Watch Video
ನಾವು ಮನುಷ್ಯರು ಸಾಗರಗಳಿಗೆ ಹೋಲಿಸಿದರೆ, ಮೂರುಪಟ್ಟು ಹೆಚ್ಚು ನಮ್ಮ ಬಾಹ್ಯಾಕಾಶದ ಅಧ್ಯಯನ ಮಾಡಿದ್ದೇವೆ ಎಂದು ನಂಬಲಾಗಿದೆ. ಸಾಗರಗಳು ತಮ್ಮಲ್ಲಿ ಹಲವಾರು ರಹಸ್ಯಗಳನ್ನು ಹಿಡಿದಿಟ್ಟುಕೊಂಡಿವೆ. ನಾವು ಆ ರಹಸ್ಯಗಳನ್ನು ಇನ್ನು ಅನಾವರಣಗೊಳಿಸಬೇಕಾಗಿದೆ. ಸಾಗರಗಳ ಅಧ್ಯಯನದಲ್ಲಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂಬ ಕಲ್ಪನೆಯನ್ನು ನಿಮಗೆ ನೀಡಲು, ಸಾಗರದ ಏಳು ಗುಪ್ತ ರಹಸ್ಯಗಳನ್ನು ತಿಳಿಸುತ್ತಿದ್ದೇವೆ.
ಇದನ್ನು ಓದಿ: 10 ಅತ್ಯಂತ ಶಕ್ತಿಯುತ ಔಷಧೀಯ ಸಸ್ಯಗಳು1. ಸಾಗರಗಳ ಸರಾಸರಿ ಆಳ 25 ಮೈಲಿ ಅಂದರೆ 4 ಕಿಲೋಮೀಟರ್ ಇದೆ. ಸಾಗರಗಳಲ್ಲೇ ಆಳವಾದ ಸ್ಥಳವೆಂದರೆ ಪೆಸಿಫಿಕ್ ಮಹಾಸಾಗರದಲ್ಲಿ ಇರುವ ಮರಿಯಾನಾ ಟ್ರೆಂಚ್ ಆಗಿದೆ. ಈ ಕಂದಕ 7 ಮೈಲಿ ಅಥವಾ 11 ಕಿಲೋಮೀಟರ್‌ನಷ್ಟು ಆಳವಿದೆ. ಇದು ಎಷ್ಟು ಆಳವೆಂದರೆ ಮೌಂಟ್ ಎವರೆಸ್ಟ್‌ನ್ನು ಈ ಕಂದಕದ ಕೆಳಭಾಗದಲ್ಲಿ ಇರಿಸಿದರು ಇನ್ನೂ 2000 ಕಿಲೋಮೀಟರ್ ಬಾಕಿ ಉಳಿದಿರುತ್ತದೆ. ಅಟ್ಲಾಂಟಿಕದ ಮಧ್ಯ ಭಾಗ ಆಳವಿಲ್ಲದ ಪ್ರದೇಶಗಳಾಗಿವೆ.
2. ಸಾಗರಗಳಲ್ಲಿ ಬರುವ ಅಲೆಗಳ ಚಲನಶಕ್ತಿಯ ಕೇವಲ 0.1% ಭಾಗವನ್ನು ನಾವು ಸೆರೆಹಿಡಿಯಲು ಸಾಧ್ಯವಾದರೆ, ಪ್ರಸ್ತುತ ಜಾಗತಿಕ ಶಕ್ತಿಯ ಬೇಡಿಕೆಯನ್ನು ನಾವು 5 ಪಟ್ಟು ಪೂರೈಸಬಹುದು. ಆದರೆ ವಾಸ್ತವವೆಂದರೆ, ಪ್ರಸ್ತುತ ಅಂತಹ ಯಾವುದೇ ಕಾರ್ಯ ವಿಧಾನವಿಲ್ಲ. ಇನ್ನೂ ಹೇಳಬೇಕಾದರೆ, ನಾವಿನ್ನೂ ಸುಮಾರು 95% ನಷ್ಟು ಸಾಗರವನ್ನು ಅನ್ವೇಷಿಸುವುದು ಬಾಕಿ ಇದೆ.
