Watch Video
ಪ್ರತಿ ವರ್ಷ ಜಗತ್ತಿನಾದ್ಯಂತ ಸಾವಿರಾರು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು(scientific research paper) ಪ್ರಕಟಿಸಲಾಗುತ್ತದೆ. ಇದರಲ್ಲಿ ಮಾನಸಿಕ ಸಂಶೋಧನೆಗಳು(psychological research) ಕೂಡ ಸೇರಿದೆ. ಈ ಮನೋವಿಜ್ಞಾನಗಳನ್ನು ಓದುವುದು ಕಠಿಣವಿರಬಹುದು, ಆದರೆ ಜೀವನದಲ್ಲಿ ಅನ್ವಯಿಸಲು ತುಂಬಾನೇ ಸುಲಭವಾಗಿದೆ. ಹೀಗಾಗಿ ನಾವು ಇಂದು ಈ ಲೇಖನದಲ್ಲಿ 12 ಮನೋವಿಜ್ಞಾನ ಸಂಗತಿಗಳ ಬಗ್ಗೆ ತಿಳಿಸಲಿದ್ದೇವೆ. ಇದನ್ನು ತಿಳಿದ ನಂತರ ನೀವು ಮೊದಲಿನಂತೆ ಇರುವುದಿಲ್ಲ.
ಸಂಗೀತ ನಮ್ಮ ಮನಸ್ಥಿತಿಯನ್ನು ಬದಲಾಯಿಸುವಷ್ಟು ಶಕ್ತಿಶಾಲಿ ಎಂಬುದು ತಿಳಿದಿದೆ. ಶಕ್ತಿಯುತ(energetic) ಸಂಗೀತವನ್ನು ಕೇಳಿ ನೀವು ಪ್ರೇರೇಪಿತರಾಗುತ್ತೀರಾ(motivated), ಅದೇ ಬೇಸರದ ಸಂಗೀತ ನಿಮಗೆ ಬೇಸರ ಮತ್ತು ಖಿನ್ನತೆಯ(depression) ಅನುಭವವನ್ನು ನೀಡಬಹುದು. ನೀವು ಯಾವ ರೀತಿಯ ಸಂಗೀತ ಕೇಳುತ್ತೀರಿ ಎಂಬುದು ನೀವು ಈ ಜಗತ್ತನ್ನು ಯಾವ ರೀತಿಯಲ್ಲಿ ನೋಡುತ್ತೀರಾ ಎಂಬುದನ್ನು ತಿಳಿಸುತ್ತದೆ. 2011ರಲ್ಲಿ ಒಂದು ಅಧ್ಯಯನ ನಡೆಸಲಾಗಿತ್ತು, ಇದರಲ್ಲಿ ಜನಗಳು ಸಂಗೀತವನ್ನು ಕೇಳುತ್ತಾ ಕಾಗದದ ಮೇಲೆ ಸಂತೋಷ(happy) ಮತ್ತು ದುಃಖ(sad) ಮುಖಗಳನ್ನು ಟಿಕ್ ಮಾಡಬೇಕಿತು.
ಇದರಲ್ಲಿ ಬೇಸರದ ಸಂಗೀತ ಕೇಳುತ್ತಿರುವವರು ದುಃಖದ ಮುಖಗಳನ್ನು ಟಿಕ್ ಮಾಡುತ್ತಿದ್ದರು. ಅದೇ ಸಂತೋಷದ ಸಂಗೀತಗಳನ್ನು ಕೇಳುವಾಗ ಸಂತೋಷದ ಮುಖಗಳನ್ನು ಟಿಕ್ ಮಾಡುತ್ತಿದ್ದರು. ಇದಕ್ಕೆ ಗ್ರಹಿಕೆಯ ನಿರೀಕ್ಷೆಗಳು(perceptual expectations) ಎಂದು ಹೆಸರು ನೀಡಲಾಯಿತು. ಅಂದರೆ ನೀವು ನಿಮ್ಮ ಕಿವಿಯಿಂದ ಕೇಳುವುದನ್ನೇ ನಿಮ್ಮ ಕಣ್ಣು ನೋಡುತ್ತಿರುತ್ತದೆ. ಹೀಗಾಗಿ ಶಕ್ತಿಯುತ ಸಂಗೀತ ವ್ಯಾಯಾಮ(exercise) ಮಾಡುವಾಗ ಅಧಿಕ ಸಹಾಯ ಮಾಡುತ್ತದೆ ಮತ್ತು ಮೃದು ಸಂಗೀತ ಗಮನಹರಿಸಲು ಸಹಕರಿಸುತ್ತದೆ.
