Website designed by @coders.knowledge.

Website designed by @coders.knowledge.

3 Best Electric Cycle Real Visit Review | ಮೂರು ಉತ್ತಮ ಎಲೆಕ್ಟ್ರಿಕ್‌ ಸೈಕಲ್‌ನ ನಿಜವಾದ ಸಮೀಕ್ಷೆ

Watch Video

ನಮಸ್ಕಾರ ಸ್ನೇಹಿತರೇ, ಇಂದು ನಾವು ಒಂದು ವಿಶೇಷವಾದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಇಂದು ಈ ಲೇಖನದಲ್ಲಿ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ಸೈಕಲ್ ಬಗ್ಗೆ ತಿಳಿಸಲಿದ್ದೇವೆ. ಎಲೆಕ್ಟ್ರಿಕ್ ಸೈಕಲ್ ಅನೇಕ ತರಹದಿದೆ. ಅವುಗಳಲ್ಲಿ 3 ತರಹದ್ದನ್ನು ಇದರಲ್ಲಿ ತಿಳಿಸಲಿದ್ದೇವೆ. ಇದಕ್ಕಾಗಿ "ಎನ್ವಿರೋ ಬೈಕ್ಸ್" ಎಂಬ ಅಂಗಡಿಗೆ ನಾವು ಭೇಟಿ ನೀಡಿದ್ದೇವೆ. "save fuel, save money" ಎಂಬ ವಾಕ್ಯದೊಂದಿಗೆ ನಾವು ಈ ಲೇಖನವನ್ನು ಪ್ರಾರಂಭಿಸುತ್ತಿದ್ದೇವೆ.

ನಾವು ಮೇಲೆ ತಿಳಿಸಿದಂತೆ 3 ತರಹದ ಎಲೆಕ್ಟ್ರಿಕ್ ಸೈಕಲ್ ಬಗ್ಗೆ ತಿಳಿಸುತ್ತೇವೆ. ಅದರಲ್ಲಿ ಮೊದಲನೇ ಸೈಕಲ್ ಸಾಧಾರಣ ಎಲೆಕ್ಟ್ರಿಕ್‌ ಸೈಕಲ್ ಆಗಿದೆ. ಎರಡನೇ ಸೈಕಲ್ ವ್ಯಾಪಾರ ವಹಿವಾಟುಗಳಿಗೆ ಸೂಕ್ತವಾಗಿದೆ. ಇನ್ನು ಮೂರನೇ ಸೈಕಲ್ ಸ್ವಲ್ಪ ಆಧುನಿಕವಾಗಿದ್ದು, ವಿಶೇಷ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಈ 3 ತರಹದ ಎಲೆಕ್ಟ್ರಿಕ್ ಸೈಕಲ್ ಬಗ್ಗೆ ತಿಳಿಯಲು ನೀವು ಉತ್ತೇಜನವಾಗಿರುತ್ತೀರಾ(excite). ಬನ್ನಿ ಅದರ ಬಗ್ಗೆ ಈಗ ನೋಡೋಣ.

ಇದನ್ನು ಓದಿ: ಕ್ರಿಕೆಟ್ ಬ್ಯಾಟ್ ಅನ್ನು ಹೇಗೆ ತಯಾರಿಸುತ್ತಾರೆ?

1. ಹೀರೋ ಎಲೆಕ್ಟ್ರೋ.

hero electro electric cycle review in kannada
hero electro basic cycle

ಹೀರೋ ಎಲೆಕ್ಟ್ರೋ(hero electro) ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 30 ರಿಂದ 35 ಕಿ.ಮೀನಷ್ಟು ಮೈಲೇಜ್ ನೀಡುತ್ತದೆ. 60 ಕೆಜಿಯಷ್ಟು ತೂಕದವರು ಇದನ್ನು ಓಡಿಸಬಹುದು. ಇದರ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಇದರ ಬಳಕೆಯನ್ನು ಸಾಮಾನ್ಯ ಜನರು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಇದರ ಬ್ಯಾಟರಿಗೆ 2 ವರ್ಷ ಗ್ಯಾರಂಟಿ ಇರುತ್ತದೆ.

ಇದು ಸೈಕಲ್ ಆದಕಾರಣ ಯಾವುದೇ ರೀತಿಯ ಲೈಸೆನ್ಸ್ ನ ಅಗತ್ಯವಿಲ್ಲ. ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಹಾಕಿಕೊಳ್ಳಿ ಎಂದು ನಾವು ಸಲಹೆ ನೀಡುತ್ತಿದ್ದೇವೆ. ಇದನ್ನು ಕೊಳ್ಳಲು ನಿಮಗೆ ಯಾವುದೇ ರೀತಿಯ ರೆಜಿಸ್ಟ್ರೇಷನ್ ಖರ್ಚು ಇರುವುದಿಲ್ಲ.

ಈ ಸೈಕಲ್ ಬಗ್ಗೆ ನಮ್ಮ ಅನಿಸಿಕೆ ಈ ರೀತಿ ಇದೆ. ನಾವು ಈ ಸೈಕಲನ್ನು ಮೊದಲ ಬಾರಿ ನೋಡಿ ಓಡಿಸಿದಾಗ, ಇದು ಸೈಕಲ್ ಮತ್ತು ಗಾಡಿಯ ಅನುಭವ ನೀಡಿತು. ಸೈಕಲ್‌ನಲ್ಲೂ ತಂತ್ರಜ್ಞಾನದ ಬಳಕೆ ನಮ್ಮನ್ನು ಸೆಳೆಯಿತು. ಇದರ ಕಂಟ್ರೋಲ್ ತುಂಬಾ ನಯವಾಗಿದೆ(smooth). ಎಲ್ಲಿ ಅನುಕೂಲಗಳು ಇರುತ್ತದೆಯೋ ಅಲ್ಲಿ ಅನಾನುಕೂಲಗಳು ಇರುತ್ತವೆ. ಹೀಗಾಗಿ ನೀವು ಈ ಎಲೆಕ್ಟ್ರಿಕ್‌ ಸೈಕಲ್ಲನ್ನು ಜಾಗರೂಕತೆಯಿಂದ ಬಳಸಬೇಕು. ನಿಮಗೆ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ಸೈಕಲ್ ಕೊಳ್ಳಬೇಕೆಂದಿದ್ದರೆ ಈ ಸಾಧಾರಣ ಎಲೆಕ್ಟ್ರಿಕ್‌ ಸೈಕಲ್ ನಿಮಗೆ ಸೂಕ್ತವಾಗಿದೆ.

ಇದನ್ನು ಓದಿ: ಸೋಮಾರಿ ವಿದ್ಯಾರ್ಥಿಗಳ ನಾಲ್ಕು ಪರಿಣಾಮಕಾರಿ ಅಧ್ಯಯನ ಸಲಹೆಗಳು

2. ಹೀರೋ ಎಲೆಕ್ಟ್ರೋ ವಿನೆಕ್ಸ್.

hero electro winnex electric cycle review in kannada
hero electro winnex

ಹೀರೋ ಎಲೆಕ್ಟ್ರೋ ವಿನೆಕ್ಸ್(hero electro winnex) ಇದು ಮೊದಲ ಸರಕು(cargo) ಎಲೆಕ್ಟ್ರಿಕ್ ಸೈಕಲ್ ಆಗಿದೆ. ಈ ಸೈಕಲ್ ಸಣ್ಣ ವ್ಯಾಪಾರ ವಹಿವಾಟಿಗೆ ಹೆಚ್ಚು ಸೂಕ್ತವಾಗಿದೆ. ಏಕೆಂದರೆ ಇದರ ಹಿಂದೆ ನಿಮ್ಮಗೆ ಅತಿದೊಡ್ಡ ಕ್ಯಾರಿಯರ್ ಸಿಗುತ್ತದೆ. ಈ ಕ್ಯಾರಿಯರ್ 60 ರಿಂದ 80 ಕೆಜಿ ತೂಕದಷ್ಟು ಸಾಮರ್ಥ್ಯವನ್ನು ಹೊಂದಿದೆ. ಈ ಕ್ಯಾರಿಯರ್ ಮೂಲಕ ನೀವು ತರಕಾರಿ, ಚಿಕ್ಕ ಪುಟ್ಟ ವಸ್ತುಗಳು, ಡೈರಿ ವಸ್ತುಗಳನ್ನು ಸಾಗಿಸಬಹುದು. ಈ ಎಲೆಕ್ಟ್ರಿಕ್ ಸೈಕಲ್ ಪರಿಸರ ಸ್ನೇಹಿ ಅಷ್ಟೇ ಅಲ್ಲದೆ ವ್ಯಾಪಾರಕ್ಕೂ ತುಂಬಾನೇ ಸಹಕಾರಿಯಾಗಿದೆ.

ಇನ್ನೂ ಇದರ ಚಾರ್ಜಿಂಗ್ ಸಿಸ್ಟಂ ಬಗ್ಗೆ ತಿಳಿಯೋಣ. ಇದು ಲಿಥಿಯಂ ಅಯಾನ್ ಬ್ಯಾಟರಿ ಹೊಂದಿದೆ. ಇದನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 45 ರಿಂದ 50 ಕಿ.ಮೀನಷ್ಟು ಮೈಲೇಜ್ ಕೊಡುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದು ಪೂರ್ತಿ ಚಾರ್ಜ್ ಆಗಲು 8 ರಿಂದ 10 ಗಂಟೆ ತೆಗೆದುಕೊಳ್ಳುತ್ತದೆ. ಇದರ ವೇಗ ಗಂಟೆಗೆ 25 ಕಿ.ಮೀ ಇರುವುದರಿಂದ ವೇಗವಾಗಿ ನಿಮ್ಮ ಕಾರ್ಯವನ್ನು ಮುಗಿಸಬಹುದು. ಈ ಸೈಕಲ್‌ನ ಬ್ಯಾಟರಿಯನ್ನು ನೀವು ಅದರಿಂದ ತೆಗೆದು ಚಾರ್ಜ್ ಮಾಡಬಹುದು ಮತ್ತು ತೆಗೆಯದೆಯು ಚಾರ್ಜ್ ಮಾಡಬಹುದು. ಇದರ ಮುಂದಿನ ಚಕ್ರ "mechanical disk break" ಅನ್ನು ಹೊಂದಿದೆ. ಇನ್ನೂ ಹಿಂದಿನ ಚಕ್ರ "dram break system" ಒಳಗೊಂಡಿದೆ. ಇದರ ಬ್ರೇಕ್ ಬಗ್ಗೆ ತಿಳಿಯಲು, ನೀವು ವಿಡಿಯೋ ನೋಡುವುದು ಸೂಕ್ತವಾಗಿದೆ.

ಈ ಸೈಕಲ್ ಮೇಲಿನ ನಮ್ಮ ಅಭಿಪ್ರಾಯ ತಿಳಿಸಬೇಕೆಂದರೆ ಈ ರೀತಿ ಇದೆ. ಇದನ್ನು ಓಡಿಸಿದಾಗ ಇದು ಸೈಕಲ್ ಕಡಿಮೆ ಟಿವಿಎಸ್ ಎಕ್ಸೆಲನ ಅನುಭವ ನೀಡಿತು. ಆದರೆ ಅದಕ್ಕೆ ಹೋಲಿಸಿದರೆ ಇದಕ್ಕೆ ಕಡಿಮೆ ಖರ್ಚು ಮಾಡುತ್ತೇವೆ. ಕೇವಲ 8 ರೂಪಾಯಿ ಖರ್ಚು ಮಾಡಿ, ಈ ಸೈಕಲ್‌ನಿಂದ 45 ರಿಂದ 50 ಕಿ.ಮೀ. ನಷ್ಟು ಸಾಗಬಹುದು. ವಿತರಣೆ(delivery) ತರಹದ ಕೆಲಸ ಮಾಡುವವರಿಗೆ ಈ ಸೈಕಲ್ ಸೂಕ್ತವಾಗಿದೆ ಎಂಬುದು ನಮ್ಮ ಅನಿಸಿಕೆ.

ಇದನ್ನು ಓದಿ: ಬ್ಲೂ ಸ್ಕೈ ಕ್ರಿಸ್ಟಾ ಎಲೆಕ್ಟ್ರಿಕ್ ಸ್ಕೂಟರಿನ ವಿಮರ್ಶೆ

3. ಹೀರೋ ಎಲೆಕ್ಟ್ರೋ(Advanced).

advanced hero electro cycle review in kannada
hero electro(advanced)

ನೀವು ಆಧುನಿಕ ಮತ್ತು ತಂತ್ರಜ್ಞಾನವನ್ನು ಒಳಗೊಂಡ ಎಲೆಕ್ಟ್ರಿಕ್ ಸೈಕಲ್ ಹುಡುಕುತ್ತಿದ್ದರೆ, ಈ ಎಲೆಕ್ಟ್ರಿಕ್ ಸೈಕಲ್ ನಿಮಗೆ ಸೂಕ್ತವಾಗಿದೆ. ಇದರಲ್ಲಿ ಹಾಟ್ಸ್ಪಾಟ್(hotspot) ತಂತ್ರಜ್ಞಾನವನ್ನು ಒಳಗೊಂಡ ಲಾಕಿಂಗ್ ಸಿಸ್ಟಂ ಇದೆ. ಈ ಸೈಕಲ್ ಸಾಧಾರಣ ಎಲೆಕ್ಟ್ರಿಕ್ ಸೈಕಲ್‌ಗಿಂತ ಅಡ್ವಾನ್ಸ್ ಆಗಿದ್ದು, ಅದಕ್ಕಿಂತ ದೊಡ್ಡದಾಗಿ ಕಾಣುತ್ತದೆ. ಈ ಸೈಕಲ್‌ನ ವಿಶೇಷತೆ ಏನೆಂದರೆ ಇದರಲ್ಲಿ ಗೇರ್(gear) ಸಿಸ್ಟಮ್ ಇದೆ. ರಾತ್ರಿ ಸೈಕಲನ್ನು ಓಡಿಸಲು ನೆರವಾಗಲು ಹೆಡ್ ಲೈಟ್ ಅನ್ನು ಒಳಗೊಂಡಿದೆ.

ಇದರ ಬ್ಯಾಟರಿಗೆ 2 ವರ್ಷ ಗ್ಯಾರಂಟಿಯಿದ್ದು, ಪ್ರತಿ ಗಂಟೆಗೆ 25 ರಿಂದ 27 ಕಿ.ಮೀ.ನಷ್ಟು ವೇಗದಲ್ಲಿ ಚಲಿಸುತ್ತದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಲು ಇದು 4 ಗಂಟೆ ತಗೆದುಕೊಳ್ಳುತ್ತದೆ. ಪೂರ್ತಿ ಚಾರ್ಜ್ ಮಾಡಿದ ನಂತರ ಇದು 30 ಕಿ.ಮೀ.ನಷ್ಟು ಮೈಲೇಜನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಚಾರ್ಜಿಂಗ್ ಕೆಪಾಸಿಟಿ 36 ವ್ಯಾಟ್ ಇದೆ, ಹೀಗಾಗಿ ಇದರ ಜೊತೆ ಅಡಾಪ್ಟರ್ ಕೂಡ ಸಿಗುತ್ತದೆ.

ಈ ಸೈಕಲ್ ಬಗ್ಗೆ ನಮ್ಮ ಅನಿಸಿಕೆ ಈ ರೀತಿ ಇದೆ. ಇತರ 3 ಸೈಕಲ್‌ಗೆ ಹೋಲಿಸಿದರೆ. ಈ ಸೈಕಲ್ ತುಂಬಾನೇ ಅಡ್ವಾನ್ಸ್ ಇದೆ. ಒಮ್ಮೆ ನೋಡಿದರೆ ಖರೀದಿಸಬೇಕೆನ್ನಿಸುವ ಎಲೆಕ್ಟ್ರಿಕ್‌ ಸೈಕಲ್ ಇದಾಗಿದೆ. ಹಾಟ್ಸ್ಪಾಟ್ ಲಾಕ್ ಹೊಂದಿರುವುದರಿಂದ ಅಧಿಕ ಸುರಕ್ಷತೆಯನ್ನು ಹೊಂದಿದೆ. ಇದರ ಗೇರ್ ಸಿಸ್ಟಮ್ ತುಂಬಾ ಉಪಯುಕ್ತವಾಗಿದೆ.

ಇದಾಗಿತ್ತು 3 ಎಲೆಕ್ಟ್ರಿಕ್ ಸೈಕಲ್‌ನ ವಿವರ. ಈ ವೀಡಿಯೋವನ್ನು ಮಾಡಲು ಈ ಅಂಗಡಿಯ ಮಾಲೀಕರು ತುಂಬಾ ಸಹಕರಿಸಿದರು ಮತ್ತು ಈ ವೀಡಿಯೋ ನೋಡಿಕೊಂಡು ಬಂದವರಿಗೆ ರಿಯಾಯಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಈ ರಿಯಾಯಿತಿ ಮೇಲಿನ ಸಂಪೂರ್ಣ ವಿವರದ ಬಗ್ಗೆ ತಿಳಿಯಲು ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೋ ನೋಡಿ.

ಇದನ್ನು ನೋಡಿ: https://youtu.be/GNktwtSYjzs

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments