಲೇ(speculation) ಹಣವನ್ನು ಕಳೆದುಕೊಳ್ಳುತ್ತಾರೆ ಎಂದು ಲೇಖಕರು ಹೇಳುತ್ತಾರೆ. ಊಹಾಪೋಹವೆಂದರೆ ನೀವು ಯಾವುದೇ ರೀತಿಯಾಗಿ ಹುಡುಕದೆ, ವಿಶ್ಲೇಷಣೆ ಇಲ್ಲದೆ ಒಬ್ಬರ ಮಾತನ್ನು ಕೇಳಿ ನಿಮ್ಮ ಹಣವನ್ನು ಹೂಡಿಕೆ ಮಾಡುತ್ತೀರಾ. ಅಲ್ಪ ಅವಧಿಯಲ್ಲಿ ಅಧಿಕ ಲಾಭ ಗಳಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ.
ಉದಾಹರಣೆಗೆ ಸತ್ಯಾಮ್ ಕಂಪ್ಯೂಟರ್ ಸರ್ವಿಸ್(satyam computer service) ತೆಗೆದುಕೊಳ್ಳೋಣ 2009 ರಂದು ಇದು ಭಾರತದ ದೊಡ್ಡ ಐಟಿ ಸರ್ವಿಸ್ ಕಂಪನಿ ಆಗಿತ್ತು. ಆದರೆ ಈ ಕಂಪನಿ ದೊಡ್ಡ ಲೆಕ್ಕಪತ್ರ ವಂಚನೆ(accounting fraud) ಮಾಡಿತು, ಇದರಿಂದ ಲಕ್ಷಗಟ್ಟಲೆ ಹೂಡಿಕೆದಾರರ ಹಣವು ಮುಳುಗಿ ಹೋಯಿತು ಮತ್ತು ಕಂಪನಿಯು ದಿವಾಳಿಯಾಯಿತು(backrupt), ಹೀಗಾಗಿ ನಿಮ್ಮ ಹೂಡಿಕೆಯಲ್ಲಿ ಅದೃಷ್ಟ(luck) ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸಂಶೋಧನೆ ಮತ್ತು ದೀರ್ಘವಾದಿಯ ಹೂಡಿಕೆಯಿಂದ ಅದೃಷ್ಟವನ್ನು ಉತ್ತಮ ಮಾಡಬಹುದು.
S&P 500 ಅಮೇರಿಕಾದ ಟಾಪ್ 500 ಕಂಪನಿಗಳನ್ನು ಒಳಗೊಂಡಿದೆ. ದೀರ್ಘಾವಧಿಯಲ್ಲಿ ಇದರ ಗ್ರಾಫ್ ಮೇಲೆಯೇ ಹೋಗಿದೆ.
ಇದು ನಿಫ್ಟಿ 50(nifty 50) ಇಂಡೆಕ್ಸ್, ಇದರಲ್ಲಿ ಭಾರತದ ಟಾಪ್ 50 ಕಂಪನಿಗಳಿವೆ. ಇದರ ಗ್ರಾಫ್ ಕೂಡ ದೀರ್ಘಾವಧಿಯಲ್ಲಿ ಮೇಲೆಯೇ ಹೋಗಿದೆ. ಈ ಲೇಖನದ ಸಾರಾಂಶ ಈ ರೀತಿಯಾಗಿ ಇದೆ.
100 to 1 in the stock market ನಲ್ಲಿ ನಾವು ಸರಳವಾದ ಹೂಡಿಕೆಯ ಚೌಕಟ್ಟಿನ(framework) ಬಗ್ಗೆ ತಿಳಿದುಕೊಂಡೆವು. ಇದು ದೀರ್ಘಾವಧಿಯಲ್ಲಿ 100x ರಿಟರ್ನ್ ಕೊಡುವ ಕಂಪನಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಆದರೆ ಕಂಪನಿಯ ಹತ್ತಿರ,
1. Competitive advantage ಇರಬೇಕು. ಇದು ಅವರನ್ನು ಮಾರ್ಕೆಟ್ ಲೀಡರ್ ಆಗಿ ಮಾಡಲು ಸಹಕರಿಸುತ್ತದೆ.
2. Sustainable business ಇರಬೇಕು.
3. Strong growth potential ಇರಬೇಕು.
ಕೆಲವು ಭಾರತೀಯ ಕಂಪನಿಗಳ ಹೆಸರು ತಿಳಿಸಿದರೆ, ಹೆಚ್ಡಿಎಫ್ಸಿ ಬ್ಯಾಂಕ್(hdfc bank) ಬರುತ್ತದೆ. ಇದು ಭಾರತದ ದೊಡ್ಡ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿದೆ. ಇದರ ಸ್ಪರ್ಧಾತ್ಮಕ ಅನುಕೂಲತೆ, ಇದರ ಬ್ರಾಂಡ್ನ ಮೌಲ್ಯವಾಗಿದೆ(brand value), ಇವರದ್ದು ಅದ್ಭುತವಾದ ಗ್ರಾಹಕ ಸೇವೆ, ಆಧುನಿಕ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಒಂದು ವ್ಯಾಪಾರ ಮಾದರಿ ಇದ್ದು, ಅದರಿಂದ ಸ್ಥಿರವಾಗಿ ಲಾಭವನ್ನು ಗಳಿಸಬಹುದು. ಇವರ ಬೆಳವಣಿಗೆಯ ಸಾಮರ್ಥ್ಯ ಕೂಡ ಅಧಿಕವಿದೆ. ಏಕೆಂದರೆ ಇವರು ಗ್ರಾಹಕ ಅಡಿಪಾಯವನ್ನು ಹೆಚ್ಚಿಸಲು ಮತ್ತು ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮ ಮಾಡಲು ಯೋಚಿಸುತ್ತಿದ್ದಾರೆ.
ಬ್ರಿಟಾನಿಯಾ ಇಂಡಸ್ಟ್ರಿಯ ಉದಾಹರಣೆ ತೆಗೆದುಕೊಂಡರೆ, ಇವರ ಸ್ಪರ್ಧಾತ್ಮಕ ಅನುಕೂಲತೆ ಇವರ ಬ್ರಾಂಡ್ ಹೆಸರಾಗಿದೆ. ಅದು ತುಂಬಾ ಪ್ರಸಿದ್ಧವಿದ್ದು ಪ್ರತಿ ಮನೆಯಲ್ಲಿ ಇವರ ವಸ್ತುಗಳನ್ನು ಬಳಸಲಾಗುತ್ತದೆ. ಇವರು ಗುಣಮಟ್ಟ ಮತ್ತು ಆವಿಷ್ಕಾರದ ಮೇಲೆ ಅಧಿಕ ಗಮನ ಹರಿಸುತ್ತಿದ್ದಾರೆ. ಇವರ ಲಾಭ ಕೂಡ ತುಂಬಾ ಸ್ಥಿರವಾಗಿದ್ದು(consistent), ಬೆಳವಣಿಗೆಯ ಸಾಮರ್ಥ್ಯ ಅಧಿಕವಿದೆ. ಇವರು ತಮ್ಮ ಉತ್ಪನ್ನ ಬಂಡವಾಳವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ ಮತ್ತು ನಿಧಾನವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಳೆಯುತ್ತಿದ್ದಾರೆ. ಈಗ ಭಾರತದಲ್ಲಿ ಯಾವ ಕಂಪನಿ 100x ರಿಟರ್ನ್ ಕೊಡಬಹುದು ಎಂಬುದನ್ನು ಕಮೆಂಟ್ನಲ್ಲಿ ತಿಳಿಸಿ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...