Watch Video
ಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟವಾಗಿದೆ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವಾಗಿರುವ ಕ್ರಿಕೆಟನ್ನು 16ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದೆ ಎಂಬುದರ ಬಗ್ಗೆ ಆಧಾರವಿದೆ.
ಪಿಚ್, ಎರಡೂ ವಿಕೇಟ್‌ಗಳ ನಡುವೆ ಒಂದು ಸಾಲಿನಂತೆ 22 ಅಡಿಯಷ್ಟು ಉದ್ದವಾಗಿರುತ್ತದೆ ಮತ್ತು 10 ಅಡಿ ಅಗಲವಾಗಿರುತ್ತದೆ. ಇದು ಸಮತಟ್ಟಾದ ಮೇಲ್ಮೈಯನ್ನು ಹೊಂದಿದೆ ಮತ್ತು ಇದರ ಮೇಲೆ ಅತ್ಯಂತ ಸಣ್ಣ ಪ್ರಮಾಣದ ಹುಲ್ಲುಗಳಿದ್ದು ಆಟ ಮುಂದುವರೆದಂತೆ ಅವು ನಶಿಸಿ ಹೋಗುತ್ತವೆ. ಪಿಚ್‌ನ ಸ್ಥಿತಿ ಪಂದ್ಯದ ಮೇಲೆ ಗಮನಾರ್ಹ ಪರಿಣಾಮವನ್ನುಂಟುಮಾಡುತ್ತದೆ ಮತ್ತು ತಂಡದ ಚಾತುರ್ಯಗಳನ್ನು ಯಾವಾಗಲೂ ಪಿಚ್‌ನ ಸ್ಥಿತಿಯೊಂದಿಗೆ ಪ್ರಚಲಿತ ಮತ್ತು ನಿರೀಕ್ಷಿತ ನಿರ್ಧಾರಕ ಅಂಶವಾಗಿ ನಿರ್ಧರಿಸಲಾಗುತ್ತದೆ.
ಪ್ರತಿಯೊಂದು ವಿಕೆಟ್ ಮೂರು ಮರದ ಸ್ಟಂಪ್‌ನಿಂದ ರಚನೆಗೊಂಡಿದ್ದು, ನೇರವಾಗಿ ಪಿಚ್‌ನಲ್ಲಿ ನೆಡಲಾಗುತ್ತದೆ. ಆ ವಿಕೆಟ್ ಮೇಲೆ ಬೇಲ್ಸ್ ಎಂದು ಕರೆಯಲ್ಪಡುವ ಎರಡು ಮರದ ತುಂಡುಗಳನ್ನು ಇರಿಸಲಾಗಿರುತ್ತದೆ. ಬೇಲ್ಸ್ ಒಳಗೊಂಡಂತೆ ವಿಕೆಟ್‌ಗಳ ಸಂಪೂರ್ಣ ಉದ್ದ 28.5 ಇಂಚುಗಳು ಇರುತ್ತದೆ. ಮೂರು ಸ್ಟಂಪ್‌ಗಳ ಅಗಲ 9 ಇಂಚುಗಳು ಇರುತ್ತದೆ.
ಆಟದ ಸಾರಾಂಶ ಇರುವುದು ಬೌಲರ್, ಪಿಚ್‌ನ ಒಂದು ತುದಿಯಿಂದ ಬೌಲನ್ನು ಬೀಸಿ ಬ್ಯಾಟ್ಸಮನ್ ಎಡೆಗೆ ಎಸೆದಾಗ ಮತ್ತು ಬ್ಯಾಟ್ಸಮನ್ ತನ್ನ ತೋಳುಗಳಿಂದ ಬ್ಯಾಟನ್ನು ಹಿಡಿದು ಆನ್ ಸ್ಟ್ರೈಕ್‌ನಲ್ಲಿ ಇನ್ನೊಂದು ತುದಿಯಿಂದ ಅದನ್ನು ಹೊಡೆಯುತ್ತಾನೆ. ಕ್ರಿಕೆಟ್ ಬ್ಯಾಟಿನ ಹಿಡಿಕೆ ಸಿಲಿಂಡರ್ ಆಕಾರವನ್ನು ಹೊಂದಿದೆ. ಬ್ಯಾಟನ್ನು ಬಿಳಿ ವಿಲ್ಲೋ ಮರದ ಕಟ್ಟಿಗೆಯಿಂದ ಮಾಡಲಾಗಿರುತ್ತದೆ. ಬ್ಲೇಡ್ 4.25 ಇಂಚುಗಳ ಅಳತೆಗಿಂತ ಹೆಚ್ಚು ಅಗಲವಾಗಿರಬಾರದು ಮತ್ತು ಬ್ಯಾಟ್‌ನ ಒಟ್ಟೂ ಉದ್ದ 38 ಇಂಚುಗಳ ಅಳತೆಗಿಂತ ಹೆಚ್ಚಿಗೆ ಇರಬಾರದು.
