Website designed by @coders.knowledge.

Website designed by @coders.knowledge.

13 Eveyday Habits that make you Smarter | ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳು

Watch Video

ತುಂಬಾ ಜನ ಸ್ಮಾರ್ಟ್ ಆಗಿ ಇರುವುದು ಎಂದರೆ ಒಳ್ಳೆಯ ಅಂಕ ತೆಗೆಯುವುದು ಮತ್ತು ಅತ್ಯುತ್ತಮ ದರ್ಜೆಯನ್ನು(grade) ಪಡೆಯುವುದು ಎಂದು ಯೋಚಿಸುತ್ತಾರೆ. ಆದರೆ ಸ್ಮಾರ್ಟ್ ಆಗಿ ಇರಲು ನೀವು ವಿಮರ್ಶಾತ್ಮಕವಾಗಿ ಯೋಚನೆ ಮಾಡಬೇಕು ಮತ್ತು ನೀವು ತೆಗೆದುಕೊಳ್ಳುವ ನಿರ್ಧಾರವು ನಿಮಗೆ ಪ್ರಯೋಜನಗಳನ್ನು(benifits) ನೀಡಬೇಕು ಹೊರತು ಕೇವಲ ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವುದಲ್ಲ. ಸ್ಮಾರ್ಟ್ ಆಗುವುದು ಎಂದರೆ ಜಗತ್ತು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದು, ಆ ಜ್ಞಾನವನ್ನು ನಿಮ್ಮ ಅನುಕೂಲಕ್ಕಾಗಿ(advantage) ಬಳಸುವುದಾಗಿದೆ.

ನೀವು ಸ್ಮಾರ್ಟ್‌ ಆಗಿರಲು ಜೀನಿಯಸ್ ಆಗಿರಬೇಕೆಂದಿಲ್ಲ ಅಥವಾ ಗ್ರಂಥಾಲಯದಲ್ಲಿ ಗಂಟೆಗಟ್ಟಲೆ ಓದಬೇಕೆಂದಿಲ್ಲ. ನಿಮ್ಮ ವಯಸ್ಸು ಎಷ್ಟೇ ಆಗಿದ್ದರೂ ನಿಮ್ಮ ಶಿಕ್ಷಣ ಎಷ್ಟೇ ಇದ್ದರೂ, ನೀವು ಈ ಸರಳ ಹವ್ಯಾಸಗಳನ್ನು ಪಾಲಿಸುವ ಮೂಲಕ ಸ್ಮಾಟರ್ ಆಗಬಹುದು. ಅವುಗಳಲ್ಲಿ ನಮಗೆ ಇಷ್ಟವಾದ ಕೆಲವು ಹವ್ಯಾಸಗಳನ್ನು ನಿಮಗೆ ತಿಳಿಸಲಿದ್ದೇವೆ.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

1. Question, don't just assume.

is questioning a good habit in kannada
question

ಈ ಹವ್ಯಾಸವೂ ನಿಮ್ಮ ಬದುಕಿನ ಎಲ್ಲ ಅಂಶದಲ್ಲೂ(aspect) ಅನ್ವಯಿಸುತ್ತದೆ. ಅದು ನೀವು ಹೊಸ ಮಾಹಿತಿಗಳನ್ನು ಹೇಗೆ ತೆಗೆದುಕೊಳ್ಳುತ್ತೀರಾ ಎಂಬುದರಿಂದ ಹಿಡಿದು, ನೀವು ಸಂಬಂಧಗಳಿಗೆ ಹೇಗೆ ಅನುಸಂಧಾನ(approach) ಮಾಡುತ್ತೀರ ಎಂಬುವ ತನಕ. ತುಂಬಾ ಜನ ಮುಖಬೆಲೆ(facevalue) ಮೇಲೆ ನಿರ್ಧರಿಸುತ್ತಾರೆ, ಅವರು ಪ್ರಶ್ನೆ ಮಾಡುವುದಿಲ್ಲ. ಮೀಡಿಯಾದಲ್ಲಿ ತಿಳಿಸಿದ ವಿಷಯವನ್ನು ಸತ್ಯ ಎಂದು ಪರಿಗಣಿಸುತ್ತಾರೆ. ಆದರೆ ಇದು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ಏಕೆಂದರೆ ನೀವು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಒಳ್ಳೆಯ ಆಯ್ಕೆಗಳನ್ನು ಕಳೆದುಕೊಳ್ಳುತ್ತೀರಾ. ಹೀಗಾಗಿ ಯಾರೋ ಹೇಳಿದ್ದನ್ನು ನಿಜವಾಗಿಯೂ ಸತ್ಯ ಎಂದು ನಂಬಬೇಡಿ. ಯಾವಾಗಲೂ ಸ್ಪಷ್ಟಪಡಿಸಿ ಮತ್ತು ಎಲ್ಲಾ ರೀತಿಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ.

