Watch Video
ನಮ್ಮ ತಲೆಯಲ್ಲಿ ಒಂದು ಪ್ರಶ್ನೆ ಬಂದಾಗಲೆಲ್ಲ ನೇರವಾಗಿ ಗೂಗಲ್‌ನಲ್ಲಿ ಹೋಗಿ ಹುಡುಕಲು ಪ್ರಾರಂಭಿಸುತ್ತೇವೆ. ಅದರ ನಂತರ ಆ ಪ್ರಶ್ನೆಗೆ ಉತ್ತರ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಮಾಹಿತಿ ನಮಗೆ ಅಲ್ಲಿಂದ ತಿಳಿಯುತ್ತದೆ. ಅಂದರೆ ಕೇವಲ ಒಂದು ಕ್ಲಿಕ್‌ನಿಂದ ನಮ್ಮ ಪ್ರತಿಯೊಂದು ಪ್ರಶ್ನೆಗೆ ನಾವು ಸುಲಭವಾಗಿ ಉತ್ತರವನ್ನು ಪಡೆಯುತ್ತೇವೆ.
ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?ಹಾಗೆ ನೋಡಿದರೆ ಗೂಗಲ್ ನಮ್ಮ ಜೀವನವನ್ನು ನಿಜವಾಗಿಯೂ ಸುಲಭಗೊಳಿಸಿದೆ. ಆದರೆ ನಿಮ್ಮ ಪ್ರಶ್ನೆಗಳಿಗೆ ಗೂಗಲ್ ಎಲ್ಲಿಂದ ಉತ್ತರ ತರುತ್ತದೆಯೆಂದು ನೀವು ಯೋಚಿಸಿದ್ದೀರಾ. ಗೂಗಲ್ ಆ ಪ್ರಶ್ನೆಗಳಿಗೆ ಸ್ವಂತವಾಗಿ ಉತ್ತರಿಸುತ್ತದೆಯೇ ಅಥವಾ ಬೇರೆಡೆಯಿಂದ ಪೇಸ್ಟ್ ಮಾಡಿ ನಕಲಿಸುತ್ತದ್ದೇಯೆ. ಈ ಆಸಕ್ತಿಕರ ವಿಷಯದ ಬಗ್ಗೆ ಇಲ್ಲಿ ನಾವು ತಿಳಿಸುತ್ತಿದ್ದೇವೆ.
ನೀವು ಗೂಗಲ್‌ನಲ್ಲಿ ಒಂದು ಪ್ರಶ್ನೆಗೆ ಉತ್ತರ ಹುಡುಕಿದಾಗ ವೆಬ್‌ಪೇಜ್‌ಗಳು ಲಭ್ಯವಿರುವುದನ್ನು ಗೂಗಲ್ ಮೊದಲು ಪರಿಶೀಲಿಸುತ್ತದೆ. ಇದಕ್ಕಾಗಿ ಗೂಗಲ್ ವೆಬ್‌ಪೇಜ್‌ಗಳನ್ನು ಕ್ರಾಲ್ ಮಾಡುತ್ತದೆ ಮತ್ತು ಅಲ್ಲಿಂದ ಸಿಗುವ ಕೆಲವು ಪೇಜ್‌ಗಳನ್ನು ಇಂಡೆಕ್ಸ್‌ನಲ್ಲಿ ಸೇರಿಸುತ್ತದೆ. ಈ ಪ್ರಕ್ರಿಯೆಯನ್ನು ಕ್ರಾವ್ಲಿಂಗ್ ಎಂದು ಕರೆಯಲಾಗುತ್ತದೆ. ಗೂಗಲ್ ಬೋಟ್ ಒಂದು ಕ್ರಾವ್ಲರ್ ಸಾಫ್ಟ್‌ವೇರ್ ಆಗಿದೆ. ಈ ಕ್ರಾವಲರ್ಗಳು ಒಂದು ಲಿಂಕ್‌ನಿಂದ ಇನ್ನೊಂದಕ್ಕೆ ಡೇಟಾವನ್ನು ಸಂಗ್ರಹಿಸಿ ಅದನ್ನು ಗೂಗಲ್ ಸರ್ವರ್‌ಗೆ ತರುತ್ತದೆ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರಕ್ರಾವ್ಲರ್ ವೆಬ್‌ಪೇಜ್‌ಗಳನ್ನು ಕಂಡುಕೊಂಡಾಗ ಕಂಪನಿಯ ಸಿಸ್ಟಮ್ ಈ ವೆಬ್‌ಪೇಜ್‌ನಲ್ಲಿ ಇರುವ ವಿಷಯಗಳನ್ನು ಪರಿಶೀಲಿಸುತ್ತದೆ. ಈ ಪರಿಶೀಲನೆಯಲ್ಲಿ ಪೇಜ್‌ನ ವಿಷಯದ ಜೊತೆಗೆ ಚಿತ್ರಗಳು ಮತ್ತು ವೀಡಿಯೊಗಳು ಸಹ ಸೇರಿರುತ್ತದೆ. ಕ್ರಾವ್ಲ್ ಮಾಡಿದ ಪೇಜ್ ಯಾವುದು ಎಂದು ಗೂಗಲ್ ಪರಿಶೀಲಿಸುತ್ತದೆ. ಇದರಲ್ಲಿ ಕೀವರ್ಡ್ಸ್ ಮತ್ತು ವೆಬ್‌ಸೈಟ್‌ನ ಹೊಸತನದಂತಹ ಅನೇಕ ವಿಷಯಗಳನ್ನು ನೋಡಿಕೊಳ್ಳಲಾಗುತ್ತದೆ. ಇಲ್ಲಿ ಯಾವುದೇ ನಕಲು ಮಾಡಿರುವ ವೆಬ್‌ಸೈಟ್ ಇದ್ದರೆ ಅದನ್ನು ತೆಗೆದುಕೊಳ್ಳುವುದಿಲ್ಲ. ಹುಡುಕಾಟದಲ್ಲಿ ಗೂಗಲ್‌ನ ಸಿಸ್ಟಮ್ ಎಲ್ಲಾ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತದೆ. ಎಲ್ಲ ಮಾಹಿತಿಯನ್ನು ಗೂಗಲ್ ಇಂಡೆಕ್ಸ್‌ನಲ್ಲಿ ಸಂಗ್ರಹಿಸಿ ದೊಡ್ಡ ಡೇಟಾಬೇಸನ್ನು ರಚಿಸುತ್ತದೆ.
ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.ಕೆಲವು ಹುಡುಕಾಟಗಳನ್ನು ಗೂಗಲ್‌ನಲ್ಲಿ ಟೈಪ್ ಮಾಡಿದಾಗಲೆಲ್ಲ ನಿಮ್ಮ ಪ್ರಶ್ನೆಗೆ ಸಂಬಂಧಿಸಿದ ಅನೇಕ ಇತರ ವಿಷಯಗಳನ್ನು ಪಡೆಯುತ್ತೇವೆ. ಆ ಸಂಬಂಧಿಸಿದ ವಿಷಯಗಳನ್ನು ಅಲ್ಲಿ ತೋರಿಸುವುದು ತುಂಬಾ ವಿಷಯದ ಮೇಲೆ ಅವಲಂಬಿತವಾಗಿರುತ್ತದೆ. ಯಾವ ವೆಬ್‌ಪೇಜ್ ಅತ್ಯಧಿಕ ಶ್ರೇಣಿಯನ್ನು ಹೊಂದಿರುತ್ತದೆಯೋ ಅದರ ಮಾಹಿತಿಯನ್ನು ಅಲ್ಲಿ ತೋರಿಸಲಾಗುತ್ತದೆ. ಈ ರೀತಿಯಾಗಿ ಗೂಗಲ್ ನಿಮಗೆ ಬರುವ ಪ್ರತಿಯೊಂದು ಪ್ರಶ್ನೆಗೆ ಸೆಕೆಂಡ್‌ಗಳಲ್ಲಿ ಉತ್ತರವನ್ನು ನೀಡುತ್ತದೆ. ಇವೆಲ್ಲದರಲ್ಲಿ ಗೂಗಲ್‌ನ ಪ್ರೊಸೆಸರ್ ಭಾರಿ ಮಹತ್ವದ್ದಾಗಿದೆ.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
See all comments...
dayan gowda • December 11th,2021
Good information