Website designed by @coders.knowledge.

Website designed by @coders.knowledge.

Japanese Secret of Managing Money #HappyMoney | ಹಣವನ್ನು ನಿರ್ವಹಿಸಲು ಜಪಾನಿಯರ ರಹಸ್ಯ

 0

 Add

Please login to add to playlist

Watch Video

ಅನೇಕರು ತಮ್ಮ ಜೀವನದಲ್ಲಿ ಅಧಿಕ ಖುಷಿಯಾಗಿರುವುದನ್ನು ನೀವು ನೋಡಿರುತ್ತೀರಾ. ಅವರು ಹಣವನ್ನು ಗಳಿಸುತ್ತಿರುತ್ತಾರೆ ಮತ್ತು ಹೊಸ ಹೊಸ ಅವಕಾಶಗಳನ್ನು ಆಕರ್ಷಿಸಿಕೊಳ್ಳುತ್ತಾರೆ. ಅದೇ ಇನ್ನೊಂದು ಕಡೆ ಸ್ವಲ್ಪ ಜನಗಳಿಗೆ ಜೀವನವನ್ನು ನಡೆಸಲು ಸಂಘರ್ಷವನ್ನು ಮಾಡಬೇಕಾಗುತ್ತದೆ, ಇಲ್ಲ ಚೆನ್ನಾಗಿ ಗಳಿಸಿದರು ಖುಷಿಯಲ್ಲಿ ಇರುವುದಿಲ್ಲ. ಆರ್ಥಿಕ ಯಶಸ್ಸು ಮತ್ತು ಸಂತೋಷವು ನೀವು ಎಷ್ಟು ಹಣವನ್ನು ಗಳಿಸುತ್ತೀರಾ ಎಂಬುದರ ಮೇಲೆ ನಿಂತಿಲ್ಲ, ಆದರೆ ಅದನ್ನು ಹೇಗೆ ಗಳಿಸುತ್ತೀರಾ ಎಂಬುದರ ಮೇಲೂ ನಿಂತಿದೆ. ಇಂದು ನಾವು ಇದರ ಬಗ್ಗೆಯೇ ತಿಳಿಸಲಿದ್ದೇವೆ. ನೀವು ಇಲ್ಲಿಯವರೆಗೆ ಕೇಳಿರದ ಜಪಾನ್ ಅವರ ಹಣ ನಿರ್ವಹಣೆ ರಹಸ್ಯಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಹಣವನ್ನು ಗಳಿಸಲು ಇರುವ ಸರಿಯಾದ ಮಾರ್ಗ ಯಾವುದು ಎಂಬುದನ್ನು ಆಳವಾಗಿ ಅರ್ಥ ಮಾಡಿಸುತ್ತೇವೆ ಮತ್ತು ನೀವು ಅದರ ಜೊತೆ ಹೇಗೆ ಖುಷಿಯಾಗಿರಬಹುದು ಎಂಬುದನ್ನು ತಿಳಿಸಲಿದ್ದೇವೆ.

happy money - the japanese art of making peace with your money, ಪುಸ್ತಕವನ್ನು ಕೆನ್ ಹೋಂಡಾ(ken honda) ಅವರು ಬರೆದಿದ್ದಾರೆ. ಕೆನ್ ಹೋಂಡಾ ವೈಯಕ್ತಿಕ ಹಣಕಾಸಿನ(personal finance) ಮೇಲೆ 50 ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅವರು ಜಪಾನಿನ ಪ್ರಸಾರದಲ್ಲಿ(broadcast) ಗೌರವಯುತ್ತ ಅತಿಥಿಯಾಗಿದ್ದಾರೆ. ಈ ಲೇಖನದಲ್ಲಿ ನಾವು ಹ್ಯಾಪಿ ಮನಿಯ ಮುಖ್ಯ ತತ್ವಗಳ(key principles) ಬಗ್ಗೆ ತಿಳಿಯಲಿದ್ದೇವೆ ಮತ್ತು ಹಣಕಾಸಿನ ಜೊತೆ ನಿಮ್ಮ ಸಂಬಂಧವನ್ನು ಹೇಗೆ ಬದಲಿಸುತ್ತದೆ ಎಂಬುದನ್ನು ತಿಳಿಯಲಿದ್ದೇವೆ. ನೀವು ಸಾಲದಲ್ಲಿ ಮುಳುಗಿದ್ದರು, ಇಲ್ಲ ನಿಮ್ಮ ಆರ್ಥಿಕ ಮನಸ್ಥಿತಿಯನ್ನು(financial mindset) ಸುಧಾರಿಸಿಕೊಳ್ಳಲು ಯೋಚಿಸುತ್ತಿದರೆ, ಇಲ್ಲ ಹಣವನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಿದರೆ, ಈ ಲೇಖನ ನಿಮಗೆ ಮೌಲ್ಯಯುತ ಒಳನೋಟ ಮತ್ತು ಪ್ರೇರಣೆಯನ್ನು ನೀಡುತ್ತದೆ.

