Watch Video
ಜ್ಯಾಕ್ ದಿ ರಿಪ್ಪರ್‌ನಿಂದ ಬರ್ಮುಡಾ ಟ್ರಯಾಂಗಲ್. ಮೊಹೆಂಜೊದಾರೊದಿಂದ ಏರಿಯಾ 51. ಹೀಗೆ ಜಗತ್ತಿನಲ್ಲಿ ಬಗೆಹರಿಯದ ಹಲವಾರು ರಹಸ್ಯಗಳಿವೆ. ಅವುಗಳಲ್ಲಿ ಎಂಟನ್ನು ಇಲ್ಲಿ ತಿಳಿಸುತ್ತಿದ್ದೇವೆ.
ಕಳೆದ 500 ವರ್ಷಗಳಲ್ಲಿ ಬ್ರಿಟಿಷ್ ಓವರ್ಸೀಸ್ನಲ್ಲಿರುವ ಬರ್ಮುಡಾ ಟ್ರಯಾಂಗಲ್ ಎಂಬ ತ್ರಿಕೋನ ಜಾಗದಲ್ಲಿ ಹಡಗು ಮತ್ತು ವಿಮಾನಗಳು ಕಾಣೆಯಾಗಿವೆ. ವಿಜ್ಞಾನಿಗಳು ಈ ಜಾಗದ ರಹಸ್ಯವನ್ನು ತಿಳಿಯಲು ಹುಡುಕುತ್ತಿದ್ದಾರೆ.
ದೊಡ್ಡ ಸಮುದ್ರ ಜೀವಿಗಳಿಂದಿಡಿದು UFOಗಳವರೆಗೆ ಇಲ್ಲಿ ಕಂಡಿರುವ ರಹಸ್ಯಗಳ ಬಗ್ಗೆ ಇನ್ನು ಯಾರಿಗೂ ಸರಿಯಾಗಿ ತಿಳಿದಿಲ್ಲ. ಆಗಸ್ಟ್ 2018ರ 'ಬರ್ಮುಡಾ ಟ್ರಯಾಂಗಲ್ ಎನಿಗ್ಮಾ' ಎಂಬ ಸಾಕ್ಷ್ಯಚಿತ್ರದ ಪ್ರಕಾರ ಇಲ್ಲಿ ಹಡಗುಗಳು ಕಾಣೆಯಾಗಲು ರಾಕ್ಷಸ ಅಲೆಗಳು ಕಾರಣವೆಂದು ತಿಳಿಸಲಾಗಿದೆ.
ಇದನ್ನು ಓದಿ: ವಲ್ಡ್ ವಾರ್ 1ಏರಿಯಾ 51 ನೆವಾಡಾ ರಾಜ್ಯದ ಯುಎಸ್ ವಾಯುಪಡೆಯ ಸೌಲಭ್ಯ ಜಾಗವಾಗಿದೆ. ಈ ಜಾಗ ಭೂಮಿಯ ಮೇಲೆ ಅಪ್ಪಳಿಸಿದ ಏಲಿಯನ್ ವಾಹನದ ಶೇಖರಣ ಸ್ಥಳವೆಂದು ನಂಬಲಾಗಿದೆ. ಇಲ್ಲಿ ಏಲಿಯನ್ ತಂತ್ರಜ್ಞಾನಗಳನ್ನು ಸಂಶೋಧಿಸುತ್ತಿರುವ ವದಂತಿಗಳಿವೆ. 2015ರಲ್ಲಿ ನಾಸಾದ ಚಾರ್ಲ್ಸ್ ಬೋಲ್ಡಾನ್: "ನಾನು ಏರಿಯಾ 51ರಲ್ಲಿ ಇದ್ದಾಗ ಯಾವುದೇ ವಿದೇಶಿಯರು ಅಥವಾ ಏಲಿಯನ್ ಬಾಹ್ಯಾಕಾಶ ನೌಕೆಯನ್ನು ನೋಡಿಲ್ಲ. ಅಲ್ಲಿ ಕೇವಲ ಏರೋನಾಟಿಕಲ್ ಸಂಶೋಧನೆ ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿ ಎಲಿಯನ್ ವಾಹನವಿದೆ ಎಂದು ಜನರು ಮಾತನಾಡುವುದು ಪಕ್ವವಾಗಿದೆ" ಎಂದು ಹೇಳಿದರು.
