Watch Video
ನಮಗೆ ಬಾಲ್ಯದಿಂದಲೂ ಎಲ್ಲರ ಮುಂದೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಲು ತಿಳಿಸುತ್ತಾರೆ. ಇದರಿಂದ ಅವರು ನಮ್ಮನ್ನು ಒಳ್ಳೆಯ ರೀತಿಯಲ್ಲಿ ನೋಡುತ್ತಾರೆ. ಆದರೆ ಈಗ ಒಳ್ಳೆಯ ವ್ಯಕ್ತಿ(nice man) ಎಂದರೆ ಎಲ್ಲರನ್ನು ಖುಷಿಯಾಗೆ ನೋಡುವನು. ಅಂದರೆ ಅವನು ಅವನ ಅಕ್ಕಪಕ್ಕ ಇರುವ ಜನರೆಲ್ಲರೂ ಖುಷಿಯಾಗಿರುವಂತೆ ಕೆಲಸ ಮಾಡುತ್ತಾನೆ. ಆದರೂ ಆ ರೀತಿಯ ವ್ಯಕ್ತಿಗೆ ಜನರು ಹೆಚ್ಚು ಮೌಲ್ಯವನ್ನು ನೀಡುವುದಿಲ್ಲ. ಅವರನ್ನು ಮಂಜೂರಾಗಿ(granted) ತೆಗೆದುಕೊಳ್ಳುತ್ತಾರೆ.
ಹೀಗಾಗಿ ಡೇವಿಡ್ ಡೀಡಾ ಅವರು "the way of the superiar man" ಪುಸ್ತಕದಲ್ಲಿ ನಾವು ಒಳ್ಳೆಯ ವ್ಯಕ್ತಿತಯಿಂದ ಉನ್ನತ ವ್ಯಕ್ತಿಯಾಗುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ಉನ್ನತ ವ್ಯಕ್ತಿ ಎಂದರೆ ಅವನಿಗೆ ಎಲ್ಲರೂ ಗೌರವ ನೀಡುತ್ತಿರುತ್ತಾರೆ. ಅವನು ಮತ್ತು ಅವನ ಮಾತಿಗೆ ಬೆಲೆಯನ್ನು ನೀಡುತ್ತಾರೆ. ಉನ್ನತ ವ್ಯಕ್ತಿಗೆ ಹೆಚ್ಚಿನ ಮೌಲ್ಯವಿರುತ್ತದೆ. ಅವನು ಬಲವಾದ ವ್ಯಕ್ತಿತ್ವವನ್ನು ಹೊಂದಿರುವ ಪಾತ್ರವನ್ನು ನಿರ್ಮಾಣ ಮಾಡಿಕೊಂಡಿರುತ್ತಾನೆ.
ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳುನೀವು ಸರಿಯಾಗಿ ಕೇಳಿಸಿಕೊಂಡಿದ್ದೀರಾ. ನೀವು ನಿಮ್ಮ ಜೀವನದಲ್ಲಿ ನಿಮ್ಮ ತಂದೆ ಇಲ್ಲವೆಂದು ಯೋಚಿಸಿ ಬದುಕಬೇಕು ಎಂದು ಲೇಖಕರು ಹೇಳುತ್ತಾರೆ. ಈ ಲೈನನ್ನು ಕೇಳಲು ನಿಮಗೆ ಇಷ್ಟವಿಲ್ಲದೆ ಇರಬಹುದು. ಏಕೆಂದರೆ ಎಲ್ಲರೂ ಅವರ ತಂದೆಯನ್ನು ಇಷ್ಟಪಡುತ್ತಾರೆ. ಹೀಗಾಗಿ ಅವರು ಇನ್ನಿಲ್ಲ ಎನ್ನುವುದು ಅಹಿತಕರ ಭಾವನೆಯನ್ನು(uncomfortable feel) ನೀಡುತ್ತದೆ.
ಬಾಲ್ಯದಿಂದಲೂ ನಮ್ಮ ಎಲ್ಲಾ ನಿರ್ಧಾರ, ಜವಾಬ್ದಾರಿಯು ನಮ್ಮ ತಂದೆಯವರ ಮೇಲೆ ಇರುತ್ತದೆ ಎಂದು ಲೇಖಕರು ಹೇಳುತ್ತಾರೆ. ಆದರೆ ನಾವು ದೊಡ್ಡವರಾದಾಗ ನಮ್ಮ ನಿರ್ಧಾರ ಮತ್ತು ಜವಾಬ್ದಾರಿಯನ್ನು ಸ್ವತಃ ನಾವೇ ತೆಗೆದುಕೊಳ್ಳಬೇಕಾಗುತ್ತದೆ. ಇದರ ಅರ್ಥ ನಿಮ್ಮ ತಂದೆ ನಿಮಗಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಲ್ಲ ಅಥವಾ ನೀವು ದೊಡ್ಡವರಾದ ಕಾರಣ ಅವರಿಗಿಂತ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬಹುದೆಂದಲ್ಲ. ಬದಲಿಗೆ ಇದರಲ್ಲಿ ಲೇಖಕರು ನೀವು ಸ್ವಯಂ ಸ್ವತಂತ್ರವಾಗಿ ಇರಲು ತಿಳಿಸುತ್ತಾರೆ. ಇದರಲ್ಲಿ ಯಾವುದೇ ಲಾಭ ಇಲ್ಲ ನಷ್ಟಕ್ಕೆ ನೀವೇ ಹೊಣೆಗಾರರಾಗಿರುತ್ತೀರಾ.
ನಿಮಗೆ ಸಪೋರ್ಟ್ ಮಾಡಲು ಯಾರೂ ಇಲ್ಲವೆಂದು ಯೋಚಿಸಿ ಬದುಕಬೇಕು. ಅದೇನೇ ಇದ್ದರೂ ನೀವೇ ಮಾಡಬೇಕು, ನೀವು ಏನು ಮಾಡಿದರೆ ಸರಿ ಅಥವಾ ತಪ್ಪು ಎಂಬುದನ್ನು ತಿಳಿಸಲು ನಿಮಗೆ ಯಾರೂ ಇರುವುದಿಲ್ಲ. ನಿಮ್ಮ ಜೀವನದ ಎಲ್ಲ ದೊಡ್ಡ ಮತ್ತು ಚಿಕ್ಕ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಬೇಕು. ಅದು ನಿಮ್ಮ carrer, ಸಂಬಂಧ ಯಾವುದಾದರೂ ಇರಬಹುದು. ನಿಮ್ಮನ್ನು ಯಾರು ಕಂಟ್ರೋಲ್ ಮಾಡಬಾರದು. ನಿಮ್ಮ ತಂದೆ ಒಳ್ಳೆಯವರೆ ಮತ್ತು ನಿಮಗಾಗಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ನಿಮ್ಮ ಬದುಕಿಗೆ ನೀವೇ 100% ಜವಾಬ್ದಾರಿ ಆಗಿರುತ್ತೀರಾ.
ಇದನ್ನು ಓದಿ: "Atomic Habits" ಪುಸ್ತಕದ ವಿವರಣೆಯಾವುದೇ ವ್ಯಕ್ತಿಯ ನಂಬಿಕೆ ವ್ಯವಸ್ಥೆ ಅವನ ಮಾನಸಿಕವಾಗಿ ಎಷ್ಟು ಆಕರ್ಷಕವಾಗಿದ್ದಾನೆ ಎಂದು ತಿಳಿಸುತ್ತದೆ. ಹುಡುಗಿಯರ ಜೊತೆ ಮಾತನಾಡುವಾಗ ನೀವು ಅವರನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಅವರು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ, ಇದರ ಅರ್ಥ ನೀವು ನಿಮ್ಮ ರೀತಿಯನ್ನು ಬದಲಿಸಿಕೊಳ್ಳಬೇಕೆಂದಲ್ಲ. ಅವರು ನಿಮ್ಮ ಬಗ್ಗೆ ನೀವು ಎಷ್ಟು ನಂಬಿಕೆ ಇಟ್ಟಿದ್ದೀರಾ ಎಂಬುದನ್ನು ತಿಳಿಯಲು ಈ ರೀತಿ ಮಾಡುತ್ತಾರೆ.
