Website designed by @coders.knowledge.

Website designed by @coders.knowledge.

"Can't Hurt Me" Book Summary by David Goggins | "Can't Hurt Me" ಪುಸ್ತಕದ ಸಾರಾಂಶ

Watch Video

ಹೃದಯದಲ್ಲಿ ರಂದ್ರವಿದ್ದು 2 ಬಾರಿ ಹೃದಯದ(heart) ಸರ್ಜರಿ ಆಗಿದ್ದರು ಡೇವಿಡ್ ಗಾಗಿನ್ಸ್(david goggins) ಅವರನ್ನು ಜಗತ್ತಿನ ಅತ್ಯಂತ ಕಠಿಣ ವ್ಯಕ್ತಿ(toughest man) ಎಂದು ಕರೆಯಲಾಗುತ್ತದೆ. ಏಕೆಂದರೆ ಇವರು 17 ಗಂಟೆಯಲ್ಲಿ 4,030 ಪುಲ್‌ಅಪ್‌ಗಳನ್ನು(pullups) ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್(guinness world record) ಮಾಡಿದ್ದಾರೆ. ಇವರು ಜಗತ್ತಿನ ಕಠಿಣಕಾರ ಮತ್ತು ಕಷ್ಟವಿರುವ ಸ್ನಾನದ ನೀರಿನ ಓಟದಲ್ಲಿ(badwater race) 217 ಕಿಮೀನಷ್ಟು ಓಡಿದ್ದಾರೆ. ಇವರು ನೌಕಾಪಡೆಯ ಮುದ್ರೆಯ(navy seal) ಭಾಗವೂ ಆಗಿದ್ದು, ಜಗತ್ತಿನ ಕಠಿಣ ಮಿಲಿಟರಿ ತರಬೇತಿಯಲ್ಲಿ ಒಂದಾದ ಹೆಲ್ ವೀಕ್ ಟ್ರೈನಿಂಗ್(hell week training) ಅನ್ನು ಒಮ್ಮೆ ಅಲ್ಲ ಬದಲಿಗೆ 3 ಬಾರಿ ಪೂರ್ಣ ಮಾಡಿದ್ದಾರೆ. ಇವರ ಕಥೆಯು ಇಲ್ಲಿಗೆ ಮುಗಿಯುವುದಿಲ್ಲ.

ಡೇವಿಡ್ ಗಾಗಿನ್ಸ್ ಅವರ ಬಾಲ್ಯವು ಕಠಿಣತೆಯಿಂದ ಕೂಡಿದೆ. ಇವರ ತಂದೆಯು ಇವರು, ಇವರ ತಮ್ಮ ಮತ್ತು ತಾಯಿಗೆ ದಿನವು ಬೆಲ್ಟನಿಂದ ಹೊಡೆಯುತ್ತಿದ್ದರು. ಡೇವಿಡ್ ಅವರಿಗೆ ಅಧಿಕ ಚಿತ್ರಹಿಂಸೆ(torcher) ಮತ್ತು ಅವಮಾನಿಸುತ್ತಿದ್ದರು(humiliate). ವ್ಯಾಪಾರದಲ್ಲಿ ಹಣವನ್ನು ನೀಡದೆ ಕಠಿಣ ಕೆಲಸವನ್ನು ಮಾಡಿಸುತ್ತಿದ್ದರು. ಈ ರೀತಿಯ ಬಾಲ್ಯದಿಂದಾಗಿ ಡೇವಿಡ್ ಅವರಿಗೆ ಮುಂದೆಯು ಬಡತನ ನೋಡಬೇಕಾಯಿತು. ಅವರ ಹತ್ತಿರ ಆತ್ಮವಿಶ್ವಾಸ(confidence), ಪ್ರೇರಣೆ(motivation) ಎಂಬುದು ಇರಲಿಲ್ಲ. ಒಮ್ಮೆ ಅವರು 130 ಕೆಜಿಯಷ್ಟು ತೂಕ ಹೊಂದಿದ್ದರು. ಅವರಿಗೆ ಅವರ ಬದುಕು ಮತ್ತು ಅವರನ್ನು ಕಂಡರೆ ಇಷ್ಟವಾಗುತ್ತಿರಲಿಲ್ಲ.

