Watch Video
ನೀವೆಲ್ಲ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಸಾಕಷ್ಟು ಹಣ ಗಳಿಸಲು ಯೋಚಿಸುತ್ತಿರಬಹುದು. ಆದರೆ ಅದಕ್ಕೂ ಮುಂಚೆ ನೀವು ಅದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಎಲ್ಲಿಗೆ ಹೋಗಬೇಕು? ಷೇರು ಮಾರುಕಟ್ಟೆಯಲ್ಲಿರುವ ವಿಧಾನಗಳೇನು? ಇವೆರಡರ ಬಗ್ಗೆ ಇಲ್ಲಿ ನಾವು ತಿಳಿಸುತ್ತಿದ್ದೇವೆ. ಷೇರು ಮಾರುಕಟ್ಟೆ ಬಗ್ಗೆ ನೀವು ತಿಳಿಯಲು ಬಯಸಿದರೆ ಈ ಆರ್ಟಿಕಲ್ ಪೂರ್ತಿ ನೋಡಿ. ಮುಂದೆ ಬರುವ ಇನ್ನಷ್ಟು ಷೇರು ಮಾರುಕಟ್ಟೆ ಲೇಖನ ಅಥವಾ ವೀಡಿಯೋ ನೋಡಲು ಈಗಲೇ ನಮ್ಮ ವೆಬ್‌ಸೈಟ್‌ಗೆ ರಿಜಿಸ್ಟರ್ ಆಗಿ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರನೀವು ಯಾವುದಾದರೂ ಹಣ್ಣಿನ ಅಂಗಡಿಗೆ ಹೋಗಿ ಹಣ ನೀಡಿದರೆ ಅವರು ನಿಮಗೆ ಹಣ್ಣನ್ನು ನೀಡುತ್ತಾರೆ. ಇದೇ ರೀತಿಯೇ ಷೇರು ಮಾರುಕಟ್ಟೆಯಲ್ಲಿ ನೀವು ಹಣದಿಂದ ಕಂಪನಿ ನೀಡುವ ಷೇರನ್ನು ಖರೀದಿಸುತ್ತೀರಾ. 'ಷೇರು' ಎಂದರೆ ನಿಮಗೆ ಕಂಪನಿಯಲ್ಲಿ ಸಿಗುವ ಒಂದು ಪಾರ್ಟ್ನರ್ಶಿಪ್. ಆ ಕಂಪನಿ ಅದರ ಒಂದು ಷೇರಿನ ಬೆಲೆ ನಿಮಗೆ ತಿಳಿಸುತ್ತದೆ. ನೀವು ಆ ಬೆಲೆಗೆ ಅದನ್ನು ಖರೀದಿಸಿದರೆ ನಿಮಗೆ ಆ ಕಂಪನಿಯಲ್ಲಿ ಒಂದು ವರ್ಚುಯಲ್ ಪಾಟ್ನರ್ಶಿಪ್(Partnership) ಸಿಕ್ಕಹಾಗೆ. ಕಂಪನಿಗಳು ಲಕ್ಷಗಳಷ್ಟು ಷೇರನ್ನು ನೀಡುತ್ತವೆ, ನೀವು ಅವುಗಳಲ್ಲಿ ಕೆಲವು ಷೇರುಗಳನ್ನು ಮಾತ್ರ ತೆಗೆದುಕೊಳ್ಳುತ್ತೀರಿ.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳುನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ, ಸಾಕಷ್ಟು ಹಣ ಗಳಿಸಲು ಇಚ್ಛಿಸುತ್ತೀರಾ. ನೀವು ಎಷ್ಟು ಷೇರನ್ನು ಖರೀದಿಸುತ್ತೀರೋ ಅಷ್ಟೇ ನಿಮಗೆ ಪ್ರಾಫಿಟ್ ಆಗುತ್ತದೆ. ಆದರೆ ನೀವು ಎಷ್ಟು ಗಳಿಸುತ್ತೀರೋ, ಅಷ್ಟೇ ಕಳೆದುಕೊಳ್ಳುವ ಭೀತಿಯೂ ಇದೆ. ಇದೆಲ್ಲ ನೀವು ಆರಿಸುವ ಕಂಪನಿಯ ಮೇಲೆ ನಿಂತಿದೆ.