ಇದನ್ನು ಓದಿ: ಕುರಿಗಳ ಫಾರ್ಮ್ ನೋಡಿದ್ದೀರಾ ಆದರೆ ಮನುಷ್ಯನ ಫಾರ್ಮ್ ಬಗ್ಗೆ ತಿಳಿದಿದ್ದೇಯೆ?ಯುನಿಸ್ಕೊದ ವಿಶ್ವ ಪರಂಪರೆಯ ತಾಣವಾದ ಮೊಹೆಂಜೊದಾರೊ ಎಂಬ ಪ್ರಾಚೀನ ನಾಗರಿಕತೆಯು 4500 ವರ್ಷಗಳ ಹಿಂದೆ ಇತ್ತು ಎಂದು ಭಾವಿಸಲಾಗಿದೆ. ಸಿಂಧೂ ನದಿಯ ಫಲವತ್ತಾದ ಬಯಲು ಪ್ರದೇಶದಲ್ಲಿ ನಿಗೂಢವಾಗಿ ಕುಸಿಯುವವರೆಗೆ ಇಲ್ಲಿ ಅಭಿವೃದ್ಧಿ ಹೊಂದಿತು. 1911ರವರೆಗೆ ಮೊಹೆಂಜೋದಾರೋದ ಬಗ್ಗೆ ತಿಳಿದಿರಲಿಲ್ಲ. 1921ರವರೆಗೆ ಇಲ್ಲಿ ಉತ್ಖನನ ಪ್ರಾರಂಭವಾಗಲಿಲ್ಲ. ಸುಧಾರಿತ ಒಳಚರಂಡಿ ವ್ಯವಸ್ಥೆ ಮತ್ತು ಗ್ರಿಡ್ ಶೈಲಿಯ ನಿರ್ಮಾಣಕ್ಕೆ ಹೆಸರುವಾಸಿಯಾದ ಈ ನಾಗರಿಕತೆಯೂ ರಹಸ್ಯಮಯವಾಗಿದೆ.
ಇದನ್ನು ಓದಿ: ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳುದಕ್ಷಿಣ ಇಂಗ್ಲೆಂಡ್‌ನಲ್ಲಿರುವ, ಬೃಹತ್ ನೆಟನೆಯ ಬಂಡೆಗಳನ್ನು ಒಳಗೊಂಡಿರುವ ಇತಿಹಾಸ ಪೂರ್ವ ಸ್ಮಾರಕ 'ಸ್ಟೋನ್ ಹೆಂಜ್', ಯುನೆಸ್ಕೊದ ವಿಶ್ವ ಪರಂಪರೆಯ ತಾಣವಾಗಿದೆ. ನವಶಿಲಾಯುಗದ ಬಿಲ್ಡರ್ಗಳು ಇದನ್ನು ನಿರ್ಮಿಸಲು ಅಂದಾಜು 30 ದಶಲಕ್ಷ ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ ಎಂದು ನಂಬಲಾಗಿದೆ. ಕೆಲವು ವಿಜ್ಞಾನಿಗಳು ಇದನ್ನು ಹಿಮಯುಗದ ಅವಧಿಗಳಲ್ಲಿ ಭಾರವಾದ ಎತ್ತುವಿಕೆಯನ್ನು ಸಾಗಿಸುವ ಮೂಲಕ ಮಾಡಿದ್ದಾರೆ ಎಂದು ಸೂಚಿಸಿದ್ದಾರೆ. ಆದರೂ ಇದರ ರಚನೆಯ ಉದ್ದೇಶವೂ ನಿಗೂಢವಾಗಿ ಉಳಿದಿದೆ.
ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕಕ್ರಿ.ಪೂ. 1200ರ ಸುಮಾರಿಗೆ ಇಡೀ ಪೂರ್ವ ಮೆಡಿಟೇರಿಯನ್, ಅನಾಟೊಲಿಯ ಮತ್ತು ಎಜಿಯನ್ ಪ್ರದೇಶವು ಹಿಂಸಾತ್ಮಕ ರೀತಿಯಲ್ಲಿ ಕುಸಿಯಿತು. ಬಹುತೇಕ ಎಲ್ಲಾ ನಗರಗಳು ನಾಶವಾದವು ಮತ್ತು ಸಾಮ್ರಾಜ್ಯಗಳ ಸಾಂಸ್ಕೃತಿಕ ಕುಸಿತ ಕರಾಳ ಯುಗವನ್ನು ತಂದಿತು. ವಿದೇಶಿ ಆಕ್ರಮಣಕಾರರು, ಅಂತಾರಾಷ್ಟ್ರೀಯ ವ್ಯಾಪಾರದಲ್ಲಿನ ಕುಸಿತ, ಬರಗಾಲ ಅಥವಾ ಭೂಕಂಪದಂತ ಕಾರಣದಿಂದ ಈ ನಗರ ನಾಶವಾಯಿತೆಂದು ಇತಿಹಾಸಕಾರರು ನಂಬಿದ್ದಾರೆ.
ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು1888ರ, ಆಗಸ್ಟ್ ಮತ್ತು ನವೆಂಬರ್ ನಡುವೆ, ಇಂಗ್ಲೆಂಡ್‌ನ ಲಂಡನ್‌ನ ಈಸ್ಟ್ ಎಂಡ್‌ನಲ್ಲಿ ಕನಿಷ್ಠ ಐದು ವೇಶ್ಯೆಯರನ್ನು ವಿರೂಪಗೊಳಿಸಿ ಕೊಲ್ಲಲಾಯಿತು. ಇದು ಜ್ಯಾಕ್ ದಿ ರಿಪ್ಪರ್ ರಹಸ್ಯಕ್ಕೆ ಕಾರಣವಾಯಿತು. ಅಪರಾಧಗಳನ್ನು ಒಪ್ಪಿಕೊಂಡು ಲಂಡನ್ ಸುದ್ದಿ ಸಂಸ್ಥೆಗೆ ಕಳುಹಿಸಿದ ಅನಾಮದೇಯ ಪತ್ರದಿಂದ ಈ ಹೆಸರು ಹುಟ್ಟಿಕೊಂಡಿದೆ. ಆದರೆ ಆ ಹೆಸರು ನಕಲಿ ಎಂದು ಕಂಡು ಬಂದಿದೆ. ಈ ಅಪರಾಧ ಸಂಭವಿಸಿ ಸುಮಾರು 13 ದಶಕಗಳ ನಂತರವೂ ಕೊಲೆಗಾರನ ಗುರುತನ್ನು ಸುತ್ತುವರಿದಿರುವ ಉಹಾಪೋಹಗಳು ಸಾಯಲಿಲ್ಲ.
ಮನುಷ್ಯನ ಚಿತ್ರಣವನ್ನು ಹೊಂದಿರುವ ಲಿನಿನ್ ಬಟ್ಟೆಯ ತುಂಡು ನಜರೇತಿನ ಜೀಸಸ್ ಹೆಣದ್ದು ಎಂದು ನಂಬಲಾಗಿದೆ. ಇಟಲಿಯ ಟ್ಯೂರಿಂಗ್ನಲ್ಲಿರುವ ಸೆಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಕ್ಯಾಥೆಡ್ರಲ್ನಲ್ಲಿ ಈ ಕಲಾಕೃತಿಯನ್ನು ಇಡಲಾಗಿದೆ. ಹಲವಾರು ವರ್ಷಗಳಿಂದ ವಿಜ್ಞಾನಿಗಳು ಈ ಬಟ್ಟೆಯನ್ನು ಅಧ್ಯಯನ ಮಾಡಿದ್ದಾರೆ. ಅದನ್ನು ಡಿಎನ್ಎ ಅಧ್ಯಯನದಲ್ಲಿ ಸೇರಿದಂತೆ ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಜುಲೈ 2018ರಲ್ಲಿ ಪ್ರಕಟವಾದ ಒಂದು ಅಧ್ಯಯನವು ರಕ್ತದ ಕಲೆಗಳು ಅವಾಸ್ತವಿಕವಾಗಿದೆ ಎಂದು ಹೇಳಿಕೊಂಡಿದೆ. ಆದರೂ ಬಟ್ಟೆಯ ತುಂಡು ಪೌರಾಣಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿರುವ ಧಾರ್ಮಿಕ ಪ್ರತಿಮೆಯಾಗಿ ಉಳಿದಿದೆ.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?ಕ್ರಿ.ಪೂ. 150 ಮತ್ತು 100ರ ಪ್ರಾಚೀನ ಕಂಪ್ಯೂಟರ್ ತರಹದ ಸಾಧನವನ್ನು ಗ್ರೀಕ್ ವಿಜ್ಞಾನಿಗಳು ಕಂಡುಹಿಡಿದರು. ಈ ಸಾಧನವು ಗ್ರೀಕ್ ದೀಪದ ಆಂಟಿಕೀಥೆರಾ ಕರಾವಳಿಯಲ್ಲಿ 2000 ವರ್ಷಗಳಷ್ಟು ಹಳೆಯದಾದ ಹಡಗಿನಲ್ಲಿ ಪತ್ತೆಯಾಗಿದೆ. 1959ರಲ್ಲಿ ನ್ಯೂಜೆರ್ಸಿಯಲ್ಲಿರುವ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದ ಇತಿಹಾಸಕಾರ ಡೆರೆಕ್ ಜೆ ದಿ ಸೊಲ್ಲಾ ಪ್ರೈಸ್, ಈ ಸಾಧನವನ್ನು ಖಗೋಳ ಸ್ಥಾನಗಳು ಮತ್ತು ಗ್ರಹಣಗಳ ಸ್ಥಳವನ್ನು ತಿಳಿಯಲು ಬಳಸಬಹುದೆಂದು ಕಂಡುಕೊಂಡರು. ನಿಗೂಢವಾದ ಅಂಶವೆಂದರೆ, ಯುರೋಪಿನಲ್ಲಿ ಯಾಂತ್ರಿಕ ಗಡಿಯಾರಗಳನ್ನು ತಯಾರಿಸುವ 14ನೇ ಶತಮಾನದವರೆಗೆ ಅಂತಹ ವಸ್ತುಗಳನ್ನು ಉತ್ಪಾದಿಸುವ ತಂತ್ರಜ್ಞಾನವೂ ಕಾಣಿಸಿರಲಿಲ್ಲ.
ಸ್ನೇಹಿತರೆ, ಇದಾಗಿತ್ತು ಇತಿಹಾಸದ ಬಗೆಹರಿಯದ 8 ರಹಸ್ಯಗಳು. ಇವಿಷ್ಟೇ ಅಲ್ಲದೆ ಇತಿಹಾಸದ ಅನೇಕ ಬಗೆಹರಿಯದ ರಹಸ್ಯಗಳಿವೆ. ಅದರ ಬಗ್ಗೆ ತಿಳಿಸಬೇಕೆಂದರೆ ಕೆಳಗೆ ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ
Explore all our Posts by categories.
Info Mind 3374
Info Mind 6390
See all comments...
sushma • December 15th,2022
ತುಂಬಾ ಅದ್ಭುತವಾದ ವಿಷಯ ಹೀಗೆ ಇನ್ನೂ ಅನೇಕ ಮಾಹಿತಿಗಳನ್ನು ತಿಳಿಸಿ.