Website designed by @coders.knowledge.

Website designed by @coders.knowledge.

Financial Freedom - 5 Rules for Early Independence | ಆರಂಭಿಕ ಸ್ವಾತಂತ್ರ್ಯಕ್ಕಾಗಿ 5 ನಿಯಮಗಳು

 0

 Add

Please login to add to playlist

Watch Video

ಇಂದಿನ ಲೇಖನ ಆಸಕ್ತಿಕರ ಮತ್ತು ಪ್ರಮುಖ ವಿಷಯದ ಮೇಲಾಗಿದೆ. ಅದುವೇ ಆರ್ಥಿಕ ಸ್ವಾತಂತ್ರ್ಯದ(financial freedom) 5 ನಿಯಮಗಳಾಗಿವೆ. ಈ 5 ನಿಯಮಗಳನ್ನು ನಮಗೆ ಶಾಲೆಗಳಲ್ಲಿ ಕಲಿಸುವುದಿಲ್ಲ. ಹೀಗಾಗಿ ಅನೇಕರು ಇದನ್ನು ಅವರ 40ರ ವಯಸ್ಸಿನಲ್ಲಿ ತಿಳಿದುಕೊಳ್ಳುತ್ತಾರೆ. ಆದರೆ ಆ ಸಮಯದಷ್ಟೊತ್ತಿಗೆ ತಡವಾಗಿರುತ್ತದೆ ಮತ್ತು ಅವರಿಗೆ ಅವರ ಬದುಕಿನ ಅಮೂಲ್ಯ ವರ್ಷಗಳನ್ನು ಹಾಳು ಮಾಡಿದೆವು ಎಂದು ಪಶ್ಚಾತಾಪವಾಗುತ್ತದೆ. ನಮಗೆ ಅನೇಕರು ನಮ್ಮ ಚಾನೆಲ್ ನ(info mind kannada) ವೀಡಿಯೋಗಳನ್ನು ಮುಂಚೆಯೇ ನೋಡಬೇಕಿತು ಎನ್ನುತ್ತಾರೆ. ಹೀಗಾಗಿ ನೀವು ನಿಮ್ಮ 20ರ ವಯಸ್ಸಿನಲ್ಲಿ ಇದ್ದರೆ ಈ 5 ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಒಂದು ಕಥೆಯ ಮೂಲಕ ನಾವು ಇದನ್ನು ತಿಳಿದುಕೊಳ್ಳೋಣ.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

Investing Story

best story examples of investing in kannada
investing story

ಇದರಲ್ಲಿ ನಾವು ರಾಕಿ(rocky) ಮತ್ತು ಸನ್ನಿಯ(sunny) ಉದಾಹರಣೆ ತೆಗೆದುಕೊಳ್ಳಲಿದ್ದೇವೆ. ಅವರಿಬ್ಬರೂ ಕಾಲೇಜು ಸ್ನೇಹಿತರಾಗಿದ್ದು, ಒಂದು ಉನ್ನತ ಮಟ್ಟದ ಕಾಲೇಜಿನಲ್ಲಿ ಓದುತ್ತಿದ್ದರು. ಅವರ ಡಿಗ್ರಿ ಮುಗಿಯುತ್ತಲೇ ಅವರು ಒಂದು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕಂಪನಿ ಅವರಿಗೆ ತಿಂಗಳಿಗೆ 30,000 ದಷ್ಟು ಸಂಬಳ ನೀಡುತ್ತದೆ. ಸನ್ನಿಗೆ ಅವನ ಒಂದು ಸ್ವಂತ ಮನೆ ಖರೀದಿಸಬೇಕು, ಆರಾಮಾಗಿ ಅವನ ಮನೆಯಿಂದ ಆಫೀಸಿಗೆ ಕಾರಿನಲ್ಲಿ ಹೋಗಬೇಕು ಎಂಬ ಕನಸು ಇತ್ತು. ಆತ ಈ ಕೆಲಸದಿಂದ ಆ ಕನಸು ನನಸಾಗುವ ಬಗ್ಗೆ ಯೋಚಿಸುತ್ತಿದ.

ಅವನು ಒಂದು ಒಳ್ಳೆಯ ಸ್ಥಳದಲ್ಲಿರುವ(location) 3 BHK ಅಪಾರ್ಟ್ಮೆಂಟನ್ನು ಸಾಲಕ್ಕೆ(loan) ತೆಗೆದುಕೊಳ್ಳುತ್ತಾನೆ. ಇದನ್ನು ನೋಡಿ ಅವನ ಕುಟುಂಬ ಮತ್ತು ಗೆಳೆಯರು ತುಂಬಾ ಅಕರ್ಷಿತರಾಗುತ್ತಾರೆ. ಏಕೆಂದರೆ ಅವರ ತಂದೆ ಮನೆಯನ್ನು ಅವರ 45ರ ವಯಸ್ಸಿನಲ್ಲಿ ಖರೀದಿಸಿದ್ದರು. ಆದರೆ ಸನ್ನಿ ತನ್ನ 20ರ ವಯಸ್ಸಿನಲ್ಲೇ ಮನೆಯನ್ನು ಖರೀದಿಸಿದ. ಅವನ ಮನೆಯ ತಿಂಗಳ emi 12,000 ವಿತ್ತು ಮತ್ತು ಅವನಿಗೆ 20 ವರ್ಷದ ಸಾಲವನ್ನು ತೀರಿಸಬೇಕಿತು. ಅವನು ಒಂದು ಒಳ್ಳೆಯ ಕಾರನ್ನು ಖರೀದಿಸುತ್ತಾನೆ, ಅದರ ತಿಂಗಳ emi 6,000ರೂ ಇರುತ್ತದೆ. ಹೀಗೆ ವಿದ್ಯುತ್, ನೀರಿನ ಬಿಲ್ ರೀತಿಯ ಇತರ ಖರ್ಚುಗಳು ಸೇರಿ 8,000 ರೂಪಾಯಿಯ ಖರ್ಚು ಬರುತ್ತದೆ.

ಸನ್ನಿಗೆ ಯಾವಾಗಲೂ ಒಂದು ದೊಡ್ಡ ಹೋಟೆಲ್ನಲ್ಲಿ ತಿನ್ನುವ ಅಭ್ಯಾಸವಿತ್ತು ಮತ್ತು ಈಗ ಅವನು ಒಂದು ಒಳ್ಳೆಯ ಕೆಲಸದಲ್ಲಿ ಇರುವುದರಿಂದ ಅನೇಕ ಬ್ಯಾಂಕ್ಗಳಿಂದ ಕ್ರೆಡಿಟ್ ಕಾರ್ಡ್(credit cards) ಆಫರ್ಸ್ ಕೂಡ ಸಿಕ್ಕವು. ಅವನು ಕೆಲವು ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಬಿಂದಾಸ್ ಆಗಿ ಶಾಪಿಂಗ್ ಮಾಡಲು ಪ್ರಾರಂಭಿಸಿದ. ಏಕೆಂದರೆ ಅವನು ಒಂದು ಬಹುರಾಷ್ಟ್ರೀಯ ಕಂಪನಿಯ(multinational company) ಕೆಲಸದಲ್ಲಿ ಇರುವುದರಿಂದ ಒತ್ತಡ(tension) ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಹೀಗಾಗಿ ಅವನು ಒಂದು ಒಳ್ಳೆಯ ಬದುಕು ಜೀವಿಸುತ್ತಿದ್ದ, ಪ್ರತಿ ವಾರದ ಅಂತ್ಯದಲ್ಲಿ ಪಾರ್ಟಿ ಮಾಡುತ್ತಿದ್ದ, ಇಲ್ಲ ಎಲ್ಲಿಯಾದರೂ ಸುತ್ತಾಡಲು ಹೋಗುತ್ತಿದ. ಆದರೆ ಒಂದೇ ಸಮಸ್ಯೆಯಿತ್ತು ತಿಂಗಳ ಅಂತ್ಯದಲ್ಲಿ ಅವನ ಹತ್ತಿರ ಹಣವು ಉಳಿಯುತ್ತಿರಲಿಲ್ಲ.

