Watch Video
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ. ಹೀಗಾಗಿ ಲೇಖನವನ್ನು ಪೂರ್ತಿ ಓದಿ.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳುಲಘು ಉಪಹಾರದ ಜೊತೆ ಟೀ ಮಜವೇ ಬೇರೆ. ತುಂಬಾ ಜನ ಟೀ ಜೊತೆ ಏನನ್ನಾದರೂ ತಿನ್ನುತ್ತಾರೆ. ಆದರೆ ನೆನಪಿಡಿ ಕೆಲವೊಂದು ವಸ್ತುಗಳನ್ನು ಟೀ ಜೊತೆ ತಿನ್ನಲೇಬಾರದು. ತಿಂದರೆ ಅಪಾಯ ತಪ್ಪಿದ್ದಲ್ಲ.
ಟೀ ಜೊತೆ ಪಕೋಡವನ್ನು ತಿನ್ನಬೇಡಿ. ಇದರಿಂದ ದೇಹದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ, ಜೀರ್ಣ ಸಂಬಂಧಿ ಕಾಯಿಲೆಗಳು ಉಂಟಾಗಬಹುದು. ಇನ್ನು ಟೀ ಜೊತೆ ನಿಂಬೆ ಬೆರೆತಿರುವ ಆಹಾರ ತಿಂದರೆ ಗ್ಯಾಸ್ ಆಗುವ ಸಾಧ್ಯತೆಯಿದೆ, ಮಲಬದ್ಧತೆ ಉಂಟಾಗಬಹುದು, ಜೀರ್ಣ ಸಂಬಂಧಿ ಕಾಯಿಲೆಗಳು ತಗುಲಬಹುದು. ಟೀ ಕುಡಿದ ನಂತರ ತಣ್ಣನೆಯ ವಸ್ತುಗಳಾದ ನೀರು ಅಥವಾ ತಂಪು ಪಾನೀಯಗಳನ್ನು ಸೇವಿಸಬೇಡಿ. ಇನ್ನೂ ಟೀ ಜೊತೆ ಸಿಹಿ ತಿನಿಸುಗಳು ಬೇಡ. ಇದರಿಂದ ಮಧುಮೇಹ(diabetics) ಬರುವ ಸಾಧ್ಯತೆ ಹೆಚ್ಚಿದೆ.
ಇದನ್ನು ಓದಿ: ನಂಬಲಾಗದಷ್ಟು 15 ಹೃದಯ ಆರೋಗ್ಯಕರ ಆಹಾರಗಳುಹೃದಯಾಘಾತಕ್ಕೆ ಕಾರಣಗಳು ಹಲವಾರು ಇವೆ. ಅದೇನೇ ಇರಲಿ, ಆದರೆ ಬಹುತೇಕ ಹೃದಯಾಘಾತಗಳು ಸಂಭವಿಸುವುದು ಬೆಳಗಿನ ಹೊತ್ತಲ್ಲೇ. ಅದರಲ್ಲೂ ಬಾತ್ ರೂಮಿನಲ್ಲಿರುವಾಗಲೇ ಹೆಚ್ಚಿನ ಹೃದಯಾಘಾತಗಳು ಸಂಭವಿಸಿವೆ. ಇದರ ಹಿಂದೆ ಹಲವಾರು ಕಾರಣಗಳಿವೆ. ಬೆಳಿಗ್ಗೆ ಶೌಚಾಲಯಕ್ಕೆ ಹೋದಾಗ ಹೊಟ್ಟೆ ಕ್ಲೀನ್ ಮಾಡಲು ಸಿಕ್ಕಾಪಟ್ಟೆ ಒತ್ತಡ ಹಾಕುತ್ತೇವೆ. ಅದರಲ್ಲೂ ಇಂಡಿಯನ್ ಕಮೋಡ್ನಲ್ಲಿ ಶೌಚಾಲಯ ಮಾಡುತ್ತಿದ್ದರೆ ಈ ಒತ್ತಡ ಹೆಚ್ಚಿರುತ್ತದೆ. ಈ ಒತ್ತಡ ನೇರವಾಗಿ ನಿಮ್ಮ ಹೃದಯದ ಮೇಲೆ ಬೀಳುತ್ತಿರುತ್ತದೆ. ಇದರಿಂದ ಹೃದಯಾಘಾತ ಸಂಭವಿಸಬಹುದು.