ಆದರೆ ಒಮ್ಮೆ ಅವರಿಗೆ ಜ್ಞಾನೋದಯವಾಯಿತು. ಆದರಿಂದ ಈ ವ್ಯಕ್ತಿ ಇಂದು, ಅಲ್ಟ್ರಾ ಮ್ಯಾರಥಾನ್ ಓಟಗಾರ(ultra marathon runner), ಅಲ್ಟ್ರಾ ಡಿಸ್ಟೆನ್ಸ್ ಸೈಕ್ಲಿಸ್ಟ್ ಮತ್ತು ಓಟಗಾರ(ultra distance cyclist and runner), ಲೇಖಕ(author), ಪ್ರೇರಕ ಭಾಷಣಕಾರನಾಗಿದ್ದಾರೆ(motivational speaker). ಡೇವಿಡ್ ಅವರು ಸಾಮಾನ್ಯ ಹುಡುಗನಿಂದ(normal boy) ಅಸಾಮಾನ್ಯರಾದ(extraordinary beast) ರೀತಿಯೇ ಇತರರು ಅವರ ಮಿತಿಯನ್ನು ಮೀರಿ ಉನ್ನತ ಮಟ್ಟ(high level) ತಲುಪಲಿ ಎಂದು ಬಯಸಿದ್ದಾರೆ. ಹೀಗಾಗಿ ಅವರು ನ್ಯೂಯಾರ್ಕ್ ಟೈಮ್ಸ್ನ(newyork times) ಉತ್ತಮ ಮಾರಾಟವಾದ ಪುಸ್ತಕ "ಕನ್ಟ್ ಹರ್ಟ್ ಮೀ"ಯನ್ನು(can't hurt me) ಬರೆದಿದ್ದಾರೆ. ಇದರಲ್ಲಿ ಅವರು ಅವರ ಜೀವನದ ಪ್ರಯಾಣ(life journey), ಹೋರಾಟ(struggles) ಮತ್ತು ತಡೆಯಲಾಗದ ಮನಸ್ಥಿತಿಯನ್ನು(unstoppable mindset) ನಿರ್ಮಾಣ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿದ್ದಾರೆ. ನಾವು ಇಂದು ಅದರ ಬಗ್ಗೆಯೇ ತಿಳಿಸಲಿದ್ದೇವೆ.

ಇದನ್ನು ಓದಿ: ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ

1. The 40% rule

the 40 percent rule in cant hurt me in kannada
40% rule

ಎಲ್ಲದರ ವೇಗದ ಮಿತಿ(speed limit) ಇರುತ್ತದೆ, ಅದು ಅದರ ನಿಜವಾದ ಮಿತಿಗಿಂತ ತುಂಬಾನೇ ಕಡಿಮೆ ಇರುತ್ತದೆ. ಉದಾಹರಣೆಗೆ ನಿಮ್ಮ ಹತ್ತಿರ ಒಂದು ಕಾರು ಇದೆ ಎಂದುಕೊಳ್ಳಿ. ಅದರ ವೇಗ ಗಂಟೆಗೆ 200 ಕಿಮೀ ಇರುತ್ತದೆ. ಆದರೆ ನೀವು 80 ರಿಂದ 100 ಕಿಮೀ ಗಂಟೆಗೆ ತಲುಪಿದಾಗ ಕಾರಿನ ವೇಗ ಇಷ್ಟೇ ಅದು ಇನ್ನಷ್ಟು ವೇಗವಾಗಿ ಹೋಗಲು ಸಾಧ್ಯವಿಲ್ಲವೆನಿಸುತ್ತದೆ. ಇದೇ ರೀತಿಯಾಗಿ ಮನುಷ್ಯನ ದೇಹ ಕಾರ್ಯನಿರ್ವಹಿಸುತ್ತದೆ. ನಮ್ಮ ಸಾಮಾನ್ಯ ಬದುಕಿನಲ್ಲಿ ನಮ್ಮ ದೇಹವನ್ನು ಪರೀಕ್ಷಿಸುವ ಅವಶ್ಯಕತೆ ಇಲ್ಲ. ಆದರೆ ಒಮ್ಮೊಮ್ಮೆ ನೀವು ಅಂತ್ಯವನ್ನು(endlimit) ಮೀರಿ ಕೆಲಸವನ್ನು ಮಾಡಬೇಕಾಗುತ್ತದೆ.