ಇನ್ನೊಂದು ಕಡೆ ಆತನ ಗೆಳೆಯ ರಾಕಿ ಸಾಲ ತೆಗೆದುಕೊಳ್ಳುವುದರಲ್ಲಿ ನಂಬಿಕೆ ಇಟ್ಟಿರಲಿಲ್ಲ. ಸನ್ನಿ ಮನೆ ಸಾಲ(home loan) ತೆಗೆದುಕೊಂಡ ನಂತರವು, ರಾಕಿ ಅವನನ್ನು ನಿಯಂತ್ರಿಸಿಕೊಳ್ಳುತ್ತಾನೆ. ಏಕೆಂದರೆ ಅವನು ಅನೇಕ ವೈಯಕ್ತಿಕ ಹಣಕಾಸು(personal finance) ಪುಸ್ತಕಗಳನ್ನು ಓದಿದ್ದ, ಅದರಲ್ಲಿ ಅವನು ಈ ಸಾಲುಗಳನ್ನು ಓದಿದ್ದ ಅದೆಂದರೆ.

"spending money to show people how much money you have, is the fastest way to have less money".

ಅಂದರೆ ಇತರರಿಗೆ ತೋರಿಸಲು ಹಣವನ್ನು ಖರ್ಚು ಮಾಡುವುದು, ಬಡವರಾಗಲು ಇರುವ ಸುಲಭ ಮಾರ್ಗವಾಗಿದೆ. ಹೀಗಾಗಿ ಅವನು 1 ಮಲಗುವ ಕೋಣೆ(bedroom), ಅಡುಗೆ ಮನೆ ಇರುವ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾನೆ ಮತ್ತು ಅದು ನಗರದಿಂದ ದೂರವಿದ್ದ ಕಾರಣ ಬಾಡಿಗೆ ಕಡಿಮೆ ಇತ್ತು.

ಏಕೆಂದರೆ ಅವನ ಆಫೀಸಿನ ಸುತ್ತಮುತ್ತ ಇರುವ ಮನೆಗಳಲ್ಲಿ ಬಾಡಿಗೆ ಅಧಿಕವಿತ್ತು. ಅವನ ತಿಂಗಳ ಬಾಡಿಗೆ 5,000 ವಿತ್ತು. ಅವನು ಮನೆಯನ್ನು ಬಾಡಿಗೆ ತೆಗೆದುಕೊಂಡಿದ್ದರಿಂದ ಅನೇಕ ನಿರ್ವಹಣೆ ವೆಚ್ಚಗಳನ್ನು(maintenance cost) ಪಾವತಿಸುವ ಅವಶ್ಯಕತೆ ಇರಲಿಲ್ಲ. ಅವನ ವಿದ್ಯುತ್, ಆಹಾರ, ನೀರಿನ ಬಿಲ್ ರೀತಿ ಇತ್ಯಾದಿಯ ಖರ್ಚು ಸೇರಿ 8,000 ರೂ ಇತ್ತು. ಏಕೆಂದರೆ ಆತ ಒಂದು ಒಳ್ಳೆಯ ಗುಣಮಟ್ಟ(quality) ಇರುವ ಆಹಾರವನ್ನು ತಿನ್ನುತ್ತಿದ. ಕಾರ್ ಒಂದು ಬೆಲೆ ಹಿಡಿಯುವ ಅಸೆಟ್(depreciating asset) ಆಗಿದ್ದು, ಅದರ ಮೌಲ್ಯ ಸಮಯದ ಜೊತೆ ಕುಗ್ಗುತ್ತದೆ ಎಂದು ತಿಳಿದು ಅವನು ಕಾರನ್ನು ಖರೀದಿಸಲಿಲ್ಲ ಮತ್ತು ಆಫೀಸ್ನ ಬಸ್ನಯಿಂದ ಪ್ರಯಾಣಿಸುತ್ತಿದ. ರಾಕಿಗೂ ಹೊರಗಡೆ ತಿರುಗಾಡುವ ಆಸೆ ಇತ್ತು. ಆದರೆ ಮುಂಚೆ ಒಂದು ಬಜೆಟ್(budget) ಮಾಡಿದನು. ಏಕೆಂದರೆ ಒಂದು ಬಜೆಟ್ ಅನ್ನು ಮಾಡಿಲ್ಲವೆಂದರೆ ಅಧಿಕ ಖರ್ಚು ಆಗುತ್ತದೆ ಎಂದು ತಿಳಿದಿದ. ಹೀಗಾಗಿ ಅವನು ಲಂಚ್ ಬಾಕ್ಸ್ ಅನ್ನು ಆಫೀಸ್ಗೆ ತೆಗೆದುಕೊಂಡು ಹೋಗುತ್ತಿದ್ದ ಮತ್ತು ಪ್ರತಿ ತಿಂಗಳು ಕೇವಲ 3,000 ರೂಪಾಯಿಯನ್ನು ಮನರಂಜನೆಗೆ(entertainment) ಖರ್ಚು ಮಾಡುವ ಬಗ್ಗೆ ಯೋಚಿಸಿದ.

ಅವನು ಒಮ್ಮೊಮ್ಮೆ ಸಿನಿಮಾವನ್ನು ನೋಡಲು ಹೋಗುತ್ತಿದ್ದ, ಇಲ್ಲ 2- 3 ತಿಂಗಳು ಹಣವನ್ನು ಉಳಿಸಿ ಗಿರಿಧಾಮಕ್ಕೆ(hill station) ಹೋಗುತ್ತಿದ. ಹೀಗೆ ಅವನ ಸಂಬಳದ 15,000 ರೂಪಾಯಿ ತಿಂಗಳ ಖರ್ಚಿಗೆ ಹೋಗುತ್ತಿತ್ತು ಮತ್ತು ಉಳಿದ 15,000 ರೂಪಾಯಿಯನ್ನು ಅವನು ಉಳಿಸುತ್ತಿದ. ಅವನು ಒಂದು ವಿನಮ್ರ(humble) ಮತ್ತು ಸರಳವಾದ ಬದುಕನ್ನು ಜೀವಿಸುತ್ತಿದ. ಇಲ್ಲಿ ನಮಗೆ "ಸೈಕಾಲಜಿ ಆಫ್ ಮನಿ(psychology of money)" ಪುಸ್ತಕದ ಒಂದು ಉಲ್ಲೇಖ ನೆನಪಿಗೆ ಬರುತ್ತದೆ ಅದೆಂದರೆ,

"saving is the gap between your ego and your income",

ಇದರ ಅರ್ಥವೆನೆಂದು ಲೇಖನದಲ್ಲಿ ಮುಂದೆ ನೋಡೋಣ.

ಅವನು ಉಳಿಸಿದ ಹಣವನ್ನು ಸ್ಟಾಕ್ ಮತ್ತು ಮ್ಯೂಚುಯಲ್ ಫಂಡ್ನಲ್ಲಿ ಹಾಕುವ ಬಗ್ಗೆ ಯೋಚಿಸಿದ. ಅವನು ಮೊದಲು 5,000 ರೂಪಾಯಿಯ ಒಂದು sip ಯನ್ನು ಮಾಡುತ್ತಾನೆ. ಈ ಹಣವು ಅವನ ಸಂಬಳ ಬಂದಾಗ ಬ್ಯಾಂಕ್ನಿಂದ ತಾನಾಗೆ ಹೋಗಿ ಹೂಡಿಕೆ ಆಗುತ್ತಿತ್ತು. ಇನ್ನು ಉಳಿದ 10,000 ರೂಪಾಯಿಯನ್ನು ಆತ ಸ್ವಂತ ಅನ್ವೇಷಣೆ(research) ಮಾಡಿ ಒಂದು ಒಳ್ಳೆಯ ಕಂಪನಿಯ ಸ್ಟಾಕ್ ಖರೀದಿಸುತ್ತಿದ.