ನಾವು ಬೇಟಿ ಮಾಡಿದ ಈ ಸಣ್ಣ ಕಾರ್ಖಾನೆಯ ಈ ಕಾಯಕವನ್ನು ಅನಿಲ್ ಅವರು ಐದು ಜನರ ಜೊತೆ ನಡೆಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಈ ಕಾಯಕವನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಕ್ರಿಕೆಟ್‌ನಲ್ಲಿ ತರತರಹದ ಬ್ಯಾಟ್ಗಳು ದೊರೆಯುತ್ತವೆ ಮತ್ತು ಅದಕ್ಕೆ ಇವರು ವಿಧವಿಧವಾದ ಆಕಾರವನ್ನು ಕೊಡುತ್ತಾರೆ. ಕೆಲವರು ತಾವು ಆಟವಾಡುವ ಕ್ರಿಕೆಟ್ ಬ್ಯಾಟನ್ನು ತಾವೇ ಖುದ್ದಾಗಿ ಮಾಡಿಸಿಕೊಳ್ಳುವ ಬೇಡಿಕೆಯಲ್ಲಿರುತ್ತಾರೆ. ಇದು ಅವರಿಗೆ ಆಟದ ಮೇಲೆ ಇರುವ ಪ್ರೀತಿ ಮತ್ತು ಗೌರವವನ್ನು ಸೂಚಿಸುತ್ತದೆ.
ಗ್ರೈಂಡಿಂಗ್ ಮಷೀನ್, ವುಡ್ ಕಟಿಂಗ್ ಮಷೀನ್, ಸ್ಟಿಕರ್ಸ್, ಹ್ಯಾಂಡ್ ಗ್ರಿಪ್ಪರ್, ಇತ್ಯಾದಿ.
ವುಡ್ ಕಟಿಂಗ್ ಮಷೀನ್ 17,800 ರೂಪಾಯಿಗಳು ಮತ್ತು ಟೂಲ್ 4500 ರೂಪಾಯಿಗಳಿರುತ್ತವೆ.
ಇವರು ದಿನಕ್ಕೆ 350-500 ಕ್ರಿಕೆಟ್ ಬ್ಯಾಟ್ ಗಳನ್ನು ತಯಾರಿಸುತ್ತಾರೆ.
ಮುಖ್ಯವಾದ ವಿಷಯವೆಂದರೆ ಭಾರತದಲ್ಲಿ ಕ್ರಿಕೆಟ್ ಪ್ರಸಿದ್ದ ಕ್ರೀಡೆ ಆಗಿದೆ ಮತ್ತು ಈ ಆಟವನ್ನು ಚಿಕ್ಕ ಮಕ್ಕಳಿಂದ ವಯಸ್ಸದವರವರೆಗೂ ಇಷ್ಟಪಟ್ಟು ಆಡುತ್ತಾರೆ.
ನಾವು ಬೇಟಿ ಮಾಡಿದ ಈ ಸ್ಥಳದಲ್ಲಿ ಬ್ಯಾಟ್ ಬೆಲೆ ₹300 - ₹500 ರಷ್ಟು ಇದೆ.
ಭಾರತದಲ್ಲಿ ಕ್ರಿಕೆಟ್‌ಗೆ ತುಂಬಾ ಬೇಡಿಕೆ ಇದೆ. ಆದಕಾರಣ ಇವರು ಈ ಕಾಯಕವನ್ನು ಆರಂಭಿಸಿದಾಗಿಂದಲೂ ಇವರ ವ್ಯಾಪಾರ ಕಡಿಮೆ ಆಗಿಲ್ಲ. ಇಲ್ಲಿ ನಷ್ಟಕಿಂತ ಲಾಭವೇ ಜಾಸ್ತಿ . ಇದು ಸ್ಲಲ್ಪ ಕಷ್ಟದ ಕೆಲಸವಾದರೂ, ಜವಾಬ್ದಾರಿಯಿಂದ ನಡೆಸಿಕೊಂಡು ಬಂದಿರುತ್ತೇವೆ ಎಂದು ಮಾಲೀಕರು ಸಮಾಧಾನದಿಂದ ಉತ್ತರಿಸಿದರು.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...
• April 20th,2022
Nice