Website designed by @coders.knowledge.

Website designed by @coders.knowledge.

Everything about Share Market | ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

Watch Video

ತುಂಬಾ ಜನ ಷೇರು ಮಾರುಕಟ್ಟೆಯನ್ನು ಜೂಜಾಟ ಎನ್ನುತ್ತಾರೆ, ಆದರೆ ಅದು ಸತ್ಯವಲ್ಲ. ಏಕೆಂದರೆ ಷೇರು ಮಾರುಕಟ್ಟೆಯನ್ನು ಊಹಿಸಿಸಬಹುದು(predict), ವಿಶ್ಲೇಷಿಸಬಹುದು,(analyse), ಫಿಲ್ಟರ್ ಮಾಡಬಹುದು. ಈ ಮೂರನ್ನು ನೀವು ಕಲಿತರೆ ಷೇರು ಮಾರುಕಟ್ಟೆಯಿಂದ ಶೇಕಡಾ 20ಕ್ಕೂ ಅಧಿಕ ರಿಟರ್ನ್ ಪಡೆಯಬಹುದು.

ಷೇರು ಮಾರುಕಟ್ಟೆಯಿಂದ ದೇಶದ ಎಲ್ಲ ಜನರ ಆರ್ಥಿಕ ಸಂಕಷ್ಟ ನಿವಾರಣೆಯಾಗಬಹುದು.

ಹೂಡಿಕೆಯ ವಿವಿಧ ರೀತಿ ಯಾವುದು?

ಹೂಡಿಕೆಯ ಮೊದಲ ರೀತಿಯೇ ಫಿಕ್ಸೆಡ್ ಡೆಪಾಸಿಟ್(FD), ಇದರಲ್ಲಿ ನಿಮಗೆ ಕನಿಷ್ಠ 5ರಷ್ಟು ರಿಟರ್ನ್ ಸಿಗಬಹುದು. ಇದರಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳಲು 14 ವರ್ಷ ತೆಗೆದುಕೊಳ್ಳುತ್ತದೆ. ಇನ್ನೊಂದು ಡೆಬ್ಟ್ ಫಂಡ್(debt fund), ಇದು ಕೂಡ ಕನಿಷ್ಠ 5ರಷ್ಟು ರಿಟರ್ನ್ ನೀಡುತ್ತದೆ. ಇದು 14 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ. ರಿಯಲ್ ಎಸ್ಟೇಟ್(real estate) ಇದರ ರಿಟ್ಟರ್ ಊಹಿಸಲು ಸಾದ್ಯವಿಲ್ಲ. ಈಗಿನ ಸಮಯದಲ್ಲಿ ರಿಟರ್ನ್ ನೆಗೆಟಿವ್ ಸಹ ಇರಬಹುದು.

types of investments in kannada
types of investments

ಚಿನ್ನ(gold) ಇದರಿಂದ 9 ರಿಂದ 10 ರಷ್ಟು ರಿಟರ್ನ್ ಸಿಗಬಹುದು. ನಿಮ್ಮ ಹಣ 8 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಸೇವಿಂಗ್ ಅಕೌಂಟ್(saving account) ಇದರಲ್ಲಿ 2 ರಿಂದ 3ರಷ್ಟು ರಿಟರ್ನ್ ಸಿಗುತ್ತದೆ. ಇದರಲ್ಲಿ ನಿಮ್ಮ ಹಣ 24 ವರ್ಷಗಳಲ್ಲಿ ದ್ವಿಗುಣಗೊಳ್ಳಬಹುದು. ಕರೆಂಟ್ ಅಕೌಂಟ್(current account) ಇದರಿಂದ ಯಾವುದೇ ರೀತಿಯ ರಿಟರ್ನ್ ಸಿಗುವುದಿಲ್ಲ. ಷೇರು ಮಾರುಕಟ್ಟೆ, ಮೇಲೆ ತಿಳಿಸಿರುವ ಎಲ್ಲದಕ್ಕಿಂತ ಇದರಲ್ಲಿ 18 ರಿಂದ 20ರಷ್ಟು ರಿಟರ್ನ್ ಸಿಗಬಹುದು. ಇದರಿಂದ ನೀವು ಕೇವಲ 4 ವರ್ಷಗಳಲ್ಲೇ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಆದರೆ ಯಾರೋ ನಿಮಗೆ ನೀಡುವ ಸಲಹೆಯಿಂದ(tips) ಇದು ಸಾಧ್ಯವಿಲ್ಲ.

ಇದನ್ನು ಓದಿ: "ಲರ್ನ್ ಟು ಆರ್ನ್" ಪುಸ್ತಕದ 4 ಪ್ರಮುಖ ಹೂಡಿಕೆಯ ಕಲಿಕೆಗಳು.

ಷೇರು ಮಾರುಕಟ್ಟೆಯಲ್ಲಿ ಎಷ್ಟು ವಿಧಗಳಿವೆ?

ಮ್ಯೂಚುಯಲ್ ಫಂಡ್(mutual fund): ಇದರಲ್ಲಿ ನೀವು ನಿಮ್ಮ ಹಣವನ್ನು ಒಬ್ಬ ವ್ಯಕ್ತಿಗೆ ನೀಡುತ್ತೀರಾ. ಆತ ಅದನ್ನು ನೋಡಿಕೊಳ್ಳುತ್ತಾನೆ.

ಕಂಪನಿ ಶೇರ್: ಇದರಲ್ಲಿ ನೀವು ನೇರವಾಗಿ ಕಂಪನಿಯ ಶೇರ್ ಖರೀದಿಸುತ್ತೀರಾ.

ಯಾವ ಕಂಪನಿಯ ಮೇಲೆ ಹೂಡಿಕೆ ಮಾಡಬೇಕು, ಯಾವಾಗ ಶೇರ್ ಖರೀದಿಸಬೇಕು, ಜನರು ಏಕೆ ಷೇರು ಮಾರುಕಟ್ಟೆಯಲ್ಲಿ ವಿಫಲರಾಗುತ್ತಾರೆ, ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.

ಭಾರತದಲ್ಲಿ ಕೇವಲ 3.5ರಷ್ಟು ಜನರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಅಮೆರಿಕಾದಲ್ಲಿ 55ರಷ್ಟು ಜನರು ಅಲ್ಲಿನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

ಷೇರು ಮಾರುಕಟ್ಟೆಯಲ್ಲಿ ವಿಫಲರಾಗಲು ಕಾರಣಗಳೆಂದರೆ.

