Website designed by @coders.knowledge.

Finding the Best Health Insurance | ಉತ್ತಮ ಆರೋಗ್ಯ ವಿಮೆಯನ್ನು ಕಂಡುಹಿಡಿಯುವುದೇಗೆ?

Watch Video

ಒಂದೇ ಒಂದು ಆಸ್ಪತ್ರೆಯ ಬಿಲ್ ತುಂಬಾನೇ ಬಡವನಾಗಿ ಮಾಡಲು ಸಾಧ್ಯವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಒಂದು ಆರೋಗ್ಯ ವಿಮಾಪತ್ರ(health insurance policy) ಕೂಡ ನಿಮ್ಮನ್ನು ಬಡವನಾಗಿ ಮಾಡಬಹುದು. ಏಕೆಂದರೆ ಪ್ರೀಮಿಯಂ(premium) ಅಧಿಕವಿರಬಹುದು, ಇಲ್ಲ ಹಕ್ಕು ನಿರಾಕರಣೆ(claim reject) ಆಗಬಹುದು. ಸರ್ಕಾರದ 18% ಜಿಎಸ್ಟಿ(gst), ಕಂಪನಿಗಳ 1 ಕೋಟಿ ಯೋಜನೆ, ಫ್ಯಾನ್ಸಿ ರೈಡರ್ಸ್(fancy riders), ಅನಂತ ವಿಮಾ ಮೊತ್ತದಿಂದಾಗಿ(infinite sum assured) ಪ್ರೀಮಿಯಂ ಅಧಿಕವಾಗುತ್ತದೆ. ಈ ಲೇಖನದಲ್ಲಿ ನೀವು ಉತ್ತಮ ಆರೋಗ್ಯ ವಿಮೆ ಆಯ್ಕೆ ಮಾಡಲು ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ.

ಇದನ್ನು ಓದಿ: ಆರಂಭಿಕರಿಗಾಗಿ ಸಂಪೂರ್ಣ ಹೂಡಿಕೆ ಮತ್ತು ಷೇರು ಮಾರುಕಟ್ಟೆ ಮಾರ್ಗದರ್ಶಿ

1. Finding best insurer

ಭಾರತದಲ್ಲಿ 30 ಕ್ಕೂ ಹೆಚ್ಚು ಆರೋಗ್ಯ ವಿಮೆ ಕಂಪನಿಗಳಿವೆ. ಇವುಗಳಲ್ಲಿ ಯಾವುದು ಉತ್ತಮವೆಂಬುದನ್ನು ನಾವು ಹುಡುಕಬೇಕು. ಇದಕ್ಕಾಗಿ ಉಂಟಾದ ಹಕ್ಕುಗಳ ಅನುಪಾತವನ್ನು(incurred claims ratio) ಪರಿಶೀಲಿಸಿ, ಇದರ ಅರ್ಥ ಒಂದು ವರ್ಷದಲ್ಲಿ amount of claim paid/amount of premiums collected. ಇನ್ಸೂರೆನ್ಸ್ ಕಂಪನಿ, ಈ ರೀತಿಯೇ ಕೆಲಸ ಮಾಡುತ್ತದೆ. ಅಂದರೆ ಅನೇಕ ಜನರಿಂದ ಪ್ರೀಮಿಯಂ ಸಂಗ್ರಹಿಸಿ, ಎಲ್ಲರೂ ಒಂದೇ ವರ್ಷದಲ್ಲಿ ಹಕ್ಕೊತ್ತಾಯ(claims) ಕೇಳಬಾರದೆಂದು ಯೋಚಿಸುತ್ತಾರೆ. ಕಂಪನಿಯ ಉಂಟಾದ ಹಕ್ಕುಗಳ ಅನುಪಾತವೂ ಇದನ್ನೇ ತಿಳಿಸುತ್ತದೆ. ಅಂದರೆ ಎಷ್ಟು ಪ್ರೀಮಿಯಂನಿಂದ ಗಳಿಸಿತು ಮತ್ತು ಎಷ್ಟು ಹಕ್ಕೊತ್ತಾಯದಲ್ಲಿ ನೀಡಿತು ಎಂಬುದಾಗಿದೆ.

ಇದರ ಶೇಕಡಾವಾರು ಕಡಿಮೆ ಇದ್ದರೆ ಕಂಪನಿ ಹಕ್ಕೊತ್ತಾಯವನ್ನು ಬೇಗನೆ ಪಾಸ್ ಮಾಡುತ್ತಿಲ್ಲ ಎಂದರ್ಥ. ಒಂದು ವೇಳೆ ಇದು 100% ಗಿಂತ ಅಧಿಕವಿದ್ದರೆ ಕಂಪನಿಯ ಪ್ರೀಮಿಯಂ ಗಳಿಸುವಿಗಿಂತ ಹಕ್ಕೊತ್ತಾಯ ಅಧಿಕವಾಗಿದೆ ಎಂದರ್ಥ. 80 ರಿಂದ 85ರಷ್ಟು ಇರುವ ಉಂಟಾದ ಹಕ್ಕುಗಳ ಅನುಪಾತವೂ ಆರೋಗ್ಯಕರವಾಗಿದೆ.

which health insurance company has the most complaints in india in kannada
best policies

ಇನ್ನು 10000 ಹಕ್ಕೊತ್ತಾಯದಲ್ಲಿ 36 ದೂರುಗಳು(complaints) ಸರಿ ಎನ್ನಲಾಗುತ್ತದೆ. ಇದರಲ್ಲಿ ಕೇರ್(care) ಮತ್ತು ಸ್ಟಾರ್(star) ಒಂದು ವರ್ಷದಲ್ಲಿ 36 ಕ್ಕಿಂತ ಅಧಿಕ ದೂರುಗಳನ್ನು ಹೊಂದಿವೆ. ಐಸಿಐಸಿಐ(icici) ಮತ್ತು ಹೆಚ್ಡಿಎಫ್ಸಿ(hdfc) ಒಂದೇ ಅಂಕಿಯ ದೂರುಗಳನ್ನು ಹೊಂದಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ಒಳ್ಳೆಯ ಕಂಪನಿಗಳು ತುಂಬಾ ಕಡಿಮೆ ಇವೆ. ಹಾಗಂತ ಈ ಪಾಲಿಸಿಗಳು ಬೇಕಂತಲೇ ಹಕ್ಕೊತ್ತಾಯ ತಿರಸ್ಕರಿಸುತ್ತಾರೆ ಎನ್ನುವುದಿಲ್ಲ. ಇವರುಗಳು ಕಾನೂನುಬದ್ಧವಾಗಿ(legally) ಹಕ್ಕೊತ್ತಾಯವನ್ನು ತಿರಸ್ಕರಿಸುತ್ತಾರೆ. ಹೀಗಾಗಿ ನೀವು ಪಾಲಿಸಿಯನ್ನು ಖರೀದಿಸುವಾಗ ಅದರಲ್ಲಿನ ಗುಪ್ತ ಪದಗಳು(hidden terms) ಮತ್ತು ಪರಿಸ್ಥಿತಿಗಳ(conditions) ಬಗ್ಗೆ ತಿಳಿಯಬೇಕು. ಅದರ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸುತ್ತೇವೆ. ಇದನ್ನು ನೋಡಿದ ನಂತರ ನಿಮ್ಮ ಪ್ರಸ್ತುತ ಪಾಲಿಸಿಯನ್ನು ಮೌಲ್ಯಮಾಪನ ಮಾಡಿ(evaluate). ಒಂದು ವೇಳೆ ಸರಿ ಎನಿಸದಿದರೆ ಒಳ್ಳೆಯ ಪಾಲಿಸಿ ಜೊತೆ ಪೋರ್ಟ್ ಮಾಡಿಸಿರಿ. ಪೋರ್ಟ್ ಮಾಡಿಸುವುದರಿಂದ ನೀವು ಕಾಯುವ ಅವಧಿಯಲ್ಲಿ(waiting period) ಇರಬೇಕಿರುವುದಿಲ್ಲ. ಆದರೆ ನೀವು ಪೋರ್ಟ್ನ ಸಮಯದಲ್ಲಿ ವಿಮಾ ಮೊತ್ತ(sum assured) ಹೆಚ್ಚಿಸಿದರೆ ಆ ಹೆಚ್ಚುವರಿ ವಿಮಾ ಮೊತ್ತಕ್ಕೆ ಕಾಯುವ ಅವಧಿ ಇರುತ್ತದೆ.

ಇದನ್ನು ಓದಿ: ಬಹು ಹಂತಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕತೆಯನ್ನು ಹೆಚ್ಚಿಸುವುದೇಗೆ?

2. How to find bad policies

how would you know if it is a good policy in kannada
3 evil features

ನೀವು ಒಳ್ಳೆಯ ಪಾಲಿಸಿಯನ್ನು ಖರೀದಿಸಲು 3 ದುಷ್ಟ ಲಕ್ಷಣಗಳನ್ನು(evil feature) ತಪ್ಪಿಸಬೇಕು. ಅವೆಂದರೆ, ಕೊಠಡಿ ಬಾಡಿಗೆ ಮಿತಿ(room rent limit), ರೋಗವಾರು ಉಪ ಮಿತಿ(disease wise sub limit) ಮತ್ತು ಸಹ-ಪಾವತಿ(co-pay). ಕೆಲವು ವಿಮೆಗಳಲ್ಲಿ ನಿಮಗೆ ಕೊಠಡಿ ಬಾಡಿಗೆ ಮಿತಿ ಇರುತ್ತದೆ. ಉದಾಹರಣೆಗೆ ವಿಮಾ ಮೊತ್ತದ 1% ಇಲ್ಲ ಕೋಣೆಯ ಪ್ರಕಾರದ(room type) ಬಗ್ಗೆ ತಿಳಿಸುತ್ತಾರೆ. ಅಂದರೆ ಏಕ ಹವಾನಿಯಂತ್ರಣ ಹೊಂದಿರುವ ಖಾಸಗಿ ಕೊಠಡಿ(single ac private room). ಉದಾಹರಣೆಗೆ, ನಿಮ್ಮ ವಿಮಾ ಮೊತ್ತ 10 ಲಕ್ಷವಿದೆ ಎಂದುಕೊಳ್ಳಿ. ನಿಮಗೆ ತಿಂಗಳ ಏಕ ಹವಾನಿಯಂತ್ರಣ ಹೊಂದಿರುವ ಖಾಸಗಿ ಕೊಠಡಿ ಮಾತ್ರ ಅನುಮತಿಸಿದೆ. ಅಂದರೆ ಆಸ್ಪತ್ರೆಯ ಕಡಿಮೆ ಬೆಲೆಯ ಕೊಠಡಿ ಇದಾಗಿರುತ್ತದೆ. ಅದು 3,000 ರೂ ಇದೆ ಎಂದುಕೊಳ್ಳಿ. ಆದರೆ ನೀವು ಪ್ರತಿ ರಾತ್ರಿಗೆ 5,000 ರೂ ಇರುವ ಕೊಠಡಿ ತೆಗೆದುಕೊಂಡಿರಿ ಎಂದುಕೊಳ್ಳಿ. ನೀವು 5 ದಿನ ದಾಖಲಾಗಿದ್ದರೆ(admit) ನಿಮ್ಮ ಕೊಠಡಿಯ ಬಾಡಿಗೆ 25,000 ರೂ ಆಗುತ್ತದೆ. ನಿಮ್ಮ ಶಸ್ತ್ರಚಿಕಿತ್ಸೆಯ ಬಿಲ್(surgery bill) 5 ಲಕ್ಷವಾಗಿದೆ ಎಂದುಕೊಳ್ಳಿ. ಆಗಿದ್ದರೆ, ನಿಮ್ಮ ಒಟ್ಟು ಬಿಲ್ 5,25,000 ರೂ ಆಗುತ್ತದೆ. ನೀವು 3,000 ರೂ ಬದಲು 5,000 ರೂ ಕೊಠಡಿ ತೆಗೆದುಕೊಂಡಿರುವುದರಿಂದ ಪ್ರತಿದಿನ 2,000 ರೂ ಅಧಿಕ ಖರ್ಚಾಗುತ್ತದೆ ಮತ್ತು ನೀವು 5 ದಿನಗಳಿಗೆ ದಾಖಲಾಗಿರುವುದರಿಂದ 10,000 ರೂ ನೀವೇ ಕೊಡಬೇಕು. ಉಳಿದ 5,15,000 ರೂ ನಿಮಗೆ ಹಕ್ಕೊತ್ತಾಯ ಸಿಗುತ್ತದೆ ಎಂದು ಭಾವಿಸುತ್ತೀರಾ.

ಆಗ ವಿಮೆ ಕಂಪನಿ ನಿಮಗೆ ನಿಮ್ಮ ಪಾಲಿಸಿಯಲ್ಲಿ ಇದ್ದ ಕೊಠಡಿ ಬಾಡಿಗೆ ಮಿತಿ ನಿಮ್ಮ ವಾಸ್ತವಿಕ ಕೊಠಡಿ ಬಾಡಿಗೆಯ 60% ಆಗಿದೆ ಎನ್ನುತ್ತದೆ. ಅಂದರೆ ನಿಮ್ಮ 5,25,000 ರೂ ದ ಹಕ್ಕೊತ್ತಾಯದಲ್ಲಿ 60% ಮಾತ್ರ ಸಿಗುತ್ತದೆ. ಅಂದರೆ 3,15,000 ರೂ. ಉಳಿದ 2,10,000 ರೂ ನೀವು ನಿಮ್ಮ ಜೇಬಿನಿಂದ ನೀಡಬೇಕು. ಈ ರೀತಿಯ ಪಾಲಿಸಿಗಳಿಂದ ಯಾವುದೇ ಪ್ರಯೋಜನವಿಲ್ಲ.

ರೋಗವಾರು ಉಪ ಮಿತಿ ಕೂಡ ಒಂದು ರೀತಿ ಮೋಸವಾಗಿದೆ. ಕಂಪನಿ ನಿಮ್ಮ ಹತ್ತಿರ 50 ಲಕ್ಷದ ವಿಮಾ ಮೊತ್ತ ಇದೇ ಎನ್ನುತ್ತಾರೆ. ಆದರೆ ನಿಮಗೆ 50 ಲಕ್ಷ ಹಕ್ಕೊತ್ತಾಯ ಮಾಡಬಹುದಾದ ಚಿಕಿತ್ಸೆ(treatment) ಸಿಗುವುದಿಲ್ಲ. ಏಕೆಂದರೆ ಪ್ರತಿಯೊಂದು ಚಿಕಿತ್ಸೆಯು ಪೂರ್ವನಿರ್ಧರಿತವಾಗಿದೆ(predefined) ಮತ್ತು ನೀವು ಅದಕ್ಕೆ ಗರಿಷ್ಠ ಎಷ್ಟು ಹಕ್ಕೊತ್ತಾಯ ಮಾಡಬಹುದೆಂಬ ಮಿತಿ ಹಾಕಿದ್ದಾರೆ. ಹೀಗಾಗಿ ರೋಗವಾರು ಉಪ ಮಿತಿ ಇರಬಾರದು.

ಇನ್ನು ಮೂರನೇಯದಾಗಿ ಸಹ-ಪಾವತಿ. ಅಂದರೆ ಸ್ವೀಕಾರಾರ್ಹ ಹಕ್ಕೊತ್ತಾಯ ಮೊತ್ತ(admissible claim amount). ಇದರಲ್ಲಿ ಕಂಪನಿ ಪಾವತಿ ಮಾಡಲು ಒಪ್ಪಿರುವ ಹಕ್ಕೊತ್ತಾಯ ಕೆಲವು ಶೇಕಡಾವಾರು ನಿಮ್ಮ ಜೇಬಿನಿಂದ ಪಾವತಿ ಮಾಡಿ ಎನ್ನುತ್ತಾರೆ. ಒಂದು ವೇಳೆ ನಿಮ್ಮ 15 ಲಕ್ಷದ ಪಾಲಿಸಿಯಲ್ಲಿ ಈ 3 ಲಕ್ಷಣಗಳು ಇದ್ದರೆ, ಆ ಪಾಲಿಸಿ ವ್ಯರ್ಥವಾಗಿದೆ.

what causes a bad policy in kannada
bad policy

ನಿಮ್ಮ ಪಾಲಿಸಿಯ ವಿಮಾ ಮೊತ್ತ 15 ಲಕ್ಷ, ನೀವು 10 ಲಕ್ಷ ಹಕ್ಕೊತ್ತಾಯ ಮಾಡುತ್ತೀರಾ. ಸ್ವೀಕಾರಾರ್ಹ ಹಕ್ಕೊತ್ತಾಯ ಮೊತ್ತ 8 ಲಕ್ಷ ಬಂದಿದೆ ಎಂದುಕೊಳ್ಳಿ. ಇದರಲ್ಲಿ ನೀವು ದುಬಾರಿ ಕೊಠಡಿ ತೆಗೆದುಕೊಂಡಿರುವುದರಿಂದ 2 ಲಕ್ಷ ಹೋಯಿತು. ಈ 8 ಲಕ್ಷದ, ಸ್ವೀಕಾರಾರ್ಹ ಹಕ್ಕೊತ್ತಾಯ ಮೊತ್ತದಲ್ಲಿ 20% ನೀವೇ ಸಹ-ಪಾವತಿ ಮಾಡಬೇಕು. ಅಂದರೆ ಅದು 2,40,000 ರೂ. ಇದರ ನಂತರ ಖಾಯಿಲೆಗೆ 5 ಲಕ್ಷದ ಉಪ ಮಿತಿ ಇದೆ ಎಂದು ತಿಳಿಯುತ್ತದೆ. ಇದರಲ್ಲಿ ಸ್ವೀಕಾರಾರ್ಹ ಹಕ್ಕೊತ್ತಾಯ ಮೊತ್ತ ಮತ್ತು ರೋಗವಾರು ಉಪ ಮಿತಿ ನೋಡಲಾಗುತ್ತದೆ ಮತ್ತು ಯಾವುದು ಕಡಿಮೆ ಇರುತ್ತದೆಯೋ ಅದನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ನಿಮಗೆ 5 ಲಕ್ಷ ಮಾತ್ರ ಸಿಗುತ್ತದೆ. 10 ಲಕ್ಷದ ಹಕ್ಕೊತ್ತಾಯದಲ್ಲಿ ಅರ್ಧ ಇಲ್ಲ ಅದಕ್ಕಿಂತ ಅಧಿಕ ನಿಮ್ಮ ಜೇಬಿನಿಂದ ಪಾವತಿ ಮಾಡಬೇಕಾಯಿತು. ಹೀಗಾಗಿ ಈ 3 ಲಕ್ಷಣಗಳು ಇರದ ಪಾಲಿಸಿಯನ್ನು ಹುಡುಕಿ.

ಇದನ್ನು ಓದಿ: ಹೂಡಿಕೆ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಸ್ಟೆಪ್ಗಳು

3. Filtering out good policies

how to choose the best policy in kannada
step 1
how to check policy details in policybazaar in kannada
step 2
how to choose a health insurance policy in kannada
step 3
which type of policy is best in kananda
step 4

ನೀವು ನಿಮಗೆ ಬೇಕಾದ ಏಜೆಂಟ್ ಇಲ್ಲ ಪಾಲಿಸಿ ಬಜಾರ್(policy bazzar) ವೆಬ್ಸೈಟ್ನಿಂದ ಪಾಲಿಸಿ ಖರೀದಿಸಬಹುದು. ಪಾಲಿಸಿ ಖರೀದಿಸುವಾಗ ನೀವು ಯಾರಿಗಾಗಿ ಪಾಲಿಸಿ ಖರೀದಿಸುತ್ತಿರುವಿರ ಎಂಬುದನ್ನು ಉಲ್ಲೇಖಿಸಿ. ನಿಮಗೆ ಯಾವುದಾದರೂ ಅಸ್ತಿತ್ವದಲ್ಲಿರುವ ರೋಗವಿದ್ದರೆ ಅದನ್ನು ಪ್ರಾಮಾಣಿಕವಾಗಿ ತಿಳಿಸಿ. ಇಲ್ಲ ನಿಮ್ಮ ಮೆಡಿಕಲ್ ಟೆಸ್ಟ್ ಆದಾಗ ಸಿಕ್ಕಿಕೊಳ್ಳುತೀರಾ. ಒಂದು ವೇಳೆ ನೀವು ಆಸ್ಪತ್ರೆಗೆ ದಾಖಲಾಗಿ ಇದರಲ್ಲಿ ಇರದ ಖಾಯಿಲೆ ಬಗ್ಗೆ ತಿಳಿದರೆ, ಹಕ್ಕೊತ್ತಾಯ ತಿರಸ್ಕರಿಸುವ ಅವಕಾಶವಿರುತ್ತದೆ. ನೀವು ನಿಮಗೆ ಬೇಕಾದ ವಿಮಾ ರಕ್ಷಣೆಯನ್ನು(cover) ಆಯ್ಕೆ ಮಾಡಿ. ಇದು ನೀವು ಎಲ್ಲಿ ಇದ್ದೀರಾ ಎಂಬುದರ ಮೇಲೆ ನಿಂತಿದೆ. ನಗರದಲ್ಲಿದರೆ ಅಧಿಕ ವಿಮಾ ರಕ್ಷಣೆ ಬೇಕಾಗಬಹುದು. ಅದೇ ಹಳ್ಳಿಯಲ್ಲಿದ್ದರೆ ಕಡಿಮೆ ವಿಮಾ ರಕ್ಷಣೆ ಸಾಕು. ಒಬ್ಬ ವಯಸ್ಕನಿಗೆ 15 ರಿಂದ 20 ಲಕ್ಷ ಮತ್ತು ಮಕ್ಕಳಿಗೆ 10 ಲಕ್ಷದ ವಿಮಾ ರಕ್ಷಣೆ ನಿಮ್ಮ ಹತ್ತಿರ ಇರಲೇಬೇಕು.

ಆದರೆ ನಾವು ಈ ಲೇಖನಕ್ಕೆ 25 ಲಕ್ಷದಿಂದ 1 ಕೋಟಿಯ ವಿಮಾ ರಕ್ಷಣೆಯನ್ನು ಆಯ್ಕೆ ಮಾಡುವೆವು. ನೀವು ಪಾಲಿಸಿ ಆಯ್ಕೆ ಮಾಡುವಾಗ ಫಿಲ್ಟರ್ಗೆ ಹೋದರೆ ಅನೇಕ ಆಯ್ಕೆಗಳನ್ನು(option) ನೋಡಬಹುದು. ಇದರಲ್ಲಿ ಪಾಲಿಸಿ ಪ್ರಯೋಜನಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಮುನ್ನ(pre hospitalization), ಆಸ್ಪತ್ರೆಗೆ ದಾಖಲಾದ ನಂತರ(post hospitalization), ಡೇ ಕೇರ್ ಚಿಕಿತ್ಸೆ(day care treatment) ಕಾಣಿಸುತ್ತದೆ. ಡೇ ಕೇರ್ ಚಿಕಿತ್ಸೆಯೆಂದರೆ ನೀವು 24 ಗಂಟೆ ಆಸ್ಪತ್ರೆಗೆ ದಾಖಲಾಗದಿರುವ ಖರ್ಚಾಗಿದೆ. ಇದು ಎಲ್ಲಾ ಪಾಲಿಸಿಯಲೂ ಸಾಮಾನ್ಯವಾಗಿ ಇರಬೇಕು. ಆದರೆ ವಿಮಾ ಕಂಪನಿಗಳು ಇದನ್ನು ವೈಶಿಷ್ಟ್ಯವಾಗಿ(feature) ನೀಡುತ್ತಾರೆ.

4. Types of waiting period

ನೀವು ಪಾಲಿಸಿ ತೆಗೆದುಕೊಂಡ 30 ದಿನ ಪ್ರಮಾಣಿತ ಕಾಯುವ ಅವಧಿ(standard waiting period) ಇರುತ್ತದೆ. ಆಗ ನೀವು ಅಪಘಾತ(accident) ಹೊರತುಪಡಿಸಿ ಇತರ ವಿಷಯಕ್ಕೆ ಹಕ್ಕೊತ್ತಾಯ ಮಾಡಲು ಸಾಧ್ಯವಿಲ್ಲ. ಇದರ ನಂತರ ಮೊದಲೇ ಇರುವ ರೋಗದ(pre existing disease) ಕಾಯುವ ಅವಧಿ ಇರುತ್ತದೆ. ಅದು 3 ವರ್ಷಗಳಿಗೆ ಇರಬಹುದು. ನೀವು ರೈಡರ್ ಹಾಕಿ ಇದನ್ನು ಕಡಿಮೆ ಮಾಡಿಕೊಳ್ಳಬಹುದು.

ಇದರ ನಂತರ ನಿರ್ದಿಷ್ಟ ರೋಗದ(specific disease) ಕಾಯುವ ಅವಧಿ ಬಗ್ಗೆ ನೀವು ತಿಳಿದಿರಬೇಕು. ಅಂದರೆ ನಿಧಾನವಾಗಿ ಬೆಳೆಯುವ ಕಾಯಿಲೆಗಳು ಉದಾಹರಣೆಗೆ, ಮೂತ್ರಪಿಂಡದ ಕಲ್ಲು(kidney stone) ಇತ್ಯಾದಿ. ಕೆಳಗೆ ಕಾಣುತ್ತಿರುವ ಪಟ್ಟಿಯಲ್ಲಿ ಇರುವ ಖಾಯಿಲೆಗಳಿಗೆ ನೀವು ಪಾಲಿಸಿ ತೆಗೆದುಕೊಂಡಾಗ ನಿಮಗೆ ಇವುಗಳು ಇಲ್ಲದಿದ್ದರೂ ಮೊದಲ 2 ವರ್ಷ ಇವುಗಳ ರಕ್ಷಣೆ ಸಿಗುವುದಿಲ್ಲ.

ಇದನ್ನು ಓದಿ: ರಾಬರ್ಟ್ ಗ್ರೀನ್ ಅವರ "The 48 Laws of Power" ಪುಸ್ತಕದ ಸಾರಾಂಶ

5. Pre and post hospitalization

ಇಂದು ಎಲ್ಲಾ ಪಾಲಿಸಿಯಲ್ಲೂ ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರ ಇರುತ್ತದೆ. ಇದರ ಅರ್ಥ ನಿಮ್ಮ ಶಸ್ತ್ರಚಿಕಿತ್ಸೆಯ ಮೊದಲ 60 ರಿಂದ 90 ದಿನದ ಖರ್ಚು ಮತ್ತು ಶಸ್ತ್ರಚಿಕಿತ್ಸೆಯ ನಂತರದ 180 ದಿನದ ಖರ್ಚುಗಳು ಇವುಗಳಿಂದ ರಕ್ಷಣೆಯಾಗುತ್ತದೆ. ಉದಾಹರಣೆಗೆ ನಿಮ್ಮ ಶಸ್ತ್ರಚಿಕಿತ್ಸೆಗಾಗಿ ಮಾಡಿಸಿದ ಹಲವಾರು ಟೆಸ್ಟ್ ಮತ್ತು ಸರ್ಜರಿಯ ನಂತರದ ಔಷಧಿ(medicine) ಅಥವಾ ಇತರ ಖರ್ಚುಗಳು ಇದರಲ್ಲಿ ಬರುತ್ತದೆ. ಅನೇಕರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ನಿಮಗೆ ಎಲ್ಲಾ ಬಿಲ್ಲನ್ನು ಕೂಡಿಟ್ಟು 180 ದಿನದ ನಂತರ ಹಕ್ಕೊತ್ತಾಯ ಮಾಡಿ.

6. No claim bonus

ಅಂದರೆ ನೀವು ಒಂದು ವರ್ಷ ಹಕ್ಕೊತ್ತಾಯ ಮಾಡದಿದ್ದರೆ ನಿಮ್ಮ ಹಕ್ಕೊತ್ತಾಯದಲ್ಲಿ ಸ್ವಲ್ಪ ರಕ್ಷಣೆ ಸಿಗುತ್ತದೆ. ಇದು ಎಷ್ಟು ಸಿಗುತ್ತದೆ ಎಂಬುದು ಪಾಲಿಸಿಗಳ ಮೇಲೆ ನಿಂತಿರುತ್ತದೆ. ಕೆಲವು ಪಾಲಿಸಿಗಳು 20% ನೀಡುತ್ತವೆ, ಕೆಲವು 50% ನೀಡುತ್ತವೆ. ವಿಮಾ ಕಂಪನಿಗಳು ಹಕ್ಕು ರಹಿತ ರಿಯಾಯಿತಿಯ(no claim bonus) ಹೆಸರನ್ನು ಬದಲಿಸಿ, ಬೋನಸ್ಸಾಗಿ ಮಾಡಿದ್ದಾರೆ. ಇಂದು ಈ ಕಂಪನಿಗಳು ನೀವು ಹಕ್ಕೊತ್ತಾಯ ಮಾಡಿ ಇಲ್ಲ ಮಾಡದಿದ್ದರೂ ನಿಮಗೆ 20% ಇಲ್ಲ 50% ಬೋನಸ್ ನೀಡುವೆ ಎನ್ನುತ್ತಾರೆ. ನೀವು ಹಕ್ಕೊತ್ತಾಯ ಮಾಡಿದ ನಂತರವೂ ನಿಮ್ಮ ಹಕ್ಕೊತ್ತಾಯದ ಬೋನಸ್ ಹೋಗುವುದಿಲ್ಲ.

ಇದನ್ನು ಓದಿ: ಅತ್ಯುತ್ತಮ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ಹೇಗೆ?

7. Restoration benefit

what is restore benefit in insurance in kannada
restoration benefit

ಇದರಲ್ಲಿ ನಿಮ್ಮ ವಿಮಾ ಮೊತ್ತ ಖಾಲಿಯಾದರೆ, ನಿಮ್ಮ ಮೂಲ ವಿಮಾ ಮೊತ್ತವನ್ನು(base sum assured) ಪುನಃಸ್ಥಾಪಿಸುತ್ತಾರೆ. ಇದು ಫ್ಯಾಮಿಲಿ ಫ್ಲೋಟರ್(family floater) ಪಾಲಿಸಿಗಳಲ್ಲಿ ಉಪಯುಕ್ತವಾಗಿದೆ. ಏಕೆಂದರೆ 4 ಜನರ ಪರಿವಾರದ ಹತ್ತಿರ 20 ಲಕ್ಷದ ಪಾಲಿಸಿ ಇದ್ದರೆ ಪ್ರತಿಯೊಬ್ಬರಿಗೂ 20 ಲಕ್ಷ ಸಿಗುವುದಿಲ್ಲ. ಇದು 20 ಲಕ್ಷದ ಮೂಲ ರಕ್ಷಣೆಯಾಗಿದೆ. ಒಂದು ವರ್ಷದಲ್ಲಿ ಒಬ್ಬ ಕುಟುಂಬದ ಸದಸ್ಯ ದೊಡ್ಡದಾಗಿ ಆಸ್ಪತ್ರೆಗೆ ದಾಖಲು ಬಂದು 20 ಲಕ್ಷ ಖಾಲಿಯಾದರೆ, ಉಳಿದ 3 ಜನರಿಗೆ ಆ ವರ್ಷ ರಕ್ಷಣೆ ಸಿಗುವುದಿಲ್ಲ. ಇಂತಹ ಸಮಯದಲ್ಲಿ ವಿಮಾ ಮೊತ್ತವನ್ನು ಪುನಃಸ್ಥಾಪಿಸಿದರೆ ಅವರಿಗೂ ಉಪಯುಕ್ತವಾಗಿದೆ.

ಕೆಲವು ಕಂಪನಿಗಳು ವರ್ಷದಲ್ಲಿ ಒಮ್ಮೆ ಪುನಃಸ್ಥಾಪಿಸಿದರೆ, ಕೆಲವು ಅನಿಯಮಿತ ಬಾರಿ ಮಾಡುತ್ತವೆ. ಒಂದು ವೇಳೆ ಅನಿಯಮಿತ ಇದ್ದರೆ 5 ಲಕ್ಷದ ಪಾಲಿಸಿ ಖರೀದಿಸಿ, ಯಾವಾಗಲೂ ಪುನಃಸ್ಥಾಪಿಸಬಹುದಲ್ಲ ಎನ್ನಬಹುದು. ಆದರೆ ಇದು ಸಾಧ್ಯವಿಲ್ಲ. ಏಕೆಂದರೆ ಇದಕ್ಕೆ ನೀವು ಹಕ್ಕು ಬಳಕೆಯ ಅನುಕ್ರಮವನ್ನು(claim utilization sequence) ಅರ್ಥಮಾಡಿಕೊಳ್ಳಬೇಕು. ಆ ಅನುಕ್ರಮ ಈ ರೀತಿ ಇರುತ್ತದೆ.

  • • Base sum assured
  • • No claim bonus
  • • Additional covers or Riders
  • • Restoration

ಈ ರೀತಿಯಾಗಿ ನೀವು ಈ ಪುನಃಸ್ಥಾಪನೆಯ ಪ್ರಯೋಜನವನ್ನು ಯಾವ ರೀತಿ ಪಡೆಯಬೇಕು ಎಂಬುದನ್ನು ವಿಮಾ ಕಂಪನಿಗಳೇ ನಿರ್ಧಾರ ಮಾಡುತ್ತಾರೆ. ಉದಾಹರಣೆಗೆ, ಪಾಲಿಸಿ a, ಹಕ್ಕೊತ್ತಾಯ ಮಾಡುತ್ತಿದ್ದೇವೆ ಎಂದುಕೊಳ್ಳಿ. ಇದರ ಮೂಲ ವಿಮಾ ಮೊತ್ತ 10 ಲಕ್ಷ, ಹಕ್ಕು ರಹಿತ ರಿಯಾಯಿತಿ 5 ಲಕ್ಷ, ಹೆಚ್ಚುವರಿ ರಕ್ಷಣೆ(additional cover) 10 ಲಕ್ಷ, ಇದರ ನಂತರ ಪುನಃಸ್ಥಾಪನೆಯ ಪ್ರಯೋಜನ 10 ಲಕ್ಷ ಅದು ಕೇವಲ ಕಾಗದದಲ್ಲಿ ಮಾತ್ರ ಇದೆ.

what is restoration amount in health insurance in kannada
restoration benefit policy a

ನೀವು 20 ಲಕ್ಷದ ಹಕ್ಕೊತ್ತಾಯ ಮಾಡಿದರೆ, ಮೊದಲ 10 ಲಕ್ಷ ಮೂಲ ವಿಮಾ ಮೊತ್ತದಿಂದ ತೆಗೆದುಕೊಳ್ಳಲಾಗುತ್ತದೆ. ಅದು ಖಾಲಿಯಾದ ಕಾರಣ 5 ಲಕ್ಷವನ್ನು ಹಕ್ಕು ರಹಿತ ರಿಯಾಯಿತಿಯಿಂದ ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಹೆಚ್ಚುವರಿ ರಕ್ಷಣೆಯಿಂದ 5 ಲಕ್ಷ ತೆಗೆದುಕೊಳ್ಳಲಾಗುತ್ತದೆ ಮತ್ತು 5 ಲಕ್ಷ ನಿಮ್ಮ ಹತ್ತಿರ ಇನ್ನು ಉಳಿದಿದೆ. ಈಗ ನಾವು 10 ಲಕ್ಷದ 2 ನೇ ಹಕ್ಕೊತ್ತಾಯ ಮಾಡುತ್ತೇವೆ ಎಂದುಕೊಳ್ಳಿ. ಈ ವಿಮಾ ಮೊತ್ತ 0 ಇದೆ. ಹಕ್ಕು ರಹಿತ ರಿಯಾಯಿತಿ ಕೂಡ 0 ಇದೆ. ಹೆಚ್ಚುವರಿ ರಕ್ಷಣೆಯಲ್ಲಿ 5 ಲಕ್ಷವಿದೆ ಅದನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು 5 ಲಕ್ಷ ನೀಡುತ್ತಾರೆ. ಉಳಿದ 5 ಲಕ್ಷವನ್ನು ನೀವು ನಿಮ್ಮ ಜೇಬಿನಿಂದ ನೀಡಬೇಕು.

what is the restoration of limits provision in insurance in kannada
restoration benefit policy a

ನೀವು ಪುನಃಸ್ಥಾಪನೆಯ ಮೊತ್ತ ಎಲ್ಲಿಗೆ ಹೋಯಿತು ಎಂದು ಕೇಳಬಹುದು. ಅದು ಕೇವಲ ಕಾಗದದಲ್ಲೇ ಉಳಿಯಿತು. ನಿಮಗೆ ಯಾವುದೇ ಹಕ್ಕೊತ್ತಾಯದಲ್ಲಿ ಮೂಲ ವಿಮಾ ಮೊತ್ತ, ಹಕ್ಕು ರಹಿತ ರಿಯಾಯಿತಿ, ಮತ್ತು ಹೆಚ್ಚುವರಿ ರಕ್ಷಣೆ 0 ಇದ್ದಾಗ ನಿಮ್ಮ ಮೂಲ ವಿಮಾ ಮೊತ್ತವನ್ನು ಪುನಃಸ್ಥಾಪನೆ ಮಾಡಲಾಗುತ್ತದೆ. ನಿಮ್ಮ 2 ನೇ ಹಕ್ಕೊತ್ತಾಯದಲ್ಲಿ ಹೆಚ್ಚುವರಿ ರಕ್ಷಣೆಯಲ್ಲಿ ಇದ್ದ 5 ಲಕ್ಷ ಹಕ್ಕೊತ್ತಾಯವಾಗಿ 5 ಲಕ್ಷ ನೀವೇ ಪಾವತಿಸಿದಿರಿ.

ಇನ್ನು 3 ನೇ ಹಕ್ಕೊತ್ತಾಯದಲ್ಲಿ ನಿಮ್ಮ ಮೂಲ ವಿಮಾ ಮೊತ್ತವನ್ನು ಪುನಃಸ್ಥಾಪನೆ ಮಾಡಲಾಗುತ್ತದೆ. ಆದರೆ ಇಲ್ಲಿ ಇರುವ ವಿಷಯವೆಂದರೆ ನೀವು ಆ ವರ್ಷದಲ್ಲಿ 3 ನೇ ಬಾರಿ ದಾಖಲಾಗುವಿರ(admit). ಏಕೆಂದರೆ ಮುಂದಿನ ವರ್ಷ ಮತ್ತೆ ಆ ಪಾಲಿಸಿ ನವೀಕರಿಸುತ್ತದೆ(renew). ಕೆಲವು ಪಾಲಿಸಿಗಳಲ್ಲಿ ಬೇರೆ ರೀತಿಯಲ್ಲಿ ಪ್ರಯೋಜನಗಳು ಸಿಗುತ್ತದೆ.

real restoration benefits in kannada
restoration benefit policy b

ಉದಾಹರಣೆಗೆ ಪಾಲಿಸಿ b, ತೆಗೆದುಕೊಳ್ಳೋಣ ಇದರ ಮೂಲ ವಿಮಾ ಮೊತ್ತ 10 ಲಕ್ಷ, ಹಕ್ಕು ರಹಿತ ರಿಯಾಯಿತಿ 5 ಲಕ್ಷ, ಹೆಚ್ಚುವರಿ ರಕ್ಷಣೆ 10 ಲಕ್ಷ, ಪುನಃಸ್ಥಾಪನೆಯ ಪ್ರಯೋಜನ 10 ಲಕ್ಷವಿದೆ, ಆದರೆ ಅದು ಕಾಗದದಲ್ಲಿ ಮಾತ್ರವಿದೆ. ನೀವೂ 20 ಲಕ್ಷದ ಹಕ್ಕೊತ್ತಾಯ ಮಾಡಿದರೆ 10 ಲಕ್ಷ ಮೂಲ ವಿಮಾ ಮೊತ್ತದಿಂದ, 5 ಲಕ್ಷ ಹಕ್ಕು ರಹಿತ ರಿಯಾಯಿತಿ ಮತ್ತು ಉಳಿದ 5 ಲಕ್ಷ ಹೆಚ್ಚುವರಿ ರಕ್ಷಣೆಯಿಂದ ತೆಗೆದುಕೊಳ್ಳಲಾಗುತ್ತದೆ. ಇನ್ನು ನಿಮ್ಮ ಹತ್ತಿರ 5 ಲಕ್ಷ ಹೆಚ್ಚುವರಿ ರಕ್ಷಣೆ ಉಳಿದಿದೆ. ಆದರೆ ಈ ಪಾಲಿಸಿಯ ನಿಯಮ ಮತ್ತು ಷರತ್ತುಗಳಲ್ಲಿ(terms & conditions) ನಿಮ್ಮ ಮೂಲ ವಿಮಾ ಮೊತ್ತ ಪೂರ್ತಿ ಇಲ್ಲ ಸ್ವಲ್ಪವಾದರೂ ಬಳಸಿದರೆ ಮುಂದಿನ ಹಕ್ಕೊತ್ತಾಯದಲ್ಲಿ ನೀವು ಅದನ್ನು ಪುನಃಸ್ಥಾಪನೆ ಮಾಡಿಸಬಹುದೆಂದಿತ್ತು.

ಹೀಗಾಗಿ ಇದರಲ್ಲಿ ನೀವು 10 ಲಕ್ಷದ 2 ನೇ ಹಕ್ಕೊತ್ತಾಯ ಮಾಡಿದಾಗ, 5 ಲಕ್ಷ ನಿಮ್ಮ ಹೆಚ್ಚುವರಿ ರಕ್ಷಣೆಯಿಂದ ತೆಗೆದುಕೊಳ್ಳಲಾಗುತ್ತದೆ ಮತ್ತು ಉಳಿದ 5 ಲಕ್ಷವನ್ನು ನಿಮ್ಮ ಪುನಃಸ್ಥಾಪನೆಯ ಮೊತ್ತದಿಂದ ತೆಗೆದುಕೊಳ್ಳಲಾಗುತ್ತದೆ. ಪುನಃಸ್ಥಾಪನೆಯ ಮೊತ್ತವೂ ನಿಮ್ಮ ಮೂಲ ವಿಮಾ ಮೊತ್ತದ ರೀತಿಯೇ ಇರುತ್ತದೆ. ಈ ಹಕ್ಕೊತ್ತಾಯದಲ್ಲಿ 5 ಲಕ್ಷದಷ್ಟು ಬೇಕಿದ್ದರಿಂದ ಅಷ್ಟನ್ನು ಮಾತ್ರ ಪುನಃಸ್ಥಾಪನೆಯಿಂದ ತೆಗೆದುಕೊಳ್ಳಲಾಯಿತು. ಇದರಿಂದ 2 ನೇ ಹಕ್ಕೊತ್ತಾಯದಲ್ಲಿ ನೀವು 5 ಲಕ್ಷ ನಿಮ್ಮ ಜೇಬಿನಿಂದ ನೀಡಬೇಕಿಲ್ಲ.

ಯಾವುದೇ ಪಾಲಿಸಿ ಅನಿಯಮಿತ ಪುನಃಸ್ಥಾಪನೆ ನೀಡಿದರೆ, ಅದು ಅದನ್ನು ಬಳಸಲು ಬಿಡುವುದೇ ಎಂಬುದನ್ನು ನೋಡಿ. ಅದು ಕೇವಲ ಕಾಗದದಲ್ಲಿ ಮಾತ್ರ ಇದೆಯೇ ಎಂದು ನೋಡಿ. ಕೆಲವೊಮ್ಮೆ ಅವರು ಆ ಪುನಃಸ್ಥಾಪನೆಯನ್ನು ಸಂಬಂಧವಿಲ್ಲದ ಕಾಯಿಲೆಗಳಿಗೆ(unrelated illness) ನೀಡುತ್ತಾರೆ ಹೊರತು ಸಂಬಂಧಿತ ಕಾಯಿಲೆಗಳಿಗೆ(related illness) ನೀಡುವುದಿಲ್ಲ. ಉದಾಹರಣೆಗೆ ಮೊದಲಿಗೆ ಹೃದಯಕ್ಕೆ ಸಂಬಂಧಿಸಿದಕ್ಕೆ ದಾಖಲಾಗಿ 2 ನೇ ಬಾರಿಯೂ ಹೃದಯಕ್ಕೆ ಸಂಬಂಧಿಸಿದಕ್ಕೆ ದಾಖಲಾದರೆ ಅದು ಸಂಬಂಧಿತ ಕಾಯಿಲೆಯಾಗಿದೆ. ಇದರಲ್ಲಿ ನಿಮಗೆ ಪುನಃಸ್ಥಾಪನೆ ಪ್ರಯೋಜನಗಳು ಸಿಗದಿರಬಹುದು. ಅದೇ ಕಾಲಿನ ಶಸ್ತ್ರಚಿಕಿತ್ಸೆಗೆ ಪ್ರಯೋಜನ ಸಿಗುತ್ತದೆ. ಕೆಲವೊಂದು ಪಾಲಿಸಿಯಲ್ಲಿ ಸಂಬಂಧಿತ ಕಾಯಿಲೆಗಳಿಗೆ ಪ್ರಯೋಜನ ನೀಡುತ್ತಾರೆ. ಆದರೆ ಮುಂದಿನ ಆಸ್ಪತ್ರೆಯ ದಾಖಲಿನಲ್ಲಿ 45 ದಿನಗಳ ಅಂತರವಿರಬೇಕು.

ಇದನ್ನು ಓದಿ: ETF ಹೂಡಿಕೆ ತಂತ್ರ

8. Zone based policy

what is zone based policy in kannada
zone based policy

ಕೆಲವೊಂದು ಪಾಲಿಸಿಗಳು ವಲಯ ಆಧಾರಿತವಿರುತ್ತವೆ. ಅಂದರೆ ನೀವು ಮೆಟ್ರೋ ನಗರದಲ್ಲಿ ಪಾಲಿಸಿ ಖರೀದಿಸಿದರೆ ಪ್ರೀಮಿಯಂ ಅಧಿಕವಿರುತ್ತದೆ. ಅದೇ ಶ್ರೇಣಿ- 3(tier- 3) ನಗರದಲ್ಲಿ ಖರೀದಿಸಿದರೆ ಪ್ರೀಮಿಯಂ ಕಡಿಮೆ ಇರುತ್ತದೆ. ಕಂಪನಿಗಳು ಈ ವಲಯದ ಮೇಲೂ ನಿಮಗೆ ತೊಂದರೆ ನೀಡಬಹುದು. ಉದಾಹರಣೆಗೆ ನೀವು ಪಾಲಿಸಿಯಲ್ಲಿ ನಿಮ್ಮ ಹಳ್ಳಿಯ ವಿಳಾಸವಾಕಿ, ನಗರದಲ್ಲಿ ಇದ್ದು ನಗರದಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಕಂಪನಿ ಹಳ್ಳಿಯಲ್ಲಿ ಚಿಕಿತ್ಸೆ ತೆಗೆದುಕೊಂಡರೆ 100% ಹಕ್ಕೊತ್ತಾಯ ಸಿಗುತ್ತದೆ. ನಗರದಲ್ಲಿ ತೆಗೆದುಕೊಂಡರೆ 20% ಸಹ- ಪಾವತಿ ನೀಡಬೇಕು ಎನ್ನುತ್ತದೆ. ಕೆಲವೊಂದು ಪಾಲಿಸಿಗಳಲ್ಲಿ ನೀವು ಈ ವಿಳಾಸವನ್ನು ಸರಿಯಾಗಿ ನವೀಕರಿಸಿದರೆ ಈ ಸಮಸ್ಯೆ ಬರುವುದಿಲ್ಲ. ಕೆಲವೊಂದು ಪಾಲಿಸಿಗಳಲ್ಲಿ ಈ ವಲಯ ರೀತಿಯ ಸಮಸ್ಯೆ ಇರುವುದಿಲ್ಲ.

ಇನ್ನೊಂದು ವೈಶಿಷ್ಟ್ಯವೆಂದರೆ ಉಪಭೋಗ್ಯ ವಸ್ತುಗಳಾಗಿದೆ(consumables). ಅಂದರೆ ಕೈಗವಸುಗಳು(gloves), ಪಿಪಿಇ ಕಿಟ್(ppe kit) ಇತ್ಯಾದಿಗಳು ಬರುತ್ತವೆ. ಇದು ಕೆಲವು ಪಾಲಿಸಿಗಳಲ್ಲಿ ಅಂತರ್ನಿರ್ಮಿತ(inbuilt) ಇರುತ್ತವೆ. ಕೆಲವೊಂದರಲ್ಲಿ ರೈಡರ್ ಆಗಿ ತೆಗೆದುಕೊಳ್ಳಬೇಕಾಗುತ್ತದೆ. ಇನ್ನೊಂದು ವೈಶಿಷ್ಟ್ಯವೆಂದರೆ ಉಚಿತ ಆರೋಗ್ಯ ತಪಾಸಣೆ(free health checkup) ಇದು ಕೂಡ ಕೆಲವೊಂದು ಪಾಲಿಸಿಯಲ್ಲಿ ಅಂತರ್ನಿರ್ಮಿತವಿರುತ್ತದೆ, ಕೆಲವೊಂದರಲ್ಲಿ ರೈಡರ್ ಆಗಿ ತೆಗೆದುಕೊಳ್ಳಬೇಕಿರುತ್ತದೆ.

ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶ

9. Riders, are they useful?

what are the benefits of riders in insurance in kannada
riders

ರೈಡರ್ ಬಗ್ಗೆ ತಿಳಿಸಬೇಕೆಂದರೆ ಕೆಲವೊಂದು ಪಾಲಿಸಿಗಳಲ್ಲಿ ಅನಿಯಮಿತ ಮರುಸ್ಥಾಪನೆ(unlimited restore) ಇರುತ್ತದೆ. ನಿಮಗೆ ಈ ಅನಿಯಮಿತ ಮರುಸ್ಥಾಪನೆ ಬೇಕೆಂದರೆ ಈ ರೈಡರನ್ನು ಸೇರಿಸಬಹುದು. ಇನ್ನೊಂದು ರೈಡರ್ ಎಂದರೆ ಅನಂತ ಕಾಳಜಿ(infinite care) ಅಂದರೆ 1 ಹಕ್ಕೊತ್ತಾಯದಲ್ಲಿ ಅನಂತ ಮೊತ್ತ ಹಕ್ಕೊತ್ತಾಯ ಮಾಡಬಹುದು. ಇದು ಜೀವನದಲ್ಲಿ ಒಂದು ಬಾರಿ ಇರುತ್ತದೆ ಹೊರತು ವರ್ಷಗಳಿಗೊಮ್ಮೆ ಇರುವುದಿಲ್ಲ. ಈ ರೈಡರನ್ನು ತುಂಬಾ ಕಡಿಮೆ ಜನಗಳು ಹಕ್ಕೊತ್ತಾಯ ಮಾಡುವರು ಎಂಬುದನ್ನು ತಲೆಯಲ್ಲಿಟ್ಟುಕೊಂಡು ಮಾಡಲಾಗಿದೆ. ಆದರೆ ಇದರ ನಿಯಮ ಮತ್ತು ಷರತ್ತುಗಳನ್ನು(terms & conditions) ನೋಡಿ ಖರೀದಿಸಿ. ಈ ರೈಡರ್ಗಿಂತ ನೀವು ಮೂಲ ವಿಮಾ ಮೊತ್ತ ಅಧಿಕವಿರುವ ಪಾಲಿಸಿ ಮೇಲೆ ಗಮನ ಹರಿಸುವುದು ಒಳ್ಳೆಯದು.

ಇನ್ನು ಶಕ್ತಿ ವರ್ಧಕ(power booster) ಇದರಲ್ಲಿ ನಿಮಗೆ ಪ್ರತಿ ವರ್ಷ ಹಕ್ಕೊತ್ತಾಯ ಮಾಡಿದರು ಇಲ್ಲ ಮಾಡದಿದ್ದರೂ 100% ವಿಮಾ ಮೊತ್ತ ಸಿಗುತ್ತದೆ. ಅಂದರೆ 50 ಲಕ್ಷದ ಪಾಲಿಸಿ ಮುಂದಿನ ವರ್ಷ 1 ಕೋಟಿ, ಮುಂದೆ 1.5 ಕೋಟಿ ಆಗುತ್ತದೆ. ಹೀಗೆ 10 ವರ್ಷದ ನಂತರ 5.5 ಕೋಟಿ ಆಗುತ್ತದೆ. ಈ ರೈಡರ್ ನಲ್ಲಿ ಯಾವುದೇ ಗುಪ್ತ ಸ್ಥಿತಿ(hidden condition) ಇಲ್ಲ. ಆದರೆ ನೀವು ನವೀಕರಣ ಮಾಡಿಸುವಾಗ ಈ ರೈಡರನ್ನು ತೆಗೆದರೆ ಇದರಲ್ಲಿ ಸಂಗ್ರಹಿಸಿದ ಎಲ್ಲಾ ಬೋನಸ್ 0 ಆಗುತ್ತದೆ.

ನೀವು ಈ ರೈಡರನ್ನು ನಾನು ಏಕೆ ತೆಗೆಯಬೇಕು ಎನ್ನಬಹುದು. ಇದು ಏಕೆಂದರೆ ನಿಮ್ಮ ಪ್ಲಾನ್ ಇಂದು ಕಡಿಮೆ ಬೆಲೆ ಇರಬಹುದು. ಆದರೆ ಆರೋಗ್ಯ ವಿಮೆಯ ಪ್ರೀಮಿಯಂ ವಯಸ್ಸಿನೊಂದಿಗೆ ಹೆಚ್ಚುತ್ತದೆ, ಟರ್ಮ್ ಪ್ಲಾನ್(term plan) ರೀತಿ ಸ್ಥಿರವಿರುವುದಿಲ್ಲ. ಇದರಿಂದ ಭವಿಷ್ಯದಲ್ಲಿ ನಿಮ್ಮ ಪ್ರೀಮಿಯಂ ಅಧಿಕವಾಗಿ ನೀವು ಈ ರೈಡರನ್ನು ತೆಗೆಯಲು ಯೋಚಿಸುತ್ತೀರಾ.

ಇನ್ನು ಜಂಪ್ ಸ್ಟಾರ್ಟ್(jump start) ಇದರಲ್ಲಿ ನಿಮ್ಮ ಮೊದಲೇ ಇರುವ ರೋಗದ ಕಾಯುವ ಅವಧಿ 3 ವರ್ಷ ಇರುವುದನ್ನು 30 ದಿನ ಮಾಡಬಹುದು. ಆದರೆ ಈ ರೈಡರ್ ತುಂಬಾ ದುಬಾರಿಯಾಗಿರುತ್ತದೆ. ಇದರ ನಿಯಮ ಮತ್ತು ಷರತ್ತುಗಳನ್ನು ಓದದೇ ಖರೀದಿಸಬೇಡಿ. ಈ ರೈಡರ್ 3 ವರ್ಷದ ನಂತರ ತೆಗೆಯಲಾಗುತ್ತದೆ. ಇದನ್ನು ತೆಗೆದರು ನಿಮ್ಮ ಪ್ರೀಮಿಯಂ ಕಡಿಮೆಯಾಗುವುದಿಲ್ಲ.

ಇನ್ನು ಹಕ್ಕು ರಕ್ಷಕ(claim protector) ಇದು ಕೂಡ ಕೈಗವಸುಗಳ ರೀತಿ ಇತರ ವಸ್ತುಗಳ ಖರ್ಚುಗಳಿಗಾಗಿ ಇರುವ ರೈಡರ್ ಆಗಿದೆ.

ಇನ್ನು PED ಕಾಯುವ ಅವಧಿ(PED waiting period) ಇದು ಕೂಡ ಕಾಯುವ ಅವಧಿಯ ರೈಡರ್ ಆಗಿದ್ದು, 3 ವರ್ಷದ ಬದಲು 2 ಇಲ್ಲ 1 ವರ್ಷ ಕಾಯುವ ಅವಧಿ ಮಾಡಲು ಈ ರೈಡರ್ ಸೇರಿಸಬಹುದು. ಆದರೆ ಇದು ಕೂಡ ದುಬಾರಿಯಾಗಿದೆ.

ಇನ್ನು ವಿಮಾ ರಕ್ಷಣೆ ಮೊತ್ತದ(sum insured protect) ರೈಡರ್, ಇದರಲ್ಲಿ ಹಿಂದಿನ ವರ್ಷದ ಹಣದುಬ್ಬರವನ್ನು(inflation) ನೋಡಿ ನಿಮ್ಮ ವಿಮಾ ಮೊತ್ತವನ್ನು ಹೆಚ್ಚಿಸಲಾಗುತ್ತದೆ.

ಇನ್ನು ಕೊಠಡಿ ಮಾರ್ಪಡಕ(room modifier), ಇದು ನೀವು ಯಾವುದೇ ಕೊಠಡಿ ತೆಗೆದುಕೊಳ್ಳಲು ಬಯಸಿದರೆ ಸೇರಿಸಿಕೊಳ್ಳಬಹುದು.

ಇನ್ನು ವಾರ್ಷಿಕ ಆರೋಗ್ಯ ತಪಾಸಣೆ(annual health checkup), ಈ ರೈಡರನ್ನು ವರ್ಷವೂ ಆರೋಗ್ಯ ತಪಾಸಣೆ ಮಾಡಿಸಲು ಸೇರಿಸಿಕೊಳ್ಳಬಹುದು.

ಇನ್ನು ಅನೇಕ ರೈಡರ್ಗಳು ಇವೆ. ನೀವು ಬೇಕಾದರೆ ಕೊಠಡಿ ಮಾರ್ಪಡಕ, ಹಣದುಬ್ಬರದ ವಿಮಾ ರಕ್ಷಣೆ ಮೊತ್ತ, ಹಕ್ಕು ರಕ್ಷಕ ರೈಡರ್ ಅನ್ನು ಸೇರಿಸಿಕೊಳ್ಳಬಹುದು.

ಇದನ್ನು ಓದಿ: ಶ್ರೀಮಂತರ 10 ಚಿಹ್ನೆಗಳು

10. How to reduce premium further

ಈಗ ನೀವು ನಾವು ಮುಂಚೆ ತಿಳಿಸಿದ ಎಲ್ಲಾ ವಿಧಾನವನ್ನು ಫಾಲೋ ಮಾಡಿ ರೈಡರ್ ಸೇರಿಸಿ ಪಾಲಿಸಿ ಆಯ್ಕೆ ಮಾಡಿರುವಿರಾ. ಈಗ ಪ್ರೀಮಿಯಂ ಅಧಿಕವಾಗಿದೆ. ಇದನ್ನು ಕಡಿಮೆ ಮಾಡಲು ಒಟ್ಟು ಕಳೆಯಬಹುದಾದ ಮೊತ್ತವನ್ನು(aggregate deductible) ನೀವು ಆಯ್ಕೆ ಮಾಡಬಹುದು.

ಇದನ್ನು ಆಯ್ಕೆ ಮಾಡಿದರೆ ನೀವು ವರ್ಷದಲ್ಲಿ ಆಸ್ಪತ್ರೆಗೆ ದಾಖಲಾದಾಗ ಮೊದಲ 50 ಸಾವಿರ ನೀವೇ ನೀಡುವಿರಾ ಎಂದರ್ಥ. 50 ಸಾವಿರದ ಮೇಲೆ ಹೋದರೆ ಹಕ್ಕೊತ್ತಾಯ ಸ್ವೀಕರಿಸಲಾಗುತ್ತದೆ. ಇದರ ಅರ್ಥ ನೀವು ವರ್ಷದಲ್ಲಿ 10 ಬಾರಿ ಹಕ್ಕೊತ್ತಾಯ ಮಾಡಿದರೆ 10 ಸಲ 50 ಸಾವಿರ ನೀವೇ ನೀಡಬೇಕೆಂದಲ್ಲ. ನಿಮ್ಮ ಆಸ್ಪತ್ರೆಗೆ ದಾಖಲಾದ ಮೊದಲ 50 ಸಾವಿರವನ್ನು ನೀವೂ ಪಾವತಿಸುತ್ತೀರಾ. ಇದು ಒಟ್ಟಾರೆಯಾಗಿ 1 ವರ್ಷದಲ್ಲಿ ಒಮ್ಮೆ 50 ಸಾವಿರ ರೂ ಪಾವತಿ ಮಾಡುವುದಾಗಿದೆ. ಇದನ್ನು ಆಯ್ಕೆ ಮಾಡುವುದರಿಂದ ನಿಮ್ಮ ಪ್ರೀಮಿಯಂ ಸ್ವಲ್ಪ ಕಡಿಮೆಯಾಗುತ್ತದೆ. ಇದನ್ನು ನೀವು 25 ಸಾವಿರ, 50 ಸಾವಿರ ಇಲ್ಲ 1 ಲಕ್ಷಕ್ಕೆ ಆಯ್ಕೆ ಮಾಡಬಹುದು.

ಇನ್ನೊಂದು ಮಾರ್ಗವೆಂದರೆ ಸೂಪರ್ ಟಾಪ್ ಅಪ್(super top up) ಪಾಲಿಸಿಯಾಗಿದೆ. ಇದು ಇತರ ಪಾಲಿಸಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ. ಏಕೆಂದರೆ ನೀವು ಆಯ್ಕೆ ಮಾಡುವ 5 ಲಕ್ಷ ಇಲ್ಲ 10 ಲಕ್ಷದ ರೀತಿ ನೀಡಿರುವ ಕಳೆಯಬಹುದಾದ(deductable) ತನಕ ಹಕ್ಕೊತ್ತಾಯ ಸಿಗುವುದಿಲ್ಲ. ಅದರ ಮೇಲಿನ ಹಕ್ಕೊತ್ತಾಯ ಸಿಗುತ್ತದೆ.

ಉದಾಹರಣೆಗೆ, ನೀವು 50 ಲಕ್ಷದ ಸೂಪರ್ ಟಾಪ್ ಆಫ್ ಪಾಲಿಸಿ ತೆಗೆದುಕೊಂಡಿರುವೆ ಎಂದುಕೊಳ್ಳಿ. ಅದರಲ್ಲಿ ಕಳೆಯಬಹುದಾದ ಮೊತ್ತವೂ 10 ಲಕ್ಷ ವಿದೆ ಎಂದುಕೊಳ್ಳಿ. ಇದರಿಂದ ಮೊದಲ 10 ಲಕ್ಷ ನೀವು ಹೊಂದಿಸಬೇಕು, 10 ಲಕ್ಷದ ಮೇಲಿನ ಹಕ್ಕೊತ್ತಾಯ ಟಾಪ್ ಆಫ್ನಿಂದ ಸಿಗುತ್ತದೆ. ಇಲ್ಲ ನೀವು ಕಳೆಯಬಹುದಾದ ಮೊತ್ತವನ್ನು ಆಯ್ಕೆ ಮಾಡುವುದು ನಿಮ್ಮ ಮುಖ್ಯ ವಿಮದಿಂದ ಕವರ್ ಆಗಿರಬೇಕು ಮತ್ತು ಅದರ ಮೇಲಿನದ್ದು ಈ ಸೂಪರ್ ಟಾಪ್ ಅಪ್ ನಿಂದ ಕವರ್ ಆಗುತ್ತದೆ.

ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು

11. I have a corporate policy, should i get a separate health policy

do i need a health insurance if I have company insurance in kannada
corporate policy

ಅನೇಕರು, "ನನಗೆ ಕಂಪನಿಯಿಂದ ಒಳ್ಳೆಯ ಆರೋಗ್ಯ ವಿಮೆ ಪಾಲಿಸಿ ದೊರೆತಿದೆ. ಆಗಿದ್ದರೆ ಇನ್ನೊಂದು ವಿಮೆ ಪಾಲಿಸಿ ತೆಗೆದುಕೊಳ್ಳಬೇಕೇ" ಎಂದು ಕೇಳುತ್ತಾರೆ. ನೀವು ತೆಗೆದುಕೊಳ್ಳಲೇಬೇಕು! ಏಕೆಂದರೆ ನೀವು ಕಂಪನಿ ತೊರೆದಾಗ ಅದನ್ನು ವೈಯಕ್ತಿಕ ಯೋಜನೆಯಾಗಿ(individual plan) ನಿಮ್ಮ ಕಂಪನಿ ಮಾಡಲು ಬಿಡುವುದಿಲ್ಲ. ಇದರಿಂದ ನಂತರ ನೀವು ಪಾಲಿಸಿಯನ್ನು ಖರೀದಿಸಲು ಹೋದರೆ ಕಾಯುವ ಅವಧಿ ಕಾಯಬೇಕು ಮತ್ತು ಹೆಚ್ಚುವರಿ ಪ್ರೀಮಿಯಂ ಕೂಡ ನೀಡಬೇಕಾಗುತ್ತದೆ. ಏಕೆಂದರೆ ನಿಮ್ಮ ವಯಸ್ಸು ಅಧಿಕವಾಗಿರುತ್ತದೆ.

12. Individual vs family floater plans

which is better, family floater or individual in kannada
individual vs family floater

ಸಮ ವಯಸ್ಸಿನ ಗುಂಪುನಲ್ಲಿ(similar age group) ಇರುವವರು ಫ್ಯಾಮಿಲಿ ಫ್ಲೋಟರ್ನಲ್ಲಿ ಸಂಯೋಜಿಸಿ. ನೀವು ನಿಮ್ಮ ಪೋಷಕರ ಜೊತೆಗೆ ಒಂದೇ ಪ್ಲಾನ್ನಲ್ಲಿ ಸಂಯೋಜನೆ ಆಗಲು ಹೋದರೆ ಅದು ಸರಿಯಾದ ನಿರ್ಧಾರವಾಗಿಲ್ಲ. ಏಕೆಂದರೆ ಆ ಪ್ಲಾನ್ನ ಪ್ರೀಮಿಯಂ ಅನ್ನು ಹಿರಿಯ ಸದಸ್ಯನನ್ನು(eldest member) ನೋಡಿ ನಿರ್ಧರಿಸುತ್ತಾರೆ. ಇದರಿಂದ ಪ್ರೀಮಿಯಂ ಅಧಿಕವಾಗುತ್ತದೆ. ಹೀಗಾಗಿ ನೀವು ನಿಮ್ಮ ಹೆಂಡತಿ ಒಂದು ಪ್ಲಾನ್, ನಿಮ್ಮ ಪೋಷಕರಿಗೆ ಒಂದು ಪ್ಲಾನ್ ತೆಗೆದುಕೊಳ್ಳಿ. ಮದುವೆ ಆಗಿಲ್ಲದಿದ್ದರೆ ಒಂಟಿ ಪ್ಲಾನ್(single plan) ತೆಗೆದುಕೊಳ್ಳಿ. ಮದುವೆಯಾದ ನಂತರ ಹೆಂಡತಿಯನ್ನು ಇದರಲ್ಲಿ ಸೇರಿಸಬಹುದು.

ಈ ಲೇಖನವನ್ನು ಕೇವಲ ಮಾಹಿತಿಗಾಗಿ ಮಾಡಲಾಗಿದೆ. ನೀವು ಯಾವುದೇ ವಿಮೆ ತೆಗೆದುಕೊಳ್ಳುವ ಮೊದಲು ಅದರಲ್ಲಿನ ನಿಯಮ ಮತ್ತು ಷರತ್ತುಗಳನ್ನು ಓದಿ ಪೂರ್ತಿ ಸಂಶೋಧನೆ ಮಾಡಿ ಖರೀದಿಸಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

;