Watch Video
ಗಣಿತವು ಕಠಿಣ ವಿಷಯವಾಗಿರಬಹುದು. ಗಣಿತದ ಕಠಿಣ ಸೂತ್ರಗಳು ಮತ್ತು ಸಂಕೀರ್ಣ ಸಮಸ್ಯೆಗಳು ಕೆಲವರಿಗೆ ಇಷ್ಟವಾಗುತ್ತದೆ, ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ ನೀವು ಪ್ರೀತಿಸಿ ಅಥವಾ ದ್ವೇಷಿಸಿ ಪ್ರತಿಯೊಬ್ಬರು ಒಂದು ಹಂತದಲ್ಲಿ ಗಣಿತವನ್ನು ಕಲಿಯಲೇಬೇಕು.
ಗಣಿತವನ್ನು ಕಲಿಯಲು ಸುಲಭವಾದ ಮಾರ್ಗ ಇಲ್ಲದೇ ಇದ್ದರೂ, ವಿದ್ಯಾರ್ಥಿಗಳು ಅದನ್ನು ವೇಗವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಹಲವಾರು ತಂತ್ರಗಳಿವೆ. ನಾವು ಅವುಗಳ ಬಗ್ಗೆ ತಿಳಿಯುವ ಮೊದಲು, ಗಣಿತವನ್ನು ಏಕೆ ಅಧ್ಯಯನ ಮಾಡಬೇಕು ಎಂಬುದನ್ನು ನೋಡೋಣ.
ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?ಗಣಿತಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲವೆಂದು ಹೆಚ್ಚಿನ ಜನರಿಗೆ ತೋರುತ್ತದೆ. ಆದರೆ ಇದು ಸತ್ಯವಲ್ಲ. ನಾವೆಲ್ಲರೂ ಪ್ರತಿದಿನ ಗಣಿತವನ್ನು ಅರಿಯದೆ ಬಳಸುತ್ತೇವೆ. ಊಟದ ಬಿಲ್ ಪಾವತಿಸುವಾಗ, ಹಣವನ್ನು ಎಣಿಸುವಾಗ, ಇನ್ನೂ ಅನೇಕ ವಿಷಯಗಳಲ್ಲಿ ಗಣಿತದ ಬಳಕೆಯಾಗುತ್ತಿದೆ.
ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಬಳಸುವ ಮಾರ್ಗಗಳು ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಲು ಕೌಶಲ್ಯ ನೀಡುತ್ತದೆ. ಉದಾಹರಣೆಗೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಾಗ ಅದರಿಂದ ಪಾರಾಗಲು ಯೋಚಿಸುವ ಅನೇಕ ಮಾರ್ಗಗಳು ಗಣಿತದಿಂದ ಬಂದ ಕೌಶಲ್ಯವೇ ಆಗಿದೆ.
ಆದ್ದರಿಂದ ನೀವು ಮುಂದಿನ ಬಾರಿ "ನಾನು ಗಣಿತವನ್ನು ಕಲಿಯಬೇಕಿಲ್ಲ" ಎಂದು ಭಾವಿಸಿದರೆ ಮತ್ತೊಮ್ಮೆ ಯೋಚಿಸಿ. ಗಣಿತದ ಪರಿಕಲ್ಪನೆ ಮತ್ತು ಅದರ ಸಮಸ್ಯೆಗಳನ್ನು ಪರಿಹರಿಸುವುದು ಪ್ರತಿದಿನದ ನಮ್ಮ ಜೀವನದಲ್ಲೂ ಸಹಾಯ ಮಾಡುತ್ತದೆ.
ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.ಗಣಿತವನ್ನು ಕಲಿಯಲು ಹಲವಾರು ಮಾರ್ಗಗಳಿವೆ. ಶಾಲೆಯಲ್ಲಿ ಬೋಧಕರೊಂದಿಗೆ, ಆನ್‌ಲೈನ್ ಗಣಿತ ಕಲಿಕೆಯ ವೆಬ್‌ಸೈಟ್‌ಗಳನ್ನು ಬಳಸಿ. ಆದರೆ ನೀವು ಯಾವ ರೀತಿಯಲ್ಲಿ ಕಲಿಯುತ್ತಿದ್ದರು ನೆನಪಿನಲ್ಲಿಟ್ಟುಕೊಳ್ಳಲು ಕೆಲವು ಮೂಲಭೂತ ತತ್ವಗಳಿವೆ.
ಯೋಗ್ಯವಾದ ಯಾವುದೂ ಸುಲಭವಾಗಿ ಬರುವುದಿಲ್ಲ ಮತ್ತು ಗಣಿತದ ಗ್ರಹಿಕೆಯು ಇದಕ್ಕೆ ಹೊರತಾಗಿಲ್ಲ. ಗಣಿತ ಕೂಡ ಮತ್ತೆ ಮತ್ತೆ ಅಭ್ಯಾಸ ಮಾಡುವುದರಿಂದ ಮಾತ್ರ ಅಭಿವೃದ್ಧಿ ಹೊಂದುವ ಕೌಶಲ್ಯವಾಗಿದೆ.
ಹೀಗಾಗಿ ಗಣಿತದ ಲೆಕ್ಕಗಳನ್ನು ಅಭ್ಯಾಸ ಮಾಡಲು ನಿಮ್ಮ ಬಿಡುವಿನ ಸಮಯವನ್ನು ಬಳಸಿ. ಒಂದು ವೇಳೆ ನೀವು ಈ ರೀತಿ ಮಾಡಿದಲ್ಲಿ ವಾರಗಳಲ್ಲೇ ವ್ಯತ್ಯಾಸವನ್ನು ನೋಡುತ್ತೀರಿ ಮತ್ತು ಅನುಭವಿಸುತ್ತೀರಿ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರಬಹಳಷ್ಟು ಗಣಿತವು ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದೆ ಮತ್ತು ಅದನ್ನು ಪರಿಹರಿಸಲು ನೀವು ಸರಿಯಾದದ್ದನ್ನು ಕಂಡುಕೊಳ್ಳುವವರೆಗೂ ವಿಭಿನ್ನ ಪರಿಹಾರಗಳನ್ನು ಅನ್ವಯಿಸಬೇಕಾಗುತ್ತದೆ. ನೀವು ತಪ್ಪು ಉತ್ತರವನ್ನು ಪಡೆದರೆ ನಿಮ್ಮ ಪ್ರಕ್ರಿಯೆಯನ್ನು ಪರಿಶೀಲಿಸಿ ಮತ್ತು ತಪ್ಪುಗಳನ್ನು ಗುರುತಿಸಿ.
ಹಂತ ಹಂತವಾಗಿ ನಿಮ್ಮ ತಪ್ಪುಗಳನ್ನು ಗುರುತಿಸುವುದು, ನಿಮ್ಮ ಕೌಶಲ್ಯಗಳನ್ನು ಬಲಪಡಿಸಲು ಮತ್ತು ದೋಷಗಳನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ.
ಗಣಿತವು ಒಂದು ಅನುಕ್ರಮ ವಿಷಯವಾಗಿದೆ. ಮುಂದಿನದಕ್ಕೆ ಹೋಗುವ ಮೊದಲು ನೀವು ಒಂದು ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನೀವು ಕೇವಲ ಸಮಸ್ಯೆಯನ್ನು ಬಗೆಹರಿಸುವ ಪ್ರಕ್ರಿಯೆಗಳ ಬಗ್ಗೆ ತಿಳಿದಿದ್ದರೆ, ಭವಿಷ್ಯದಲ್ಲಿ ವಿವಿಧ ಸಮಸ್ಯೆಗಳಿಗೆ ಅದನ್ನು ಹೊಂದಿಸಿ ಪರಿಹರಿಸಲು ನಿಮಗೆ ಹೆಚ್ಚು ಕಷ್ಟವಾಗುತ್ತದೆ.