ಇದನ್ನು ಓದಿ: 10 ಅತ್ಯಂತ ಶಕ್ತಿಯುತ ಔಷಧೀಯ ಸಸ್ಯಗಳುಅನೇಕರು ಉತ್ತಮ ಆರೋಗ್ಯ, ಫಿಟ್ನೆಸ್ ಕಾಯ್ದುಕೊಳ್ಳಲು ಮಾಂಸಾಹಾರ ಸೇವಿಸುತ್ತಾರೆ. ಮಾಂಸಾಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಒಳ್ಳೆಯದಲ್ಲ. ಮಾಂಸಾಹಾರವನ್ನು ತ್ಯಜಿಸಿ ಸಸ್ಯಹಾರಿಗಳಾಗಲು ಬಯಸಿದರೆ, ಸಸ್ಯಾಹಾರದ ಪ್ರಯೋಜನ ಹೀಗಿವೇ:
ಹಣ್ಣು ಖರೀದಿಸುವ ವೇಳೆ ಕೆಲವು ಹಣ್ಣುಗಳ ಮೇಲೆ ಸ್ಟಿಕ್ಕರ್(sticker) ಇರುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಈ ಸ್ಟಿಕ್ಕರ್ಗಳನ್ನು ಯಾಕೆ ಹಾಕಿರುತ್ತಾರೆ ಎಂಬುದರ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ? ಹಣ್ಣಿನ ಮೇಲೆ ಸ್ಟಿಕ್ಕರ್ ಇದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ. ಹಣ್ಣಿನ ಮೇಲೆ 4 ಅಂಕಿಯ ಕೋಡ್ ಇದ್ದರೆ, ಅದನ್ನು ಬೆಳೆಸುವಾಗ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗಿದೆ ಎಂಬ ಅರ್ಥ ನೀಡುತ್ತದೆ. 8ನೇ ನಂಬರ್‌ನಿಂದ ಪ್ರಾರಂಭವಾದ 5 ಅಂಕಿಯ ಕೋಡ್ ಇದ್ದರೆ, ಆ ಹಣ್ಣನ್ನು ಸಾವಯವ(organic) ರೂಪದಿಂದ ಬೆಳೆಸಲಾಗಿದೆ ಮತ್ತು ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾದೆ ಎಂದರ್ಥ. ಇನ್ನು 7 ರಿಂದ ಪ್ರಾರಂಭವಾಗುವ 5 ಅಂಕಿಗಳು ಇದ್ದರೆ, ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ ಆದರೆ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾಗಿಲ್ಲ ಎಂಬ ಅರ್ಥ ನೀಡುತ್ತದೆ.
ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳುನೀರು ಆರೋಗ್ಯಕ್ಕೆ ಮುಖ್ಯ. ನೀರು ಕುಡಿಯುವುದರಿಂದ ದೇಹಕ್ಕೆ ಅನೇಕ ಅನುಕೂಲವಾಗುತ್ತದೆ. ನೀರು ಖನಿಜಗಳು(minerals) ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿದೆ. ಚಳಿಗಾಲದಲ್ಲಿ ಜನರು ಹೆಚ್ಚು ಬಿಸಿ ಬಿಸಿ ನೀರನ್ನು ಕುಡಿಯುತ್ತಾರೆ. ಆದರೆ ಹೆಚ್ಚು ಬಿಸಿ ನೀರು ಕುಡಿಯುವುದು ಕೂಡ ಸಮಸ್ಯೆಯನ್ನುಂಟು ಮಾಡಬಹುದು. ಹೆಚ್ಚಾಗಿ ಬಿಸಿ ಬಿಸಿ ನೀರನ್ನು ಕುಡಿಯುವುದರಿಂದ ಬಾಯಿಯಲ್ಲಿ ಗುಳ್ಳೆಗಳು ಬೀಳುತ್ತವೆ, ಮೂತ್ರಪಿಂಡಕ್ಕೆ ಹಾನಿ ಮಾಡುತ್ತದೆ, ಬಾಯಿಯ ಒಳಭಾಗ ಮತ್ತು ತುಟಿಯನ್ನು ಸುಡುತ್ತದೆ, ಏಕಾಗ್ರತೆ ಕಡಿಮೆಯಾಗುತ್ತದೆ, ಮೆದುಳಿನ ಕೋಶಗಳಲ್ಲಿ ಉರಿಯೂತ ಸಂಭವಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಬಿಸಿ ಬಿಸಿಯಾದ ನೀರನ್ನು ಕುಡಿಯುವ ಬದಲು, ಉಗುರು ಬೆಚ್ಚಗಿರುವ ನೀರನ್ನು ಕುಡಿಯಿರಿ.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
See all comments...
kishor g • March 16th,2022
Nice tips