Website designed by @coders.knowledge.

Website designed by @coders.knowledge.

How to Change Your Life in 30 Days | 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?

Watch Video

ಇಂಗ್ಲೆಂಡಿನ ಪ್ರೊಫೆಷನಲ್ ಸೈಕಲ್ ಟೀಮ್ 2008ರ ಮೊದಲು 100 ವರ್ಷದಲ್ಲಿ ಕೇವಲ ಒಂದು ಚಿನ್ನದ ಪದಕ(gold medal) ಗೆದ್ದಿದ್ದರು. ಅವರ ಕಳಪೆ ಪ್ರದರ್ಶನದಿಂದಾಗಿ(performance) ಯಾವುದೇ ರೀತಿಯ ಬ್ರಾಂಡ್ ಅವರ ಜೊತೆ ಅಸೋಸಿಯೇಟ್ ಆಗಲು ಯೋಚಿಸುತ್ತಿರಲಿಲ್ಲ. ಯಾರೂ ಕೂಡ ಅವರಿಗೆ ಸೈಕಲ್ ಮತ್ತು ಪ್ರಾಯೋಜಕತ್ವವನ್ನು ನೀಡುತ್ತಿರಲಿಲ್ಲ. ಫ್ರಾನ್ಸ್ನ "ಪ್ರೀಮಿಯರ್ ಸೈಕಲ್ ಇನ್ವೆಂಟ್"ನಲ್ಲಿ ಈ ಇಂಗ್ಲೆಂಡ್ ಸೈಕಲ್ ಟೀಮ್ ಅನ್ನು ಆಹ್ವಾನ ಕೂಡ ಮಾಡಿರಲಿಲ್ಲ. ಈ ಸಮಯದಲ್ಲೇ ಡೇವ್ ಬ್ರೈಲ್ಸ್ಫೋರ್ಡ್(dave brailsford) ಎಂಬುವರು ಬಂದರು. ಅವರು ಕೋಚ್ ಆಗಿ ಅವರಿಗೆಲ್ಲ ಟ್ರೈನಿಂಗ್ ನೀಡಲು ಪ್ರಾರಂಭಿಸಿದರು. ಅನೇಕರು ಈ ಹೊಸ ಕೋಚ್ ಏನು ಮಾಡಲು ಸಾಧ್ಯ ಎಂದು ಯೋಚಿಸುತ್ತಿದ್ದರು. ಆದರೆ ಟೀಮ್ನಲ್ಲಿ ಕೆಲವು ಬದಲಾವಣೆಗಳಾದವು.

team sky of england in kannada
team sky

ಒಂದು ತಂತ್ರ ಮತ್ತು ತತ್ವವನ್ನು ಬಳಸಿ, ಈ ಸೋಮಾರಿಯಾದ "team sky" ಕೇವಲ ಮೂರು ವರ್ಷದಲ್ಲೇ, ಫ್ರಾನ್ಸ್ನ ಇವೆಂಟ್ನಲ್ಲಿ ಚಿನ್ನದ ಪದಕವನ್ನು ಪಡೆದರು. ಇಷ್ಟೇ ಅಲ್ಲದೆ ಇವರು 2008ರಂದು ನಡೆದ ಒಲಂಪಿಕ್ನಲ್ಲಿ 60% ನಷ್ಟು ಚಿನ್ನದ ಪದಕವನ್ನು ಗೆದ್ದಿದ್ದರು ಮತ್ತು ಆ ಸಮಯದಲ್ಲಿ 9 ಒಲಂಪಿಕ್ ರೆಕಾರ್ಡ್ಸ್ ಮತ್ತು 7 ವರ್ಲ್ಡ್ ರೆಕಾರ್ಡ್ ಮಾಡಿದ್ದರು. ಇದರ ನಂತರ ವಿಷಯಗಳು ಸುಲಭವಾದವು, ಅವರು ಕಠಿಣ ಓಟಗಳನ್ನು ಕೂಡ ಗೆಲ್ಲಲು ಪ್ರಾರಂಭಿಸಿದರು. ಹೀಗಾಗಿ ಒಟ್ಟಾಗಿ ಅವರು, 178 ವರ್ಲ್ಡ್ ಚಾಂಪಿಯನ್ಶಿಪ್ ಗೆದ್ದರು ಮತ್ತು 66 ಒಲಂಪಿಕ್ ಮೇಡಲ್ಸ್ ಗೆದ್ದರು. ಆಗಿದ್ದರೆ ಈ ರೀತಿಯ ತೀವ್ರ ಬದಲಾವಣೆ(drastic change) ಬರಲು ಕಾರಣವೇನು? ಯಾರು ಕೂಡ ಕೇಳದೆ ಇರುವ ಟೀಮ್ ಇಷ್ಟು ದೊಡ್ಡ ದೊಡ್ಡದಾಗಿ ಸಾಧಿಸಲು ಹೇಗೆ ಸಾಧ್ಯವಾಯಿತು?

ಅನೇಕರಿಗೆ ಈ ಡೇವ್ ಬ್ರೈಲ್ಸ್ಫೋರ್ಡ್ ದೊಡ್ಡದಾಗಿ ಏನೋ ಮಾಡಿದ್ದಾರೆ ಎಂದೆನಿಸುತ್ತದೆ. ಟೀಮ್ನಲ್ಲಿ ತುಂಬಾ ಬದಲಾವಣೆ ಮಾಡಿದ್ದರಿಂದ ಈ ಫಲಿತಾಂಶ ಬಂತು ಎಂದು ಎನ್ನಿಸಬಹುದು. ಆದರೆ ಇದು ಸತ್ಯವಲ್ಲ, ಡೇವ್ ಅವರಿಗೆ "ಅವರ ಪರ್ಫಾರ್ಮೆನ್ಸ್ ಅನ್ನು ಇಷ್ಟು ಚೆನ್ನಾಗಿ ಮಾಡಲು ಹೇಗೆ ಸಾಧ್ಯವಾಯಿತು" ಎಂದು ಕೇಳಿದಾಗ ಅವರು ಆ ತಂತ್ರವನ್ನು ಶೇರ್ ಮಾಡಿದರು. ಅವರು ಅದನ್ನು "aggregation of marginal gains" ಎಂದು ಹೇಳುತ್ತಾರೆ.

ಅಂದರೆ ಸೈಕಲಿಂಗ್ ಕಲಿಯಲು ಬೇಕಾದ ಎಲ್ಲ ಚಿಕ್ಕ ಚಿಕ್ಕ ವಸ್ತುಗಳಾದ ಸೈಕಲ್ನ ಭಾಗಗಳನ್ನು ಚಿಕ್ಕ ಚಿಕ್ಕ ಭಾಗವನ್ನಾಗಿ ಮಾಡಿದರು ಮತ್ತು ಈ ಎಲ್ಲಾ ವಸ್ತುಗಳಲ್ಲಿ ಅವರು ಕೇವಲ 1% ಸುಧಾರಿಸಲು ಪ್ರಾರಂಭಿಸಿದರು. ಉದಾಹರಣೆಗೆ ಸೈಕಲಿಸ್ಟ್ನ ಹಳೆಯ ಸೂಟ್ಗಳನ್ನು ಅವರು 1% ಲೈಟರ್ ಸೂಟ್ ಆಗಿ ಮಾಡಿದರು. ಸೈಕಲ್ ಸೀಟ್ ಅನ್ನು 1% ಕಂಫರ್ಟೆಬಲ್ ಮಾಡಿದ್ದರು, ಸೈಕಲಿನ ತೂಕವನ್ನು 1% ಕಡಿಮೆ ಮಾಡಿದರು, ಅದರ ಒಳಗೆ ಬಯೋ ಸೆನ್ಸರ್ ಹಾಕಿದರು. ಈ ರೀತಿಯಲ್ಲಿ ಅವರು ಆ ಸೈಕಲನ್ನು ಪೂರ್ತಿಯಾಗಿ ಸುಧಾರಿಸಿದರು.

ಆ ಸೈಕಲಿಗೆ ಅಷ್ಟೇ ಅಲ್ಲದೆ, ಆ ಸೈಕಲಿಸ್ಟ್ಗೂ ಕೂಡ ಅವರು ಅಧಿಕ ವಿಷಯಗಳನ್ನು ಮಾಡಿದರು. ಅಂದರೆ ಆ ಸೈಕಲಿಸ್ಟ್ಗಳಿಗಾಗಿ ಡಾಕ್ಟರ್ಗಳನ್ನು ಕರೆಸಿದರು ಮತ್ತು ಆ ಡಾಕ್ಟರ್ ಮೂಲಕ ಆ ಸೈಕಲಿಸ್ಟ್ಗಳಿಗೆ ಸರಿಯಾಗಿ ಕೈ ತೊಳೆಯುವುದು ಹೇಗೆ ಎಂಬುದನ್ನು ತಿಳಿಸಿದರು. ಇದು ಚಿಕ್ಕ ವಿಷಯ ಎನಿಸಬಹುದು. ಆದರೆ ಅವರು ಇದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಫಾಲೋ ಮಾಡಲು ಹೇಳಿದ್ದರು. ಇದರಿಂದ ಅವರು ಚೆನ್ನಾಗಿ ಕೈ ತೊಳೆದು, ಆರೋಗ್ಯದಿಂದ ಇದ್ದು, ಅಧಿಕ ಪ್ರಾಕ್ಟೀಸ್ ಮಾಡಲು ಸಾಧ್ಯವಾಯಿತು. ಇದರ ನಂತರ ಆ ಸೈಕಲಿಸ್ಟ್ಗಳು ವಿಸ್ತರಿಸಿರುವಂತೆ(streachfull) ಮಾಡಲು ಮಸಾಜ್ ತೆರಪಿಯನ್ನು ಮಾಡಿಸಿದರು ಮತ್ತು ಇನ್ನು ಅಧಿಕ ವಿಷಯಗಳಿಂದ ಅವರ ಟೀಮ್ ಅನ್ನು ಎಲ್ಲಾ ವಿಷಯದಲ್ಲೂ 1% ಸುಧಾರಿಸುವಂತೆ ಮಾಡಿದರು. ಈ ಕಾರಣದಿಂದಾಗಿಯೇ ಅವರು ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು.

"1% ಸಲ್ಯೂಷನ್" ಪುಸ್ತಕದ ಲೇಖಕರಾದ ಟಾಮ್ ಕೊನ್ನೆಲನ್(tom connellan) ಅವರ ಕಥೆಯನ್ನು ನಿಮಗೆ ತಿಳಿಸಲಿದ್ದೇವೆ. ಟಾಮ್ ಅವರು ಒಳ್ಳೆಯ ರೀತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅವರ ವೃತ್ತಿಯು(career) ಟಾಪ್ನಲ್ಲಿ ನಡೆಯುತ್ತಿತ್ತು, ಅವರ ಹೆಂಡತಿ ಮಕ್ಕಳು ಎಲ್ಲರೂ ಖುಷಿಯಲ್ಲಿದ್ದರೂ, ಅಂದರೆ ಅವರ ಒಂದು ಪರಿಪೂರ್ಣವಾದ ಬದುಕನ್ನು(perfect life) ಬದುಕುತ್ತಿದ್ದರು.

ಆದರೆ ಇದಾಗಿ ಆರು ತಿಂಗಳ ನಂತರ ಅವರ ಬದುಕೆ ನಾಶವಾಗುವ ರೀತಿಯ ಒಂದು ಘಟನೆ ನಡೆಯಿತು. ಅವರ ಪ್ರೊಫೆಷನಲ್ ಬದುಕಿನಲ್ಲಿ ವಿಫಲವಾಗಲು ಪ್ರಾರಂಭಿಸಿತು. ಅವರ ಸಂಬಂಧ ಹಾಳಾಗುತ್ತಿತ್ತು, ಇದರಿಂದ ಅವರು ತುಂಬಾ ಬೇಸರದಲ್ಲಿದ್ದರು. ಅವರಿಗೆ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ.

ಒಂದು ದಿನ ಅವರು ಅವರ ಮಗ ಜಾಕ್ನ ಫುಟ್ಬಾಲ್ ಮ್ಯಾಚ್ ನೋಡಲು ಹೋಗುತ್ತಾರೆ. ಈ ಜಾಕ್ ಟೀಮ್ ತುಂಬಾ ಒಳ್ಳೆಯ ಅಂಕದಿಂದ ಮುಂದಿರುವ ಗುಂಪನ್ನು ಸೋಲಿಸುತ್ತಿರುತ್ತದೆ. ಇದರಿಂದ ಟಾಮ್ಗೆ ತುಂಬಾ ಆಶ್ಚರ್ಯವಾಗುತ್ತದೆ. ಏಕೆಂದರೆ ಅವರಿಗೆ ಜಾಕ್ ಟೀಮ್ ಎಷ್ಟು ದುರ್ಬಲವಿದೆ ಎಂದು ತಿಳಿದಿತ್ತು. ಅಷ್ಟೇ ಅಲ್ಲದೆ ಆ ವರ್ಷ ಜಾಕ್ ಟೀಮ್ ಕೆಟ್ಟ ಪ್ರದರ್ಶನವನ್ನು ನೀಡಿತ್ತು. ಆದರೆ ಈ ಮ್ಯಾಚ್ನಲ್ಲಿ ಆ ಟೀಮ್ ಒಳ್ಳೆಯ ಟೀಮನ್ನು ಕೂಡ ಸೋಲಿಸಿತ್ತು. ಇದು ಟಾಮ್ ಅವರಿಗೆ ಆಶ್ಚರ್ಯ ನೀಡಿತು.