ಇದನ್ನು ಓದಿ: "Psychology of Money" ಪುಸ್ತಕದ ಸಾರಾಂಶ1999 ರಲ್ಲಿ ಮನಶ್ಶಾಸ್ತ್ರಜ್ಞರು(psychologist), "ಬುದ್ದಿವಂತ ವ್ಯಕ್ತಿಗಳು ಯಾವಾಗಲೂ ಅವರನ್ನು ಸರಾಸರಿಗಿಂತ ಕೆಳಗಿನ(below average) ವ್ಯಕ್ತಿಯಾಗಿ ನೋಡುತ್ತಾರೆ. ಅವರು ಇತರರಿಗಿಂತ ಸ್ಮಾರ್ಟ್ ಎಂದು ನಂಬುವುದಿಲ್ಲ" ಎಂದು ತಿಳಿಸಿದ್ದಾರೆ. ಅದೇ ಸರಾಸರಿ iq(average iq) ಇರುವವರು ಇದರ ವಿರುದ್ಧ ಇರುತ್ತಾರೆ. ಅವರಿಗೆ ಅವರು ಇತರರಿಗಿಂತ ಉತ್ತಮವೆನ್ನಿಸುತ್ತದೆ. ಹೀಗಾಗಿ ನೀವು ಭೇಟಿಯಾಗುವ ವ್ಯಕ್ತಿಯು ಉನ್ನತವಾಗಿ(superior) ತೋರಿಸುತ್ತಿದರೆ, ಇದು ಡನ್ನಿಂಗ್- ಕ್ರುಗರ್ ಪರಿಣಾಮವಾಗಿದೆ. ಅವರು ತೋರಿಸುವ ರೀತಿ ಬುದ್ದಿವಂತ ಇರುವುದಿಲ್ಲ. ಅತೀ ಬುದ್ದಿವಂತ ವ್ಯಕ್ತಿಗಳು ತನ್ನ ಜ್ಞಾನದಿಂದ ತೃಪ್ತಿ ಇರುವುದಿಲ್ಲ. ಅವರು ಯಾವಾಗಲೂ ಅವರ ಸಾಮರ್ಥ್ಯದ ಮೇಲೆ ಅನುಮಾನ ಪಡುತ್ತಾರೆ. ಅವರಿಗೆ ಇನ್ನಷ್ಟು ಉತ್ತಮ ಆಗಬಹುದು ಎಂದು ಅನಿಸುತ್ತದೆ. ಉದಾಹರಣೆಗೆ ಪರೀಕ್ಷೆಯಲ್ಲಿ ಏನನ್ನು ಓದಿಲ್ಲ ಎನ್ನುವವರು ಒಳ್ಳೆಯ ಅಂಕವನ್ನು ತೆಗೆಯುತ್ತಾರೆ. "ನನ್ನ ಪರೀಕ್ಷೆ ಚೆನ್ನಾಗಾಗಿಲ್ಲ, ನಾನು ಇನ್ನಷ್ಟು ಚೆನ್ನಾಗಿ ಬರೆಯಬಹುದಿತ್ತು" ಎನ್ನುವವರು ನಿಜವಾಗಿಯೂ ಬುದ್ದಿವಂತ ವ್ಯಕ್ತಿಯಾಗಿದ್ದಾರೆ.
