Watch Video
ನಮಗೆ ಬರುವ ಮೊದಲ ಪ್ರಶ್ನೆ, ಕಪ್ಪು ಕುಳಿ ಎಂದರೇನು?
ಸರಳವಾಗಿ ಹೇಳುವುದಾದರೆ ಕಪ್ಪು ಕುಳಿ(black hole) ಬ್ರಹ್ಮಾಂಡದಲ್ಲಿ ಒಂದು ದೊಡ್ಡ ಗುರುತ್ವಾಕರ್ಷಣೆಯ ಸ್ಥಳವಾಗಿದೆ. ಈ ಬ್ಲಾಕ್ ಹೋಲ್‌ನಿಂದ ಬೆಳಕು ಕೂಡ ಎಸ್ಕೇಪ್ ಆಗಲು ಸಾಧ್ಯವಿಲ್ಲ. ಈಗ ಇದರ ಮೇಲಿನ ಎಂಟು ಮೋಜಿನ ಸಂಗತಿಗಳನ್ನು ನೋಡೋಣ.
ಇದನ್ನು ಓದಿ: ಇತರ ಗ್ರಹಗಳಿಂದ ಸೂರ್ಯನ ನೋಟ ಹೇಗಿರುತ್ತದೆ?ಕಪ್ಪು ಕುಳಿ ಹೆಸರಿನಂತೆ ಕಪ್ಪಗಿದೆ, ಹೀಗಾಗಿ ಅದನ್ನು ನೋಡಲು ಸಾಧ್ಯವಿಲ್ಲ. ಆದರೆ ಅದರ ಸುತ್ತಮುತ್ತಲಿನ ಪ್ರದೇಶವನ್ನು ನೋಡಿದರೆ ನಮಗೆ ಅದರ ಪರಿಣಾಮದ ಬಗ್ಗೆ ತಿಳಿಯುತ್ತದೆ. ಉದಾಹರಣೆಗೆ ಕಪ್ಪು ಕುಳಿಗೆ ಯಾವುದೇ ನಕ್ಷತ್ರ ಹತ್ತಿರವಿದ್ದರೆ, ಅದು ಬೇರ್ಪಡುವುದು ನಾವು ನೋಡಬಹುದು.
ಈ ವಿಷಯವನ್ನು ಕೇಳಿ ನೀವು ಗಾಬರಿಯಾಗಬೇಕಿಲ್ಲ. ಏಕೆಂದರೆ ನಮ್ಮ ಭೂಮಿ ಅಪಾಯದಲ್ಲಿಲ್ಲ. ಖಗೋಳ ವಿಜ್ಞಾನಿಗಳು ಹೇಳಿರುವ ಕಪ್ಪು ಕುಳಿ ಭೂಮಿಯಿಂದ ಲೈಟ್ ಇಯರ್ನಷ್ಟು ದೂರದಲ್ಲಿದೆ.
ಇದನ್ನು ಓದಿ: ಬಾಹ್ಯಾಕಾಶದ ಒಂಬತ್ತು ಭಯಾನಕ ಸಂಗತಿಗಳುದೊಡ್ಡ ನಕ್ಷತ್ರಗಳ ಸಾವು ಕಪ್ಪು ಕುಳಿಯ ಸೃಷ್ಟಿಗೆ ಕಾರಣವಾಗಿದೆ. ನಕ್ಷತ್ರದ ಪರಮಾಣು ಪ್ರಕ್ರಿಯೆ ಕುಸಿದಾಗ , ನಕ್ಷತ್ರದ ಗುರುತ್ವಾಕರ್ಷಣೆಯು ಅದರ ಆಕಾರವನ್ನು ಉಳಿಸಿಕೊಳ್ಳಲು ನಕ್ಷತ್ರದ ಮೂಲವನ್ನು(core) ಮುಳುಗಿಸುತ್ತದೆ.
ಈ ಸಮಯದಲ್ಲಿ ನಕ್ಷತ್ರದ ಇತರ ಪದರಗಳನ್ನು ಬಾಹ್ಯಾಕಾಶಕ್ಕೆ ಎಸೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಸೂಪರ್ ನೋವಾ ಎನ್ನಲಾಗುತ್ತದೆ. ಗುರುತ್ವಾಕರ್ಷಣೆಯಿಂದ ಮೂಲ(core) ಕುಸಿಯುತ್ತಾ ಹೋಗಿ ಕಪ್ಪು ಕುಳಿ ಸೃಷ್ಟಿಯಾಗುತ್ತದೆ.
ಇದನ್ನು ಓದಿ: ಇತಿಹಾಸದ ಎಂಟು ದೊಡ್ಡ ಬಗೆಹರಿಯದ ರಹಸ್ಯಗಳುಇದು ಕಪ್ಪು ಕುಳಿಯಲ್ಲೇ ಚಿಕ್ಕದಾಗಿದೆ. ಇದರ ಗಾತ್ರ ಪರಮಾಣುವಿನಿಂದ ದೊಡ್ಡ ಪರ್ವತದಷ್ಟು ಇರಬಹುದು.
ಈ ರೀತಿಯ ಕಪ್ಪು ಕುಳಿ ನಮ್ಮ ಸೂರ್ಯನಿಗಿಂತ ಇಪ್ಪತ್ತು ಪಟ್ಟು ದೊಡ್ಡದಿರುತ್ತದೆ. ಮಿಲ್ಕಿ ವೇ ಈ ರೀತಿಯ ಕಪ್ಪು ಕುಳಿಯನ್ನು ತುಂಬಾ ಹೊಂದಿದೆ.
ಇದು ಕಪ್ಪು ಕುಳಯಲ್ಲೇ ದೊಡ್ಡದಾಗಿದೆ. ಇದರ ಗಾತ್ರ ಸೂರ್ಯನಿಗಿಂತ ಹತ್ತು ಲಕ್ಷ ಪಟ್ಟು ಹೆಚ್ಚಿದೆ.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?ಒಬ್ಬ ವ್ಯಕ್ತಿ ಕಪ್ಪು ಕುಳಿಗೆ ಬೀಳುತ್ತಾನೆ, ಇನ್ನೊಬ್ಬ ಅದನ್ನು ನೋಡುತ್ತಿರುತ್ತಾನೆ ಎಂದುಕೊಳ್ಳಿ. ಕಪ್ಪು ಕುಳಿಯಲ್ಲಿ ಬಿದ್ದ ವ್ಯಕ್ತಿಯ ಸಮಯ, ಅದನ್ನು ನೋಡುತ್ತಿರುವವನಿಗಿಂತ ನಿಧಾನವಾಗಿ ಚಲಿಸುತ್ತಿರುತ್ತದೆ.
ಇದನ್ನು ಆಲ್ಬರ್ಟ್ ಐನ್‍ಸ್ಟೈನಿನ ಜನರಲ್ ರಿಲೇಟಿವಿಟಿಯಲ್ಲಿ ತಿಳಿಸಲಾಗಿದೆ. ಅದೆಂದರೆ, "ನೀವು ಬೆಳಕಿನ ಹತ್ತಿರದ ವೇಗದಲ್ಲಿರುವಾಗ ನೀವು ಎಷ್ಟು ವೇಗವಾಗಿ ಹೋಗುತ್ತಿರುವಿರ ಎಂಬುದರ ಮೇಲೆ ಸಮಯ ಪರಿಣಾಮ ಬೀರುತ್ತದೆ" ಎಂಬುದಾಗಿದೆ.
ಸಿಗ್ನಸ್ ಎಕ್ಸ್ 1(Cygnus X1) 1960ರ ದಶಕದಲ್ಲಿ ಪತ್ತೆಯಾದ ಮೊದಲ ಕಪ್ಪು ಕುಳಿ ಆಗಿದೆ. ಇದು ನಮ್ಮ ಸೂರ್ಯನಿಗಿಂತ ಹತ್ತು ಪಟ್ಟು ಗಾತ್ರದಲ್ಲಿ ದೊಡ್ಡದಿದೆ. ವಿಶೇಷವೆಂದರೆ ಎಕ್ಸ್ ರೇಯನ್ನು ಖಗೋಳ ವಿಜ್ಞಾನದಲ್ಲಿ ಬಳಸುವವರೆಗೆ ಮೊದಲ ಕಪ್ಪು ಕುಳಿಯನ್ನು ಕಂಡುಹಿಡಿಯಲಾಗಿರಲಿಲ್ಲ.
ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳುV4647 ಸಗಿಟಾರಿ(V4647 Sagitarrii) ಎಂಬ ಕಪ್ಪು ಕುಳಿ 1600 ಲೈಟ್ ಇಯರ್ ದೂರದಲ್ಲಿದೆ ಎಂದು ಭಾವಿಸಲಾಗಿತು. ಆದರೆ ಅದು ಸುಮಾರು 20,000 ಲೈಟ್ ಇಯರ್ ದೂರದಲ್ಲಿದೆ ಎಂದು ವಿಜ್ಞಾನಿಗಳು ಈಗ ನಂಬಿದ್ದಾರೆ.
ನೀವು ಕಪ್ಪು ಕುಳಿಯ ಹತ್ತಿರ ಹೋದರೆ ಅದು ತುಂಬಾ ಅಪಾಯಕಾರಿಯಾಗಿದೆ. ಅವುಗಳನ್ನು ದೂರದಿಂದ ನೊಡುವುದೇ ಸುರಕ್ಷಿತವಾಗಿದೆ. ಕಪ್ಪು ಕುಳಿ ನಮಗೆ ಹತ್ತಿರವಿದ್ದರೆ ಅದು ನಮ್ಮ ಸೌರಮಂಡಲವನ್ನೇ ನುಂಗಬಹುದು.
ಬ್ಲ್ಯಾಕ್ ಹೋಲ್ ಮೇಲಿನ ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...
sagar kotabagi • March 5th,2022
Super sir