Website designed by @coders.knowledge.

Website designed by @coders.knowledge.

5 Best Exercises for Height Increase | ಎತ್ತರವನ್ನು ಹೆಚ್ಚಿಸಲು 5 ಅತ್ಯುತ್ತಮ ವ್ಯಾಯಾಮಗಳು

Watch Video

ನಿಮಗೆಲ್ಲರಿಗೂ ಎತ್ತರವಾಗಲಿಕ್ಕೆ ಒಂದೊಂದು ಕಾರಣ ಇದೆ ಇರುತ್ತದೆ. ಆದರೆ, ಎತ್ತರವಾಗುವುದು ತುಂಬಾ ಫ್ಯಾಕ್ಟರ್ಸ್ ಮೇಲೆ ಡಿಪೆಂಡ್ ಆಗಿದ್ದೆ. ಅದೆಂದರೆ ಪರಿಸರ, ಹಾರ್ಮೋನ್, ಜೀನ್ಸ್ ಮತ್ತು ನ್ಯೂಟ್ರಿಷನ್. ಜನರು ಇಪ್ಪತ್ತೈದರ ವಯಸ್ಸಿನ ತನಕ ಎತ್ತರವಾಗುತ್ತಾರೆ. ಆಮೇಲೆ ಅವರ ದೇಹ ಕುಗ್ಗುತ್ತಾ ಬರುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

ಆದರೂ ಸ್ವಲ್ಪ ವ್ಯಾಯಾಮ ನೀವು ಎತ್ತರವಾಗಲೂ ಸೂಕ್ತವಾಗಿದೆ. ಅದರಲ್ಲೂ ಸ್ವಲ್ಪ ವ್ಯಾಯಾಮ ನಿಮ್ಮನ್ನು ಒಂದೇ ವಾರದಲ್ಲಿ ಎತ್ತರ ಮಾಡುವಷ್ಟು ಪರಿಣಾಮವನ್ನು ಹೊಂದಿದೆ. ಈ ಐದು ಎಕ್ಸಸೈಸ್ ನಿಮ್ಮ ಎತ್ತರ ಹೆಚ್ಚಿಸಲು ಇಲ್ಲಿದೆ.

1. ಹ್ಯಾಂಗಿಂಗ್ ವ್ಯಾಯಾಮ.

hanging exercises in kannada
mahithithana.in

ಈ ವ್ಯಾಯಾಮ ನಿಮಗೆ ತುಂಬಾ ಅನುಕೂಲಕರವಾಗಿದೆ. ಏಕೆಂದರೆ ಇದನ್ನು ಮಾಡಲು ನಿಮಗೆ ಯಾವುದೇ ಸ್ಪೆಷಲ್ ಎಕ್ವಿಪ್ಮೆಂಟ್ ಬೇಡ. ನೀವು ಜಿಮ್ಗೆ ಹೋಗುವುದಾದರೆ ಪುಲ್-ಹಪ್ ಬಾರ್ಸ್ ಬಳಸಬಹುದು. ಜಿಮ್ಗೆ ಹೋಗಲು ಟೈಮ್ ಇಲ್ಲದಿದ್ದರೆ, ಈ ವ್ಯಾಯಾಮ ಮಾಡಲು ನಿಮಗೆ ಮರದ ಕೊಂಬೆ ಸಾಕು ಅಥವಾ ಪಾರ್ಕ್‌ನಲ್ಲಿ ಇರುವ ಮಂಕಿ ಬಾರ್ಸ್ ಬಳಸಬಹುದು.

ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳು

ನೀವು ಬಾರ್ಸನ್ನು ಗಟ್ಟಿಯಾಗಿ ಕೈಯಲ್ಲಿ ಹಿಡಿದುಕೊಂಡು ಹ್ಯಾಂಗ್ ಆಗಬೇಕು ಮತ್ತು ನಿಮ್ಮ ಕಾಲು ನೆಲ ಮುಟ್ಟದಂತೆ ಸ್ಟ್ರೆಚ್ ಮಾಡಬೇಕು. ಈ ವ್ಯಾಯಾಮವನ್ನು ನಿಮಗೆ ರಿಲ್ಯಾಕ್ಸ್ ಫೀಲ್ ಆಗುವವರೆಗೂ ಮಾಡಿ.

2. ಡೌನ್‍ವರ್ಡ್ ಡಾಗ್.

downward dog exercise in kannada
mahithithana.in

ಈ ವ್ಯಾಯಾಮ ಮಾಡಲು, ನೀವು ನಿಮ್ಮ ಕೈ ಮತ್ತು ಮಂಡಿಯಿಂದ ಕೆಳಗೆ ಬಾಗಬೇಕು. ನಿಮ್ಮ ಕೈ, ಶೋಲ್ಡರ್ನ ಹತ್ತಿರ ಇರಬೇಕು. ನಿಮ್ಮ ಮಂಡಿಯನ್ನು ನೆಲದಿಂದ ಮೇಲೆ ಎತ್ತಬೇಕು. ಆಮೇಲೆ ನಿಮ್ಮ ಪಾದವನ್ನು ನೆಲದ ಮೇಲೆ ಜಂಟಲ್ ಆಗಿ ಸರಿಸಬೇಕು.

ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳು

3. ಕೋಬ್ರಾ ಪೋಸ್.

cobra pose exercise in kannada
mahithithana.in

ಈ ವ್ಯಾಯಾಮ ಮಾಡಲು ನಿಮಗೆ ಒಂದು ಕ್ರೀಡಾ ಚಾಪೆ ಬೇಕು. ಅದರ ಮೇಲೆ ನಿಮ್ಮ ಕೈ ಕೆಳಗೆ ಬರುವಂತೆ ಮಲಗಬೇಕು. ನಿಮ್ಮ ಕಾಲುಗಳು ಒಟ್ಟಿಗೆ ಕೂಡಿರಬೇಕು ಮತ್ತು ನಿಮ್ಮ ಮಾಂಸ ಖಂಡಗಳು ನೆಲವನ್ನು ಮುಟ್ಟಬೇಕು. ಕೈ ಬಳಸದೇ ನಿಮ್ಮ ಬ್ಯಾಕ್ ಮಸಲ್ ಮತ್ತು ಎದೆ ಭಾಗವನ್ನು ನೆಲದಿಂದ ಲಿಫ್ಟ್ ಮಾಡಲು ಬಳಸಿ.

ಇದನ್ನು ಓದಿ: ಕೂದಲು ಉದುರುವುದನ್ನು ತಡೆಯಲು ಮನೆಮದ್ದುಗಳು

4. ಕಳ್ವಾಸ್ ಸ್ರೇಚ್.

calvas streach exercise in kannada
mahithithana.in

ನಿಮ್ಮ ಮುಖವನ್ನು ಗೋಡೆ ಕಡೆ ಮಾಡಿ, ನಿಮ್ಮ ಕೈ ಲೆಂತ್ ದೂರದಲ್ಲಿ ನಿಲ್ಲಬೇಕು. ನಿಮ್ಮ ಬಲ ಭಾಗದ ಕಾಲನ್ನು ಮುಂದೆ ತಂದು, ನಿಮ್ಮ ಎಡಭಾಗದ ಕಾಲನ್ನು ನೆಲದಲ್ಲಿ ಇರುವಂತೆ ಹಿಂದೆ ಸರಿಸಬೇಕು. ನಿಮ್ಮ ಬಲಭಾಗದ ಕಾಲಿನ ಮಂಡಿಯನ್ನು ಉರುತ್ತಾ, ಈ ವ್ಯಾಯಾಮವನ್ನು ಪ್ರಾರಂಭ ಮಾಡಬೇಕು.

ಇದನ್ನು ಓದಿ: ಜಗತ್ತಿನ 8 ತೂಕ ಹೆಚ್ಚಿಸುವ ಆಹಾರಗಳು

5. ನೇಕ್ ಸ್ರೇಚ್.

neck streach exercise in kannada
mahithithana.in

ನಿಮ್ಮ ಬೆನ್ನೆಲುಬಿಗೆ ಸಪೋರ್ಟ್ ಆಗುವ ಒಂದು ಕುರ್ಚಿ ಮೇಲೆ ಕುಳಿತುಕೊಳ್ಳಿ. ಆಮೇಲೆ ನಿಮ್ಮ ಗದ್ದ, ಎದೆ ಭಾಗವನ್ನು ಮುಟ್ಟುವವರೆಗೂ ಬೆಂಡ್ ಮಾಡಿ. ನಿಮಗೆ ಎಲ್ಲಿ ತನಕ ನೋವು ಆಗುವುದಿಲ್ಲವೋ ಅಲ್ಲಿಯವರೆಗೆ ಬೆಂಡ್ ಮಾಡಿ. ಆಮೇಲೆ ಈ ಸ್ಥಾನದಲ್ಲಿ 20 ಸೆಕೆಂಡ್ ಇದ್ದು. ನಿಮ್ಮ ತಲೆಯನ್ನು ನಕ್ಷತ್ರ ನೋಡುವ ರೀತಿ ಮೇಲೆ ಮಾಡಿ. ಈ ಸ್ಥಾನದಲ್ಲೂ 20 ಸೆಕೆಂಡ್ ಇರಬೇಕು.

ಈ ಲೇಖನದ ಮೇಲೆ ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sushma • November 28th,2022

ಧನ್ಯವಾದಗಳು, ನನಗೆ ಇದರಿಂದ ಉಪಯೋಗವಿದೆ ನಾನು ನೀವು ತಿಳಿಸಿಕೊಟ್ಟ ವ್ಯಾಯಾಮಗಳನ್ನು ಮಾಡುತ್ತೇನೆ.