ಇದನ್ನು ಓದಿ: 21 ಸಣ್ಣ ಅಭ್ಯಾಸದಿಂದ ವಾರದಲ್ಲಿ 21+ ಗಂಟೆಗಳನ್ನು ಉಳಿಸಿನೀವು ಕಾರನ್ನು ಓಡಿಸಿಕೊಂಡು ನಿಮ್ಮ ಕೆಲಸಕ್ಕೆ ಹೋಗುತ್ತಿರುವಿರಾ ಎಂದು ಕಲ್ಪನೆ(imagination) ಮಾಡಿಕೊಳ್ಳಿ. ಅಲ್ಲಿ ನೀವು ಒಂದು ಪ್ರಮುಖ ಪ್ರಸ್ತುತಿಯನ್ನು(presentation) ತಲುಪಿಸಬೇಕು. ನೀವು ಅಸ್ಥಿರ(nervous) ಮತ್ತು ಆತಂಕ(anxious) ಗೊಂಡಿರುತ್ತೀರಾ. ಆಗಿದ್ದರೆ ಇಂಥಹ ಸಂದರ್ಭದಲ್ಲಿ ನೀವು ನಿಮ್ಮನ್ನು ಶಾಂತವಾಗಿ ಹೇಗೆ ಇಟ್ಟುಕೊಳ್ಳುತ್ತೀರಾ? ಇದಕ್ಕೆ ಮನೋವಿಜ್ಞಾನ ನಿಮ್ಮ ನೆಚ್ಚಿನ(favorite) ಹಾಡನ್ನು ಕೇಳುತ್ತಾ ಹಾಡಿ ಎಂದು ಹೇಳುತ್ತದೆ. ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸುತ್ತಿರಬಹುದು. ಆದರೆ ಹಾಡುವುದರಿಂದ ನಿಮ್ಮ ಮೆದುಳಿನಲ್ಲಿ ಎಂಡಾರ್ಫಿನ್(endorphins) ಮತ್ತು ಆಕ್ಸಿಟೋಸಿನ್(oxytocin) ಬಿಡುಗಡೆಯಾಗುತ್ತದೆ. ಅದು ನಿಮ್ಮ ಒತ್ತಡದ ಮಟ್ಟವನ್ನು ಅಧಿಕ ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಇದಲ್ಲದೆ ಇದು ನಿಮ್ಮ ಹೃದಯ ಬಡಿತ(heart rate) ಮತ್ತು ಕಾರ್ಟಿಸೋಲ್(cortisol) ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಶಾಂತ ಮತ್ತು ಆತ್ಮವಿಶ್ವಾಸದಿಂದ(confident) ಇರುತ್ತೀರಾ.
ನೀವು ಮಾತುಕತೆ(communication) ಮುಂದುವರಿಸಬೇಕೆಂದಿದ್ದು ಏನು ಮಾತನಾಡಬೇಕು ಎಂದು ತಿಳಿಯದಿದ್ದರೆ, ಇದರ ಪರಿಹಾರ ತುಂಬಾ ಸರಳವಾಗಿದೆ. ನಿಮ್ಮ ಜತೆಗಾರನಿಗೆ(partner) ಒಂದು ಪ್ರೆಶ್ನೆಯನ್ನು ಕೇಳಿ, ಅದಕ್ಕೆ ಅವರು ಉತ್ತರ ನೀಡಿದ ನಂತರ ಕಣ್ಣಿನ ಸಂಪರ್ಕ(eye contact) ಇರಲಿ. ಆಗ ನಿಮ್ಮ ಜತೆಗಾರ ಮೌನವನ್ನು(silence) ಮುರಿಯಲು ಏನನ್ನಾದರೂ ಮಾತನಾಡಲು ಪ್ರಾರಂಭಿಸುತ್ತಾರೆ. ಒಬ್ಬ ವ್ಯಕ್ತಿ ನಿಮ್ಮ ಜೊತೆ ಮನಬಿಚ್ಚಿ(open up) ಮಾತನಾಡಲು ಹೆದರಿದರೆ, ಇಲ್ಲ ತನ್ನ ಭಾವನೆಯನ್ನು ಮರೆ ಮಾಡಿಕೊಂಡರೆ ಈ ಸಮಯದಲ್ಲಿ ಮಾಹಿತಿಯನ್ನು ಕಲೆಹಾಕಲು, ಒಂದು ಪ್ರೆಶ್ನೆಯನ್ನು ಕೇಳಿ ಮೌನವಾಗಿ. ಯಾವುದೇ ರೀತಿಯ ಮಾತುಕತೆಯಲ್ಲಿ ಮೌನ ಚೆನ್ನಾಗಿನಿಸುವುದಿಲ್ಲ. ಇದರಿಂದ ಅವರು ಇದನ್ನು ತಪ್ಪಿಸಲು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅವರು ನಿಮಗೆ ಅಡ್ಡ ಪ್ರೆಶ್ನೆಗಳನ್ನು(cross question) ಕೇಳುತ್ತಾರೆ. ಇದು ಮಾತುಕತೆಯನ್ನು ನಿರ್ವಹಿಸುತ್ತದೆ.
ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?ನೀವು ಒಬ್ಬರ ಮುಂದೆ ಅನಿಸಿಕೆ(impression) ಬೆಳೆಸಿಕೊಳ್ಳಲು ಬಯಸಿದರೆ, ಅವರಿಗೆ ಇಷ್ಟವಿರುವ ವಿಷಯದ ಬಗ್ಗೆ ಮಾತನಾಡಿ ಮತ್ತು ಅವರಿಂದ ಅದರ ಬಗ್ಗೆ ಕಲಿಯಿರಿ. ಉದಾಹರಣೆಗೆ ನೀವು ಭೇಟಿಯಾಗುವವರಿಗೆ ಕಾರುಗಳ ಮೇಲೆ ಅಧಿಕ ಆಸಕ್ತಿ ಇದೆ ಎಂದುಕೊಳ್ಳಿ. ನಿಮಗೂ ಕಾರುಗಳ ಮೇಲೆ ಅಧಿಕ ಗೊತ್ತಿರಬಹುದು. ಆದರೆ ನೀವು ಅವರ ಮುಂದೆ ಅದರ ಬಗ್ಗೆ ಕಡಿಮೆ ತಿಳಿದಿದೆ ಎನ್ನುವಂತೆ ನಟನೆ ಮಾಡಿ. ಅವರಿಗೆ ಪ್ರೆಶ್ನೆಯನ್ನು ಕೇಳಿ, ಅದು ಅವರಿಗೆ ಆತ್ಮವಿಶ್ವಾಸ ಮತ್ತು ಚತುರ(smart) ಅನುಭವವನ್ನು ನೀಡುತ್ತದೆ. ಅವರು ನಿಮ್ಮ ಜೊತೆ ಮಾತನಾಡಲು ಇನ್ನಷ್ಟು ಆಸಕ್ತಿಯನ್ನು ತೋರಿಸುತ್ತಾರೆ. ಏಕೆಂದರೆ ನೀವು ಅವರಿಗೆ ಇಷ್ಟವಿರುವ ವಿಷಯದ ಬಗ್ಗೆ ಕೇಳುವಿರ, ಇದು ನಿಮ್ಮನ್ನು ಇಷ್ಟಪಡುವ ವ್ಯಕ್ತಿಯನ್ನಾಗಿ(likable person) ಮಾಡುತ್ತದೆ.
"when you talk you are only repeating what you already know, but if you listen you may learn something new",
"ನೀವು ಮಾತಾನಾಡಿದರೆ ನಿಮಗೆ ಗೊತ್ತಿರುವುದನ್ನೇ ಪುನರಾವರ್ತಿಸುತ್ತೀರಾ. ಆದರೆ ನೀವು ಕೇಳಿದರೆ ಅನೇಕ ವಿಷಯಗಳನ್ನು ಕಲಿಯುತ್ತೀರಾ" ಎಂದು ದಲೈಲಾಮ(dalai lama) ಅವರು ಹೇಳುತ್ತಾರೆ.