2. Read something you normally would not.

is reading considered as an habit in kannada
reading

ಓದುವುದು ನಿಮ್ಮ ಜ್ಞಾನವನ್ನು ಹೆಚ್ಚಿಸಲು ಇರುವ ಒಂದು ಅತ್ಯುತ್ತಮ ಮಾರ್ಗವಾಗಿದೆ. ನೀವು ಒಂದು ವೇಳೆ ಚುರುಕಾಗಲು(smarter) ಬಯಸಿದರೆ, ಪ್ರತಿದಿನ ಓದಲೇಬೇಕು. ನೀವು ಯಾವಾಗಲೂ ಓದದೆ ಇರುವುದನ್ನು ಓದಲು ಪ್ರಾರಂಭಿಸಿ. ನೀವು ಓದದೇ ಇರುವ ಪುಸ್ತಕಗಳನ್ನು ಓದಿದರೆ, ಅದು ನಿಮ್ಮಗೆ ಕಣ್ಣು ತೆರೆಯುವ ಅನುಭವವನ್ನು ನೀಡಬಹುದು. ಇದರಿಂದ ನಿಮಗೆ ಇನ್ನೊಂದು ಮಾರ್ಗ(way) ಸಿಗಬಹುದು. ಇದು ನಿಮ್ಮ ಮೆದುಳನ್ನು ವಿಸ್ತರಿಸಬಹುದು ಮತ್ತು ನಿಮ್ಮ ಐಡಿಯಾಗಳಿಗೆ ಚಾಲೆಂಜ್ ನೀಡಬಹುದು.

ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳು

3. Diversify your day.

ನಿಮ್ಮ ದಿನವೂ ಅದ್ಬುತ ಮತ್ತು ಪ್ರಯೋಜನಕಾರಿ ಇರಬಹುದು. ಆದರೆ ಯಾವುದೇ ಕಷ್ಟದಲ್ಲಿ ಸಿಕ್ಕಿಕೊಳ್ಳುವುದು ಸುಲಭವಾಗಿದೆ. ನೀವು ಖುಷಿಯಾಗಿ ಮತ್ತು ಉತ್ಪಾದಕವಾಗಿರಲು(productive) ವಸ್ತುಗಳನ್ನು ಮಿಕ್ಸಪ್ ಮಾಡಬೇಕು. ಇದರಿಂದ ನೀವು ನಂಬಿಕೆಯಿಂದ ಹೊಸದನ್ನು ಮಾಡಿ, ನಿಮ್ಮ ಮೆದುಳನ್ನು ಸಕ್ರಿಯವಾಗಿ ಇಡಬಹುದು. ನೀವು ಆಟೋಪೈಲಟ್ನಿಂದ ಹೊರ ಬರಬೇಕು. ನಿಮ್ಮ ಮನೆಗೆ ತಲುಪಲು ಬೇರೆ ಬೇರೆ ಮಾರ್ಗಗಳನ್ನು ಹುಡುಕಿ. ನಿಮ್ಮ ಊಟಕ್ಕೆ ಹೊಸ ರೆಸಿಪಿಗಳನ್ನು ಪ್ರಯತ್ನಿಸಿ. ಟ್ರೆಡ್ ಮಿಲ್(treadmill) ಮೇಲೆ ನಡೆದಾಡುವ ಬದಲು ಹೊರಗೆ ಹೋಗಿ ನಡೆದಾಡಿ. ನವೀನತೆಯನ್ನು ನಿಮ್ಮ ಬದುಕಿನಲ್ಲಿ ಆಹ್ವಾನಿಸುವುದರಿಂದ, ನಿಮ್ಮ ದಿನವನ್ನು ತಾಜಾ ಮತ್ತು ಆಸಕ್ತಿದಾಯಕ ಮಾಡುವುದಲ್ಲದೆ, ನಿಮ್ಮನ್ನು ಚುರುಕಾಗಿ ಮತ್ತು ಕ್ರಿಯೇಟಿವ್ ಆಗಿ ಇಡಲು ಸಹಕರಿಸುತ್ತದೆ.