ಇವೆಲ್ಲ ಖರ್ಚು ಮಾಡಿದ ನಂತರವೂ ಅವನಿಗೆ ತಿಂಗಳ ಕೊನೆಯಲ್ಲಿ ಸ್ವಲ್ಪ ಹಣವು ಉಳಿಯುತ್ತಿತ್ತು ಮತ್ತು ಇದರ ಜೊತೆಗೆ ರಾಕಿ ಸನ್ನಿಗೆ ಸ್ವಲ್ಪ ಹಣವನ್ನು ಉಳಿಸಲು, ಹೂಡಿಕೆ ಮಾಡಲು ತಿಳಿಸುತ್ತಿದ. ಆದರೆ ಇದಕ್ಕೆ ಸನ್ನಿ ಅವನಿಗೆ ಹಾಸ್ಯ ಮಾಡುತ್ತಿದ್ದ, "ರಾಕಿ ನೀನು ಬದುಕನ್ನು ಸ್ವಲ್ಪ ಆನಂದಿಸು, ನಿನ್ನ ಯವ್ವನದಲ್ಲಿ ಆನಂದಿಸುವುದನ್ನು ಬಿಟ್ಟು ಯಾವಾಗ ಆನಂದಿಸುತ್ತೀಯ. ನೀನು ಎಷ್ಟು ಜಿಪುಣ ಆಗಿದ್ದೀಯಾ. ನನ್ನ ಹತ್ತಿರ ಕಾರಿದೆ, ಮನೆಯಿದೆ, ನಿನ್ನ ಹತ್ತಿರ ಏನಿದೆ? " ಎಂದು ಕೇಳುತ್ತಿದ. ಈ ರೀತಿಯ ವಿಭಿನ್ನ ಯೋಚನೆಯಿಂದ ಇವರಿಬ್ಬರಲ್ಲಿ ಜಗಳವಾಯಿತು. ಇದರ ನಂತರ ಇವರಿಬ್ಬರು ಮತ್ತೊಮ್ಮೆ ಮಾತನಾಡಲಿಲ್ಲ ಮತ್ತು ಸನ್ನಿಯನ್ನು ಇನ್ನೊಂದು ಇಲಾಖೆಗೆ ವರ್ಗಾವಣೆ ಮಾಡಿದರು. ಆಗ ಇವರಿಬ್ಬರೂ ಭೇಟಿ ಕೂಡ ಆಗುತ್ತಿರಲಿಲ್ಲ. ಹೀಗೆ ಅನೇಕ ವರ್ಷಗಳು ಕಳೆದವು.

ಒಂದು ಕಡೆ ಸನ್ನಿ ಅನೇಕ ಹೊಸ ಗೆಳೆಯರನ್ನು ಮಾಡಿಕೊಂಡ, ಕ್ಲಬ್ಗೆ ಹೋಗುತ್ತಿದ, ವಾರದ ಅಂತ್ಯದಲ್ಲಿ ಪಾರ್ಟಿ ಮಾಡುತ್ತಿದ. ಇನ್ನೊಂದು ಕಡೆ ರಾಕಿ ಉಳಿಸಿರುವ ಹಣವನ್ನು ಒಂದು ಒಳ್ಳೆಯ ಸ್ಟಾಕ್ನಲ್ಲಿ ದೀರ್ಘವಾಧಿ ಹೂಡಿಕೆ ಮಾಡುತ್ತಿದ್ದ ಮತ್ತು ಒಂದು ಆನ್ಲೈನ್ ವ್ಯಾಪಾರವನ್ನು(online business) ಪ್ರಾರಂಭಿಸಿ ಒಬ್ಬ ಉದ್ಯೋಗಿಯನ್ನು ಇಟ್ಟುಕೊಂಡ. ಪ್ರಾರಂಭದಲ್ಲಿ ಆನ್ಲೈನ್ ವ್ಯಾಪಾರವನ್ನು ಮಾಡಲು ಅವನಿಗೆ ಕಷ್ಟವಾಯಿತು, ಆದರೆ ನಿಧಾನವಾಗಿ ಅದನ್ನು ಮಾಡಿದನು. ಆ ಉದ್ಯೋಗಿಗೆ ಸಂಬಳ ನೀಡಿದ ನಂತರವೂ ಅವನಿಗೆ 10 ರಿಂದ 15 ಸಾವಿರದಷ್ಟು ಲಾಭ ಉಳಿಯುತ್ತಿತ್ತು, ಅದು ಕೂಡ ನಿಧಾನವಾಗಿ ಬೆಳೆಯುತ್ತಿತ್ತು.

ಹಣವು ಬೇರೆ ಬೇರೆ ಕಡೆಯಿಂದ ಬರುತ್ತಿತ್ತು, ಆದರೂ ಆತನ ಖರ್ಚನ್ನು ಹೆಚ್ಚಿಸಲಿಲ್ಲ. ಅದೇ ಟಿಫಿನ್ ಬಾಕ್ಸ್ ತೆಗೆದುಕೊಂಡು ಆಫೀಸ್ಗೆ ಹೋಗುತ್ತಿದ್ದ ಮತ್ತು ಆಫೀಸ್ನ ಬಸ್ನಿಂದ ಪ್ರಯಾಣಿಸುತ್ತಿದ. ಏಕೆಂದರೆ ಅವನು ಖರ್ಚನ್ನು ಹೆಚ್ಚಿಸುವ ಬಗ್ಗೆ ಯೋಚಿಸಿದಾಗ ಅವನ ತಲೆಯಲ್ಲಿ ಫೋಟೋವೇ ಬರುತ್ತಿತು.

rat race image in kannada
rat race

ಅವನು ಖರ್ಚನ್ನು ಹೆಚ್ಚಿಸಿದಷ್ಟು ಈ ಇಲಿ ಓಟದಲ್ಲಿ(rat race) ಸಿಲುಕಿರಬೇಕೆಂದು ತಿಳಿದಿತ್ತು ಮತ್ತು ಅವನಿಗೆ ಆದಷ್ಟು ಬೇಗನೆ ಈ ಇಲಿ ಓಟದಿಂದ ಹೊರ ಬರಬೇಕಿತು. ಇವೆಲ್ಲವನ್ನೂ ಆತ ನಿಶಬ್ದವಾಗಿ ಮಾಡುತ್ತಿದ್ದ, ಏಕೆಂದರೆ ಎಲ್ಲಾ ಕ್ಯಾಲ್ಕ್ಯುಲೇಷನ್ ಅವನ ತಲೆಯಲ್ಲಿತು. ಹೀಗಾಗಿ ಅನೇಕರಿಗೆ ಅವನನ್ನು ನೋಡಿದ ನಂತರ, ಅವನ ಉಚಿತ ಸಮಯವನ್ನು(free time) ಹೇಗೆ ಬಳಸಿಕೊಳ್ಳುತ್ತಾನೆ ಎಂದು ತಿಳಿಯುತ್ತಿರಲಿಲ್ಲ. ಎಲ್ಲರಿಗೂ ಅವನು ಉಚಿತ ಸಮಯದಲ್ಲಿ ಕಂಪ್ಯೂಟರ್ ಗೇಮ್ ಆಡುತ್ತಿದ್ದ, ಇಲ್ಲ ಒಂದು ನೀರಸ(boring) ಪುಸ್ತಕಗಳನ್ನು ಓದುತ್ತಿರಬಹುದು ಎನಿಸುತ್ತದೆ. ಏಕೆಂದರೆ ದೂರದಿಂದ ಆತನ ಜೀವನಶೈಲಿ ನೀರಸವಾಗಿ ಕಾಣುತ್ತಿತು. ಹೀಗಾಗಿಯೇ ಯಾರು ಕೂಡ ಅವನನ್ನು ಆದರ್ಶದ(role model) ರೀತಿ ಕಾಣುತ್ತಿರಲಿಲ್ಲ. ಬದಲಿಗೆ ಸನ್ನಿಯನ್ನು ನಕಲಿಸುತ್ತಿದ್ದರು. ಹೀಗೆ 7 ರಿಂದ 8 ವರ್ಷಗಳು ಕಳೆದವು.