ಹೀಗಾಗಿ ಅವರು ಜಾಕ ಕೋಚ್ ಆದ ಜಿಮ್ ಹತ್ತಿರ ಹೋಗಿ, "ನೀವು ಮಕ್ಕಳು ಇಷ್ಟು ಚೆನ್ನಾಗಿ ಪರ್ಫಾರ್ಮೆನ್ಸ್ ನೀಡುವಂತೆ ಹೇಗೆ ಟ್ರೈನಿಂಗ್ ಮಾಡಿಸಿದ್ದೀರಿ" ಎಂದು ಕೇಳಿದರು. ಆಗ ಆ ಕೋಚ್, "ಒಬ್ಬ 4ನೇ ಸ್ಥಾನದಲ್ಲಿ ಇರುವವನು ಮತ್ತು 1ನೇ ಸ್ಥಾನದಲ್ಲಿ ಇರುವವನಲ್ಲಿ ಅಷ್ಟು ವ್ಯತ್ಯಾಸವಿರುವುದಿಲ್ಲ. ಉದಾಹರಣೆಗೆ 2008ರ ಬಿಜಿಂಗ್ ಒಲಂಪಿಕ್ಸ್ ನಲ್ಲಿ ಮೈಕಲ್ ಎಂಬವರು ಚಿನ್ನದ ಪದಕವನ್ನು ಗೆದ್ದಿದ್ದರೂ ಮತ್ತು 2ನೇ ಸ್ಥಾನದಲ್ಲಿರುವ ಮಿಲೋರಾಡ್ ಕ್ಯಾವಿಕ್ಗೆ(milorad cavic) ಹೋಲಿಸಿದರೆ, ಇಬ್ಬರಲ್ಲಿ ಕೇವಲ 0.002 ನಷ್ಟೂ ಮಾತ್ರ ವ್ಯತ್ಯಾಸವಿತ್ತು. ಈ ವ್ಯತ್ಯಾಸದಿಂದ ಮೈಕಲ್ ಫಸ್ಟ್ ಬಂದರು, ಕ್ಯಾವಿಕ್ ಸೆಕೆಂಡ್ ಬಂದರು. ಹೀಗಾಗಿ ನಾವು ಜೀವನದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಲು ಬಯಸಿದರೆ, ಎಲ್ಲಾ ವಿಷಯಗಳಲ್ಲೂ 100% ಆಗುವ ಅವಶ್ಯಕತೆ ಇಲ್ಲ, ನಾವು ಕೇವಲ 1% ಸುಧಾರಿಸಿಕೊಂಡರು ಅಧಿಕ ಸಾಧಿಸಬಹುದು ಮತ್ತು ನಾನು ಇದನ್ನೇ ಮಾಡಿದೆ, ನಾನು ಟೀಮನ್ನು 1% ಸುಧಾರಿಸಲು ಪ್ರಯತ್ನಿಸಿದೆ" ಎಂದು ಹೇಳುತ್ತಾರೆ.

ಇದರ ನಂತರ ಟಾಮ್ ಅವರಿಗೆ ಇದು ತುಂಬಾ ಆಸಕ್ತಿಕರವೆನಿಸಿತು, ಅದಕ್ಕೆ ಅವರು ನಾವು 1% ಸುಧಾರಿಸಿಕೊಂಡು ಅಧಿಕ ಸಾಧಿಸಬಹುದು, ಅದು ಆಟದಲ್ಲಿ ಅರ್ಥವಾಯಿತು. ಆದರೆ ಇದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಹೇಗೆ? ಎಂದು ಕೇಳುತ್ತಾರೆ. ಇದಕ್ಕೆ ಆ ಕೋಚ್, ನಾನು ಈ 1% ತಂತ್ರವನ್ನು 5 ವಿಭಿನ್ನ ಜನರಿಂದ ಕಲಿತೆ, ನೀವು ಅದನ್ನು ಕಲಿಯಲು ಬಯಸಿದರೆ, ಈ 5 ಜನರನ್ನು ಹೋಗಿ ಭೇಟಿಯಾಗಿ ಬನ್ನಿ" ಎಂದು ಹೇಳುತ್ತಾರೆ. ನೀವು ಈ ಐದು ನಿಯಮಗಳನ್ನು ತಿಳಿದರೆ ನಿಮ್ಮ ಜೀವನದಲ್ಲೂ 1% ಸುಧಾರಿಸಿಕೊಳ್ಳಲು ಪ್ರಾರಂಭಿಸಹುದು. ಟಾಮ್ ಅವರ ಜೀವನವನ್ನು ಬದಲಿಸಲು ಬಯಸಿದ್ದರು. ಹೀಗಾಗಿ ಆ ಐದು ಜನರನ್ನು ಹುಡುಕಿಕೊಂಡು ಹೋದರು.

ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳು

1. The opposite way to increase motivation.

how to increase motivation in kannada
motivation

ಆ ಕೋಚ್ ಅವರ ಮಾತು ಕೇಳಿ ಟಾಮ್ ಅವರು ತಮ್ಮ ಮೊದಲನೇ ಪಾಠವನ್ನು(lesson) ಕಲಿಯಲು ಕಾರ್ಲೋಸ್(carlos) ಹತ್ತಿರ ಹೋದರು. ಕಾರ್ಲೋಸ್ ಮಾರಾಟ ಕಾರ್ಯನಿರ್ವಾಹಕರಾಗಿದ್ದರು(sales executive). ಇವರನ್ನು ಭೇಟಿ ಆಗಿ ಟಾಮ್ ಅವರು ತುಂಬಾ ಪ್ರಭಾವಿತರದರು. ಅವರು ಆ ಕೋಚ್ ಬಗ್ಗೆ ತಿಳಿಸಿದರು. ಆಗ ಕಾರ್ಲೋಸ್ ಸಂತೋಷದಿಂದ, "ನಾನು ನಿಮಗೆ ಅದರ ಬಗ್ಗೆ ತಿಳಿಸುತ್ತೇನೆ" ಎಂದರು. ಅವರು ಹೇಳಿದ ಮೊದಲ ಪಾಠವೇ "the opposite way to increase motivation". ಇದರ ಪ್ರಕಾರ ಜಗತ್ತಿನಲ್ಲಿ ಅನೇಕರು ಪ್ರೇರಣೆ(motivation) ಬಂದ ನಂತರ ಕೆಲಸ ಮಾಡುವೇ ಎಂದು ಯೋಚಿಸುತ್ತಾರೆ, ಅಂದರೆ ಮೋಟಿವೇಶನ್ ಕೆಲಸಕ್ಕಿಂತ ದೊಡ್ಡದಾಗಿದೆ. ಆದರೆ ಸತ್ಯ ಇದರ ವಿರುದ್ಧವಿದೆ, "work is greater than motivation". ಅನೇಕರಿಗೆ ಬದುಕಿನಲ್ಲಿ ಸಾಧಿಸಲು ಮೋಟಿವೇಶನ್ ಮತ್ತು ಅಧಿಕ ಶಕ್ತಿ ಬೇಕು, ನಂತರವಷ್ಟೇ ನಾವು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅನಿಸುತ್ತದೆ. ಆದರೆ ಸತ್ಯವಾಗಿ ಇದರ ವಿರುದ್ಧವಾಗಿ(opposite) ಕೆಲಸ ನಡೆಯುತ್ತದೆ.

