Website designed by @coders.knowledge.

Website designed by @coders.knowledge.

Amazing facts about India | ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳು

Watch Video

ಭಾರತವು ಅದ್ಭುತ ಸಂಸ್ಕೃತಿ, ಸಂಪ್ರದಾಯ, ಧರ್ಮ, ಭಾಷೆ, ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಭಾರತವನ್ನು "ಇನ್ಕ್ರೆಡಿಬಲ್ ಇಂಡಿಯಾ" ಎಂದು ಕರೆಯಲಾಗುತ್ತದೆ! ಭಾರತವೆಂದರೆ ಮಾನವ ಜನಾಂಗದ ತೊಟ್ಟಿಲು, ಮಾನವ ಮಾತಿನ ಜನ್ಮಸ್ಥಳ, ಇತಿಹಾಸದಲ್ಲಿ ತಾಯಿ, ದಂತಕತೆಯಲ್ಲಿ ಅಜ್ಜಿ ಮತ್ತು ಸಂಪ್ರದಾಯದಲ್ಲಿ ಮುತ್ತಜ್ಜಿಯಾಗಿದೆ.

1. ಜಗತ್ತಿನ ಅತ್ಯಂತ ಹಳೆಯ ಜನವಸತಿ ನಗರ.

ವಿಶ್ವದ ಅತ್ಯಂತ ಹಳೆಯ ಜನವಸತಿ ನಗರ ವಾರಣಾಸಿಯಾಗಿದೆ. ಭಗವಾನ್ ಬುದ್ಧ ಇಲ್ಲಿಗೆ ಕ್ರಿ.ಪೂ 500ರ ಆಸುಪಾಸಿಗೆ ಭೇಟಿ ನೀಡಿದ್ದರು, ಹೀಗಾಗಿ ಇದು ಪ್ರಾಚೀನ ನಗರವಾಗಿದೆ. ವಾರಾಣಸಿ ಹಿಂದೂ ಮತ್ತು ಬೌದ್ಧರ ಪವಿತ್ರ ನಗರವಾಗಿದ್ದು, 5000 ವರ್ಷಗಳ ಹಿಂದಿನಿಂದ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿ ನೆಲೆಸಿದೆ ಎಂದು ವದಂತಿ ಹೇಳುತ್ತದೆ. ಆಧುನಿಕ ಸಂಶೋಧಕರು ಇದು 3000 ವರ್ಷಗಳ ಹಿಂದೆ ಮಾತ್ರ ಇತ್ತು ಎಂದು ಹೇಳಿದ್ದಾರೆ.

ಇದನ್ನು ಓದಿ: ಕರ್ನಾಟಕದ ಮೇಲೆ ಎಂಟು ಆಸಕ್ತಿದಾಯಕ ಸಂಗತಿಗಳು

2. ಅತ್ಯಂತ ಹಳೆಯ ನಿರಂತರ ನಾಗರಿಕತೆ.

oldest civilization india in kannada
Oldest Civilization

ಭಾರತವು ಜಗತ್ತಿನ ಅತ್ಯಂತ ಹಳೆಯ ನಿರಂತರ ನಾಗರಿಕತೆಯಾಗಿದೆ. ಭಾರತೀಯ ಸಬ್ ಕಾಂಟಿನೆಂಟ್ನಲ್ಲಿ ಹೋಮೋನಿಡ್ ಚಟುವಟಿಕೆಯು 2,50,000 ವರ್ಷಗಳ ಹಿಂದೆಯೇ ವ್ಯಾಪಿಸಿದೆ. ಆದ್ದರಿಂದ ಇದು ಭೂಮಿಯ ಅತ್ಯಂತ ಹಳೆಯ ಜನವಸತಿ ಪ್ರದೇಶವಾಗಿದೆ.

3. ಸಿಂಧೂ ನದಿ.

sindu river in kannada
Sindu River

ಸಿಂಧೂ ನದಿ ಏಷ್ಯಾದ ಪ್ರಮುಖ ನದಿಯಾಗಿದ್ದು. ಚೀನಾ, ಪಾಕಿಸ್ತಾನ ಮತ್ತು ಭಾರತದ ಮೂಲಕ ಹರಿಯುತ್ತದೆ. ಭಾರತ ಎಂಬ ಹೆಸರು ಸಿಂಧೂ ನದಿಯಿಂದ ಬಂದಿದೆ. ಕ್ರಿ.ಶ. 2ನೇ ಶತಮಾನದಲ್ಲಿ ಗ್ರೀಕ್ ಲೂಸಿಯಾನ್ ಮೊದಲ ಬಾರಿಗೆ "ಭಾರತ" ಎಂಬ ಪದವನ್ನು ಬರೆದರು.

ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳು

4. ತುಂಬಾ ಇಂಗ್ಲಿಷ್ ಮಾತನಾಡುವ ಜನರು.

ಯುಎಸ್ಎ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಇಂಗ್ಲಿಷ್ ಮಾತನಾಡುವ ಜನರು ಭಾರತದವರಾಗಿದ್ದಾರೆ. ಭಾರತದಲ್ಲಿ 12.5 ಕೋಟಿಯಷ್ಟು ಜನರು ಇಂಗ್ಲಿಷ್ ಮಾತನಾಡುತ್ತಾರೆ. ಇದು ಭಾರತದ ಜನಸಂಖ್ಯೆಯಲ್ಲಿ 10% ಆಗಿದೆ. ಭಾರತದ 22 ಅಧಿಕೃತ ಭಾಷೆಗಳಲ್ಲಿ ಇಂಗ್ಲಿಷ್ ಒಂದಾಗಿದೆ.

5. ಭಾರತ ಒಂದು ದ್ವೀಪವಾಗಿತ್ತು.

mount everest in kannada
Mount Everest

ಭಾರತ ದ್ವೀಪವಾಗಿತ್ತು ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಸುಮಾರು ಹತ್ತು ಕೋಟಿ ವರ್ಷಗಳ ಹಿಂದೆ ಭಾರತ ದ್ವೀಪವಾಗಿತು. ಸುಮಾರು ಐದು ಕೋಟಿ ವರ್ಷಗಳ ಹಿಂದೆ ಭಾರತ ಖಂಡ ಏಷ್ಯಾದೊಂದಿಗೆ ಡಿಕ್ಕಿ ಹೊಡೆದು ಜಗತ್ತಿನ ಎತ್ತರದ ಪರ್ವತವಾದ ಹಿಮಾಲಯವನ್ನು ಸೃಷ್ಟಿಸಿತು.

6. ಖಾರಿ ಬಾವೋಲಿ.

ಖಾರಿ ಬಾವೋಲಿ ಹಳೆಯ ದೆಹಲಿಯಲ್ಲಿರುವ ಅತಿದೊಡ್ಡ ಮಸಾಲೆ ಮಾರುಕಟ್ಟೆಯಾಗಿದೆ. ಈಗಿನ ಸಮಯದಲ್ಲಿ ಅದು ಲೋಕಲ್ ಮಾರ್ಕೆಟ್ ಆಗಿದೆ. ಆದರೆ, ಈ ಮಸಾಲೆ ಮಾರುಕಟ್ಟೆ 400 ವರ್ಷಗಳಿಗಿಂತ ಹಳೆಯದ್ದು. ಇಲ್ಲಿ ನಿಮಗೆ ತುಂಬಾ ಮಸಾಲೆ ಪದಾರ್ಥಗಳು ಸಿಗುತ್ತವೆ. ವಿಶ್ವದ ಎಲ್ಲ ಮಸಾಲೆಗಳಲ್ಲಿ ಸುಮಾರು 70% ಭಾರತದಿಂದ ಎಕ್ಸ್ಪೋರ್ಟ್ ಆಗುತ್ತದೆ.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

7. ಭಾರತ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ.

india map in kannada
India Map

ಭಾರತ ತನ್ನ ಕೊನೆಯ ಒಂದು ಲಕ್ಷ ವರ್ಷಗಳ ಇತಿಹಾಸದಲ್ಲಿ ಯಾವುದೇ ದೇಶವನ್ನು ಆಕ್ರಮಿಸಿಲ್ಲ. ಈಗಿನ ಸಮಯದಲ್ಲಿ ಜನರು ಅದು ಸತ್ಯವಲ್ಲವೆಂದು ವಾದಿಸುತ್ತಾರೆ. ಭಾರತ ಮಾನವ ಕುಲದ ಇತಿಹಾಸದಲ್ಲಿ ಅತ್ಯಂತ ಶಾಂತಿಯುತ ರಾಷ್ಟ್ರಗಳಲ್ಲಿ ಒಂದಾಗಿದೆ.

8. ಕುಂಭಮೇಳ ಉತ್ಸವ.

kumba mela in kannada
Kumba Mela

ಕುಂಭಮೇಳ ಉತ್ಸವವು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವವಾಗಿದೆ. 2013ರಲ್ಲಿ ಹತ್ತು ಕೋಟಿ ಜನರು ಈ ಉತ್ಸವಕ್ಕೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ. ಈ ಉತ್ಸವವು ಕ್ರಿ.ಶ. 644ರ ಉಲ್ಲೇಖದಲ್ಲಿದ್ದು ಬಹಳ ಪ್ರಾಚೀನವಾಗಿದೆ.

ಬೋನಸ್

# ಹೆಚ್ಚು ಸಸ್ಯಾಹಾರಿಗಳು.

ಸಸ್ಯಹಾರ ಬೇರುಗಳು ಸಾಮಾನ್ಯವಾಗಿ ಪ್ರಾಚೀನ ಭಾರತದ ಜನರೊಂದಿಗೆ ಸಂಬಂಧ ಹೊಂದಿವೆ. ಜಗತ್ತಿನ 70% ಸಸ್ಯಾಹಾರಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂದರೆ ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚಿನ ಸಸ್ಯಾಹಾರಿಗಳು ಭಾರತದಲ್ಲೇ ಇದ್ದಾರೆ.

Mahithi Thana

More by this author

Similar category

Explore all our Posts by categories.

No Comments