ದೇಶದಲ್ಲಿ ಒಮ್ಮೆಲೇ ಸಾಂಕ್ರಾಮಿಕ ರೋಗ(pandemic) ಪ್ರಾರಂಭವಾಗುತ್ತದೆ. ಇದರಿಂದ ಪೂರ್ತಿ ದೇಶದಲ್ಲಿ ಹಿಂಜರಿತ(recession) ಬರುತ್ತದೆ. ಜನರು ಶಾಪಿಂಗ್ ಮಾಡೋದು ನಿಲ್ಲಿಸುತ್ತಾರೆ ಮತ್ತು ಸನ್ನಿ, ರಾಕಿ ಕೆಲಸ ಮಾಡುತ್ತಿದ್ದ ಕಂಪನಿಯ ಕೆಟ್ಟ ದಿನಗಳು ಪ್ರಾರಂಭವಾಯಿತು. ದೇಶದ ಅನೇಕ ಕಂಪನಿಗಳು ಆ ಸಮಯದಲ್ಲಿ ಹೆಣಗಡುತ್ತವೆ(struggle). ಹೀಗಾಗಿ ಅವರ ಕಂಪನಿಯನ್ನು ಉಳಿಸಲು 500 ಉದ್ಯೋಗಿಗಳನ್ನು ತೆಗೆದುಹಾಕಬೇಕಾಗುತ್ತದೆ. ಇದರಲ್ಲಿ ಸನ್ನಿ ಮತ್ತು ರಾಕಿ ಕೂಡ ಇದ್ದರು. ಇದು ಇಬ್ಬರಿಗೂ ಶಾಕಿಂಗ್ ಎನಿಸುತ್ತದೆ. ಆದರೆ ರಾಕಿಗೆ ಇದರಿಂದ ಅಧಿಕ ಒತ್ತಡ ಬರುವುದಿಲ್ಲ. ಏಕೆಂದರೆ ಆತ ಯಾವಾಗಲೂ ನಾಲ್ಕು ಹೆಜ್ಜೆ ಮುಂದೆ ಯೋಚಿಸಿದ್ದ, ಅವನು ಈ ಫೈರ್ ಗೆ ಇನ್ನೊಂದು ಪಯಾರ್ಡನ್ನು ಮಾಡಿಕೊಂಡಿದ. ಅವನ ಹತ್ತಿರ ತುರ್ತು ನಿಧಿಗಳು(emergency funds) ಇದ್ದವು. ಅನೇಕ ಕಂಪನಿಗಳಿಂದ ಅವನಿಗೆ ಡಿವಿಡೆಂಡ್ ಬರುತ್ತಿತ್ತು ಮತ್ತು ಅವನ ಆನ್ಲೈನ್ ವ್ಯಾಪಾರ ಕೂಡ ನಡೆಯುತ್ತಿತು.

ಆದರೆ ಸನ್ನಿ ಈ ವಜಾಗೊಳಿಸುವಿಕೆಯಲ್ಲಿ(layoff) ತುಂಬಾ ಒತ್ತಡದಲ್ಲಿ ಇದ್ದ. ಅವನು ಇದರ ಬಗ್ಗೆ ಯಾವತ್ತು ಯೋಚಿಸಿಯೇ ಇರಲಿಲ್ಲ. ಅವನಿಗೆ ಕೆಲಸದ ಭದ್ರತೆ(job security) ನಿಜವಾಗಿರುತ್ತದೆ ಎಂದು ಅನಿಸುತ್ತಿತು. ಏಕೆಂದರೆ ಬಾಲ್ಯದಿಂದ ಅವನು ಅದನ್ನೇ ಕೇಳಿಕೊಂಡು ಬಂದಿದ. ಆದರೆ ಅವನನ್ನು ಕೆಲಸದಿಂದ ಬಿಡಿಸಿದ ನಂತರವು ಮನೆ ಸಾಲ ಮತ್ತು ಕಾರಿನ ಸಾಲ ಸನ್ನಿಯ ಹಿಂದೆ ಬಿದ್ದವು. ಏಕೆಂದರೆ ಅವನ 20 ವರ್ಷದ ಸಾಲದಲ್ಲಿ ಅರ್ಧದಷ್ಟು ಇನ್ನು ಉಳಿದಿದೆ ಮತ್ತು ಕಾರಿನ ಸಾಲ ಇನ್ನು 2 ವರ್ಷ ಉಳಿದಿದೆ.

ಅವನು ತನ್ನ ಸ್ವಂತ ಗೆಳೆಯರೆಂದು ನಂಬಿದ ಎಲ್ಲರ ವಾಸ್ತವದ ಬಗ್ಗೆ ತಿಳಿಯಿತು. ಸತ್ಯವೆನೆಂದರೆ ಈ ಸಮಯದಲ್ಲಿ ಎಲ್ಲರ ಜೀವನ ಕಷ್ಟದಲ್ಲಿತು. ಹೀಗಾಗಿ ಅವನಿಗೆ ಅವರ ಕುಟುಂಬದವರಿಂದ ಸಾಲ ಪಡೆದು ಜೀವನವನ್ನು ನಡೆಸುವ ಪರಿಸ್ಥಿತಿ ಬಂದಿತು. ಆದರೆ ಇದು ಯಾವಾಗಲೂ ನಡೆಯದು ಸಾಧ್ಯವಿಲ್ಲ. ಹೀಗಾಗಿ ಅವನು ಆತನ ಕಾರನ್ನು ಮಾರುವ ಬಗ್ಗೆ ಯೋಚಿಸಿದ. ಆದರೆ ಹಿಂಜರಿತದಿಂದ ಮಾರುಕಟ್ಟೆ ಕೆಟ್ಟ ಸ್ಥಿತಿಯಲ್ಲಿ ಇದ್ದ ಕಾರಣ, ಅವನಿಗೆ ಆ ಕಾರನ್ನು ಕಡಿಮೆ ಬೆಲೆಗೆ ಮಾರಬೇಕಾಯಿತು. ಅವನು ಕಾರು ಮಾರಿ ಬಂದ ಹಣವನ್ನು ಮನೆಯ ಸಾಲದ emi ಗೆ ನೀಡಿದ. ಸನ್ನಿ "ಅವನನ್ನು ಕೆಲಸದಿಂದ ಹೊರ ಹಾಕಿದರು. ಕಾರನ್ನು ಮಾರಿದೇನು" ಎಂದು ಯೋಚಿಸುವಾಗ, ಅವನ ಕುಟುಂಬದಲ್ಲಿ ಒಬ್ಬನಿಗೆ ಕೊರೋನಾ ವೈರಸ್ ಆಕ್ರಮಣವಾಗಿದೆ ಎಂದು ತಿಳಿಯುತ್ತದೆ. ಸನ್ನಿ ಹತ್ತಿರ ಮುಂಚೆ ವಿಮೆಯು(insurance) ಇತ್ತು. ಆದರೆ ಆ ವಿಮೆಯನ್ನು ಆತನ ಕಂಪನಿ ನೀಡಿತ್ತು, ಈಗ ಅವನನ್ನು ಕೆಲಸದಿಂದ ತೆಗೆದು ಹಾಕಿರುವುದರಿಂದ, ಅವನ ವಿಮೆ ಕೂಡ ಇಲ್ಲ. ಹೀಗಾಗಿ ಅವನಿಗೆ ಅವನ ಹೆಂಡತಿಯ ಆಭರಣಗಳನ್ನು(jewellery) ಮಾರಬೇಕಾಗುತ್ತದೆ ಮತ್ತು ಅವನು ಉಳಿಸಿದ ಸ್ವಲ್ಪ ಹಣವು ವೈದ್ಯಕೀಯ ಖರ್ಚಿಗೆ ಹೋಯಿತು.

ಅಂದರೆ ಸನ್ನಿ ಈಗ ಪೂರ್ತಿಯಾಗಿ ಮುರಿದು ಹೋಗಿದ್ದ ಮತ್ತು ಅವನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಏಕೆಂದರೆ ಅವನಿಗೆ ಪ್ರತಿ ತಿಂಗಳು ಮನೆ ಸಾಲದ emi ಕಟ್ಟಬೇಕಿತ್ತು ಮತ್ತು ಅವನಿಗೆ ಕೆಲಸ ಕೂಡ ಸಿಗುತ್ತಿರಲಿಲ್ಲ. ಏಕೆಂದರೆ ಈ ಸಮಯದಲ್ಲಿ ಎಲ್ಲಾ ಕಂಪನಿಗಳು ಉದ್ಯೋಗಿಗಳನ್ನು ತೆಗೆದುಹಾಕುತ್ತಿದ್ದರು. ಹೀಗಾಗಿ ಅವನ ಒಂದೊಂದು ದಿನವೂ ಕಠಿಣದಿಂದ ಸಾಗುತ್ತಿತು. ಇದರಿಂದ ಅವನು ಖಿನ್ನತೆಗೆ ಹೋಗುತ್ತಾನೆ, ಅದು ಎಷ್ಟು ಎಂದರೆ ಅವನ ತಲೆಯಲ್ಲಿ ಆತ್ಮಹತ್ಯೆಯ(suicide) ರೀತಿಯ ಯೋಚನೆಗಳು ಬರುತ್ತಿದ್ದವು. "ನನಗೆ ಏಕೆ ಈ ರೀತಿ ಆಗುತ್ತದೆ" ಎಂದು ಬೈಯಲು ಪ್ರಾರಂಭಿಸಿದ.

ಈ ಸಮಯದಲ್ಲಿ ರಾಕಿ ಅವನಿಗೆ ಕರೆ ಮಾಡುತ್ತಾನೆ. ಇದು ಏಕೆಂದರೆ ಇಬ್ಬರು ಹಳೆಯ ಸ್ನೇಹಿತರು ಮತ್ತು ರಾಕಿಗೆ ಸನ್ನಿಯ ಈಗಿನ ಪರಿಸ್ಥಿತಿಯ ಬಗ್ಗೆ ತಿಳಿಯಿತು. ಇಬ್ಬರು ಸಿಕ್ಕಾಗ ಹಳೆಯ ಮಾತುಕತೆಗಳು ನಡೆದವು. ಸನ್ನಿ ಆ ಜಗಳದ ವಿಷಯವಾಗಿ ರಾಕಿಗೆ "ಕ್ಷಮೆ' ಕೇಳುತ್ತಾನೆ ಮತ್ತು ನಂತರ, "ನನ್ನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ನನಗೆ ಯಾರು ಸಹಾಯ ಮಾಡುತ್ತಿಲ್ಲ" ಎಂದು ಹೇಳುತ್ತಾನೆ. ಆಗ ರಾಕಿ, "ನಾನು ಆ ಜಗಳವನ್ನು ಯಾವಾಗಲೋ ಮರೆತಿದ್ದೆ, ನಾನು ನಿನ್ನನ್ನು ಆ ದಿನವೇ ಕ್ಷಮಿಸಿದೆ. ಏಕೆಂದರೆ ನೀನು ಹೃದಯದಿಂದ ಎಷ್ಟು ಒಳ್ಳೆಯ ವ್ಯಕ್ತಿ ಎಂದು ನನಗೆ ತಿಳಿದಿದೆ" ಎಂದು ಹೇಳುತ್ತಾನೆ.

ಹೀಗಾಗಿ ನಿಮಗೆ ಬೋನಸ್ ನಿಯಮವೆನೆಂದರೆ ಜಗತ್ತಿನಲ್ಲಿ ಬಡ ಮತ್ತು ಜಂಬದಿಂದ(ego) ಇರುವವರು ಅನೇಕರು ಇದ್ದಾರೆ. ಅವರ ಜಂಬ ಇರುವಷ್ಟು ಅವರ ಜೇಬಿನಲ್ಲಿ ಹಣ ಇರುವುದಿಲ್ಲ. ಈ ರೀತಿಯ ಜನರಿಂದ ಸೇಡು ತೀರೆಸಿಕೊಳ್ಳಲು, ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಬದುಕೇ ಅವರಿಗೆ ಶಿಕ್ಷೆ ನೀಡಿ ವಿನಮ್ರನಾಗಿ ಮಾಡುತ್ತದೆ ಮತ್ತು ನಿಮ್ಮ ಯಶಸ್ಸು ಅವರಿಗೆ ಆಗಿರುವ ಗಾಯಕ್ಕೆ ಇನ್ನಷ್ಟು ಉಪ್ಪನ್ನು ಸುರಿಯುತ್ತದೆ. ಹೀಗಾಗಿ,

"aim to be rich and humble not poor and arrogant"

ಆಗ ರಾಕಿ, "ನಾನು ಬೇಗನೇ ನಿವೃತ್ತನಾಗಿ, ನನ್ನ ಹೆಂಡತಿಯ ಜೊತೆ ವಿಶ್ವ ಪ್ರವಾಸ(world trip) ಹೋಗಬೇಕೆಂದು ಬಯಸಿದ್ದೇನೆ. ನನಗೆ ನನ್ನ ಆನ್ಲೈನ್ ವ್ಯಾಪಾರವನ್ನು ನೋಡಿಕೊಳ್ಳಲು ಒಬ್ಬ ನಂಬಲರ್ಹ(trustworthy) ವ್ಯಕ್ತಿಯ ಅವಶ್ಯಕತೆ ಇದೆ. ಹೀಗಾಗಿ ನಾನು ನಿನಗೆ ತಿಂಗಳು 15,000 ರೂಪಾಯಿ ಸಂಬಳ ನೀಡುವೆ" ಎಂದು ಹೇಳುತ್ತಾನೆ. ಇದನ್ನು ಕೇಳಿ ಸನ್ನಿ ತುಂಬಾ ಖುಷಿಯಾಗುತ್ತಾನೆ. ಆದರೆ ಅವನಿಗೆ ಆಶ್ಚರ್ಯವೂ ಆಗುತ್ತದೆ. ಅವನ ತಲೆಯಿಂದ ಮನೆ ಸಾಲ, ಕಾರಿನ ಸಾಲದ ರಿಕವರಿ ಏಜೆಂಟ್ಗಳ ಒತ್ತಡ ದೂರವಾಯಿತು ಎಂಬ ಖುಷಿ ಇತ್ತು. ಆದರೆ ರಾಕಿ ಇಷ್ಟು ಬೇಗನೆ ನಿವೃತ್ತಿಯಾಗಲು ಹೇಗೆ ಸಾಧ್ಯ, ಅವನಿಗೆ ಕೇವಲ 28 ವರ್ಷವಾಗಿದೆ. 8 ವರ್ಷದ ಹಿಂದೆ ಇವರಿಬ್ಬರು ಸಮಾವಾಗಿ ಪ್ರಾರಂಭಿಸಿದ್ದರು. ಆದರೆ ಇಂದು ಇವರಿಬ್ಬರ ಆರ್ಥಿಕ ಸ್ಥಿತಿಯಲ್ಲಿ ತುಂಬಾ ವ್ಯತ್ಯಾಸವಿದೆ. ಆಗಿದ್ದರೆ ನಾವು ಇವರ ಬದುಕಿನ ಕೆಲವು ಮುಖ್ಯ ಪಾಠದ ಬಗ್ಗೆ ತಿಳಿಯೋಣ.

ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

Rule 1.

is loan and investments are same in kannada
loan

ನೀವು ಈ ಲೇಖನದಲ್ಲಿ ಗಮನಿಸಿದರೆ ಸನ್ನಿಯ ಕೆಟ್ಟ ಆರ್ಥಿಕ ಸ್ಥಿತಿಗೆ ಸಾಲವೂ(loan) ಪ್ರಮುಖ ಕಾರಣವಾಗಿದೆ. ಸನ್ನಿಗೆ ಸಾಲವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ನಮಗೆ ಶಾಲೆಯಲ್ಲಿ ಒಳ್ಳೆಯ ಕೆಲಸ, ವೃತ್ತಿ, ಸಂದರ್ಶನವನ್ನು ಹೇಗೆ ಕ್ರ್ಯಾಕ್ ಮಾಡಬೇಕೆಂದು ತಿಳಿಸುತ್ತಾರೆ, ಆದರೆ ಸಾಲವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಸುವುದಿಲ್ಲ. ಇದರಿಂದ ಗರಿಷ್ಠ ಮಟ್ಟದ ಜನರು ಈ ವಿಷಯದಲ್ಲಿ ವಿಫಲರಾಗುತ್ತಾರೆ ಮತ್ತು ಇದರಿಂದ ಆರ್ಥಿಕ ಸ್ವತಂತ್ರ ಅವರಿಗೆ ಕನಸಾಗೆ ಉಳಿಯುತ್ತದೆ.

ಇನ್ನೊಂದು ಪ್ರಮುಖ ವಿಷಯ ಏನೆಂದರೆ ಒಬ್ಬ 20ರ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದರೆ, ಈ ಬ್ಯಾಂಕ್ಗಳು ಕ್ರೆಡಿಟ್ ಕಾರ್ಡ್ ಅನ್ನು ತೆಗದುಕೊಳ್ಳಲು ಒತ್ತಡ ಹಾಕುತ್ತವೆ. ಏಕೆಂದರೆ ಆ ವಯಸ್ಸಿನಲ್ಲಿ ನಿಮ್ಮ ಶಾಪಿಂಗ್ ಮನಸ್ಥಿತಿಯನ್ನು ನೀವು ಜೀವನಪೂರ್ತಿ ನಿರ್ವಹಿಸುತ್ತೀರಾ. ಉದಾಹರಣೆಗೆ ನೀವು ದುಬಾರಿ ಮತ್ತು ಬ್ರಾಂಡೆಡ್ ಬಟ್ಟೆಗಳನ್ನು ಧರಿಸುತ್ತಿದ್ದರೆ, ಭವಿಷ್ಯದಲ್ಲಿ ಅದನ್ನು ತಗ್ಗಿಸುವುದಿಲ್ಲ(downgrade). ಇದು ಎಲ್ಲರಿಗೂ ಅಧಿಕ ಆಸೆಗಳಿರುವ ಸಮಯವಾಗಿದೆ. ಹೀಗಾಗಿ ಸಾಲದ ಅಪಾಯದ ಬಗ್ಗೆ ತಿಳಿದೇ ಇರುವುದಿಲ್ಲ ಇದರಿಂದ ಯುವಕರು ಪ್ರಾರಂಭದಿಂದ ಸಾಲವನ್ನು ಸಾಮಾನ್ಯವೆಂದುಕೊಳ್ಳುತ್ತಾರೆ ಮತ್ತು ಅವರ ಕಂಪನಿಯ ಬಾಸ್ ಜೊತೆಗೆ ಬ್ಯಾಂಕ್ ಮ್ಯಾನೇಜರ್ ಅನ್ನು ಬಾಸ್ ಮಾಡಿಕೊಳ್ಳುತ್ತಾರೆ.

ಇದನ್ನು ಓದಿ: Sip vs Lumpsum ಹೂಡಿಕೆಗೆ ಯಾವುದು ಉತ್ತಮ?

Rule 2.

what is debt trap in kannada
debt trap

ಕಂಪನಿಗಳಿಗೆ ಈ ಸಾಲದ ಬಲೆಯಿಂದ(debt trap) ಅಧಿಕ ಲಾಭ ಬರುವ ಕಾರಣ, ಸರ್ಕಾರ(government), ಸಮಾಜ ಇದನ್ನು ಪ್ರಚಾರ ಮಾಡುತ್ತವೆ. ನೀವು ಸಾಲವನ್ನು ತೆಗೆದುಕೊಂಡಿದರೆ, ಅಧಿಕ ಕೆಲಸ ಮಾಡುತ್ತೀರಾ. ಇದು ಆರ್ಥಿಕತೆಗೆ ಉತ್ತಮವಾಗಿದೆ. ಏಕೆಂದರೆ ನೀವು ಜಿಡಿಪಿಯನ್ನು ಹೆಚ್ಚಿಸುತ್ತಿದ್ದೀರಾ, ಇದು ಕಂಪನಿಗೂ ಉಪಯುಕ್ತವಾಗಿದೆ. ಏಕೆಂದರೆ ಅವರ ಗ್ರಾಹಕರು ಹೆಚ್ಚುತಿದ್ದಾರೆ. ಜನರು emi ಮೇಲೆ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಅವರ ವ್ಯಾಪಾರ ಹೆಚ್ಚುತ್ತದೆ. ಇದು ಬ್ಯಾಂಕಿಗೂ ಉತ್ತಮವಾಗಿದೆ. ಏಕೆಂದರೆ ನೀವು emi ಮೇಲೆ ಬಡ್ಡಿಯನ್ನು ನೀಡುತ್ತಿದ್ದೀರಿ. ಇದು ಕೇವಲ ನಿಮ್ಮ ವೈಯಕ್ತಿಕ ಹಣಕಾಸು ಮತ್ತು ಆರೋಗ್ಯಕ್ಕೆ ಸರಿ ಇಲ್ಲ.

ನೀವು ಸಾಲ ತೆಗೆದುಕೊಂಡಾಗ ಕಾಂಪೌಂಡಿಂಗ್ ಶಕ್ತಿಗೆ ವಿರುದ್ಧವಾಗಿ ಹೋಗುತ್ತೀರಾ. ಇದು ಆರ್ಥಿಕ ಬದುಕನ್ನು ಹೇಗೆಲ್ಲ ನಾಶ ಮಾಡುತ್ತದೆ ಎಂಬುದನ್ನು ಜನರ ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ಸಾಲದ ಬಲೆಯಿಂದ ಪಾರಾದರು, ಆ ಹಣವನ್ನು ಏನು ಮಾಡಬೇಕು?

ಏಕೆಂದರೆ ತುಂಬಾ ಜನ ಸಾಲ ತೆಗೆದುಕೊಳ್ಳುವುದರಿಂದ ಅವರ ಖರ್ಚುಗಳು ನಿಯಂತ್ರಣದಲ್ಲಿ ಇರುತ್ತವೆ ಎಂದು ತಿಳಿಸುತ್ತಾರೆ. ಉದಾಹರಣೆಗೆ ಒಬ್ಬರು 30,000 ರೂಪಾಯಿಯ ಸಂಬಳವನ್ನು ಪಡೆಯುತ್ತಿದ್ದು, 14,000 ರೂಪಾಯಿಯ emi ಪಾವತಿಸಬೇಕಿದ್ದರೆ, ಅವನು ಉಳಿದ 16,000 ರೂಪಾಯಿಯಲ್ಲೇ ಜೀವನ ನಡೆಸುತ್ತಾನೆ. ಒಂದು ವೇಳೆ ಸಾಲ ಇಲ್ಲದಿದ್ದರೆ ಆತನ ಪೂರ್ತಿ 30,000 ರೂಪಾಯಿಯನ್ನು ಖರ್ಚು ಮಾಡುತ್ತಿದ್ದ ಮತ್ತು ಅವನಿಗೆ ಇದರ ಬಗ್ಗೆ ತಿಳಿಯುತ್ತಿರಲಿಲ್ಲ. ಇದು ನಿಮ್ಮ ಖರ್ಚನ್ನು ನಿಯಂತ್ರಿಸಲು ಇರುವ ಕಳಪೆ ತಂತ್ರವಾಗಿದೆ. ನಿಮ್ಮ ಖರ್ಚುಗಳನ್ನು ಶಿಸ್ತಗಿ ನೀವೇ ನಿಯಂತ್ರಿಸುವುದು ಸರಿಯಾದ ಮಾರ್ಗವಾಗಿದೆ. ಇದಕ್ಕೆ ನಾನು ನಿಮಗೆ ಒಂದು ಸರಳವಾದ ಸೂತ್ರವನ್ನು ತಿಳಿಸುವೆನು, ಅದುವೇ 70/20/10 ಬಜೆಟ್ ನಿಯಮವಾಗಿದೆ.

ಈ ನಿಯಮದ ಪ್ರಕಾರ ನೀವು 70% ಹಣವನ್ನು ನಿಮ್ಮ ಮನೆಯ ಖರ್ಚಿಗೆ ಬಳಸಿ. 20% ಹಣವನ್ನು ಹೂಡಿಕೆ ಮಾಡಿ. ಉಳಿದ 10% ಅನ್ನು ನಿಮ್ಮ ಮನರಂಜನೆಗಾಗಿ ಬಳಸಿ. ನಿಧಾನವಾಗಿ ನೀವು 20% ಹೂಡಿಕೆಯನ್ನು ಹೆಚ್ಚಿಸುತ್ತೀರಿ.

ಉದಾಹರಣೆಗೆ, ನಾವು ತಿಳಿಸಿದ ಕಥೆಯಲ್ಲಿ ರಾಕಿ ತನ್ನ ಸಂಬಳದ 50% ಉಳಿಸಿ, ಹೂಡಿಕೆ ಮಾಡುತ್ತಿದ. ಇದು 50/40/10 ನಿಯಮವಾಗುತ್ತದೆ. ಇದು 70/20/10 ನಿಯಮಕ್ಕಿಂತ ಉತ್ತಮವಾಗಿದೆ. ಏಕೆಂದರೆ ಇದರಲ್ಲಿ ದೊಡ್ಡ ಭಾಗ ಹೂಡಿಕೆಗೆ ಹೋಗುತ್ತಿದೆ. ಯಾರು ಈ 50/40/10 ನಿಯಮವನ್ನು ಬಳಸುತ್ತಾರೋ, ಅವರು 10 ವರ್ಷದಲ್ಲೇ ಆರ್ಥಿಕ ಸ್ವತಂತ್ರವನ್ನು ಸಾಧಿಸುತ್ತಾರೆ.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

Rule 3.

is stock market is stable in kannada
stable return

ಆರ್ಥಿಕ ಸ್ವತಂತ್ರದ 3ನೇ ನಿಯಮವೆನೆಂದರೆ ಇಂದು ಅನೇಕರು ಷೇರು ಮಾರುಕಟ್ಟೆಯನ್ನು ಅಪಾಯಕಾರಿ ಎಂದುಕೊಳ್ಳುತ್ತಾರೆ. ಇಲ್ಲಿ ಅಚಲವಾದ(stable) ರಿಟರ್ನ್ ಬರುವುದಿಲ್ಲವೆಂದುಕೊಳ್ಳುತ್ತಾರೆ. ಆದರೆ ಅದೇ ವ್ಯಕ್ತಿ hul ಇಲ್ಲ tcs ಕಂಪನಿಗಳಲ್ಲಿ ಕೆಲಸ ಮಾಡುವಾಗ, ಅವನಿಗೆ ಪ್ರತಿ ತಿಂಗಳು ಸಿಗುವ ಸಂಬಳ ಅಚಲವೆನಿಸುತ್ತದೆ. ಅದೇ ಕಂಪನಿಯ ಷೇರಿನ ಡಿವಿಡೆಂಟ್(dividend) ಜನರಿಗೆ ಅಪಾಯಕಾರಿ ಏನಿಸುತ್ತದೆ. ಇದರಲ್ಲಿನ ಆಸಕ್ತಿಕರ ಸಂಗತಿ ಎಂದರೆ ಹಿಂಜರಿತದ ಸಮಯದಲ್ಲಿ ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕಿ ಬೆಲೆಯನ್ನು ನಿಯಂತ್ರಣ ಮಾಡುತ್ತವೆ. ಆದರೆ ತನ್ನ ಹೂಡಿಕೆದಾರರ ಡಿವಿಡೆಂಡನ್ನು ಕಡಿಮೆ ಮಾಡುವುದಿಲ್ಲ.

ಉದಾಹರಣೆಗೆ ಕೋವಿಡ್ 19(covid 19) ಸಮಯದಲ್ಲಿ ಮೈಕ್ರೋಸಾಫ್ಟ್(microsoft), ಒಂದು ಕಡೆ ಉದ್ಯೋಗಿಗಳನ್ನು ತೆಗೆದುಹಾಕುತ್ತಿತ್ತು, ಇನ್ನೊಂದು ಕಡೆ ಡಿವಿಡೆಂಟ್ ಹೆಚ್ಚಿಸುತ್ತಿತು. ಸನ್ನಿಗೆ ಸಂಬಳ ಒಂದೇ ಕಂಪನಿಯಿಂದ ಸಿಗುತ್ತಿತ್ತು, ಆದರೆ ರಾಕಿಗೆ ಡಿವಿಡೆಂಟ್ 10 ರಿಂದ 15 ಕಂಪನಿಗಳಿಂದ ಸಿಗುತ್ತಿದ್ದವು. ಯಾರು ಆರ್ಥಿಕವಾಗಿ ಸುರಕ್ಷಿತವಿದ್ದಾರೆ ಎಂದು ತಿಳಿಸಿ. ಹೀಗಾಗಿ ಕೆಲಸದ ಭದ್ರತೆ(job security) ನಿಜವಲ್ಲ ಆರ್ಥಿಕ ಭದ್ರತೆ ನಿಜವಾಗಿದೆ. ಇದು ನಿಮ್ಮ ಕಂಟ್ರೋಲ್ನಲ್ಲಿ ಇರುತ್ತದೆ.

Rule 4.

what is the meaning of compounding in stock market in kannada
compounding

ಆರ್ಥಿಕ ಸ್ವತಂತ್ರದ 4ನೇ ನಿಯಮ ಕಾಂಪೌಂಡಿಂಗ್ ಮೇಲಾಗಿದೆ. ನಾವು ಇದನ್ನು ಅಧಿಕ ಲೇಖನದಲ್ಲಿ ತಿಳಿಸಿದ್ದೇವೆ. ಆದರೂ ಜನರು ಇಂದು ಕೂಡ ಹೂಡಿಕೆ ಮಾಡಲು ವಿಳಂಬ ಮಾಡುತ್ತಾರೆ. ಯಾರಿಗೆ ಈ ಕಾಂಪೌಂಡಿಂಗ್ನ ಶಕ್ತಿಯ ಬಗ್ಗೆ ತಿಳಿದಿದೆಯೋ, ಆತ ಮೊದಲು ಹೂಡಿಕೆ ಮಾಡುತ್ತಾನೆ ಮತ್ತು ಸಾಲವನ್ನು ನಿರ್ಲಕ್ಷಿಸುತ್ತಾನೆ. ಆರ್ಥಿಕವಾಗಿ ಸ್ಮಾರ್ಟ್ ಇರುವವರು ತಮ್ಮ ಹೂಡಿಕೆಯನ್ನು ಬೇಗನೆ ಮಾಡುತ್ತಾರೆ ಮತ್ತು ಸಾಲವನ್ನು ತೆಗೆದುಕೊಳ್ಳಬೇಕಿದ್ದರೆ ಮುಂದೂಡುತ್ತಾರೆ. ಅವರ ಹೂಡಿಕೆಯನ್ನು ವಿಳಂಬ ಮಾಡುತ್ತಾರೆ ಮತ್ತು ಸಾಲವನ್ನು ಬೇಗನೆ ಖರೀದಿಸುತ್ತಾರೆ. ನೀವು ಒಂದು ವೇಳೆ ಡಿಮ್ಯಾಟ್ ಅಕೌಂಟ್ ತೆರೆದಿಲ್ಲದಿದ್ದರೆ ಕೆಳಗಡೆ ಇರುವ ಲಿಂಕ್ಗೆ ಹೋಗಿ ಡಿಮ್ಯಾಟ್ ಅಕೌಂಟ್ ತೆರೆಯಿರಿ. ನೀವು ಮನೆಯಲ್ಲಿ ಕೂತು ಹೂಡಿಕೆಯನ್ನು ಪ್ರಾರಂಭಿಸಬಹುದು.

Rule 5.

what is the best age to retire early in kannada
early retirement

ಆರ್ಥಿಕ ಸ್ವತಂತ್ರದ 5ನೇ ನಿಯಮ ಆರಂಭಿಕ ನಿವೃತ್ತಿ(early retirement) ಪರಿಕಲ್ಪನೆಯ ಮೇಲಾಗಿದೆ. ಭಾರತದಲ್ಲಿ ನೀವು 50 ವರ್ಷದವರೆಗೂ ಕೆಲಸ ಮಾಡುತ್ತಿದ್ದಾರೆ ಅದನ್ನು ಒಳ್ಳೆಯದು ಎನ್ನುತ್ತಾರೆ. "ನೋಡು ನಿಮ್ಮ ತಂದೆ ಎಷ್ಟು ಕಷ್ಟಪಡುತ್ತಿದ್ದಾರೆ, ಅವರಿಗೆ ಆಸಕ್ತಿ ಇಲ್ಲದಾಗಲೂ ಕಚೇರಿಗೆ ಹೋಗುತ್ತಾರೆ. ಜ್ವರವಿದ್ದರೂ ಕಚೇರಿಗೆ ಹೋಗುತ್ತಾರೆ, ಅಧಿಕ ಮಳೆಯಿದ್ದರೂ ಕಚೇರಿಗೆ ಹೋಗುತ್ತಾರೆ". ಇದು ಏಕೆಂದರೆ ಮನೆಯನ್ನು ನಡೆಸಲು ನಾವು ಕೆಲಸವನ್ನು ಮಾಡಲೇಬೇಕು. ಇದನ್ನು ಅನೇಕ ಕುಟುಂಬಗಳು ಫಾಲೋ ಮಾಡುತ್ತವೆ. ನಾವು ಇದನ್ನು ಬಾಲ್ಯದಿಂದ ನೋಡಿರುವುದರಿಂದ ಅದನ್ನೇ ನಕಲಿಸುತ್ತೇವೆ.

ನೀವು ಹಣದಿಂದ ಅಧಿಕ ವಸ್ತುಗಳನ್ನು ಖರೀದಿಸಬಹುದು ಮತ್ತು ತುಂಬಾ ಮುಖ್ಯವಾಗಿ ನೀವು ಇದರಿಂದ ಆರ್ಥಿಕ ಸ್ವತಂತ್ರವನ್ನು ಗಳಿಸಬಹುದು. ಇದು ಅಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ. ನಿಮ್ಮ ಅಕ್ಕ ಪಕ್ಕ ಯಾರೆಲ್ಲ ಆರ್ಥಿಕವಾಗಿ ಸ್ವತಂತ್ರರಿದ್ದಾರೆ ಎಂದು ನೋಡಿ. ಉದಾಹರಣೆಗೆ ಯಾರಾದರೂ ಹೊಸ ಕಾರು ಖರೀದಿಸಿದರೆ ಅದನ್ನು ನಾವು ನಕಲಿಸುವುದು ಸುಲಭವಾಗಿದೆ. ಅದೇ ನೀವು ಆರ್ಥಿಕವಾಗಿ ಸ್ವತಂತ್ರರಿರುವ ವ್ಯಕ್ತಿಯನ್ನು ನೋಡಿದ್ದಾರೆ, ಅವನು ಆರ್ಥಿಕವಾಗಿ ಸ್ವತಂತ್ರನಾದ್ದಾನೆ ಎನ್ನಲು ಯಾವುದೇ ಟ್ಯಾಗ್ ಇರುವುದಿಲ್ಲ. ಈಗ ನೀವೇ ಹೇಳಿ ಗರಿಷ್ಠ ಮಟ್ಟದಲ್ಲಿ ಯಾರನ್ನು ಫಾಲೋ ಮಾಡಬೇಕು. ಹೀಗಾಗಿ ಆರ್ಥಿಕವಾಗಿ ಸ್ವತಂತ್ರ ಪರಿಕಲ್ಪನೆ ತುಂಬಾ ಮುಖ್ಯವಾಗಿದೆ. ಇದನ್ನು ಕೇವಲ ಜಗತ್ತಿನ 1% ಜನರು ಸಾಧಿಸಲು ಸಾಧ್ಯವಾಗುತ್ತದೆ. ಏಕೆಂದರೆ ಇಂದು ನೀವು ಆನ್ಲೈನ್ನಲ್ಲಿ ಗಮನಿಸಿದರೆ ಮನರಂಜನೆ ಮೇಲಿನ ವೀಡಿಯೋಗಳಿಗೆ ಲಕ್ಷದಷ್ಟು ವೀಕ್ಷಣೆ ಬರುತ್ತದೆ. ಆದರೆ ಆರ್ಥಿಕವಾಗಿ ಸ್ವತಂತ್ರದ ವೀಡಿಯೋಗಳಿಗೆ ಅಷ್ಟು ವೀಕ್ಷಣೆ ಬರುವುದಿಲ್ಲ. ಏಕೆಂದರೆ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ.

ರಾಕಿ ಸ್ವತಂತ್ರವಾಗಿ ಅವನ ಬಗ್ಗೆ ಯೋಚಿಸುತ್ತಿದ್ದ ಮತ್ತು ಸನ್ನಿ ಗುಂಪಿನ ರೀತಿ ಯೋಚಿಸುತ್ತಿದ. ನೀವು ಗರಿಷ್ಠ ಜನರು ಯೋಚಿಸುತ್ತಿರುವಂತೆ ಯೋಚಿಸಿದರೆ ಅಲ್ಲೇ ಹೋಗುತ್ತೀರಾ. ಇದಕ್ಕೆ ನಾವು ಶಾಲೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು(education system) ಬೈಯಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ಆರ್ಥಿಕವಾಗಿ ಸ್ವತಂತ್ರರಾದರೆ, ಕೆಲಸ ಯಾರು ಮಾಡುತ್ತಾರೆ. ಹೀಗಾಗಿ ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರ ಒಂದು ಒಳ್ಳೆಯ ಉದ್ಯೋಗಿ(employee) ಆಗುವುದು ಹೇಗೆ? ಮತ್ತು ಇಲಿ ಓಟದಲ್ಲಿ(rat race) ಸಿಕ್ಕಿಕೊಂಡಿರುವುದು ಹೇಗೆ? ಎಂಬುದನ್ನು ತಿಳಿಸುತ್ತದೆ. ಏಕೆಂದರೆ ಮಾರುಕಟ್ಟೆಯಲ್ಲಿ ಈ ಜನಗಳ ಅವಶ್ಯಕತೆ ಅಧಿಕವಿರುತ್ತದೆ. ಒಂದು ಕಂಪನಿಯಲ್ಲಿ ಹೂಡಿಕೆದಾರರು ಕಡಿಮೆ ಇರುತ್ತಾರೆ ಮತ್ತು ಉದ್ಯೋಗಿಗಳು ಅಧಿಕವಿರುತ್ತಾರೆ. ಅಂದರೆ ಜಗತ್ತಿನಲ್ಲಿ 1% ಹೂಡಿಕೆದಾರ ಮತ್ತು ವ್ಯಾಪಾರಿ(businessman) ಆಗಿದ್ದರೆ, ಉಳಿದ 99% ಉದ್ಯೋಗಿಗಳಾಗಿರುತ್ತಾರೆ. ಯಾವ ಭಾಗದಲ್ಲಿ ಇರಬೇಕೆಂಬುದು ನಿಮ್ಮ ಆಯ್ಕೆಯಾಗಿದೆ.

ನೀವು ಬೇಗನೆ ಆರ್ಥಿಕ ಸ್ವತಂತ್ರವನ್ನು ಸಾಧಿಸಿ, ಆ 1% ನಲ್ಲಿ ಬರಬೇಕೆಂದಿದ್ದರೆ ಬೇಗನೆ ನಮ್ಮ ವೆಬ್ಸೈಟ್ಗೆ ಸಬ್ಸ್ಕ್ರೈಬ್ ಆಗಿ. ಏಕೆಂದರೆ ಈ 5 ಕಾನ್ಸೆಪ್ಟ್ಗಳಿಗಿಂತ ಮುಖ್ಯವಾದ ಅಧಿಕ ಕಾನ್ಸೆಪ್ಟ್ಗಳಿವೆ. ಅದರಲ್ಲಿ ಒಂದಾಗಿದೆ ತೆರಿಗೆ(tax). ಶ್ರೀಮಂತರು ತೆರಿಗೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೀಗಾಗಿ ಅವರು ಅಧಿಕ ಗಳಿಸಿದ ನಂತರವೂ ಕಡಿಮೆ ತೆರಿಗೆಯನ್ನು ಪಾವತಿಸುತ್ತಾರೆ. ಉದಾಹರಣೆಗೆ ಜಗತ್ತಿನಲ್ಲಿ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾದ ಏಲೋನ್ ಮಸ್ಕ್, 2018 ರಂದು 1$ ತೆರಿಗೆಯನ್ನು ಕೂಡ ಕಟ್ಟಲಿಲ್ಲ. ಆದರೆ ಮಧ್ಯಮ ವರ್ಗದ ಜನರು ಕಡಿಮೆ ಸಂಬಳ ಹೊಂದಿದ್ದರು ಅಧಿಕ ತೆರಿಗೆಯನ್ನು ಕಟ್ಟುತ್ತಾರೆ. ಅನೇಕರು ತೆರಿಗೆಯಿಂದ ಉಳಿದುಕೊಳ್ಳಲು ವಿಫಲವಾಗುವ ಹೂಡಿಕೆಗಳನ್ನು ಮಾಡುತ್ತಾರೆ. ಇವುಗಳೆಲ್ಲದರ ಬಗ್ಗೆ ಮುಂದೆ ಬರುವ ಲೇಖನಗಳಲ್ಲಿ ವಿವರವಾಗಿ ತಿಳಿಸುತ್ತೇವೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments