Website designed by @coders.knowledge.

Website designed by @coders.knowledge.

Healthy Tips for Good Health Part-2 | ಉತ್ತಮ ಆರೋಗ್ಯಕ್ಕೆ ಆರೋಗ್ಯಕರ ಸಲಹೆಗಳು

 0

 Add

Please login to add to playlist

Watch Video

  • • ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ನಿವಾರಿಸಲು ಹೀಗೆ ಮಾಡಿ.
  • • ಹೆಚ್ಚು ಖರ್ಚಾಗುವುದನ್ನು ತಪ್ಪಿಸಲು ಈ ರೀತಿ ಮಾಡಿ.
  • • ಉತ್ತಮ ಆರೋಗ್ಯಕ್ಕೆ ಇದನ್ನು ಪಾಲಿಸಿ.
  • • ಚಾಕೊಲೇಟ್ ತಿನ್ನುವ ಮುನ್ನ ಎಚ್ಚರವಿರಲಿ.
  • • ಚರ್ಮದ ಬ್ಯೂಟಿ ಹೆಚ್ಚಿಸುವ ಹಣ್ಣುಗಳಿವು.
  • • ನಗುತ್ತಿದ್ದರೆ ಸಿಗುತ್ತೆ ಅಧಿಕ ಆರೋಗ್ಯ ಲಾಭ.

ಈ ಎಲ್ಲ ಪ್ರಶ್ನೆ ನಿಮ್ಮ ತಲೆಯಲ್ಲಿ ಇದ್ದರೆ ಅದಕ್ಕೆ ಉತ್ತರ ಈ ಲೇಖನದಲ್ಲಿದೆ. ಹೀಗಾಗಿ ಲೇಖನವನ್ನು ಪೂರ್ತಿ ನೋಡಿ.

ಇದನ್ನು ಓದಿ: ಉತ್ತಮ ಆರೋಗ್ಯಕ್ಕೆ ಆರೋಗ್ಯಕರ ಸಲಹೆಗಳು ಭಾಗ- 1

1. ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ನಿವಾರಿಸಲು ಹೀಗೆ ಮಾಡಿ.

ನಿದ್ರೆಯ ಕೊರತೆ, ರಕ್ತಹೀನತೆ ಸಮಸ್ಯೆಯಿಂದ ಕಣ್ಣಿನ ಸುತ್ತಲು ಡಾರ್ಕ್ ಸರ್ಕಲ್ ಕಾಣಿಸುತ್ತದೆ. ಬಾದಾಮಿ ಎಣ್ಣೆಯಲ್ಲಿರುವ ಪೋಷಕಾಂಶ ನಿಮ್ಮ ಡಾರ್ಕ್ ಸರ್ಕಲನ್ನು ನಿವಾರಿಸಲು ಸಹಕಾರಿಯಾಗಿದೆ.

darkspot remove tips in kannada
dark spot removing

ಅರ್ಧ ಚಮಚ ಆಲಿವ್ ಎಣ್ಣೆ ಮತ್ತು ಅರ್ಧ ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಕಣ್ಣಿನ ಸುತ್ತಲೂ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿದರೆ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಇನ್ನು ರೋಸ್ ವಾಟರ್ ಹಚ್ಚಿ ಒಣಗಲು ಬಿಟ್ಟು, ಬಳಿಕ ಬಾದಾಮಿ ಎಣ್ಣೆಯಿಂದ 2 ನಿಮಿಷ ಮಸಾಜ್ ಮಾಡಿದರು ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.

ಇದನ್ನು ಓದಿ: ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದು ಹಾಕಲು 17 ಪರಿಹಾರಗಳು

2. ಹೆಚ್ಚು ಖರ್ಚಾಗುವುದನ್ನು ತಪ್ಪಿಸಲು ಈ ರೀತಿ ಮಾಡಿ.

money saving tips in kannada
money control

ಸಣ್ಣ ಸಣ್ಣ ವಸ್ತುಗಳಾದ ಹಣ್ಣು, ತರಕಾರಿ, ದಿನಬಳಕೆ ವಸ್ತುಗಳನ್ನು ಖರೀದಿಸುವಾಗ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಗೂಗಲ್ ಪೇ, ಪೇಟಿಎಂ ಸೇರಿದಂತೆ ಆನ್‌ಲೈನ್ ವಹಿವಾಟಿನ ಬಳಕೆಯನ್ನು ತಪ್ಪಿಸಿ. ನಿಮ್ಮ ಕೈಯಲ್ಲಿರುವ ನಗದು(cash) ಮೂಲಕವೇ ಪಾವತಿಸಿ. ಹೀಗೆ ಮಾಡುವುದರಿಂದ ಹೆಚ್ಚು ಖರ್ಚಾಗುವುದನ್ನು ತಪ್ಪಿಸಬಹುದು. ಇದು ನಿಮಗೆ ಹಣದ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ಮತ್ತು ಅನಗತ್ಯ ವಸ್ತುಗಳನ್ನು ಖರೀದಿಸದೆ ಕಡಿಮೆ ವಸ್ತುಗಳನ್ನು ಕೊಳ್ಳಲು ಪ್ರೇರಣೆ ನೀಡುತ್ತದೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

3. ಉತ್ತಮ ಆರೋಗ್ಯಕ್ಕೆ ಇದನ್ನು ಪಾಲಿಸಿ.

water drinking health benefits in kannada
water drinking

ಬೆಳಗ್ಗೆ 4:30ಕ್ಕೆ ಎದ್ದೇಳಿ, ಎಚ್ಚರವಾದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯಿರಿ. ಬೆಳಗ್ಗೆ 8:30ಕ್ಕೆ ಉಪಾಹಾರ ಸೇವಿಸಿ, ಉಪಾಹಾರದ ಬಳಿಕ ಕೆಲಸ ಆರಂಭಿಸಿ. ಮಧ್ಯಾಹ್ನ 2 ರಿಂದ 3 ಲೋಟ ಶುದ್ಧ ನೀರನ್ನು ಕುಡಿಯಿರಿ. ಊಟಕ್ಕೆ 48 ನಿಮಿಷಗಳ ಮೊದಲು ನೀರು ಕುಡಿಯಿರಿ. ರಾತ್ರಿ ಸಮಯದಲ್ಲಿ ಕಡಿಮೆ ಆಹಾರ ಸೇವಿಸಿ. ರಾತ್ರಿ ಊಟದ ಬಳಿಕ ಒಂದು ಕಿಲೋಮೀಟರ್ ನಡೆಯಿರಿ.

ಇದನ್ನು ಓದಿ: ರೋಗಗಳನ್ನು ತಪ್ಪಿಸಲು ಹತ್ತು ಆರೋಗ್ಯಕರ ಅಭ್ಯಾಸಗಳು

4. ಚಾಕೊಲೇಟ್ ತಿನ್ನುವ ಮುನ್ನ ಎಚ್ಚರವಿರಲಿ.

chocolate eating demerits in kannada
chocolate

ಚಾಕಲೇಟ್ ಅಂದರೆ ಎಲ್ಲರಿಗೂ ಇಷ್ಟ. ಆದರೆ ಅತಿಯಾದ ಚಾಕೋಲೇಟ್ ಸೇವನೆಯಿಂದ ಕೆಟ್ಟ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವಾಗ ಚಾಕಲೇಟ್ ತಿಂದರೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಹಾಲಿನಿಂದ ಮಾಡಿದ ಚಾಕಲೇಟಿನಿಂದ ದೇಹದಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಹೆಚ್ಚಾಗುತ್ತದೆ. ಚಾಕಲೇಟಿನಲ್ಲಿರುವ ಕೆಫಿನ್ ಅಂಶದಿಂದ ಅತಿಸಾರ, ರಕ್ತದೊತ್ತಡ ಹೆಚ್ಚಾಗುತ್ತದೆ. ಇನ್ನು ಚಾಕಲೇಟಿನ ಕೋಕೋ ಅಂಶ ದೇಹದಿಂದ ಕ್ಯಾಲ್ಸಿಯಂ ಹೊರಹಾಕುವುದರಿಂದ ದೇಹದಲ್ಲಿ ಮೂಳೆ ಸಮಸ್ಯೆ ಕಾಡುತ್ತದೆ. ಹೀಗಾಗಿ ಮಿತಿಯಲ್ಲಿ ಚಾಕಲಟ್ ಸೇವಿಸಿ.

ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳು

5. ಚರ್ಮದ ಬ್ಯೂಟಿ ಹೆಚ್ಚಿಸುವ ಹಣ್ಣುಗಳಿವು.

papaya like skin fruit health benefits in kannada
skin fruits

ನೀವು ಪ್ರತಿದಿನ ಪಪ್ಪಾಯಿ ಹಣ್ಣು ಸೇವಿಸಿದರೆ ಚರ್ಮದ ಆರೋಗ್ಯ ಹೆಚ್ಚುತ್ತದೆ. ಪೈನಾಪಲ್ ತಿನ್ನುವುದರಿಂದ ದೇಹಕ್ಕೆ ವಿಟಮಿನ್ C ಜೊತೆಗೆ ವಿಟಮಿನ್ B6 ಸಿಗುವುದರಿಂದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಪ್ರತಿದಿನ ಕಲ್ಲಂಗಡಿ ಸೇವಿಸಿದರೆ ನಿಮ್ಮ ಚರ್ಮ ತಾಜಾವಾಗಿರುತ್ತದೆ. ಸ್ಟ್ರಾಬೆರಿ ಹಣ್ಣುಗಳ ಸೇವನೆಯಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 5 ಅತ್ಯುತ್ತಮ ವ್ಯಾಯಾಮಗಳು

6. ನಗುತ್ತಿದ್ದರೆ ಸಿಗುತ್ತೆ ಅಧಿಕ ಆರೋಗ್ಯ ಲಾಭ.

smile health benefits in kannada
smile benefits

ನಗುತ್ತಿದ್ದರೆ ನೋವು ಮರೆತು ಹೋಗುತ್ತದೆ. ನಗುವಿನಿಂದ ಆರೋಗ್ಯ ವೃದ್ಧಿಯಾಗುತ್ತದೆ. ನಗುವ ನಮಗೆ ಸಂತೋಷದ ಭಾವನೆಯನ್ನು ಮೂಡಿಸುತ್ತದೆ. ಒತ್ತಡದಿಂದ ಮುಕ್ತಿ ನೀಡುತ್ತದೆ. 2007 NCBI ಅಧ್ಯಯನವೊಂದು ವರದಿ ಮಾಡಿದ ಸಂಗತಿಯ ಪ್ರಕಾರ, ಅಧಿಕ ನಗುವು ಹೃದಯ ಹಾಗೂ ಹೃದಯ ಬಡಿತದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಿಳಿಸಿದೆ, ಜೊತೆಗೆ 20-40ರಷ್ಟು ಹೆಚ್ಚಿನ ಕ್ಯಾಲೋರಿಯನ್ನು ಸುಡಲು ಸಹಾಯ ಮಾಡುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ. ನಮ್ಮ ವೆಬ್‌ಸೈಟ್‌ಗೆ ಲಾಗಿನ್ ಆಗಿ ಮತ್ತು ಪಾಯಿಂಟ್ಸ್ ಗಳಿಸುವ ಮೂಲಕ ಹಣವನ್ನು ಗಳಿಸಿ.

Mahithi Thana

More by this author

Similar category

Explore all our Posts by categories.

commenters

kishor g • March 16th,2022

Nice