ಇದನ್ನು ಓದಿ: ಶ್ರೀಮದ್ ಭಗವದ್ಗೀತೆಯ 110 ವಿಚಾರಗಳುನೀವು ಒಂದು ಗುಂಪು ಅಥವಾ ಒಬ್ಬ ವ್ಯಕ್ತಿಯ ಜೊತೆ ಊಟಕ್ಕೆ ಇಲ್ಲ ಭೇಟಿಯಾಗಲು ಬಂದು ಯಾವುದಾದರು ಸಂಘರ್ಷ(conflict) ಶುರುವಾಗಲಿದೆ ಎಂದು ಎನಿಸಿದರೆ, ಇದನ್ನು ತಡೆಯಲು ನಿಮ್ಮ ಮುಂದಿರುವ ಆಹಾರವನ್ನು ತಿನ್ನಲು ಪ್ರಾರಂಭಿಸಿ. ಏಕೆಂದರೆ ತಿನ್ನುವುದು ಒಂದು ಶಾಂತತೆಯ ಚಟುವಟಿಕೆಯಾಗಿದೆ. ಒಬ್ಬ ವ್ಯಕ್ತಿ ತಿನ್ನುತ್ತಿದ್ದರೆ ಇತರರು ಆರಾಮದಾಯಕ(comfortable) ಅನುಭವವನ್ನು ಮಾಡಿಕೊಳ್ಳುತ್ತಾರೆ. ನಿಮಗೆ ಯಾವುದಾದರೂ ಸಂಘರ್ಷ ಆಗುವುದು ಎನಿಸಿದರೆ, ಆ ವ್ಯಕ್ತಿಯ ಹತ್ತಿರ ಹೋಗಿ ತಿನ್ನಲು ನೀಡಿ. ಇಂತಹ ಸಮಯದಲ್ಲಿ ಒಂದು ಚಿಕ್ಕ ಚಾಕಲೇಟ್ ಕೂಡ ನಿಮ್ಮ ಸಂಬಂಧವನ್ನು ಸುಧಾರಿಸಬಹುದು.
ನಿಮಗೆ ಒಂದು ಹವ್ಯಾಸವನ್ನು ಸೃಷ್ಟಿ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದಿದೆಯೇ? ಮೊದಲಿಗೆ ಯಾವುದೇ ಹವ್ಯಾಸವನ್ನು ಸೃಷ್ಟಿ ಇಲ್ಲ ಮುರಿಯಲು 21 ದಿನಗಳು ತೆಗೆದುಕೊಳ್ಳುತ್ತದೆ ಎನ್ನಲಾಗುತ್ತಿತ್ತು. ಆದರೆ ಹೊಸ ಮನೋವ್ಯೆಜ್ಞಾನಿಕ ಸಂಶೋಧನೆಯ ಪ್ರಕಾರ ಯಾವುದೇ ಹವ್ಯಾಸವನ್ನು ಸೃಷ್ಟಿ ಮಾಡಲು 66 ದಿನಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ 21 ದಿನದಲ್ಲಿ ಹವ್ಯಾಸ ಸೃಷ್ಟಿಯಾಗುತ್ತದೆ ಎಂದು ಯೋಚಿಸುವವರಿಗೆ 22 ನೇ ದಿನದಲ್ಲಿ ನಿರಾಶೆಯಾಗುತ್ತದೆ ಮತ್ತು ಅವರು ಬಿಟ್ಟುಕೊಡುತ್ತಾರೆ. ಅಧ್ಯಯನದ ಪ್ರಕಾರ ನೀವು 66 ದಿನವನ್ನು ಮೂರು ಭಾಗ ಮಾಡಿದರೆ ಮೊದಲ 22 ದಿನ ತುಂಬಾನೇ ಅನಾನುಕೂಲ(uncomfortable) ಅನುಭವವಾಗುತ್ತದೆ. ಮುಂದಿನ 22 ದಿನವನ್ನು ನೀವು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಮತ್ತು ನೀವು ಬಹುತೇಕ ಬಿಟ್ಟುಕೊಡುತ್ತೀರಾ. ಕೊನೆಯ 22 ದಿನದಲ್ಲಿ ನೀವು ಒಂದು ಆವೇಗವನ್ನು(momentum) ನಿರ್ಮಾಣ ಮಾಡಿಕೊಳ್ಳುತ್ತೀರಾ. ಇದರ ನಂತರ ಆ ಹವ್ಯಾಸ ನಿಮ್ಮ ಮೆದುಳು ಮತ್ತು ದೇಹದ ಜೊತೆ ಸಂಪರ್ಕ ನೀಡುತ್ತದೆ ಮತ್ತು ನೀವು ಯಶಸ್ವಿಯಾಗಿ ಹವ್ಯಾಸವನ್ನು ನಿರ್ಮಾಣ ಮಾಡಿಕೊಳ್ಳುತ್ತೀರಾ.
ಇದನ್ನು ಓದಿ: ಬದುಕನ್ನು ಬದಲಾಹಿಸುವ 12 ನಿಯಮಗಳು[BRAIN RULES]ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹೆಸರನ್ನು ಕೇಳುವುದು ಇಷ್ಟವಾಗುತ್ತದೆ ಎಂದು ಮನೋವೈಜ್ಞಾನ ಹೇಳುತ್ತದೆ. ಏಕೆಂದರೆ ನಮಗೆಲ್ಲರಿಗೂ ಹೆಸರು ಪ್ರಮುಖವಾಗಿದೆ. ಹೀಗಾಗಿ ಯಾರಾದರೂ ನಿಮ್ಮ ಹೆಸರನ್ನು ನೆನಪಿಟ್ಟುಕೊಂಡಿದ್ದಾರೆ, ನಿಮಗೂ ನಿಮ್ಮ ಪ್ರಾಮುಖ್ಯತೆಯ ಬಗ್ಗೆ ತಿಳಿಯುತ್ತದೆ. ಯಾರಾದರೂ ನಿಮ್ಮ ಹೆಸರನ್ನು ಮರೆತರೆ, ಅವಮಾನಿಸಿದ(insulted) ರೀತಿ ಅನುಭವ ಆಗುವುದನ್ನು ನೀವು ಅನುಭವಿಸುತ್ತೀರಾ. ಹೀಗಾಗಿ ಒಳ್ಳೆಯ ಇಷ್ಟವಾದ ಮಾತುಕತೆ ನಡೆಸಲು ಮುಂದಿರುವ ವ್ಯಕ್ತಿಯ ಹೆಸರನ್ನು ಬಳಸಿ. ಇದು ಅವರಿಗೆ ಪ್ರಾಮುಖ್ಯತೆ ಅನುಭವವನ್ನು ನೀಡುತ್ತದೆ ಮತ್ತು ನಿಮ್ಮೊಂದಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ.
ನೀವು ಬಹುಕಾರ್ಯಕ ಮಾಡಬಹುದು ಎನಿಸುತ್ತದೆಯೇ? ನರವಿಜ್ಞಾನಿಗಳ(neuroscience) ಪ್ರಕಾರ, ನಾವು ಒಂದು ಸಮಯದಲ್ಲಿ ಒಂದೇ ವಿಷಯದ ಮೇಲೆ ಗಮನ ಹರಿಸಬಹುದು. ಕೆಲವೊಮ್ಮೆ ನೀವು 2 ಕಾರ್ಯಗಳನ್ನು ಒಟ್ಟಿಗೆ ಮಾಡುವಾಗ ಬಹುಕಾರ್ಯ ಮಾಡುತ್ತಿರುವಿರಾ ಎನ್ನಿಸಬಹುದು. ಆದರೆ ನಿಜವಾಗಿ ನಿಮ್ಮ ಮೆದುಳು ತುಂಬಾ ವೇಗವಾಗಿ ಎರಡು ಕಾರ್ಯಗಳ ಮೇಲೆ ಗಮನವನ್ನು ವರ್ಗಾಯಿಸುತ್ತಿರುತ್ತದೆ. ನಾವು ನಡೆಯುತ್ತಾ ಮಾತನಾಡುತ್ತಿರುತ್ತೇವೆ, ಇದು ಸ್ವಯಂ ಆಗಿ ಆಟೋಪೈಲಟ್ನಿಂದ(autopilet) ಆಗುತ್ತದೆ. ಒಂದು ವಿಷಯದ ಮೇಲೆ ಪೂರ್ತಿ ಗಮನ ಹರಿಸಬೇಕಿದ್ದರೆ ಅದರ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಪುಸ್ತಕವನ್ನು ಓದುತ್ತಾ ಟಿವಿ ನೋಡುವುದು, ಇವೆರಡು ಕಾರ್ಯಗಳನ್ನು ಒಟ್ಟಿಗೆ ಮಾಡುತ್ತಿರುವ ಎಂದು ಅನಿಸುತ್ತದೆ. ಆದರೆ ನಿಜವಾಗಿ ನಿಮ್ಮ ಗಮನ ಒಮ್ಮೆ ಓದುವಿನ ಮೇಲೆ ಇದ್ದರೆ ಇನ್ನೊಮ್ಮೆ ಟಿವಿ ನೋಡುವ ಕಡೆ ಇರುತ್ತದೆ.
ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)ನಿಮ್ಮ ಮುಂದಿರುವ ವ್ಯಕ್ತಿಯು ನಿಮ್ಮ ಪರವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸಿದರೆ ನಿಮ್ಮ ನಿರ್ಧಾರಕ್ಕೆ ಪರವಾಗಿರುವ ಆಯ್ಕೆಗಳನ್ನು ನೀಡಿ. ಉದಾಹರಣೆಗೆ ಒಬ್ಬ ತನ್ನ ಮಗನಿಗೆ ಓದಲು ಹೇಳಬೇಕೆಂದಿದ್ದರೆ, "ಹೋಗಿ ಓದು" ಎಂದು ಹೇಳುವ ಬದಲು, "ಓದುವ ಸಮಯ ಬಂತು, ಇಂಗ್ಲಿಷ್ ಇಲ್ಲ ಗಣಿತ ಯಾವುದನ್ನು ಓದುವೇ" ಎಂದೂ ಕೇಳಿ. ಅವರು ಯಾವುದೇ ಆಯ್ಕೆ ಮಾಡಿಕೊಂಡಲಿ ಅವರೇ ಆ ನಿರ್ಧಾರವನ್ನು ತೆಗೆದುಕೊಂಡರು ಎಂದುಕೊಳ್ಳುತ್ತಾರೆ. ಈ ತಂತ್ರವನ್ನು ನೀವು ಯಾರ ಮೇಲಾದರೂ ಬಳಸಬಹುದು.
ಎಲ್ಲಾ ರೆಸ್ಟೋರೆಂಟ್ಗಳಲ್ಲಿ ಮಾಣಿಗಳು(waiter) ಈ ತಂತ್ರವನ್ನು ಬಳಸುವುದನ್ನು ನೀವು ಗಮನಿಸಿರುತ್ತೀರಾ. ಅವರು ನೀವು ಆಜ್ಞೆ(order) ಮಾಡಲೆಂದು ಅವರ ಎಲ್ಲ ಆಯ್ಕೆಗಳನ್ನು ಹೇಳುತ್ತಾರೆ ಮತ್ತು ನೀವು ಪರೋಕ್ಷವಾಗಿ ಹಾಗೆ ಮಾಡುತ್ತೀರಾ. ನೀವು ಆ ನಿರ್ಧಾರ ತೆಗೆದುಕೊಂಡಿದ್ದೀರಾ ಎಂದು ಭಾವಿಸುತ್ತೀರಾ. ಆದರೆ ನಿಜವಾಗಿ ಆ ನಿರ್ಧಾರವನ್ನು ಮಾಣಿ ಮುಂಚೆಯೇ ತೆಗೆದುಕೊಂಡಿರುತ್ತಾನೆ. ಅಂದರೆ ಅವರು ಆಯ್ಕೆ ಮಾಡಿದ ಆಹಾರದಲ್ಲಿ ನೀವು ಅರಿಸಿಕೊಳ್ಳಲಿ ಎಂದು ಬಯಸುತ್ತಾರೆ. ಇದರಿಂದ ರೆಸ್ಟೋರೆಂಟ್ ಬೇಗನೆ ಅದನ್ನು ತಯಾರಿಸಿ, ನಿಮಗೆ ಉಪಚರಿಸಬಹುದು(serve).
