Website designed by @coders.knowledge.

Website designed by @coders.knowledge.

Beat the Market with this Simple Strategy | ಈ ಸರಳ ತಂತ್ರದ ಮೂಲಕ ಮಾರುಕಟ್ಟೆಯನ್ನು ಸೋಲಿಸಿ

Watch Video

ನೀವು ಹೂಡಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ಇಟ್ಟುಕೊಂಡಿದ್ದಾರೆ, ಪೀಟರ್ ಲಿಂಚ್ ಅವರ ಹೆಸರನ್ನು ಕೇಳಿರುತ್ತೀರಿ. ಪೀಟರ್ ಲಿಂಚ್ ಅಮೆರಿಕದ ಲೇಖಕ, ಹೂಡಿಕೆದಾರ ಮತ್ತು ಮ್ಯೂಚುಯಲ್ ಫಂಡ್ ಮ್ಯಾನೇಜರ್ ಆಗಿದ್ದಾರೆ. ಇವರನ್ನು ಇತಿಹಾಸದ ಅತ್ಯುತ್ತಮ ಮ್ಯೂಚುಯಲ್ ಫಂಡ್ ಮ್ಯಾನೇಜರ್ ಎನ್ನಲಾಗುತ್ತದೆ. ಇವರು 1977 ರಿಂದ 1990 ರವರೆಗೆ ಮೆಗಲನ್ ಫಂಡನ್ನು ಫಂಡ್ ಮ್ಯಾನೇಜರ್ ಆಗಿ ನಿರ್ವಹಿಸಿದರು ಮತ್ತು ಈ 13 ವರ್ಷಗಳಲ್ಲಿ ಈ ಫಂಡ್ 29.2 ರಷ್ಟು CAGR ರಿಟರ್ನ್ ನೀಡಿದೆ.

ಇದಿಷ್ಟೇ ಅಲ್ಲದೆ ಇವರು ಅನೇಕ ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ. ಅವೆಂದರೆ "one upon wall street", "betting the street", "learn to earn". ಇಂದು ಈ ಲೇಖನದಲ್ಲಿ ನಾವು ಪೀಟರ್ ಲಿಂಚ್ ಅವರ ಒಂದು ಇಂಟರ್ವ್ಯೂ clip ನೋಡಿ, ಅದರಲ್ಲಿರುವ ಹೂಡಿಕೆಯ ಕಲಿಕೆಯ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

1. ಕಲಿಕೆ 1.

what to see in company balance sheet for stock purchase in kannada
company earnings

ಪೀಟರ್ ಲೈಂಚ್ ಮೊದಲನೇ ಕ್ಲಿಪ್ನಲ್ಲಿ ಯಾವುದೇ ಕಂಪನಿಯ ವ್ಯಾಪಾರ ಕಾರ್ಯಕ್ಷಮತೆ(business performance) ಮತ್ತು ಅದರ ಆಧಾರವಾಗಿರುವ(underlying) ವ್ಯಾಪಾರ ಕಾರ್ಯಕ್ಷಮತೆಯಲ್ಲಿ ಶೇಕಡ ನೂರರಷ್ಟು ಪರಸ್ಪರ ಸಂಬಂಧ ಇರುತ್ತದೆ ಎಂದು ತಿಳಿಸಿದ್ದಾರೆ. ಒಂದು ಕಂಪನಿಯ ಗಳಿಕೆ, ನಿವ್ವಳ ಲಾಭ, ಹಣಕಾಸಿನ ಸ್ಥಿತಿಯು ವರ್ಷವು ಹೆಚ್ಚುತ್ತಿದ್ದರೆ ಅದರ ಸ್ಟಾಕ್‌ ಒಳ್ಳೆಯದಾಗಿದ್ದು, ನೀವು ಅಧಿಕ ರಿಟರ್ನ್‌ ಗಳಿಸಬಹುದು.

ಸಾಮಾನ್ಯವಾಗಿ ಹೂಡಿಕೆದಾರರಾದ ನಾವು ಕಂಪನಿಯ ಗಳಿಕೆ(earnings) ಬಿಟ್ಟು ಇತರ ಅನುಪಾತಗಳ ಮೇಲೆ ಹೆಚ್ಚು ಪ್ರಭಾವಿತರಾಗುತ್ತೇವೆ. ಉದಾಹರಣೆಗೆ ತೈಲ ಬೆಲೆ, ರಾಜಕೀಯ ಅಂಶಗಳು, ಹಣ ಪೂರೈಕೆ, ಜಾಗತಿಕ ತಾಪಮಾನ ಇತ್ಯಾದಿ. ಆದರೆ ಕಂಪನಿಯ ಸ್ಟಾಕ್ 5 ರಿಂದ 10 ವರ್ಷದಷ್ಟು ಚೆನ್ನಾಗಿದ್ದರೆ ಅದು ಮುಂದೆಯೂ ಚೆನ್ನಾಗೇ ಇರುತ್ತದೆ. ಅಲ್ಪಾವಧಿಯಲ್ಲಿ ಈ ಎಲ್ಲಾ ಅಂಶಗಳು(factors) ಒಂದು ಪ್ರಭಾವ ತೋರಿಸಬಹುದು. ಆದರೆ ನೀವು ಈ ಅಂಶಗಳು ನಿಮ್ಮ ನಿಯಂತ್ರಣದಲ್ಲಿ ಇದೆಯೇ ಎಂಬುದನ್ನು ತಿಳಿಯಬೇಕು.

ನೀವು ಇವುಗಳನ್ನು ಊಹಿಸಬಹುದೇ, ಇದರಿಂದ ಆ ಕಂಪನಿಯ ವ್ಯಾಪಾರದ ಮೇಲೆ ನಕಾರಾತ್ಮಕ ಪ್ರಭಾವ(negetive impact) ಆಗುತ್ತದೆಯೇ. ಒಂದು ವೇಳೆ ಇದರ ಉತ್ತರ ಇಲ್ಲವಾಗಿದ್ದಲ್ಲಿ, ಬಲವಾದ ಮತ್ತು ಗುಣಮಟ್ಟ ಕಂಪನಿಗಳನ್ನು ಹುಡುಕಿ, ನಿಮ್ಮ ಹಣವನ್ನು ಹೂಡಿಕೆ ಮಾಡಬೇಕು. ಆ ಕಂಪನಿಯ ಗಳಿಕೆ ಮತ್ತು ಬೆಳವಣಿಗೆಯ ಸಂಭಾವ್ಯ ಧನಾತ್ಮಕವಾಗಿರಬೇಕು.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

2. ಕಲಿಕೆ 2.

circle of competence explained by peter lynch in kannada
circle of competence

ಎರಡನೇ ಕ್ಲಿಪ್ನಲ್ಲಿ ಪೀಟರ್ ಲಿಂಚ್ ಅವರು ತುಂಬಾ ಸಾಮಾನ್ಯ ಆದರೆ ನಿರ್ಣಾಯಕ(critical) ವಿಷಯದ ಬಗ್ಗೆ ತಿಳಿಸಿದ್ದಾರೆ. ಅದುವೇ ಸಾಮರ್ಥ್ಯದ ವಲಯ(circle of competence). ಇದನ್ನು ಸುಲಭವಾಗಿ ನಿಮ್ಮ ಸುತ್ತಮುತ್ತಲಿನ ಕಂಪನಿ ಎಂದುಕೊಳ್ಳಿ. ಪೀಟರ್ ಲಿಂಚ್ ಮತ್ತು ಇತರ ಅನೇಕ ಹೂಡಿಕೆದಾರರು, ನೀವು ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.

ನೀವು ಹೂಡಿಕೆಯಿಂದ ವಿಪರೀತ(extreme) ರಿಟರ್ನ್‌ ಪಡೆಯಲು ಕೇವಲ 3 ರಿಂದ 4 ಸ್ಟಾಕ್ ಸಾಕಾಗಿದೆ. ಆ ಸ್ಟಾಕ್ ನಿಮಗೆ ದೀರ್ಘಾವಧಿಯಲ್ಲಿ ಅಧಿಕ ರಿಟರ್ನ್‌ ನೀಡುವಂತಿರಬೇಕು. ಹೀಗಾಗಿ ನೀವು ಹೂಡಿಕೆ ಮಾಡಲು ಬಯಸಿದರೆ ನಿಮಗೆ ಅರ್ಥವಾಗುವ ಇಂಡಸ್ಟ್ರಿಯ ಕಂಪನಿಯಲ್ಲಿ ಹೂಡಿಕೆ ಮಾಡಿ. ಅಂದರೆ ನಿಮ್ಮ ಸಾಮರ್ಥ್ಯದ ವಲಯದಲ್ಲಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಿ.

ಉದಾಹರಣೆಗೆ ನೀವು ಫಾರ್ಮಾ ಅಂದರೆ ಔಷಧಿಯಲ್ಲಿ ಕೆಲಸ ಮಾಡುತ್ತಿದ್ದರೆ. ಆ ಇಂಡಸ್ಟ್ರಿಯ ಬಗ್ಗೆ ನೀವು ಅಧಿಕ ತಿಳಿದಿರುತ್ತೀರಿ. ನಿಮಗೆ ಫಾರ್ಮ ಕಂಪನಿ ಹೇಗೆ ನಡೆಯುತ್ತದೆ, ಅದರ ಗಳಿಕೆ ಯಾವ ಯಾವ ರೀತಿ ಆಗುತ್ತದೆ ಮತ್ತು ಯಾವ ಕಂಪನಿ ಇದರಲ್ಲಿ ಮುಂದುವರಿಯಲಿದೆ ಎಂಬುದು ತಿಳಿದಿರುತ್ತದೆ. ಹೀಗಾಗಿ ನಿಮ್ಮ ಹತ್ತಿರ ಫಂಡ್ ಮ್ಯಾನೇಜರ್‌ಗಳಿಗಿಂತ ತಿಳಿದಿರುವ ಅನೇಕ ವಿಷಯಗಳಿವೆ ಮತ್ತು ಇದನ್ನು ನೀವು ವ್ಯರ್ಥ ಮಾಡಿಕೊಳ್ಳಬಾರದು. ಹೀಗಾಗಿ ನಿಮ್ಮ ವಲಯದಲ್ಲಿರುವ(sector) ಒಂದು ಒಳ್ಳೆಯ ಕಂಪನಿಯಲ್ಲಿ ಹೂಡಿಕೆ ಮಾಡಿ.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

3. ಕಲಿಕೆ 3.

trading or investing which is better by peter lynch in kannada
decipline investor

ಮೂರನೇ ಕ್ಲಿಪ್ ನಲ್ಲಿ ಪೀಟರ್ ಲಿಂಚ್ ಅವರು ಹೂಡಿಕೆದಾರರು ಸಾಮಾನ್ಯವಾಗಿ ಮಾಡುವ ತಪ್ಪಿನ ಬಗ್ಗೆ ತಿಳಿಸುತ್ತಿದ್ದಾರೆ. ನೀವು ಈ ತಪ್ಪನ್ನು ಸರಿ ಮಾಡಿಕೊಂಡರೆ ಹೂಡಿಕೆಯಿಂದ ಒಂದು ಒಳ್ಳೆಯ ರಿಟರ್ನ್ ಪಡೆಯಬಹುದು.

ನಾವು ಯಾವುದೇ ವಸ್ತುಗಳನ್ನು ಖರೀದಿಸಿದರೆ, ಉದಾಹರಣೆಗೆ ಮೊಬೈಲ್ ಫೋನ್. ಅದನ್ನು ಇತರ ಮೊಬೈಲ್ ಫೋನ್ ಗಳ ಜೊತೆ ಹೋಲಿಸಿ(compare) ನೋಡಿ, ನಂತರ ಖರೀದಿಸುವ ನಿರ್ಧಾರ ಮಾಡುತ್ತೇವೆ. ಆದರೆ ಸ್ಟಾಕ್‌ನ ವಿಷಯದಲ್ಲಿ ನಾವು ಆ ರೀತಿ ಮಾಡುವುದಿಲ್ಲ. ನಾವು ಗೆಳೆಯರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಆಗುವ ಸಲಹೆಗಳ(tips) ಮೇಲೆ ಹೂಡಿಕೆ ಮಾಡುತ್ತೇವೆ. ಇದು ಅತಿದೊಡ್ಡ ತಪ್ಪಾಗಿದ್ದು, ಇದರ ಅನೇಕ ಅನನುಕೂಲತೆಗಳು(disadvantages) ಇದೆ.

ಇದರಿಂದ ನಾವು ಒಂದು ಕೆಟ್ಟ ಕಂಪನಿಯಲ್ಲಿ ಹೂಡಿಕೆ ಮಾಡುತ್ತೇವೆ. ಇದರಿಂದ ನಮ್ಮ ಕ್ಯಾಪಿಟಲ್ ಬೇಗನೆ ಏರುವುದಿಲ್ಲ ಮತ್ತು ಕಂಪನಿಯ ಬಿಸಿನೆಸ್ ಬಗ್ಗೆ ತಿಳಿಯದೆ ಅದರಲ್ಲಿ ಹೂಡಿಕೆ ಮಾಡುತ್ತಾ ಹೋದರೆ ನಾವು ಒಬ್ಬ ಶಿಸ್ತಿನ(disepline) ಹೂಡಿಕೆದಾರ ಆಗಲು ಸಾಧ್ಯವಾಗುವುದಿಲ್ಲ. ಷೇರು ಮಾರುಕಟ್ಟೆ ತುಂಬಾ ಬಾಷ್ಪಶೀಲ(volatile) ಆಗಿದ್ದು, ನಿಮ್ಮ ಸ್ಟಾಕ್ ಕೆಳಗೆ ಹೋದರೆ ನೀವು ಆತ್ಮವಿಶ್ವಾಸದಿಂದ ಇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಿಮಗೆ ನಿಮ್ಮ ಸ್ಟಾಕ್ ಕೆಳಗೆ ಹೋಗಲು ಏನು ಕಾರಣವೆಂದು ತಿಳಿಯುವುದಿಲ್ಲ.

ಇದರಿಂದ ನಿಮಗೆ ಏನು ಮಾಡಬೇಕೆಂದು ತಿಳಿಯದೆ ಗಾಬರಿಯಲ್ಲಿ ಸ್ಟಾಕ್‌ ಅನ್ನು ಮಾರುವ ನಿರ್ಧಾರ ತೆಗೆದುಕೊಳ್ಳುತ್ತೀರಾ. ಈ ತಪ್ಪನ್ನು ಅನೇಕ ಹೂಡಿಕೆದಾರರು ಮಾಡುತ್ತಾರೆ. ಹೀಗಾಗಿ ಅವರು ಕಾಂಪೌಂಡಿಂಗ್ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೀವು ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಅದರ ಬಗ್ಗೆ ವಿವರವಾಗಿ ತಿಳಿದುಕೊಂಡು ಹೂಡಿಕೆ ಮಾಡಿ.

ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

4. ಕಲಿಕೆ 4.

how to be simple in investing by peter lynch in kannada
do not complicate

ಇನ್ನು ನಾಲ್ಕನೇ ಕ್ಲಿಪ್ನಲ್ಲಿ ಪೀಟರ್ ಲಿಂಚ್ ಅವರು ನೀವು ಹೂಡಿಕೆಯನ್ನು ಎಷ್ಟು ಸುಲಭವಾಗಿ ಸರಳವಾಗಿ ನೋಡುತ್ತೀರೋ, ಅಷ್ಟೇ ಒಳ್ಳೆಯ ಹೂಡಿಕೆದಾರ ಆಗುತ್ತೀರಾ ಎಂದು ತಿಳಿಸಿದ್ದಾರೆ. ತಜ್ಞ(expert) ಹೂಡಿಕೆದಾರರ ಸಲಹೆಗಳಿಗಿಂತ, ಒಂದು ಶಿಸ್ತನ ಹೂಡಿಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ. ಷೇರು ಮಾರುಕಟ್ಟೆಯಲ್ಲಿ ಒಬ್ಬ ವ್ಯಕ್ತಿ ಹಣ ಕಳೆದುಕೊಂಡರೆ, ಇನ್ನೊಬ್ಬ ಹಣ ಗಳಿಸುತ್ತಾನೆ. ಹೀಗಾಗಿ ನೀವು ಇದನ್ನು ಸಂಕೀರ್ಣಗೊಳಿಸುವ(complicate) ಬದಲು ಬೇಸಿಕ್ ಮೇಲೆ ಗಮನಹರಿಸಿ.

ನೀವು ನಿಮ್ಮ ಸಾಮರ್ಥ್ಯದ ವಲಯದಲ್ಲಿರುವ ಒಳ್ಳೆಯ ಕಂಪನಿಯನ್ನು ಆರಿಸಿಕೊಂಡು, ಅದರಲ್ಲಿ ದೀರ್ಘಾವಧಿ ಹೂಡಿಕೆ ಮಾಡಿ. ಆದರೆ ಇದರಲ್ಲೂ ಕೆಲವು ಸಮಯದ ನಂತರ ನೀವು ಆರಿಸಿಕೊಂಡಿರುವ ಕಂಪನಿಯ ಆರ್ಥಿಕ ಸ್ಥಿತಿ ಬಗ್ಗೆ ನೋಡುತ್ತಿರಬೇಕು. ಪೀಟರ್ ಲಿಂಚ್ ಈ ಉದಾಹರಣೆ ನೀಡಿದ್ದಾರೆ, 1980ರ ದಶಕದಲ್ಲಿ ಅಮೇರಿಕಾದಲ್ಲಿ 8000ದಷ್ಟು ಇನ್ವೆಸ್ಟಿಂಗ್ ಕ್ಲಬ್ ಇದ್ದವು. ಈ ಕ್ಲಬ್‌ನಲ್ಲಿ ನಮ್ಮ ನಿಮ್ಮ ತರ ಸರಾಸರಿ ಹೂಡಿಕೆದಾರರು ತುಂಬಾ ಜನ ಇದ್ದರು. ಈ 8000 ಕ್ಲಬ್‌ನಲ್ಲಿ ಶೇಕಡಾ 62 ರಷ್ಟು ಕ್ಲಬ್‌ಗಳು 1980ರ ಮಾರುಕಟ್ಟೆಯನ್ನು ಸೋಲಿಸಿದವು(beat). ಆದರೆ ಕೇವಲ 25 ರಷ್ಟು ಪ್ರೊಫೆಷನಲ್ ಹೂಡಿಕೆದಾರರು ಮಾರುಕಟ್ಟೆಯನ್ನು ಆಗ ಸೋಲಿಸಿದರು.

ಹೀಗಾಗಿ ನೀವು ಹೂಡಿಕೆ ಮತ್ತು ಆರ್ಥಿಕ ಸ್ಥಿತಿ ನೋಡಿ ಹೆದರದೆ, ನಿಮ್ಮ ಸುತ್ತಮುತ್ತಲು ನೋಡಿದರೆ ನಿಮಗೆ ವರ್ಷದಿಂದ ವರ್ಷಕ್ಕೆ ವ್ಯಾಪಾರದಲ್ಲಿ ಏರಿಕೆ ಕಾಣುತ್ತಿರುವ ಅನೇಕ ಕಂಪನಿಗಳು ಕಾಣುತ್ತವೆ ಮತ್ತು ನಿಮ್ಮ ಬದುಕನ್ನು ಬದಲಾಯಿಸಲು ಈ ರೀತಿಯ ಕೇವಲ 3 ರಿಂದ 4ಸ್ಟಾಕ್ ಸಾಕಾಗಿದೆ.

ಈ ಲೇಖನದಲ್ಲಿ ಪೀಟರ್ ಲಿಂಚ್ ಅವರ ಕ್ಲಿಕ್ ಮೂಲಕ ನಾವು ಹೂಡಿಕೆಯ ತುಂಬಾ ಮೂಲ, ಆದರೆ ಅತ್ಯಂತ ಅವಶ್ಯಕವಾದ ವಿಷಯಗಳ ಬಗ್ಗೆ ತಿಳಿದುಕೊಂಡೆವು. ಈ ಕಲಿಕೆಯಲ್ಲಿ ನಿಮಗೆ ಯಾವುದು ಇಷ್ಟವಾಯಿತೆಂಬುದನ್ನು ಕಮೆಂಟ್ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.

Mahithi Thana

More by this author

Similar category

Explore all our Posts by categories.

No Comments