How to Register in Mahithi Thana?
Mahithi Thana 1239
Watch Video
ಸಾಹಿಲ್ ಬ್ಲೂಮ್(sahil bloom) ಎಂಬುವರು 22ನೇ ವಯಸ್ಸಿನಲ್ಲಿ ನಿಮಗೆ ತಿಳಿದಿರಬೇಕಾದ 22 ಸತ್ಯಗಳ(truths) ಬಗ್ಗೆ ಟ್ವಿಟರ್ ಅಂದರೆ ಈಗಿನ ಎಕ್ಸ್ನಲ್ಲಿ(x) ಪೋಸ್ಟ್ ಮಾಡಿದ್ದರು. ಅವರು ತಿಳಿಸಿದ ಪಾಠಗಳು ನಿಮ್ಮ 20ರ ವಯಸ್ಸಿನಲ್ಲಿ ಉಳಿದುಕೊಳ್ಳಲು ಸಹಕರಿಸುತ್ತದೆ. ಈ ಲೇಖನದಲ್ಲಿ ನಾವು ಆ 22 ಪಾಠಗಳ ಬಗ್ಗೆ ತಿಳಿಸಲಿದ್ದೇವೆ.
ಅನೇಕರು ನಿಮಗೆ ಕೇವಲ ಖುಷಿಯಾಗಿರಲು ಸ್ನೇಹಿತರನ್ನಾಗಿ ಮಾಡಿಕೊಂಡಿರುತ್ತಾರೆ. ನೀವು ಅವರ ಜೊತೆ ಯಾವಾಗಲೂ ಖುಷಿಯಾಗಿರುವುದರಿಂದ ನಿಮ್ಮ ಗೆಳೆಯರಾಗಿರುತ್ತಾರೆ. ಆದರೆ ಸಮಯ ಕಳೆದಂತೆ ನಿಮಗೆ ಅವರ ಸಹಾಯದ ಅವಶ್ಯಕತೆ ಇದ್ದಾಗ, ಮಾತುಕತೆ ಕಠಿಣವಾದರೆ ಅವರು ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಏಕೆಂದರೆ ಅವರಿಗೆ ತೃಪ್ತಿ(satisfaction) ಮಾತ್ರ ಬೇಕಾಗಿದೆ. ಆ ತೃಪ್ತಿ ಹೋದ ನಂತರ ಗೆಳೆತನ ಕೂಡ ಹೋಗುತ್ತದೆ. ಇದನ್ನು ನೀವು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುಸುಲಭವಾಗಿರುವ ಸಂಭಾಷಣೆಗಳನ್ನು(conversations) ಪ್ರತಿಯೊಬ್ಬರು ಮಾಡುತ್ತಾರೆ. ಆದರೆ ಕಠಿಣವಿರುವ ಸಂಭಾಷಣೆಯನ್ನು ಯಾರು ಮಾಡುವುದಿಲ್ಲ. ಅಂದರೆ, "ನನಗೆ ನಿನ್ನ ಈ ವರ್ತನೆ ಇಷ್ಟವಾಗಿಲ್ಲ", "ನೀನು ಈ ರೀತಿ ಮಾಡಿದರೆ ನಿನ್ನ ಬೇರೆ ರೂಪ ಕಾಣುತ್ತದೆ", "ನೀನು ಆ ರೀತಿ ಯೋಚಿಸಿದರೆ ನಮಗೆ ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲ", "ಇದನ್ನು ನಾನು ಬದಲಾಯಿಸಿಕೊಳ್ಳಲು ಸಾಧ್ಯವಾಗಿಲ್ಲದಿದ್ದರೆ, ನಿಮ್ಮ ಜೊತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ", ಈ ರೀತಿಯ ಕಠಿಣ ಸಂಭಾಷಣೆಗಳು ಬದುಕಿನಲ್ಲಿ ಮುಂದುವರೆಯಲು ಸಹಕರಿಸುತ್ತವೆ ಮತ್ತು ನೀವು ಅಧಿಕ ಕಠಿಣ ಸಂಭಾಷಣೆಗಳನ್ನು ಮಾಡಿದಷ್ಟು ಜೀವನದಲ್ಲಿ ಮುಂದುವರೆಯುವಿರ.
ಇದು ತಪ್ಪು ಎಂದು ನೀವು ತಿಳಿಸಬಹುದು. ರಾತ್ರಿ 12 ಗಂಟೆಗೆ ಪಬ್(pub) ತೆರೆಯುತ್ತದೆ ಎಂದು ನೀವು ಹೇಳಬಹುದು. ಇದರಿಂದಾಗಿ 12 ಗಂಟೆಯ ನಂತರ ನೀವು ಜೀವನ ಹೀಗೆ ಇರುತ್ತದೆ ಎಂದು ನಂಬುತ್ತೀರಾ. ಇದರಿಂದ ವಾಸ್ತವದಿಂದ(reality) ದೂರವಾಗುತ್ತೀರಾ. ಸಾಂದರ್ಭಿಕವಾಗಿ(occationaly) ಇದು ಸರಿಯಾಗಿದೆ, ಆದರೆ ಯಾವಾಗಲೂ ಇದು ಸರಿಯಲ್ಲ. 12 ಗಂಟೆಯ ನಂತರ ನೀವು ಪಾರ್ಟಿ ಮನಸ್ಥಿತಿಗೆ ಹೋಗುವುದಾದರೆ ಅದರಲ್ಲೂ 20ರ ವಯಸ್ಸಿನಲ್ಲಿ ನೀವು ಇದನ್ನು ಅಧಿಕ ಮಾಡಿದರೆ, ಇದು ನಿಮ್ಮನ್ನು ವಾಸ್ತವದಿಂದ ದೂರ ತೆಗೆದುಕೊಂಡು ಹೋಗುತ್ತದೆ. ನೀವು ಬದುಕಿನಿಂದ ದೂರವಾದಷ್ಟು ಬದುಕು ನಿಮ್ಮಿಂದ ದೂರವಾಗುತ್ತದೆ.
ಇದು ಅಷ್ಟು ಕಠಿಣವಲ್ಲ, ಆದರೂ ನೀವು ಇದನ್ನು ಪಾಲಿಸುವುದಿಲ್ಲ. ಏಕೆಂದರೆ 20ರಲ್ಲಿ ಆರಾಮಾಗಿ ಕುಳಿತುಕೊಳ್ಳುವುದರಿಂದ ತುಂಬಾನೇ ಮಜಾ ಸಿಗುತ್ತದೆ. ಹಾಸಿಗೆಯ ಮೇಲೆ ಮಲಗಿ ಲ್ಯಾಪ್ಟಾಪ್ ಒತ್ತಲು ತುಂಬಾನೇ ಖುಷಿಯಾಗುತ್ತದೆ. ಜನರ ಜೊತೆ ಮಾತನಾಡುವಾಗ ತಬ್ಬಿಬ್ಬಗುವುದು(distract) ಸುಲಭವಾಗುತ್ತದೆ. ಹೀಗಾಗಿ ನೀವು ಕೂತಿರುವಾಗ ನೇರವಾಗಿ ಕುಳಿತುಕೊಳ್ಳಿ ಮತ್ತು ಕೆಲಸ ಮಾಡುವಾಗ ಆ ವ್ಯಕ್ತಿಯ ಕಣ್ಣನ್ನು ನೋಡಿ ಮಾತನಾಡುತ್ತಿರುವುದನ್ನು ಖಚಿತ ಮಾಡಿಕೊಳ್ಳಿ. ಇದರಿಂದ ನೀವು ನಿಮ್ಮ 20ರ ವಯಸ್ಸಿನಲ್ಲಿ, ಜಗತ್ತಿನ 99 ರಷ್ಟು ಜನರಿಗಿಂತ ಮುಂದಿರುತ್ತೀರಾ.
ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳುನೀವು ಪ್ರತಿದಿನ ಎದ್ದೇಳಲು ಒಂದು ಸಮಯ ಮತ್ತು ಎದ್ದ ತಕ್ಷಣ ಏನು ಮಾಡಬೇಕೆಂಬ ಒಂದು ದಿನಚರಿ(routine) ಮಾಡಿ. ನಿಮ್ಮ ದಿನಚರಿ 4 ರಿಂದ 5 ಗಂಟೆಯಷ್ಟು ಇರಬೇಕೆಂದಿಲ್ಲ, ಅದು ಚಿಕ್ಕದಿದ್ದರೂ ನಡೆಯುತ್ತದೆ. ಉದಾಹರಣೆಗೆ ಉದ್ಯಾನಕ್ಕೆ(garden) ಹೋಗಿ 5 ನಿಮಿಷ ಕೂರುವುದು, ಸೂರ್ಯ ನಮಸ್ಕಾರ ಮಾಡುವುದು. ಇದರಿಂದ ನೀವು ಬೆಳಗ್ಗೆ ಸಕ್ರಿಯವಾಗುತ್ತೀರಾ(active) ಮತ್ತು ದಿನಪೂರ್ತಿ ಶಾಂತಿಯಿಂದ ಇರುತ್ತೀರ.
ನಿಮ್ಮ 80ನೇ ವಯಸ್ಸಿನವನು ನಿಮ್ಮನ್ನು ನೋಡಿ, "ಪಶ್ಚಾತಾಪ ಪಡುತ್ತೀಯ ಎಂದು ಹೇಳಿದ್ದೆನಲ್ಲ", ಇಲ್ಲ ನಿಮ್ಮ 10ರ ವಯಸ್ಸಿನವನು, "ನೀವು ಎಷ್ಟು ನೀರಸ ಜೀವನವನ್ನು ನಡೆಸುತ್ತಿರುವಿರಾ, ನೀವು ಇಷ್ಟು ಬೇಸರದಲ್ಲಿಯಾಕಿದ್ದೀರ. ನೀವು ಖುಷಿಯಾಗಿ ಯಾಕಿಲ್ಲ. ನಿಮ್ಮ ಹತ್ತಿರ ಸಾಕಷ್ಟು ಹಣ ಮತ್ತು ಕಾರು ಇದೆ. ಅನೇಕ ಫೋನ್ ಮತ್ತು ಲ್ಯಾಪ್ಟಾಪ್ ಕೂಡ ಇದೆ. ಆದರೆ ನಿಮ್ಮ ಮುಖದಲ್ಲಿ ಖುಷಿಯಾಕಿಲ್ಲ. ನೀವು ಏಕೆ ಆಟವಾಡುತ್ತಿಲ್ಲ" ಎಂದು ಕೇಳಬಾರದು. ನಿಮ್ಮ ಬದುಕಿನಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ನಿಮ್ಮ 80ರ ವಯಸ್ಸಿನವನು ಮತ್ತು 10ರ ವಯಸ್ಸಿನವನಿಗೆ ಬೇಸರ ಆಗದಂತೆ ಇರಬೇಕು. ಆ ನಿರ್ಧಾರ ನಿಮಗೆ ಸರಿ ಎನಿಸದಿದ್ದರೂ ಪರವಾಗಿಲ್ಲ.
ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ರೀತಿಯ ಓಟದಲ್ಲಿ(race) ಓಡುತ್ತಿದ್ದಾರೆ. ಇಲ್ಲಿ ಯಾರು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ. ಎಲ್ಲರೂ ಅವರೊಂದಿಗೆ ಒಂದು ಓಟದಲ್ಲಿ ತೊಡಗಿದ್ದಾರೆ. ನೀವು ನಿಮ್ಮದೇ ಓಟದಲ್ಲಿ ಇದ್ದೀರಾ. ಆದರೆ ಅನೇಕರು ಈ ಓಟದಲ್ಲಿ ಓಡುತ್ತಿಲ್ಲ. ಕೆಲವರು ನಡೆಯುತ್ತಿದ್ದಾರೆ, ಕೆಲವರು ಅಲ್ಲೇ ನಿಂತಿದ್ದಾರೆ, ಕೆಲವರು ಓಡುತ್ತಿದ್ದಾರೆ, ಕೆಲವರು ಇನ್ನೂ ಪ್ರಾರಂಭಿಸಿಯೇ ಇಲ್ಲ. ಪ್ರತಿಯೊಬ್ಬರೂ ಅವರ ಸ್ವಂತ ದಾರಿಯಲ್ಲೇ ಹೋಗುತ್ತಿದ್ದಾರೆ. ನಿಮ್ಮಲ್ಲಿ ಹೂಡಿಕೆ ಮಾಡಿ, ನಿಮ್ಮ ನಿನ್ನೆಯ ವ್ಯಕ್ತಿಯನ್ನು ಸೋಲಿಸಲು ಸ್ಪರ್ಧಿಸಿ. ಆಗ ಬದುಕಿನಲ್ಲಿ ಮುಂದುವರೆಯುತ್ತಿದ್ದೀರಾ ಎಂದು ನಿಮಗೆ ತಿಳಿಯುತ್ತದೆ. ಈ ಓಟವನ್ನು ನೀವು ಸ್ವಯಂ ಆಗಿ ಗೆಲ್ಲುತ್ತಿದ್ದೀರಾ.
ಇದಕ್ಕೆ ಗಾಬರಿ ಪಡಬೇಡಿ. ನಿಮ್ಮ ತಂದೆ-ತಾಯಿ, ಗೆಳೆಯರು ಅಥವಾ ಯಾವುದೇ ಅಪರಿಚಿತ ವ್ಯಕ್ತಿಯಾಗಿದ್ದರು ನಿಮಗೆ ಖುಷಿ ನೀಡಿದರೆ, ಸಕಾರಾತ್ಮಕ ಭಾವನೆಯನ್ನು ತಂದರೆ ಅವರಿಗೆ ಅದನ್ನು ತಿಳಿಸಿ. ಇದರಿಂದ ನಿಮಗೆ ಒಳ್ಳೆಯ ಅನುಭವ ಸಿಗುತ್ತದೆ ಮತ್ತು ಅವರಿಗೂ ಒಳ್ಳೆಯ ಅನುಭವ ಬರುತ್ತದೆ.
ಇದನ್ನು ಓದಿ: 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?ಪ್ರತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅವರ ಉತ್ತಮವಾದದ್ದನ್ನು ತೋರಿಸುತ್ತಾರೆ. ಆದರೆ ಯಾರಿಗೂ ಕೂಡ ಅವರ ಬದುಕಿನಲ್ಲಿ ಎಷ್ಟು ಪ್ರಯತ್ನ(effort) ಮತ್ತು ಹೋರಾಟ(struggle) ಇದೆ ಎಂದು ತಿಳಿಯುವುದಿಲ್ಲ. ಅವರಿಗೆ ಕೇವಲ ಸೌಂದರ್ಯ, ಖುಷಿ, ಹಣ, ಒಳ್ಳೆಯ ಬಟ್ಟೆ, ಕಾರು, ಆಹಾರ ಕಾಣಿಸುತ್ತದೆ. ಹೀಗಾಗಿ ನಿಮ್ಮನ್ನು ಈ ಸಾಮಾಜಿಕ ಮಾಧ್ಯಮ ಜಗತ್ತಿನಿಂದ ದೂರವಿಡಿ ಮತ್ತು ನಿಜವಾದ ಬದುಕಿಗೆ ಬನ್ನಿ.
ಆ ರೀತಿಯ ಜನರು ನಿಮ್ಮಲ್ಲಿ ತಪ್ಪನ್ನು ಹುಡುಕಿದರು, ನೀನು "ತಪ್ಪು" ಎಂದು ಹೇಳುವುದಿಲ್ಲ. ಬದಲಿಗೆ "ನೀನು ಎಲ್ಲಿ ತಪ್ಪಾಗಿದ್ದೀಯ" ಎಂದು ತಿಳಿಸುತ್ತಾರೆ. ಇದು ಏಕೆಂದರೆ ಅವರು ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲಿ ಎಂದು ಬಯಸುತ್ತಾರೆ. ಈ ರೀತಿಯ ಜನಗಳೇ ನಿಮ್ಮನ್ನು ಮುಂದುವರೆಯಲು ಸಹಕರಿಸುತ್ತಾರೆ.