ನಮಗೆ ಈ ರೀತಿಯ ಅಂತ್ಯವನ್ನು ಮೀರಿ ಮಾಡಿದ ಕೆಲಸದಿಂದ ಸುಸ್ತಾಗಿದ್ದು, ಇನ್ನಷ್ಟು ಮುಂದೆ ಹೋಗಲು ಸಾಧ್ಯವಿಲ್ಲವೆನಿಸಿದರೆ, ಆ ಸಮಯದಲ್ಲಿ ನಾವು ಕೇವಲ ನಮ್ಮ ಮಿತಿಯ 40% ಮಾತ್ರ ಬಳಸಿರುತ್ತೇವೆ. ನಮಗೆ ಈ ರೀತಿ ನಮ್ಮ ಮನಸ್ಸು(mind) ಯೋಚಿಸುವಂತೆ ಮಾಡುತ್ತದೆ. ನಮ್ಮ ಮನಸ್ಸು ಇದುವೇ ಗರಿಷ್ಠ ವೇಗವೆಂದು(maximum speed) ನಿರ್ಣಯ ಮಾಡಿ ಬಿಡುತ್ತದೆ.

ನೀವು ಎಂದಾದರೂ ಬಿಟ್ಟುಕೊಡಲು ಹೋದರೆ ಅದು ನಿಮ್ಮ ಪೂರ್ಣ ಶಕ್ತಿಯ(full potencial) 40% ಆಗಿದೆ ಎಂದು ನೆನಪಿಡಿ. ನಿಮ್ಮ ಶಕ್ತಿಯು ಇದಕ್ಕಿಂತ ಅಧಿಕ ಇರುತ್ತದೆ ಮತ್ತು ನಿಮ್ಮ ಹತ್ತಿರ ಇನ್ನು ಅಧಿಕ ಶಕ್ತಿ ಇರುತ್ತದೆ. ಹೀಗಾಗಿ ನಾವು ಯಶಸ್ವಿಯಾಗಲು ಬಯಸಿದರೆ ನಮ್ಮ ಪೂರ್ಣ ಶಕ್ತಿಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿ ನಾವು ಹೆಚ್ಚುತ್ತಿರುವ ನಿಯಮವನ್ನು(incremental rules) ಅನ್ವಯಿಸಬಹುದು. ಅಂದರೆ ನೀವು ಹಿಂದಿನ ದಿನಕ್ಕಿಂತ ಒಂದು ಪಟ್ಟು ಮುಂದೆ ಪುಶ್ ಮಾಡಿಕೊಳ್ಳಿ. ಉದಾಹರಣೆಗೆ ನೀವು ಪ್ರತಿದಿನ 5 ಕಿಮೀ ಓಡಿದರೆ ಮುಂದಿನ ದಿನ 6 ಕಿಮೀ ಓಡಲು ಪ್ರಯತ್ನಿಸಿ. ಈ ನಿಯಮವನ್ನು ನೀವು ನಿಮ್ಮ ಓದು ಮತ್ತು ಕೆಲಸದಲ್ಲೂ ಬಳಸಬಹುದು. ಏಕೆಂದರೆ ಈ ನಿಯಮ ನಮ್ಮ ಮನಸ್ಸು, ದೇಹ ಮತ್ತು ಮಿತಿಗೆ ನಿಯಂತ್ರಣ ನೀಡುತ್ತದೆ.

