ನೀವು ಮನೆಯಲ್ಲಿ ತಯಾರಿಸಬಹುದಾದ ಕ್ಯಾರೆಟ್ ಖೀರು, ಪುನುಗುಲು, ಹಾಗಲಕಾಯಿ ಫೈ ರೀತಿಯ ಅಡುಗೆ ರೆಸಿಪಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಕ್ಯಾರೆಟ್ ಹಲ್ವಾದಷ್ಟೇ ರುಚಿ, ಈ ಕ್ಯಾರೆಟ್ ಖೀರು. ನೀವು ಸಿಹಿಪ್ರಿಯರಾಗಿದ್ದರೆ ಟೇಸ್ಟ್ ಮಾಡಲೇಬೇಕು ಕ್ಯಾರೆಟ್‌ನಿಂದ ಪಲ್ಯ, ಸಾಂಬಾರ್ ಮಾತ್ರವಲ್ಲ ಸಾಕಷ್ಟು ರೀತಿಯ ಸಿಹಿಗಳನ್ನು ತಯಾರಿಸಬಹುದು ಎಂಬುದು ನಮಗೆ ಗೊತ್ತು. ಕ್ಯಾರೆಟ್ ಹಲ್ವಾ, ಕ್ಯಾರೆಟ್ ಒಬ್ಬಟ್ಟು ಹೀಗೆ ಸಿಹಿಪ್ರಿಯರ ಬಾಯಲ್ಲಿ ನೀರೂರುವಂತಹ ಅನೇಕ ರೆಸಿಪಿಗಳನ್ನು ತಯಾರಿಸಬಹುದು, ಆದರೆ ನೀವು ಎಂದಾದರೂ ಕ್ಯಾರೆಟ್ ಖೀರ್ ಟೇಸ್ಟ್ ಮಾಡಿದ್ದೀರಾ..? ಕ್ಯಾರೆಟ್‌ನಲ್ಲಿ ತಯಾರಿಸುವ ಸಿಹಿಗಳಲ್ಲಿ ಕ್ಯಾರೆಟ್ ಹಲ್ವಾ ಬಹಳ ಫೇಮಸ್. ಆದರೆ ಈ ಕ್ಯಾರೆಟ್ ಖೀರ್, ಹಲ್ವಾದಷ್ಟೇ ರುಚಿ ಇರುತ್ತದೆ. ಒಂದು ವೇಳೆ ನಿಮ್ಮ ಮನೆಗೆ ಯಾರಾದರೂ ಗೆಸ್ಟ್ ಬರುತ್ತಿದ್ದು ಹಲ್ವಾ ತಯಾರಿಸುವಷ್ಟು ಸಮಯ ಇಲ್ಲದಿದ್ದರೆ ನೀವು ಕ್ಯಾರೆಟ್ ಖೀರ್ ತಯಾರಿಸಬಹುದು. ಖಂಡಿತ ಇದು ಎಲ್ಲರಿಗೆ ಬಹಳ ಇಷ್ಟವಾಗುತ್ತದೆ. ಕ್ಯಾರೆಟ್ ಖೀರು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗಿದೆ ನೋಡಿ. ಕ್ಯಾರೆಟ್ ಖೀರ್ ತಯಾರಿಸಲು ಬೇಕಾಗುವ ಸಾಮಗ್ರಿಗಳು,
ಕ್ಯಾರೆಟ್ ಸಿಪ್ಪೆ ತೆಗೆದು ಒಮ್ಮೆ ತೊಳೆಯಿರಿ. ಕ್ಯಾರೆಟನ್ನು 4-5 ತುಂಡುಗಳನ್ನಾಗಿ ಕತ್ತರಿಸಿ ಅದನ್ನು ಕುಕ್ಕರ್‌ಗೆ ಸೇರಿಸಿ. ಕ್ಯಾರೆಟ್ ಮುಳುಗುವಷ್ಟು ನೀರು ಸೇರಿಸಿ. ಮುಚ್ಚಳ ಮುಚ್ಚಿ 2 ಸೀಟಿ ಕೂಗಿಸಿಕೊಳ್ಳಿ. ಕ್ಯಾರೆಟ್ ತಣ್ಣಗಾದ ನಂತರ ಸ್ವಲ್ಪ ನೀರು ಸೇರಿಸಿ. ಮಿಕ್ಸಿಯಲ್ಲಿ ಡ್ರೈಂಡ್ ಮಾಡಿ. ಒಂದು ಪಾತ್ರೆಯಲ್ಲಿ ಹಾಲು ಬಿಸಿ ಮಾಡಿಕೊಳ್ಳಿ, ನಂತರ ಕ್ಯಾರೆಟ್ ಪ್ಯೂರಿ ಸೇರಿಸಿ ಮಿಕ್ಸ್ ಮಾಡಿ ಜೊತೆಗೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಸಿ. ಗೋಡಂಬಿ, ಬಾದಾಮಿ, ಪಿಸ್ತಾಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಮಿಶ್ರಣ ಕುದಿಯಲು ಆರಂಭಿಸುತ್ತಿದ್ದಂತೆ ಕೇಸರಿ ದಳ, ನಟ್ಸ್ ಸೇರಿಸಿ, ಒಂದೆರಡು ನಿಮಿಷದ ನಂತರ ಸ್ಟೋವ್ ಆಫ್ ಮಾಡಿ.
ಈ ಡಿಲೀಶಿಯಸ್ ಕ್ಯಾರೆಟ್ ಖೀರನ್ನು ನೀವು ಬಿಸಿಯಾಗಿ ಸರ್ವ್ ಮಾಡಬಹುದು, ಅಥವಾ ಸ್ವಲ್ಪ ಸಮಯ ರೆಫ್ರಿಜರೇಟರ್‌ನಲ್ಲಿಟ್ಟು ತಣ್ಣಗಾದ ನಂತರ ಕೂಡಾ ಸೇವಿಸಬಹುದು.
ಇದನ್ನು ಓದಿ: ಚಿತ್ರಾನ್ನ ಮಾಡಲು ಪಾಕವಿಧಾನಆಂಧ್ರ ಫೇಮಸ್ ರೆಸಿಪಿ ಪುನುಗುಲು ಇಡ್ಲಿ ಹಿಟ್ಟು ಹೆಚ್ಚಿಗೆ ಉಳಿದಿದ್ಯಾ..ಸಂಜೆ ಸ್ನಾಕ್ಸ್‌ಗೆ ಆಂಧ್ರ ಫೇಮಸ್ ರೆಸಿಪಿ ತಯಾರಿಸಿ..ಸಖತ್ ರುಚಿ ಈ ಸ್ಟಾಕ್ಸ್. ಸಾಮಾನ್ಯವಾಗಿ ಆಂಧ್ರ ಟಿಫನ್ ಸೆಂಟರ್‌ಗಳಲ್ಲಿ ನೀವು ಪುನುಗುಲು ಟೇಸ್ಟ್ ಮಾಡಿರುತ್ತೀರಿ. ಬೆಳಗ್ಗೆ ಮಾಡಿದ ಇಡ್ಲಿಹಿಟ್ಟನ್ನು ಸ್ವಲ್ಪ ಉಳಿಸಿಕೊಂಡು ಸಂಜೆಗೆ ಈ ರುಚಿಯಾದ ಸ್ಟಾಕ್ಸ್ ತಯಾರಿಸಲಾಗುತ್ತದೆ. ಚಳಿ ಇರಲಿ, ಬಿಸಿಲು, ಮಳ ಇರಲಿ ಸಂಜೆ ತಿನ್ನಲು ಇಂತಹ ರೆಸಿಪಿಗಳನ್ನು ಕಲಿಯಲೇಬೇಕು. ಪುನುಗುಲು ತಯಾರಿಸಲು ಬೇಕಾಗುವ ಸಾಮಗ್ರಿಗಳು, ಅದನ್ನು ತಯಾರಿಸುವ ವಿಧಾನ ಇಲ್ಲಿದೆ.
ಊಟಕ್ಕೆ ತಯಾರಿಸಿರುವ ಅನ್ನ, ಹೊರಗಿನಿಂದ ಕೊಂಡು ತಂದ ಬ್ರೆಡ್, ಬಿಸ್ಕಟ್‌ಗಳು, ದೋಸೆ ಹಿಟ್ಟು, ಇಡ್ಲಿಹಿಟ್ಟು ಆಗ್ಗಾಗ್ಗೆ ಉಳಿದುಬಿಡುತ್ತದೆ. ಇದನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟರೂ ಕೆಲವೊಮ್ಮೆ ಮರೆತುಹೋಗಿ ಅದು ವೇಸ್ಟ್ ಆಗುತ್ತದೆ. ಆದರೆ ಈ ಉಳಿದ ಪದಾರ್ಥಗಳಿಂದಲೇ ಸ್ಟಾಕ್ಸ್ ತಯಾರಿಸಿದರೆ ವೇಸ್ಟ್ ಆದ ಬೇಸರವೂ ಇರುವುದಿಲ್ಲ. ಹೊಸ ರುಚಿ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ.
ಆಂಧ್ರ, ತೆಲಂಗಾಣ ಫುಡ್ ಕಲ್ಟರ್ ಬಗ್ಗೆ ಗೊತ್ತಿರುವವರಿಗೆ ಈ ಪುನುಗುಲು ಸ್ಟಾಕ್ಸ್ ಬಗ್ಗೆ ಕೂಡಾ ತಿಳಿದಿರುತ್ತದೆ. ಸಾಮಾನ್ಯವಾಗಿ ಟಿಫನ್ ಸೆಂಟರ್‌ಗಳಲ್ಲಿ ನೀವು ಪುನುಗುಲು ಟೇಸ್ಟ್ ಮಾಡಿರುತ್ತೀರಿ. ಬೆಳಗ್ಗೆ ಮಾಡಿದ ಇಡ್ಲಿಹಿಟ್ಟನ್ನು ಸ್ವಲ್ಪ ಉಳಿಸಿಕೊಂಡು ಸಂಜೆಗೆ ಈ ರುಚಿಯಾದ ಸ್ಟಾಕ್ಸ್ ತಯಾರಿಸಲಾಗುತ್ತದೆ. ಚಳಿ ಇರಲಿ, ಬಿಸಿಲು, ಮಳೆ ಇರಲಿ ಸಂಜೆ ತಿನ್ನಲು ಇಂತಹ ರೆಸಿಪಿಗಳನ್ನು ಕಲಿಯಲೇಬೇಕು. ಪುನುಗುಲು ತಯಾರಿಸಲು ಬೇಕಾಗುವ ಸಾಮಗ್ರಿಗಳು, ಅದನ್ನು ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು,
ಒಂದು ದೊಡ್ಡ ಬೌಲ್‌ಗೆ ಇಡ್ಲಿ ಹಿಟ್ಟನ್ನು ವರ್ಗಾಯಿಸಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ. ಜೊತೆಗೆ ಅಕ್ಕಿ ಹಿಟ್ಟು, ಮೈದಾಹಿಟ್ಟು, ಜೀರ್ಗೆ, ಅಡುಗೆ ಸೋಡಾ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಆಗಲು ಇಡಿ, ಎಣ್ಣೆಯನ್ನು ಅತಿಯಾಗಿ ಬಿಸಿ ಮಾಡಬಿಡಿ. ಪುನುಗುಲು ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಫೈ ಮಾಡಿ. ತೆಂಗಿನ ಚಟ್ನಿ ಅಥವಾ ಕೆಂಪು ಚಟ್ನಿಯೊಂದಿಗೆ ಈ ಟೇಸ್ಟಿ ಸ್ಟಾಕ್ಸ್ ಎಂಜಾಯ್ ಮಾಡಿ.
ಗಮನಿಸಿ: ಇಡ್ಲಿಹಿಟ್ಟು ಗಟ್ಟಿಯಾಗಿ ಇದ್ದರೆ ಈ ಸ್ಟಾಕ್ಸ್ ಮಾಡಲು ಚೆನ್ನ.
2 ದಿನಗಳು ಸ್ಟೋರ್ ಮಾಡಿದ ಇಡ್ಲಿಹಿಟ್ಟನ್ನು ಬಳಸಿದರೆ ಬಹಳ ರುಚಿಯಾಗಿರುತ್ತದೆ. ದೋಸೆ ಹಿಟ್ಟಿನಿಂದ ಕೂಡಾ ಈ ರೆಸಿಪಿ ತಯಾರಿಸಬಹುದು. ಆದರೆ ಅದಕ್ಕೆ ಹೆಚ್ಚಿನ ಪ್ರಮಾಣದ ಅಕ್ಕಿಹಿಟ್ಟು, ಮೈದಾಹಿಟ್ಟು ಸೇರಿಸಬೇಕು. ಆದ್ದರಿಂದ ಬ್ಯಾಟರ್ ಗಟ್ಟಿಯಾಗಿದ್ದರೆ ಒಳ್ಳೆಯದು.
ಇದನ್ನು ಓದಿ: ಜಗತ್ತಿನ 8 ತೂಕ ಹೆಚ್ಚಿಸುವ ಆಹಾರಗಳುಹಾಗಲಕಾಯಿ ಫೈ ಹೊಸ ವಿಧಾನದಲ್ಲಿ ಹಾಗಲಕಾಯಿ ಫ್ಟ್ ತಯಾರಿಸಿ..ಈ ತರಕಾರಿ ಬೇಡ ಅನ್ನೋರೂ ಇಷ್ಟ ಪಟ್ಟು ತಿನ್ನೋದು ಪಕ್ಕಾ! ಹಾಗಲಕಾಯಿಂದ ಯಾವುದೇ ರೆಸಿಪಿ ಮಾಡುವಾಗ ನೀವು ಅದಕ್ಕೆ ಬಳಸುವ ಪದಾರ್ಥಗಳು, ಅದನ್ನು ತಯಾರಿಸುವ ವಿಧಾನ ಬಹಳ ಮುಖ್ಯವಾಗಿರುತ್ತದೆ. ಹಾಗಲಕಾಯಿಂದ ಒಬ್ಬಬ್ಬರು ಒಂದೊಂದು ರೀತಿ ಪಲ್ಯ ತಯಾರಿಸುತ್ತಾರೆ. ಇಲ್ಲೊಂದು ಹೊಸ ವಿಧಾನ ಇದೆ. ಒಂದು ವೇಳೆ ನೀವು ಟ್ರೈ ಮಾಡಿಲ್ಲವೆಂದರೆ ಒಮ್ಮೆ ಈ ಹೊಸ ರೀತಿಯ ಹಾಗಲಕಾಯಿ ಫ್ಟ್ ತಯಾರಿಸಲು ಟ್ರೈ ಮಾಡಿ. ಹಾಗಲಕಾಯಿ, ಅನೇಕರಿಗೆ ಇಷ್ಟವಾಗದ ತರಕಾರಿ. ಅದರ ಕಹಿ ಅಂಶದಿಂದ ಹೆಚ್ಚಿನ ಜನರು ಹಾಗಲಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇನ್ನೂ ಕೆಲವರು ಬಹಳ ಇಷ್ಟಪಟ್ಟು ಹಾಗಲಕಾಯಿಯ ವಿವಿಧ ರೆಸಿಪಿಗಳನ್ನು ತಯಾರಿಸಿ ತಿನ್ನುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಹಾಗಲಕಾಯಿ ಕಹಿ ಇದ್ದರೂ, ಆರೋಗ್ಯಕ್ಕೆ ಬಹಳ ರುಚಿ. ಬೇಕಾಗುವ ಪದಾರ್ಥಗಳು,
ಹಾಗಲಕಾಯಿಯನ್ನು ತೊಳೆದು ರೌಂಡ್ ಆಗಿ ಅಥವಾ ಸಣ್ಣದಾಗಿ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಹೆಚ್ಚಿಕೊಳ್ಳಿ. ಕಡ್ಲೆಕಾಯಿ ಬೀಜವನ್ನು ಹುರಿದುಕೊಂಡು ಅದು ತಣ್ಣಗಾದಾಗ ಮಿಕ್ಸಿಯಲ್ಲಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಸ್ಪೂನ್ ತುಪ್ಪ ಬಿಸಿ ಮಾಡಿ ಅದರಲ್ಲಿ ಒಣದ್ರಾಕ್ಷಿಯ ಟ್ರೈ ಮಾಡಿ ಪಕ್ಕಕ್ಕೆ ತೆಗೆದಿಡಿ.
ಅದೇ ಪಾತ್ರಗೆ ಸ್ವಲ್ಪ ಎಣ್ಣೆ ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ಹಾಗಲಕಾಯನ್ನು ಫೈ ಮಾಡಿ ಒಂದು ಪಾತ್ರೆಗೆ ತೆಗೆದಿಡಿ. ಅದೇ ಎಣ್ಣೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ನಂತರ ಸಣ್ಣಗೆ ಕತ್ತರಿಸಿದ ಟೊಮ್ಯಾಟೋ ಸೇರಿಸಿ ಅದು ಮೃದುವಾಗುವರೆಗೂ ಹುರಿಯಿರಿ. ಇದರೊಂದಿಗೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಸ್ವಲ್ಪ ಅರಿಶಿನ, ಉಪ್ಪು ಸೇರಿಸಿ ಕೈ ಆಡಿಸಿ. ಮೊದಲೇ ಟ್ರೈ ಮಾಡಿಕೊಂಡ ಹಾಗಲಕಾಯಿ ಸೇರಿಸಿ ನಾದು ಸ್ಪೂನ್ ನೀರು ಸೇರಿಸಿ ಒಮ್ಮೆ ತಿರುವಿ ಕಡಿಮೆ ಉರಿಯಲ್ಲಿ 8-10 ನಿಮಿಷ ಕುಕ್ ಮಾಡಿ.
ನಂತರ ಹುರಿದ ಕಡ್ಲೆಕಾಯಿಬೀಜದ ಪುಡಿ ಹಾಗೂ ಫೈ ಮಾಡಿಕೂಂಡ ಒಣದ್ರಾಕ್ಷಿಯನ್ನು ಸೇರಿಸಿ ಮಿಕ್ಸ್ ಮಾಡಿ ಮತ್ತೆ ಒಂದೆರಡು ನಿಮಿಷ ಕುಕ್ ಮಾಡಿ. ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಪಾತಿ, ರೊಟ್ಟಿ, ದೋಸೆ, ಅನ್ನ ಅಥವಾ ಪೂರಿ ಜೊತೆ ಕೂಡಾ ಈ ಫೈ ಬಹಳ ರುಚಿಯಾಗಿರುತ್ತದೆ. ನಿಮಗೆ ಗ್ರೇವಿ ಬೇಕೆಂದರೆ ಇನ್ನಷ್ಟು ನೀರು ಸೇರಿಸಿ.
ಗಮನಿಸಿ: ನಿಮಗೆ ಒಣದ್ರಾಕ್ಷಿ ಸೇರಿಸುವುದು ಇಷ್ಟವಿಲ್ಲದಿದ್ದರೆ ಸ್ವಲ್ಪ ಬೆಲ್ಲ ಸೇರಿಸಬಹುದು. ಕಡ್ಲೆಕಾಯಿ ಬೀಜದ ಪುಡಿ ಹಾಗೂ ಒಣದ್ರಾಕ್ಷಿ ಕಹಿ ಅಂಶವನ್ನ ಕಡಿಮೆ ಮಾಡುತ್ತದೆ. ಎಣ್ಣೆಯಲ್ಲಿ ಹುರಿಯುವುದರಿಂದ ಕೂಡಾ ಹಾಗಲಕಾಯಿಯ ಕಹಿ ಅಂಶ ಕಡಿಮೆ ಆಗುತ್ತದೆ. ಎಣ್ಣೆ ಬದಲು ತುಪ್ಪ ಬಳಸಿದರೆ ರುಚಿ, ಮತ್ತಷ್ಟು ವಿಭಿನ್ನವಾಗಿರುತ್ತದೆ.
ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳುದಮ್ ಬಿರಿಯಾನಿ ಗೊತ್ತು, ದಮ್ ಚಹಾ ಟೇಸ್ಟ್ ಮಾಡಿದ್ದೀರಾ? ಈ ಥರ ಒಮ್ಮೆ ಟ್ರೈ ಮಾಡಿ ನೋಡಿ.. ಅದರ ರುಚಿನೇ ಬೇರೆ.. ಚಹಾವನ್ನು ಹತ್ತಾರು ಬಗೆಯಲ್ಲಿ ಮಾಡಬಹುದು. ಅವುಗಳಲ್ಲಿ ದಮ್ ಚಹಾ ಟ್ರೈ ಮಾಡಿದ್ದೀರಾ? ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ರೆಸಿಪಿಯ ವಿಧಾನ.
ಸಹಜವಾಗಿ ಟೀ ಎಂದರೆ, ನೀರು, ಹಾಲು, ಟೀ ಪುಡಿಯನ್ನಷ್ಟೇ ಹಾಕಿ ಕುದಿಸಿ ಕುಡಿಯುವುದು ರೂಢಿ. ಇನ್ನು ಕೆಲವರು ಹಾಲಿನಲ್ಲಿಯೇ ಚಹಾ ಮಾಡಿ ಕುಡಿಯುವವರಿದ್ದಾರೆ. ಇದೀಗ ಇಲ್ಲಿ ಮಾಡುವ ರೆಸಿಪಿ ಕೊಂಚ ವಿಭಿನ್ನ. ಬಿರಿಯಾನಿಯಲ್ಲಿ ದಮ್ ಬಿರಿಯಾನಿ ಹೇಗೋ, ಅದೇ ರೀತಿಯಲ್ಲಿಯೇ ದಮ್ ಚಹಾವನ್ನೂ ಮಾಡಬಹುದು. ಇದರ ರುಚಿ ನಿಮ್ಮನ್ನು ಮತ್ತೆ ಕುಡಿಯುವಂತೆಯೂ ಮಾಡಬಹುದು. ಹಾಗಾದರೆ ಈ ದಮ್ ಚಹಾ ಮಾಡುವುದು ಹೇಗೆ?
ದಮ್ ಚಹಾಕ್ಕೆ ಬೇಕಾಗುವ ಸಾಮಗ್ರಿಗಳು. (ನೀವು ಎಷ್ಟು ಕಪ್ ಚಹಾ ಮಾಡಲು ಬಯಸುತ್ತೀರೋ ಅದರ ಆಧಾರದ ಮೇಲೆ ಸಾಮಗ್ರಿ ತೆಗೆದುಕೊಳ್ಳಿ. ನಾವಿಲ್ಲಿ ಕೇವಲ ಎರಡು ಕಪ್ ಚಹಾಕ್ಕೆ ಬೇಕಾಗುವ ಸಾಮಗ್ರಿ ಬಳಸಿಕೊಳ್ಳಲಾಗಿದೆ)
ಮೊದಲಿಗೆ ಒಂದು ಸಣ್ಣ ಟೀ ಕಪ್ ಮೇಲೆ ತೆಳುವಾದ ಕಾಟನ್ ರೀತಿಯ ಬಟ್ಟೆಯನ್ನು ಮುಚ್ಚುಳದ ರೀತಿಯಲ್ಲಿ ಕಟ್ಟಿ. ಆ ಬಟ್ಟೆಯ ಮೇಲೆ ಎರಡು ಚಮಚ ಸಕ್ಕರೆ, ಒಂದೂವರೆ ಚಮಚ ಟೀ ಪುಡಿ ಹಾಕಿ. ಇವುಗಳ ಜತೆ ಕತ್ತರಿಸಿದ ಶುಂಠಿ, ಏಲಕ್ಕಿ, ಲವಂಗ, ದಾಲ್ಟಿನ್ನಿ, ತುಳಸಿ ಎಲೆಗಳನ್ನು ಹಾಕಿ. ಬಳಿಕ ಇದೆಲ್ಲವನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ. ಆ ನೀರಿನ ಮಧ್ಯದಲ್ಲೆ ಈ ಟೀ ಕಪ್ ಇಟ್ಟು, ಹಬೆಯಲ್ಲಿಯೇ 10 ನಿಮಿಷ ಚೆನ್ನಾಗಿ ಬೇಯಿಸಿ. ಇತ್ತ ಸ್ಟೋವ್ ಮೇಲೆ ಹಾಲನ್ನು ಕುದಿಯಲು ಇಡಿ. ಹಾಲು ಕುದಿ ಬರುತ್ತಿದ್ದಂತೆ, ಹಬೆಯಲ್ಲಿ ಬೇಯಿಸಿದ ಮಿಶ್ರಣವನ್ನು ಟೀ ಕಪ್‌ನಲ್ಲಿಯೇ ಬಟ್ಟೆ ಸಮೇತ ಚೆನ್ನಾಗಿ ಹಿಂಡಿ. ಅದನ್ನು ಕುದಿಯುವ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದಿಷ್ಟು ಬಿಸಿ ಮಾಡಿ ದಮ್ ಚಹಾವನ್ನು ಸವಿಯಿರಿ.
ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳುಐದೇ ನಿಮಿಷದಲ್ಲಿ ಫಟಾಫಟ್ ರೆಡಿಯಾಗುತ್ತೆ ರುಚಿಕರ ಆಲೂ -ಮೊಟ್ಟೆ ಬೋಂಡಾ, ಮಕ್ಕಳಿಗಿದು ಬಲು ಇಷ್ಟ ಆಲೂ ಮತ್ತು ಮೊಟ್ಟೆ ಬಳಸಿ ಎಂದಾದರೂ ಬೋಂಡಾ ಮಾಡಿದ್ದೀರಾ? ಇಲ್ಲವಾದಲ್ಲಿ ಇಲ್ಲಿದೆ ನೋಡಿ ರುಚಿಕರ ಆಲೂ ಎಗ್ ಬೋಂಡಾ. ಮೊಟ್ಟೆಯೊಂದಿದ್ದರೆ ತರಹೇವಾರಿ ಖಾದ್ಯಗಳನ್ನು ಮಾಡಬಹುದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಮೊಟ್ಟೆಯಿಂದ ಏನೇ ಮಾಡಿದರೂ ಅದು ಅವರಿಗಿಷ್ಟ. ಹೀಗಿರುವಾಗ ಆಲೂ ಮತ್ತು ಮೊಟ್ಟೆ ಬಳಸಿ ಎಂದಾದರೂ ಬೋಂಡಾ ಮಾಡಿದ್ದೀರಾ? ಇಲ್ಲವಾದಲ್ಲಿ ಇಲ್ಲಿದೆ ನೋಡಿ ರುಚಿಕರ ಆಲೂ ಎಗ್ ಬೋಂಡಾ.
ಕಡಿಮೆ ಸಾಮಗ್ರಿ ಬಳಸಿಕೊಂಡು ಕೇವಲ ಐದೇ ನಿಮಿಷದಲ್ಲಿಯೇ ಈ ಬೋಂಡಾ ಮಾಡಬಹುದು. ನೋಡುವುದಕ್ಕೂ ಚೆಂದಕಾಣಿಸುವ ಈ ರೆಸಿಪಿ ಬಾಯಲ್ಲಿಟ್ಟರೆ ನಿಮ್ಮನ್ನು ಮತ್ತೆ ಮತ್ತೆ ಬೇಕೆನಿಸುವಂತೆ ಮಾಡುತ್ತದೆ. ಹಾಗಾದರೆ ಈ ಬೋಂಡಾ ಮಾಡಲು ಏನೆಲ್ಲ ಸಾಮಾಗ್ರಿ ಬೇಕು ಮತ್ತು ಮಾಡುವ ವಿಧಾನ ಹೇಗೆ? ಇಲ್ಲಿದೆ ನೋಡಿ ಮಾಹಿತಿ. ಆಲೂ ಮೊಟ್ಟೆ ಬೊಂಡಾ ಮಾಡಲು ಬೇಕಾಗುವ ಸಾಮಗ್ರಿ,
ಮೊದಲಿಗೆ ನಾಲ್ಕು ಆಲೂಗಡ್ಡೆ ಮತ್ತು ನಾಲ್ಕು ಮೊಟ್ಟೆಯನ್ನು ಬೇಯಿಸಿಕೊಳ್ಳಿ. ಬಳಿಕ ನಾಲ್ಕು ಆಲೂಗಡ್ಡೆಯನ್ನು ಒಂದು ಬೌಲ್‌ನಲ್ಲಿ ತೆಗೆದು, ಪುಡಿ ಮಾಡಿಕೊಳ್ಳಿ. ಹಾಗೇ ಪುಡಿಯಾದ ಮಿಶ್ರಣಕ್ಕೆ ಜೀರಿಗೆ, ಧನಿಯಾ ಕಾಳು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಚಾಟ್ ಮಸಾಲಾ, ಕೆಂಪು ಮೆಣಸಿನ ಖಾರದ ಪುಡಿ ಹಾಕಿಕೊಳ್ಳಿ. ಅರಿಶಿನ ಪುಡಿ, ಕತ್ತರಿಸಿದ ಕೊತ್ತಂಬರಿ ಹಾಕಿ. ಬಳಿಕ ಒಂದು ಕಪ್ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹೀಗೆ ರೆಡಿಯಾದ ಮಿಶ್ರಣವನ್ನು ಒಂದು ಹಿಡಿಯಷ್ಟು ತೆಗೆದುಕೊಂಡು ಕೈಯಲ್ಲಿಯೇ ತಟ್ಟಿ ಅದರ ಮೇಲೆ ಒಂದು ಮೊಟ್ಟೆ ಇಟ್ಟು. ಮೊಟ್ಟೆ ಕಾಣದಂತೆ ಆಲೂ ಮಿಶ್ರಣದಿಂದಲೇ ಮುಚ್ಚಿ. ಮತ್ತೊಂದು ಬೌಲ್‌ನಲ್ಲಿ ಒಡೆದ ಹಸಿ ಮೊಟ್ಟೆಯಲ್ಲಿ ಗೋಲಿಗಳನ್ನು ಅದ್ದಿ. ಮತ್ತೊಂದು ಬೌಲ್‌ನಲ್ಲಿ ಬ್ರೆಡ್ ಪುಡಿ ಮಾಡಿಕೊಂಡು ಆ ಪುಡಿಗೆ ಮೊಟ್ಟೆ ಆಲೂ ಗೋಲಿಗಳನ್ನು ಹಾಕಿ. ಕೊನೆಗೆ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೂ ಕರಿಯಿರಿ. ಬ್ರೌನ್ ಬಣ್ಣಕ್ಕೆ ಬಂದ ಬಳಿಕ ಒಂದು ಬೋಂಡಾದಲ್ಲಿ ಎರಡು ಭಾಗ ಮಾಡಿ ಬ್ಯಾಟಿಂಗ್ ಆರಂಭಿಸಿ. ನೀವಿದಕ್ಕೆ ಟೊಮೆಟೊ ಕೆಚಪ್ ಸೈಡಿಷ್ ಆಗಿ ಬಳಸಿಕೊಳ್ಳಬಹುದು.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 5 ಅತ್ಯುತ್ತಮ ವ್ಯಾಯಾಮಗಳುಇವತ್ತು ಏನು ವೆರೈಟಿ ಮಾಡೋದು ಅಂದುಕೊಂಡಿದ್ದೀರಾ?ಈ ರುಚಿಯಾದ 'ಚಿಕನ್ 555' ಟ್ರೈ ಮಾಡಬಹುದಾ ನೋಡಿ? ಎಲ್ಲಾ ಸಾಮಗ್ರಿಗಳಿದ್ದರೆ, ರೆಸ್ಟೋರೆಂಟ್‌ನಲ್ಲಿ ಮಾತ್ರವಲ್ಲ, ಮನೆಯಲ್ಲಿ ಕೂಡಾ ಇಂತಹ ಟೇಸ್ಟಿ ರೆಸಿಪಿಗಳನ್ನು ಮಾಡಬಹುದು. ನೀವು ಊಟಕ್ಕೆ ಯಾರನ್ನಾದರೂ ಇನೈಟ್ ಮಾಡಿದ್ದರೆ, ಹೊಸ ರುಚಿ ಟ್ರೈ ಮಾಡಿ ಮನೆಯವನ್ನು ಇಂಪ್ರೆಸ್ ಮಾಡಬೇಕು ಎಂದುಕೊಂಡಿದ್ದರೆ ಚಿಕನ್ 555 ಕೂಡಾ ಬೆಸ್ಟ್ ಆಕ್ಷನ್, ಮಕ್ಕಳಿಗೆ ಕೂಡಾ ಇದು ಇಷ್ಟವಾಗುತ್ತದೆ.
ಮನೆಗೆ ಚಿಕನ್ ತಂದಾಗಲೆಲ್ಲಾ ಇವತ್ತು ಏನು ರೆಸಿಪಿ ಮಾಡೋದು ಅನ್ನೋದೆ ಕನ್ನೂಸ್. ರೆಸ್ಟೋರೆಂಟ್‌ಗಳಲ್ಲಿ ವೆರೈಟಿ ವೆರೈಟಿ ಚಿಕನ್ ದೊರೆಯುತ್ತದೆ. ಒಮ್ಮೆ ಆ ರುಚಿ ಮಾಡಿದಾಗ, ಮನೆಯಲ್ಲಿ ಕೂಡಾ ಈ ರೀತಿ ಮಾಡಬೇಕೆಂದು ಅನ್ನಿಸದೆ ಇರದು. ಬೇಕಾಗುವ ಸಾಮಗ್ರಿಗಳು,
ಚಿಕನ್ ತೊಳೆದು ನೀರು ಸೋರಿಸಿ ಸಣ್ಣ-ಉದ್ದದ ಸ್ಕ್ರಿಪ್‌ಗಳನ್ನಾಗಿ ಕತ್ತರಿಸಿಕೊಳ್ಳಿ. ಚಿಕನ್‌ಗೆ ಕಾರ್ನ್‌ಪ್ಲೋ, ಮೈದಾ, ಉಪ್ಪು, ಪೆಪ್ಪರ್ ಪೌಡರ್, ಮೊಟ್ಟೆ ಸೇರಿಸಿ ಮಿಕ್ಸ್ ಮಾಡಿ 30 ನಿಮಿಷಗಳ ಕಾಲ ಬಿಡಿ. ಮ್ಯಾರಿನೇಟ್ ಮಾಡಿದ ಚಿಕನ್ ಸ್ಕ್ರಿಪ್ಟ್ಗಳನ್ನು ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂಕರಿದು ತೆಗೆದಿಡಿ. ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಫ್ಟ್ ಮಾಡಿ. ನಂತರ ಹಸಿಮೆಣಸಿನಕಾಯಿ ಪೇಸ್ಟ್, ಕರಿಬೇವು, ಸಣ್ಣಗೆ ಉದ್ದಕ್ಕೆ ಹೆಚ್ಚಿದ ಕ್ಯಾಪ್ಟಿಕಮ್ ಸೇರಿಸಿ ಹುರಿಯಿರಿ. ಮೊಸರು ಸೇರಿಸಿ ತಿರುವಿ, ಈ ಮಿಶ್ರಣಕ್ಕೆ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಚಿಕನ್ ಮಸಾಲೆ ಪುಡಿ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ. ಇದಕ್ಕೆ ಮೊದಲೇ ಕರಿದಿಟ್ಟುಕೊಂಡ ಚಿಕನ್ ಸ್ಕ್ರಿಪ್ಟ್ಗಳನ್ನು ಸೇರಿಸಿ ಮಿಶ್ರಣ ಗಟ್ಟಿಯಾಗುವರೆಗೂ ಕುಕ್ ಮಾಡಿ. ಕೊನೆಗೆ ಗೋಡಂಬಿ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಚಿಕನ್ 555 ತಿನ್ನೋಕೆ ರೆಡಿ.
ಇದನ್ನು ಓದಿ: 10 ಅತ್ಯಂತ ಶಕ್ತಿಯುತ ಔಷಧೀಯ ಸಸ್ಯಗಳುಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಆಪಲ್ ಜಾಮ್, ವಿಧಾನ ತುಂಬ ಸರಳ, ಕಡಿಮೆ ಖರ್ಚು, ಮಕ್ಕಳಿಗೆ ಪ್ರಿಯವಾದ ಜಾಮ್‌ಗಳನ್ನು ಮಾರುಕಟ್ಟೆಯಿಂದ ತರುವುದೇ ಹೆಚ್ಚು. ಮಾಡುವ ಸಾಹಸ ಯಾರಿಗೆ ಬೇಕೆಂದು, ಬಗೆಬಗೆ ಪ್ಲೇವರ್‌ನ ಜಾಮ್‌ಗಳನ್ನೇ ಖರೀದಿ ಮಾಡಿ ತರುತ್ತೇವೆ. ಆದರೆ, ಈ ಜಾಮ್ ಮಾಡುವುದು ತುಂಬ ಸರಳ ಎಂಬ ವಿಚಾರ ಮಾತ್ರ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಿದ್ದರೆ, ನಿಮ್ಮ ಇಷ್ಟದ ಜಾಮ್ ಆಪಲ್ ಆಗಿದ್ದರೆ, ಅದನ್ನು ಮಾಡುವ ವಿಧಾನ ಹೇಗೆಂದು ಬನ್ನಿ ಇಲ್ಲಿ ತಿಳಿಯೋಣ. ಬೇಕಾಗುವ ಸಾಮಗ್ರಿ,
ಮೊದಲಿಗೆ ಸೇಬು ಹಣ್ಣುಗಳ ಮೇಲಿನ ಸಿಪ್ಪೆಯನ್ನು ಬಿಡಿಸಿಕೊಳ್ಳಿ. ಅದಾದ ಬಳಿಕ ಬೀಜಗಳನ್ನೂ ತೆಗೆದು, ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಹಾಗೆ ಹೆಚ್ಚಿದ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಬೇಯಿಸಿಕೊಳ್ಳಿ. ಬಳಿಕ ಅದೇ ಪಾತ್ರೆಯಲ್ಲಿ ಬೆಂದ ಸೇಬುಹಣ್ಣನ್ನು ಚಮಚದ ಸಹಾಯದಿಂದ ಪೇಸ್ಟ್ ಹದಕ್ಕೆ ತನ್ನಿ. ಈಗ ಆ ಮಿಶ್ರಣಕ್ಕೆ 450 ಗ್ರಾಂ ಸಕ್ಕರೆ ಹಾಕಿಕೊಳ್ಳಿ. ಸಕ್ಕರೆ ಕರಗಿ ಅಂಟು ಬಿಡುವವರೆಗೂ ಹದವಾಗಿ ಮಿಶ್ರಣ ಮಾಡುತ್ತಲೇ ಇರಿ. ಈ ಮಿಶ್ರಣಕ್ಕೆ ಏಲಕ್ಕಿ ಪುಡಿ, ಒಂದು ಸಣ್ಣ ದಾಲ್ಟಿ ತುಣುಕು, ನಿಮಗಿಷ್ಟವಾದ ಬಣ್ಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಒಂದು ಟೀ ಚಮಚ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ, ಒಂದು ಗಾಜಿನ ಬಾಟಲ್‌ಗೆ ತೆಗೆದಿಡಿ. ಬ್ರೆಡ್ ಜತೆಗೆ ನೀವು ಈ ಜಾಮ್ ಬಳಕೆ ಮಾಡಬಹುದು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...