ನೀವು ಎಷ್ಟೇ ದೂರವಿದ್ದರೂ ನಿಮ್ಮ ತಂದೆ ತಾಯಿಗೆ ಪ್ರತಿದಿನ ಕರೆ ಮಾಡಿ. ಅವರನ್ನು ಯಾವಾಗಲೂ ಭೇಟಿಯಾಗುತ್ತೀರಿ. ನೀವು ಅವರ ಬಲಿದಾನದಿಂದ ಎಷ್ಟು ಧನ್ಯರಾಗಿದ್ದೀರಿ ಎಂಬುದನ್ನು ತಿಳಿಸಿ.
ಈ ನಿರ್ಧಾರವು ನಿಮ್ಮದಾಗಿರಬೇಕು. ಇದರ ಅರ್ಥ ಹಣವು ಪ್ರಮುಖವಲ್ಲವೆಂದಲ್ಲ, ಹಣವು ಪ್ರಮುಖವಾಗಿದೆ. ಆದರೆ ನೀವು ಎಷ್ಟು ಹಣಕ್ಕಾಗಿ ಓಡುತ್ತಿದ್ದೀರಾ ಎಂದು ತಿಳಿಯುವವರೆಗೂ ಜೀವನಪೂರ್ತಿ ಹಣದ ಹಿಂದೆ ಓಡುತ್ತಿರುತ್ತೀರಾ. ಆದರೆ ನಿಮ್ಮ ಹತ್ತಿರ ಇಷ್ಟೊಂದು ಹಣವಿದೆ ಎಂದು ತಿಳಿದಾಗ ಹಣವನ್ನು ಮೀರಿ ಹೋಗಲು ಅದುವೇ ಸಾಕಾಗುತ್ತದೆ. ಆಗ ನೀವು ಪ್ರತಿದಿನ ಬೆಳಗ್ಗೆ ಎದ್ದು ಹಣವನ್ನು ಗಳಿಸಲು ಕೆಲಸ ಮಾಡುವ ಜೀವನವನ್ನು ನಡೆಸುವುದಿಲ್ಲ. ಬದಲಿಗೆ ನಿಮಗಾಗಿ ಕೆಲಸ ಮಾಡುವಿರ.
ಇದನ್ನು ಓದಿ: unstoppable ಆಗಲು ಇರುವ 5 ಪಾಠಗಳುನಿದ್ದೆ ಮಾಡುವುದು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ ಮತ್ತು ನಿಮ್ಮ 20ರ ವಯಸ್ಸಿನಲ್ಲಿ ನೀವು ಇದನ್ನು ನಿರ್ಲಕ್ಷಿಸುತ್ತೀರಾ. ನೀವು, "ಯಾರು ಮಲಗುತ್ತಾರೆ, ಕೇವಲ 3 ರಿಂದ 4 ಗಂಟೆ ಮಲಗಬೇಕು, ಬದುಕಿನಲ್ಲಿ ಅಧಿಕ ಸಾಧಿಸುವುದಿದೆ, ಏಕೆಂದರೆ, we live only once" ಎಂದು ಭಾವಿಸುತ್ತೀರಾ. ಆದರೆ, "you don't live only once, you live every single day". ಹೀಗಾಗಿ ನೀವು ನಿಮ್ಮ ಆರೋಗ್ಯದ ಆರೈಕೆ ಮಾಡದಿದ್ದರೆ, ಅದು ನೀವು ಪಶ್ಚಾತಾಪ ಪಡುವಷ್ಟು ಕಷ್ಟ ನೀಡುತ್ತದೆ. ಆರೋಗ್ಯದ ವಿಷಯದಲ್ಲಿ ರಾಜಿ ಮಾಡಬೇಡಿ. ಹೀಗಾಗಿ ಒಳ್ಳೆಯ ನಿದ್ದೆ ಪಡೆಯಿರಿ.
ನೀವು ಪ್ರತಿ ಬಾರಿ ಕರೆ ಮಾಡುತ್ತಿರೆಂದು ಆರಾಮಾಗಿ ಇರುವ ಜನಗಳಿಂದಲೇ ನೀವು ಬದುಕಿನಲ್ಲಿ ಹಿಂದುಳಿಯುತ್ತೀರಾ.
ಎಲ್ಲರ ಹತ್ತಿರ ಐಡಿಯಾ ಇದೆ. ಆದರೆ ಆ ಐಡಿಯಾನ ಕಾರ್ಯಗತಗೊಳಿಸುವುದು ಮುಖ್ಯವಾಗಿದೆ. "action is always greater than idea". ನೀವು ಅದರಲ್ಲಿ ಸೋತರು ಏನಾದರೂ ಹೊಸದನ್ನು ಕಲಿಯುವಿರ.
ಇತರರು ನನ್ನನ್ನು ಆಸಕ್ತಿದಾಯಕವಾಗಿ(interesting) ನೋಡಲಿ ಎಂದು ನೀವು ಬದುಕಿನಲ್ಲಿ ಅಧಿಕ ಹೋರಾಟ ಮಾಡುತ್ತಿರುತ್ತೀರಾ. ಆದರೆ ನೀವು ಆಸಕ್ತಿದಾಯಕವಾಗಿ ಇರುವ ಬದಲು ಆಸಕ್ತಿಯಿಂದಿರಿ(interested). ಜನರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಅವರ ಬದುಕನ್ನು ಅರ್ಥ ಮಾಡಿಕೊಳ್ಳಿ, ಸುಮ್ಮನೆ ಅರ್ಥ ಮಾಡಿಕೊಳ್ಳುವುದಲ್ಲ. ಅವರು ಆ ರೀತಿ ಏಕೆ ಮಾಡುತ್ತಿದ್ದಾರೆ ಎಂದು ನೋಡಲು ತಿಳಿದುಕೊಳ್ಳಿ. ಅದರಿಂದ ನೀವು ಏನಾದರೂ ಹೊಸದನ್ನು ಕಲಿಯುವಿರಿ.
ಇದನ್ನು ಓದಿ: ನೀರಸವಾದ ಕೆಲಸಗಳನ್ನು ಮಾಡಲು ಮೆದುಳನ್ನು ಮೋಸಗೊಳಿಸುವುದು ಹೇಗೆ?ಇದರ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಬದುಕಿನಲ್ಲಿ ಏನನ್ನು ಸಾಧಿಸಬೇಕೆಂಬುದನ್ನು ತುಂಬಾನೇ ಕಡಿಮೆ ಜನ ಸ್ಪಷ್ಟವಾಗಿ ತಿಳಿದಿರುತ್ತಾರೆ. ಆದರೆ ಅನೇಕ ಜನರು ಗೊಂದಲದಲ್ಲಿರುತ್ತಾರೆ(confuse). ಇದರ ಅರ್ಥ ನಾವು ಅನುಪಯುಕ್ತವೆಂದಲ್ಲ(useless). ನಿಮ್ಮನ್ನು ಮತ್ತು ಜಗತ್ತನ್ನು ಅರ್ಥಮಾಡಿಕೊಳ್ಳಲು ನೀವು ಸಮಯವನ್ನು ನೀಡಬೇಕು.