3. ನಮಗೆಲ್ಲರಿಗೂ ತಿಳಿದಿರುವಂತೆ ಸಾಗರಗಳು ಭೂಮಿಯ ಮೇಲ್ಮೈಯ 70%ಕ್ಕಿಂತಲೂ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ. ಆದರೆ, ಸಾಗರಗಳ ವಿಶಾಲತೆಯನ್ನು ನಾವು ಎಂದಿಗೂ ಸಂಪೂರ್ಣವಾಗಿ ಗ್ರಹಿಸಲು ಅಸಾಧ್ಯವೆನಿಸುತ್ತದೆ. ಇದರ ಬಗ್ಗೆ ನಿಮಗೆ ಸ್ವಲ್ಪ ಕಲ್ಪನೆ ನೀಡಲು ಇಲ್ಲಿ ಒಂದು ಸತ್ಯವಿದೆ. ಅಟ್ಲಾಂಟಿಕ್ ಮಹಾಸಾಗರವು ಅಮೆರಿಕಾದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಕ್ಯೂಬಿಕ್ ಕಿಲೋಮೀಟರ್ ಪ್ರದೇಶವನ್ನು ಹೊಂದಲು ಅವಕಾಶ ಮಾಡಿಕೊಡುವಷ್ಟು ದೊಡ್ಡದಾಗಿದೆ ಮತ್ತು ಅಟ್ಲಾಂಟಿಕ್ ಜಗತ್ತಿನ ಅತಿದೊಡ್ಡ ಸಾಗರವೂ ಅಲ್ಲ!
4. ನಾವು ಮಾನವರು ಭೂಮಿಯ ಹೊರಪದರದಲ್ಲಿ ಖನಿಜಗಳು, ಪಳೆಯುಳಿಕೆಗಳು ಮತ್ತು ಇತರ ಅಮೂಲ್ಯ ವಸ್ತುಗಳನ್ನು ಹುಡುಕುತ್ತಲೇ ಇರುತ್ತೇವೆ. ಸಾಗರಗಳನ್ನು ಹೆಚ್ಚಾಗಿ ತೈಲಕ್ಕಾಗಿ ಪರಿಶೋಧಿಸಲಾಗುತ್ತದೆ. ಆದರೆ, ಸಾಗರಗಳು ಕೆಲವು ಅಮೂಲ್ಯ ವಸ್ತುಗಳನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಒಳಗೊಂಡಿದೆ ಎಂದು ನಿಮಗೆ ತಿಳಿದಿದೆಯೇ. ವಾಸ್ತವವಾಗಿ ಜಗತ್ತಿನ ಸಾಗರಗಳಲ್ಲಿ ಸುಮಾರು 2 ಕೋಟಿ ಟನ್ನಷ್ಟು ಚಿನ್ನವಿದೆ.
5. ಸಾಗರದ ಆಳವಾದ ಭಾಗವನ್ನು ಅನ್ವೇಷಿಸುವುದು ಸುಲಭವಲ್ಲ. ಸಾಗರದ ಆಳವಾದ ಭಾಗದಲ್ಲಿ ನೀರಿನ ಒತ್ತಡ ಐವತ್ತು ಜಂಬೋ ಜೆಟ್‌ಗಳನ್ನು ನಿಮ್ಮ ಮೇಲೆ ಪೇರಿಸುವುದಕ್ಕೆ ಸಮನಾಗಿರುತ್ತದೆ. ಇಂತಹ ವಿಪರೀತ ಒತ್ತಡದಿಂದಾಗಿ ಮಾನವರು ಅಲ್ಲಿಗೆ ಇಳಿಯುವುದು ತುಂಬಾ ಕಷ್ಟ. ಸಾಗರದ ಆಳವಾದ ಭಾಗವನ್ನು ಮನುಷ್ಯರು ಇಳಿದು ಅನ್ವೇಷಿಸುವುದು ಅಪಾಯಕಾರಿಯಾಗಿರಬಹುದು. ಆದರೆ, ವಿಜ್ಞಾನದ ಬಳಕೆಯಿಂದ ನಾವು ಈ ಕಾರ್ಯದಲ್ಲಿ ಜಯವನ್ನು ಸಾಧಿಸಬಹುದು.
ಇದನ್ನು ಓದಿ: ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳು6. ನಮ್ಮ ಉಳಿವಿಗಾಗಿ ಸಾಗರಗಳು ಬಹಳ ಮುಖ್ಯ. ವಾಸ್ತವವಾಗಿ ನಾವು ಉಸಿರಾಡುವ ಆಮ್ಲಜನಕದ 70% ಸಾಗರಗಳಿಂದ ಉತ್ಪತ್ತಿಯಾಗುತ್ತದೆ. ಆದರೆ ಸಾಗರಗಳು ಅಪಾರ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿವೆ. ಪ್ರತಿವರ್ಷ ಹಡಗಿನಲ್ಲಿ ಬರುವ 10,000 ಕಂಟೈನರ್ ಸಮುದ್ರಗಳಲ್ಲೇ ಕಳೆದುಹೋಗುತ್ತದೆ ಮತ್ತು ಅದರಲ್ಲಿ 10% ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ.
ಸಾಗರಗಳ ಬಗ್ಗೆ ಅಸಡ್ಡೆ ವರ್ತನೆಯ ಉದಾಹರಣೆಯೆಂದರೆ, "1944 ರಿಂದ 1970ರವರೆಗೆ 6.4 ಕೋಟಿ ಪೌಂಡ್‌ನಷ್ಟು ವಿಷಕಾರಿ ಅನಿಲಗಳನ್ನು ರಹಸ್ಯವಾಗಿ ಸಾಗರಕ್ಕೆ ಎಸೆದಿದ್ದೇವೆ" ಎಂದು ಅಮೆರಿಕದ ಸೈನ್ಯ ಒಪ್ಪಿಕೊಂಡಿದೆ. ಅದರಲ್ಲಿ 4 ಲಕ್ಷ ರಾಸಾಯನಿಕ ತುಂಬಿದ ಬಾಂಬ್ ಆಗಿದ್ದರೆ, 500 ಟನ್ಗಿಂತ ಹೆಚ್ಚು ರೇಡಿಯೋ ಆಕ್ಟಿವ್ ತ್ಯಾಜ್ಯವಾಗಿದೆ.
7. ಬರ್ಮುಡಾ ಟ್ರಯಾಂಗಲ್, ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಸಡಿಲವಾಗಿ ವ್ಯಾಖ್ಯಾನಿಸಲಾದ ತ್ರಿಕೋನ ಪ್ರದೇಶವಾಗಿದೆ. ಅಲ್ಲಿ ಹಲವಾರು ವಿಮಾನಗಳು ಮತ್ತು ಹಡಗುಗಳು ನಿಗೂಢ ಸಂದರ್ಭಗಳಲ್ಲಿ ಕಣ್ಮರೆಯಾಗಿವೆ ಎಂದು ಹೇಳಲಾಗುತ್ತದೆ. ನಾವು ಇನ್ನೂ ಈ ಪ್ರದೇಶವನ್ನು ಅನ್ವೇಷಿಸಲು ಸಾಧ್ಯವಾಗಿಲ್ಲ. ಆದರೂ ಇಲ್ಲಿ ಹಡಗು ಕಾಣೆಯಾಗಲು ರಾಕ್ಷಸ ಅಲೆಗಳು ಕಾರಣವೆಂದು ಕೆಲವರು ತಿಳಿಸಿದ್ದಾರೆ.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ
Explore all our Posts by categories.
Info Mind 2582
Info Mind 5276
See all comments...