ಉದಾಹರಣೆಗೆ ಒಬ್ಬ ಜಿಮ್ಗೆ ಹೋಗಬೇಕೆಂದು ನಿರ್ಧಾರ ಮಾಡುತ್ತಾನೆ. ಅದಕ್ಕೆ ಅವನು ಒಂದು ದಿನ ನನಗೆ ಮೋಟಿವೇಶನ್ ಬರುತ್ತದೆ, ಶಕ್ತಿ ಬರುತ್ತದೆ, ಆಗ ನಾನು ಜಿಮ್ಗೆ ಹೋಗುವೆ ಎಂದು ಯೋಚಿಸುತ್ತಾನೆ. ನೀವು ಜಿಮ್ಗೆ ಹೋಗಲೇಬೇಕೆಂದಿದ್ದರೆ ಮೊದಲು ಜಿಮ್ಗೆ ಹೋಗಿ, ಅಲ್ಲಿ ವ್ಯಾಯಾಮ ಮಾಡುವುದರಿಂದ ನಿಮಗೆ ಮೋಟಿವೇಶನ್ ಬರುತ್ತದೆ. ನೀವು ಈ ರೀತಿಯಲ್ಲೇ ಕ್ರಮವನ್ನು ತೆಗೆದುಕೊಳ್ಳುವುದರಿಂದ ಜಿಮ್ಗೆ ಹೋಗಲೇಬೇಕೆಂದೆನಿಸುತ್ತದೆ. ಇದು ನಿಮಗೆ ಯಾವಾಗಲೂ ಮೋಟಿವೇಟ್ ಮಾಡುತ್ತದೆ.

ಉದಾಹರಣೆಗೆ ಒಬ್ಬ ದಪ್ಪ ವ್ಯಕ್ತಿ ಒಂದು ದಿನ ನಾನು ಜಿಮ್ಗೆ ಹೋಗುವೆ, ಆದರೆ ಮೋಟಿವೇಶನ್ ಬಂದ ನಂತರ ಹೋಗುವೆ ಎಂದು ಯೋಚಿಸುತ್ತಾನೆ. ಅವನು ಈ ರೀತಿಯಲ್ಲಿ ಯೋಚಿಸುತ್ತಿದ್ದಾರೆ ಜಿಮ್ಗೆ ಹೋಗಲು ಸಾಧ್ಯವೇ ಆಗುವುದಿಲ್ಲ. ಅದೇ ಅವನು ಮೊದಲು "ನಾನು ಜಿಮ್ಗೆ ಹೋಗಿ ಅಲ್ಲಿರುವ ವ್ಯಾಯಾಮ ಮಾಡಿದರೆ, ನೋವು ಆಗುತ್ತದೆ, ಆದರೆ ಮಜಾನೂ ಇರುತ್ತದೆ, ಇದರಿಂದ ಎರಡನೇ ದಿನ ಜಿಮ್ಗೆ ಹೋಗುತ್ತಾನೆ, ಮೂರನೇ ದಿನ ಜಿಮ್ಗೆ ಹೋಗುತ್ತಾನೆ, ಹೀಗೆ ಮತ್ತೆ ಮತ್ತೆ ಜಿಮ್ಗೆ ಹೋಗುವುದರಿಂದ ಅವನ ಮೋಟಿವೇಶನ್ ಹೆಚ್ಚುತ್ತಾ ಹೋಗುತ್ತದೆ. ಅವನಿಗೆ ಅವನ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದೆನಿಸುತ್ತದೆ. ಹೀಗೆ ಅವನಿಗೆ ಇದರಿಂದ ಸಿಗುವ ಫಲಿತಾಂಶದಿಂದ ಮೋಟಿವೇಟ್ ಆಗುತ್ತಿರುತ್ತಾನೆ. ಹೀಗಾಗಿ "always focus on work not on motivation".

ಮೋಟಿವೇಶನ್ ಹಿಂದೆ ಹೋಗಬೇಡಿ ಕ್ರಮವನ್ನು ತೆಗೆದುಕೊಳ್ಳಿ. ನೀವು ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ ಮೋಟಿವೇಶನ್ ತಾನಾಗೆ ಬರುತ್ತದೆ. ಈ ಸರಳ ವಿಷಯ ಟಾಮ್ ಅವರಿಗೆ ತುಂಬಾ ಪ್ರಭಾವ ಬೀರಿತು. ಅವರು ಅವರ ಜೀವನದಲ್ಲೂ ಈ ರೀತಿ ನಡೆದಿದೆ ಎಂದು ಯೋಚಿಸಲು ಪ್ರಾರಂಭಿಸಿದರು. ಅವರ ತಪ್ಪಿನ ಬಗ್ಗೆ ತಿಳಿದುಕೊಂಡು ಎರಡನೇ ಪಾಠವನ್ನು ಕಲಿಯಲು ಹೋದರು.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

2. Physics of personal success.

physics of personal success in kannada
personal success

ಎರಡನೇ ಪಾಠವನ್ನು ಕಲಿಯಲು ಅವರು ಪ್ಯಾಟ್(patt) ಎಂಬುವರ ಹತ್ತಿರ ಹೋದರು. ಪ್ಯಾಟ್ ಟೀಚರ್ ಆಗಿದ್ದರು, ಇವರು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದರು. ಅವರು ಟಾಮ್ ಅವರಿಗೆ ಎರಡನೇ ಪಾಠದ ಬಗ್ಗೆ ತಿಳಿಸಿದರು. ಅದುವೇ "physics of personal success". ಅವರು ಇದನ್ನು ವಿವರಿಸಲು ಒಂದು ಉದಾಹರಣೆ ನೀಡಿದರು. 1906 ರಂದು ಇಟಾಲಿಯನ್ ಎಕನಾಮಿಸ್ಟ್ ಆದ ಪ್ಯಾರಾಟೋ(paratoo) ಅವರು ಇಟಲಿಯ 80% ಆಸ್ತಿಯನ್ನು(property) 20% ಜನರು ಸ್ವಾದಿನ ಮಾಡಿಕೊಂಡಿರುವ ಬಗ್ಗೆ ತಿಳಿದುಕೊಂಡರು. ಅವರಿಗೆ ಈ ವಿಷಯ ತುಂಬಾ ಆಸಕ್ತಿಕರವೆನಿಸಿತು. ಹೀಗಾಗಿ ಅವರು ಇದರ ಮೇಲೆ ಇನ್ನಷ್ಟು ಸಂಶೋಧನೆ ಮಾಡಲು ಪ್ರಾರಂಭಿಸಿದರು. ಅವರು ಈ ಮಾದರಿ(pattern) ರಿಯಲ್ ಎಸ್ಟೇಟ್ ಅಷ್ಟೇ ಅಲ್ಲದೆ ಎಲ್ಲಾ ಕಡೆ ಅನ್ವಯಿಸುತ್ತದೆ ಎಂದು ಗಮನಿಸಿದರು.

ಉದಾಹರಣೆಗೆ 20% ಸಸ್ಯಗಳು 80% ಹಣ್ಣುಗಳನ್ನು ನೀಡುತ್ತವೆ, ನಾವು 80 ಬಾರಿಯಷ್ಟು ನಮ್ಮ 20% ನಷ್ಟು ಬಟ್ಟೆಗಳನ್ನು ಧರಿಸುತ್ತಿರುತ್ತೇವೆ. ಒಂದು ಮ್ಯಾಟ್ ಇದ್ದರೆ ಅದರ 20% ಜಾಗದಲ್ಲಿ ಮಾತ್ರ, 80% ನಷ್ಟು ನಡೆಯುತ್ತೇವೆ. ಈ ರೀತಿಯಲ್ಲಿ ಅವರು ಈ ತತ್ವವನ್ನು ಎಲ್ಲಾ ಕಡೆ ನೋಟೀಸ್ ಮಾಡಿದರು. ಅವರು ಇದನ್ನು ಪ್ಯಾರಾಟೋ ಪ್ರಿನ್ಸಿಪಲ್(paratoo principle) ಎಂದು ಕರೆದರು. ಇದು ನಿಮಗೆ ಹೇಗೆ ಅನ್ವಯಿಸುತ್ತದೆ. ನೀವು ವ್ಯಾಪಾರ(business) ಮಾಡುತ್ತಿದ್ದರೆ ನಿಮ್ಮ 80% ಆದಾಯ 20% ಆಡಿಯನ್ಸ್ನಿಂದ ಬರುತ್ತಿರುತ್ತದೆ. 80% ನಷ್ಟು ಸಮಸ್ಯೆಗಳನ್ನು 20% ಗ್ರಾಹಕರು ತರುತ್ತಿರುತ್ತಾರೆ. ನಿಮ್ಮ ಗುಂಪಿನಲ್ಲೂ 20% ನಷ್ಟು ಉದ್ಯೋಗಿಗಳು, 80% ನಷ್ಟು ಫಲಿತಾಂಶವನ್ನು ನೀಡುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ನೀವು "power of leverage" ಪರಿಕಲ್ಪನೆಯನ್ನು(concept) ಬಳಸಬಹುದು. ಇದನ್ನು ತಿಳಿದ ನಂತರ ಟಾಮ್ ಅವರು ಅಪ್ಲೈ ಮಾಡಲು ಯೋಚಿಸಿದರು.

ಇದಕ್ಕಾಗಿ ಅವರು ಅವರ ಸಂಬಂಧಿ(cousin) ಇತ್ತೀಚಿಗಷ್ಟೇ ತೆರೆದಿದ್ದ ಬೇಕರಿಗೆ ಹೋದರು. ಅವರು ಅಂಗಡಿ ಅತಿ ಹೆಚ್ಚು ಲಾಭಗಳಿಸುತ್ತಿಲ್ಲದಿರುವ ಬಗ್ಗೆ ತಿಳಿದುಕೊಂಡರು. ಅವರ ಸಂಬಂಧಿ ಎಲ್ಲಾ ವಿಷಯವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರು. ಅಂದರೆ ಕುಕಿಯ ರುಚಿ ಚೆನ್ನಾಗಿತ್ತು, ಸುವಾಸನೆ ಚೆನ್ನಾಗಿತ್ತು, ಅಂಗಡಿ ಚೆನ್ನಾಗಿ ಕಾಣುತ್ತಿತ್ತು. ಆದರೆ ಅವರು ಗ್ರಾಹಕರನ್ನು ಆಕರ್ಷಸಿವುದು ಹೇಗೆ ಎಂಬುದರಲ್ಲಿ ದುರ್ಬಲ ಇರುವುದನ್ನು ಟಾಮ್ ಗಮನಿಸಿದರು. ಇದಕ್ಕಾಗಿ ಅವರು ತಯಾರಾಗಿರುವ ಕುಕಿಯಾ ಮುಂದೆ ಫ್ಯಾನ್ ಇಟ್ಟರು. ಇದರಿಂದ ಆ ಕುಕಿಯ ಸುವಾಸನೆ ಅಂಗಡಿಯಿಂದ ಹೊರಗೆ ಹೋಗಲು ಪ್ರಾರಂಭಿಸಿತು. ಇದರಿಂದ ಅಲ್ಲಿ ಅಕ್ಕಪಕ್ಕ ಇರುವವರು ಆ ಕುಕಿ ವಾಸನೆ ತೆಗೆದುಕೊಂಡು ಕುಕಿ ಖರೀದಿಸಲು ಬರುತ್ತಿದ್ದರು. ಇದರಿಂದ ಆತನ ಅಂಗಡಿ ಕೂಡ ಚೆನ್ನಾಗಿ ನಡೆಯಲು ಪ್ರಾರಂಭಿಸಿತು.

ಇದೇ ರೀತಿ ನೀವು ಕೂಡ ನಿಮ್ಮ ವೃತ್ತಿಯಲ್ಲಿ(career) ಅಧಿಕ ಪ್ರೇರಣೆ ನೀಡುವ ಆ ಚಿಕ್ಕ ಚಿಕ್ಕ ಕೆಲಸಗಳು ಯಾವುದು ಎಂದು ತಿಳಿಯಿರಿ. ಅವರು ಈ ಪಾಠಗಳನ್ನು ಅಪ್ಲೈ ಮಾಡಿದಾಗ ಇದರಿಂದ ಒಳ್ಳೆಯ ಫಲಿತಾಂಶಗಳು ಬಂದವು. ಅದು ಅವರನ್ನು ಪ್ರಚೋದಿಸಿತು. ಹೀಗೆ ಅವರು ಮೂರನೇ ಪಾಠವನ್ನು ಕಲಿಯಲು ಹೋದರು ಅದುವೇ,

ಇದನ್ನು ಓದಿ: "Good Vibes Good Life" ಪುಸ್ತಕದ ವಿವರಣೆ

3. Why practice does not make perfect and what to do about it.

is practice make man perfect in kannada
is practice make perfect

ಮೂರನೇ ಪಾಠವನ್ನು ಕಲಿಯಲು ಟಾಮ್ ಅವರು ಬಾಬ್(bob) ಎಂಬುವರ ಹತ್ತಿರ ಹೋದರು. ಬಾಬ್ ಹೇಳಿದ ಮಾತು ಕೇಳಿ ಟಾಮ್ ಆಶ್ಚರ್ಯಗೊಂಡರು. ಬಾಬ್ ಈ ರೀತಿ ಹೇಳಿದರು, "ನಮಗೆ practice make man perfect ಎಂದು ತಿಳಿಸಲಾಗುತ್ತದೆ, ಆದರೆ ಇದು ಸರಿಯಲ್ಲ". ಇದನ್ನು ಕೇಳಿ ಟಾಮ್ ಅವರು ಗೊಂದಲಮಾಯಾರಾದರು, ಅದಕ್ಕೆ ಬಾಬ್ ಅವರು "ನಾನು ಒಂದು ಕಂಪನಿಯಲ್ಲಿ ವಾರಕ್ಕೆ 40 ರಿಂದ 50 ಗಂಟೆ ಕೆಲಸ ಮಾಡುತ್ತಿದ್ದಾರೆ, ಒಂದು ವರ್ಷದಲ್ಲಿ 2,200 ಗಂಟೆ ಆಗುತ್ತದೆ. ನಾನು ಆ ಕಂಪನಿಯಲ್ಲಿ 5 ವರ್ಷ ಕೆಲಸ ಮಾಡಿದ್ದಾರೆ, ಆಗ 11,000 ಗಂಟೆಯಷ್ಟು ಕೆಲಸ ಮಾಡಿದಂತಾಗುತ್ತದೆ. ಹಾಗಿದ್ದರೆ ನಾನು ಆ ಫೀಲ್ಡ್ನಲ್ಲಿ ಮಾಸ್ಟರ್ ಆಗಬೇಕು. ನಾನು ಸಿಇಓ ಸ್ಥಾನವನ್ನು ಪಡೆಯುವಷ್ಟು ಅದರಲ್ಲಿ ಮಾಸ್ಟರ್ ಆಗಬೇಕು. ಆದರೆ ಆ ರೀತಿ ಆಗದು.

ನೀವು ಯಾವುದೇ ವಿಷಯದಲ್ಲಿ 10,000 ಗಂಟೆ ಹಾಕಿದರೆ, ಅದರಲ್ಲಿ ಮಾಸ್ಟರ್ ಆಗಬಹುದು. ಆದರೆ ಈ ರೀತಿ ಗಂಟೆಯನ್ನು ವೇಳಾಪಟ್ಟಿ(schedule) ಮಾಡುವವರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅಂದರೆ ಅವರು ಒಂದೇ ಕೆಲಸವನ್ನು ಪುನರಾವರ್ತಿಸುವುದರ ಮೇಲೆ ಗಮನಹರಿಸುತ್ತಾರೆ. ಅವರ ಉದ್ದೇಶ ಅವರನ್ನು ಸುಧಾರಿಸಿಕೊಳ್ಳುವುದರ ಮೇಲೆ ಇರುವ ಬದಲು, ಕೆಲಸವನ್ನು ಮುಗಿಸುವುದರ ಮೇಲೆ ಇರುತ್ತದೆ.

ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಸುಧಾರಿಸಿಕೊಳ್ಳುವ ರೀತಿಯ ಉದ್ದೇಶವನ್ನು ಇಟ್ಟುಕೊಳ್ಳಬೇಕು ಮತ್ತು ನೀವು ಆ ಕೆಲಸದ ಸಮಯದಲ್ಲಿ ಪೂರ್ತಿಯಾಗಿ ಗಮನ ಹರಿಸಬೇಕು. ಇದರಿಂದ ನೀವು ಯಾವುದೇ ಫೀಲ್ಡ್ನಲ್ಲಿ ಮಾಸ್ಟರ್ ಆಗಬಹುದು. ಇದರಿಂದಲೇ ನೀವು ಪ್ರತಿದಿನ 1% ಸುಧಾರಿಸಿಕೊಂಡು ಮತ್ತು ಯಾವುದಾದರೂ ಒಂದು ಫೀಲ್ಡ್ನಲ್ಲಿ ಮಾಸ್ಟರಿ ಸಾಧಿಸುತ್ತೀರ. ಈ ಪಾಠಗಳು ಕೂಡ ಟಾಮ್ ಅವರಿಗೆ ಆಸಕ್ತಿಕರವೆನಿಸಿತು. ಇದರಿಂದ ಪ್ರಭಾವಿತರಾಗಿ ಅವರು ನಾಲ್ಕನೇ ಪಾಠವನ್ನು ಕಲಿಯಲು ಹೋದರು ಅದುವೇ,

ಇದನ್ನು ಓದಿ: ಕಡಿಮೆ ಹಣದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

4. 30 days formula.

30 days formula in kannada
30 days formula

ಇದನ್ನು ಕಲಿಯಲು ಅವರು ಕ್ರಿಸ್(cris) ಎಂಬುವರ ಹತ್ತಿರ ಹೋದರು. ಕ್ರಿಸ್ ಅವರು ದೊಡ್ಡ ಸೈಕಾಲಜಿಸ್ಟ್ ಆಗಿದ್ದರು. ಅವರಿಗೆ ಟಾಮ್, "ಪ್ರತಿ ವರ್ಷ ಡಿಸೆಂಬರ್ 31 ರಂದು ನಾವು ಎಲ್ಲ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿರುತ್ತೇವೆ, ಹ್ಯಾಪಿ ನ್ಯೂ ಇಯರ್ ಎಂದು ಕೂಗುತ್ತೇವೆ ಮತ್ತು ಮುಂದಿನ ದಿನ ನಾವು ಜಿಮ್ಗೆ ಹೋಗುತ್ತೇವೆ, ಚೆನ್ನಾಗಿ ಓದಲು ಪ್ರಾರಂಭಿಸುವೆ, ನನ್ನನ್ನು ಬದಲಿಸಿಕೊಳ್ಳುವೆನು ಎಂಬುವಂತೆ, ಹೊಸ ವರ್ಷದಲ್ಲಿ ನಿರ್ಣಯ ಮಾಡುತ್ತೇವೆ. ಜನವರಿ 1 ರಂದು ತುಂಬಾ ಜನ ಜಿಮ್ಗೆ ಹೋಗುವ ಮೂಲಕ ಈ ಒಳ್ಳೆಯ ಹವ್ಯಾಸವನ್ನು ಪ್ರಾರಂಭಿಸುತ್ತಾರೆ. ಆದರೆ 10 ದಿನದ ನಂತರ ಅದನ್ನು ಮರೆತೇ ಬಿಡುತ್ತಾರೆ. ಅವರ ಜೋಶ್ ಕಡಿಮೆಗೊಳ್ಳುತ್ತದೆ.

ಇದರ ಮೇಲೆ ರಿಚರ್ಡ್ ವೈಸ್ಮ್ಯಾನ್(richard wiseman) ಎಂಬುವರು ಒಂದು ಸಂಶೋಧನೆ ಮಾಡಿದ್ದರು. ಅದರಲ್ಲಿ ಅವರು ಹೊಸ ವರ್ಷದ ನಿರ್ಣಯ ಮಾಡುವವರಲ್ಲಿ 88% ನಷ್ಟು ಜನರು ಫೇಲ್ ಅನುತ್ತೀರ್ಣರಾಗುವುದನ್ನು(fail) ಗಮನಿಸಿದರು. ಇದರ ಪರಿಹಾರವನ್ನು ಟಾಮ್ ಅವರು ಕ್ರಿಸ್ಗೆ ಕೇಳಿದರು. ಇದಕ್ಕೆ ಕ್ರಿಸ್ ಅವರು "30 days formula" ಬಳಸಲು ಹೇಳುತ್ತಾರೆ.

ಒಬ್ಬ ಪ್ರಸಿದ್ಧ ಲೇಖಕರಾದ ಮ್ಯಾಕ್ಸ್ವೆಲ್ ಮಾಲ್ಟ್ಜ್(maxwell maltz) ಯಾವುದೇ ಹವ್ಯಾಸವನ್ನು ಕಲಿಯಲು 21 ದಿನಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ನಿಮ್ಮ ಮೊದಲ ಗುರಿ ಏನಿರಬೇಕೆಂದರೆ 21 ದಿನಗಳಿಗಾದರೂ ಒಂದು ಕೆಲಸವನ್ನು ಮಾಡಿ. ಪ್ರಾರಂಭದಲ್ಲಿ ನಿಮಗೆ ಸಮಸ್ಯೆ ಬರಬಹುದು. ಆದರೆ ನೀವು 21 ದಿನ ಈ ಕೆಲಸ ಮಾಡುವೆ ಎಂಬ ಗುರಿ ಇಟ್ಟುಕೊಂಡರೆ, ನಿಮ್ಮ ಮೆದುಳು ಆ ಕೆಲಸವನ್ನು ಹವ್ಯಾಸವನ್ನಾಗಿ ಮಾಡುತ್ತದೆ. ಒಮ್ಮೆ ನಿಮಗೆ ಅದು ಹವ್ಯಾಸವಾದಾಗ ಅದನ್ನು ನಿಯಮಿತವಾಗಿ(regular) ನೀವು ಮಾಡಬಹುದು. ಹೀಗಾಗಿ ಪ್ರಾರಂಭದಲ್ಲಿ ನಿಮ್ಮ ಗಮನ ಕೇವಲ ಹವ್ಯಾಸವನ್ನು ಸೃಷ್ಟಿಸುವ ಮೇಲೆ ಮಾತ್ರ ಇರಲಿ. ಇದಕ್ಕೆ ನೀವು "30 day challenge" ತೆಗೆದುಕೊಳ್ಳಿ. ನೀವು ಒಂದು ಕ್ರಮವನ್ನು 30 ದಿನ ಮಾಡೇ ಮಾಡುವೆ ಎಂದು ಗುರಿ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಮೆದುಳಿನ ಜೊತೆ ಹೊಡೆದಾಡುವ ಅವಶ್ಯಕತೆ ಇರುವುದಿಲ್ಲ.

ತುಂಬಾ ಜನ ಈ 30 ದಿನದಲ್ಲೇ ಫೇಲ್ ಆಗುತ್ತಾರೆ, ಅಲ್ಲಿ ನೀವು ಫೇಲ್ ಆಗಬಾರದು. ಇದನ್ನು ಕೇಳಿದ ನಂತರ ಟಾಮ್ ಅವರು ಈ ಹೊಸ ವರ್ಷದಲ್ಲಿ "30 day challenge" ತೆಗೆದುಕೊಂಡು ಒಂದು ಹವ್ಯಾಸವನ್ನು ಕಲಿಯುವೆನು ಎಂದು ಯೋಚಿಸಿದರು. ನೀವು ಕೂಡ "30 day challenge" ತೆಗೆದುಕೊಂಡು ಒಂದು ಒಳ್ಳೆಯ ಹವ್ಯಾಸವನ್ನು ಕಲಿಯಿರಿ. ಇದೇ ಜೋಶ್ನಲ್ಲಿ ಅವರು ಐದನೇ ಪಾಠವನ್ನು ಕಲಿಯಲು 5ನೇ ವ್ಯಕ್ತಿಯ ಹತ್ತಿರ ಹೋದರು.

ಇದನ್ನು ಓದಿ: ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?

5. Taking rest is important.

is taking rest is important in kannada
rest

ಐದನೇ ಪಾಠವನ್ನು ಕಲಿಯಲು ಅವರು ಜೆಫ್(jeff) ಹತ್ತಿರ ಹೋದರು. ಜೆಫ್ ಅವರು ಕ್ರೀಡಾಪಟು(atleate) ಆಗಿದ್ದರೂ, ಅವರು ಕೂಡ ಒಂದು ಆಘಾತಕಾರಿ(shocking) ವಿಷಯವನ್ನು ತಿಳಿಸಿದರು. ಅವರು, "ನೀವು ಕೆಲವೊಮ್ಮೆ ಕೆಲಸ ಮಾಡದಿರುವ ಬಗ್ಗೆಯೂ ಗಮನ ಹರಿಸಬೇಕು" ಎಂದು ಹೇಳುತ್ತಾರೆ. ಈ ಮಾತು ಟಾಮ್ ಅವರಿಗೆ ಗೊಂದಲ ಮಾಡಿತು, ಅವರು "ನೀವು ಏನು ಹೇಳುತ್ತಿದ್ದೀರಾ" ಎಂದು ಕೇಳಿದರು. ಅದಕ್ಕೆ ಜೆಫ್, "ಹುಸೇನ್ ಬೋರ್ಡ್ 2008ರ ಒಲಂಪಿಕ್ ನಲ್ಲಿ 9.69 ಸೆಕೆಂಡ್ನಲ್ಲಿ 100 ಮೀಟರ್ನ ಓಟವನ್ನು ಮುಗಿಸಿ ವಿಶ್ವ ದಾಖಲೆ(world record) ಮಾಡಿದರು. ಅದೇ ಮೂರು ವರ್ಷದ ಹಿಂದೆ 9.75 ಸೆಕೆಂಡ್ ವಿಶ್ವ ದಾಖಲೆಯನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಏಕೆಂದರೆ ಅವರ ಹಳೆಯ ತರಬೇತುದಾರರು ಟ್ರೈನಿಂಗ್ ಮೇಲೆ ಅಧಿಕ ಗಮನಹರಿಸುತ್ತಿದ್ದರು ಮತ್ತು ವಿರಾಮದ ಮೇಲೆ ಅಷ್ಟು ಗಮನ ಹರಿಸುತ್ತಿರಲಿಲ್ಲ. ಅವರು "ನಾವು ಅಧಿಕ ಟ್ರೈನಿಂಗ್ ಮಾಡಿದಷ್ಟು, ಅಧಿಕ ಸಾಧಿಸುತ್ತೇವೆ" ಎಂದು ನಂಬಿದ್ದರು.

ಆದರೆ ಅವರ ಕೋಚ್ಗೆ ವಿರಾಮದ ಸಮಯ ಕೂಡ ತುಂಬಾ ಪ್ರಮುಖವೆನಿಸಿತು, ಒಳ್ಳೆಯ ರೀತಿಯಲ್ಲಿ ವಿರಾಮ ನೀಡಲು ಪ್ರಾರಂಭಿಸಿದಾಗ, ಅವರ ಫಲಿತಾಂಶವು 0.6 ಸೆಕೆಂಡ್ ಕಡಿಮೆ ಮಾಡಲು ಸಾಧ್ಯವಾಯಿತು. ಇದೇ ರೀತಿ ಅನೇಕರು ಆಸಕ್ತಿಕರ ವಿಷಯಗಳನ್ನು ಕಲಿತು ತಮ್ಮನ್ನು ಪುಶ್ ಮಾಡಿಕೊಳ್ಳುತ್ತಾರೆ. ಅವರು ಅಧಿಕ ಗಂಟೆ ಕಷ್ಟ ಪಡಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ನಮ್ಮ ಮೆದುಳಿಗೆ ಕಠಿಣ ಪರಿಶ್ರಮ ಹಾಕುವ ಅಭ್ಯಾಸ ಇರುವುದಿಲ್ಲ. ಇದರಿಂದ ನಮ್ಮ ಮೋಟಿವೇಶನ್ ಒಂದು ಸಮಯದ ನಂತರ ಪೂರ್ತಿಯಾಗಿ ಹೋಗುತ್ತದೆ ಮತ್ತು ನಾವು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಒಂದು ಕ್ರೇಜಿ ಸಂಗತಿ ಕೂಡ ಇದೆ. ಅದೆಂದರೆ ದಿನದಲ್ಲಿ 10 ರಿಂದ 12 ಗಂಟೆ ಕೆಲಸ ಮಾಡಿದರೆ, ಅವರಿಗೆ ಹೃದಯಘಾತ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತದೆ. ಈ ವಿಷಯ ಎಷ್ಟು ಸತ್ಯ ಎಂದು ನಮಗೆ ತಿಳಿದಿಲ್ಲ, ಆದರೆ ನೀವು ನಿಮ್ಮಗೆ ಅಧಿಕ ಒತ್ತಡ ನೀಡಿದಷ್ಟು ಹೆಚ್ಚು ಸಮಸ್ಯೆಯನ್ನು ನೀಡುತ್ತದೆ. ಇದನ್ನು "why we sleep" ಎಂಬ ಪುಸ್ತಕದಲ್ಲೂ ತಿಳಿಸಲಾಗಿದೆ. ಹೀಗಾಗಿ ನಿಮ್ಮ ನಿದ್ದೆಯ ಮೇಲು ಗಮನ ಆರಿಸಿ. ಕೆಲಸವನ್ನು ಮಾಡಿ, ವಿಶ್ರಾಂತಿಗೂ ಸಮಯ ನೀಡಿ, ಎರಡನ್ನು ಸಮತೋಲನ ಮಾಡಿ. ನೀವು ಸ್ವಲ್ಪ ಸಮಯ ಪೂರ್ತಿ ಗಮನ ಆರಿಸಿ ಕೆಲಸ ಮಾಡಿದರು, ಇದು ನಿಮಗೆ ತುಂಬಾ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.

ಇದನ್ನು ಜೆಫ್ ಅವರು ಟಾಮ್ಗೆ ತಿಳಿಸಿದರು. ಟಾಮ್ ಅವರು ಇದನ್ನು ತಮ್ಮ ಬದುಕಿನಲ್ಲಿ ಅಡವಡಿಸಿಕೊಳ್ಳಲು ಪ್ರಾರಂಭಿಸಿದರು ಮತ್ತು ನಿಧಾನ ಗತಿಯಲ್ಲಾದರೂ ಅವರ ಬದುಕು ಬದಲಾಯಿತು. ಅವರಿಗೆ ಕೆಲಸದ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಅನೇಕ ಸುಧಾರಣೆಗಳು ಕಂಡವು ಮತ್ತು ಅವರು ಹಣವನ್ನು ಗಳಿಸಿದರು.

ಇದನ್ನು ಓದಿ: ಕಡಿಮೆ ಸಮಯದಲ್ಲಿ ಹೆಚ್ಚು ಅಧ್ಯಯನ ಮಾಡುವುದು ಹೇಗೆ?

Summary

ಈಗ ನಾವು ಸಾರಾಂಶ ನೀಡಿದರೆ, ನಾವು ಎಲ್ಲದರಲ್ಲೂ 100% ಆಗುವ ಬದಲು ಒಂದೊಂದು ವಿಷಯದಲ್ಲಿ 1% ಸುಧಾರಿಸಿಕೊಂಡು ಗಮನ ಹರಿಸಬೇಕು. ನಾವು ಎಲ್ಲ ವಿಷಯದಲ್ಲೂ ಅತ್ಯುತಮ ಆಗಲು ಸಾಧ್ಯವಿಲ್ಲ, ಆದರೆ ಎಲ್ಲಾ ವಿಷಯದಲ್ಲೂ ಉತ್ತಮ ಆಗಬಹುದು. ನಿಮ್ಮನ್ನು ಉತ್ತಮ ಮಾಡಿಕೊಳ್ಳಲು ಈ ಐದು ವಿಷಯಗಳ ಮೇಲೆ ಗಮನ ಆರಿಸಿ.

• ಪ್ರೇರಣೆಯ ಬದಲು ಕ್ರಮದ ಮೇಲೆ ಗಮನ ಆರಿಸಿ.

• ಪ್ಯಾರಾಟೋ ಪ್ರಿನ್ಸಿಪಲ್ ನೆನಪಿನಲ್ಲಿಟ್ಟುಕೊಳ್ಳಿ. ನಿಮಗೆ 80% ನಷ್ಟು ಫಲಿತಾಂಶವನ್ನು ನೀಡುವ 20% ವಸ್ತುಗಳ ಮೇಲೆ ಗಮನ ಆರಿಸಿ.

• ಕೇವಲ ಗಂಟೆಗಳಿಗೆ ಹೂಡಿಕೆ ಮಾಡಬೇಡಿ, ಆಳವಾದ ಕೆಲಸ ಮಾಡುವುದರ ಮೇಲೂ ಗಮನ ಹರಿಸಿ.

• ನಿಮ್ಮಲ್ಲಿ ಹವ್ಯಾಸವನ್ನು ಬೆಳೆಸಲು "30 days challenge" ತೆಗೆದುಕೊಳ್ಳಿ.

• ಎಲ್ಲವನ್ನು ಮಾಡುವುದರ ಜೊತೆಗೆ ವಿಶ್ರಾಂತಿ ತೆಗೆದುಕೊಳ್ಳುವುದರ ಮೇಲೂ ಗಮನವಿರಲಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments