Website designed by @coders.knowledge.

Website designed by @coders.knowledge.

Hidden Meaning of Famous Logos | ಒಳ ಅರ್ಥ ಹೊಂದಿರುವ ಪ್ರಸಿದ್ಧ ಲೋಗೊಗಳು

 0

 Add

Please login to add to playlist

Watch Video

ಲೋಗೊಗಳನ್ನು ಯಾವುದು ಉತ್ತಮಗೊಳಿಸುತ್ತದೆ? ಅದರ ಬಣ್ಣಗಳೇ ಅಥವಾ ಅದರ ಆಕಾರ ಅಥವಾ ಅದರ ಸರಳತೆ. ನಾವು ಈ ಲೇಖನದಲ್ಲಿ ನೀವು ಪ್ರತಿದಿನ ಗಮನಿಸುವ ಪ್ರಸಿದ್ಧ ಲೋಗೊಗಳ ಬಗ್ಗೆ ಮಾತನಾಡುತ್ತಿದ್ದೇವೆ. ನೋಡಲು ಸಾಮಾನ್ಯವಾಗಿ ಕಾಣುವ ಈ ಎಲ್ಲಾ ಲೋಗೊಗಳ ಒಳ ಅರ್ಥ ನಿಮಗೆ ತಿಳಿದಿದೆಯೇ? ತಿಳಿದಿಲ್ಲದಿದ್ದರೆ ಈ ಲೇಖನ ಪೂರ್ತಿ ಓದಿ.

1. ಹ್ಯುಂಡೈ.

hyundai logo meaning in kannada
hyundai logo

ದಕ್ಷಿಣ ಕೊರಿಯಾ ಕಂಪನಿ ಹ್ಯುಂಡೈ(hyundai) ಲೋಗೋದಲ್ಲಿ ಅದರ ಹೆಸರಿನ ಮೊದಲ ಅಕ್ಷರವನ್ನು ಸೂಚಿಸುವಂತೆ ಕಾಣುತ್ತದೆ ಅಲ್ಲವೇ. ಇದಿಷ್ಟೇ ಅಲ್ಲದೆ ಇದು ಕಾರಿನ ವ್ಯಾಪಾರಿ ಮತ್ತು ಗ್ರಾಹಕರ ನಡುವಿನ ಯಶಸ್ವಿ ಒಪ್ಪಂದವನ್ನು ಪ್ರತಿನಿಧಿಸುತ್ತದೆ.

ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?

2. ಆ್ಯಪಲ್.

apple company meaning in kannada
apple logo

ವಿಶ್ವಪ್ರಸಿದ್ಧ ಆ್ಯಪಲ್(apple) ಲೋಗೋವನ್ನು ಡಿಸೈನರ್ ರಾಬ್ ಯನವ್(rob yanov) ಮಾಡಿದ್ದರು. ಅವರು ಹೇಳಿದರು, "ನಾನು ಒಂದು ಚೀಲದಷ್ಟು ಸೇಬು ಹಣ್ಣುಗಳನ್ನು ತಂದು ಅವುಗಳ ಜೊತೆ ಸಮಯ ಕಳೆಯುತ್ತಿದೆ. ಸೇಬಿನ ಚಿತ್ರವನ್ನು ಸರಳವಾಗಿ ಒಡೆಯಲು ಪ್ರಯತ್ನಿಸುತ್ತಿದೆ. ಅದರಲ್ಲಿ ಸೇಬನ್ನು ಕಚ್ಚುವುದು ಪ್ರಯೋಗದ ಭಾಗವಾಗಿತು. ಕಾಕತಾಳೀಯವಾಗಿ ಸೇಬುಹಣ್ಣಿನ Bite ಕಂಪ್ಯೂಟರ್‍ನ Byteನಂತಿದೆ" ಎಂದು ಅವರು ತಿಳಿದುಕೊಂಡರು.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

3. ಅಮೆಜಾನ್.

amazon logo meaning in kannada
amazon logo

ಮೊದಲ ನೋಟದಲ್ಲೇ ಅಮೆಜಾನ್(amazon) ಲೋಗೊ ಸಾಮಾನ್ಯವಾಗೆ ಕಾಣುತ್ತದೆ. ಆದರೆ ಕಂಪನಿಯ ಫಿಲಾಸಫಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಕಿತ್ತಳೆ ಬಾಣವು ನಗುವನ್ನು ಹೋಲುತ್ತದೆ. ಇದು ಕಂಪನಿಯ ಗ್ರಾಹಕರು ತೃಪ್ತರಾಗಿರಬೇಕೆಂದು ಬಯಸುತ್ತದೆ. ಇನ್ನು ಆ ಬಾಣ A ರಿಂದ Z ಅಕ್ಷರಗಳ ನಡುವೆ ವಿಸ್ತರಿಸಿದೆ. ಇದು ಕಂಪನಿಯ A to Z ಉತ್ಪನ್ನಗಳನ್ನು ಪ್ರತಿನಿಧಿಸುತ್ತದೆ.

4. ಬಿಎಂಡಬ್ಲ್ಯು.

bmw logo meaning in kannada
bmw logo

ಬಿಎಂಡಬ್ಲ್ಯು(bmw) ಕಂಪನಿಯ ವಾಯುಯಾನ ತಂತ್ರಜ್ಞಾನದ ಆರಂಭಿಕ ಇತಿಹಾಸಕ್ಕೆ ಅನುಗುಣವಾಗಿ ಅದರ ಲೋಗೊದ ಕೇಂದ್ರ ಭಾಗವು ವಿಮಾನದ ತಿರುಗುವ ಬ್ಲೇಡನ್ನು ಸಂಕೇತಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇದು ವಾಸ್ತವವಾಗಿ ಬವೇರಿಯಾನ್(baverion) ಧ್ವಜದ ಭಾಗವಾಗಿದೆ. ಜರ್ಮನಿಯ ಬವೇರಿಯಾದಲ್ಲಿ ಬಿಎಂಡಬ್ಲ್ಯು ಪ್ರಾರಂಭವಾಗಿತ್ತು.

ಇದನ್ನು ಓದಿ: ಜಪಾನ್ ಜಗತ್ತಿಗಿಂತ ವರ್ಷಗಳಷ್ಟು ಏಕೆ ಮುಂದಿದೆ?

5. ಎಲ್.ಜಿ.

lg company logo meaning in kannada
lg logo

ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ಕಂಪನಿ ಎಲ್.ಜಿ(lg) ಲೋಗೊವು ವ್ಯಕ್ತಿಯ ಮುಖದ ಶೈಲೀಕೃತ ಚಿತ್ರವಾಗಿದೆ. ಕಂಪನಿಯ ಪ್ರಕಾರ ಇದು ಗ್ರಾಹಕರೊಂದಿಗೆ ಸಾಮಾನ್ಯ ಮಾನವ ಸಂಬಂಧಗಳನ್ನು ಕಾಪಾಡಿಕೊಳ್ಳುವ ಆಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ.

6. ಕೋಕಾ ಕೋಲಾ.

coca cola logo meaning in kannada
coca cola logo

ಕೋಕಾ ಕೋಲಾ(coca cola) ಕಂಪನಿಯ ವಿಶ್ವಪ್ರಸಿದ್ಧ ಲೋಗೋದಲ್ಲಿ O ಯಿಂದ L ಅಕ್ಷರಗಳ ನಡುವಿನ ಜಾಗದಲ್ಲಿ ಡ್ಯಾನಿಶ್(danish) ಧ್ವಜವನ್ನು ಸ್ಪಷ್ಟವಾಗಿ ನೋಡಬಹುದು. ಇದು ಸಂಪೂರ್ಣವಾಗಿ ಕಾಕತಾಳೀಯವಾಗಿದೆ. ಕಂಪನಿಯು ಇದನ್ನು ತನ್ನ ಮಾರ್ಕೆಟಿಂಗ್ ಅಭಿಯಾನದಲ್ಲೂ ಬಳಸಿದೆ.

ಇದನ್ನು ಓದಿ: ಜಗತ್ತಿನ 8 ತೂಕ ಹೆಚ್ಚಿಸುವ ಆಹಾರಗಳು

7. ಅಡೀಡಸ್.

adidas logo meaning in kannada
adidas logo

ಅಡೀಡಸ್(adidas) ಎಂಬ ಹೆಸರನ್ನು ಅದರ ಸಂಸ್ಥಾಪಕ ಅಡಾಲ್ಫ್ ಡಸ್ಸ್ಲರ್(adolf dassler) ಅವರ ಹೆಸರಿನಿಂದ ಪಡೆಯಲಾಗಿದೆ. ಅಡೀಡಸ್ ಲೋಗೊ ಕಾಲಾಂತರದಲ್ಲಿ ಬದಲಾಗಿದೆ. ಆದರೆ ಇದು ಯಾವಾಗಲೂ ತ್ರಿಕೋನವನ್ನು ರೂಪಿಸುವ 3 ಪಟ್ಟೆಗಳನ್ನು ಹೊಂದಿರುತ್ತದೆ. ಅದು ಪರ್ವತವನ್ನು ಸಂಕೇತಿಸುತ್ತದೆ. ಇದು ಎಲ್ಲ ಕ್ರೀಡಾಪಟುಗಳು ಜಯಿಸಬೇಕಾದ ಸವಾಲುಗಳನ್ನು ಪ್ರತಿನಿಧಿಸುತ್ತದೆ.

8. ಟೊಯೋಟಾ.

toyota logo meaning in kannada
toyota logo

ಟೊಯೊಟಾ ಕಂಪನಿಯ ಲೋಗೋ ಸಾಮಾನ್ಯವಾಗಿಯೇ ಕಾಣುತ್ತದೆ. ಆದರೆ ಈ ಲೋಗೊ ಅದ್ಭುತವಾಗಿದೆ. ಏಕೆಂದರೆ ಈ ಲೋಗೊದಲ್ಲಿ ಕಂಪನಿಯ ಹೆಸರಿನಲ್ಲಿ ಬಳಸುವ ಪ್ರತಿಯೊಂದು ಅಕ್ಷರ ಒಳಗೊಂಡಿದೆ.

ಇವಿಷ್ಟು ಲೋಗೊದಲ್ಲಿ ನಿಮಗಿಷ್ಟವಾದ ಕಂಪನಿಯ ಲೋಗೋ ಕಮೆಂಟ್ ಮಾಡಿ ಮತ್ತು ನಿಮಗೆ ಈ ಲೇಖನ ಇಷ್ಟವಾಗಿದ್ದಲ್ಲಿ ಶೇರ್ ಮಾಡಿ ಸಹಕಾರಿಸಿ.

Mahithi Thana

More by this author

Similar category

Explore all our Posts by categories.

commenters

sushma • November 30th,2022

Good information.