  • • ಅಪಾಯ(risk) ತೆಗೆದುಕೊಳ್ಳದಿರುವುದು.
  • • ಷೇರು ಮಾರುಕಟ್ಟೆಯ ಜ್ಞಾನ ಇಲ್ಲದೇ ಇರುವುದು.
  • • ಷೇರು ಮಾರುಕಟ್ಟೆಯಲ್ಲಿ ನಡೆಯುವ ಹಗರಣ(scam) ಮತ್ತು ವಂಚನೆ(fraud).
famous investors in india in kannada
famous investers in india

ಆದರೆ ಇದೆಲ್ಲವನ್ನು ಹೊರತುಪಡಿಸಿ, ಭಾರತದಲ್ಲಿ ರಾಕೇಶ್ ಜುಂಜುನ್ವಾಲಾ, ರಾಮ್‌ದೇವ್ ಅಗರ್ವಾಲ್, ವಿಜಯ್ ಕೇಡಿಯಾ, ರಾಧಾಕಿಶನ್ ದಮಾನಿ ಅಂಥವರು ಷೇರು ಮಾರುಕಟ್ಟೆಯಿಂದ ಕೋಟಿ ಕೋಟಿ ಹಣ ಗಳಿಸಿದರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನಿಮ್ಮ ಅಕ್ಕಪಕ್ಕ ಇರುವ ಜನಗಳಿಂದ ಸಲಹೆ(tip) ಕೇಳುವುದನ್ನು ನಿಲ್ಲಿಸಿ. ನಾವು ಇಲ್ಲಿ ತಿಳಿಸುವ ಹತ್ತು ಪಾಯಿಂಟ್ಸ್ ಮೇಲೆ ಗಮನ ಹರಿಸಿ.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

1. ವ್ಯಾಪಾರದಲ್ಲಿ ಹನ್ನೊಂದು ವರ್ಷ ಹಳೆಯದಾಗಿರಲಿ.

ಇದರರ್ಥ ನೀವು ಹೂಡಿಕೆ ಮಾಡಲು ಬಯಸುವ ಕಂಪನಿಯು ಕನಿಷ್ಠ 11 ವರ್ಷಗಳಷ್ಟು ಹಳೆಯದಾಗಿರಲಿ. ಕಂಪನಿಯ 11 ವರ್ಷಗಳಲ್ಲಿ ಹಲವು ಬಾರಿ ಅಪ್‌ ಡಾವ್ನ್ ಬರುತ್ತದೆ. ಅದನ್ನು ಕಂಪನಿ ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೀವು ಆ ಕಂಪನಿಯ ಚಾರ್ಟ್ ಮೂಲಕ ತಿಳಿದುಕೊಳ್ಳಬಹುದು. ಇದು ಕಂಪನಿ ಹಳೆಯದಾದಷ್ಟು ಹೆಚ್ಚಾಗಿ ತಿಳಿಯುತ್ತದೆ. ಹೀಗಾಗಿ ನೀವು ಹೂಡಿಕೆ ಮಾಡುವ ಕಂಪನಿ ಕನಿಷ್ಠ 11 ವರ್ಷದಷ್ಟು ಹಳೆಯದಾಗಿರಲಿ. ನೀವು ಕಂಪನಿಯ ಈ 11 ವರ್ಷದ ಚಾರ್ಟ್ ನೋಡಿ ವಿಶ್ಲೇಷಿಸಿದರೆ ನಿಮಗೆ ಆ ಕಂಪನಿ ಮೇಲೆ ನಂಬಿಕೆ ಬರುತ್ತದೆ.

atleast 11 years old company in kannada
choose old companies

ಐಷರ್ ಮೋಟಾರ್ಸ್ 73 ವರ್ಷದಷ್ಟು ಹಳೆಯ ಕಂಪನಿ. ಇದರ ಸಿಇಒ ಸಿದ್ಧಾರ್ಥ್ ಲಾಲ್. ಏಪ್ರಿಲ್ 2011 ರಂದು ಇದರ ಶೇರ್ ಪ್ರೈಸ್ 135ರೂ ಇತ್ತು, 2014ರಂದು 600ರೂ, 2017ರಂದು 2,600ರೂ ಇತ್ತು. ಇದು 6 ವರ್ಷಗಳಲ್ಲಿ ಸರಿಸುಮಾರು 50 ರಷ್ಟು ರಿಟರ್ನ್‌ ನೀಡಿದೆ.

ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ 129 ವರ್ಷದಷ್ಟು ಹಳೆಯ ಕಂಪನಿ. ವರುಣ್ ಬೆರಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಇದರ ಶೇರ್ ಪ್ರೈಸ್ 2011ರಲ್ಲಿ 200ರೂ, 2014ರಂದು 450ರೂ, 2017ರಂದು 1,800ರೂ, ಈಗ 2021ರಂದು 3,400ರೂ ಇದೆ. ಇದು ಹತ್ತು ವರ್ಷದಲ್ಲಿ ಸರಾಸರಿ 28ರಷ್ಟು ರಿಟರ್ನ್‌ ನೀಡಿದೆ.

ಎಚ್ಡಿಎಫ್ಸಿ(hdfc) ಬ್ಯಾಂಕ್ ಇದರ ಚೆಯರ್ ಮ್ಯಾನ್ ಆಟನು ಚಕ್ರವರ್ತಿ. 1994ರಲ್ಲಿ ಈ ಬ್ಯಾಂಕ್ ಪ್ರಾರಂಭವಾಯಿತು. ಇದರ ಶೇರ್ ಪ್ರೈಸ್ 2011ರಲ್ಲಿ 250ರೂ ಇತ್ತು. ಈಗ 2021ರಂದು 1,500ರೂ ಇದೆ. ಇದು ಈ ಹತ್ತು ವರ್ಷದಲ್ಲಿ ಸರಾಸರಿ 18 ರಷ್ಟು ರಿಟರ್ನ್ ನೀಡಿದೆ.

ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?

2. ಕಂಪನಿಯ ಬೆಳವಣಿಗೆ ದೇಶದ ಜಿಡಿಪಿಗಿಂತ ಎರಡರಷ್ಟಿರಲಿ.

ಜಿಡಿಪಿ ಎಂದರೆ Gross Demostic Products. ದೇಶದ ಎಲ್ಲಾ ಸರಕುಗಳು ಮಾರಾಟವಾಗಿ, ಆ ಎಲ್ಲ ಮಾರಾಟವಾದ ಸರಕುಗಳ ಒಟ್ಟಾಗಿದೆ ಜಿಡಿಪಿ. ಜಿಡಿಪಿಯೆಂದರೆ ಒಂದು ವರ್ಷದಲ್ಲಿ ಎಷ್ಟು ಮಾರಾಟ ಮಾಡಲಾಗಿದೆ ಎಂದರ್ಥ. ದೇಶದಲ್ಲಿ ಮಾರಾಟವಾಗುವುದು ಪ್ರತಿವರ್ಷ 5ರಷ್ಟು ಹೆಚ್ಚಾಗುತ್ತಿದ್ದರೆ, ನೀವು ಆರಿಸುವ ಕಂಪನಿ 10ರಷ್ಟು ಹೆಚ್ಚುತ್ತಿರಬೇಕು. ಕಂಪನಿಯ ಬೆಳವಣಿಗೆ ದೇಶದ ಬೆಳವಣಿಗೆಗಿಂತ ದ್ವಿಗುಣವಿರಬೇಕು.

gdp and company in kannada
www.businesstoday.in

ರಾಡಿಕೊ ಖೈತಾನ್ ಎಂಬುದು ಲಲಿತ್ ಖೈತಾನ್ ಅವರ ಕಂಪನಿಯಾಗಿದೆ. ಜಿಡಿಪಿಯಲ್ಲಿ 7ರಷ್ಟು ಬೆಳವಣಿಗೆ ಇದ್ದರೆ, ಇದರ ಬೆಳವಣಿಗೆ 18ರಷ್ಟು ಇತ್ತು. ಇದರ ಶೇರ್ ಪ್ರೈಸ್ 2017ರಂದು 130ರೂ ಇತ್ತು. ಇಂದು 2021ರಂದು 600ರೂ ಆಗಿದೆ. 4 ವರ್ಷಗಳಲ್ಲಿ ಸರಾಸರಿ 40ರಷ್ಟು ರಿಟರ್ನ್‌ ನೀಡಿದೆ.

ಡೊಮಿನೊಸ್ ಪಿಜ್ಜಾದ ಜೂಬಿಲೆಂಟ್ ಪೂಡ್ವರ್ಕ್, ಜಿಡಿಪಿಯಲ್ಲಿ 7ರಷ್ಟು ಬೆಳವಣಿಗೆಯಿದ್ದರೆ, ಇದು 17ರಷ್ಟು ಬೆಳವಣಿಗೆ ಇತ್ತು. ಇದರ ಶೇರ್ ಪ್ರೈಸ್ 2017ರಂದು 550ರೂ ಇತ್ತು, 2019ರಂದು 1,600ರೂ, ಈಗ 2021ರಂದು 3000ರೂ ಆಗಿದೆ. 4 ವರ್ಷಗಳಲ್ಲಿ ಸರಾಸರಿ 43ರಷ್ಟು ರಿಟರ್ನ್ ನೀಡಿದೆ.

ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳು

3. ಕಂಪನಿಯ ನಾಯಕ ಯಾರೆಂದು ನೋಡಿ.

ಕಂಪನಿಯ ಬೆಳವಣಿಗೆ ಆ ಕಂಪೆನಿಯ ನಾಯಕನ ಮೇಲೆ ನಿಂತಿದೆ. ಹೀಗಾಗಿ ನೀವು ಕಂಪನಿ ಆರಿಸಿಕೊಳ್ಳುವಾಗ ಆ ಕಂಪನಿಯ ನಾಯಕನ ಬಗ್ಗೆ ಪೂರ್ತಿಯಾಗಿ ತಿಳಿಯಿರಿ. ಅವುಗಳಲ್ಲಿ ಕೆಲವೆಂದರೆ,

  • • ಆತನ ಮೇಲೆ ನ್ಯಾಯಾಲಯದ ಪ್ರಕರಣ(court case) ಇದೆಯೇ?
  • • ಆತ ಹೂಡಿಕೆದಾರರ ಹಣದಿಂದ ವಂಚನೆ ಮಾಡುತ್ತಿರುವನೇ?
  • • ಆತನು ಕಂಪನಿಯ ಭವಿಷ್ಯದ ಬಗ್ಗೆ ಏನೂ ಪ್ಲಾನ್ ಮಾಡಿರುವನು?
  • • ಕಂಪನಿಯ ಕ್ವಾರ್ಟರ್ ಮೀಟಿಂಗ್ಗೆ ಅವನು ಬರುತ್ತಿರುವನೇ?, ಎಂಬುದನ್ನು ನೋಡಿ.

ಕಂಪನಿಯ ನಾಯಕತ್ವ ಪದೇಪದೇ ಬದಲಾಗುತ್ತಿದ್ದರೆ, ಮ್ಯಾನೇಜ್ಮೆಂಟ್ ನಂಬಿಕೆಯಲಿಲ್ಲದಿದ್ದರೆ, ಆ ಕಂಪನಿ ಅಷ್ಟು ಒಳ್ಳೆಯದಲ್ಲ. ಹರ್ಷದ್ ಮೆಹ್ತಾ ಹಗರಣದಲ್ಲಿ ಎಸಿಸಿ ಸಿಮೆಂಟ್ ಸ್ಟಾಕ್ 200 ರಿಂದ 9000ರೂ ತನಕ ಹೋಯಿತು. ಆದರೆ ಕಂಪೆನಿಯ ಮೂಲಭೂತದಲ್ಲಿ(fundamental) ಅಷ್ಟು ವ್ಯತ್ಯಾಸವಾಗಿರಲಿಲ್ಲ. ಹೀಗಾಗಿ ಆ ಹಗರಣ ನಡೆಯಿತು.

owner of company in kannada
dmart- radhakishan damani

ಡಿಮಾರ್ಟ್, ರಾಧಾಕಿಶನ್ ದಮಾನಿ ಅವರ ನಾಯಕತ್ವದಲ್ಲಿ 2017 ರಂದು 700ರೂ ಇದ ಡಿಮಾರ್ಟ್ ಶೇರ್ ಪ್ರೈಸ್, ಈಗ 2021ರಂದು 3,300ರೂ ಆಗಿದೆ. 4 ವರ್ಷಗಳಲ್ಲಿ ಸರಾಸರಿ 40ರಷ್ಟು ರಿಟರ್ನ್ಸ್ ನೀಡಿದೆ.

ರಿಲಯನ್ಸ್, ಮುಕೇಶ್ ಅಂಬಾನಿ ಅವರ ನಾಯಕತ್ವದಲ್ಲಿ 2017ರಂದು 460ರೂ ಇದ್ದ ಶೇರ್ ಪ್ರೈಸ್, ಈಗ 2021ರಂದು 2,100ರೂ ತಲುಪಿದೆ. ಅಂದರೆ 4ವರ್ಷಗಳಲ್ಲಿ ಸರಾಸರಿ 40ರಷ್ಟು ರಿಟರ್ನ್ಸ್ ನೀಡಿದೆ.

ಬಜಾಜ್ ಫಿನ್‌ಸರ್ವ್, ರಾಹುಲ್ ಬಜಾಜ್ ಅವರ ನಾಯಕತ್ವದಲ್ಲಿ 2017ರಂದು 1,350ರೂ ಇದ್ದ ಶೇರ್ ಪ್ರೈಸ್, ಇಂದು 2021ರಂದು 5,500ರೂ ಆಗಿದೆ. 4 ವರ್ಷಗಳಲ್ಲಿ ಸರಾಸರಿ 35ರಷ್ಟು ರಿಟರ್ನ್ಸ್ ನೀಡಿದೆ.

ಇದನ್ನು ಓದಿ: ಕರ್ನಾಟಕದ ಮೇಲೆ ಎಂಟು ಆಸಕ್ತಿದಾಯಕ ಸಂಗತಿಗಳು

4. ಡೆಪ್ಟ್ ಶೂನ್ಯವಾಗಿರಲಿ.

ಒಂದು ಕಂಪನಿಗೆ ಸಾಲ ಮತ್ತು ಬಡ್ಡಿ ತೀರಿಸುವುದು ಇಲ್ಲವೆಂದರೆ, ಲಾಭದಲ್ಲಿ ತುಂಬಾ ಹಣ ಉಳಿಯುತ್ತದೆ. ದೇಶದಲ್ಲಿ ಅನೇಕ ಕಂಪನಿಗಳು ಸಾಲದಿಂದಾಗಿ ದಿವಾಳಿಯಾಗಿವೆ(bankrupt) ಆಗಿವೆ. ಆ ಕಂಪನಿಗಳಲ್ಲಿ ಕೆಲವು ಕಂಪನಿಗಳನ್ನು ನೀವು ಇಲ್ಲಿ ನೋಡಬಹುದು. ಯಾವ ಕಂಪನಿಯ ಡೆಬ್ಟ್ ಶೂನ್ಯವಿರುತ್ತದೆಯೋ, ಆ ಕಂಪನಿಯ ಪೋರ್ಟ್ಫೋಲಿಯೋ ಅತ್ಯುತ್ತಮವಾಗಿರುತ್ತದೆ. ಇದನ್ನು ನೀವು ಮನಿಕಂಟ್ರೋಲ್ ಎಂಬ ವೆಬ್‌ಸೈಟ್‌ಗೆ ಹೋಗಿ ಕಂಪನಿಯ ಬ್ಯಾಲೆನ್ಸ್ ಶೀಟ್ ನೋಡಿ ತಿಳಿದುಕೊಳ್ಳಬಹುದು.

debt free companies in kannada
debt free companies

ಡಿವೀಸ್ ಲ್ಯಾಬೊರೇಟರಿ, ಡೆಪ್ಟ್ ಫ್ರೀ ಕಂಪನಿಯಾಗಿದೆ. ಇದರ ಶೇರ್ ಪ್ರೈಸ್ 2017ರಂದು 650ರೂ ಇತ್ತು. ಇಂದು 4,100ರೂ ಇದೆ. ಇದರ ಡೆಪ್ಟ್ ಟೂ ಇಕ್ವಿಟಿ ಅನುಪಾತ(ratio) ಶೂನ್ಯವಿದ್ದು, 4ವರ್ಷಗಳಲ್ಲಿ ಸರಾಸರಿ 47ರಷ್ಟು ರಿಟರ್ನ್ಸ್ ನೀಡಿದೆ.

ಖರ್ಚಿದರೆ ಅದನ್ನು ಕಡಿಮೆಗೊಳಿಸಬಹುದು. ಆದರೆ ಸಾಲವಿದ್ದರೆ ಅದನ್ನು ತೀರಿಸಬೇಕಾಗುತ್ತದೆ. ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.

ಟಿಸಿಎಸ್ ಇದರ ಡೆಪ್ಟ್ ಟೂ ಇಕ್ವಿಟಿ ಅನುಪಾತ ಶೂನ್ಯವಿದೆ. 2017ರಂದು 1,500 ಇದ್ದ ಇದರ ಶೇರ್ ಪ್ರೈಸ್, ಇಂದು 3,300ರೂ ಆಗಿದೆ. 4 ವರ್ಷಗಳಲ್ಲಿ 20ರಷ್ಟು ರಿಟರ್ನ್ಸ್ ನೀಡಿದೆ.

whirlpool ಡೆಬ್ಟ್ ಫ್ರೀ ಕಂಪನಿಯಾಗಿದೆ. 2017ರಂದು ಇದರ ಶೇರ್ ಪ್ರೈಸ್ 1,200ರೂ ಇತ್ತು. ಇಂದು 2021ರಂದು 2,300ರೂ ಆಗಿದೆ.

ಇದನ್ನು ಓದಿ: ಜಗತ್ತಿನ 8 ತೂಕ ಹೆಚ್ಚಿಸುವ ಆಹಾರಗಳು

5. ಪ್ರೊಮೋಟರ್ ಹೆಚ್ಚಿನ ಸ್ಟಾಕ್ ಹೊಂದಿರಬೇಕು.

ಒಂದು ಕಂಪನಿಯ ಪ್ರಚಾರಕ(promoter) ಕನಿಷ್ಠ 51ರಷ್ಟು ಸ್ಟಾಕ್ ಹೊಂದಿರಬೇಕು. ಅವನ ಹಣ ಕಂಪನಿಯಲ್ಲಿ ಇಲ್ಲದೇ ಇದ್ದರೆ ಅವನು ಆ ಕಂಪನಿಯನ್ನು ಯಾವ ಕಾರಣಕ್ಕೆ ಬೆಳೆಸುತ್ತಾನೆ. ಕಂಪನಿಯನ್ನು ಮುಂದುವರೆಸುವುದು ಅದರ ನಾಯಕತ್ವದ ಮೇಲೆ ನಿಂತಿದೆ. ಕಂಪನಿಯಲ್ಲಿರುವ ಕೆಲಸಗಾರರಿಗಿಂತ ಅದರ ನಾಯಕ ಕಂಪನಿಯ ಮೇಲೆ ಹೆಚ್ಚು ಕಾರ್ಯನಿರ್ವಹಿಸುತ್ತಿರುತ್ತಾನೆ. ಕಂಪನಿಯಲ್ಲಿ ಪ್ರಚಾರಕನ ಸ್ಟಾಕ್ ಕನಿಷ್ಠ 51ರಷ್ಟು ಇದ್ದರೆ, ಅವನು ಆ ಕಂಪನಿಯ ಮೇಲೆ ಗಮನಹರಿಸುತ್ತಾನೆ(focus), ವಿಮರ್ಶೆಗಳನ್ನು(reviews) ಪಡೆಯುತ್ತಾನೆ, ದೂರದೃಷ್ಟಿ ಇಡುತ್ತಾನೆ. ಪ್ರಚಾರಕ ಮಾರುಕಟ್ಟೆಯಲ್ಲಿ ಅವನ ಕಂಪನಿಯ ಶೇರ್ ಖರೀದಿಸುತ್ತಿದ್ದರೆ, ಅದು ಒಳ್ಳೆಯದು. ಏಕೆಂದರೆ ಅವನಿಗೆ ಅವನ ಕಂಪನಿ ಮುಂದುವರಿಯಲಿದೆ ಎಂಬುದು ತಿಳಿದಿದೆ.

promoter stock in company in kannada
www.groww.in

ಫೆವಿಕಾಲ್ ಕಂಪನಿ ಪಿಡಿಲೈಟ್, ಅದರ ಚೇರ್ಮನ್ ಭರತ್ ಪುರಿ. ಇದರ ಪ್ರೊಮೋಟರ್ ಹೋಲ್ಡಿಂಗ್ 70ರಷ್ಟಿದೆ. ಅವರು ಎಲ್ಲ ಷೇರುಗಳನ್ನು ಮಾರಿಲ್ಲ ಈ ಕಂಪನಿ ಹತ್ತು ವರ್ಷಗಳಲ್ಲಿ ಸರಾಸರಿ 25ರಷ್ಟು ರಿಟರ್ನ್ ನೀಡಿದೆ.

ಸೆರಾ ಸ್ಯಾನಿಟರಿವೇರ್, ಇದರ ಚೇರ್ಮನ್ ವಿಕ್ರಂ ಸೋಮಾನಿ. ಇದರ ಪ್ರೊಮೋಟರ್ ಹೋಲ್ಡಿಂಗ್ 26ರಷ್ಟಿದೆ. 10 ವರ್ಷಗಳಲ್ಲಿ ಸರಾಸರಿ 30ರಷ್ಟು ರಿಟರ್ನ್ ನೀಡಿದೆ.

ಬರ್ಜರ್ ಪೇಂಟ್ನ ಚೇರ್ಮನ್ ಕುಲ್ದೀಪ್ ಸಿಂಗ್ ಧಿಂಗ್ರಾ. ಇದರ ಪ್ರೊಮೋಟರ್ ಹೋಲ್ಡಿಂಗ್ 25ರಷ್ಟಿದೆ. ಈ ಕಂಪನಿ ಹತ್ತು ವರ್ಷಗಳಲ್ಲಿ ಸರಾಸರಿ 30ರಷ್ಟು ರಿಟರ್ನ್ ನೀಡಿದೆ.

ಇದನ್ನು ಓದಿ: 20ರ ವಯಸ್ಸಿನಲ್ಲಿ ನಿಮ್ಮ ಹಣ ಖರ್ಚಗುವ 7 ಬಲೆಗಳು

6. ಪ್ರಾಫಿಟ್ ಅಪ್ಟರ್ ಟ್ಯಾಕ್ಸ್ ಅಥವಾ ನೆಟ್ ಪ್ರಾಫಿಟ್ ಪ್ರತಿವರ್ಷ 25ರಷ್ಟು ಹೆಚ್ಚಾಗುತ್ತಿರಲಿ.

ಕಂಪನಿಯ ಹಿಂದಿನ ವರ್ಷದ ನೆಟ್ ಪ್ರಾಫಿಟ್ 100 ಕೋಟಿ ಆಗಿದ್ದರೆ, ಈ ವರ್ಷ 125 ಕೋಟಿ ಆಗಿರಬೇಕು. ಒಂದು ವೇಳೆ 500 ಕೋಟಿ ಆಗಿದ್ದರೆ, ಈ ವರ್ಷ 625 ಕೋಟಿ ಆಗಿರಬೇಕು. ಲಾಭ ಏರುತ್ತಿದ್ದರೆ ಕಂಪನಿಯಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದರ್ಥ. ಒಂದು ಕಂಪನಿಯ ಮೇಲೆ ಹೂಡಿಕೆ ಮಾಡುವಾಗ ಕನಿಷ್ಠ 4 ರಿಂದ 10 ವರ್ಷಗಳ ನೆಟ್ ಪ್ರಾಫಿಟ್ ವಿಶ್ಲೇಷಿಸಿ.

net profit of company in kannada
net profit of company

ಟೈಟಾನ್ ಗ್ರೂಪ್‌ನ ಲಾಭ 2020ರಲ್ಲಿ 246 ಕೋಟಿ ಇತ್ತು. ಇಂದು 2021ರಂದು 564 ಕೋಟಿ ಆಗಿದೆ. 2020ರಲ್ಲಿ 564 ರೂ ಇದ್ದ ಶೇರ್ ಪ್ರೈಸ್, ಇಂದು 1,600ರೂ ಆಗಿದೆ. ಅಂದರೆ 1 ವರ್ಷದಲ್ಲಿ 60ರಷ್ಟು ರಿಟರ್ನ್ ನೀಡಿದೆ.

ಷೇರು ಮಾರುಕಟ್ಟೆಯಲ್ಲಿ ಯಾವ ಬ್ರೋಕರ್ ಕೂಡ ನಿಮಗೆ ಸತ್ಯ ಹೇಳುವುದಿಲ್ಲ. ಏಕೆಂದರೆ ಅವರಿಗೆ ಕಮಿಷನ್ ಇರುತ್ತದೆ. ಹೀಗಾಗಿ ನಿಮ್ಮ ಹಣವನ್ನು ಅನೇಕ ಕಂಪನಿಗಳಲ್ಲಿ ಹಾಕಿಸುತ್ತಾರೆ. ನೀವು ಒಂದೇ ಬಾರಿ ಸರಿಯಾದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ನೀವು ಮತ್ತೆ ಆ ಕಡೆ ನೋಡುವುದಿಲ್ಲ. ಹೀಗಾಗಿ ಅವನು ನಿಮ್ಮ ಹಣವನ್ನು ಯಾವ ಕಡೆಯಾದರೂ ಹೂಡಿಕೆ ಮಾಡಲು ತಿಳಿಸುತ್ತಲೇ ಇರುತ್ತಾನೆ.

ಸಿಂಜಿನ್ ಇಂಟರ್‌ನ್ಯಾಷನಲ್, ಇದರ ಚೇರ್ಮೇನ್ ಜೊನಾಥನ್ ಹನ್ಟ್. ಇದರ ಲಾಭ ಒಂದು ವರ್ಷದಲ್ಲಿ 120ಕೋಟಿಯಿಂದ 160ಕೋಟಿಗೆ ಹೋಯಿತು. 2020ರಲ್ಲಿ ಇದರ ಶೇರ್ ಪ್ರೈಸ್ 330ರೂ ಇತ್ತು, ಇಂದು 2021ರಂದು 580ರೂ ಆಗಿದೆ.

ಇದನ್ನು ಓದಿ: ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದು ಹಾಕಲು 17 ಪರಿಹಾರಗಳು

7. ಕಂಪನಿಯ ಆದಾಯ(revenue) ಮತ್ತು ಯುನಿಟ್ ಸೇಲ್ ಏರಡು ಹೆಚ್ಚಾಗುತ್ತಿರಬೇಕು.

ಕಂಪನಿಯ ಆದಾಯ ಮತ್ತು ಯೂನಿಟ್ ಸೇಲ್ ಕನಿಷ್ಠ 10 ರಿಂದ 15 ರಷ್ಟು ಹೆಚ್ಚಾಗುತ್ತಿರಬೇಕು. ಆದಾಯ ಎಂದರೆ ಕಂಪನಿಯ ಒಟ್ಟು ಮಾರಾಟವಾಗಿದೆ. ಇದರರ್ಥ ಹಿಂದಿನ ವರ್ಷ 100ರೂ ಮಾರಾಟವಾಗಿದ್ದರೆ, ಈ ವರ್ಷ 120ರೂ ಮಾರಾಟವಾಗಿರಬೇಕು. ಆದರೆ ಇದರಲ್ಲಿ 100 ರೂ ವಸ್ತುವನ್ನು 120ರೂ ಗೆ ಮಾರಾಟ ಮಾಡಿರಬಾರದು. ಇದನ್ನು ಕೂಡ ನೀವು ನೋಡಬೇಕು. ಯುನಿಟ್‌ ಸೇಲ್ ನೋಡಿ, ಅಂದರೆ ಪ್ರತಿ ವರ್ಷ 100 ಕಾರು ಮಾರಾಟವಾಗುತ್ತಿದ್ದರೆ, ಈ ವರ್ಷ 120 ಕಾರು ಮಾರಾಟವಾಗಿರಬೇಕು. ಸಾಲ ಮಾಡಿ ಆದಾಯವನ್ನು ಹೆಚ್ಚಿಸಿಕೊಂಡಿರಬಾರದು. ಇವುಗಳನ್ನು ನೀವು ಬ್ಯಾಲೆನ್ಸ್ ಶೀಟಿನಲ್ಲಿ ನೋಡಬಹುದು.

revenue and unit sale of company in kannada
revenue and unit sale

ಮಾರುತಿ ಸುಜುಕಿಯ 2014ರಲ್ಲಿ 10 ಲಕ್ಷ, 2015ರಲ್ಲಿ 11 ಲಕ್ಷ, 2016ರಲ್ಲಿ 13 ಲಕ್ಷ ಕಾರುಗಳನ್ನು ಮಾರಾಟ ಮಾಡಿತು. ಪ್ರತಿವರ್ಷ ಹೆಚ್ಚಿನ ಕಾರಿನ ಮಾರಾಟ ಮಾಡಿತು. ಪ್ರತಿವರ್ಷ ಆದಾಯ ಕೂಡ ಹೆಚ್ಚುತ್ತಾ ಬಂತು. 2011ರಲ್ಲಿ 1,250ರೂ ಇದ್ದ ಇದರ ಶೇರ್ ಪ್ರೈಸ್ 2017ರಂದು 6,500ರೂ ಆಗಿತ್ತು. 6ವರ್ಷಗಳಲ್ಲಿ ಸರಾಸರಿ 30ರಷ್ಟು ರಿಟರ್ನ್ ನೀಡಿದೆ.

ಗೋದ್ರೇಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ಈ ಕಂಪನಿಯ ವಹಿವಾಟು(turnover) 2020ರಂದು 9,057 ಕೋಟಿ ಇತ್ತು. ಇಂದು 2021ರಂದು 11,000 ಕೋಟಿ ಇದೆ. ಇದರಿಂದ ಅದರ ಸ್ಟಾಕ್‌ ಪ್ರೈಸ್ ಕೂಡ ಹೆಚ್ಚಾಯಿತು.

ಇದನ್ನು ಓದಿ: ಫೇಸ್‌ಬುಕ್‌ ಬಳಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

8. ನೆಟ್ ಆಪರೇಟಿಂಗ್ ಕ್ಯಾಶ್ ಫ್ಲೋ.

ಕಂಪನಿಯ ಕ್ಯಾಶ್ ಫ್ಲೋ ಪ್ರತಿವರ್ಷ ಕನಿಷ್ಠ 20ರಷ್ಟು ಹೆಚ್ಚುತ್ತಿರಬೇಕು. ನೆಟ್ ಆಪರೇಟಿಂಗ್ ಕ್ಯಾಶ್ ಫ್ಲೋ ಎಂದರೆ ವ್ಯಾಪಾರ ಕಾರ್ಯಾಚರಣೆತಯಿಂದ ಬರುವ ನಗದು(cash) ಆಗಿದೆ.

ಕಂಪನಿಗೆ 3 ರೀತಿಯಲ್ಲಿ ನಗದು ಬರುತ್ತದೆ: ಒಂದು ಮಾರಾಟವಾದಾಗ, ಇನ್ನೊಂದು ಬಂಡವಾಳ(investment) ಮಾರಿದಾಗ, ಮತ್ತೊಂದು ಸಾಲ ತೆಗೆದುಕೊಂಡಾಗ. ನಾವು ಇಲ್ಲಿ ಮಾರಾಟದಿಂದ ಬಂದ ನಗದು ಬಗ್ಗೆ ಹೇಳುತ್ತಿದ್ದೇವೆ.

ಡಾ. ರೆಡ್ಡೀಸ್ ಲ್ಯಾಬ್, ಇದರ ಚೇರ್ಮನ್ ಕಲಾಂ ಸತೀಶ್ ರೆಡ್ಡಿ. 2020ರಲ್ಲಿ 4000ರೂ ಇದ್ದ ಇದರ ಶೇರ್ ಪ್ರೈಸ್, 2021ರಲ್ಲಿ 5000ರೂ ಆಗಿದೆ. ಒಂದು ವರ್ಷದಲ್ಲಿ ಸರಾಸರಿ 25ರಷ್ಟು ರಿಟರ್ನ್ ನೀಡಿದೆ. ಇದರ ನೆಟ್ ಆಪರೇಟಿಂಗ್ ಕ್ಯಾಶ್ ಫ್ಲೋ 3,000 ಕೋಟಿಯಿಂದ 3,600 ಕೋಟಿಗೆ ಏರಿತು. ನೀವು ಕಂಪನಿಯ ಕ್ಯಾಶ್ ಫ್ಲೋ ಸ್ಟೇಟ್ ಮೆಂಟನ್ನು ಮನಿಕಂಟ್ರೋಲ್ ನಲ್ಲಿ ನೋಡಬಹುದು.

ಕಂಪನಿಯ CGP, ಅಂದರೆ Cash, Growth, Profit, ಇವು ಮೂರು ಏರುತ್ತಿದ್ದರೆ ಅದು ಒಳ್ಳೆಯ ಕಂಪನಿಯಾಗಿದೆ.

ಏಷಿಯನ್ ಪೇಂಟ್ಸ್, ಇದರ ಚೇರ್ಮನ್ ಅಶ್ವಿನ್ ಚಿಮನ್ಲಾಲ್ ಚೋಕ್ಸಿ. 2020ರಲ್ಲಿ 1,800ರೂ ಇದ್ದ ಇದರ ಶೇರ್ ಪ್ರೈಸ್, 2021ರಂದು 2,600ರೂ ದಾಟಿದೆ. ಸರಾಸರಿ 40ರಷ್ಟು ರಿಟರ್ನ್ ನೀಡಿದೆ. ಇದು ಏಕೆಂದರೆ 2020ರಲ್ಲಿ 3000 ಕೋಟಿ ಇದ್ದ ಕ್ಯಾಶ್ ಫ್ಲೋ, 2021ರಲ್ಲಿ 3,700 ಕೋಟಿ ಆಗಿದೆ.

ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳು

9. ರಿಟನ್ ಆನ್ ಕ್ಯಾಪಿಟಲ್.

ಸಾಲ ಮತ್ತು ಶೇರ್ ಹೋಲ್ಡರ್ಸ್ ನಿಂದ ಬಂದ ಎಲ್ಲಾ ಹಣವನ್ನೂ ಸೇರಿಸಿ, 1 ವರ್ಷ ವ್ಯಾಪಾರ ಮಾಡಿದರೆ ಅದುವೇ ಬಂಡವಾಳ(capital) ಆಗಿದೆ. ಉದಾಹರಣೆಗೆ ಒಂದು ಕಂಪನಿಗೆ ಸಾಲದಿಂದ 50ರೂ ಮತ್ತು ಶೇರ್ ಹೋಲ್ಡರ್ ನಿಂದ 50ರೂ, ಒಟ್ಟು 100ರೂ ಅನ್ನು 1 ವರ್ಷದ ವ್ಯಾಪಾರದಲ್ಲಿ ಹಾಕಿತು ಎಂದುಕೊಳ್ಳೋಣ. ಒಂದು ವರ್ಷದಲ್ಲಿ 20ರಷ್ಟು ಲಾಭ(profit) ಮಾಡಿತು ಎಂದರೆ, ಅದರ ರಿಟನ್ ಆನ್ ಕ್ಯಾಪಿಟಲ್ ಒಂದು ವರ್ಷದಲ್ಲಿ 20ರಷ್ಟಿದೆ ಎಂದರ್. ನೀವು ಆರಿಸುವ ಕಂಪನಿಯ ರಿಟನ್ ಆನ್ ಕ್ಯಾಪಿಟಲ್ ಕನಿಷ್ಠ 20ರಷ್ಟು ಇರಲಿ.

ನೆಸ್ಟ್ಲೆ, ಇದರ ಚೇರ್ಮನ್ ಸುರೇಶ್ ನಾರಾಯಣ, ಈ ಕಂಪನಿ 139ರಷ್ಟು ರಿಟರ್ನ್ ಆನ್ ಕ್ಯಾಪಿಟಲ್ ನೀಡಿದೆ. ಇದರರ್ಥ ಇವರ ಹತ್ತಿರ ಇದ್ದ 100ರೂಯಿಂದ ಒಂದು ವರ್ಷದಲ್ಲಿ 139ರೂ ಲಾಭ ಮಾಡಿದ್ದಾರೆ. 2017ರಲ್ಲಿ 6,600ರೂ ಇದ್ದ ಇದರ ಶೇರ್ ಪ್ರೈಸ್, ಇಂದು 2021ರಂದು 18,000ರೂ ಆಗಿದೆ. 4ವರ್ಷಗಳಲ್ಲಿ ಸರಾಸರಿ 25.35ರಷ್ಟು ರಿಟರ್ನ್ ನೀಡಿದೆ.

TCSನ ರಿಟರ್ನ್ ಆನ್ ಕ್ಯಾಪಿಟಲ್ 50ರಷ್ಟಿದೆ. ಹೀಗಾಗಿ 2017ರಲ್ಲಿ 1,100 ರೂ ಇದ್ದ ಇದರ ಶೇರ್ ಪ್ರೈಸ್, ಇಂದು 2021ರಂದು 3,300ರೂ ಗೆ ಬಂದಿದೆ.

ಇದನ್ನು ಓದಿ: ಬೇವಿನ ಪ್ರಯೋಜನ ಮತ್ತು ಉಪಯೋಗಗಳು

10. ರಿಟರ್ನ್ ಆನ್ ಈಕ್ವಿಟಿ.

ನೀವು ಆರಿಸುವ ಕಂಪನಿಯ ರಿಟರ್ನ್ ಆನ್ ಈಕ್ವಿಟಿ ಪ್ರತಿವರ್ಷ ಕನಿಷ್ಠ 15ರಷ್ಟು ಹೆಚ್ಚುತ್ತಿರಬೇಕು. ಇದರಲ್ಲಿ ಯಾವುದೇ ಸಾಲದ ಹಣ ಬರುವುದಿಲ್ಲ. ಕೇವಲ ಶೇರ್ ಹೋಲ್ಡರ್ನ ಹಣ ಬರುತ್ತದೆ. ಎಲ್ಲದರ ಮಾಹಿತಿ ನಿಮಗೆ ಈಗ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಸಿಗುತ್ತದೆ. ಇದಕ್ಕೆ ನೀವು ಯಾರಿಗೂ ಹಣ ನೀಡಬೇಕಿಲ್ಲ.

ಏಷ್ಯನ್ ಪೇಂಟ್ ನ ರಿಟರ್ನ್ ಆನ್ ಈಕ್ವಿಟಿ 48ರಷ್ಟಿದೆ. ಹೀಗಾಗಿ 2014ರಲ್ಲಿ 500ರೂ ಇದ್ದ ಇದರ ಶೇರ್ ಪ್ರೈಸ್, ಇಂದು 2021ರಲ್ಲಿ 2,600ರೂ ಆಗಿದೆ.

ಡಾಬರ್, ಇದರ ಚೇರ್ಮನ್ ಅಮಿತ್ ಬರ್ಮನ್, ಇದು 23ರಷ್ಟು ರಿಟರ್ನ್ ಆನ್ ಈಕ್ವಿಟಿ ನೀಡಿದೆ. ಹೀಗಾಗಿ 2011ರಲ್ಲಿ 100ರೂ ಇದ್ದ ಇದರ ಶೇರ್ ಪ್ರೈಸ್, ಇಂದು 2021ರಂದು 580ರೂ ಆಗಿದೆ. 10 ವರ್ಷಗಳಲ್ಲಿ ಸರಾಸರಿ 17.71ರಷ್ಟು ರಿಟರ್ನ್ ನೀಡಿದೆ.

ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.

• Nifty & Sensex.

nifty and sensex in kannada
www.dutchuncles.in

ನಿಮಗೆ ಪ್ರಾರಂಭದಲ್ಲಿ ಯಾವ ಕಂಪನಿ ಮೇಲೆ ಹೂಡಿಕೆ ಮಾಡಬೇಕೆಂದು ತಿಳಿಯದಿದ್ದರೆ. ನಿಫ್ಟ್ 50(nifty 50) ಅಥವಾ ಸೆನ್ಸೆಕ್ಸ್ ಗೆ(sensex) ನಿಮ್ಮ ಹಣ ಹಾಕಿ. ನಿಫ್ಟಿ 50 ಅಲ್ಲಿ ಭಾರತದ ಪ್ರಮುಖ 50 ಕಂಪನಿಗಳಿವೆ. 2011ರಲ್ಲಿಇನ್ನೊಂದರಲ್ಲಿ 5,395 ಇದ್ದ ನಿಫ್ಟಿ, ಇಂದು 2021ರಲ್ಲಿ 17,664ಕ್ಕೆ ತಲುಪಿದೆ. ಹತ್ತು ವರ್ಷಗಳಲ್ಲಿ ಸರಾಸರಿ 9ರಷ್ಟು ರಿಟರ್ನ್ ನೀಡಿದೆ. ನೀವು ನಿಫ್ಟಿಯಲ್ಲಿ ಹಣ ಹಾಕಿದರೆ ನಿಮಗೆ ಪ್ರತಿವರ್ಷ 9ರಷ್ಟು ರಿಟರ್ನ್ ಸಿಗುತ್ತಿತ್ತು. ಆದರೆ ನೀವು ಸರಿಯಾದ ಕಂಪನಿ ನೋಡಿ ಆರಿಸಿದಲಿ, ನಿಮಗೆ 20ಕ್ಕಿಂತ ಹೆಚ್ಚಿನ ರಿಟರ್ನ್ ಸಿಗುತ್ತದೆ. ಹೀಗಾಗಿ ವಿಶ್ಲೇಷಿಸಿ ಹೂಡಿಕೆ ಮಾಡಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿಮಗೆ ಡಿಮ್ಯಾಟ್ ಅಕೌಂಟ್ ಬೇಕು. ಅದನ್ನು ಕೆಳಗಿರುವ ಲಿಂಕ್‌ಗೆ ಹೋಗಿ ನೀವು ತೆರೆಯಬಹುದು.

ಷೇರು ಮಾರುಕಟ್ಟೆಯ ಈ ಲೇಖನವನ್ನು ಶೇರ್ ಮಾಡಿ, ಸಹಕಾರಿಸಿ. ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sumit • January 6th,2023

ತುಂಬಾ ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು, ವೈಯಕ್ತಿಕವಾಗಿ ನನಗೆ .