ನೀವು ಬೇರೆ ರೀತಿಯ ನಿರ್ಧಾರ ಇಟ್ಟುಕೊಂಡು, ಆ ಹುಡುಗಿಯ ಎಲ್ಲ ಮಾತಿಗೂ ಒಪ್ಪಿಕೊಳ್ಳುತ್ತಿದ್ದರೆ, ನೀವು ಒಬ್ಬ ದುರ್ಬಲ ಮನುಷ್ಯ ಆಗಿದ್ದೀರಾ. ನಿಮ್ಮ ಮನಸ್ಸನ್ನು ಯಾರು ಬೇಕಾದರೂ ಬದಲಾಯಿಸಬಹುದು. ನಿಮ್ಮದೆ ಆದ ನಂಬಿಕೆಯ ವ್ಯವಸ್ಥೆ ಇಲ್ಲ. ಒಬ್ಬ ಉನ್ನತ ವ್ಯಕ್ತಿಯು ಅವನ ಬುದ್ಧಿವಂತಿಕೆ ಬಗ್ಗೆಯೇ ಯೋಚಿಸುತ್ತಿರುತ್ತಾನೆ.
ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆನಾವು ಅಂದುಕೊಂಡಿರುವ ಎಲ್ಲವನ್ನು ಒಂದು ದಿನ ಮಾಡಿಯೇ ತೀರುತ್ತೇವೆ ಎಂಬ ಬಲೆಯಲ್ಲಿ ನಾವೆಲ್ಲರೂ ಸಿಕ್ಕಿಕೊಂಡಿರಬಹುದು ಮತ್ತು ಆ ದಿನಕ್ಕಾಗಿ ಕಾಯುತ್ತಿರಬಹುದು. ಪರಿಪೂರ್ಣ ಅವಕಾಶಕ್ಕಾಗಿ(perfect oppertunity) ಕಾಯುತ್ತಿರಬಹುದು. ಯಾವಾಗ ಎಲ್ಲವೂ ನಮ್ಮ ರೀತಿಯಲ್ಲಿ ಬರುತ್ತದೆಯೋ ಆಗ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತೇವೆ. ಆದರೆ ಬದುಕು ಮುಂದುವರೆದಂತೆ ಕಠಿಣವಾಗುತ್ತಾ ಹೋಗುತ್ತದೆ ಮತ್ತು ಭವಿಷ್ಯದಲ್ಲಿ ಬದುಕು ಇನ್ನಷ್ಟು ಕಠಿಣವಾಗುತ್ತದೆ. ಅಧಿಕ ಜವಾಬ್ದಾರಿ, ದೊಡ್ಡ ಅಪಾಯ, ಆರೋಗ್ಯ ಸಮಸ್ಯೆ ಇತ್ಯಾದಿ ಇರುತ್ತವೆ.
ಲೇಖಕರು ಇಂದು ನಾವು ಮೊದಲ ಹೆಜ್ಜೆ ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಹೆಜ್ಜೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ನಿರೀಕ್ಷಿಸುವುದು(wait) ಮತ್ತು ತಾಳ್ಮೆಯಿಂದ ಇರುವುದರಲ್ಲಿ ವ್ಯತ್ಯಾಸವಿದೆ. ನೀವು ಮೊದಲ ಹೆಜ್ಜೆ ತೆಗೆದುಕೊಂಡು ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಅದು ನಿಮ್ಮ ತಾಳ್ಮೆ ಆಗಿದೆ. ಆದರೆ ನೀವು ಯಾವುದೇ ಹೆಜ್ಜೆ ತೆಗೆದುಕೊಳ್ಳದೆ ಎಲ್ಲವೂ ಸರಿಯಾಗುವುದು ಎಂದು ಯೋಚಿಸುತ್ತಿದ್ದರೆ ಅದು ಸಮಯ ವ್ಯರ್ಥವಾಗಿದೆ. "every moment waited is a moment wastes" ಎಂದು ಲೇಖಕರು ಹೇಳುತ್ತಾರೆ.
ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?ಯಾರಾದರೂ ನಿಮಗೆ ನಿಮ್ಮ ಉದ್ದೇಶವನ್ನು ಹುಡುಕಲು ಹೇಳಿದರೆ, ನೀವು ನಿಮ್ಮ ಉದ್ದೇಶವನ್ನು ನಿಮ್ಮ ಗುರಿ ಮತ್ತು ಕನಸಿಗೆ ರಿಲೇಟ್ ಮಾಡುತ್ತೀರಾ. ಆದರೆ ಉದ್ದೇಶದ ಸರಳ ಅರ್ಥ ಏನೆಂದರೆ ನಿಮ್ಮ ಶಕ್ತಿ (strength) ಮತ್ತು ನಿಮ್ಮ ಮನಸ್ಸಿನಿಂದ ಮಾಡಬಹುದಾದ ಒಂದು ವಿಷಯವನ್ನು ಹುಡುಕುವುದಾಗಿದೆ. ಈಗ ಇರುವುದೆಲ್ಲವನ್ನು ಬಳಸಿಕೊಂಡು ನೀವು ಜಗತ್ತಿಗೆ ಯಾವ ರೀತಿಯ ಮೌಲ್ಯವನ್ನು ನೀಡಬಹುದು ಎಂದು ಯೋಚಿಸಬೇಕು.
ಲೇಖಕರು ನಿಮ್ಮ ಜೀವನದಲ್ಲಿ ಸಂಬಂಧಕ್ಕಿಂತ ಮೊದಲು ಉದ್ದೇಶ ಇರಬೇಕು ಎಂದು ಹೇಳುತ್ತಾರೆ. ಅದು ನೀವು ಎಷ್ಟು ಮಹತ್ವಾಕಾಂಕ್ಷೆಯಾಗಿದ್ದೀರಾ ಎಂದು ತಿಳಿಸುತ್ತದೆ. ಇದರಿಂದ ಜನರು ನಿಮಗೆ ಆಕರ್ಷಣೆ ಆಗುತ್ತಾರೆ. ಯಾವುದಾದರೂ ವ್ಯಕ್ತಿ ನಿಮ್ಮ ಮತ್ತು ನಿಮ್ಮ ಮುಂದೆ ಬಂದು ನಿಮಗೆ ಅರ್ಥ ಮಾಡಿಸುವ ಬದಲು ನಿರಾಕರಣೆ(demotive) ಮಾಡಿದರೆ, ಇಲ್ಲ ಅವನು ನಿಮ್ಮ ಕನಸಿಗೆ ಅಡ್ಡ ನಿಂತರೆ, ನೀವು ಆ ವ್ಯಕ್ತಿಯನ್ನು ನಿಮ್ಮ ಜೀವನದಿಂದ ಪೂರ್ತಿಯಾಗಿ ತೆಗೆಯಬಹುದು.
ಅದೇ ನೀವು ನಿಮ್ಮ ಸಂಬಂಧಕ್ಕೆ ನಿಮ್ಮ ಉದ್ದೇಶಕ್ಕಿಂತ ಅಧಿಕ ಮೌಲ್ಯ ನೀಡಿದರೆ, ನಿಮ್ಮ ಖುಷಿ ಮತ್ತು ತೃಪ್ತಿಯನ್ನು ಇತರರಿಗೆ ನೀಡುತ್ತಿದ್ದರೆ. ನೀವು ದುರ್ಬಲ ವ್ಯಕ್ತಿ ಆಗಿದ್ದೀರಾ. ಉನ್ನತ ವ್ಯಕ್ತಿ ಸಂಬಂಧಕ್ಕಿಂತ ತನ್ನ ಉದ್ದೇಶಕ್ಕೆ ಅಧಿಕ ಮೌಲ್ಯ ನೀಡುತ್ತಾನೆ. ಇದು ಏಕೆಂದರೆ ಅವನು ಬದುಕಿನ ಗುರಿಯನ್ನು ಸಾಧಿಸಲು ಅವನ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಜನಗಳ ಅವಶ್ಯಕತೆ ಅವನಿಗೆ ಇರುತ್ತದೆ.
ಇದನ್ನು ಓದಿ: ಯಶಸ್ವಿ ಜನರನ್ನು ಯಶಸ್ವಿಗೊಳಿಸುವ ಐದು ಸಾಮಾನ್ಯ ಲಕ್ಷಣಗಳುಈ ಸೈಕಾಲಜಿಯನ್ನು ಅನೇಕ ಕಡೆ ಬಳಸಲಾಗಿದೆ. ನೀವು "life begins as soon as you step outside your comfort zone" ಎಂಬ ಲೈನ್ ಕೇಳಿರುತ್ತೀರಾ. ಯಾರಿಗಾದರೂ ಅವರ ಬದುಕನ್ನು ಚೆನ್ನಾಗಿ ಮಾಡಬೇಕೆಂದಿದ್ದರೆ ಅದಕ್ಕೆ ಇರುವ ಸರಳ ಉಪಾಯವೆಂದರೆ ಅವರ ಕಂಫರ್ಟ್ ಜೋನ್ ನಿಂದ ಹೊರಬಂದು, ಅವರಿಗೆ ಪ್ರಮುಖವಿರುವ ಕೆಲಸವನ್ನು ಮಾಡುತ್ತಿರಬೇಕು. ಆದರೆ ಅನೇಕರು ಈ ರೀತಿ ಮಾಡುವುದಿಲ್ಲ, ಅವರ ಕಂಫರ್ಟ್ ಜೋನ್ನಲ್ಲೇ ಇರುತ್ತಾರೆ ಮತ್ತು ಇದು ಅವರು ದುರ್ಬಲ ವ್ಯಕ್ತಿ ಎಂದು ತಿಳಿಸುತ್ತದೆ.
ಉನ್ನತ ವ್ಯಕ್ತಿಗೆ ಅವನ ಕಂಫರ್ಟ್ ಜೋನ್ ನಿಂದ ಹೊರಬರಲು ಭಯವಾಗುವುದಿಲ್ಲವೆಂದಲ್ಲ. ಎಲ್ಲರಿಗೂ ಭಯವಾಗುತ್ತದೆ, ಆದರೆ ಭಯವಾಗುತ್ತಿಲ್ಲವೆಂದು ತೋರಿಸುತ್ತಾರೆ. ಅವರು ಯಾವಾಗ ಬೇಕಾದರೂ ಅವರ ಬದುಕನ್ನು ಬದಲಾಯಿಸಿಕೊಳ್ಳಬಹುದು. ಅನೇಕರು ಇದನ್ನು ಮಾಡುವುದಿಲ್ಲ ಮತ್ತು ಕಂಫರ್ಟ್ ಜೋನ್ ಅನ್ನು ಬಿಟ್ಟುಬಿಡುವ ನೋವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಅವರು ಅದನ್ನು ತಪ್ಪಿಸುತ್ತಾರೆ. ಆದರೆ ಉನ್ನತ ವ್ಯಕ್ತಿಯು ಭಯವನ್ನು ಸ್ವೀಕರಿಸಿ. ಅವುಗಳನ್ನು ಚಾಲೆಂಜ್ ರೀತಿ ನೋಡುತ್ತಾನೆ. ಅಧಿಕ ಹಣ ಗಳಿಸಲು ಬಯಸುತ್ತಾನೆ, ಅವನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಬಯಸುತ್ತಾನೆ.
"man grow by challeges, while women by praise" ಎಂದು ಲೇಖಕರು ಹೇಳುತ್ತಾರೆ. ಎಲ್ಲಾ ಹುಡುಗಿಯರ ನೈಸರ್ಗಿಕ ಬಯಕೆ ವಿಶೇಷ ರೀತಿಯಲ್ಲಿ ಕಾಣುವುದಾಗಿದೆ. ಅವರಿಗೆ ಪ್ರಶಂಸಿ, ಎಷ್ಟೊಂದು ವಿಶೇಷ ಎಂದು ತಿಳಿಸುವ ಪುರುಷರು ಸವಾಲುಗಳಿಂದ ಬೆಳೆಯುತ್ತಾರೆ. ಉನ್ನತ ವ್ಯಕ್ತಿ ಸವಾಲುಗಳಿಂದ ಓಡಿ ಹೋಗುವುದಿಲ್ಲ, ಬದಲಿಗೆ ಅದನ್ನು ಸ್ವೀಕರಿಸಿ. ತಮ್ಮ ದೌರ್ಬಲ್ಯ ಅನ್ನು ತೆಗೆದುಹಾಕುವ ಬಗ್ಗೆ ಯೋಚಿಸುತ್ತಾರೆ. ಲೇಖಕರು ವಾರದಲ್ಲಿ ಒಂದು ದಿನ ನಿಮ್ಮ ಆತ್ಮೀಯ ಗೆಳೆಯನ ಜೊತೆ ಕೂತು ಬದುಕಿನ ಬಗ್ಗೆ ಚರ್ಚಿಸಬೇಕು ಎಂದು ಹೇಳುತ್ತಾರೆ. ಇದರಿಂದ ನಿಮ್ಮ ಗೆಳೆಯ ನಿಮ್ಮ ಎಲ್ಲಾ ಮಾತಿಗೂ ಒಪ್ಪದೆ ನಿಮ್ಮನ್ನು ವಿಮರ್ಶೆ ಮಾಡಿದರೆ ನೀವು ಸುಧಾರಿಸಿಕೊಳ್ಳುವ ಸವಾಲನ್ನು ತೆಗೆದುಕೊಳ್ಳುತ್ತೀರಾ.
ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?ಹುಡುಗಿಯರು ಅವರ ಪಾಲುದಾರರನ್ನು ಅವರ ಆಯ್ಕೆ ಮಾಡುತ್ತಾರೆ ಎಂದು ವಿಕಾಸಾತ್ಮಕ ಜೀವಶಾಸ್ತ್ರಜ್ಞರು(evolutionary biologist) ಹೇಳುತ್ತಾರೆ. ಹುಡುಗರು ಕೇವಲ ಹುಡುಗಿಯರ ಆಯ್ಕೆಯಾಗಿರುತ್ತಾರೆ. ಇದರಿಂದ ಎಲ್ಲ ಹುಡುಗಿಯರು ನಿಮ್ಮನ್ನು ಆಯ್ಕೆ ಮಾಡುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿ ಮಾಡಿಕೊಳ್ಳಬೇಕು.
ನೀವು ಹುಡುಗಿಯನ್ನು ಇಷ್ಟಪಡುವ ಪರಿಸ್ಥಿತಿಯಲ್ಲಿದ್ದು, ಅವರ ಜೊತೆ ಇರಲು ಬಯಸಿದ್ದು, ಆ ಹುಡುಗಿ ಅದಕ್ಕೆ ವಿರುದ್ಧವಿದ್ದರೆ, ನೀವು ತಕ್ಷಣವೇ ಅದರಿಂದ ದೂರ ಬರಬೇಕು ಮತ್ತು ಆ ನೋವಿನಿಂದ ನೀವೇ ಸ್ವಯಂ ಒಪ್ಪಂದ ಮಾಡಿಕೊಳ್ಳಬೇಕು. ನೀವು ನಿಮ್ಮನ್ನು ತಿರಸ್ಕರಿಸುವ ಹುಡುಗಿಯ ಹಿಂದೆ ಹೋಗುತ್ತಿದ್ದರೆ ಅದು ನಿಮ್ಮನ್ನು ನಿರ್ಗತಿಕ(needy) ಮಾಡುತ್ತದೆ. ಇದನ್ನು ಹುಡುಗಿಯರು ಇಷ್ಟಪಡುವುದಿಲ್ಲ. ನಿಮ್ಮ ಜೊತೆ ಇರದ ಹುಡುಗಿಯನ್ನು ನೀವು ಚೇಸ್ ಮಾಡುತ್ತಿದ್ದರೆ, ನೀವು ಏನೇ ಮಾಡಿದರೂ ಆ ಹುಡುಗಿಯ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ.
ಸಿನೆಮಾ ಮತ್ತು ನಿಜ ಬದುಕಿಗೆ ತುಂಬ ವ್ಯತ್ಯಾಸವಿದೆ ಮತ್ತು ನಿಮ್ಮ ಅಗತ್ಯತೆ ಆಯ್ಕೆಯನ್ನು ಮತ್ತಷ್ಟು ಕೆಟ್ಟದ್ದಾಗಿಸುತ್ತದೆ. ಇದರಿಂದ ನೀವು ಕಡಿಮೆ ಮೌಲ್ಯದ ವ್ಯಕ್ತಿ ಆಗುತ್ತೀರಾ ಮತ್ತು ಹುಡುಗಿಯರು ನಿಮ್ಮ ಮೇಲೆ ನಂಬಿಕೆ ಇಡಲು ಸಾಧ್ಯವಾಗುವುದಿಲ್ಲ. ಉನ್ನತ ವ್ಯಕ್ತಿಯು ಎಲ್ಲ ಹುಡುಗಿಯರನ್ನು ಗೌರವಿಸುತ್ತಾನೆ. ಅವನ ಉದ್ದೇಶದ ಮೇಲೆ ಕಾರ್ಯನಿರ್ವಹಿಸುತ್ತಾನೆ. ಅವನ ಬದುಕಿನಲ್ಲಿ ಅಧಿಕ ವಿಷಯಗಳು ನಡೆಯುತ್ತಿರುವ ಕಾರಣ ಅವನು ಯಾವುದೇ ಹುಡುಗಿಯನ್ನು ಬೆನ್ನಟ್ಟುವುದಿಲ್ಲ. ಬದಲಿಗೆ ಅವರನ್ನು ಆಯ್ಕೆ ಮಾಡುವ ಹುಡುಗಿಯನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ.
80% ಕ್ಕಿಂತಲೂ ಅಧಿಕ ಪುರುಷರು masculine nature ಹೊಂದಿರುತ್ತಾರೆ. ಇವರುಗಳು ಶಕ್ತಿ, ಧೈರ್ಯ, ನಾಯಕತ್ವ ಮತ್ತು ಸ್ವಾತಂತ್ರ್ಯದಂತಹ ಗುಣಗಳನ್ನು ತೋರಿಸುತ್ತಾರೆ. ಇವರ ಹತ್ತಿರ ಇತರರು ಸುರಕ್ಷಿತ ಮತ್ತು ಸಂರಕ್ಷಿತ ಅನುಭವದಲ್ಲಿ ಇರುತ್ತಾರೆ. ಇನ್ನುಳಿದ 20% ಪುರುಷರಲ್ಲಿ feminine nature ಇರುತ್ತದೆ. ಇವರುಗಳು ಸೂಕ್ಷ್ಮ, ಭಾವನಾತ್ಮಕ ಮತ್ತು ನಮ್ರತೆಯಂತಹ ಭಾವನೆಗಳನ್ನು ಹೊಂದಿರುತ್ತಾರೆ. ಪ್ರೀತಿಯ ವಿಷಯದಲ್ಲಿ ಯಾವುದಾದರೂ ವ್ಯಕ್ತಿ masculine nature ಹೊಂದಿದ್ದರೆ ಆತ feminine nature ಇರುವ ಮಹಿಳೆಯರಿಗೆ ಆಕರ್ಷಿತರಾಗುತ್ತಾರೆ. ಇದರಿಂದ ಏರಡು ಶಕ್ತಿ ಸೇರಿ ತಟಸ್ಥವಾಗುತ್ತದೆ(neutral).
ಅದೇ ಯಾವುದಾದರೂ ವ್ಯಕ್ತಿ feminine nature ಹೊಂದಿದ್ದರೆ ಆತ ಅಧಿಕ masculine nature ಇರುವ ಹುಡುಗಿಯರಿಗೆ ಆಕರ್ಷಿತರಾಗುತ್ತಾರೆ. ಹೀಗಾಗಿ ನೀವು ನಿಮ್ಮ ಮತ್ತು ನಿಮ್ಮ ಪಾಟ್ನರ್ ನೇಚರ್ ಬಗ್ಗೆ ತಿಳಿದಿರಬೇಕು. masculine ಮತ್ತು feminine ಕ್ವಾಲಿಟಿ ಗಂಡಸು ಮತ್ತು ಹೆಂಗಸು ಇಬ್ಬರಲ್ಲೂ ಇರುತ್ತದೆ ಮತ್ತು ನೀವು ನಿಮಗೆ ವಿರುದ್ದವಿರುವ ಪಾಟ್ನರ್ ಅನ್ನು ಆಯ್ಕೆ ಮಾಡಬೇಕು. ಇದರಿಂದ ಅವರು ದೀರ್ಘಾವಧಿಯವರೆಗೆ ನಿಮ್ಮ ಶಕ್ತಿಯನ್ನು ಸಮತೋಲನ ಮಾಡುತ್ತಾರೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 301
Info Mind 7306
See all comments...