ಉದಾಹರಣೆಗೆ, ರಿಲಿಯನ್ಸ್ ಕಂಪನಿ ತೆಗೆದುಕೊಳ್ಳೋಣ. ರಿಲಿಯನ್ಸ್ ಕಂಪನಿ ಒಂದು ಸಾವಿರ ಷೇರನ್ನು ನೀಡುತ್ತದೆ ಎಂದು ತಿಳಿದುಕೊಳ್ಳಿ. ಅದರ ಒಂದು ಷೇರಿನ ಬೆಲೆ 100ರೂ ನೀಡುತ್ತದೆ. ಒಂದು ವೇಳೆ ಅದು 1000 ಷೇರನ್ನು ಜನರಲ್ಲಿ ಮಾರಿದರೆ ಅದಕ್ಕೆ 1 ಲಕ್ಷ ರೂ ಸಿಗುತ್ತದೆ. ಇದಕ್ಕಾಗಿ ರಿಲಯನ್ಸ್ SEBIಗೆ ಹೋಗಿ ತನ್ನ ಕಂಪನಿಯ ಡಿಟೇಲ್ಸ್ ತಿಳಿಸಿದಾಗ. SEBI ಅದಕ್ಕೆ ಅಪ್ರೂವಲ್ ನೀಡುತ್ತದೆ. SEBI ಎಂದರೆ ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ಇದು ಕಂಪನಿ, ಸ್ಟಾಕ್ ಮಾರ್ಕೆಟ್, ಹೂಡಿಕೆ ಮಾಡುವ ಜನರು ಎಲ್ಲರ ಮೇಲೂ ಕಣ್ಣಿಟ್ಟಿರುತ್ತದೆ.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ರಿಲಿಯನ್ಸ್ SEBI ಹತ್ತಿರ ಹೋಗಿ ಅಪ್ರೂವಲ್ ಆಗಿದೆ. ಈಗ ಅದರ 1000 ಷೇರುಗಳನ್ನು ಖರೀದಿಸಲು ಒಂದು ಮಾರುಕಟ್ಟೆ ಬೇಕು. ಆ ಮಾರುಕಟ್ಟೆಯ ಷೇರು ಮಾರುಕಟ್ಟೆ. ಕಂಪನಿಯ ಷೇರನ್ನು ಮಾರುವುದು ಈ ಷೇರು ಮಾರುಕಟ್ಟೆಯ ಮೇಲೆ ನಿಂತಿದೆ. ಭಾರತದಲ್ಲಿ ಎರಡು ಷೇರು ಮಾರುಕಟ್ಟೆಗಳಿವೆ. ಅವೆಂದರೆ NSE(ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್) ಮತ್ತು BSE(ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್). ರಿಲಿಯನ್ಸ್ ಕಂಪನಿ ಈ ಎರಡು ಷೇರು ಮಾರುಕಟ್ಟೆಗೆ ಹೋಗಿ ಪ್ರತಿ ಷೇರಿಗೆ ನೂರು ರೂಪಾಯಿಯಂತೆ 1000 ಷೇರನ್ನು ಮಾರಬೇಕು ಎಂದು ಕೇಳುತ್ತದೆ. NSE/BSE ಡೈರೆಕ್ಟ್ ಜನರ ಹತ್ತಿರ ಹೋಗಿ ಷೇರನ್ನು ಖರೀದಿಸಲು ಕೇಳುವುದಿಲ್ಲ. ಇದು ಕೆಲವು ಬ್ರೋಕರೇಜ್ ಕಂಪನಿಗಳಿಗೆ ಷೇರನ್ನು ಖರೀದಿಸಲು ಜನರನ್ನು ಸಂಗ್ರಹಿಸಲು ಕೇಳುತ್ತದೆ.