ನಾವು ಪ್ರತಿ ಬಾರಿಯೂ ನಮ್ಮನ್ನು ಸರಿಯಾಗಿ ತೋರಿಸಲು ಬಯಸುತ್ತೇವೆ. ಆದರೆ ನೀವು ಸರಿ ಮತ್ತು ತಪ್ಪನ್ನು ಬದಿಗಿಟ್ಟು ಕೇವಲ ಸತ್ಯವನ್ನು ಬೆನ್ನಟ್ಟಿದರೆ ನೀವು ಒಂದು ಉತ್ತಮ ಸ್ಥಳದಲ್ಲಿ ಕಂಡುಕೊಳ್ಳುವಿರಿ. ಏಕೆಂದರೆ ಸತ್ಯವೂ ಸಂಪೂರ್ಣವಾಗಿದೆ(absolute). ಯಾವಾಗಲೂ ಸತ್ಯವೇ ಗೆಲ್ಲುತ್ತದೆ.
ಪ್ರತಿಯೊಬ್ಬರೂ ಶಾಲೆ ಅಥವಾ ಕಾಲೇಜು ಮುಗಿಸಿದ ನಂತರ ಓದು ಮುಗಿಯಿತು ಎಂದು ಭಾವಿಸುತ್ತಾರೆ. ಅನೇಕರು ಇಲ್ಲೇ ತಪ್ಪಾಗುತ್ತಾರೆ. ನೀವು ಏನನ್ನಾದರೂ ಕಲಿಯಲು ಬಯಸಿದರೆ ಅದನ್ನು ಕಲಿತುಬೇಡಿ, ಇದನ್ನೇ ವಿದ್ಯಾರ್ಥಿಗಳು ಮಾಡುತ್ತಾರೆ.
ಇದನ್ನು ಓದಿ: ಉನ್ನತ ವ್ಯಕ್ತಿಯಾಗಲು ಇರುವ ಮಾರ್ಗಜನರು ನಿಮ್ಮ ಬಗ್ಗೆ ಯೋಚಿಸುತ್ತಿರುವುದಿಲ್ಲ, ಅವರು ನೀವು ಅವರ ಬಗ್ಗೆ ಏನನ್ನು ಯೋಚಿಸುತ್ತಿದ್ದೀರಾ ಎಂಬುದನ್ನು ಯೋಚಿಸುತ್ತಿರುತ್ತಾರೆ.
ಒಂದು ನಿರ್ಧಾರ ತೆಗೆದುಕೊಳ್ಳುವವರೆಗೂ ಅದು ಸರಿ ಅಥವಾ ತಪ್ಪು ಎಂದು ತಿಳಿಯುವುದಿಲ್ಲ. ಆದರೆ ನೀವು ತೆಗೆದುಕೊಂಡ ನಿರ್ಧಾರವನ್ನು ಹಿಂತಿರುಗಬಲ್ಲವು(reversible). ಹೀಗಾಗಿ ಸರಿ ಅಥವಾ ತಪ್ಪು ಎಂಬುದರ ಮೇಲೆ ಸಮಯವನ್ನು ವ್ಯರ್ಥ ಮಾಡಬೇಡಿ. ಒಂದು ನಿರ್ಧಾರ ತೆಗೆದುಕೊಂಡು ಮುಂದುವರೆಯಿರಿ.
ನಿಮ್ಮ ಬದುಕಿನಲ್ಲಿ ಕಥೆಗಳು ಇರಬೇಕು. ಅದು ಆಸಕ್ತಿದಾಯಕ, ಸಾಹಸಮಯ ಮತ್ತು ಉತ್ತೇಜಕ ಕಥೆಗಳಿಂದ ಕೂಡಿರಬೇಕು. ಅದನ್ನು ನಿಮ್ಮ ಮಕ್ಕಳಿಗೂ ತಿಳಿಸಬಹುದು. ಆ ಕಥೆಗಳನ್ನು ಕೇಳಿ ನೀವೇ ನಗಲು ಪ್ರಾರಂಭಿಸುತ್ತೀರಾ. ಆ ಕಥೆಗಳು ನೀವು ಒಳ್ಳೆಯ ಜೀವನವನ್ನು ನಡೆಸುತ್ತಿದ್ದೀರಾ ಎಂದು ತಿಳಿಸುತ್ತದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Mahithi Thana 1239
Mahithi Thana 1519
See all comments...