ಇದನ್ನು ಓದಿ: 21 ಸಣ್ಣ ಅಭ್ಯಾಸದಿಂದ ವಾರದಲ್ಲಿ 21+ ಗಂಟೆಗಳನ್ನು ಉಳಿಸಿ

2. The accountability mirror

what is the accountability mirror in kannada
accountability mirror

ನಾವು ನಮ್ಮ ಗುರಿಗಳ ಬಗ್ಗೆ ತಿಳಿಯಲು ಬಯಸಿದರೆ ನಮ್ಮನ್ನು ಗಟ್ಟಿ(tough) ಮಾಡಿಕೊಳ್ಳಬೇಕೆಂದು ಡೇವಿಡ್ ಹೇಳುತ್ತಾರೆ. ಹೊಣೆಗಾರಿಕೆ ಕನ್ನಡಿ(accountability mirror) ಅದಕ್ಕಾಗಿ ಇರುವ ಒಂದು ತಂತ್ರವಾಗಿದ್ದು, ಡೇವಿಡ್ ಅವರು ಖುದ್ದಾಗಿ ಇದನ್ನು ಅವರ ಬದುಕಿನಲ್ಲಿ ಏನು ಸರಿಯಾಗಿ ನಡೆಯದಿದ್ದ ಸಮಯದಿಂದಲೂ ಫಾಲೋ ಮಾಡಿಕೊಂಡು ಬಂದಿದ್ದಾರೆ.

ಡೇವಿಡ್ ಅವರು ಒಂದು ಕನ್ನಡಿ ನೋಡಿಕೊಂಡು ಈ ಪ್ರೆಶ್ನೆಗಳನ್ನು ಕೇಳುತ್ತಾರೆ, "ನಾನು ಈಗ ಎಲ್ಲಿದ್ದೇನೆ", "ಬದುಕಿನಲ್ಲಿ ನಾನು ಎಲ್ಲಿಗೆ ಹೋಗಬೇಕು". ಇದರಲ್ಲಿ ಅವರು ಭಾವನಾತ್ಮಕವಾಗಿ(emotional) ಮಾತನಾಡಲು ಸಾಧ್ಯವಾಗುತ್ತಿತ್ತು. ಹಲವು ಭಾರಿ ಅವರು ಕೂಗುತ್ತಿದ್ದರು ಮತ್ತು ಅವರ ಬದುಕಿನಲ್ಲಿ ಏನು ಮಾಡಬೇಕೆಂಬ ಬಗ್ಗೆ ತಾನಾಗೆ ಮಾತನಾಡುತ್ತಿದ್ದರು. ಇದರಿಂದ ಡೇವಿಡ್ ಅವರು ತುಂಬಾನೇ ಬದಲಾಗಿದ್ದರು, ಇತರರು ಅವರ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಕ್ಕೆ ಅವರು ಕಾಳಜಿ ವಹಿಸುತ್ತಿರಲಿಲ್ಲ. ಅವರು ತಮ್ಮ ಗುರಿಗಳನ್ನು ಟಿಪ್ಪಣಿಗಳ(sticky notes) ಮೇಲೆ ಬರೆದು ಕನ್ನಡಿಗೆ ಅಂಟಿಸುತ್ತಿದ್ದರು. ಇದರಿಂದ ಅವರು ಕನ್ನಡಿ ನೋಡಿ ಮಾತನಾಡುವಾಗ ಆ ಟಿಪ್ಪಣಿಗಳನ್ನು ನೋಡಿ ಯಶಸ್ಸು ಸಾಧ್ಯವಿದೆ ಅಂದುಕೊಳ್ಳುತ್ತಿದ್ದರು. ಡೇವಿಡ್ ಅವರು ಈ ಹವ್ಯಾಸವನ್ನು ಇಂದಿಗೂ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ.

ಡೇವಿಡ್ ಪ್ರಕಾರ ನಾವು ಇದನ್ನು ಫಾಲೋ ಮಾಡುವುದರಿಂದ ಬದುಕಿನಲ್ಲಿ ಸ್ಪಷ್ಟತೆ(clarity), ಉದ್ದೇಶ(purpose) ಮತ್ತು ಪ್ರೇರಣೆ(motivation) ಬರುತ್ತದೆ. ಆದರೆ ಹೊಣೆಗಾರಿಕೆ ಕನ್ನಡಿಯನ್ನು ಫಾಲೋ ಮಾಡಲು ನಾವು ನಮ್ಮೊಂದಿಗೆ ಯಾವಾಗಲೂ ಸತ್ಯದಿಂದ ಇರಬೇಕು. ನಾವು ನಮ್ಮೊಂದಿಗೆ ಅಸತ್ಯವಿದ್ದರೆ ಆ ಗುರಿಗಳನ್ನು ಅರಿವೂ ಮಾಡಿಕೊಳ್ಳಲು ಯಾವುದೇ ಉದ್ದೇಶದ ಬಗ್ಗೆ ತಿಳಿಯುವುದಿಲ್ಲ. ಹೀಗಾಗಿ ದಿನ ಕನ್ನಡಿ ಮುಂದೆ ನಿಂತು ಮಾತನಾಡಿ ಮತ್ತು ತಮ್ಮ ಗುರಿಗಳನ್ನು ಗೋಡೆಗೆ ಅಂಟಿಸುವ ಟಿಪ್ಪಣಿಗಳನ್ನು ಅಂಟಿಸಿ. ನೀವು ಯಾರು ಮತ್ತು ಎಲ್ಲಿಗೆ ಹೋಗಲು ಬಯಸಿದ್ದೀರಾ ಎಂಬುದನ್ನು ನೆನಪಿಸಿಕೊಳ್ಳಿ.

ಇದನ್ನು ಓದಿ: ಬದುಕಿನಲ್ಲಿ ನಿಶ್ಚಲತೆಯನ್ನು ಸಾಧಿಸುವುದು ಹೇಗೆ?

3. Bring your best when you feel your worst

bring best in worst in cant hurt me in kannada
bring best in worst

ನಮ್ಮ ಗುರಿಗಾಗಿ ತೆಗೆದುಕೊಳ್ಳುವ ದಾರಿಯು ತುಂಬಾನೇ ಕಷ್ಟಕರವಾಗಿದೆ. ಇದು ನಾವು ಖುದ್ದಾಗಿ ಗೆಲ್ಲಬೇಕಾದ ಒಂದು ದೈಹಿಕ ಸವಾಲಾಗಿದೆ(physical challenge). ಇದರಲ್ಲಿ ನಮ್ಮ ತಲೆಯಲ್ಲಿ ಬರುವ ಪ್ರೆಶ್ನೆಗಳಿಗೆ ಉತ್ತರ ಹುಡುಕಬೇಕು. ಪ್ರೆಶ್ನೆಗಳು ಈ ರೀತಿ ಇರಬಹುದು, "ನಾನು ಈ ಜಾಗ ಮತ್ತು ಸನ್ನಿವೇಶದಲ್ಲಿ ಏಕೆ ಇದ್ದೇನೆ?". ಈ ರೀತಿಯಾಗಿ ಅನೇಕ ಪ್ರೆಶ್ನೆಗಳು ಮತ್ತು ಇದಕ್ಕೆ ಸಿಗುವ ಉತ್ತರದಿಂದ ನಾವು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಾವು ಒಂದು ವಿಷಯಕ್ಕೆ ಜಗಳವಾಡುತ್ತಿದರೆ ಏಕೆ ಜಗಳವಾಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕು. ನಾವು ಸಮಯ ಚೆನ್ನಾಗಿರಲಿ ಇಲ್ಲದಿರಲಿ ಕಳೆದು ಹೋಗುತ್ತದೆ ಎಂದು ನಂಬಬೇಕು. ಹೀಗಾಗಿ ಅದನ್ನು ಖುಷಿಯಿಂದ ನೋಡಿ.

ಈ ರೀತಿಯಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನಿಮ್ಮಲ್ಲಿ ಒಂದು ಹೊಸ ಶಕ್ತಿ ಬರುತ್ತದೆ. ನೀವು ಸೋತಿರುವಿರಿ ಎಂದು ಅನಿಸಿದಾಗ ಕಠಿಣ ಕೆಲಸ(hard work) ಮಾಡಿದರೆ ನೀವು ಕಳೆದುಕೊಂಡ ಶಕ್ತಿಯನ್ನು ಮತ್ತೊಮ್ಮೆ ಪಡೆಯುತ್ತೀರಾ ಎಂದು ಡೇವಿಡ್ ಅವರು ಹೇಳುತ್ತಾರೆ. ನಿಮ್ಮ ಹತ್ತಿರ ಆವೇಗ(momemtum) ಬಂದಾಗ ನೀವು ನಿಮ್ಮ ವಿರೋಧಿಯ ಆತ್ಮವಿಶ್ವಾಸ ಮುರಿಯುವಷ್ಟು ಶಕ್ತಿಶಾಲಿಯಾಗುತ್ತೀರಾ. ಹೀಗಾಗಿ ಯಾವುದೇ ರೀತಿಯ ಸುಧಾರಣೆಗಾಗಿ ನಿಮ್ಮ ಕೆಟ್ಟ ಸಮಯದಲ್ಲೂ ಉತ್ತಮವಾದದನ್ನು ನೀಡಲು ನೀವು ತಯಾರಿರಬೇಕು.

ಇದನ್ನು ಓದಿ: ಶ್ರೀಮದ್ ಭಗವದ್ಗೀತೆಯ 110 ವಿಚಾರಗಳು

4. Callous your mind

what does callous my mind mean in kannada
callous mind

ಡೇವಿಡ್ ಅವರು ತಾಳ್ಮೆಯ ಕ್ರೀಡಾಪಟು(endurance athlete) ಆಗಿದ್ದರೆ ಎಂಬುದನ್ನು ನಾವು ತಿಳಿದಿದ್ದೇವೆ. ಇದಕ್ಕೆ ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯ(mental strength) ಅಗತ್ಯವಿದೆ. ನಮ್ಮ ಚರ್ಮಕ್ಕೆ ಘರ್ಷಣೆ(friction) ಆಗುವ ರೀತಿಯಾ ಕೆಲಸ ಮಾಡಿದರೆ ಚರ್ಮವೂ ಗಟ್ಟಿಯಾಗುತ್ತದೆ. ಇದೇ ರೀತಿ ನಾವು ನಮ್ಮ ಮನಸ್ಸನ್ನು(mind) ಅನ್ನು ತಯಾರಿ ಮಾಡಬೇಕು ಎಂದು ಡೇವಿಡ್ ಅವರು ಹೇಳುತ್ತಾರೆ. ಡೇವಿಡ್ ಅವರಿಗೆ ಒಂದು ಸಮಯದಲ್ಲಿ ಅಧಿಕ ಗಾಯಗಳಾಗಿತ್ತು(injure) ಇದರ ನಂತರವೂ ಅವರು ಇಚ್ಛಾಶಕ್ತಿಯ(willpower) ಮೇಲೆ ಮುಂದೆ ನುಗ್ಗುತ್ತಿದ್ದರು. ತಮ್ಮ ಮನಸ್ಸನ್ನು ಅಹಿತಕರ ಪರಿಸ್ಥಿತಿ(discomforting situation) ಮತ್ತು ನೋವಿನ ಪರಿಸ್ಥಿತಿಯಲ್ಲಿ(painful situation) ಹಾಕುವ ಮೂಲಕವೇ ಗಟ್ಟಿ ಮಾಡಲು ಸಾಧ್ಯ.

ನೀವು ಈ ರೀತಿಯಾಗಿ ನಿಮ್ಮ ಮನಸ್ಸನ್ನು ನೋವಿನ ಪರಿಸ್ಥಿತಿಯಲ್ಲಿ ಇಳಿಸುತ್ತಿದ್ದಾರೆ ಅದಕ್ಕೆ ಅದು ಅಭ್ಯಾಸವಾಗಿ ಬಿಡುತ್ತದೆ. ಇದರಿಂದ ನಿಮಗೆ ಈ ರೀತಿಯ ಸಮಸ್ಯೆ, ಅಹಿತಕರ ಪರಿಸ್ಥಿತಿಯಿಂದ ನೋವೇ ಆಗುವುದಿಲ್ಲ ಮತ್ತು ನೀವು ಆ ಸನ್ನಿವೇಶವನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತೀರಾ. ನಾವು ನೋವಿನಿಂದ(pain) ದೂರ ಓಡಿ ಹೋಗಬಾರದು, ಬದಲಿಗೆ ನೋವನ್ನು ಅನುಭವಿಸಬೇಕು. ಇದನ್ನು ಕಾರ್ಯಗತಗೊಳಿಸುವುದರಿಂದ ನಿಮಗೆ ಉಪಯುಕ್ತವಾಗುತ್ತದೆ. ನೀವು ಈ ರೀತಿಯ ನೋವಿನ ಪರಿಸ್ಥಿತಿಯಲ್ಲಿ ಇರುವುದನ್ನು ಕಲಿಯುತ್ತಿದರೆ ಅದನ್ನು ನಿರ್ವಹಣೆ ಮಾಡುವುದನ್ನು ಕಲಿಯುತ್ತೀರಾ.

ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)

5. The cookie jar

what is the cookie jar concept in kannada
cookie jar

ನಾವು ಯಾವುದೇ ರೀತಿಯ ಪರಿಸ್ಥಿತಿಯಲ್ಲಿದ್ದರೂ ನಮ್ಮ ಒಳಗೆ ಒಂದು ಕುಕೀ ಜಾರ್(cookie jar) ಇರುತ್ತದೆ. ಈ ಜಾರ್ನಿಂದ ನೀವು ಯಾವುದೇ ರೀತಿಯ ನೆನಪುಗಳನ್ನು(memories) ಹೊರ ತೆಗೆಯಬಹುದು. ಇದರಿಂದ ನೀವು ನಿಮ್ಮ ಸಮಸ್ಯೆಯ ಜೊತೆ ಹೋರಾಡಿ ದೊರೆತ ಯಶಸ್ಸಿನ ನೆನಪುಗಳನ್ನು ಹೊರ ತೆಗೆಯಬಹುದು. ಕುಕೀ ಜಾರ್ ವಿಧಾನವನ್ನು ಬಳಸಲು ನಾವು ನಮ್ಮ ಹಿಂದಿನ ಸಾಧನೆ(achivements) ಮತ್ತು ಯಶಸ್ಸಿನ ಒಂದು ಪಟ್ಟಿಯನ್ನು(list) ಮಾಡಬೇಕು. ಈ ಪಟ್ಟಿ ನಿಮ್ಮ ವೈಯಕ್ತಿಕ ಕುಕೀ ಜಾರ್(personal cookie jar) ಆಗಿದೆ.

ನೀವು ಒಂದು ಕಷ್ಟದ ಕೆಲಸ(dificult task) ಮಾಡಲು ತಯಾರಿದ್ದು ನಿಮ್ಮ ಮನಸ್ಸು ಬಿಟ್ಟುಕೊಡುತ್ತಿದ್ದಾರೆ(giveup). ಆ ಸಮಯದಲ್ಲಿ ನೀವು ಈ ಕುಕೀ ಜಾರ್ನಿಂದ ನಿಮ್ಮ ಸಾಧನೆಗಳನ್ನು ನೆನಪಿಸುವ ನೆನಪುಗಳನ್ನು ಹೊರ ತೆರೆಯಿರಿ. ಇದರಿಂದ ನಿಮಗೆ ಇನ್ನಷ್ಟು ಪ್ರೇರಣೆ ಸಿಗುತ್ತದೆ. ಈ ವಿಧಾನದಿಂದ ನಿಮ್ಮ ಹಳೆಯ ಸಮಸ್ಯೆಗಳನ್ನು ನೆನಪಿಸಿಕೊಳ್ಳುವಿರಿ ಮತ್ತು ಅದನ್ನು ಪ್ರಸ್ತುತ ಸಮಸ್ಯೆಯ(current problems) ಜೊತೆ ಹೋಲಿಸಿಕೊಳ್ಳುವಿರಿ. ಇದರಿಂದ ನಿಮ್ಮ ಪ್ರಸ್ತುತ ಸಮಸ್ಯೆ ಹಿಂದಿನ ಸಮಸ್ಯೆಗೆ(past problems) ಎಷ್ಟು ಸಮನಾಗಿದೆ ಎಂದು ತಿಳಿಯುತ್ತದೆ.

ಯಾವುದೇ ಸವಾಲಿನಲ್ಲಿ ನಿಮ್ಮ ಮೆದುಳು ಸ್ಥಿರವಾಗಿ ನಿಮ್ಮ ಗುರಿಯಿಂದ ಎಷ್ಟು ದೂರವಿರುವಿರಿ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ನೀವು ಆ ಕೆಲಸದಲ್ಲಿ ಸಾಕಷ್ಟು ಶ್ರಮಿಸಬೇಕಿಲ್ಲ ಎಂದು ಹೇಳುವ ತಾಕತ್ತು ನಿಮ್ಮ ಮನಸ್ಸಿನಲ್ಲಿ ಇರುತ್ತದೆ. ನೀವು ಆ ನಕಾರಾತ್ಮಕ ಧ್ವನಿಯಿಂದ(negative voice) ಗೆದ್ದರೆ ನಿಮ್ಮ ಗುರಿಯು ಎಷ್ಟೇ ದೂರವಿದ್ದರೂ ಸಾಧಿಸಬಹುದು. ನೀವು ಈ ತಂತ್ರವನ್ನು ಆಲಸ್ಯವನ್ನು(procastination) ಸೋಲಿಸಲು ಬಳಸಬಹುದು. ಡೇವಿಡ್ ಅವರು ಈ ವಿಧಾನವನ್ನು ಬಳಸಿಕೊಂಡು ಹಲವಾರು ಅಲ್ಟ್ರಾ ಮ್ಯಾರಥಾನ್ ಈವೆಂಟ್ಗೆ ಹೋಗಿದ್ದಾರೆ. ಇದರಲ್ಲಿ ಅವರಿಗೆ ಮೊದಲಿಗೆ ಯಾವುದೇ ಅನುಭವವಿಲ್ಲದಿದ್ದರೂ ಒಳ್ಳೆಯ ಪ್ರದರ್ಶನ(performence) ನೀಡಿದ್ದರು. ನಮ್ಮ ಮನಸ್ಸು ನಮ್ಮನ್ನು ಹೆದರಿಸುತ್ತದೆ ಮತ್ತು ಪೂರ್ಣ ಸಾಮರ್ಥ್ಯದಲ್ಲಿ(full potential) ಕೆಲಸ ಮಾಡಲು ಬಿಡುವುದಿಲ್ಲ. ಆದರೆ ಕುಕ್ಕಿ ಜಾರ್ ವಿಧಾನವನ್ನು ಬಳಸುವುದರಿಂದ ನಾವು ನಮ್ಮ ಹಿಂದಿನ ಸಾಧನೆಯಿಂದ ಭವಿಷ್ಯದ ಸಾಧನೆಗಳನ್ನು ಸಾಧಿಸಬಹುದು.

ಈ ಪುಸ್ತಕದ ಮುಖ್ಯ ಉದ್ದೇಶದ ಬಗ್ಗೆ ತಿಳಿಸಿದರೆ ಇದರಲ್ಲಿ ಡೇವಿಡ್ ಅವರು ಸರಾಸರಿ ಮನಸ್ಥಿತಿಯಿಂದ(average mindset) ವಿಜೇತ(winner) ಮನಸ್ಥಿತಿಯನ್ನು ಮಾಡಲು ಅಧಿಕ ಗಮನ ಹರಿಸಿದ್ದಾರೆ. ಹೀಗಾಗಿ ಈ ಪುಸ್ತಕವನ್ನು ಬರೆದಿದ್ದಾರೆ. ಏಕೆಂದರೆ ಪುಸ್ತಕವನ್ನು ಓದುವುದು ನಮ್ಮ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ನಾವು ತಿಳಿದಿದ್ದೇವೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments