Watch Video
ನಾನು ಒಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮಕ್ಕೆ(social media) ವ್ಯಸನಿ ಆಗಿದ್ದೇನೆ. ಈ ಸಾಮಾಜಿಕ ಮಾಧ್ಯಮದಲ್ಲಿ ಬರುವ ಮಾಹಿತಿಗಳು ಅಧಿಕ ಡೋಪಮೈನ್(dopamine) ಅನ್ನು ಬಿಡುಗಡೆ ಮಾಡಿ, ನನ್ನ ಮೆದುಳನ್ನು ಅತಿಯಾಗಿ ಪ್ರಚೋದಿಸುತ್ತಿದೆ(overstimulate). ನಿಮಗೂ ಈ ರೀತಿಯಾಗುತ್ತಿರಬಹುದು. ಇದರಿಂದ ಏನು ಸಮಸ್ಯೆ ಇದೆ ಎಂದು ನೀವು ಕೇಳಬಹುದು. ಆದರೆ ಇದರಿಂದ ತುಂಬಾ ಸಮಸ್ಯೆ ಇದೆ. ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿ ಆಗುವುದರ ಅಧಿಕ ಅಡ್ಡ ಪರಿಣಾಮಗಳು ಇದೆ. ಮೊದಲಿಗೆ ಈ ಅಧಿಕ ಮಾಹಿತಿಯು ನಮ್ಮ ಬದುಕಿನಲ್ಲಿ ಗೊಂದಲವನ್ನು(confusion) ಸೃಷ್ಟಿಸುತ್ತಿದೆ. ನಮ್ಮ ಹತ್ತಿರ ಅಧಿಕ ಮಾಹಿತಿ ಇದ್ದಾಗ ನಾವು ಪಾರ್ಶ್ವವಾಯುಗೆ(paralyze) ಒಳಗಾಗುತ್ತೇವೆ, ಸೋಮಾರಿಯಾಗುತ್ತೇವೆ, ವಿಳಂಬ ಪ್ರವೃತ್ತಿ(procrastination) ಹೊಂದುತ್ತೇವೆ. ಬದುಕಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
"ಒಂದು ನಿರ್ಧಾರ ನಮ್ಮ ಬದುಕನ್ನೇ ಬದಲಾಯಿಸುತ್ತದೆ" ಎಂದು ಟೋನಿ ರಾಬಿನ್ಸ್(tony robins) ಅವರು ಅವರ ಅನೇಕ ಪುಸ್ತಕಗಳಲ್ಲಿ ತಿಳಿಸುತ್ತಾರೆ. ಆದರೆ ಇಂದು ನಮಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೆ ಕೇವಲ ಒಂದೇ ಒಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ತುಂಬಾ ಗೊಂದಲದಲ್ಲಿದ್ದೇವೆ, ಆತಂಕದಲ್ಲಿ(anxious) ಇದ್ದೇವೆ, ಅತಿಯಾದ ಚಿಂತನೆಯಿಂದ ಅಧಿಕ ಸಮಸ್ಯೆಯಾಗುತ್ತಿದೆ. ಇವೆಲ್ಲವೂ ನಮ್ಮ ಮೆದುಳನ್ನು ಹಾಳು ಮಾಡುತ್ತಿದೆ. ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ ಈ ಲೇಖನ ತುಂಬಾ ಸಹಕಾರಿಯಾಗಿದೆ. ಇದು ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.
ಇದಕ್ಕೆ ಪರಿಹಾರ ತುಂಬಾ ಸರಳವಾಗಿದೆ ಒಂದು ಕಡೆ ಅಧಿಕ ಕಿರಿಕಿರಿ ಇದ್ದರೆ ಇನ್ನೊಂದು ಕಡೆ ಮೌನ(silence) ಇರಬೇಕಾಗಿದೆ ಮತ್ತು ಮೌನಕ್ಕಿಂತ ಒಂದು ಹೆಜ್ಜೆ ಮುಂದಿರುವುದೇ ನಿಶ್ಚಲತೆ(stillness). ನಾವು ನಮ್ಮ ಬದುಕಿನಲ್ಲಿ ಮೌನ ಮತ್ತು ನಿಶ್ಚಲತೆ ತಂದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಮಸ್ಯೆಗಳನ್ನು ಪೂರ್ತಿಯಾಗಿ ತೆಗೆದುಹಾಕಲು ಸಾಧ್ಯವಿಲ್ಲ, ಆದರೆ ಅದನ್ನು ಕಡಿಮೆ ಮಾಡಬಹುದು.
ರಿಯಾನ್ ಹಾಲಿಡೇ(ryan holiday) ಅವರ "stillness is the key" ಎಂಬ ಪುಸ್ತಕದಲ್ಲಿ, "ಮೌನವು ತುಂಬಾ ಶಕ್ತಿಶಾಲಿಯಾಗಿದೆ. ಆದರೆ ಮೌನವೆಂದರೆ ಬಾಯಿ ಮುಚ್ಚಿಕೊಂಡು ಸುಮ್ಮನೆ ಕೇಳುತ್ತಿರುವುದಲ್ಲ. ಮೌನವೆಂದರೆ ನಿಶ್ಚಲತೆ ಆಗಿದೆ" ಎಂದು ಹೇಳುತ್ತಾರೆ. ನಿಶ್ಚಲತೆ ಒಂದು ಮಾನಸಿಕ ಸ್ಥಿತಿಯಾಗಿದ್ದು(mental state), ಅಲ್ಲಿ ನಾವು ಯಾವುದು ಮುಖ್ಯ ಯಾವುದು ಮುಖ್ಯವಲ್ಲ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು. ನಮ್ಮ ಮನಸ್ಸು ಹರಿಯುತ್ತಿರುತ್ತದೆ, ನಾವು ಯಾವುದಾದರೂ ಕೆಲಸ ಮಾಡಬೇಕೆಂದಿದ್ದರೆ ಗಮನಹರಿಸಿ ಮಾಡಬಹುದು, ಅದನ್ನು ನಿಶ್ಚಲತೆ ಎನ್ನುತ್ತಾರೆ. ಈ ನಿಶ್ಚಲತೆ ಇಂದಿನ ದಿನಗಳಲ್ಲಿ ಒಂದು ಅಲೌಕಿಕ ಶಕ್ತಿಯಾಗಿದೆ(supernatural power). ಹೀಗಾಗಿ ಇದನ್ನು ಕಲಿಯುವುದು ನಮಗೆ ತುಂಬಾನೇ ಮುಖ್ಯವಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ನಿಶ್ಚಲತೆ ಬಂದರೆ ನಾವು ಅಂದುಕೊಂಡ ಎಲ್ಲಾ ಗುರಿ ಮತ್ತು ಕನಸನ್ನು ಸಾಧಿಸಬಹುದು. ಹಾಗಿದ್ದರೆ,
ನಿಶ್ಚಲತೆಯನ್ನು ಸಾಧಿಸುವುದು ಹೇಗೆ?
ನಾವು ನಮ್ಮ ಬದುಕಿನಲ್ಲಿ ನಿಶ್ಚಲತೆಯನ್ನು ತಂದು ಅದರ ಶಕ್ತಿಯನ್ನು ಬಳಸಲು ಬಯಸಿದರೆ 3 ಏರಿಯಾಗಳ ಮೇಲೆ ಗಮನ ಹರಿಸಬೇಕು.
ಇದನ್ನು ಓದಿ: 21 ದಿನಗಳಲ್ಲಿ ಎಲ್ಲರನ್ನು ಹಿಂದೆ ತನ್ನಿ(monk mode)ಎಲ್ಲವೂ ಮೆದುಳಿನಿಂದಲೇ ಪ್ರಾರಂಭಗೊಳ್ಳುತ್ತದೆ, ಹೀಗಾಗಿ ಮೆದುಳನ್ನು ಶಾಂತಗೊಳಿಸಿ. ಹಾಗಿದ್ದರೆ ಮೆದುಳನ್ನು ಶಾಂತಗೊಳಿಸುವುದು ಹೇಗೆ?
ನೆಪೋಲಿಯನ್ ಬೋನಪಾರ್ಟೆ(napoleon bonaparte) ಎಂಬವರು ಒಬ್ಬ ರಾಜನಾಗಿದ್ದರು. ಅವರಿಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅವರಿಗೆ ಯಾವುದಾದರೂ ಮಾಹಿತಿ ಬಂದರೆ ತಕ್ಷಣವೇ ಪ್ರತ್ಯುತ್ತರ ನೀಡುತ್ತಿರಲಿಲ್ಲ, ಅವರು ಸುಮ್ಮನಿರುತ್ತಿದ್ದರು ಮತ್ತು ಮೂರು ತಿಂಗಳ ನಂತರ ಪ್ರತ್ಯುತ್ತರ ನೀಡುತ್ತಿದ್ದರು. ಅದು ಏಕೆ ಎಂದು ನೀವು ಕೇಳಬಹುದು. ಇದು ಏಕೆಂದರೆ ಮೂರು ವಾರದಲ್ಲಿ ಅವರ ಹತ್ತಿರ ಬಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತಿದ್ದವು. ನೀವು ನೆಪೋಲಿಯನ್ ತುಂಬಾ ಬೇಜವಾಬ್ದಾರಿಯಿಂದ ಇದ್ದರೂ ಎನ್ನಬಹುದು, ಆದರೆ ಅವರು ಬೇಜವಾಬ್ದಾರನಾಗಿಲಿಲ್ಲ. ಯಾವುದಾದರೂ ಒಂದು ಕೆಲಸ ತುಂಬಾ ಮುಖ್ಯವಾಗಿದ್ದರೆ ಅದು ಹೇಗಾದರೂ ಮಾಡಿ ಅವರ ತನಕ ಬರುತ್ತದೆ ಎಂದು ತಿಳಿದಿದ್ದರು. ಅದು ಬಿಟ್ಟು ಎಲ್ಲ ವಿಷಯಗಳ ಮೇಲೆ ಅವರು ಗಮನ ಹರಿಸುತ್ತಿದರೆ ಎಲ್ಲದಕ್ಕೂ ಪ್ರತಿಕ್ರಯಿಸುತ್ತಿದ್ದಾರೆ, ಅವರಿಗೆ ಮುಖ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಈ ಪಾಠ ತುಂಬಾ ಪ್ರಮುಖವಾಗಿದೆ.
ನಮಗೆ ಫೋನ್ನಲ್ಲಿ ಯಾವುದೇ ರೀತಿಯ ಸಣ್ಣ ನೋಟಿಫಿಕೇಶನ್ ಬಂದರು ಅದು ನಮ್ಮ ಗಮನವನ್ನು ಹಾಳು ಮಾಡುತ್ತದೆ. ನಾವು ನಮ್ಮ ಗುರಿಯನ್ನು ಬಿಟ್ಟು ಅದನ್ನು ನೋಡಲು ಪ್ರಾರಂಭಿಸುತ್ತೇವೆ. ನೆಪೋಲಿಯನ್ ಇದನ್ನು 18 ನೇ ಶತಮಾನದಲ್ಲಿ ಮಾಡುತ್ತಿದ್ದರು. ಆಗ ಇಷ್ಟು ಮಾಹಿತಿಯೂ ಇರುತ್ತಿರಲಿಲ್ಲ. ಆಗಲೇ ಅವರು ಸರಿಯಾದ ಮಾಹಿತಿಯನ್ನು ಆಯ್ಕೆ ಮಾಡಿ ಪ್ರತಿಕ್ರಿಯಿಸುವುದು ಎಷ್ಟು ಮುಖ್ಯ ಎಂದು ತಿಳಿದುಕೊಂಡಿದ್ದರು.
ಆ ಸಮಯದಲ್ಲಿ ಇಂಟರ್ನೆಟ್ ಕೂಡ ಇರಲಿಲ್ಲ. ಇಂದು ಚಿಕ್ಕ ನೋಟಿಫಿಕೇಶನ್ ಬಂದರು ನಾವು ನಮ್ಮ ಗುರಿಯನ್ನು ಬಿಟ್ಟು ಅದರ ಕಡೆಗೆ ಗಮನ ಹರಿಸಲು ಪ್ರಾರಂಭಿಸುತ್ತೇವೆ. ಹೀಗಾಗಿ "a wealth of information creates a poverty of attention" ಎಂದು ಲೇಖಕರು ಹೇಳುತ್ತಾರೆ. ಇಂದು ನಾವು ನಮ್ಮ ಮೆದುಳಿನಲ್ಲಿ ಜಗತ್ತಿನಲ್ಲಿರುವ ಅನಾವಶ್ಯಕ ವಿಷಯಗಳನ್ನು ತುಂಬಿಸಿಕೊಳ್ಳುತ್ತಿದ್ದೇವೆ. ಅದು ಟಿವಿ, ಟ್ರಾಫಿಕ್, ಇಂಟರ್ನೆಟ್, ಜನರು, ಸುದ್ದಿಯಾಗಿರಬಹುದು(news). ನಮಗೆ ಅವಶ್ಯಕತೆ ಇರುವ ಇಲ್ಲದಿರುವ ಮಾಹಿತಿಗಳನ್ನು ಸೇವಿಸುತ್ತಿದ್ದೇವೆ. ಇದರಿಂದ ನಮ್ಮ ಮೆದುಳು ಮಿತಿಮೀರಿದೆ. ನಮ್ಮ ಮೆದುಳು ಆತಂಕದಲ್ಲಿದೆ.
ಹೀಗಾಗಿ ನಾವು ಮೊದಲು ನಮ್ಮ ಮೆದುಳನ್ನು ಖಾಲಿ ಮಾಡುವುದನ್ನು ಕಲಿಯಬೇಕು. ಇದನ್ನು ಮಾಡಲು ತುಂಬಾ ಸರಳವಾದ ಮಾರ್ಗವಿದೆ. ನೀವು ಒಂದು ಪೆನ್, ಪೇಪರ್ ತೆಗೆದುಕೊಂಡು ಬರೆಯಲು ಪ್ರಾರಂಭಿಸಿ, ಇದನ್ನು ಜರ್ನಲಿಂಗ್(journaling) ಎನ್ನಲಾಗುತ್ತದೆ. ನೀವು ಜರ್ನಲಿಂಗ್ ಮಾಡಬೇಕು. "journalling is a weapon for spiritual combat" ಎಂದು ಜರ್ಮನ್ ತತ್ವಜ್ಞಾನಿ ಹೇಳುತ್ತಾರೆ. ಜರ್ನಲಿಂಗ್ ಅನ್ನು ಹೇಗೆ ಮಾಡುವುದು ಎಂಬುದನ್ನು ಲೇಖಕರು ಚೆನ್ನಾಗಿ ತಿಳಿಸಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣ ನೀವು 60 ನಿಮಿಷಗಳ ಕಾಲ "sphere of silence" ಅನ್ನು ರಚಿಸಬೇಕು. ಇದನ್ನು ನಮ್ಮ ದೇಶದ ಸಂಸ್ಕೃತಿಯಲ್ಲಿ "ಮೌನ ವ್ರತ" ಎನ್ನುತ್ತಾರೆ. ಇದರಲ್ಲಿ ನೀವು 30-20-10 ಆಗಿ ನಿಮ್ಮ 60 ನಿಮಿಷವನ್ನು ಭಾಗ ಮಾಡಿ. ಮೊದಲ 30 ನಿಮಿಷದಲ್ಲಿ ನಿಮ್ಮ ಪೆನ್ ಮತ್ತು ಪೇಪರ್ ತೆಗೆದುಕೊಂಡು, ಈ ಐದು ಪ್ರಶ್ನೆಗಳನ್ನು ಕೇಳಿಕೊಂಡು ಅದರ ಉತ್ತರ ಬರೆಯಿರಿ.
ಇದರಿಂದ ನಿಮ್ಮಲ್ಲಿ ಕೃತಜ್ಞತೆ(gratitude) ಬರುತ್ತದೆ.
ಅಂದರೆ ಯಾವುದಾದರೂ ಪ್ರಮುಖ ವ್ಯಕ್ತಿಯ ಜೊತೆ ಮಾತನಾಡುವುದು, ಜಿಮ್ಗೆ ಹೋಗುವುದು ಇತ್ಯಾದಿ.
ಉದಾಹರಣೆಗೆ ನಿಮ್ಮ ಮೊಬೈಲ್, ಇಂಟರ್ನೆಟ್, ಗೆಳೆಯರು ಯಾರಾದರೂ ಆಗಿರಬಹುದು.
ಈ ಎಲ್ಲ ಪ್ರೆಶ್ನೆಗಳಿಗೆ ಉತ್ತರ ನೀಡುವುದರಿಂದ ನಿಮ್ಮ ಬದುಕಿನ ಎಲ್ಲಾ ಸಮಸ್ಯೆಗಳು ಹೋಗುವುದಿಲ್ಲ. ಆದರೆ ನಿಮ್ಮ ಮನಸ್ಸು ಖಾಲಿಯಾಗಲು ಪ್ರಾರಂಭಿಸುತ್ತದೆ. ನಿಮ್ಮ ಮೆದುಳು ಖಾಲಿಯಾಗಿ ನಿಶ್ಚಲತೆ ಬಂದರೆ ಇದು ಸಮಸ್ಯೆಗಳನ್ನು ನಿಭಾಯಿಸಲು ಸಹಕರಿಸುತ್ತದೆ. ಇದರಿಂದ ಎಲ್ಲವೂ ನಿಮಗೆ ಸ್ಪಷ್ಟವಾಗುತ್ತದೆ. ಬದುಕನ್ನು ಸ್ಪಷ್ಟವಾಗಿ ನೋಡಲು ಪ್ರಾರಂಭಿಸುತ್ತೀರಾ. ಮೊದಲ 30 ನಿಮಿಷ ಇದಕ್ಕೆ ಸೀಮಿತವಾಗಿದೆ.
ಮುಂದಿನ 20 ನಿಮಿಷವನ್ನು ನಿಮ್ಮ ಕಲಿಕೆ(learning) ಮತ್ತು ಬೆಳವಣಿಗೆಗೆ(growth) ನೀಡಬೇಕು. ಈ ಸಮಯದಲ್ಲಿ ನೀವು ಒಮ್ಮೆ ಖರೀದಿಸಿ ಈಗ ದೂಳು ತುಂಬಿರುವ ಪುಸ್ತಕಗಳ ಸಾರಾಂಶ ತಿಳಿಸುವ ವೀಡಿಯೋಗಳಿದ್ದಾರೆ, ಅವುಗಳನ್ನು ಓದಲು ಇಲ್ಲ ಕೇಳಲು ಬಳಸಬೇಕು. ಈ ಸಮಯದಲ್ಲಿ ನೀವು ಸ್ವಯಂ ಸಹಾಯ(self helping) ಮಾಡುವ ಪುಸ್ತಕಗಳನ್ನು ಅಷ್ಟೇ ಅಲ್ಲದೆ, ಕಾದಂಬರಿಗಳನ್ನು ಓದಬಹುದು. ಇದರಲ್ಲಿ 10 ನಿಮಿಷ ನೀವು ಓದಬೇಕು ಇಲ್ಲ ಕೇಳಬೇಕು. ಇನ್ನು ಉಳಿದ 10 ನಿಮಿಷದಲ್ಲಿ ನೀವು ಆ 10 ನಿಮಿಷದಲ್ಲಿ ಕಲಿತದ್ದನ್ನು ಸಾರಾಂಶ ಮಾಡಬೇಕು. ಇದು ನಿಮ್ಮಲ್ಲಿ ಬೆಳವಣಿಗೆಯ ಮನಸ್ಥಿತಿಯನ್ನು(growth mentality) ಬೆಳೆಸಲು ಸಹಕರಿಸುತ್ತದೆ. ಇದನ್ನು ಮಾಡುವುದರಿಂದ ನಿಮ್ಮ ನ್ಯೂರಾನ್ನ ಸಂಪರ್ಕ ಗಟ್ಟಿಯಾಗುತ್ತದೆ. ಇದು ನಿಮ್ಮ ಮೆದುಳನ್ನು ಗಟ್ಟಿ ಮಾಡುತ್ತದೆ.
ಇನ್ನು ಕೊನೆಯ 10 ನಿಮಿಷವನ್ನು ಸಾವಧಾನ(mindfull) ಅಭ್ಯಾಸಕ್ಕೆ ನೀಡಿ. ಯಾವುದೇ ತಾಲೀಮು(workout) ಮಾಡಿದ ನಂತರ ನಮ್ಮ ದೇಹ ವಿಶ್ರಾಂತಿ ತೆಗೆದುಕೊಳ್ಳಲು ಸಮಯ ನೀಡುವಂತೆ, ನೀವು ಈ ಸಮಯದಲ್ಲಿ ಧ್ಯಾನ ಇಲ್ಲ ಇತರ ಕಾರ್ಯಗಳನ್ನು ಮಾಡಿ. ಬಲವಂತವಾಗಿ ಧ್ಯಾನವನ್ನು ಮಾಡುವ ಅಗತ್ಯವಿಲ್ಲ. ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಬೇಕು ಅಷ್ಟೇ. ವಿಶ್ರಾಂತಿಗೆ ಕೆಲವರು ಧ್ಯಾನಕ್ಕೆ ಆದ್ಯತೆ ನೀಡುತ್ತಾರೆ, ಕೆಲವರು ಉಸಿರಾಟದ ವ್ಯಾಯಾಮಕ್ಕೆ, ಕೆಲವರು ಪ್ರಾರ್ಥನೆಗೆ ಆದ್ಯತೆ ನೀಡುತ್ತಾರೆ.
ಇಲ್ಲಿ ನೀವು ಆ ಕ್ಷಣದಲ್ಲಿ ಜೀವಿಸುವುದು ಮುಖ್ಯವಾಗಿದೆ. ಈ 60 ನಿಮಿಷದ ವ್ಯಾಯಾಮವನ್ನು ನೀವು ಮಾಡಿದರೆ ನಿಮ್ಮ ಮನೆಯನ್ನು ಸ್ವಚ್ಛ ಮಾಡಿದಂತಾಗಿದೆ. ಇದು ಪ್ರತಿದಿನ ನಿಮ್ಮ ಮೆದುಳನ್ನು ಸ್ವಚ್ಛ ಮಾಡಲು ಸಹಕರಿಸುತ್ತದೆ. ನೀವು ಇದರ ಫಲಿತಾಂಶವನ್ನು ಪಡೆಯಲು 21 ದಿನಗಳಿಗಾದರೂ ಇದನ್ನು ಅಭ್ಯಾಸ ಮಾಡಿ. ಇದರಿಂದ ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲಿತಾಂಶ ಸಿಕ್ಕೆ ಸಿಗುತ್ತದೆ.
ಇದನ್ನು ಓದಿ: "No Excuses - Power of Self Decipline" ಪುಸ್ತಕದ ಸಾರಾಂಶಇನ್ನು ನಾವು ಗಮನಹರಿಸಬೇಕಾದ ಎರಡನೇ ಏರಿಯಾ ಎಂದರೆ ಅದು ನಮ್ಮ ದೇಹವಾಗಿದೆ. ದೇಹದಲ್ಲಿ ನಿಶ್ಚಲತೆಯನ್ನು ತರಬೇಕು. ವಿಲಿಯಂ ಗ್ಲಾಡ್‌ಸ್ಟೋನ್(william gladstone) ಎನ್ನುವರು 1868 ರಿಂದ 1894 ರ ವರೆಗೆ 15 ವರ್ಷದಲ್ಲಿ 4 ಬಾರಿ ಯುನೈಟೆಡ್ ಕಿಂಗ್ಡೆಮ್(united kingdom) ಪ್ರಧಾನ ಮಂತ್ರಿಯಾಗಿದ್ದರು. ಅವರಿಗೆ ಒಂದು ವಿಚಿತ್ರವಾದ ಅಭ್ಯಾಸವಿತ್ತು, ಅದೆಂದರೆ ದೊಡ್ಡ ದೊಡ್ಡ ಮರಗಳನ್ನು ಕೊಡಲಿ ಇಂದ ಬೀಳಿಸುವುದಾಗಿದೆ. ಒಮ್ಮೆ ಅವರು 70 ಅಡಿಯ ಮರವನ್ನು ಕಡಿಯಲು ಎರಡು ದಿನ ತೆಗೆದುಕೊಂಡಿದ್ದರು. ಅವರ ಕೊಡಲಿ ಇಂದ 1,000 ಕ್ಕೂ ಹೆಚ್ಚು ಮರಗಳನ್ನು ಬೀಳಿಸಿದ್ದಾರೆ ಎಂದು ಅವರ ಡೈರಿಯಿಂದ ತಿಳಿಯಿತು. ಅವರ ಕುಟುಂಬದ ಜೊತೆ ರಜೆಗೆ(vacation) ಹೋದರು ಮರವನ್ನು ಕಡಿಯುತ್ತಿದ್ದರು. ಅಲ್ಲಿ ಅವರು ಒಬ್ಬರೇ ಹೋಗಿ ಏನು ಮಾತನಾಡದೆ ಆ ಕೆಲಸವನ್ನು ಮಾಡುತ್ತಿದ್ದರು. ಮರವನ್ನು ಕಡಿಯುವುದು ಸರಿ ಅಥವಾ ತಪ್ಪು ಎಂಬುದು ಇಲ್ಲಿ ಬರುವುದಿಲ್ಲ. ಅವರು ಅನೇಕ ಗಿಡಗಳನ್ನು ನೆಟ್ಟಿದ್ದರು. ಅವುಗಳಿಂದ ಬಂದ ಹಣವನ್ನು ದಾನ ಮಾಡುತ್ತಿದ್ದರು. ಈ ಕಥೆಯಲ್ಲಿ ಇರುವ ಒಂದು ಪಾಠವನ್ನು ಅರ್ಥಮಾಡಿಕೊಳ್ಳಬೇಕು.
ಇದಕ್ಕೆ ಯುನೈಟೆಡ್ ಕಿಂಗ್ಡೆಮ್ನ ಮಾಜಿ ಪ್ರಧಾನ ಮಂತ್ರಿಯಾದ ವಿನ್ಸ್ಟನ್ ಚರ್ಚಿಲ್(winston churchill) ಕಥೆಯನ್ನು ತಿಳಿಯೋಣ. 1920 ರ ಮಧ್ಯದಲ್ಲಿ ಅವರು ಒಂದು ಒಪ್ಪಂದಕ್ಕೆ(contract) ಸಹಿ ಮಾಡಿದ್ದರು. ಅದರಲ್ಲಿ ಅವರಿಗೆ ವಿಶ್ವ ಯುದ್ಧ 2ರ ಬಗ್ಗೆ 6 ವಿಸ್ತಾರದ(volume) 3,000 ಪುಟಗಳ ಖಾತೆ ಮಾಡಬೇಕಿತ್ತು. ಆ ಸಮಯದಲ್ಲಿ ಅವರು ತುಂಬಾನೇ ನಿರತವಿದ್ದರು. ಅವರು ರಾಷ್ಟ್ರೀಯ ನಿಧಿ ಸಲಹೆಗಾರರಾಗಿದ್ದರು. ಹಣಕಾಸು ಮಂತ್ರಿಯಾಗಿದ್ದರೂ, ಇವೆಲ್ಲದರಿಂದ ಅವರ ಮೇಲೆ ಅಧಿಕ ಜವಾಬ್ದಾರಿಗಳು ಇದ್ದವು.
ಅವರು ಎಷ್ಟು ಒತ್ತಡದಲ್ಲಿ ಇರುತ್ತಿದ್ದಾರೆಂದರೆ, ಅವರ ಮನಸ್ಸನ್ನು ಶಾಂತಗೊಳಿಸಲು ಬ್ರಿಕ್ಲೆಯಿಂಗ್(bricklaying) ಮಾಡುತ್ತಿದ್ದರು, ಅಂದರೆ ಅವರು ಇಟ್ಟಿಗೆಯನ್ನು ಇಡುವ ಕೆಲಸ ಮಾಡುತ್ತಿದ್ದರು. ಅವರ ಮನಸ್ಸನ್ನು ಶಾಂತಗೊಳಿಸಲು ಅವರು ಇಟ್ಟಿಗೆ, ಸಿಮೆಂಟ್ ತೆಗೆದುಕೊಂಡು ಒಂದೊಂದೆ ಜೋಡಿಸುತ್ತಿದ್ದರು. ಇದು ಅವರ ಮನಸ್ಸನ್ನು ನಿಶ್ಚಲವಾಗಿಡಲು ಸಹಕರಿಸುತ್ತಿತ್ತು. ಅವರು ಪ್ರತಿದಿನ ಕನಿಷ್ಠ 200 ಇಟ್ಟಿಗೆಗಳನ್ನು ಇಡುತ್ತಿದ್ದರು ಮತ್ತು 2000 ಪೇಜ್ನಷ್ಟು ಬರೆಯುತ್ತಿದ್ದರು. ಇದರಿಂದ ಅದು ಅವರಿಗೆ ಒಂದು ರೊಟಿನ್(routine) ರೀತಿ ಆಗಿತ್ತು.
ಗ್ಲಾಡ್‌ಸ್ಟೋನ್ ಮತ್ತು ಚರ್ಚಿಲ್ ಇಬ್ಬರು ಯುನೈಟೆಡ್ ಕಿಂಗ್ಡೆಮ್ ಮಂತ್ರಿ ಆಗಿದ್ದರು. ಅವರಿಗೆ ಪ್ರತಿ ಗಂಟೆ ಎಷ್ಟೋ ದೊಡ್ಡ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತು. ಇದರಲ್ಲಿ ಅವರಿಗೆ ನಿಶ್ಚಲತೆಯಾ ಅವಶ್ಯಕತೆ ತುಂಬಾ ಇದೆ. ಇದರಿಂದ ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿಯೇ ಅವರು ಆ ಚಟುವಟಿಕೆಯನ್ನು ಫಾಲೋ ಮಾಡುತ್ತಿದ್ದರು. ಇವುಗಳು ಅವರ ಮನಸ್ಸು ಮತ್ತು ದೇಹದ ಸಂಪರ್ಕವನ್ನು ಗಟ್ಟಿ ಮಾಡಲು ಸಹಕರಿಸುತ್ತಿತ್ತು. ಈ ರೀತಿಯಾ ಚಟುವಟಿಕೆಗಳನ್ನು ಬಿಟ್ಟು ನೀವು ಕೆಲವೊಂದನ್ನು ಪಾಲಿಸಬಹುದು. ಉದಾಹರಣೆಗೆ ಅಡುಗೆ ಮಾಡುವುದು, ವಾಕಿಂಗ್ಗೆ ಹೋಗುವುದು, ಗೇಮ್ಸ್ ಆಡುವುದು. ಒಂದು ಪುನರಾವರ್ತಿತ(repetative) ಚಟುವಟಿಕೆಗಳನ್ನು ಆರಿಸಿಕೊಳ್ಳಿ. ಅದರಲ್ಲಿ ನೀವು ತುಂಬಾ ಯೋಚಿಸುವ ಅಗತ್ಯವಿಲ್ಲ, ಸುಲಭವಿರಲಿ. ಇದು ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿಗೊಳಿಸಲು ತುಂಬಾನೇ ಸಹಕರಿಸುತ್ತದೆ. ಏನನ್ನು ಯೋಚಿಸದೇ ನೀವು ಕೆಲಸವನ್ನು ಮಾಡಲು ನಿಮಗೆ ಬಂದು ಪುನರಾವರ್ತಿತ ಚಲನೆಯ ಅವಶ್ಯಕತೆ ಇದೆ. ಆ ಚಟುವಟಿಕೆ ಯಾವುದು ಎಂದು ಕಮೆಂಟ್ ಮಾಡಿ.
ಇದನ್ನು ಓದಿ: unstoppable ಆಗಲು ಇರುವ 5 ಪಾಠಗಳುಇನ್ನು ಮೂರನೆಯದಾಗಿ ಆಧ್ಯಾತ್ಮಿಕತೆಯಲ್ಲಿ(spirituality) ನಿಶ್ಚಲತೆ ಇರುವುದಾಗಿದೆ. ಬಾಲ್ಯದಿಂದಲೂ ಟೈಗರ್ ವುಡ್ಸ್(tiger woods) ಅವರು ಜಗತ್ತಿನ ಉತ್ತಮ ಗಾಲ್ಫ್(golfer) ಆಟಗಾರನಾಗಲು ತುಂಬಾನೇ ತರಬೇತಿ ಪಡೆದಿದ್ದರು. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಗಾಲ್ಫ್ ಆಟಗಾರರ ಹೆಸರಿನಲ್ಲಿ ಇವರದ್ದು ಬರುತ್ತದೆ. ಇದು ಒಂದು ಕಡೆ ಆಗಿದೆ, ಅವರ ವೈಯಕ್ತಿಕ ಬದುಕು ಪೂರ್ತಿಯಾಗಿ ಹಾಳಾಗಿತ್ತು. ಅನೇಕ ಬಾರಿ ಕೀರ್ತಿಶಾಲಿಗಳ(celebraties) ಜೊತೆಗೆ ಪಾರ್ಟಿಗೆ ಹೋಗುತ್ತಿದ್ದರು, ಡ್ರಿಂಕ್ಸ್ ಮಾಡುತ್ತಿದ್ದರು, ನೋವು ನಿವಾರಕಗಳನ್ನು(pain killer) ನುಂಗತ್ತಿದರು ಅದಕ್ಕೆ ವ್ಯಸನಿ(addict) ಆಗಿದ್ದರು. ಅವರ ಹೆಂಡತಿಗೆ ಮೋಸ ಕೂಡ ಮಾಡಿದ್ದರು. ವೃತ್ತಿಪರವಾಗಿ ಅವರು ಅಧಿಕ ಸಾಧಿಸಿದ್ದರು, ಆದರೆ ವೈಯಕ್ತಿಕ ಬದುಕಿನಲ್ಲಿ ಅವರ ಜೀವನ ತುಂಬಾ ಹಾಳಾಗಿತ್ತು. ಆ ರೀತಿ ಏಕೆ ಆಗಿತ್ತು, ಇದು ಏಕೆಂದರೆ ಅವರ ಆತ್ಮ(sprit) ತುಂಬಾ ದುರ್ಬಲವಾಗಿತ್ತು. ಅವರ ಮನಸ್ಸು ಗಟ್ಟಿ ಇತ್ತು, ಆದರೆ ಅವರ ಆತ್ಮ ತುಂಬಾ ನೋವಿನಲ್ಲಿ ಇತ್ತು.
ನೀವು ಕೂಡ ನಿಮ್ಮ ಬದುಕಿನಲ್ಲಿ ದೊಡ್ಡದನ್ನು ಸಾಧಿಸಲು ಟೈಗರ್ ವುಡ್ಸ್ ರೀತಿ ಕೆಲಸ ಮಾಡಿದರೆ ಸಾಧಿಸಬಹುದು. ಆದರೆ ಇವೆಲ್ಲ ಮಾಡಿದ ನಂತರವೂ ನಿಮ್ಮ ಆತ್ಮ ಖಾಲಿಯಾಗಿರಬಹುದು. ಇದರಿಂದ ನಿಮಗೆ ಖುಷಿ ಸಿಗುವುದಿಲ್ಲ. ಇದನ್ನು ನಾವು ಧ್ಯಾನ, ಸಾವಧಾನತೆಯಿಂದಲೂ ಸಾಧಿಸಲು ಸಾಧ್ಯವಿಲ್ಲ. ಜನರ ಹತ್ತಿರ ವಸ್ತುಗಳು ಅಧಿಕವಿದೆ, ಆದರೆ ಅವರ ಆತ್ಮ ಖಾಲಿಯಾಗಿರುತ್ತದೆ. ಅವರು ಬೇರೆ ಬೇರೆ ರೀತಿಯ ವಿಷಯಗಳಿಗೆ ಆಕರ್ಷಿರಾಗುತ್ತಾರೆ. ಅದು ಅವರನ್ನು ಖುಷಿಯಾಗಿ ಇರಲು ಬಿಡುವುದಿಲ್ಲ. ಕೆಲವು ವರ್ಷಗಳ ಹಿಂದೆ ಇಬ್ಬರೂ ಲೇಖಕರು ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿದ್ದ ಬಿಲಿಯನೇರ್ ಪಾರ್ಟಿಗೆ ಹೋಗುತ್ತಾರೆ. ಅಲ್ಲಿ ಒಬ್ಬ ಲೇಖಕ ಇನ್ನೊಬ್ಬನಿಗೆ, "ನಿನ್ನೆ ರಾತ್ರಿ ಈ ಕಟ್ಟಡದ ಮಾಲೀಕ ನೀವು ಜೀವನಪೂರ್ತಿ ನಾವೆಲ್ ಮಾರಿ ಪಡೆಯದಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದ" ಎಂದು ಹೇಳುತ್ತಾನೆ. ಇದಕ್ಕೆ ಇನ್ನೊಬ್ಬ ಲೇಖಕ ನಸುನಕ್ಕು, "ಅದು ಸರಿಯೇ, ಆದರೆ ನನ್ನ ಹತ್ತಿರ ಆ ಬಿಲಿಯನೇರ್ ಹತ್ತಿರ ಇಲ್ಲದಿರುವ ಒಂದು ವಸ್ತುವಿದೆ" ಎಂದು ಹೇಳುತ್ತಾನೆ. ಅದಕ್ಕೆ ಆ ಲೇಖಕ, "ಅದು ಏನು?" ಎಂದು ಕೇಳುತ್ತಾನೆ. ಅದಕ್ಕೆ ಈ ಲೇಖಕ, "i have enough" ಎಂದು ಹೇಳುತ್ತಾನೆ.
ಈ ಲೇಖಕನ ಹೆಸರು ಜೋಸೆಫ್ ಹೆಲ್ಲರ್(joseph heller) ಆಗಿದೆ. ಆ ನೋವೆಲ್ ಹೆಸರು ಕ್ಯಾಚ್-22(catch-22) ಆಗಿದೆ. ಹೆಲ್ಲರ್ ಹತ್ತಿರ ಸಾಕಾಗುವಷ್ಟು ಇತ್ತು, ಹಾಗಂತ ಅವರು ಉತ್ಪಾದಕತೆಯಾಗಿ ಇರಲಿಲ್ಲವೆಂದಲ್ಲ. ಅವರು ಈ ರೀತಿಯ ಯಶಸ್ವಿಯಾದ ನೋವೆಲ್ ಬರೆದ ನಂತರವು 6 ಹೊಸ ನೋವೆಲ್ಗಳನ್ನು ಬರೆದರು. ಯಾವುದೇ ಮನುಷ್ಯ ಆತಂಕದಿಂದ(anxity) ಉತ್ತಮವಾದದನ್ನು ನೀಡಲು ಸಾಧ್ಯವಿಲ್ಲ. ಗಾಬರಿಗೊಳಗಾಗಿ ಹಿರಿಮೆಯನ್ನು(greatness) ಸಾಧಿಸಲು ಸಾಧ್ಯವಿಲ್ಲ. ಎಂದಿಗೂ ಸಾಕಷ್ಟು ಇಲ್ಲ ಎಂಬ ವರ್ತನೆ ಇರುವ ಜನರ ಹತ್ತಿರ ಎಷ್ಟೇ ಖ್ಯಾತಿ, ಐಷಾರಾಮಿ ಇದ್ದರು ಅವರು ಖುಷಿಯಲ್ಲಿ ಇರುವುದಿಲ್ಲ. ಏಕೆಂದರೆ ಅವರಿಗೆ "ಸಾಕಷ್ಟು ಇಲ್ಲ" ಎಂಬ ವಸ್ತು ಇರುವುದಿಲ್ಲ. ಇದು ಅವರನ್ನು ತಬ್ಬಿಬ್ಬು(distract) ಮಾಡುತ್ತದೆ.
ಹೀಗಾಗಿ ನಿಮಗೆ ಎಷ್ಟು ಹಣ ನಿಮ್ಮ ಬದುಕಿಗೆ ಸಾಕಷ್ಟು ಎಂಬುದನ್ನು ತಿಳಿದುಕೊಳ್ಳಿ. ಇದರ ಒಂದು ಸ್ಥೂಲ ಅಂದಾಜು ಮಾಡಿರಿ. ಅದು ಎಷ್ಟೇ ಸಂಖ್ಯೆಯಾಗಿದ್ದರು ಅದು ವ್ಯಾಖ್ಯಾನಿಸಿರುವುದು ಮುಖ್ಯವಾಗಿದೆ. ಏಕೆಂದರೆ ನೀವು ನಿಮ್ಮ ಸಾಕಷ್ಟನ್ನು ಕಂಡುಕೊಳ್ಳುವವರೆಗೆ ಬದುಕಿನಲ್ಲಿ ಆರಾಮಾಗಿ ಜೀವಿಸಲು ಸಾಧ್ಯವಾಗುವುದಿಲ್ಲ. "nothing is enough for the man to whom enough is too little" ಎಂದು ಇದಕ್ಕೆ ಸಂಬಂದಿಸಿದ ಒಂದು ಉಲ್ಲೇಖವಿದೆ. ನಿಮ್ಮ ಬದುಕಿನಲ್ಲಿ ಸ್ವಲ್ಪ ಆಧ್ಯಾತ್ಮಿಕತೆ ಇರುವುದು ಮುಖ್ಯವಾಗಿದೆ. ನೀವು ನಿಮ್ಮ ಮೇಲೆ ಈ ಜಗತ್ತನ್ನು ಮುಂದುವರೆಸಲು ಒಂದು ಸೂಪರ್ ಪವರ್ ಇದೆ ಎಂದು ನಂಬಲು ಪ್ರಾರಂಭಿಸಿದಾಗ, ನಿಮ್ಮ ಆಧ್ಯಾತ್ಮಿಕವಾಗಿ ತುಂಬಾ ಗಟ್ಟಿ ಆಗಿರುತ್ತೀರಾ. ಇದು ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ.
ಮನಸ್ಸು, ದೇಹ, ಆಧ್ಯಾತ್ಮಿಕ ನೀವು ಇವುಗಳ ಮೇಲೆ ಗಮನ ಹರಿಸಿ, ನಿಶ್ಚಲತೆಯನ್ನು ಸಾಧಿಸಬೇಕಾದ 3 ಏರಿಯಾ ಇವುಗಳಾಗಿವೆ. "ಯಾವುದೇ ರೀತಿಯ ಕಿರಿಕಿರಿ ಇಲ್ಲದಿದ್ದಾಗ ನೀವು ನಿಶ್ಚಲತೆಯನ್ನು ಸಾಧಿಸುತ್ತೀರಾ" ಎಂದು ಸೆನೆಕಾ(seneca) ಹೇಳುತ್ತಾರೆ. ಯಾರಾದರೂ ನಿಮಗೆ ಖುಷಿ ಪಡಿಸಲು ಪ್ರಯತ್ನಿಸಿದರು, ಕೋಪ ತಂದರು, ನೀವು ಎಲ್ಲವನ್ನು ನೋಡಬಹುದು, ಕೇಳಬಹುದು, ಅನುಭವಿಸಬಹುದು. ಆದರೆ ಇದು ನಿಮ್ಮ ನಿಶ್ಚಲತೆಯನ್ನು ಮುರಿಯುವುದಿಲ್ಲ. ಯಾವುದೇ ವ್ಯಕ್ತಿ ನಿಮ್ಮಿಂದ ಒಂದು ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ನೀವು ಕೆಲಸ ಮಾಡುವುದರಿಂದ ತಡೆಯಲು ಸಾಧ್ಯವಿಲ್ಲ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಾನು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...