Website designed by @coders.knowledge.

Website designed by @coders.knowledge.

5 Game Plan for Financial Freedom | ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

Watch Video

ಆರ್ಥಿಕತೆಯ ಸ್ವಾತಂತ್ರ, ನೀವು ಒಂದು ವೇಳೆ ನಿಮ್ಮ teen age ಅಥವಾ 20s ನಲ್ಲಿದ್ದಾರೆ, ಈ ಲೇಖನ ನಿಮಗೆ ತುಂಬಾ ಮುಖ್ಯ. ಏಕೆಂದರೆ ನೀವು ಆರ್ಥಿಕವಾಗಿ ಸ್ವಾತಂತ್ರ್ಯವನ್ನು ಗಳಿಸಲು ಯಾವುದಾದರೂ ಗೇಮ್ ಪ್ಲಾನ್ ಇದೆಯೇ ಎಂದು ಹುಡುಕುತ್ತೀರಾ? ಅದಕ್ಕಾಗಿ ಒಂದು ಗೇಮ್ ಪ್ಲಾನ್ ಇದೆ ಎಂದು ನಿಮಗೆ ತಿಳಿದಿದೆಯೇ?

ನಾವು ಇಲ್ಲಿ ತಿಳಿಸುವ ಐದು ಸಲಹೆಗಳನ್ನು ನೀವು ಅನುಸರಿಸಿದಲ್ಲಿ ನೀವು ಆರ್ಥಿಕವಾಗಿ ಸ್ವಾತಂತ್ರ್ಯರಾಗಬಹುದು. ಹೀಗಾಗಿ ಈ ಐದು ಸಲಹೆಗಳನ್ನು ಕೇಳಿದ ಬಳಿಕ ಅನುಸರಿಸಲು ಮರೆಯದಿರಿ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

1. ಒಂದು ವಿಷಯದಲ್ಲಿ ಮಾಸ್ಟರ್ ಆಗಿ.

master in one mahithi thana
master in one

ನಿಮ್ಮ ಹದಿಹರೆಯದಲ್ಲಿ(teenage) ನೀವು ತುಂಬಾ ಡಿಸ್ಟ್ರಕ್ಟ್ (distract) ಆಗಿರುತ್ತೀರಾ. ನಿಮಗೆ ಹಲವಾರು ಸಲಹೆಗಳು ಸಿಗುತ್ತವೆ. ಉದಾಹರಣೆಗೆ, ನೀನು ಈ ಕೋರ್ಸ್ ಮಾಡು, ಆ ಡಿಗ್ರಿಯನ್ನು ತೆಗೆದುಕೋ, ಆಗ ನಿನಗೆ ಆ ಕೆಲಸ ಸಿಗುತ್ತದೆ, ನಿನ್ನ ಲೈಫ್ ಸೆಟ್ ಆಗುತ್ತದೆ ಅಂತ. ನೀವು ಈ ರೀತಿಯ ಅನೇಕ ಸಲಹೆಗಳಿಂದ ಡಿಸ್ಟ್ರಕ್ಟ್ಡ್ ಆಗುತ್ತೀರಾ.

ಇದರಿಂದ ಹೊರಗೆ ಬರಲು ನೀವು ಮಾಸ್ಟರ್ ಆಗಬಹುದಾದ ಒಂದು ವಿಷಯ ಯಾವುದು ಎಂದು ತಿಳಿದುಕೊಳ್ಳಿ. ಅದು ಡ್ಯಾನ್ಸ್, ಕುಕ್ಕಿಂಗ್, ಮ್ಯೂಸಿಕ್ ರೀತಿಯ ಯಾವುದೇ ಒಂದು ಕ್ಷೇತ್ರ(field) ವಾಗಿರಬಹುದು. ಏಕೆಂದರೆ ನಾವು ಚಿಕ್ಕ ವಯಸ್ಸಿನಿಂದ ಒಂದು ಲೂಪ್ ಅನುಸರಿಸುತ್ತಿದ್ದೇವೆ. ಚಿಕ್ಕವರಿದ್ದಾಗ ಎಷ್ಟೋ ವಿಷಯಗಳನ್ನು ಓದುತ್ತೇವೆ. ಅದಾದ ನಂತರ ಕೆಲವೊಂದು ಡಿಗ್ರಿಗಳನ್ನು ತೆಗೆದುಕೊಂಡು, ನಮಗಿಷ್ಟ ಅಥವಾ ನನಗಿಷ್ಟವಿಲ್ಲದ ಕೆಲಸಕ್ಕೆ ಸೇರಿಕೊಳ್ಳುತ್ತೇವೆ. ಇದಕ್ಕೆ ನಿಮ್ಮ ಜೀವನದ ತುಂಬಾ ಸಮಯ ಹೋಗುತ್ತದೆ.

ನೀವು ಆಗ ಬೇರೆ ಕೆಲಸ ಕಲಿಯಲು ಬಯಸಿದರೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ನಿಮ್ಮ ಬದುಕಿನ ಈ ಪ್ರಾರಂಭದಲ್ಲಿ ನಿಮಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ತಿಳಿದುಕೊಳ್ಳಿ. ಅದು ಡ್ಯಾನ್ಸ್ ಆಗಿದ್ದರೆ ಡ್ಯಾನ್ಸ್ ನಲ್ಲಿ ಮಾಸ್ಟರ್ ಆಗಿ. ಬೆಂಕಿ ತರ ಡ್ಯಾನ್ಸ್ ಮಾಡಿ. ನಮ್ಮ ಶಿಕ್ಷಣ ಪದ್ಧತಿ ಈ ರೀತಿಯ ಪಠ್ಯೇತರ ಚಟುವಟಿಕೆಗಳ(extracurricular activity) ಮೇಲೆ ಅಷ್ಟು ಗಮನ ಹರಿಸುವುದಿಲ್ಲ.

ನೀವು ಪಬ್ಲಿಕ್ ಸ್ಪೀಕಿಂಗ್, ಮ್ಯೂಸಿಕ್, ಕುಕ್ಕಿಂಗ್ ರೀತಿಯ ಇತ್ಯಾದಿ ಕ್ಷೇತ್ರಗಳನ್ನು ನೋಡಿದರೆ ಎಲ್ಲದರಲ್ಲೂ ಜನಗಳು ಇಂದು ಹಣವನ್ನು ಗಳಿಸುತ್ತಿದ್ದಾರೆ. ಅವರು ಏಕೆ ಹಣ ಗಳಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ. ಏಕೆಂದರೆ ಅವರು ಅವರ ಕ್ಷೇತ್ರದಲ್ಲಿ ಮಾಸ್ಟರ್ ಆಗಿರುವ ಕಾರಣ ಹಣವನ್ನು ಗಳಿಸುತ್ತಿದ್ದಾರೆ.

ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳು

2. ಹಣದ ಹಿಂದೆ ಹೋಗಿ.

think of money  mahithi thana
think of money

ತುಂಬಾ ಜನ ನಿಮಗೆ ಹಣದ ಹಿಂದೆ ಹೋಗಬೇಡಿ ಎಂದು ಸಲಹೆ ನೀಡುತ್ತಾರೆ. ಆ ರೀತಿ ಹೇಳುವವರ ಹತ್ತಿರ ಒಂದು ಹಣ ಇರುವುದಿಲ್ಲ, ಇಲ್ಲ ಎಷ್ಟು ಹಣ ಇರುತ್ತದೆಯೆಂದರೆ ಪ್ರವಚನ ನೀಡುತ್ತಿರುತ್ತಾರೆ. ಹಣದ ಹಿಂದೆ ಹೋಗದೆ ಇನ್ಯಾವುದರ ಹಿಂದೆ ಹೋಗಬೇಕು. ಹಣದ ಹಿಂದೆ ಹೋಗಬೇಕು ಆದರೆ ಅದನ್ನು ತಪ್ಪಿನ ಹಾದಿಯಲ್ಲಿ ಗಳಿಸಬಾರದು.

ನೀವು ಜನಗಳಿಗೆ ಮೌಲ್ಯವನ್ನು ನೀಡಿದಾಗ ನಿಮಗೆ ಹಣ ಸಿಗುತ್ತದೆ. ಇದಕ್ಕಾಗಿ ನೀವು ಹಣವನ್ನು ನೀಡುವಂತಹ ಒಂದು ವ್ಯವಸ್ಥೆ(system) ಮಾಡಿ. ಉದಾಹರಣೆಗೆ ನಿಮಗೆ ಕುಕ್ಕಿಂಗ್ ಎಂದರೆ ಇಷ್ಟ ಆದರೆ ಹಣದ ಹಿಂದೆ ನೀವು ಹೋಗುವುದಿಲ್ಲ, ಅದು ತಪ್ಪು. ಹಣ ಹೇಗೆ ಬರುತ್ತದೆ ಎಂದು ಯೋಚಿಸಿ?

ನಾನು ಕುಕ್ಕಿಂಗ್ ವೀಡಿಯೋ ಮಾಡಿ ಆನ್‌ಲೈನ್‌ನಲ್ಲಿ ಹಾಕಿದರೆ ಜನರು ನೋಡುತ್ತಾರೆಯೇ? ಖಂಡಿತ ನೋಡುತ್ತಾರೆ. ನಾನು ನನ್ನ ಕುಕ್ಕಿಂಗ್ ಟಿಪ್ಸ್ ಗಳ ವೆಬ್ ಕ್ಲಾಸ್ ತೆಗೆದುಕೊಳ್ಳಬಹುದೇ? ಖಂಡಿತಾ. ಇದರಿಂದ ನಾನು ಜನಗಳಿಗೆ ಮೌಲ್ಯ ನೀಡುತ್ತೇನೆಯೇ? ಹೌದು. ಇದರಿಂದ ಒಂದು ವ್ಯವಸ್ಥೆ ಆಗಿದೆಯೇ? ಹೌದು. ಇದರಿಂದ ಹಣ ಬರುತ್ತಿದೆಯೇ, ಹೌದು. ಆಗಿದ್ದರೆ ಅದನ್ನು ಮಾಡಿ.

ಇದು ಕೇವಲ ಕುಕ್ಕಿಂಗ್ ಮಾತ್ರವಲ್ಲದೆ ಡ್ಯಾನ್ಸ್, ಮ್ಯೂಸಿಕ್, ಪಬ್ಲಿಕ್ ಸ್ಪೀಕಿಂಗ್ ಇತ್ಯಾದಿ ಕ್ಷೇತ್ರಗಳಿಗೆ ಅನ್ವಯವಾಗುತ್ತದೆ. ಹೀಗಾಗಿ ನೀವು ಪ್ರತಿದಿನ ಹಣ ಗಳಿಸುವ ಐಡಿಯಾಗಳ ಬಗ್ಗೆ ಯೋಚಿಸಬೇಕು.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

3. ಅಭ್ಯಾಸ ಅಥವಾ ಪ್ಯಾಸಿವ್ ಇನ್ಕಮ್ ನೀಡುವ ಕ್ರಿಯೇಟಿವ್ ವಸ್ತುಗಳ ಮೇಲೆ ನಿಮ್ಮ ಸಮಯ ನೀಡಿ.

passive income mahithi thana
passive income

ನಿಮ್ಮ ಜೀವನದ ಒಂದೊಂದು ದಿನ ಅಮೂಲ್ಯವಾಗಿದೆ. ಹೀಗಾಗಿ ನಿಮ್ಮ ದಿನವನ್ನು ಕೇವಲ ವೀಡಿಯೊ ಗೇಮ್ ಆಡುತ್ತಾ, ಇತರ ಜನರೊಂದಿಗೆ ಕೆಲಸಕ್ಕೆ ಬಾರದ ವಿಷಯಗಳನ್ನು ಮಾತಾಡುತ್ತ ಕಳೆಯಬೇಡಿ. ಈ ಜಗತ್ತಿನಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲದಿರುವುದು ಸಮಯ. ಹೀಗಾಗಿ ನಿಮ್ಮ ಸಮಯವನ್ನು ಎರಡು ವಿಷಯಕ್ಕೆ ನೀಡಿ ಒಂದು ಏನನ್ನಾದರೂ ಅಭ್ಯಾಸ ಮಾಡಲು ಇನ್ನೊಂದು ನಿಷ್ಕ್ರಿಯ ಆದಾಯ(passive income) ಕೊಡುವುದನ್ನು ನಿರ್ಮಿಸಲು.

ಪ್ಯಾಸಿವ್ ಇನ್ಕಮ್ ಎಂದರೆ ಕೆಲಸ ಮಾಡದಿದ್ದರೂ ಹಣ ಬರುವುದು. ಅದನ್ನು ಗಳಿಸಲು ನೀವು ಒಂದು ವ್ಯವಸ್ಥೆಯನ್ನು ನಿರ್ಮಿಸಲೇಬೇಕು. ಪ್ರಾರಂಭದಲ್ಲಿ ನೀವು ಅದರ ಮೇಲೆ ಕೆಲಸ ಮಾಡಿ ನಂತರದ ದಿನಗಳಲ್ಲಿ ಅದು ನಿಮಗೆ ಪ್ಯಾಸಿವ್ ಇನ್ಕಮ್ ನೀಡುತ್ತಾ ಹೋಗುತ್ತದೆ. ಮನೆಯಲ್ಲಿ ನಿಮ್ಮ ಪೋಷಕರು ಕೆಲಸಕ್ಕೆ ಹೋಗಬಾರದೇ ಎಂದು ಹೇಳುವ ಮೊದಲು ನೀವು ಈ ಪ್ಯಾಸಿವ್ ಇನ್ಕಮ್ ನೀಡುವ ಒಂದು ವ್ಯವಸ್ಥೆಯನ್ನು ನಿರ್ಮಿಸಿ.

ಪ್ಯಾಸಿವ್ ಇನ್ಕಮ್ ಬಂದರೆ ನೀವು ಹಣದ ಚಕ್ರವ್ಯೂಹದಿಂದ ದೂರವಿರುತ್ತೀರಿ ಮತ್ತು ಅದನ್ನು ಗಳಿಸಲು ನಿಮಗಿಷ್ಟವಾದ ಕೆಲಸವನ್ನು ಮಾಡುತ್ತಿರುತ್ತೀರಿ. ನೀವು ಕೆಲಸ ಮಾಡಿದರೆ ಮಾತ್ರ ಹಣ ಸಿಗುವ ಬಲೆಗೆ(trap) ಸಿಕ್ಕಿಕೊಳ್ಳಬೇಡಿ. ಪ್ಯಾಸಿವ್ ಇನ್ಕಮ್ ನೀಡುವ ಐಡಿಯಾವನ್ನು ಯೋಚಿಸುತ್ತೀರಿ.


ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?

4. ವ್ಯಾಪಾರೋದ್ಯಮ ಮತ್ತು ಗುರುತು(marketing and branding).

marketing and branding mahithi thana
marketing and branding

ನೀವು ಸ್ಟೇಜ್ ಮೇಲೆ ಬೆಂಕಿ ತರ ಡ್ಯಾನ್ಸ್ ಮಾಡುತ್ತೀರಾ. ಆದರೆ ನಿಮ್ಮ ಬಗ್ಗೆ ಯಾರಿಗೂ ತಿಳಿದಿಲ್ಲ. ಆಗ ನೀವು ತುಂಬಾ ಹಣ ಗಳಿಸಲು ಸಾಧ್ಯವಿಲ್ಲ. ಉದಾಹರಣೆಗೆ ವಿರಾಟ್ ಕೊಹ್ಲಿ ತೆಗೆದುಕೊಳ್ಳೋಣ. ನಿಮಗೆ ವಿರಾಟ್ ಕೊಹ್ಲಿ ಗೊತ್ತು. ಅವರು ಹಣ ಮಾಡುತ್ತಿದ್ದಾರೆಯೇ?, ಹೌದು. ಇದಕ್ಕೆ ಕಾರಣ ಅವರು ತಮ್ಮ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಚೆನ್ನಾಗಿ ಮಾಡಿದ್ದಾರೆ.

ಡ್ಯಾನ್ಸ್ನಲ್ಲಿ ನಾವು ಮೈಕಲ್ ಜಾಕ್ಸನ್, ಪ್ರಭುದೇವ್ ಮತ್ತು ನಮ್ಮ ಪುನೀತ್ ರಾಜ್ ಕುಮಾರ್ ಅವರನ್ನು ತೆಗೆದುಕೊಳ್ಳಬಹುದು. ನೀವು ಯಾವುದೇ ಕ್ಷೇತ್ರ ಆರಿಸಿಕೊಂಡರು ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಅವಶ್ಯಕವಾಗಿದೆ. ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಚೆನ್ನಾಗಿಲ್ಲವೆಂದರೆ ಒಂದು ಚಿಕ್ಕ ಅಂಗಡಿ ಕೂಡ ನಡೆಯುವುದಿಲ್ಲ. ಅದು ಯಾವುದೇ ಅಂಗಡಿ ಆಗಿರಬಹುದು. ಹೀಗಾಗಿ ನೀವು ನಿಮ್ಮ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗನ್ನು ನಿಮ್ಮ ಬಾಲ್ಯದಿಂದಲೇ ಗಮನಹರಿಸಿ. ಇದನ್ನು ಶಾಲೆಗಳಲ್ಲಿ ಕಲಿಸುವುದಿಲ್ಲ.

ನೀವು ನಿಮ್ಮನ್ನು ಕೇಳಿಕೊಳ್ಳಿ ನನ್ನನ್ನು ಎಷ್ಟು ಜನ ತಿಳಿದಿದ್ದಾರೆ. ಒಂದು ವೇಳೆ ಅದರ ಉತ್ತರ 100 ಜನ ಆಗಿದ್ದಲ್ಲಿ, ಅದನ್ನು 1,000 ಮಾಡುವುದು ಹೇಗೆ ಎಂಬುದನ್ನು ಯೋಚಿಸಿ, ಅದಾದ ನಂತರ 10,000 ಜನ, ನಂತರ 1 ಲಕ್ಷ ಮಾಡುವುದು ಹೇಗೆ ಮತ್ತು ಹೀಗೆ ಮುಂದುವರೆಯಲಿ. ಜನಗಳು ನಿಮ್ಮನ್ನು ಗುರುತಿಸಲು ಪ್ರಾರಂಭಿಸಿದಾಗ ನಿಮಗೆ ಹಣ ಗಳಿಸುವ ಹಲವಾರು ಅವಕಾಶಗಳು ಸಿಗುತ್ತವೆ. ಅವಕಾಶ ಜನಗಳಿಗೆ ಗೊತ್ತಿರುವ ವ್ಯಕ್ತಿಗೆ ಮಾತ್ರ ಸಿಗುತ್ತದೆ ಆ ಜನಗಳಿಗೆ ಸಿಗುವುದಿಲ್ಲ.

ಈ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗನ್ನು ನೀವೇ ಸ್ವತಃ ಕಲಿಯಬೇಕು ಯಾರು ಇದನ್ನು ಕಲಿಸುವುದಿಲ್ಲ. ನಿಮ್ಮ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗನ್ನು ನಿಮ್ಮಿಂದಲೇ ಪ್ರಾರಂಭಿಸಿ. ನಿಮ್ಮ ಐಡಿಯಾದ ಮಾರ್ಕೆಟಿಂಗ್ ಮಾಡಿ. ಉದಾಹರಣೆಗೆ ನೀವು ಆನ್‌ಲೈನ್‌ನಲ್ಲಿ ಕುಕ್ಕಿಂಗ್ ಅಂತ ಸರ್ಚ್ ಮಾಡಿ ತುಂಬಾ ಜನ ಸಿಗುತ್ತಾರೆ. ಅವರ ಸಿಗಲು ಕಾರಣ ಅವರು ಮಾಡಿರುವ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್. ಅವರು ಅದರಿಂದ ಹಣವನ್ನು ಗಳಿಸುತ್ತಿದ್ದಾರೆ. ನೀವು ಈ ರೀತಿ ಹಣ ಗಳಿಸಲು ಬಯಸಿದರೆ ಮೊದಲು ನೀವು ಮಾಸ್ಟರ್ ಆಗುವ ಒಂದು ಕ್ಷೇತ್ರವನ್ನು ಆರಿಸಿಕೊಳ್ಳಿ.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

5. ಗೆಲುವಿನ ಯೋಚನೆ ಇರುವ ಜನರಿಂದ ಸುತ್ತುವರೆದಿರಿ.

follow successful people mahithi thana
search for successful people

ಒಬ್ಬನಿಗೆ ಒಂದು ವಿಷಯದಲ್ಲಿ ಪ್ರತಿಭೆ(talent) ಇರುತ್ತದೆ. ಆ ಪ್ರತಿಭೆ ಅದರ ಬಗ್ಗೆ ಗೊತ್ತಿರದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆ ಆಗುತ್ತದೆ. ನಿಮಗೆ ತೆಲುಗು ಭಾಷೆ ಬರುವುದಿಲ್ಲ ಎಂದುಕೊಳ್ಳಿ. ಇನ್ನೊಬ್ಬ ವ್ಯಕ್ತಿಗೆ ತೆಲುಗು ಭಾಷೆ ಬರುತ್ತದೆ. ನೀವು ಆತನ ಜೊತೆ ಸಮಯ ಕಳೆದರೆ ನಿಮಗೆ ತೆಲುಗು ಭಾಷೆ ಬರುತ್ತದೆ. ಇದು ಸಕಾರಾತ್ಮಕವಾಯಿತು ಇದರ ನಕಾರಾತ್ಮಕ ಭಾಗವು ಇದೆ.

ಒಂದು ವೇಳೆ ಆ ತೆಲುಗು ಮಾತನಾಡುವ ವ್ಯಕ್ತಿ ಮದ್ಯಪಾನ, ಧೂಮಪಾನ ಮಾಡುತ್ತಿದ್ದರೆ ನೀವು ಕೂಡ ಅದನ್ನು ಮಾಡಲು ಪ್ರಾರಂಭಿಸಬಹುದು. ಇದೆಲ್ಲಾ ನಿಮ್ಮ ಮೇಲೆ ಬಿಟ್ಟಿದ್ದು. ನೀವು ಗೆಲುವಿನ ಬಗ್ಗೆ ಯೋಚಿಸುವವರ ಜೊತೆ ಇದ್ದರೆ ನೀವು ಗೆಲ್ಲುತ್ತೀರಿ. ಏಕೆಂದರೆ ಗೆಲುವು ಹಾಗೇ ಬರುವುದಿಲ್ಲ. ಆ ವ್ಯಕ್ತಿ ಕೆಲವು ರೀತಿಯ ಆ್ಯಕ್ಷನ್ ಮೇಲೆ ಫೋಕಸ್ ಮಾಡುತ್ತಿರುವುದರಿಂದ ಗೆಲುವು ಸಾಧಿಸುತ್ತಾರೆ.

ಇಲ್ಲಿ ನಾವು ಗೆಲುವಿನ ಬಗ್ಗೆ ಮಾತನಾಡುವವರ ಬಗ್ಗೆ ಮಾತನಾಡುತ್ತಿಲ್ಲ. ಅದರ ಬಗ್ಗೆ ಮಾತಾಡುವವರು ತುಂಬಾ ಜನ ಸಿಗುತ್ತಾರೆ. ಯಾರು ಕೇವಲ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಯಾರು ನಿಜವಾಗಿಯೂ ಗೆಲುವನ್ನು ಸಾಧಿಸಿದ್ದಾರೆ ಎಂಬುದನ್ನು ಕಂಡುಹಿಡಿಯುವುದು ನಿಮ್ಮ ಮೇಲೆ ಬಿಟ್ಟಿದ್ದು. ಶ್ರೀಮಂತರಾಗುವುದಕ್ಕೂ, ಶ್ರೀಮಂತರಾಗುತ್ತೇವೆ ಎಂಬುದನ್ನು ಮಾತನಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.

ನೀವು ಗೆಲುವು ಸಾಧಿಸಿದ ವ್ಯಕ್ತಿಗಳನ್ನು ಹುಡುಕುತ್ತಿರಬೇಕು ಮತ್ತು ನಿಮ್ಮ ಈ ಸರ್ಕಲ್ಲನ್ನು ಬಳಸುತ್ತಿರಬೇಕು. ಇಂದು ನಿಮ್ಮ ಸರ್ಕಲ್ನಲ್ಲಿ ಹತ್ತು ಜನ ಇದ್ದಾರೆ ಎಂದುಕೊಳ್ಳಿ. ನೀವು ಅವರ ಮಟ್ಟಕ್ಕೆ(level) ಬರುತ್ತೀರಾ. ಆಗ ನೀವು ಇನ್ನಷ್ಟು ಜನರನ್ನು ನಿಮ್ಮ ಸರ್ಕಲ್?ಗೆ ತೆಗೆದುಕೊಂಡು ಬನ್ನಿ. ನೀವು ಆ ಹತ್ತು ಜನರಲ್ಲಿ 5 ಜನರನ್ನ ತೆಗೆದು ಮತ್ತೆ ನಿಮಗಿಂತ ಅತ್ಯುತ್ತಮರಾದ 5 ಜನರನ್ನು ಆರಿಸಿಕೊಳ್ಳಬೇಕು.

ಕೆಲವು ಯಶಸ್ವಿ ಜನರು ನಿಮ್ಮ ರೀಚ್ ನಲ್ಲಿ ಇಲ್ಲದೇ ಇದ್ದರೆ. ಅವರು ಬರೆದ ಪುಸ್ತಕಗಳನ್ನು ಓದಿ, ಅವರ ವೀಡಿಯೋಗಳನ್ನು ನೋಡಿ. ಅವರ ಜೊತೆ ಡೈರೆಕ್ಟ್ ಆಗಿ ಮಾತನಾಡಲು ಸಾಧ್ಯವಾಗಿಲ್ಲವೆಂದರು ಇಂಡೈರೆಕ್ಟಾಗಿ ಸಂಪರ್ಕದಲ್ಲಿರಿ. ಆ ರೀತಿಯ ಯಶಸ್ವಿ ಜನರೊಂದಿಗೆ ಇರುವುದರಿಂದ ನಿಮ್ಮ ಮೆದುಳಿನ ಯೋಚನೆ ಬದಲಾಗುತ್ತದೆ.

ನೀವು ನಕರಾತ್ಮಕ ಅಥವಾ ಕೇವಲ ಮಾತನಾಡುವ ಜನರೊಂದಿಗೆ ಇದ್ದರೆ ಅವರು ಯಶಸ್ವಿಯಾಗುವುದಿಲ್ಲ ಮತ್ತು ನೀವು ಅವರ ರೀತಿಯ ಆಗುತ್ತೀರಾ. ಹೀಗಾಗಿ ನಿಮಗಿಂತ ಯಾರು ಬೆಸ್ಟ್ ಎಂಬುದನ್ನು ನೀವು ಹುಡುಕುವುದು ತುಂಬಾ ಮುಖ್ಯ. ಹೀಗಾಗಿ ತುಂಬಾ ಯೋಚಿಸಿ ನಿರ್ಧಾರಕ್ಕೆ ಬನ್ನಿ.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಈ ಐದು ಸಲಹೆಗಳಲ್ಲಿ ನಿಮಗೆ ಯಾವುದು ಇಷ್ಟವಾಯಿತು ಎಂಬುದನ್ನು ಕೆಳಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

akshay kumar a • January 25th,2022

Money and time is also very important