4. Explore yourself to different world views.

different world views a habit in kannada
different world

ಸ್ಮಾರ್ಟ್ ಜನರು ಕುತೂಹಲಕಾರಿಯಾಗಿರುತ್ತಾರೆ. ಅವರು ಇತರ ಜನರೊಂದಿಗೆ ಸಂವಹನ(interact) ಮಾಡುತ್ತಾರೆ. ಹೊಸ ಸಂಸ್ಕೃತಿ, ಜಾಗ ಮತ್ತು ದೃಷ್ಟಿಕೋನಗಳನ್ನು ಎಕ್ಸ್ ಪ್ಲೋರ್ ಮಾಡುತ್ತಾರೆ. ಇದು ಮೆದುಳನ್ನು ಸಕ್ರಿಯವಾಗಿ ಇಡಲು ಇರುವ ಒಂದು ಅತ್ಯುತ್ತಮ ಮಾರ್ಗವಾಗಿದೆ. ಹೊಸ ಮಾಹಿತಿಗಳನ್ನು ಸ್ವೀಕರಿಸಲು ನೀವು ಓಪನ್ ಮೈಂಡೆಡ್ ಆಗಿರಬೇಕು. ಇವು ನೋಡಿದ ಮತ್ತು ಕೇಳಿದ ಎಲ್ಲ ವಿಷಯವನ್ನು ಸತ್ಯ ಎಂದು ನಂಬಬಾರದು. ಆದರೆ ನೀವು ಓಪನ್ ಮೈಂಡ್ ಇಟ್ಟುಕೊಂಡಿದ್ದರೆ, ಅದು ನಿಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಕರಿಸುತ್ತದೆ.

ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳು

5. Make a point of learning something new each day.

ನೀವು ಪ್ರತಿದಿನ ಹೊಸದನ್ನು ಕಲಿಯುವುದು ನಿಮ್ಮ ಮೆದುಳಿನ ಮೇಲೆ ದೊಡ್ಡ ಪರಿಣಾಮ(big impact) ನೀಡುತ್ತದೆ. ಎಜುಕೇಶನ್ ಶೋಗಳನ್ನು ನೋಡಿ, ಆಡಿಯೋ ಬುಕ್‌ಗಳನ್ನು ಕೇಳಿ. ನೀವು ಪ್ರತಿದಿನ ಹೊಸ ಪದಗಳನ್ನು ಕಲಿಯಿರಿ.

6. Apply new knowledge.

what are habits of learning in kannada
new knowledge

ನೀವು ಹೊಸದನ್ನು ಕಲಿತರೆ ಅದನ್ನು ಕಲಿತು ಸುಮ್ಮನೆ ಕೂರಬೇಡಿ. ನೀವು ಅದನ್ನು ಅನ್ವಯಿಸದಿದ್ದರೆ ನೀವು ಅದನ್ನು ಕಲಿತಿದ್ದರಲ್ಲಿ ಏನು ಅರ್ಥವಿದೆ. ಕೇವಲ ಕಲಿಕೆಗಾಗಿ ಕಲಿಯಬೇಡಿ. ಅದು ನಿಮ್ಮ ಬದುಕನ್ನು ಬದಲಾಯಿಸುತ್ತಿದೆಯೇ ಎಂದು ಯೋಚಿಸಿ. ಆ ಜ್ಞಾನವನ್ನು ಅಭ್ಯಾಸ ಮಾಡಿ.

7. Think of new ways to do old things.

ನೀವು ಪ್ರತಿದಿನ ನೋಡುವ ವಸ್ತುಗಳನ್ನು ಹೇಗೆ ಬೇರೆ ದೃಷ್ಟಿಕೋನದಿಂದ ನೋಡಬಹುದು ಎಂದು ಯೋಚಿಸಿ, ನಿಮ್ಮ ಮೆದುಳಿಗೆ ಚಾಲೆಂಜ್ ನೀಡಬಹುದು. ಈ ರೀತಿಯಲ್ಲಿ ಯೋಚಿಸುವುದು ಮೆದುಳನ್ನು ಚೂಪಾದ(sharp) ಮತ್ತು ಫೋಕಸ್ ಇರುವಂತೆ ಮಾಡುತ್ತದೆ. ಇದು ಬದುಕನ್ನು ಆಸಕ್ತಿದಾಯಕ ಮತ್ತು ಮೋಜಿನಿಂದ ಕೂಡಿಸುತ್ತದೆ. ನೀವು ಈ ಹವ್ಯಾಸವನ್ನು ಉತ್ತಮವಾದ ಏನನ್ನಾದರೂ ಹುಡುಕಲು ಬಳಸಬಹುದು. ಉದಾಹರಣೆಗೆ ಪ್ಯಾಕಿಂಗ್ ಲಾಂಚ್, ಬಟ್ಟೆಗಳನ್ನು ಮಡಿಚಲು ಇತ್ಯಾದಿ.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

8. Play games that make you think.

ನಿಮ್ಮ ಮೆದುಳನ್ನು ಶಾರ್ಪ್ ಮತ್ತು ತೊಡಗಿಕೊಂಡಿರುವಂತೆ ಮಾಡಲು ನೀವು ಯೋಚನೆ ಮಾಡಬೇಕು. ಇದಕ್ಕೆ ಬೋರ್ಡ್ ಗೇಮ್ಸ್, ಕಾರ್ಡ್ ಗೇಮ್ಸ್, ವೀಡಿಯೋ ಗೇಮ್ಸ್ ಮತ್ತು ಒಗಟು(puzzle) ಒಳ್ಳೆಯ ಆಯ್ಕೆಗಳಾಗಿವೆ. ಒಂದು ಅಧ್ಯಯನದ ಪ್ರಕಾರ, ತಂತ್ರಗಳಿಗೆ(strategy) ಸಂಬಂಧಿಸಿದ ಗೇಮ್ಸ್‌ಗಳನ್ನು ಆಡುವುದರಿಂದ ಮೆಮೋರಿ ಸುಧಾರಿಸುತ್ತದೆ. ಇದು ಏಕೆಂದರೆ ಇವುಗಳಲ್ಲಿ ನೀವು ಆ ಸ್ಪಾಟ್ನಲ್ಲೇ ಯೋಚನೆ ಮಾಡಬೇಕು ಮತ್ತು ನಿಮ್ಮ ಮೆದುಳಿಗೆ ಈ ರೀತಿಯ ಅಭ್ಯಾಸವನ್ನು ಸಮಯದೊಂದಿಗೆ ನೀಡುವುದರಿಂದ ನೀವು ನಿಮ್ಮ ಜೀವನದ ಬೇರೆ ತರಹದ ಸನ್ನಿವೇಶಗಳನ್ನು(scenario) ಒಪ್ಪಂದ(deal) ಮಾಡಬಹುದು.

9. Increase mental intensity.

how do you increase mental intensity in kannada
mental intensity

ನೀವು ನಮಗೆ ಎಷ್ಟು ಸವಾಲುಗಳನ್ನು ನೀಡುತ್ತೀರೋ, ಅಷ್ಟು ಚುರುಕಾಗುತ್ತೀರಾ. ಇದನ್ನು ಮಾಡಲು ಇರುವ ಒಂದೇ ಮಾರ್ಗವೆಂದರೆ ನೀವು ನಿಮ್ಮ ಸಾಮರ್ಥ್ಯಕ್ಕೆ(ability) ಮೀರಿ ಯೋಚನೆ ಮಾಡುವುದಾಗಿದೆ. ಹೊಸ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸಿ. ನಿಮಗೆ ಪರಿಚಯವಿಲ್ಲದೆ ಇರುವ ವಿಷಯಗಳನ್ನು ಪ್ರತಿದಿನ ಕನಿಷ್ಠ 30 ನಿಮಿಷವಾದರೂ ಓದಿ. ಈ ರೀತಿಯ ವಿಷಯಗಳನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಮೆದುಳಿನ ನರ ಮಾರ್ಗಗಳು(neural pathway) ನಿರ್ಮಾಣವಾಗುತ್ತದೆ. ಇದು ನಿಮ್ಮ ಕಲಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸುವ 8 ಅದ್ಭುತ ಆಹಾರಗಳು

10. Take up a productive hobby.

ನೀವು ಎಷ್ಟೇ ವೃತ್ತಿಯಲ್ಲಿ ನಿರತರಿದರು. ನಿಮ್ಮ ಹವ್ಯಾಸದ ಮೇಲೆ ಕಾರ್ಯನಿರ್ವಹಿಸಲು ಸಮಯ ನೀಡುವುದು ಅಷ್ಟೇ ಮುಖ್ಯವಾಗಿದೆ. ಹವ್ಯಾಸದ ಮೇಲೆ ನಿಮ್ಮ ಉಚಿತ ಸಮಯದಲ್ಲಿ ಕೆಲಸ ಮಾಡುವುದು ಒಳ್ಳೆಯ ಸಲಹೆಯಾಗಿದೆ. ಅದು ಬರೆಯುವುದು, ಸಂಗೀತ ವಾದ್ಯಗಳನ್ನು ಬಾರಿಸುವುದು, ಪೇಂಟಿಂಗ್ ಅಥವಾ ಗಾರ್ಡನಿಂಗ್ ಇತ್ಯಾದಿ. ಹವ್ಯಾಸಗಳು ನಿಮ್ಮ ಮಾನಸಿಕ ಆರೋಗ್ಯ ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು ತುಂಬಾ ಪ್ರಮುಖವಾಗಿದೆ. ಇದು ನಿಮ್ಮ ರೀತಿಯೇ ಆಸಕ್ತಿ ಹೊಂದಿರುವ ಜನರನ್ನು ಭೇಟಿ ಮಾಡಲು ಸಹಕರಿಸುತ್ತದೆ. ಇದು ನೀವು ಹೊಸ ಗೆಳೆಯರನ್ನು ಮಾಡಿಕೊಳ್ಳಲು ಬಯಸುತ್ತಿದ್ದರೆ ಉಪಯುಕ್ತವಾಗಿದೆ.

11. Hang out with people who are smarter than you.

what do highly intelligent people do in kannada
smarter people

ಇದು ಒಂದು ದೊಡ್ಡ ವಿಷಯವಾಗಿದೆ. ನಿಮ್ಮ ಅಭಿಪ್ರಾಯವನ್ನು ಒಪ್ಪಿ, ಅದರ ರೀತಿಯೇ ಆಫರ್ ಮಾಡುವ ಜನರ ಜೊತೆ ಇರುವುದು ಸುಲಭವಿರಬಹುದು. ಆದರೆ ನೀವು ನಿಮ್ಮ ಮೆದುಳು ಚುರುಕು ಮತ್ತು ಸಂಕೀರ್ಣವಾಗಬೇಕೆಂದು ಬಯಸಿದಲ್ಲಿ ಹೊಸದನ್ನು ಕಲಿಸುವ ಮತ್ತು ಇನ್ನೊಂದು ಮಾರ್ಗದಲ್ಲಿ ಸಮಸ್ಯೆಯನ್ನು(issue) ನೋಡುವ ಜನರೊಂದಿಗೆ ಇರಬೇಕು. ನೀವು ನಿಮಗಿಂತ ಚುರುಕಿರುವ ಜನರೊಂದಿಗೆ ಇರುವುದರಿಂದ ಅವರು ನಿಮಗೆ ಸ್ಫೂರ್ತಿ(inspire) ನೀಡಲು ಸವಾಲುಗಳನ್ನು ನೀಡುತ್ತಾರೆ. ಅದು ನಿಮ್ಮದೇ ಆದ ನಂಬಿಕೆ ಮತ್ತು ಕ್ರಮಗಳ ಮೇಲೆ ನಿರ್ಣಾಯಕವಾಗಿ ಯೋಚಿಸುವಂತೆ ಮಾಡುತ್ತಾರೆ. ಅದು ನಿಮ್ಮನ್ನು ಪರಿಣಾಮಕಾರಿಯಾಗಿ ಮಾಡುತ್ತದೆ.

ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?

12. Get some physical exercise.

ವ್ಯಾಯಾಮ, ನಿಮ್ಮ ಮೆದುಳು ಮತ್ತು ದೇಹಕ್ಕೆ ಅತ್ಯುತ್ತಮ ವಿಷಯವಾಗಿದೆಯೆಂದು ನಿಮಗೀಗಾಗಲೇ ತಿಳಿದಿದೆ. ಹೀಗಾಗಿ ಪ್ರತಿದಿನ ದೈಹಿಕ ಚಟುವಟಿಕೆಗಳಿಗೆ ಸಮಯ ನೀಡುವುದು ತುಂಬಾ ಅವಶ್ಯಕವಾಗಿದೆ. ಇದಲ್ಲದೆ ವ್ಯಾಯಾಮವು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ವ್ಯಾಯಾಮವು ನಿಮ್ಮ ಮೆದುಳಿಗೆ ರಕ್ತ ಪರಿಚಲನೆ ಮಾಡಲು ಸಹಕರಿಸುತ್ತದೆ. ಸ್ಥಿರವಾಗಿ(consistent) ವ್ಯಾಯಾಮ ಮಾಡುವುದು ನಿಮ್ಮ ಬುದ್ದಿಶಕ್ತಿಯನ್ನು ಸುಧಾರಿಸಲು ಸಹಕರಿಸುತ್ತದೆ. ಇದು ಗಮನ, ಏಕಾಗ್ರತೆ ಮತ್ತು ಗ್ರಹಿಕೆಗೆ ಮುಖ್ಯವಾಗಿದೆ. ಬೋನಸ್ ಆಗಿ ಇದು ನೀವು ಆರಾಮದಾಯಕವಾಗಿ ಮಲಗಲು ಸಹಕರಿಸುತ್ತದೆ.

13. Set aside some quiet time.

what is the point of a quite time in kannada
quite time

ನೀವು ಚುರುಕಾಗಿರಲು ಬಯಸಿದರೆ ನಿಮ್ಮ ದಿನವನ್ನು ಪ್ರತಿಬಿಂಬಿಸಲು ಸಮಯ ನೀಡಬೇಕು. ಸ್ಮಾರ್ಟ್ ಜನರು ಅವರ ಅನುಭವದಿಂದ ಕಲಿಯುತ್ತಾರೆ. ಇದರಿಂದ ಅವರು ಪುನಃ ಆ ತಪ್ಪನ್ನು ಮಾಡುವುದಿಲ್ಲ ಮತ್ತು ನಿಮ್ಮ ದಿನವನ್ನು ಪ್ರತಿಬಿಂಬಿಸುವವುದರಿಂದ ನೀವು ಅನಾರೋಗ್ಯಕರ ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದು. ಇದು ನೀವು ಸ್ವಯಂ ಅರಿವು ಮತ್ತು ಸಾವಧಾನದಿಂದ ಇರುವಂತೆ ಮಾಡುತ್ತದೆ.

ಹೀಗಾಗಿ ನೀವು ಚುರುಕಾಗಿರಲು ಬಯಸಿದರೆ, ನಿಮ್ಮ ಜೀವನದಲ್ಲಿ ಈ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ನೀವು ಈಗಾಗಲೇ ಈ ಹವ್ಯಾಸಗಳಲ್ಲಿ ಕೆಲವನ್ನು ಪಾಲಿಸುತ್ತಿದ್ದರೆ ನಿಮಗೆ ಶಭಾಷ್ ಹೇಳಲೇಬೇಕು ಮತ್ತು ನೆನಪಿಡಿ ಪರಿಪೂರ್ಣ(perfect) ಸಮಯ ಯಾವಾಗಲೂ ಇರುವುದಿಲ್ಲ. ಇವೆಲ್ಲ ಪ್ರಗತಿಯ(progress) ಮಾಡುವುದರ ಮೇಲೆ ನಿಂತಿದೆ. ನೀವು ಅಂದುಕೊಂಡಂತೆ ಆಗದಿರುವ ವಿಷಯಗಳ ಮೇಲೆ ಅತಿಯಾಗಿ ಯೋಚಿಸಬೇಡಿ ಕೇವಲ ಕಲಿಯುತ್ತೀರಿ ಮತ್ತು ಮುಂದುವರೆಯುತ್ತೀರಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments