Website designed by @coders.knowledge.

Website designed by @coders.knowledge.

Height Increasing Factors | ಎತ್ತರವನ್ನು ಹೆಚ್ಚಿಸಿಕೊಳ್ಳಲು ಎಂಟು ಪರಿಣಾಮಕಾರಿ ಸಲಹೆ ಮತ್ತು ತಂತ್ರಗಳು

Watch Video

ನಮ್ಮ ಎತ್ತರವನ್ನು ಪ್ರಾಥಮಿಕವಾಗಿ ನಾವು ಹೊಂದಿರುವ ಜೀನ್‌ಗಳಿಂದ ನಿರ್ಧರಿಸಲಾಗುತ್ತದೆ. ವ್ಯಕ್ತಿಗಳ ಎತ್ತರದ ನಡುವಿನ ವ್ಯತ್ಯಾಸದಲ್ಲಿ ಸರಿಸುಮಾರು 60 ರಿಂದ 80ರಷ್ಟು ಜೆನೆಟಿಕ್ ಅಂಶಗಳಿಂದ ನಿರ್ಧರಿಸಲಾಗುತ್ತದೆ. ಇನ್ನೂ ಉಳಿದ 20 ರಿಂದ 40ರಷ್ಟು ಪರಿಸರ ಪರಿಣಾಮಗಳಿಗೆ ಕಾರಣವಾಗಬಹುದು. ಆದರೂ ಉತ್ತಮ ಎತ್ತರವನ್ನು ಸಾಧಿಸಲು ಉಪಯುಕ್ತವಾದ ಕೆಲವು ಸಲಹೆ ಮತ್ತು ತಂತ್ರಗಳಿವೆ. ಆ ತಂತ್ರಗಳ ಬಗ್ಗೆ ಇಲ್ಲಿ ನಾವು ತಿಳಿಸುತ್ತಿದ್ದೇವೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

1. ಆರೋಗ್ಯಕರ ಉಪಾಹಾರವನ್ನು ಸೇವಿಸಿ.

foods for height increase in kannada
healthy foods

ನಿಮ್ಮ ದೇಹದ ಸರಿಯಾದ ಬೆಳವಣಿಗೆಗೆ ಆರೋಗ್ಯಕರ ಆಹಾರ ಅತ್ಯಗತ್ಯ ಪಾತ್ರ ವಹಿಸುತ್ತದೆ. ಉಪಹಾರವನ್ನು ಬಿಟ್ಟುಬಿಡುವುದು(skip) ಮಾಡುವುದು ನಿಮ್ಮ ಬೆಳವಣಿಗೆಗೆ ಕೆಟ್ಟ ಸಂಕೇತ ಎನ್ನಬಹುದು. ನಿಮ್ಮ ಚಯಾಪಚಯ(metabolism) ಹೆಚ್ಚಿಸಲು ಸರಿಯಾದ ಉಪಹಾರವನ್ನು ಸೇವಿಸಬೇಕು. ಇದು ನಿಮ್ಮ ದೇಹದ ಬೆಳವಣಿಗೆಯನ್ನು ಗಣನೀಯವಾಗಿ ಪ್ರಭಾವಿಸುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 5 ಅತ್ಯುತ್ತಮ ವ್ಯಾಯಾಮಗಳು

2. ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡಿ.

ಆಲ್ಕೋಹಾಲ್ ಮತ್ತು ಡ್ರಗ್ಸಿನಂತಹ ಮಾದಕ ವಸ್ತುಗಳನ್ನು ಸೇವಿಸುವುದು ನಿಮ್ಮ ಎತ್ತರದ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ಹೀಗಾಗಿ ನೀವು ಅವುಗಳನ್ನು ಬಿಡುವುದು ಒಳ್ಳೆಯದು. ಆಲ್ಕೋಹಾಲ್(alcohol) ಅಷ್ಟೇ ಅಲ್ಲದೆ, ಕೆಫೀನ್(caffeine) ಮತ್ತು ಧೂಮಪಾನ(smoking) ಮಾಡುವುದು ಕೂಡ ನಿಮ್ಮ ಎತ್ತರದ ಬೆಳವಣಿಗೆಗೆ ಅಡ್ಡಿ ಪಡಿಸುತ್ತದೆ.

ಇದನ್ನು ಓದಿ: ಜಗತ್ತಿನ 8 ತೂಕ ಹೆಚ್ಚಿಸುವ ಆಹಾರಗಳು

3. ಸಾಕಷ್ಟು ನಿದ್ರೆ ತೆಗೆದುಕೊಳ್ಳಿ.

pituitary gland on height increase in kannada
pituitary gland

ದೇಹದ ಒಟ್ಟಾರೆ ಬೆಳವಣಿಗೆಗೆ ಸಾಕಷ್ಟು ನಿದ್ರೆ ಸಹಾಯ ಮಾಡುತ್ತದೆ. ಬೆಳೆಯುತ್ತಿರುವ ಮಕ್ಕಳು ಪ್ರತಿದಿನ 9 ರಿಂದ 11 ಗಂಟೆ ನಿದ್ದೆ ಮಾಡಬೇಕು. ನಿಮ್ಮ ಎತ್ತರವಾಗುವ ಪ್ರಕ್ರಿಯೆ ರಾತ್ರಿ ಸಮಯದಲ್ಲಿ ಹೆಚ್ಚಿರುತ್ತದೆ. ನಿದ್ರೆಯ ಸಮಯದಲ್ಲಿ ನಿಮ್ಮ ಪಿಟ್ಯುಟರಿ ಗ್ರಂಥಿ(pituitary gland) ಬೆಳವಣಿಗೆಯ ಹಾರ್ಮೋನ್ ಉತ್ಪಾದಿಸುತ್ತದೆ. ಅದು ನಿಮ್ಮ ಎತ್ತರಕ್ಕೆ ಅವಶ್ಯಕವಾದ ಹಾರ್ಮೋನ್(harmone) ಆಗಿದೆ.

4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಉತ್ತಮ ಎತ್ತರವನ್ನು ಖಚಿತಪಡಿಸಿಕೊಳ್ಳಲು ನಿಮ್ಮ ರೋಗನಿರೋಧಕ(immunity) ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ನಿಯಮಿತವಾಗಿ ಕಾಯಿಲೆ ಅಥವಾ ರೋಗಕ್ಕೆ ತುತ್ತಾಗುತ್ತಿರುವುದು ನಿಮ್ಮ ಎತ್ತರದ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ಹೀಗಾಗಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ನಿಂಬೆಹಣ್ಣಿನಲ್ಲಿ ಕಂಡುಬರುವ ಜೀವಸತ್ವ ಸಿ(vitamin c) ಮುಖ್ಯವಾಗಿದೆ.

ಇದನ್ನು ಓದಿ: ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದು ಹಾಕಲು 17 ಪರಿಹಾರಗಳು

5. ನಿಮ್ಮ ದೇಹಕ್ಕೆ ವ್ಯಾಯಾಮ ನೀಡಿ.

ನಿಯಮಿತ ಕ್ರೀಡೆ ಮತ್ತು ವ್ಯಾಯಾಮವು ನಿಮ್ಮ ದೇಹದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ನಿಮ್ಮ ಬೆಳವಣಿಗೆಯನ್ನು ಸುಧಾರಿಸಲು ಉತ್ತಮ ಆಹಾರ ಮತ್ತು ನಿದ್ದೆಯೊಂದಿಗೆ ಈಜು, ಯೋಗ, ಬೈಕಿಂಗ್ ಮತ್ತು ರನ್ನಿಂಗ್ ಮುಖ್ಯವಾಗಿದೆ. ಎತ್ತರವನ್ನು ಹೆಚ್ಚಿಸಲು ನೀವು ವಿಸ್ತರಿಸುವ(streaching) ವ್ಯಾಯಾಮಗಳನ್ನು ಮಾಡಲೇಬೇಕು. ಎತ್ತರದ ಬೆಳವಣಿಗೆಗೆ ಯೋಗ(yoga) ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ.

6. ಉತ್ತಮ ಭಂಗಿಯನ್ನು(posture) ಅಭ್ಯಾಸ ಮಾಡಿ.

perfect posture for height increase in kannada
posture

ಉತ್ತಮವಾದ ಎತ್ತರದ ಬೆಳವಣಿಗೆ ನಿಮ್ಮ ಸರಿಯಾದ ಭಂಗಿಯ ಮೇಲೂ ನಿಂತಿದೆ. ಹೀಗಾಗಿ ಯಾವಾಗಲೂ ನೇರವಾಗಿ ನಡೆಯಿರಿ ಮತ್ತು ನೇರವಾದ ಭಂಗಿಯಲ್ಲೇ ಕುಳಿತುಕೊಳ್ಳಿ.

ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.

7. ಊಟದಲ್ಲಿ ಭಾಗ ಮಾಡಿ.

ನಿಮ್ಮ ಬೆಳವಣಿಗೆಯ ಹಾರ್ಮೋನ್ ಮತ್ತು ಎತ್ತರ ಹೆಚ್ಚಳವು ನೀವು ತಿನ್ನುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ನಿಮ್ಮ ಚಯಾಪಚಯ(metabolism) ಹೆಚ್ಚಿಸಲು ದಿನದಲ್ಲಿ 3 ಬಾರಿ ದೊಡ್ಡ ಊಟ ಮಾಡುವ ಬದಲು 6 ಸಣ್ಣ ಊಟವನ್ನು ಮಾಡಿ. ಇದು ಎತ್ತರವನ್ನು ನೈಸರ್ಗಿಕವಾಗಿ ಪಡೆಯಲು ಅಗತ್ಯವಾದ ಜೀವಸತ್ವ(vitamin) ಮತ್ತು ಖನಿಜಗಳನ್ನು(minerals) ನೀಡುತ್ತದೆ.

8. ಕೊನೆಯದಾಗಿ, ಐಡಿಯಲ್ ತೂಕವನ್ನು ಕಾಪಾಡಿಕೊಳ್ಳಿ.

fat side effects on height increase in kannada
fat

ಬೊಜ್ಜು(fat) ನಿಮ್ಮ ಎತ್ತರದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಉತ್ತಮ ಎತ್ತರವನ್ನು ಪಡೆಯಲು ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ತೆಗೆದುಕೊಳ್ಳುವ ಮೂಲಕ ಒಂದು ಐಡಿಯಲ್ ತೂಕವನ್ನು ಕಾಯ್ದುಕೊಳ್ಳಿ.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sagar kotabagi • March 8th,2022

Thank you sir