ಇದನ್ನು ಓದಿ: ನೀರಸವಾದ ಕೆಲಸಗಳನ್ನು ಮಾಡಲು ಮೆದುಳನ್ನು ಮೋಸಗೊಳಿಸುವುದು ಹೇಗೆ?ತುಂಬಾ ಹೊತ್ತು ಮನೆಯ ಒಳಗೆ ಇದ್ದು ನಂತರ ಹೊರಗೆ ಹೋದಾಗ ನಿಮ್ಮ ಮನಸ್ಥಿತಿ ಸುಧಾರಿಸುವುದನ್ನು ನೀವು ನೋಡಿರುತ್ತೀರಾ. ಸೂರ್ಯನ ಬೆಳಕಿನ ಅನುಕೂಲ ನಿಮ್ಮ ಮೂಳೆಗಳಿಗೆ ಮಾತ್ರ ಅಲ್ಲ, ಬದಲಿಗೆ ಮನಸ್ಥಿತಿ ಅಸ್ವಸ್ಥತೆಯಾದ ಖಿನ್ನತೆಯನ್ನು(depression) ಕಡಿಮೆ ಮಾಡುತ್ತದೆ. ಸೂರ್ಯನ ಬೆಳಕಿನಿಂದ ಸಿಗುವ ವಿಟಮಿನ್ ಡಿ(vitamin d) ಮನಸ್ಥಿತಿ ಸ್ಥಿರಕಾರಿ(stabilizer) ರೀತಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಮೆದುಳಿನಲ್ಲಿ ಆಹ್ಲಾದಕರ ಹಾರ್ಮೋನುಗಳನ್ನು(pleasurable hormones) ಬಿಡುಗಡೆ ಮಾಡುತ್ತದೆ. ಸೂರ್ಯನ ಬೆಳಕು ಕಡಿಮೆ ಇರುವ ದೇಶಗಳಲ್ಲಿ ಖಿನ್ನತೆ ಅಧಿಕ ಇರುವುದನ್ನು ಗಮನಿಸಲಾಗಿದೆ. ನೀವು ದಿನದಲ್ಲಿ 10 ನಿಮಿಷ ನೇರವಾಗಿ ಸೂರ್ಯನ ಬೆಳಕನ್ನು ತೆಗೆದುಕೊಳ್ಳಿ. ಅದು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ. ಇದು ಬೆಳಗಿನ ಸೂರ್ಯನ ಬೆಳಕು ಆಗಿದ್ದರೆ ಒಳ್ಳೆಯದಾಗಿದೆ.
ನೀವು ಒಬ್ಬರ ಜೊತೆ ಮಾತನಾಡುವಾಗ ಅವರ ಮಾತು ಮತ್ತು ನಡವಳಿಕೆಯನ್ನು ನಕಲು(copy) ಮಾಡಿದರೆ, ಅವರು ನಿಮ್ಮೊಂದಿಗೆ ನಂಬಿಕೆಯನ್ನು ಬೆಳೆಸಿಕೊಳ್ಳುತ್ತಾರೆ. ನೀವು ಅವರ ಭಾವವನ್ನು(expression) ಪ್ರತಿಬಿಂಬಿಸಲು ಪ್ರಾರಂಭಿಸಿದರೆ, ಅವರು ನಿಮ್ಮನ್ನು ಇಷ್ಟಪಡುತ್ತಾರೆ. ಅವರು ನಿಮ್ಮೊಂದಿಗೆ ಅಧಿಕ ಹೊಂದಬಲ್ಲ(compatible) ಭಾವನೆಯನ್ನು ಮಾಡಿಕೊಳ್ಳುತ್ತಾರೆ. ಮನಶ್ಶಾಸ್ತ್ರಜ್ಞರು ಇದನ್ನು ಗೋಸುಂಬೆ ಪರಿಣಾಮ(chameleon effect) ಎಂದು ಕರೆಯುತ್ತಾರೆ. ಉದಾಹರಣೆಗೆ ಒಬ್ಬರು ಮಾತನಾಡುವಾಗ ಅವರು ಮಾತನಾಡುವ ಸಾಮಾನ್ಯ ಪದಗಳನ್ನು ತಿಳಿದುಕೊಳ್ಳಿ ಮತ್ತು ನೀವು ಮಾತನಾಡುವಾಗ ಆ ಪದಗಳನ್ನು ಬಳಸಿ. ಇದರಿಂದ ಅವರು ನಿಮ್ಮೊಂದಿಗೆ ಗುರುತಿಸಿಕೊಳ್ಳುತ್ತಾರೆ(identify). ಅವರಿಗೆ ನೀವು ಅವರ ರೀತಿ ಎನಿಸುತ್ತದೆ ಮತ್ತು ಅವರು ನಿಮ್ಮ ಸಂಗಡವನ್ನು ಆನಂದಿಸಲು ಪ್ರಾರಂಭಿಸುತ್ತಾರೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...