ಇದನ್ನು ಓದಿ: ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಸುಧಾರಿಸಲು ಎಂಟು ಸಲಹೆಗಳುಕಾಗ್ನಿಟಿವ್ ಸೈನ್ಸ್ ಸೊಸೈಟಿ ನಡೆಸಿದ ಅಧ್ಯಯನದಲ್ಲಿ, "ಮೊದಲಿಗೆ ಸಮಸ್ಯೆಯನ್ನು ಪರಿಹರಿಸುವ ವಿದ್ಯಾರ್ಥಿಗಳು, ಮೊದಲಿಗೆ ಗಣಿತದ ಪರಿಹಾರಗಳನ್ನು ಹುಡುಕುವ ವಿದ್ಯಾರ್ಥಿಗಳಿಗಿಂತ ಮುಂದಿದ್ದರು" ಎಂಬುದನ್ನು ತಿಳಿಸಿದೆ.
ಪರಿಹಾರವನ್ನು ತಿಳಿದುಕೊಳ್ಳುವ ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಸ್ಯೆಯ ಹಿಂದಿನ ತರ್ಕವನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸಬಹುದು. ಹೀಗಾಗಿ ಗಣಿತವನ್ನು ಕಲಿಯಲು ಉತ್ತಮ ಮಾರ್ಗವೆಂದರೆ ಪ್ರಕ್ರಿಯೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಬದಲು, ಪ್ರತಿ ಪರಿಹಾರದ ಕಾನ್ಸೆಪ್ಟ್‌ಗಳನ್ನು ಅರ್ಥ ಮಾಡಿಕೊಳ್ಳುವುದಾಗಿದೆ.
ವಿಷಯಗಳನ್ನು ಸರಿಯಾಗಿ ಕಲಿಯಲು ಯಾವುದೇ ಶಾರ್ಟ್ ಕಟ್ ಇಲ್ಲದೆ ಇದ್ದರು. ನಿಮ್ಮ ಗಣಿತದ ತಿಳುವಳಿಕೆಯನ್ನು ಬಲಪಡಿಸಲು ಮತ್ತು ಚುರುಕಾಗಿ ಅಧ್ಯಯನ ಮಾಡಲು, ನೀವು ಬಳಸಬಹುದಾದ ಕೆಲವು ಸುಲಭ ತಂತ್ರಗಳಿವೆ. ಗಣಿತವನ್ನು ವೇಗವಾಗಿ ಕಲಿಯಲು ತಜ್ಞರು ನೀಡಿದ ಹಲವು ಸಲಹೆಗಳು ಇಲ್ಲಿವೆ.
ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳುಗಣಿತದ ಪರಿಹಾರಗಳು ಬಹಳ ಸಂಕ್ಷಿಪ್ತವಾಗಿರುತ್ತದೆ. ಇದು ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿಸುತ್ತವೆ. ಗಣಿತವನ್ನು ವೇಗವಾಗಿ ಕಲಿಯಲು ಇರುವ ಉತ್ತಮ ಮಾರ್ಗವೆಂದರೆ ನೀವು ನೈಜ ಪ್ರಪಂಚದ ಉದಾರಣೆಗಳನ್ನು ಗಣಿತಕ್ಕೆ ಅನ್ವಯಿಸುವುದು.
ಗಣಿತದಲ್ಲಿ ವೇಗವಾಗಿ ಉತ್ತಮಗೊಳ್ಳಲು ನಿಮ್ಮ ದೈನಂದಿನ ಜೀವನದಲ್ಲಿ ಗಣಿತದ ಸಮಸ್ಯೆಯ ಉದಾಹರಣೆಯನ್ನು ಹುಡುಕಿ. ಅದರಲ್ಲಿ ಕೆಲವು ಉದಾಹರಣೆಗಳು ಈ ರೀತಿ ಇರಬಹುದು.
ಗಣಿತದ ವೆಬ್‌ಸೈಟ್ ಮತ್ತು ಆನ್‌ಲೈನ್ ಗಣಿತ ಬೋಧನೆಯು ತುಂಬಾ ಜನಪ್ರಿಯವಾಗಲು ಒಂದು ಕಾರಣವಿದೆ. ಅಭ್ಯಾಸವು ನಿಮ್ಮನ್ನು ಪರಿಪೂರ್ಣವಾಗಿಸುತ್ತದೆ. ನೀವು ಗಣಿತಕ್ಕೆ ಹೆಚ್ಚು ಒಡ್ಡಿಕೊಂಡಾಗ, ಹೆಚ್ಚು ಅರ್ಥ ಮಾಡಿಕೊಳ್ಳುತ್ತೀರಿ ಮತ್ತು ವೇಗವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗುತ್ತೀರಿ.
ಇದನ್ನು ಓದಿ: ಮನೆಯಲ್ಲಿ ವಿದ್ಯುತ್ ಉಳಿಸುವುದು ಹೇಗೆ?ವೀಡಿಯೋ ಮತ್ತು ಪುಸ್ತಕಗಳಂತಹ ಸಹಾಯಕವಾದ ಆನ್‌ಲೈನ್ ಸಂಪನ್ಮೂಲಗಳು ಮೂಲಭೂತ(basic) ಗಣಿತವನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಕಲಿಯಲು ಸುಲಭವಾದ ಮಾರ್ಗವಾಗಿದೆ. ತಂತ್ರಜ್ಞಾನವು ಗಣಿತವನ್ನು ಆನ್‌ಲೈನ್ ಮೂಲಕ ಸುಲಭವಾಗಿ ಕಲಿಯಲು ಅನುವು ಮಾಡಿಕೊಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಬೋಧನೆಯು ಜನಪ್ರಿಯತೆಯನ್ನು ಗಳಿಸಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಉದ್ಯೋಗಕ್ಕಾಗಿಯ ಸ್ಪರ್ಧೆಯು ಇದಕ್ಕೆ ಕಾರಣವಾಗಿದೆ. ಹೀಗಾಗಿ ನಿಮಗೆ ಸರಿಹೊಂದುವ ಆನ್‌ಲೈನ್ ಗಣಿತ ಬೋಧಕರನ್ನು ಹುಡುಕಿ.
ಆನ್‌ಲೈನಲ್ಲಿ ಗಣಿತವನ್ನು ಕಲಿಯಲು ಸಾವಿರಾರು ವೆಬ್‌ಸೈಟ್‌ಗಳಿವೆ. ಅವುಗಳಲ್ಲಿ ಕೆಲವು ವೆಬ್‌ಸೈಟ್‌ಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ.
ಗಣಿತವು ನಿಮ್ಮ ಹೆಚ್ಚಿನ ಏಕಾಗ್ರತೆಯ ಅಗತ್ಯವಿರುವ ವಿಷಯವಾಗಿದೆ. ಆದ್ದರಿಂದ ಗದ್ದಲದ ಕೆಫೆಗಳು ಮತ್ತು ಟಿವಿಯ ಮುಂದೆ ಕುಳಿತು ಅಧ್ಯಯನ ಮಾಡುವುದನ್ನು ತಪ್ಪಿಸಿ. ಆಹಾರ, ಮನೆಗೆಲಸ ಮತ್ತು ನಿಮ್ಮ ಫೋನ್‍ನಂತಹ ಗೊಂದಲಗಳ ಪ್ರಚೋದನೆಗೊಳಗಾಗದೆ ಸ್ಥಳವನ್ನು ಹುಡುಕಿ.
ಕೆಲವು ಅಧ್ಯಯನಗಳು ಅಧ್ಯಯನ ಮಾಡುವಾಗ ಶಾಸ್ತ್ರೀಯ ಸಂಗೀತವನ್ನು ಆಲಿಸುವುದು ಗಮನವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಹೀಗಾಗಿ ನಿಮ್ಮ ಅಧ್ಯಯನದ ದಿನಚರಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ಸೇರಿಸಿ.
ಆದ್ದರಿಂದ ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ನಿಮಗೆ ಸಹಾಯ ಮಾಡಲು ಸಾವಿರಾರು ಉಪಯುಕ್ತ ಸಂಪನ್ಮೂಲಗಳು, ಬೋಧನಾ ಸೇವೆಗಳು ಮತ್ತು ಅಧ್ಯಯನ ಸಲಹೆಗಳಿವೆ.
ದೈನಂದಿನ ಸಮಸ್ಯೆಗಳಿಗೆ ಗಣಿತದ ಪರಿಹಾರಗಳನ್ನು ಅನ್ವಯಿಸಲು ನೀವು ಗಮನಿಸುತ್ತೀರಿ ಮತ್ತು ದಿನನಿತ್ಯದ ಬೋಧನಕ್ಕೆ ಬೋಧಕರನ್ನು ನೇಮಿಸಿಕೊಳ್ಳುವ ಮೂಲಕ ಗಣಿತವನ್ನು ಸರಿಯಾಗಿ ಮತ್ತು ವೇಗವಾದ ಮಾರ್ಗದಲ್ಲಿ ಕಲಿಯಿರಿ.
ಇದನ್ನು ಓದಿ: ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಸುಧಾರಿಸಲು ಎಂಟು ಸಲಹೆಗಳು5 ರಿಂದ ಗುಣಿಸುವುದು ಕಷ್ಟಕರವೆನಿಸಿದರೆ, ಈ ಟ್ರಿಕ್ ನೆನಪಿನಲ್ಲಿಟ್ಟುಕೊಳ್ಳಿ. 10 ರಿಂದ 2ನ್ನು ಬಾಗಿಸಿದಾಗ 5 ಬರುತ್ತದೆ. ಒಂದು ವೇಳೆ ನಿಮಗೆ 48*5ರ ಸಂಕೀರ್ಣ ಗುಣಕಾರ ಮಾಡುವುದು ಕಷ್ಟವೆನಿಸಿದರೆ, 48*10 ರಿಂದ ಗುಣಿಸುವ ಸುಲಭ ಮತ್ತು ವೇಗವಾದ ಮಾರ್ಗವನ್ನು ಬಳಸಬಹುದು. ನಂತರ ಬಂದ ಉತ್ತರವನ್ನು 2 ರಿಂದ ಭಾಗಿಸಿದರೆ, ನಿಮಗೆ 48*5ರ ಉತ್ತರ ದೊರೆಯುತ್ತದೆ.
ಪ್ರತಿ ಗುಣಾಕಾರವು ಅವಳಿ ಅನ್ನು ಹೊಂದಿದೆ. ಅದರ ನೆನಪಿನಲ್ಲಿಟ್ಟುಕೊಳ್ಳುವುದು ನಿಮಗೆ ಉಪಯುಕ್ತವಾಗುತ್ತದೆ. ಉದಾಹರಣೆಗೆ 7*4ರ ಗುಣಿತ ಕಷ್ಟವೆನಿಸಿದರೆ, 4*7 ರಿಂದ ಮಾಡಲು ಪ್ರಯತ್ನಿಸಿ.
9 ರಿಂದ ಗುಣಿಸುವ ವಿಷಯ ಬಂದಾಗ, 10 ರಿಂದ ಗುಣಿಸಿ ಮತ್ತು ಆ ಗುಂಪಿನ ಸಂಖ್ಯೆಯಿಂದ ಕಳೆಯಿರಿ. ಉದಾಹರಣೆಗೆ, 9*8ಗಾಗಿ, 10*8 ಮಾಡಿ. ಆಗ ನಿಮಗೆ 80 ಸಿಗುತ್ತದೆ. 80 ರಿಂದ 8ನ್ನು ಕಳೆದರೆ, ನಿಮಗೆ 9*8ರ ಉತ್ತರ ಸಿಗುತ್ತದೆ. ಅದುವೇ 72.
ಇದನ್ನು ಓದಿ: ಓದಲು ಐದು ತಂತ್ರಗಳುತ್ವರಿತವಾಗಿ ಪರ್ಸೆಂಟೇಜ್ ಕಂಡುಕೊಳ್ಳಲು ನಾಲ್ಕು ಪ್ರಮುಖ ಪರ್ಸಂಟೇಜ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಅದೆಂದರೆ 5%, 10%, 25% ಮತ್ತು 50%. 5ರ ಗುಣಕರವಾಗಿರುವ ಪರ್ಸಂಟೇಜ್ ಗಳು ಸುಲಭವಾಗಿ ಪರ್ಸಂಟೇಜ್ ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಉದಾಹರಣೆಗೆ, 430ರ 15% ಕಂಡುಹಿಡಿಯಲು ಈ ರೀತಿ ಮಾಡಿ. 5% ಮತ್ತು 10% ಸೇರಿ 15% ಆಗುತ್ತದೆ. 430ರ 10% 43 ಆಗಿದೆ. 430ರ 5% 21.5, ಅಂದರೆ 43ರ ಅರ್ಧ. ಇವೆರಡನ್ನು ಕೂಡಿಸಿದಾಗ ನಮಗೆ ಸಿಗುತ್ತದೆ 64.5. ಅದುವೇ 430ರ 5% ಆಗಿದೆ.
ನೀವು ಗಣಿತವನ್ನು ವೇಗವಾಗಿ ಕಲಿಯಲು ಮತ್ತು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬಯಸಿದರೆ ಕೆಲವು ಹಂತಗಳನ್ನು ಪಾಲಿಸಿ.
ಮೊದಲನೆಯದಾಗಿ, ನೀವು ಗಣಿತದ ಸಮಸ್ಯೆಗಳನ್ನು ಎದುರಿಸಿದಾಗ ಅದನ್ನು ಬರೆಯಬೇಕು. ಸಮಸ್ಯೆಯನ್ನು ಬರೆಯುವುದು ಅದನ್ನು ಪರಿಹರಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಅದನ್ನು ನಿಮ್ಮ ತಲೆಯಲ್ಲೇ ಮಾಡುವುದರಿಂದ ಸಮಸ್ಯೆಯ ಪ್ರಕಾರವನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ ಮತ್ತು ಯಾವ ಸೂತ್ರಗಳನ್ನು ಬಳಸಬೇಕು ಎಂಬುದನ್ನು ತಿಳಿಸುತ್ತದೆ.
ದೊಡ್ಡ ಲೆಕ್ಕಗಳಿಗೆ ಕ್ಯಾಲ್ಕುಲೇಟರ್ ಬಳಸಲು ಹಿಂಜರಿಯಬೇಡಿ ಮತ್ತು ಅಭ್ಯಾಸವು ಪರಿಪೂರ್ಣವಾಗಿಸುತ್ತದೆ ಎಂದು ನೆನಪಿಡಿ. ಅಂದರೆ ನೀವು ಗಣಿತದ ಸಮಸ್ಯೆಗಳನ್ನು ಪರಿಹರಿಸುವಾಗ ವೇಗವಾಗಿ ಪರಿಹರಿಸುವ ಅಭ್ಯಾಸವಾಗುತ್ತದೆ.
ಗಣಿತದ ಮೇಲಿನ ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
Info Mind 9487
Info Mind 5451
Info Mind 2320
See all comments...
ashwini mk • March 5th,2022
Thank you