Website designed by @coders.knowledge.

Website designed by @coders.knowledge.

10 Places to visit in Karnataka | ಕರ್ನಾಟಕದಲ್ಲಿ ನೋಡಬೇಕಾದ ಹತ್ತು ತಾಣಗಳು

Watch Video

ದಕ್ಷಿಣ ಭಾರತದ ಕರ್ನಾಟಕವು ಸಾಕಷ್ಟು ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಕರ್ನಾಟಕದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರಿಗೆ ಪ್ರಕೃತಿ, ಇತಿಹಾಸ, ಬೀಚ್, ಆದ್ಯಾತ್ಮಿಕದ ಮಿಶ್ರಣ ಸಿಗುತ್ತದೆ. ಕರ್ನಾಟಕದಲ್ಲಿ ನೋಡಲೇಬೇಕಾದ ಹತ್ತು ಪ್ರವಾಸಿ ತಾಣಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

1. ಬೆಂಗಳೂರು.

bengaluru in kannada
Bengaluru

ಕರ್ನಾಟಕದ ರಾಜಧಾನಿ ಬೆಂಗಳೂರು ಭಾರತದ ಐಟಿ ಉದ್ಯಮಕ್ಕೆ ನೆಲೆಯಾಗಿರುವ, ವೇಗವಾಗಿ ಬೆಳೆಯುತ್ತಿರುವ ಸಮೃದ್ಧ ಸ್ಥಳವಾಗಿದೆ. ಇಲ್ಲಿ ನಿಮಗೆ ತುಂಬಾ ಯುವ ಉದ್ಯಮಿಗಳು ಸಿಗಬಹುದು. ಬೆಂಗಳೂರನ್ನು ನೋಡಲು ಕಾರಣವೆಂದರೆ ಇಲ್ಲಿನ ಗ್ರೀನರಿ, ಬಿಲ್ಡಿಂಗ್ ಮತ್ತು ದೇವಸ್ಥಾನಗಳು. ಆದರೂ ಈ ದಿನಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಪ್ರಮುಖ ಸಮಸ್ಯೆಯಾಗಿದೆ.

ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?

2. ಹಂಪೆ.

hampi in kannada
Hampe

ಭಾರತದ ಉತ್ತಮ ಐತಿಹಾಸಿಕ ಸ್ಥಳಗಳಲ್ಲಿ ಹಂಪೆ ಒಂದಾಗಿದೆ. ಹಂಪೆ ವಿಜಯನಗರ ಸಾಮ್ರಾಜ್ಯದ ಕ್ಯಾಪಿಟಲ್ ನಗರವಾಗಿತ್ತು. ಇಲ್ಲಿ ತುಂಬಾ ಅವಶೇಷಗಳು, ದೇವಸ್ಥಾನ, ಸ್ಮಾರಕ, ದೊಡ್ಡ ಬಂಡೆಗಳು ಸಿಗುತ್ತವೆ. 14ನೇ ಶತಮಾನದ ಹಿಂದಿನ ಅವಶೇಷಗಳು ಇಲ್ಲಿ 14 ಕಿಲೋಮೀಟರ್ ಒಳಗೆ ವಿಸ್ತರಿಸಿದೆ. ಇಲ್ಲಿ 500ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಪ್ರಾಚೀನ ಸ್ಥಳದ ಶಕ್ತಿಯನ್ನು ತಿಳಿಸುತ್ತದೆ.

3. ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು.

badami, aivole, pattadakalu in kannada
Badami

ಹಂಪಿಗೆ ಭೇಟಿ ನೀಡಿದಾಗ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿಗೂ ಅಡ್ಡ ಪ್ರವಾಸ ಕೈಗೊಳ್ಳುವುದು ಯೋಗ್ಯವಾಗಿದೆ. ಇಲ್ಲಿ ನಾಲ್ಕರಿಂದ ಎಂಟನೇ ಶತಮಾನದಲ್ಲಿ ಇದ್ದ ಚಾಲುಕ್ಯರ ಯುಗದ ಸ್ಮಾರಕ, ದೇವಾಲಯ ಮತ್ತು ಅವಶೇಷಗಳು ಸಮೃದ್ಧವಾಗಿದೆ. ಚಾಲುಕ್ಯ ಶೈಲಿಯ ವಾಸ್ತುಶಿಲ್ಪವು ಐಹೊಳೆಯಲ್ಲಿ ಹುಟ್ಟಿಕೊಂಡಿತ್ತು. ಈಗ ಇಲ್ಲಿ 125 ಕಲ್ಲಿನ ದೇವಾಲಯಗಳಿವೆ. ಭಾರತದ ಗುಹೆಗಳನ್ನು ನೋಡುವ ಪ್ರಮುಖ ಸ್ಥಳಗಳಲ್ಲಿ ಬಾದಾಮಿ ಒಂದಾಗಿದೆ.

ಇದನ್ನು ಓದಿ: ಕರ್ನಾಟಕದ ಇತಿಹಾಸ

4. ಚಿತ್ರದುರ್ಗ ಕೋಟೆ.

chitradurga fort in kannada
Chitradurga Fort

ಚಿತ್ರದುರ್ಗದ ಕೋಟೆಯನ್ನು 15 ಮತ್ತು 16ನೇ ಶತಮಾನದ ನಡುವೆ ಪಾಳೇಗಾರ ನಾಯಕರು ನಿರ್ಮಿಸಿದ್ದರು. ನಂತರ ಇದನ್ನು ನಾಯಕರನ್ನು ಸೋಲಿಸಿದ ಹೈದರ್ ಆಲಿ ವಿಸ್ತರಿಸಿದನು. ಈ ಕೋಟೆ ಕರ್ನಾಟಕದ ದೊಡ್ಡ ಕೋಟೆಯಾಗಿದ್ದು, ಗ್ರೆನೇಡ್ ಬೆಟ್ಟದ ಮೇಲೆ ಇದೆ. 19 ಗೇಟ್ ವೇ, 35 ರಹಸ್ಯ ಪ್ರವೇಶದ್ವಾರಗಳು, 4 ಅಗೋಚರ ಹಾದಿಗಳು, 2000 ಕಾವಲು ಗೋಪುರಗಳು, ಮೇಲಿನ ಕೋಟೆಯಲ್ಲಿ ಹದಿನೆಂಟು ದೇವಾಲಯ ಮತ್ತು ಕೆಳಗಿನ ಕೋಟೆಯಲ್ಲಿ ಒಂದು ದೊಡ್ಡ ದೇವಾಲಯವಿದೆ.

5. ಮೈಸೂರು.

mysuru palace in kannada
Mysuru Palace

ಮೈಸೂರು ರಾಜಮನೆತನದ ಪರಂಪರೆಯನ್ನು ಹೊಂದಿದೆ. ನಗರದ ಪ್ರಮುಖ ಆಕರ್ಷಣೆ ಎಂದರೆ ಮೈಸೂರು ಅರಮನೆ. ಇನ್ನು ಮೈಸೂರಿನಲ್ಲಿ ಅನೇಕ ಆಸಕ್ತಿದಾಯಕ ಕಟ್ಟಡ ಮತ್ತು ದೇವಾಲಯಗಳಿವೆ. ಮೈಸೂರು ಜೂ ಭಾರತದ ಅತ್ಯುತ್ತಮ ಮೃಗಾಲಯಗಳಲ್ಲಿ ಒಂದಾಗಿದೆ. ಶ್ರೀಗಂಧ, ಮೈಸೂರು ಪಾಕಿಗೆ ಮೈಸೂರು ಪ್ರಸಿದ್ಧವಾಗಿದೆ.

6. ನಾಗರಹೊಳೆ.

ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಆನೆಗಳ ಸ್ವಾಭಾವಿಕ ಜೀವನ ನೋಡಲು ಅತ್ಯುತ್ತಮ ತಾಣವಾಗಿದೆ. ನಾಗರಹೊಳೆ ಹಾಳಾಗದ ಅರಣ್ಯಗಳಲ್ಲಿ ಒಂದಾಗಿದ್ದು, ಪ್ರಶಾಂತ ಕಾಡು, ಹೊಳೆ, ಸರೋವರಗಳನ್ನು ಹೊಂದಿದೆ. ನಾಗರಹೊಳೆಯನ್ನು ಜೀಪ್ ಸವಾರಿ ಮೂಲಕ ಅನ್ವೇಷಿಸಬಹುದು.

ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳು

7. ಚಿಕ್ಕಮಗಳೂರು.

mulayanagiri chikkamagaluru in kannada
Mulayanagiri, Chikkamagaluru

ದೇಶೀಯ ಪ್ರವಾಸದಲ್ಲಿ ಬಹಳ ಜನಪ್ರಿಯವಾಗಿರುವ ತಾಣ ಚಿಕ್ಕಮಗಳೂರು. ಪಶ್ಚಿಮಘಟ್ಟದ ಭಾಗವಾಗಿರುವ ಚಿಕ್ಕಮಗಳೂರು, ಕರ್ನಾಟಕದ ಕಾಫಿ ಜಿಲ್ಲೆಯಾಗಿದೆ. ರಾಜ್ಯದ ಅತಿ ಎತ್ತರದ ಪ್ರದೇಶಗಳಲ್ಲಿ ಒಂದಾದ ಮುಳ್ಳಯ್ಯನಗಿರಿ ಶಿಖರವು ಇಲ್ಲೇ ಇದೆ. ಚಿಕ್ಕಮಗಳೂರಿನಲ್ಲಿ ತುಂಬಾ ಜಲಪಾತ, ವನ್ಯಜೀವಿ ಅಭಯಾರಣ್ಯಗಳಿವೆ.

8. ಬೇಲೂರು.

ಯಗಚಿ ನದಿಯ ದಡದಲ್ಲಿರುವ ಐತಿಹಾಸಿಕ ಬೇಲೂರಿನಲ್ಲಿ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಅನೇಕ ಅದ್ಭುತ ದೇವಾಲಯಗಳಿವೆ. ಇಲ್ಲಿನ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ಚೋಳರ ಮೇಲೆ ಹೊಯ್ಸಳರ ವಿಜಯದ ನೆನಪಿಗಾಗಿ ನಿರ್ಮಿಸಲಾದ ಮುಖ್ಯ ದೇವಾಲಯವು 103 ವರ್ಷ ನಿರ್ಮಿಸಲು ತೆಗೆದುಕೊಂಡಿತ್ತು. 14ನೇ ಶತಮಾನದಲ್ಲಿ ಬೇಲೂರನ್ನು ಮೊಘಲರು ಆಕ್ರಮಣ ಮಾಡಿದ ಕಾರಣ, ಹೊಯ್ಸಳ ಆಳ್ವಿಕೆಯು ಹಳೇಬೀಡಿಗೆ ಸ್ಥಳಾಂತರಿಸಲಾಯಿತು.

9. ಶ್ರವಣಬೆಳಗೊಳ.

sharvanabelagola in kannada
Sharvanabelagola

ಜೈನ ಧರ್ಮದ ಬಾಹುಬಲಿಯ ಐದು ಅತ್ಯುನ್ನತ ಪ್ರತಿಮೆಗಳಿಗೆ ಕರ್ನಾಟಕ ನೆಲೆಯಾಗಿದೆ. ಶ್ರವಣಬೆಳಗೊಳದಲ್ಲಿ ಇರುವ ಬಾಹುಬಲಿಯ ಮೂರ್ತಿಯು, ಒಂದೇ ಬಂಡೆಯಲ್ಲಿ ಕೆತ್ತಿದ ಏಕಶಿಲೆಯ ಪ್ರತಿಮೆಯಾಗಿದೆ. ಬೆಟ್ಟದ ಮೇಲಿರುವ ಈ ಸ್ಥಳಕ್ಕೆ 600ಕ್ಕೂ ಹೆಚ್ಚು ಮೆಟ್ಟಿಲುಗಳ ಮೇಲೆ ಬರಿಗಾಲಿನ ಏರಿಕೆಯ ಅಗತ್ಯವಿದೆ. ಪ್ರತಿಮೆಯ ಬುಡದಲ್ಲಿ ನಡೆಸುವ ಸಮಾರಂಭ ಮತ್ತು ಆಚರಣೆಗಳು ವಿಶೇಷವಾಗಿದೆ.

ಇದನ್ನು ಓದಿ: ಪುರಾತನ ಕಾಲದ ಕಠಿಣ ಶಿಕ್ಷೆಗಳು

10. ಮುರುಡೇಶ್ವರ.

murudeshwara temple uttara kannada
Murudeshwara Temple

ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆ ಉತ್ತರ ಕನ್ನಡದ ಕರಾವಳಿಯ ಮುರುಡೇಶ್ವರದಲ್ಲಿದೆ. ಮುರುಡೇಶ್ವರ ದೇವಾಲಯದ ಗೋಪುರವು 249ಅಡಿ ಎತ್ತರವಿದ್ದು, ಜಗತ್ತಿನ ಎತ್ತರದ ಗೋಪುರವಾಗಿದೆ.

ಸ್ನೇಹಿತರೇ, ಈ ಪ್ರವಾಸ ಲೇಖನದ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.

Mahithi Thana

More by this author

Similar category

Explore all our Posts by categories.

commenters

balesh • March 24th,2023

Thankyou so much for this information