ಆಗಿದ್ದರೆ ಸಂತೋಷದ ಹಣ(happy money) ಮತ್ತು ಬೇಸರದ ಹಣದಲ್ಲಿರುವ(unhappy money) ವ್ಯತ್ಯಾಸವೇನು?

ಖುಷಿ ಮತ್ತು ಕೃತಜ್ಞತೆಯಿಂದ(gratitude) ಗಳಿಸಿದ ಹಣವನ್ನು ಸಂತೋಷದ ಹಣ ಎನ್ನಲಾಗುತ್ತದೆ. ಈ ಹಣದಿಂದ ನಾವು ನಮ್ಮ ಆಳವಾದ ಆಸೆಗಳನ್ನು ಪೂರೈಸಿಕೊಳ್ಳಬಹುದು ಮತ್ತು ಇತರರಿಗೂ ಮೌಲ್ಯಯುತವಾದ ವಸ್ತುಗಳನ್ನು ನೀಡಬಹುದು. ಉದಾಹರಣೆಗೆ, ವಾರದ ಅಂತ್ಯದಲ್ಲಿ ನೀವು ನಿಮ್ಮ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೀರಾ. ಆದರೆ ತಿಂಗಳ ಅಂತ್ಯವಾಗಿದ್ದು ನಿಮ್ಮ ಬಜೆಟ್ ತುಂಬಾ ಕಡಿಮೆ ಇದೆ. ಇದರ ನಂತರವೂ ನೀವು ನಿಮ್ಮ ಯೋಜನೆಯನ್ನು(plan) ರದ್ದು ಮಾಡುವುದಿಲ್ಲ. ಇಲ್ಲಿ ಖರ್ಚು ಮಾಡುವ ಹಣವು ನಿಮಗೆ ಖುಷಿಯನ್ನು ನೀಡುವುದಿಲ್ಲ, ಏಕೆಂದರೆ ಒಳಗಿನಿಂದ ನಿಮ್ಮಲ್ಲೇ ನೀವು ಹೋರಾಟ ಮಾಡುತ್ತಿರುತ್ತೀರಾ.

ಇನ್ನೊಂದು ಕಡೆ ಬೇಸರದ ಹಣವೆಂದರೆ ಭಯ, ನಾಚಿಕೆಯಿಂದ ಗಳಿಸಿದ, ಇಲ್ಲ ಖರ್ಚು ಮಾಡಿದ ಹಣವಾಗಿದೆ. ಅದು ನಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಿ ಗಳಿಸಿದ ಹಣವಾಗಿರುತ್ತದೆ. ಅದು ನಮ್ಮ ಮೌಲ್ಯ ಮತ್ತು ನಂಬಿಕೆಗೆ ವಿರುದ್ಧವಾಗಿರುತ್ತದೆ. ಈ ಹಣವನ್ನು ನಮಗೆ ಇಷ್ಟವಿಲ್ಲದ ವಸ್ತುಗಳ ಮೇಲೆ ಖರ್ಚು ಮಾಡುತ್ತೇವೆ. ಇದು ನಮ್ಮ ದೀರ್ಘಾವಧಿಯ ಗುರಿಗೆ ವಿರುದ್ಧವಾಗಿದೆ.