ಈ NSE/BSE ಇಂದ ಅಪ್ರೂವಲ್ ಪಡೆಯುವ ಬ್ರೋಕರೇಜ್ ಕಂಪನಿಗಳಿಂದಲೇ ನಾವು ಷೇರನ್ನು ಖರೀದಿಸುತ್ತೇವೆ. NSE/BSEಯಿಂದ ತುಂಬಾ ಬ್ರೋಕರೇಜ್ ಕಂಪನಿಗಳು ಅಪ್ರೂವಲ್ ಪಡೆದಿದೆ. ಅವುಗಳಲ್ಲಿ ಕೆಲವು ಹೇಳಬೇಕೆಂದರೆ ಜಿರೋಧಾ, ಏಂಜೆಲ್ ಓನ್, ಇತ್ಯಾದಿ. ಈ ಅಪ್ರೂವಲ್ ಪಡೆದ ಕಂಪನಿಗಳು ಜನರ ಹತ್ತಿರ ಹೋಗಿ, ನಮ್ಮಲ್ಲಿ ಷೇರು ಖರೀದಿಸಿ, ನಮ್ಮ ಆ್ಯಪ್ ಯೂಸ್ ಮಾಡಿ ಎಂದು ಕೇಳುತ್ತವೆ. ನೀವು NSE/BSEಯಲ್ಲಿ ಷೇರು ಖರೀದಿಸಲು ಬಯಸಿದರೆ ಜಿರೋಧಾದಂತ ಅನೇಕ ಬ್ರೋಕರೇಜ್ ಕಂಪನಿಗಳಿಂದಲೇ ಷೇರನ್ನು ಖರೀದಿಸಬೇಕಾಗುತ್ತದೆ. ನೀವು ಯಾವುದೇ ಬ್ರೋಕರೇಜ್ ಕಂಪನಿಗಳಲ್ಲಿ ಷೇರನ್ನು ಖರೀದಿಸಲು ರಿಜಿಸ್ಟರ್ ಆದರೆ ನೀವು ಡೈರೆಕ್ಟ್ NSE/BSE ಕನೆಕ್ಟ್ ಆಗಿರುತ್ತದೆ.
ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳುನೀವು ಜಿರೋಧಾದಲ್ಲಿ ರಿಲಿಯನ್ಸ್ ಕಂಪನಿಯ 1000 ಷೇರುಗಳನ್ನು ಖರೀದಿಸಲು ಹಣ ನೀಡುತ್ತೀರಾ. ಆಗ ಜಿರೋಧಾ ನಿಮ್ಮ ಹಣ ತೆಗೆದುಕೊಂಡು ಸ್ಟಾಕ್ ಎಕ್ಸೇಂಜ್ ಆದ NSEಗೆ ತೆಗೆದುಕೊಂಡು ಹೋಗುತ್ತದೆ. NSE ಆ ಹಣವನ್ನು ರಿಲಿಯನ್ಸ್ ಕಂಪನಿಗೆ ನೀಡಿದಾಗ, ರಿಲಿಯನ್ಸ್ 1000 ಷೇರನ್ನು ಅದಕ್ಕೆ ನೀಡುತ್ತದೆ. NSE ಆ ಷೇರನ್ನು ಜಿರೋಧಾಗೆ ನೀಡುತ್ತದೆ. ಜಿರೋಧಾ 1000 ಷೇರನ್ನು ನಿಮಗೆ ನೀಡುತ್ತದೆ. ಜಿರೋಧಾ ನಿಮಗೆ ಆ ಷೇರನ್ನು ನೀಡಲು ನಿಮಗೆ ಒಂದು ಅಕೌಂಟ್ ಬೇಕು, ಅದನ್ನೇ demat ಅಕೌಂಟ್ ಎಂದು ಕರೆಯಲಾಗುತ್ತದೆ.
ಈ demat ಅಕೌಂಟ್ ಒಂದು ರೀತಿಯಲ್ಲಿ ಲೀಗಲ್ ಅಗ್ರಿಮೆಂಟ್ ಆಗಿರುತ್ತದೆ. ಈ demat ಅಕೌಂಟ್ ಅನ್ನು ಜಿರೋಧಾದಂತ ಬ್ರೋಕರೇಜ್ ಕಂಪನಿಗಳು ನಿಮಗೆ ನೀಡುತ್ತಿಲ್ಲ. ಇದು ಸರ್ಕಾರದಿಂದ ನಮಗೆ ಸಿಗುತ್ತದೆ. ಮುಂಚೆ ನೀವು ಖರೀದಿಸುವ ಷೇರು ನಿಮ್ಮದು ಎನ್ನಲು ಪ್ರಿಂಟೆಡ್ ಅಗ್ರಿಮೆಂಟ್ ಬರುತ್ತಿತ್ತು. ಈಗ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುವ ಕಾರಣ ಪ್ರಿಂಟೆಡ್ ಅಗ್ರಿಮೆಂಟ್ ಬದಲು demat ಅಕೌಂಟ್ ಬಂದಿದೆ. ಈ demat ಅಕೌಂಟ್ ಅನ್ನು ಜಿರೋಧಾದಂತ ಬ್ರೋಕರೇಜ್ ಕಂಪನಿಗಳು ನಿಮಗೆ ನೀಡುತ್ತಿಲ್ಲ. ಇದು ಸರ್ಕಾರದಿಂದ ನಮಗೆ ಸಿಗುತ್ತದೆ.
ಇದನ್ನು ಓದಿ: ಜಗತ್ತಿನ 8 ತೂಕ ಹೆಚ್ಚಿಸುವ ಆಹಾರಗಳುಈ demat ಅಕೌಂಟ್ ಸರ್ಕಾರದ ಮೇಲೆ ನಿಂತಿರುವ ಕಾರಣ ಮುಂದೆ ಜಿರೋಧಾದಂಥ ಬ್ರೋಕರೇಜ್ ಕಂಪನಿಗಳು ಹೋದರು. ನೀವು ತೆಗೆದುಕೊಂಡ ಷೇರು ಸುರಕ್ಷಿತವಾಗಿರುತ್ತದೆ. ನೀವು ಜಿರೋಧಾದಲ್ಲಿ ರಿಜಿಸ್ಟರ್ ಅದಾಗಲೇ CDSL(ಸೆಂಟ್ರಲ್ ಡೆಪಾಸಿಟರಿ ಸರ್ವೀಸಸ್ ಲಿಮಿಟೆಡ್) ಇಂಡಿಯಾದಿಂದ ಒಂದು ಮೇಲ್ ಬರುತ್ತದೆ. ನೀವು ಅಲ್ಲಿ ಹೋಗಿ ರಿಜಿಸ್ಟರ್ ಆಗಿ, ಲಾಗಿನ್ ಅದರೆ ನಿಮ್ಮ demat ಅಕೌಂಟ್ ನೋಡಬಹುದು. ನೀವು ಷೇರಿನ ಖರೀದಿ ಮತ್ತು ಮಾರಾಟವನ್ನು ಇಲ್ಲಿ ನಡೆಸಲು ಆಗುವುದಿಲ್ಲ. ಅವುಗಳನ್ನು ಮಾಡಲು ನೀವು ಜಿರೋಧಾದಂಥ ಬ್ರೋಕರೇಜ್ ಕಂಪನಿಯ ಸಹಾಯ ಪಡೆಯಲೇಬೇಕು.
ಷೇರು ಮಾರುಕಟ್ಟೆಯ ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
See all comments...
sushma • December 3rd,2022
ಅದ್ಭುತ.