ಈ ಪ್ರಶ್ನೆ ಕೇಳಿದ ತಕ್ಷಣ ಎಷ್ಟೋ ಜನರಿಗೆ ಉತ್ತರ ಗೊತ್ತೆ ಇರುವುದಿಲ್ಲ. ಜಗತ್ತಿನ ಏಳು ಅದ್ಭುತ ಎಂದ ತಕ್ಷಣ ಈಜಿಪ್ಟಿನ ಪಿರಾಮಿಡ್, ಭಾರತದ ತಾಜ್ ಮಹಲ್ ನೆನಪಿಗೆ ಬರಬಹುದು. ಆದರೆ 7 ಅದ್ಭುತಗಳು ನೆನಪಿಗೆ ಬರುವುದಿಲ್ಲ. ಜಗತ್ತಿನ ಏಳು ಅದ್ಭುತಗಳು ಎಂಬ ಪ್ರಶ್ನೆಯು "ಜಗತ್ತಿನ ಏಳು ಅದ್ಭುತಗಳು" ಎಂಬ ಪ್ರಶ್ನೆಯಾಗೆ ಉಳಿದಿದೆ.
ಪ್ರಾಚೀನ ವಿಶ್ವದ ಏಳು ಅದ್ಭುತಗಳನ್ನು ಕ್ರಿ.ಶ. 250ರಲ್ಲಿ ಬೈಜಾಂಟಿಯಂನ ಪಿಲೋ ಅವರು ವರ್ಗೀಕರಿಸಿದರು ಮತ್ತು ಅಂದಿನಿಂದ ಎಲ್ಲ ಜನರು "ಏಳು ಅದ್ಭುತಗಳು" ಎಂದೇ ಹೇಳಿಕೊಂಡು ಬಂದಿದ್ದಾರೆ, ಆದರೆ ಅದು ಯಾವುದೆಂದು ಗೊತ್ತಿಲ್ಲ.
ಅದ್ಭುತಗಳಲ್ಲಿ ಮೂರು ಭಾಗಗಳಿವೆ:
• ಪ್ರಾಚೀನ ಅದ್ಭುತಗಳು.
• ವಿಶ್ವದ ನೈಸರ್ಗಿಕ ಅದ್ಭುತಗಳು ಮತ್ತು
• ಪ್ರಪಂಚದ ಇಂಜಿನಿಯರಿಂಗ್ ಅದ್ಭುತಗಳು
ಇದರಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಪ್ರಾಚೀನ ಅದ್ಭುತಗಳಲ್ಲಿ ಒಂದಾಗಿದೆ. ತಾಜ್ ಮಹಲ್ 2007ರಲ್ಲಿ ಯುನೆಸ್ಕೊ ಗುರುತಿಸಲ್ಪಟ್ಟ ಏಳು ಅದ್ಭುತಗಳಲ್ಲಿ ಒಂದಾಗಿದೆ. ಇದರಲ್ಲಿ ಗಿಜಾದ ಗ್ರೇಟ್ ಪಿರಮಿಡ್ ಬರುವುದಿಲ್ಲ. ಯುನೆಸ್ಕೋದಿಂದ ಗುರುತಿಸಲ್ಪಟ್ಟ ಈ ತಾಣಗಳು ಹತ್ತಾರು ದಶಲಕ್ಷ ಮತಗಳ ಆನ್ಲೈನ್ ಸಮೀಕ್ಷೆಯಿಂದ ಆರಿಸಲಾಗಿದೆ.
ನಿಮಗೆ ನಾವು ಈಗ ನಾವು ಹೇಳುವ ಯುನೆಸ್ಕೊದಿಂದ ಗುರುತಿಸಲ್ಪಟ್ಟ ಏಳು ಅದ್ಭುತಗಳ ಹೆಸರನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲವೆಂದರೆ, ನಂತರ ಹೇಳುವ ವಿಶ್ವದ ಏಳು ಪ್ರಾಚೀನ ಅದ್ಭುತಗಳ ಹೆಸರನ್ನು ನೆನಪಿಟ್ಟುಕೊಳ್ಳಲು ಇನ್ನು ಕಷ್ಟವಾಗುತ್ತದೆ.
ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವದ ಏಳು ಅದ್ಭುತಗಳೆಂದರೆ,
1. ಚೀನಾದಲ್ಲಿರುವ, ದಿ ಗ್ರೇಟ್ ವಾಲ್ ಆಫ್ ಚೀನಾ.
2. ಮೆಕ್ಸಿಕೋದಲ್ಲಿರುವ, ಚಿಚೆನ್ ಇಟ್ಜಾ.
3. ಬ್ರೆಜಿಲ್‌ನಲ್ಲಿರುವ, ಕ್ರೆಸ್ಟ್ ಡಿ ರಿಡೀಮರ್.
4. ಜೋರ್ಡಾನ್‌ನಲ್ಲಿರುವ, ಪೆಟ್ರಾ.
5. ಭಾರತದಲ್ಲಿರುವ, ತಾಜ್ ಮಹಲ್.
6. ಇಟಲಿಯಲ್ಲಿರುವ, ಕೊಲೋಸಿಯಂ.
7. ಪೆರುನಲ್ಲಿರುವ, ಮಚ್ಚು ಪಿಚು.
ಇನ್ನು ವಿಶ್ವದ ಏಳು ಪ್ರಾಚೀನ ಅದ್ಭುತಗಳೆಂದರೆ,
1. ಈಜಿಪ್ಟಿನ ಗಿಜಾದ, ಗ್ರೇಟ್ ಪಿರಮಿಡ್.
2. ಗ್ರೀಸ್‌ನಲ್ಲಿರುವ, ಕೊಲೊಸಸ್ ಆಪ್ ರೋಡಸ್.
3. ಈಜಿಪ್ಟಿನಲ್ಲಿರುವ, ಲೈಟ್ ಹೌಸ್ ಆಫ್ ಅಲೆಕ್ಸಾಂಡ್ರಿಯ.
4. ಟರ್ಕಿಯ, ಹ್ಯಾಲಿಕಾರ್ನಸ್ಸಸಿನಲ್ಲಿರುವ ಸಮಾಧಿ.
5. ಗ್ರೀಸ್‌ನಲ್ಲಿರುವ, ಸ್ಟಾಚು ಆಪ್ ಜೀವ್ಸ್.
6. ಟರ್ಕಿಯ, ಆರ್ಟೆಮಿಸಿನಲ್ಲಿರುವ ಟೆಂಪಲ್.
7. ಇರಾಕ್‍ನಲ್ಲಿರುವ, ಹ್ಯಾಂಗಿಂಗ್ ಗಾರ್ಡನ್ಸ್ ಆಫ್ ಬ್ಯಾಬಿಲೋನ್.
See all comments...
harisha h s • May 14th,2022
Nice and important information