ಉದಾಹರಣೆಗೆ ನೀವು ನಿಮಗೆ ಇಷ್ಟವಿಲ್ಲದ ಉದ್ಯೋಗವನ್ನು ಮಾಡುತ್ತಿದ್ದಾರೆ, ನಿಮಗೆ ಅದರಲ್ಲಿ ಸಮಯವನ್ನು ಕಳೆಯಲು ಕಠಿಣವೆನಿಸುತ್ತಿರುತ್ತದೆ. ಆ ರೀತಿಯ ಉದ್ಯೋಗದಿಂದ ಗಳಿಸಿದ ಹಣವನ್ನು ನೀವು ಯಾವಾಗಲೂ ನಕಾರಾತ್ಮಕ ಭಾವನೆಯಿಂದ ನೋಡುತ್ತೀರಾ. happy money ಪುಸ್ತಕದ 6 ಮುಖ್ಯ ಪಾಠಗಳ ಬಗ್ಗೆ ಈಗ ತಿಳಿಯೋಣ.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

1. Buy experiences, not things

what does buy experiences not things mean in kannada
buy experiences, not things

ಪ್ರಯಾಣ, ಸಂಗೀತ ಮೇಳಗಳಿಗೆ(concert) ಹಣವನ್ನು ಖರ್ಚು ಮಾಡುವುದು, ವಸ್ತುಗಳಿಗೆ(material) ಖರ್ಚು ಮಾಡುವ ಹಣಕ್ಕಿಂತ ಅಧಿಕ ಖುಷಿಯನ್ನು ನೀಡುತ್ತದೆ. ನೀವು ನಿಮಗೆ ಬೇಕಾಗಿದ್ದ ಒಂದು ದುಬಾರಿ ವಸ್ತುವನ್ನು ಖರೀದಿಸಿದ ಆ ದಿನವನ್ನು ನೆನಪಿಸಿಕೊಳ್ಳಿ. ಆ ಖುಷಿಯ ಅನುಭವ ಎಷ್ಟು ದಿನವಿತ್ತು, ಕೇವಲ ಸ್ವಲ್ಪ ದಿನ ಇರಬಹುದು. ಈಗ ನೀವು ಸ್ಮರಣೀಯ ಅನುಭವವನ್ನು(memorable experience) ಮಾಡಿದ ದಿನಗಳನ್ನು ನೆನಪಿಸಿಕೊಳ್ಳಿ. ಇದು ನಮಗೆ ಎಷ್ಟೋ ವರ್ಷಗಳು ನೆನಪಿನಲ್ಲಿ ಇರುತ್ತದೆ. ಇದುವೇ ಕೆನ್ ಹೋಂಡಾ ಅವರ "buy experiences, not things" ತತ್ವವಾಗಿದೆ.

ನಿಮಗೆ ಬೇಡದೆ ಇರುವ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವ ಬದಲು, ನಿಮಗೆ ಖುಷಿಯನ್ನು ನೀಡುವ ವಸ್ತುಗಳನ್ನು ಪರಿಗಣಿಸಬೇಕು. ಇದರಲ್ಲಿ ಅನೇಕ ವಿಷಯಗಳು ಬರುತ್ತವೆ. ಉದಾಹರಣೆಗೆ ನಿಮ್ಮ ನೆಚ್ಚಿನ ರೆಸ್ಟೋರೆಂಟಿಗೆ ಹೋಗಿ ಊಟ ಮಾಡುವುದು, ನಿಮ್ಮ ನೆಚ್ಚಿನ ಲೇಖಕರು ಬರೆದಿರುವ ಪುಸ್ತಕವನ್ನು ಓದುವುದು, ಇಲ್ಲ ನೀವು ಯಾವಾಗಲೂ ಹೋಗ ಬಯಸಲು ಬಯಸಿದ ಜಾಗಕ್ಕೆ ಹೋಗುವುದು. ನಾವು ನಮ್ಮ ಆರ್ಥಿಕ ನಿರ್ಧಾರಗಳನ್ನು ಆಯ್ಕೆಯ ರೀತಿ ನೋಡಿದರೆ, ಅದರ ಮೇಲೆ ಅಧಿಕ ನಿಯಂತ್ರಣವನ್ನು ಮಾಡಬಹುದು ಮತ್ತು ನಮ್ಮ ಆರ್ಥಿಕ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು.

ಇದನ್ನು ಓದಿ: 10 ಹೆಚ್ಚುವರಿ ಆದಾಯದ ಐಡಿಯಾಗಳು

2. Buy time

what does buy time mean  in kannada
buy time

ನಿಮಗೆ ಎಂದಾದರೂ ದಿನದಲ್ಲಿ ತುಂಬಾ ಕಡಿಮೆ ಸಮಯ ಇದೆ ಎಂದು ಅನಿಸಿದೆಯೇ? ಇಲ್ಲ ಒಂದು ಕಾರ್ಯದಿಂದ ಇನ್ನೊಂದಕ್ಕೆ ವರ್ಗಾಯಿಸಲು ಅವಸರ ಮಾಡುತ್ತಿರುವಿರಾ. ಇದರಿಂದ ನಿಮ್ಮ ಹತ್ತಿರ ವಿಶ್ರಾಂತಿ ಮತ್ತು ಬದುಕನ್ನು ಆನಂದಿಸಲು ಸಮಯವಿರುವುದಿಲ್ಲ. ಆ ರೀತಿ ಇದ್ದರೆ ನೀವು ಒಬ್ಬರೇ ಆ ರೀತಿ ಆಗಿಲ್ಲ. ಅನೇಕರಿಗೆ ಈ ರೀತಿಯೇ ಆಗುತ್ತದೆ. ಇಲ್ಲಿಯೇ "buy time" ಪರಿಕಲ್ಪನೆ ಬರುತ್ತದೆ. ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಮತ್ತು ನಮ್ಮ ಗುರಿಯನ್ನು ತಲುಪಲು ನಮಗೆ ಒಂದೇ ಒಂದು ವಸ್ತುವಿನ ಅವಶ್ಯಕತೆ ಇದೇ, ಆ ವಸ್ತುವೇ ಸಮಯವಾಗಿದೆ(time). ಸಮಯವನ್ನು ಖರೀದಿಸಲು ಸಾಧ್ಯವಿಲ್ಲ ಎನ್ನುತ್ತಾರೆ, ಆದರೆ ನಾವು ನಮ್ಮ ಬಿಡುವಿಲ್ಲದ ಜೀವನದಿಂದ(busy life) ಒಂದು ಹೆಜ್ಜೆ ಹಿಂದೆ ಹೋಗಿ, ಆದ್ಯತೆಯ(priority) ಬಗ್ಗೆ ತಿಳಿದುಕೊಳ್ಳಬೇಕು.

ನಮಗೆ ಯಾವುದು ತುಂಬಾ ಅವಶ್ಯಕತೆ ಇದೆ ಮತ್ತು ನಾವು ನಮ್ಮ ಖರ್ಚು ಮಾಡುವ ಸ್ವಭಾವವನ್ನು ಆ ಆದ್ಯತೆಗಳ ಜೊತೆಗೆ ಹೇಗೆ ಜೋಡಿಸಬಹುದು ಎಂಬುದನ್ನು ತಿಳಿಯಬೇಕು. ಇದಕ್ಕೆ ನಿಮ್ಮ ವ್ಯಾಪಾರದಲ್ಲಿ ತುಂಬಾ ಪೂರೈಸುತ್ತಿರದ, ತುಂಬಾ ಪ್ರಭಾವಶಾಲಿ ಇರದ ಚಟುವಟಿಕೆಗಳನ್ನು ನಿರ್ಲಕ್ಷಿಸಬೇಕು. ನಾವು ಹಣವನ್ನು ಗಳಿಸುವ ಮೇಲೆ ಗಮನ ಹರಿಸುವ ಬದಲು, ನಮಗಾಗಿ ಸಮಯವನ್ನು ಉಳಿಸುವ ಬಗ್ಗೆ ಯೋಚಿಸಬೇಕು ಎಂದು ಕೆನ್ ಹೋಂಡಾ ಹೇಳುತ್ತಾರೆ. ಆಗ ಮಾತ್ರ ನಮ್ಮ ಬದುಕಿನಲ್ಲಿ ನಾವು ಶಾಂತಿ ಮತ್ತು ಸಂತೋಷವನ್ನು ಹುಡುಕಲು ಸಾಧ್ಯವಾಗುತ್ತದೆ.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

3. Pay now, consume later

happy money pay now consume later thought in kannada
pay now, consume later

"buy now, pay later" ಎಂಬ ಕ್ರೆಡಿಟ್ ಕಾರ್ಡ್ ಜಗತ್ತಿನಲ್ಲಿ ಕೆನ್ ಹೋಂಡಾ ಬೇರೆಯದನೇ ಸೂಚಿಸುತ್ತಾರೆ. ಅದುವೇ "pay now, consume later". ಅಂದರೆ ನೀವು ಸಾಲ ತೆಗೆದುಕೊಳ್ಳುವುದನ್ನು ಬಿಟ್ಟು ಖರೀದಿಸಿದ ವಸ್ತುಗಳಿಗೆ ನಗದು(cash) ಇಲ್ಲ ಮುಂಗಡ ಪಾವತಿ ಮಾಡಿ. ಇದರಿಂದ ನೀವು ಆ ವಸ್ತುವನ್ನು ಯಾವುದೇ ರೀತಿಯ ಒತ್ತಡವಿಲ್ಲದೆ(stress) ಆನಂದಿಸಬಹುದು. ನಾವು ಯಾವುದಾದರೂ ವಸ್ತುಗಳಿಗೆ ಮುಂಚೆಯೇ ಉಳಿಸಿ ಮತ್ತು ಯೋಜನೆಯನ್ನು ಮಾಡಿದರೆ, ಅದು ನಮಗೆ ಅಧಿಕ ತೃಪ್ತಿಯನ್ನು ನೀಡುತ್ತದೆ ಮತ್ತು ನಮ್ಮ ಆರ್ಥಿಕ ಪರಿಸ್ಥಿತಿಯಿಂದ ಅಧಿಕ ತೃಪ್ತಿಯಲ್ಲಿ ಇರುತ್ತೇವೆ. ಸಾಲ ಮತ್ತು ಕ್ರೆಡಿಟ್ ಅನ್ನು ತಪ್ಪಿಸುವುದರಿಂದ ನಾವು ನಮ್ಮನ್ನು ಬಡ್ಡಿ ಪಾವತಿಯಿಂದ(interest payment) ಉಳಿಸಿಕೊಳ್ಳಬಹುದು ಮತ್ತು ಹಣವನ್ನು ಮರುಪಾವತಿಸುವ ಭಯದಿಂದಲೂ ಉಳಿದುಕೊಳ್ಳಬಹುದು.

4. Invest in others

how do you invest in others in kannada
invest in others

ಹಣದ ವಿಷಯ ಬಂದಾಗ ಇತರರ ಮೇಲೆ ಹೂಡಿಕೆ ಮಾಡುವುದು ನಮ್ಮ ಮನಸ್ಥಿತಿಯನ್ನು ಕೊರತೆಯಿಂದ(scarcity) ಸಮೃದ್ಧಿಗೆ(abundance) ತರುತ್ತದೆ. ನನ್ನ ಹತ್ತಿರ ಹಣವಿಲ್ಲ, ಅದು ಇಲ್ಲ, ಇದು ಇಲ್ಲ ಎಂಬ ಭಾವನೆಯಿಂದ ಮೇಲೆ ಬಂದು, ನಮ್ಮ ಹತ್ತಿರ ಈಗಾಗಲೇ ಇರುವ ವಸ್ತುಗಳನ್ನು ಹೇಗೆ ಪರಿಣಾಮಕಾರಿಯಾಗಿ(efficient) ಬಳಸಬಹುದು?, ಅವುಗಳನ್ನು ಹೇಗೆ ಬೆಳೆಸಬಹುದು? ಮತ್ತು ಇತರರೊಂದಿಗೆ ಅದನ್ನು ಶೇರ್ ಮಾಡುವುದು ಹೇಗೆ? ಎಂಬುದನ್ನು ನೋಡಬೇಕು. ಇತರರ ಮೇಲೆ ಹೂಡಿಕೆ ಮಾಡಲು ಅನೇಕ ಮಾರ್ಗಗಳಿವೆ. ಉದಾಹರಣೆಗೆ ದಾನ ಮಾಡುವುದು, ಸ್ವಯಂಸೇವಕನಾಗುವುದು(voluenteer) ಮತ್ತು ನಿಮ್ಮ ಗೆಳೆಯರು ಮತ್ತು ಕುಟುಂಬಕ್ಕೆ ಅವಶ್ಯಕತೆಯ ಸಮಯದಲ್ಲಿ ಸಹಾಯ ಮಾಡುವುದು ಬರುತ್ತದೆ.

ಹೋಂಡಾ, ಕೊಡುವ ಮನಸ್ಥಿತಿಯನ್ನು(giving mindset) ಬೆಳೆಸಿಕೊಳ್ಳಲು ಹೇಳುತ್ತಾರೆ. ನಾವು ಹಣವನ್ನು ಜಗತ್ತಿನಲ್ಲಿ ಒಂದು ಸಕರಾತ್ಮಕ ಬದಲಾವಣೆ ತರಲು ಉಪಕರಣದ (tool) ರೀತಿ ನೋಡಬೇಕು ಎನ್ನುತ್ತಾರೆ. ಇದಕ್ಕೆ ನಾವು ಕೃತಜ್ಞತೆಯ(gratitude) ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಇದು ನಮಗೆ ಹಣದ ಮಹತ್ವದ ಬಗ್ಗೆ ತಿಳಿಸುವುದಲ್ಲದೆ, ನಮ್ಮ ಅನುಭವವನ್ನು ಅನುಭವಿಸಲು ಮತ್ತು ಇತರರೊಂದಿಗೆ ಪಾಲು ಮಾಡಿಕೊಳ್ಳಲು ಸಹಕರಿಸುತ್ತದೆ.

ಇದನ್ನು ಓದಿ: ಆರಂಭಿಕ ಆರ್ಥಿಕ ಸ್ವತಂತ್ರಕ್ಕಾಗಿ 5 ನಿಯಮಗಳು

5. Focus on the journey

what does focus on the journey mean in kannada
focus on journey

ಕೆಲವೊಮ್ಮೆ ಜನರು ಹಣವನ್ನು ಗಳಿಸುವುದರಲ್ಲಿ ಎಷ್ಟು ನಿರತರಾಗುತ್ತಾರೆಂದರೆ, ಬದುಕನ್ನು ಆನಂದಿಸಲು ಸಮಯವಿರುವುದಿಲ್ಲ. ಹೀಗಾಗಿ ಅವರಿಗೆ ಆರ್ಥಿಕ ಯಶಸ್ಸನ್ನು ಸಾಧಿಸಿದ ನಂತರವು, ಒತ್ತಡ, ಭಯ ಮತ್ತು ಅತೃಪ್ತಿಯ ಅನುಭವವಿರುತ್ತದೆ. ಇದಕ್ಕೆ ನೀವು ಹಣವನ್ನು ಏಕೆ ಗಳಿಸುತ್ತಿದ್ದೀರಾ ಎಂದು ಯೋಚಿಸಿ. ಹಣವನ್ನು ಗಳಿಸುವ ಜೊತೆಗೆ ಬದುಕಿನ ಇತರ ಅನುಭವಗಳನ್ನು ತ್ಯಾಗ ಮಾಡದಿರುವುದು ಪ್ರಮುಖವಾಗಿದೆ. ನಿಮ್ಮ ಕುಟುಂಬ ಇಲ್ಲ, ಹವ್ಯಾಸದ ಮೇಲೆ ಸಮಯವನ್ನು ಕಳೆಯಿರಿ. ಪ್ರತಿಯೊಂದು ವಸ್ತುವಿನ ಸಮತೋಲನ ಇರುವುದು, ನಿಜವಾದ ಗುರಿಯನ್ನು ಹೊಂದುವುದು ಮತ್ತು ಸ್ವಯಂ ಆರೈಕೆಯ ಬಗ್ಗೆ ಗಮನ ಹರಿಸುವುದು, ಒಂದು ಸಾಕಾರಗೊಂಡಿರುವ ಬದುಕನ್ನು(fulfillment life) ಜೀವಿಸಲು ತುಂಬಾ ಮುಖ್ಯವಾಗಿದೆ. ಜನರು ಕೋಟ್ಯಧಿಪತಿ ಆಗದಿರಬಹುದು, ಆದರೆ ಹಣವನ್ನು ನಿರ್ವಹಿಸುವ ಪ್ರಯಾಣವನ್ನು ಆನಂದಿಸಿಕೊಂಡು, ಒಂದು ಸಕಾರಾತ್ಮಕ ಸಂಬಂಧವನ್ನು ಇಟ್ಟುಕೊಂಡು, ಅಧಿಕ ಸಂತೋಷ ಮತ್ತು ಸಾಕಾರಗೊಂಡಿರುವ ಬದುಕನ್ನು ಅನುಭವಿಸಬಹುದು.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

6. Be yourself.

what it means to be yourself in kannada
be yourself

ನೀವು ನಿಮ್ಮೊಂದಿಗೆ ಪ್ರಾಮಾಣಿಕವಿದಾಗ ನಿಜವಾದ ಆರ್ಥಿಕ ಯೋಗಕ್ಷೇಮ ಇರಲು ಸಾಧ್ಯವಾಗುತ್ತದೆ ಎಂದು ಹೋಂಡಾ ಹೇಳುತ್ತಾರೆ. ನೀವು ನಿಮ್ಮ ಮೌಲ್ಯವದದನ್ನು ಆದ್ಯತೆಯ ಮೇಲೆ ಜೋಡಿಸಬೇಕು ಹೊರತು ಇತರರ ಸಲಹೆ ಮತ್ತು ಸಮಾಜದ ನಿರೀಕ್ಷೆಯ ಮೇಲಲ್ಲ. ಏಕೆಂದರೆ ಹಣವನ್ನು ಗಳಿಸುವುದೇ ನಮ್ಮ ಅಂತಿಮ ಗುರಿಯಾಗಿರುವುದಿಲ್ಲ. ಹಣವು ಕೇವಲ ಒಂದು ಅರ್ಥಪೂರ್ಣ ಮತ್ತು ತೃಪ್ತಿದಾಯಕ ಬದುಕನ್ನು ಜೀವಿಸಲು ಇರಲು ಒಂದು ವಸ್ತುವಾಗಿದೆ. ನಾವು ನಮ್ಮ ಮೌಲ್ಯದ ಜೊತೆಗೆ ನಿಜವಿದ್ದು, ನಮಗೆ ಖುಷಿ ನೀಡದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಬಹುದು ಮತ್ತು ನಮಗೆ ತೃಪ್ತಿದಾಯಕ ಭಾವನೆಯನ್ನು ನೀಡುವ ಅನುಭವಗಳ ಮೇಲೆ ಹಣವನ್ನು ಖರ್ಚು ಮಾಡಬೇಕು.

ಉದಾಹರಣೆಗೆ ನಿಮಗೆ ಪ್ರಯಾಣ ಮಾಡುವುದು ಇಷ್ಟ ಎಂದುಕೊಳ್ಳಿ. ಆದರೆ ನೀವು ದುಬಾರಿ ಬಟ್ಟೆ ಮತ್ತು ಶಾಪಿಂಗ್ ಮೇಲೂ ಅಧಿಕ ಖರ್ಚು ಮಾಡುತ್ತೀರಾ. ನಿಮಗೆ ನಿಮ್ಮ ಪ್ರಯಾಣಕ್ಕೆ ಹಣವನ್ನು ಗಳಿಸಬೇಕು ಎಂದು ತಿಳಿದಿದೆ. ಆದರೆ ಹೊಸದಾದ ವಸ್ತುಗಳನ್ನು(latest things) ಖರೀದಿಸುವುದರಿಂದ ನಿಮ್ಮನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನೀವು ನಿಮ್ಮ ಬಜೆಟ್ ಅನ್ನು ಪರೀಕ್ಷಿಸಬೇಕು ಮತ್ತು ನಿಮ್ಮ ಆದ್ಯತೆಯ ಜೊತೆಗೆ ಜೋಡಿಸದಿರುವ ವಸ್ತುಗಳಲ್ಲಿ ಖರ್ಚನ್ನು ಕಡಿಮೆ ಮಾಡಬೇಕು.

ನೀವು ಈ 6 ತತ್ವಗಳನ್ನು ಅನುಸರಿಸಿದಲ್ಲಿ ಹಣದ ಜೊತೆಗೆ ಒಂದು ಸಕಾರಾತ್ಮಕ ಮತ್ತು ಆರೋಗ್ಯಕರವಾದ ಸಂಬಂಧವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹಣದ ಜೊತೆ ಸಕಾರಾತ್ಮಕ ಸಂಬಂಧವಿರುವುದು ಬದುಕಿನ ಇತರ ಭಾಗಕ್ಕೂ ಪ್ರತಿಬಿಂಬಿಸುತ್ತದೆ ಎಂದು ಹೋಂಡಾ ಹೇಳುತ್ತಾರೆ. ಈ 6 ತತ್ವಗಳಲ್ಲಿ ನೀವು ಯಾವುದನ್ನು ಈಗಿನಿಂದಲೇ ಅನುಸರಿಸುವಿರಿ ಎಂಬುದನ್ನು ಕಮೆಂಟ್ ಮೂಲಕ ತಿಳಿಸಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments