Watch Video
"ನನ್ನ ಕೈಯನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ, ಅದರಿಂದ ರಕ್ತ ಹರಿಯುತ್ತಿತ್ತು. ಯಾರೋ ಎರಡು ಕೈಯನ್ನು ಕತ್ತರಿಸಿದಷ್ಟು ನೋವು ಆಗುತ್ತಿತ್ತು. ವೈದ್ಯರು(doctor) ಕೈಯಲ್ಲಿದ್ದ ಕೈಗವಸನ್ನು(gloves) ತೆಗೆದು ಚಿಕಿತ್ಸೆ ಕೊಡುವಾಗ ಚರ್ಮವೇ ಕೀಳಲು ಪ್ರಾರಂಭಿಸಿತು. ಇದೇ ರೀತಿ ನಡೆದರೆ ನನ್ನ ಕಿಡ್ನಿ ಮತ್ತು ಹೃದಯ ಕೆಲಸ ಮಾಡುವುದು ನಿಲ್ಲಿಸುತ್ತದೆ ಎಂದು ವೈದ್ಯರು ಹೇಳಿದರು. ಆದರೆ ನನ್ನ ದೃಷ್ಟಿ ಆ ವಿಶ್ವ ದಾಖಲೆಯ(world record) ಮೇಲೆ ಇತ್ತು. ಆ ದಾಖಲೆಯನ್ನು ನಾನು ಮುರಿಯಲೇಬೇಕಿತು. ನಾನು ಎರಡು ಬಾರಿ ಸೋತಿದೆ, ಆದರೂ ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ ಮೂರನೇ ಬಾರಿ ನನ್ನ ಜೀವವನ್ನೇ ಇದಕ್ಕೆ ಪಡಯಿಟ್ಟು 17 ಗಂಟೆಯಲ್ಲಿ 4,030 ಪುಲ್ ಅಪ್ಪ್ಸ್ ಮಾಡಿ, 24 ಗಂಟೆಯಲ್ಲೇ ಅಧಿಕ ಪುಲ್ ಅಪ್ಪ್ಸ್ ಮಾಡಿದ ವಿಶ್ವ ದಾಖಲೆಯನ್ನು ಮಾಡಿದೆ. ಇಷ್ಟು ನೋವು ತೆಗೆದುಕೊಂಡ ಮೇಲೆ ನಾನು ಇನ್ನೊಬ್ಬರ ರೀತಿ ಸಾಕೆನ್ನುತ್ತಿದ್ದೆ. ಆದರೆ ನಾನು ತಿಳಿದಿರುವ ಪ್ರಕಾರ ಏನೇ ಆದರೂ, ಮುಂದೆ ಎಷ್ಟೇ ಕಠಿಣವಿದ್ದರು, ನಾವು ಆ ಕಠಿಣತೆಯಿಂದ ಒಂದು ಹೆಜ್ಜೆ ಮುಂದಿರಬಹುದು ಎಂದು ತಿಳಿದುಕೊಂಡೆ".
ನೀವು ಈಗ ಕೇಳಿದ ಕಥೆಯು ಜಗತ್ತಿನ ಅತ್ಯಂತ ಕಠಿಣ(toughest) ವ್ಯಕ್ತಿಯಾದ ಡೇವಿಡ್ ಗಾಗಿನ್ಸ್(david goggins) ಅವರದ್ದಾಗಿದೆ. ಇವರು ಸವಾಲುಗಳಿಗಿಂತ ಒಂದು ಹೆಜ್ಜೆ ಯಾವಾಗಲೂ ಮುಂದಿರುತ್ತಾರೆ. ಅದು ಜಗತ್ತಿನ ಕಠಿಣ ಆರ್ಮಿ ಟ್ರೈನಿಂಗ್ ಇರಲಿ, ಯು.ಎಸ್. ನ್ಯಾವಿ ಸೀಲ್ನಲ್ಲಿ 3 ಬಾರಿ ಭಾಗವಹಿಸುವುದಾಗಲಿ ಅಥವಾ ಮಂಡಿಯ ಆಪರೇಷನ್, 2 ಬಾರಿ ಹೃದಯದ ಸರ್ಜರಿ, ಶ್ವಾಸಕೋಶದಲ್ಲಿ(lungs) ಪ್ಲಾಸ್ಮ ತುಂಬಿದ್ದರು, ಜಗತ್ತಿನ ದೊಡ್ಡ ಮ್ಯಾರಥೋನ್ ನಲ್ಲಿ ಭಾಗವಹಿಸಿ ಗೆಲ್ಲುತ್ತಾರೆ. ನಾವು ಇಂದು ಇವರು ಬರೆದಿರುವ "never finished" ಪುಸ್ತಕದಿಂದ 5 ಮೌಲ್ಯಯುತ ಬದುಕಿನ ಪಾಠಗಳ ಬಗ್ಗೆ ತಿಳಿಯಲಿದ್ದೇವೆ. ಇವುಗಳನ್ನು ಗಾಗಿನ್ಸ್ ಅವರು ಫಾಲೋ ಮಾಡುತ್ತಾರೆ.
ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳುಬಾಲ್ಯದಿಂದಲೂ ಡೇವಿಡ್ ಗಾಗಿನ್ಸ್ ಅವರ ಬದುಕಿನಲ್ಲಿ ಒಂದು ಭಯವಿತ್ತು, ಅದು ಅವರ ತಂದೆಯಿಂದಾಗಿ ಇತ್ತು. ಅವರು "ಪ್ರತಿದಿನ ನಮ್ಮ ತಂದೆ, ನನ್ನ ತಾಯಿ, ಅಣ್ಣ ಮತ್ತು ನನಗೆ ಹೊಡೆಯುತ್ತಿದ್ದರು. ಒಮ್ಮೊಮ್ಮೆ ಈ ಹೊಡೆದಾಟದಿಂದ ಗಾಯವು ಆಗುತ್ತಿತ್ತು. ನನ್ನ 10 ವರ್ಷದಲ್ಲಿ ನಾನು, ನನ್ನ ಅಣ್ಣ ಮತ್ತು ತಾಯಿ, ನನ್ನ ತಂದೆಯನ್ನು ಬಿಟ್ಟು ಹೋದೆವು. ಹೋಗುವಾಗ ನನ್ನ ತಂದೆ ನನ್ನ ತಾಯಿಗೆ, "ನೀನು ಒಂದು ವೇಶ್ಯೆ ಆಗುತ್ತೀಯಾ ಮತ್ತು ನಿನ್ನ ಈ ಮಕ್ಕಳು ದರೋಡೆಕೋರರು ಆಗುತ್ತಾರೆ" ಎಂದರು.
ಈ ಭೂತಕಾಲದ(past) ನೆನಪುಗಳು ಡೇವಿಡ್ ಅವರ ತಲೆಯಲ್ಲಿ ಯಾವಾಗಲೂ ಇರುತ್ತಿತ್ತು. ಪ್ರತಿದಿನ ಈ ಭೂತಕಾಲದ ನೆನಪುಗಳು ಅವರನ್ನು ನೋಯಿಸುತ್ತಿತ್ತು. ಆದರೆ ಡೇವಿಡ್ ಅವರಿಗೆ ಜೀವನಪೂರ್ತಿ ಈ ನೆನಪುಗಳಿಂದ ತೊಂದರೆಗೊಳಗಾಗಲು ಇಷ್ಟವಿರಲಿಲ್ಲ. ಹೀಗಾಗಿ ಅವರು ಮನಸ್ಸಿನಲ್ಲಿ ಇದ್ದ ಈ ನೋವನ್ನು ಟೇಪ್ ರೆಕಾರ್ಡರ್ ನಲ್ಲಿ ರೆಕಾರ್ಡ್ ಮಾಡಿದರು. ಇದರಿಂದ ಆ ಭೂತಕಾಲದ ಘಟನೆಗಳು ಅವರಿಗೆ ಒಂದು ಕಥೆಯ ರೀತಿ ಅನಿಸಿತು. "ಒಂದು ಶಕ್ತಿಯುತ ಕಥೆ, ನಾನು ಎಷ್ಟು ಬಾರಿ ಅದನ್ನು ಕೇಳಿದ್ದೇನೆಂದರೆ, ಅದು ನನ್ನ ಮೇಲೆ ಪ್ರಭಾವ ಬೀರುವುದು ಕಡಿಮೆಯಾಯಿತು".
ಜೀವನದಲ್ಲಿ ನಮ್ಮ ಭಯ ಮತ್ತು ದೌರ್ಬಲ್ಯದಿಂದ ದೂರ ಹೋದರೆ ನಾವು ಖುಷಿಯಲ್ಲಿ ಇರಬಹುದು, ಆದರೆ ಅದರಿಂದ ಮೇಲೆಳಲು ಸಾಧ್ಯವಿಲ್ಲ. ಅದೇ ನಾವು ನಮಗೆ ನಡೆಯುತ್ತಿರುವ ಎಲ್ಲವನ್ನು ಸ್ವೀಕರಿಸಿದರೆ, ನಮಗೆ ಮಾನಸಿಕವಾಗಿ ಚಿತ್ರಹಿಂಸೆ(mentally torcher) ನೀಡುವ ಎಲ್ಲವನ್ನು ಸ್ವೀಕರಿಸಲು ಸಿದ್ಧರಾಗುತ್ತೇವೆ. ಜೀವನದಲ್ಲಿ ಜನರು ತಮ್ಮ ಸತ್ಯದಿಂದ ದೂರವಿರಲು ಇಷ್ಟಪಡುತ್ತಾರೆ ಎಂದು ಡೇವಿಡ್ ಹೇಳುತ್ತಾರೆ. ಆದರೆ ಯಾರು ತನ್ನ ತಪ್ಪಿನ ಬಗ್ಗೆ ತಿಳಿದುಕೊಂಡಿರುತ್ತಾನೋ, ಅವನು ತನ್ನ ನಿಜವಾದ ಸಾಮರ್ಥ್ಯವನ್ನು ಅನ್ವೇಷಿಸುತ್ತಾನೆ.
ಡೇವಿಡ್ ಸಾಮಾಜಿಕ ಮಾಧ್ಯಮದಲ್ಲಿರುವ ನೆಗೆಟಿವ್ ಕಮೆಂಟ್ನಿಂದ ಹಿಡಿದು, ಅವರಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡುವ ಎಲ್ಲವನ್ನು ಟೇಪ್ ರೆಕಾರ್ಡರ್ನಲ್ಲಿ ರೆಕಾರ್ಡ್ ಮಾಡಿ ಕೇಳುತ್ತಿದ್ದರು. ಇದರಿಂದ ಸ್ವಲ್ಪ ಸಮಯದ ನಂತರ ಆ ನಕಾರಾತ್ಮಕ ವಿಷಯಗಳು ಇವರ ಮೇಲೆ ಪ್ರಭಾವ ಬೀರುತ್ತಿರಲಿಲ್ಲ ಮತ್ತು ಅವೇ ಪ್ರೇರಣೆ ಮಾಡುತ್ತಿತು. ಇದುವೇ ನಮ್ಮ ಮೊದಲನೇ ಪಾಠವಾಗಿದೆ ಅದೇ "face your fear".
ಗಾಗಿನ್ಸ್ ಅವರು ಭಯದ ಬಗ್ಗೆ ಇನ್ನೊಂದು ಕಥೆಯನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಅವರು ಬಾಲ್ಯದಲ್ಲಿ ಈಜನ್ನು(swimming) ಕಲಿಯುವಾಗ ಮುಳುಗುವ ಭಯದಿಂದ 3 ಮೀಟರ್ ಮಾರ್ಕ್ಗಿಂತ ಮುಂದೆ ಹೋಗುತ್ತಿರಲಿಲ್ಲ. ಆದರೆ ಪ್ರತಿದಿನ ಅವರು ಆ ಪೂಲ್ನ ಆಳವಾದ ಭಾಗವನ್ನು ನೋಡಿದಾಗ ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎನಿಸುತ್ತಿತ್ತು. ಹೀಗಾಗಿ ಅವರು, "ನಾನು ಈ ಬಾರಿ 3 ಮೀಟರ್ ಮಾರ್ಕ್ನಲ್ಲಿ ನಿಂತು ಉಸಿರನ್ನು ತೆಗೆದುಕೊಳ್ಳುವುದಿಲ್ಲ, ಬದಲಿಗೆ ಪೂರ್ತಿ ಲ್ಯಾಪ್ ಅನ್ನು ಕವರ್ ಮಾಡುವೆ ಮತ್ತು ಈ ರೀತಿ ಅವರು ಇದನ್ನು ಬಾರಿ ಬಾರಿ ಮಾಡಿದರು. ಇದರಿಂದ ಅವರಿಗೆ ಈಜಿನ ಮೇಲಿನ ಭಯವೇ ಹೋಯಿತು.
ಅನೇಕರು ಭಯದಿಂದ ತಮ್ಮನ್ನು ತಾವೇ ಹಿಂದೆದುಕೊಳ್ಳುತ್ತಾರೆ ಎಂದು ಡೇವಿಡ್ ಅವರು ತಿಳಿಸಿದ್ದಾರೆ ಮತ್ತು ಅವಕಾಶದ ಆ ದೊಡ್ಡದಾದ ಪೂಲ್ ಒಳಗೆ ಅವರಿಗೆ ಇಳಿಯಲು ಸಾಧ್ಯವಾಗುವುದಿಲ್ಲ. ನಾವು ನಮ್ಮ ಭಯದ ಕಣ್ಣಿಗೆ ಕಣ್ಣಿಟ್ಟು ನೋಡುವಷ್ಟು ನಮ್ಮ ಮೆದುಳಿಗೆ ತರಬೇತಿ(train) ನೀಡಬೇಕು.
ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳುಡೇವಿಡ್ ಅವರು ಮುಂಚಿನಿಂದಲೂ 6 ಪ್ಯಾಕ್ ಅಬ್ಸ್ ಮತ್ತು ಇಷ್ಟು ಧೈರ್ಯವಿರುವ ವ್ಯಕ್ತಿ ಆಗಿರಲಿಲ್ಲ. 24 ವರ್ಷದವರೆಗೂ ಅವರ ಜೀವನ ವಿಭಿನ್ನವಾಗಿತ್ತು, ಅವರು 135 ಕೆಜಿಯಷ್ಟು ತೂಕವಿದ್ದರೂ, ಜೀವನದ ಮೇಲೆ ಯಾವುದೇ ಆಸೆಗಳು ಇರಲಿಲ್ಲ ಮತ್ತು ತಮ್ಮನ್ನು ಉತ್ತಮ ಮಾಡಿಕೊಳ್ಳಲು ಯಾವುದೇ ಯೋಜನೆ ಇರಲಿಲ್ಲ. ಅವರು ಕೇವಲ ರೆಸ್ಟೋರೆಂಟ್ಗಳಿಗೆ ಹೋಗಿ ಕೀಟಗಳನ್ನು ಸಾಯಿಸುವ ಕೆಲಸ ಮಾಡುತ್ತಿದ್ದರು. ನಾನು ನೆಪ ಹುಡುಕುವ ಜಗತ್ತಿಗೆ ಸೇರಿದ್ದೆ ಎಂದು ಡೇವಿಡ್ ಹೇಳುತ್ತಾರೆ.
ಜಗತ್ತಿನಲ್ಲಿ ಪ್ರತಿಯೊಬ್ಬರು ಪ್ರತಿಕ್ಷಣ ಒಂದು ಕನಸು ಕಾಣುತ್ತಾರೆ ಮತ್ತು ಸ್ವಲ್ಪ ಕಠಿಣವಾದ ನಂತರ ಅದನ್ನು ಬಿಟ್ಟು ಬಿಡುತ್ತಾರೆ. ಆದರೆ ಡೇವಿಡ್, ಅವರನ್ನು ಉತ್ತಮ ಮಾಡಿಕೊಳ್ಳಲು ಬಯಸಿದ್ದರು. ಅವರಿಗೆ ಜೀವನಪೂರ್ತಿ 135 ಕೆಜಿ ಇಟ್ಟುಕೊಂಡು ಜೀವಿಸಲು ಇಷ್ಟವಿರಲಿಲ್ಲ. ಹೀಗಾಗಿ ಅವರು ಯುಎಸ್ ನಾವೀ ಸೀಲ್ನಲ್ಲಿ ಭಾಗವಹಿಸಲು ಯೋಚಿಸುತ್ತಾರೆ. ಮತ್ತು ಮೂರು ತಿಂಗಳಲ್ಲಿ 80 ಕೆಜಿಯಷ್ಟು ತೂಕವನ್ನು ಇಳಿಸಿಕೊಳ್ಳುತ್ತಾರೆ. "ನಾನು ಜಿಮ್ಗೆ ಹೋಗಲು ಪ್ರಾರಂಭಿಸಿದೆ, ನನ್ನ ದೇಹ ಆಕಾರಕ್ಕೆ ಬರುತ್ತಿತ್ತು, ಆದರೆ ಏನನ್ನಾದರೂ ಗೆಲ್ಲಲು ಸಿಕ್ಸ್ ಪ್ಯಾಕ್ ಅಬ್ಸ್ ಗಿಂತ ಸ್ಟೀಲ್ ಪ್ಲೇಟೆಡ್ ಮೈಂಡ್ ನ ಅವಶ್ಯಕತೆ ಇರುತ್ತದೆ" ಎಂದು ಹೇಳುತ್ತಾರೆ. ಇದು ಅವರಿಗೆ ಸೀಲ್ ಟ್ರೈನಿಂಗ್ನಲ್ಲಿ ಸಮುದ್ರದ ದೊಡ್ಡ ಅಲೆ ಎತ್ತಿ ಬಿಳಿಸಿದಾಗ ತಿಳಿಯಿತು.
ಅವರಿಗೆ ಹಿಂದಿನ ಟ್ರೈನಿಂಗ್ನಲ್ಲಿ ನ್ಯುಮೋನಿಯಾವಾಗಿತು(neumonia). ಇದರಿಂದ ಅವರಿಗೆ ಇಂದು ಸಮುದ್ರದಲ್ಲಿ ಉಸಿರು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರು "ನಾನು ಇಲ್ಲಿ ಸೋತರೆ ಮುಂದೆ ಏನನ್ನು ಮಾಡಲು ಸಾಧ್ಯವಿಲ್ಲ" ಎಂದು ತಿಳಿದಿದ್ದರು. "ನನ್ನ ಕೈ ಕೆಲಸ ಮಾಡಲಾಗದಷ್ಟು ತಣ್ಣಗಾಗಿತ್ತು, ನನ್ನ ತಂಡದವರು(teammates) ಕೂಡ ನಡುಗುತ್ತಿದರು. ಆದರೆ ನಾನು ಸೀಲ್ ಆಗುವವರೆಗೂ ನಿಲ್ಲುವುದಿಲ್ಲ" ಎಂದು ಹೇಳಿದರು. ನಾವು ಕಷ್ಟದಲ್ಲಿದ್ದಾಗ ಈ ಕಷ್ಟವೆಲ್ಲ ಬೇಗನೆ ಪರಿಹಾರವಾಗಿ, ನಮ್ಮ ಹಿಂದಿನ ಜೀವನವೇ ಬರಲಿ ಎಂದು ಯೋಚಿಸುತ್ತೇವೆ. ಇದುವೇ ದೌರ್ಬಲ್ಯವಾಗಲು ಇರುವ ಗುರುತಾಗಿದೆ. ಡೇವಿಡ್ ಅವರು ಒಂದು ಪರಿಕಲ್ಪನೆಯನ್ನು(concept) ಫಾಲೋ ಮಾಡುವುದರಿಂದ ಸೀಲ್ ಟ್ರೈನಿಂಗ್ ಅನ್ನು ಪಾಸ್ ಮಾಡಲು ಸಾಧ್ಯವಾಯಿತು. ಅವರು ಅದನ್ನು "ಮೆಂಟಲ್ ಲ್ಯಾಬ್" ಎಂದು ಕರೆಯುತ್ತಾರೆ. ಇದರಿಂದಲೇ ಅವರು ಹೇಲ್ಸ್ ವೀಕ್ನಲ್ಲಿ(hells week) ಮೂರು ಬಾರಿ ಭಾಗಿಯಾದರು.
ಮೆಂಟಲ್ ಲ್ಯಾಬ್ ಅನ್ನು ಒಂದು ದೊಡ್ಡ ಬಬಲ್ ಎಂದುಕೊಳ್ಳಿ. ಅದರಲ್ಲಿ ಕೇವಲ ನಾವಿರುತ್ತೇವೆ ಮತ್ತು ಯಾವುದೇ ರೀತಿಯ ನೆಗೆಟಿವಿಟಿ ಅಥವಾ ನೆಗೆಟಿವ್ ಯೋಚನೆಗಳನ್ನು ಬರಲು ಬಿಡುವುದಿಲ್ಲ. ಈ ಮೆಂಟಲ್ ಲ್ಯಾಬ್ನಲ್ಲಿ ನಾವು ಎಷ್ಟು ಗಟ್ಟಿಯಾಗಿ ಇರಬೇಕೆಂದರೆ ಹೊರಗೆ ಇರುವ ಯಾವುದೇ ಸನ್ನಿವೇಶಗಳು ಈ ಮೆಂಟಲ್ ಬಬ್ಬಲ್ ಅನ್ನು ಮುರಿಯಬಾರದು. ನಾವು ಯಾವಾಗಲೂ ದೌರ್ಬಲ್ಯವಾಗಿ, ನಮ್ಮ ಕನಸನ್ನು ಬಿಟ್ಟು ಕೊಡಬೇಕೆಂದಿದ್ದರೆ ನಮ್ಮ ಮೆಂಟಲ್ ಲ್ಯಾಬ್ಗೆ ಹೋಗಬಹುದು. ಅಲ್ಲಿ ನಾವು ಈ ಯುದ್ಧಕ್ಕಿಂತ ದೊಡ್ಡವನು ಮತ್ತು ತುಂಬಾ ಗಟ್ಟಿ ಇದ್ದೇನೆ ಎಂದು ಹೇಳಬಹುದು.
ಇದನ್ನು ಓದಿ: What Makes us Successful?2018ರಲ್ಲಿ ಡ್ಯಾವಿಟ್ ಗಾಗಿನ್ಸ್ ಅವರು "ಕಾಂಟ್ ಹರ್ಟ್ ಮಿ"(cant hurt me) ಪುಸ್ತಕವನ್ನು ಪ್ರಕಟಿಸುತ್ತಾರೆ. ಈ ಪುಸ್ತಕ ಇಂದು ತುಂಬಾ ಪ್ರಸಿದ್ಧವಾಗಿದೆ, ಆದರೆ ಇದರ ಪ್ರಕಟವಾಗುವ ಪಯಣ ಇದು ಪ್ರಸಿದ್ಧಿಯಾದಷ್ಟು ಸುಲಭವಿರಲಿಲ್ಲ. ಇದನ್ನು ಅವರು ಅನೇಕ ಪ್ರಕಾಶಕರ ಹತ್ತಿರ ತೆಗೆದುಕೊಂಡು ಹೋಗುತ್ತಾರೆ. ಆದರೆ ಆ ಎಲ್ಲ ಪ್ರಕಾಶಕರು ಅವರನ್ನು ತಿರಸ್ಕರಿಸುತ್ತಾರೆ. ಇದರಲ್ಲಿ ಜಗತ್ತಿನಲ್ಲಿ ಲೆಜೆಂಡ್ ಆದ ಇಡಿ ವಿಕ್ಟರ್(ed victor) ಅವರು ಗಾಗಿನ್ಸ್ ಪುಸ್ತಕ ನೋಡಿ, "ಈ ಪುಸ್ತಕಕ್ಕೆ ಅತಿ ಹೆಚ್ಚು ಮಾರಾಟವಾಗುವ ಕ್ಷಮತೆ ಇಲ್ಲ, ಹೀಗಾಗಿ ಒಳ್ಳೆಯ ಲಾಭ ಗಳಿಸಲು ಸಾಧ್ಯವಿಲ್ಲ" ಎಂದು ಹೇಳಿ ಅವರ ಪುಸ್ತಕವನ್ನು ತಿರಸ್ಕರಿಸಿದರು. ಈ ರೀತಿಯ ದೊಡ್ಡ ವ್ಯಕ್ತಿಯೇ ನಮ್ಮ ಐಡಿಯಾಗಳನ್ನು ದುರ್ಬಲವೆಂದಾಗ ಯಾರಿಗಾದರೂ ಆತ್ಮವಿಶ್ವಾಸ ಕಡಿಮೆಗೊಳ್ಳುತ್ತದೆ. ಆದರೆ ಗಾಗಿನ್ಸ್ ಅವರ ಪುಸ್ತಕದ ಮೇಲೆ ಪೂರ್ತಿಯಾಗಿ ಆತ್ಮವಿಶ್ವಾಸ ಹೊಂದಿದ್ದರು. ಹೀಗೆ ಅನೇಕ ಕಡೆಗಳಲ್ಲಿ ಹುಡುಕಿದ ನಂತರ ಗಾಗಿನ್ಸ್ ಅವರ ಪುಸ್ತಕವನ್ನು ಪ್ರಕಟಿಸಲು ಒಬ್ಬ ಏಜೆಂಟ್ ಒಪ್ಪಿಕೊಳ್ಳುತ್ತಾನೆ ಮತ್ತು 2.5 ಕೋಟಿಯಷ್ಟು ಹಣವನ್ನು ಅಡ್ವಾನ್ಸ್ ಆಗಿ ನೀಡುತ್ತಾನೆ. ಗಾಗಿನ್ಸ್ ಇದರಿಂದ ತುಂಬಾ ಖುಷಿಯಾಗುತ್ತಾರೆ.
ಆದರೆ ನಂತರ ಅವರಿಗೆ ಅವರ ಕಥೆಯನ್ನು ಎಲ್ಲಾ ರೀತಿಯ ಹಕ್ಕುಗಳನ್ನು(rights)ತೆಗೆದುಕೊಂಡು ಸ್ವತಃಹ ತಾವೇ ಪ್ರಕಟಿಸಬೇಕೆಂದು ಯೋಚಿಸುತ್ತಾರೆ. ಏಕೆಂದರೆ ಆ ಪುಸ್ತಕದಲ್ಲಿ ಅವರು ಅವರ ಬದುಕಿನ ಪಯಣದ ಬಗ್ಗೆ ತಿಳಿಸಿದರು. ಅಧಿಕ ಯೋಚಿಸಿದ ನಂತರ ಅವರು ಆ ಒಪ್ಪಂದವನ್ನು ತಿರಸ್ಕರಿಸಿದರು. ಇದರಿಂದ ಪ್ರಕಾಶಕ ಕೋಪದಿಂದ, "ನಿನ್ನ 10,000 ಕಾಫಿ ಕೂಡ ಮಾರಾಟವಾಗುವುದಿಲ್ಲ" ಏನ್ನುತ್ತಾನೆ. ಆದರೆ ಡೇವಿಡ್ ನಿಲ್ಲಲಿಲ್ಲ, ಅವರ ಹತ್ತಿರ ಇದ್ದ ಹಣದ ಶೇಕಡ 90ರಷ್ಟು ಹಣವನ್ನು ಇವುಗಳಿಗೆ ಖರ್ಚು ಮಾಡುತ್ತಾರೆ. ಇದು ತುಂಬಾ ದೊಡ್ಡ ಅಪಾಯವಾಗಿದೆ(risk). ಪ್ರತಿಯೊಬ್ಬರು ಸ್ವೀಕರಿಸಲು ತಿರಸ್ಕರಿಸಿದ ಒಂದು ಐಡಿಯಾಗೆ ತನ್ನ ಶೇಕಡ 90ರಷ್ಟು ಸೇವಿಂಗ್ ಹಾಕುವುದು, ಒಂದು ರೀತಿಯ ದೊಡ್ಡ ಅಪಾಯವಾಗಿದೆ.
"ಕಾಂಟ್ ಹರ್ಟ್ ಮಿ" ಪ್ರಕಟವಾದಾಗ ಅದು ನ್ಯೂಯಾರ್ಕ್ ಟೈಮ್ಸ್ ನಲ್ಲಿ "ಉತ್ತಮ ಮಾರಾಟವಾದ(best selling)" ಪುಸ್ತಕ ಆಗುತ್ತದೆ. ಡೇವಿಡ್ 2.5 ಕೋಟಿಯಾಷ್ಟು ಅಡ್ವಾನ್ಸ್ ತೆಗೆದುಕೊಳ್ಳಬಹುದು. ಆದರೆ ಅವರು ಇದಕ್ಕಿಂತ ಉತ್ತಮ ಮಾಡಬಹುದೆಂದು ತಿಳಿದಿದ್ದರೂ ಮತ್ತು ಅವರ ಮೇಲೆ ಅವರಿಗೆ ನಂಬಿಕೆ ಇತ್ತು. ಎಲ್ಲರ ನೆಗೆಟಿವ್ ಕಮೆಂಟ್ ನಂತರವೂ, ಅವರು ಅವರ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ತಮ್ಮ ನಿರ್ಧಾರವನ್ನು ತೆಗೆದುಕೊಂಡರು. ಬದುಕಿನಲ್ಲಿ ನಾವು "ಸರಿ" ಎನ್ನುವ ನಿರ್ಧಾರಕ್ಕೆ ಇಡೀ ಜಗತ್ತು "ಸರಿ" ಅನ್ನಬೇಕು ಎಂಬುದು ಸರಿಯಲ್ಲ. ಆದರೆ ಒಮ್ಮೆ ನಾವು ನಿರ್ಧರಿಸಿದ ನಂತರ ಹಿಂತಿರುಗಿ ನೋಡಬಾರದು ಮತ್ತು ಜಗತ್ತು ನನ್ನ ಬಗ್ಗೆ ಏನು ಯೋಚಿಸುತ್ತದೆ ಎಂಬುದರ ಮೇಲೆ ತಲೆಕೆಡಿಸಿಕೊಳ್ಳಬಾರದು.
ಇದನ್ನು ಓದಿ: How to Change Your Life in 30 Daysಬದುಕಿನಲ್ಲಿ ಮುಂದಿರುವ ವ್ಯಕ್ತಿಯು ಏನೆಂದುಕೊಳ್ಳುತ್ತಾನೆ ಎಂದು ಯೋಚಿಸಿ ನಾವು ಅಧಿಕ ಕೆಲಸಗಳನ್ನು ಮಾಡುವುದಿಲ್ಲ. 'ನನ್ನ ಪುಸ್ತಕವನ್ನು ತಿರಸ್ಕಾರಿಸಿದ ಪ್ರಕಾಶಕ ನನ್ನ ಬಗ್ಗೆ ಏನು ಯೋಚಿಸುತ್ತಾನೆ ಎಂಬುದರ ಬಗ್ಗೆ ನಾನು ಯೋಚಿಸುವುದಿಲ್ಲ" ಎಂದು ಡೇವಿಡ್ ಹೇಳುತ್ತಾರೆ. ಇದು ಏಕೆಂದರೆ ನಾವು ಈ ಜಗತ್ತಿಗೆ ಇತರರನ್ನು ಸಂತೋಷ ಮಾಡಲು ಬಂದಿಲ್ಲ. ನಾವು ನಮ್ಮ ಬದುಕನ್ನು ಜೀವಿಸಲು ಬಂದಿದ್ದೇವೆ. ಹೀಗಾಗಿ ನಾವು ಹೇಗೆ ಬದುಕಬೇಕೆಂದು ಬಯಸಿದೇವೊ ಆ ರೀತಿಯೇ ಜೀವಿಸಬೇಕು. ಇದರಿಂದ ನಾವು ಇತರರ ಯೋಚನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.
ಇದನ್ನು ಓದಿ: ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದು ಹಾಕಲು 17 ಪರಿಹಾರಗಳುಈ ಪುಸ್ತಕದಲ್ಲಿ ಡೇವಿಡ್ ಅವರು ಅವರ ಜೀವನದ ಕಠಿಣ ಓಟದ(race) ಬಗ್ಗೆ ತಿಳಿಸುತ್ತಾರೆ. ಅಲ್ಟ್ರಾ ಮ್ಯಾರಥಾನ್ ರೇಸ್ನಲ್ಲಿ ಮೊಬ್ 240(moab 240) ಅಲ್ಟ್ರಾ ಮ್ಯಾರಥಾನ್ ತುಂಬಾ ಪ್ರಸಿದ್ಧವಾಗಿದೆ. ಈ ಓಟದಲ್ಲಿ 386 ಕಿಮೀ ನಷ್ಟು ಓಡಬೇಕು. ಅದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಇರುವ ದೂರದ 80% ಆಗಿದೆ. ಇದನ್ನು ಅವರು 10,000 ಅಡಿ ಎತ್ತರವಿರುವ ಬೆಟ್ಟವನ್ನು ಹತ್ತಿ ಮುಗಿಸಬೇಕಿತ್ತು. ಇದು ಅವರ ಬದುಕಿನ ಅತಿದೊಡ್ಡ ಓಟವಾಗಿತ್ತು. "ನಾನು ಯಾವತ್ತೂ ಇಷ್ಟು ದೊಡ್ಡದಾದ ಓಟದಲ್ಲಿ ಓಡಿರಲಿಲ್ಲ, ಹೀಗಾಗಿ ತುಂಬಾ ಭಯವಾಗಿತ್ತು. ಆದರೆ ಆ ಭಯವನ್ನು ದೂರ ಇಟ್ಟು, ನಾನು ಓಟದಲ್ಲಿ ಸ್ಪರ್ಧಿಸಿದೆ. ನಾನು ಅದಕ್ಕೆ ತರಬೇತಿ ಕೂಡ ತೆಗೆದುಕೊಂಡಿರಲಿಲ್ಲ. ಏಕೆಂದರೆ ಓಟಕ್ಕೂ 6 ವಾರದ ಹಿಂದೆ ನನ್ನ ದಿನನಿತ್ಯದ ಕೆಲಸ(routine work) ಸಾರ್ವಜನಿಕ ಭಾಷಣದಲ್ಲಿ ಕಳೆಯುತ್ತಿತ್ತು ಮತ್ತು ಓಟಕ್ಕಿಂತ ಮೊದಲು ನನ್ನ ಕೈ ತುಂಬಾ ನೋಯುತ್ತಿತ್ತು. ಆ ನೋವಿನಿಂದ ನನಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳುತ್ತಾರೆ.
ಡೇವಿಡ್ ಅವರಿಗೆ ಈಗಾಗಲೇ ಎರಡು ಬಾರಿ ಹೃದಯದ ಶಸ್ತ್ರಚಿಕಿತ್ಸೆ(heart surgery) ಆಗಿದೆ ಮತ್ತು ಇದರ ಜೊತೆ ಅವರು ಥೈರಾಯಿಡ್ ರೋಗಿ(thyroid patient) ಕೂಡ ಆಗಿದ್ದರು. ಓಟದ ದಿನದಂದು ಗಾಗಿನ್ಸ್ ಅವರಿಗೆ ಸ್ವಲ್ಪ ಸಮಯದ ನಂತರ ಆ ಎತ್ತರದ ಬೆಟ್ಟವನ್ನು ಹತ್ತಿದ ಮೇಲೆ ಕೈ ತಣ್ಣಗಾಗಲು ಪ್ರಾರಂಭಿಸಿತು. ಅವರು ಎಲೆಕ್ಟ್ರಿಕ್ ಕೈಗವಸುಗಳನ್ನು(gloves) ಅವರ ಸಿಬ್ಬಂದಿಯ(crew) ಹತ್ತಿರವೇ ಬಿಟ್ಟು ಬಂದಿದ್ದರು. ಆದರೆ ಏತ್ತರ ಹೆಚ್ಚಿದಷ್ಟು ಸೂರ್ಯನ ಮುಳುಗುತ್ತಿದ್ದ ಮತ್ತು ಚಳಿಯು ಏರುತ್ತಿತ್ತು. ಅವರ ಕೈ ಇನ್ನೊಂದು ಸಿಬ್ಬಂದಿಯ ಹತ್ತಿರ ತಲುಪುವ ಮುಂಚೆಯೇ ಕೆಲಸ ಮಾಡುವುದನ್ನು ನಿಲ್ಲಿಸಿತು. ಅವರ ಪೂರ್ತಿ ಚರ್ಮವು ಬಿಳಿಯಾಗಿತ್ತು. ಅವರು ರೇನಾಡ್ ವಿದ್ಯಮಾನಗೆ(raynaud's phenomenon) ತುತ್ತಾಗಿದ್ದರಿಂದ ಆ ರೀತಿ ಆಯಿತು. ಇದರಲ್ಲಿ ವಿಪರೀತ ಚಳಿಯಿಂದಾಗಿ ದೇಹದಲ್ಲಿರುವ ಕೈ ಬೆರಳು, ಕಿವಿಯಲ್ಲಿ ರಕ್ತ ಹರಿಯುವುದಿಲ್ಲ. ನಂತರ ಡೇವಿಡ್ ಅವರು ಕೈಗವಸುಗಳನ್ನು ಹಾಕಿಕೊಂಡು ಮತ್ತೆ ಓಡಲು ಪ್ರಾರಂಭಿಸುತ್ತಾರೆ. ಆದರೆ ಈ ಬಾರಿ ಅವರು 17 ಕಿಮೀನಷ್ಟು ಬೇರೆ ದಿಕ್ಕಿನಲ್ಲಿ ಓಡುತ್ತಾರೆ. ಮತ್ತೆ 17 ಕಿಮೀ ಹಿಂದೆ ಮರಳಿ ಓಟದ ಟ್ರಾಕ್ ನಲ್ಲಿ ಓಡಲು ಪ್ರಾರಂಭಿಸುತ್ತಾರೆ.
ಮತ್ತೊಂದು ಸ್ಟೇಷನ್ ಹತ್ತಿರ ತಲುಪುವಷ್ಟರಲ್ಲಿ ಅವರು ಆರೋಗ್ಯಕರವಾಗಿರಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಾರೆ. ವಿಶ್ರಾಂತಿಯ ನಂತರ ಅವರು ಮತ್ತೆ ಓಡಲು ಪ್ರಾರಂಭಿಸಿದರು. ಆದರೆ ಅವರ ಕಾಲು ಎಷ್ಟು ದಣಿದಿತೆಂದರೆ, ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರು ಈ ಸಮಯದಲ್ಲಿ "ಮೆಂಟಲ್ ಲ್ಯಾಬ್" ಪರಿಕಲ್ಪನೆಯನ್ನು ಬಳಸಲು ಪ್ರಾರಂಭಿಸಿದರು ಮತ್ತು ಓಟವನ್ನು ಬಿಟ್ಟುಕೊಡಲಿಲ್ಲ. 160 ಕಿಮೀನಷ್ಟು ಓಡಿದ ನಂತರ ಅವರ ಆರೋಗ್ಯ ಮತ್ತಷ್ಟು ಕೆಡುತ್ತದೆ ಮತ್ತು ನಿಧಾನವಾಗಿ ಉಸಿರು ನಿಲ್ಲುತ್ತಿರುತ್ತದೆ, ಆದರೆ ಅವರಿಗೆ ಗೆಲ್ಲುವುದನ್ನು ಬಿಟ್ಟು ಬೇರೇನು ಕಾಣಿಸುತ್ತಿರಲಿಲ್ಲ. ಇದಾಗಿ ಸ್ವಲ್ಪ ಸಮಯದ ನಂತರ ಅವರ ಆರೋಗ್ಯ ತುಂಬಾ ಕೆಡುತ್ತದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವರಿಗೆ ಎತ್ತರದ ಪಲ್ಮನರಿ ಎಡಿಮಾ(high altitude pulmonary edima) ಆಗಿದೆ ಎಂದು ತಿಳಿಯುತ್ತದೆ. ಈ ಕಾಯಿಲೆಯಲ್ಲಿ ಶ್ವಾಸಕೋಶದ ಒಳಗೆ ಪ್ಲಾಸ್ಮಾ ಮತ್ತು ರಕ್ತ ತುಂಬಿರುತ್ತದೆ. ಆಸ್ಪತ್ರೆಯಿಂದ ಸ್ವಲ್ಪ ಸಮಯದ ನಂತರ ಅವರನ್ನು ಡಿಸ್ಚಾರ್ಜ್ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಇದ್ದಾಗಲೂ ಅವರಿಗೆ ಓಟವನ್ನು ಮುಗಿಸುವ ಯೋಚನೆಯೇ ಬರುತ್ತಿತ್ತು.
ಇಷ್ಟೆಲ್ಲಾ ಆದ ನಂತರ ಒಬ್ಬ ಸಾಮಾನ್ಯ ವ್ಯಕ್ತಿ, "ನಾನು ಒಂದು ರಜೆ ತೆಗೆದುಕೊಳ್ಳುವೆನು, ಕುಟುಂಬದ ಜೊತೆ ಸಮಯ ಕಳೆಯುವೆನು" ಎಂದು ಹೇಳಬಹುದು. ಆದರೆ ಡೇವಿಡ್ ಆ ರೀತಿಯ ವ್ಯಕ್ತಿ ಆಗಿರಲಿಲ್ಲ. ಅವರಿಗೆ ಓಟವನ್ನು ಮುಗಿಸಬೇಕೆಂಬ ಆಸೆಯಿಂದ ರಾತ್ರಿಯೆಲ್ಲ ನಿದ್ದೆ ಬರುತ್ತಿರಲಿಲ್ಲ. ಅವರು ಅವರ ಹೆಂಡತಿಗೆ, "ಓಟ ಮುಗಿಯಲು ಇನ್ನು ಎಷ್ಟು ಸಮಯವಿದೆ" ಎಂದು ಕೇಳುತ್ತಾರೆ. "ಓಟ ಮುಗಿಯಲು 15 ಗಂಟೆ ಅಷ್ಟೇ ಉಳಿದಿದೆ" ಎಂದು ತಿಳಿದಾಗ, ಅವರು ರೆಡಿಯಾಗಿ ಮತ್ತೊಮ್ಮೆ ಓಡಲು ಪ್ರಾರಂಭಿಸಿ, ಓಟವನ್ನು ಮುಗಿಸುತ್ತಾರೆ.
ಗಾಗಿನ್ಸ್ ಓಟದಿಂದ ಖುಷಿಯಾಗಿರಲಿಲ್ಲ. ಹೀಗಾಗಿ ಮುಂದಿನ ವರ್ಷ 2020ರಂದು ಮತ್ತೊಮ್ಮೆ ಈ ಓಟದಲ್ಲಿ ಭಾಗವಹಿಸಿ ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಡೇವಿಡ್ ಅವರ ಬದುಕಿನಲ್ಲಿ ಇಷ್ಟೇ ಕಥೆ ಉಳಿದಿಲ್ಲ. ಅವರು ಸೋಲಿನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ಅದನ್ನು ಗೆಲ್ಲಲು ಪ್ರಯತ್ನಿಸಿದರು.
ಒಮ್ಮೆ ಅವರ ಮಂಡಿ ತುಂಬಾ ನೋಯುತ್ತಿದ್ದರಿಂದ ಸರ್ಜರಿ ಮಾಡಿಸಬೇಕಿತು. ಈ ಸರ್ಜರಿಯಲ್ಲಿ ಮೂಳೆಯನ್ನು ಮುರಿಯಲಾಗಿತ್ತು ಮತ್ತು ಸಾಮಾನ್ಯ ವ್ಯಕ್ತಿಗಳು ಈ ಸರ್ಜರಿ ನಂತರ ನಡೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ಸರ್ಜಾರಿಯಾಗಿ ಮೂರು ತಿಂಗಳ ನಂತರ ಡೇವಿಡ್ ಅವರು ನ್ಯಾಚೆಜ್ ಟ್ರೇಸ್ 444(the natchez trace 444) ಎಂಬ ಸೈಕಲ್ ಓಟವನ್ನು ಅನ್ನು ಗೆಲ್ಲುತ್ತಾರೆ. ಅವರು, "ದೌರ್ಬಲ್ಯ ಇರುವ ವ್ಯಕ್ತಿಗಳು ನೆಪಗಳನ್ನು ಹುಡುಕುತ್ತಾರೆ. ಅವರ ಜೀವನದಲ್ಲಿ ಅಧಿಕ ಕಷ್ಟಗಳು ಬರುತ್ತವೆ ಎಂದು ಬಿಟ್ಟು ಕೊಡುತ್ತಾರೆ". ಡೇವಿಡ್ ಅವರಿಗೂ ಜಗತ್ತಿನಲ್ಲಿ ಅಧಿಕ ಜನರಿಗೆ ಇರುವ ರೀತಿಯ ಸಮಸ್ಯೆಗಳು ಇದ್ದವು, ಆದರೆ ಅವರು ಬಿಟ್ಟು ಕೊಡಲಿಲ್ಲ. ಈ ಜಗತ್ತಿನಲ್ಲಿ ಯಾವುದೇ ವಿಷಯವು, ಡೇವಿಡ್ ಅವರ ಗಟ್ಟಿಯಾದ ನಿರ್ಧಾರಗಳನ್ನು ಅಲ್ಲಾಡಿಸಲು ಸಾಧ್ಯವಾಗಲಿಲ್ಲ.
ನಮ್ಮ ಬದುಕಿನಲ್ಲಿ ಇಡೀ ಜಗತ್ತು ನಮ್ಮನ್ನು ವಿರೋಧಿಸುವಂತಹ ಸನ್ನಿವೇಶಗಳು ಬರುತ್ತವೆ. ನಮಗೆ ಅವಾಗಲ್ಲೇ ಬಿಟ್ಟುಕೊಡಬೇಕೆಂದು ಎನಿಸುತ್ತದೆ. ಆದರೆ ಆ ಸಮಯವೇ ನಾವು ನಮ್ಮ ಗುರಿಯನ್ನು ಮುಗಿಸುತ್ತಿವಾ, ಇಲ್ಲವಾ ಎಂಬುದನ್ನು ನಿರ್ಧರಿಸುತ್ತದೆ. "never finished" ಒಂದು ವಿಕಸನೀಯ(evolutionary) ಕಥೆಯಾಗಿದೆ, ಇದರಲ್ಲಿ ಬಾಲ್ಯದ ಅನುಭವದಿಂದ ಯಾವಾಗಲೂ ಗಾಬರಿಯಲ್ಲಿ ಇರುತ್ತಿದ್ದ ಬಾಲಕ, ಜೀವನದಲ್ಲಿ ಯಾವುದೇ ದೊಡ್ಡ ಗುರಿ ಇಲ್ಲದವನು, ತನ್ನ ಮಾನಸಿಕ ಶಕ್ತಿ ಮತ್ತು ನಂಬಿಕೆಯ ಮೇಲೆ ಜಗತ್ತಿನಲ್ಲೇ ಅತ್ಯಂತ ಕಠಿಣ ವ್ಯಕ್ತಿ(toughest man) ಎನಿಸಿಕೊಳ್ಳುತ್ತಾನೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 297
Info Mind 7306
See all comments...