Watch Video
ನೀವು ಟಿವಿಯಲ್ಲಿ ಮ್ಯೂಚುಯಲ್ ಫಂಡ್(mutual fund) ಸರಿ ಇದೆ ಎಂಬ ಜಾಹೀರಾತನ್ನು ನೋಡಿರುತ್ತೀರಾ. ಈ ಲೇಖನದಲ್ಲಿ ನಾವು ಆ ಮ್ಯೂಚುಯಲ್ ಫಂಡ್ ಬಗ್ಗೆಯೇ ತಿಳಿಸಲಿದ್ದೇವೆ. ನೀವು ಒಂದು ಆರ್ಥಿಕ ಯೋಜನೆ(financial plan) ಮಾಡುತ್ತಿದ್ದಾರೆ ಈ ಲೇಖನ ಅಧಿಕ ಸಹಕಾರಿಯಾಗಿದೆ. ಮ್ಯೂಚುವಲ್ ಫಂಡ್ನಲ್ಲಿ ನಿಮ್ಮ ಹಣವು ಅಧಿಕ ವೈವಿಧ್ಯಗೊಳ್ಳುತ್ತದೆ(diversify). ನೀವು ಡೆಬ್ಟ್(debt), ಇಕ್ವಿಟಿ(equity) ಮತ್ತು ಹೈಬ್ರಿಡ್(hybrid) ರೀತಿಯ ಮ್ಯೂಚುಯಲ್ ಫಂಡ್ಗಳ ಬಗ್ಗೆ ತಿಳಿದಿರುತ್ತೀರಾ.
ನೀವು ಬಹಳಷ್ಟು ಸ್ಟಾಕ್ಸ್ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಈಕ್ವಿಟಿ ಮ್ಯೂಚುಯಲ್ ಫಂಡ್ ಅನ್ನು ಆರಿಸಿಕೊಳ್ಳಿ. ಈ ಈಕ್ವಿಟಿ ಮ್ಯೂಚುಯಲ್ ಫಂಡ್ನಲ್ಲಿ ವಿವಿಧ ಭಾಗಗಳು ಇವೆ. ಅವೆಂದರೆ,
cap ಎಂದರೆ ಮಾರುಕಟ್ಟೆ ಬಂಡವಾಳೀಕರಣ(market capitalization) ಆಗಿದೆ. ಭಾರತದ ದೊಡ್ಡ 100 ಮಾರುಕಟ್ಟೆ ಬಂಡವಾಳೀಕರಣ ಇರುವ ಕಂಪನಿಗಳು ಲಾರ್ಜ್ ಕ್ಯಾಪ್ನಲ್ಲಿ ಬರುತ್ತವೆ. ಮ್ಯೂಚುಯಲ್ ಫಂಡ್ ಎಎಂಸಿ(amc) ಕಂಪನಿಯಾಗಿದೆ ಅಂದರೆ ಆಸ್ತಿ ನಿರ್ವಹಣೆ(asset management company) ಕಂಪನಿಯಾಗಿದೆ. ಈ ಕಂಪನಿಯ ಫಂಡ್ ಮ್ಯಾನೇಜರ್ ಇರುತ್ತಾನೆ. ಆತನ ಹತ್ತಿರ ಒಳ್ಳೆಯ ಅನುಭವ(experience) ಮತ್ತು ಸಾಧನೆ ದಾಖಲೆ(track record) ಇರುತ್ತವೆ.
ನೀವು AMC ಯ ಮ್ಯೂಚುಯಲ್ ಫಂಡ್ನಲ್ಲಿ ಹಣವನ್ನು ಹೂಡಿಕೆ ಮಾಡಿದಾಗ 0 ಯಿಂದ 2% ಶುಲ್ಕ ವಿಧಿಸುತ್ತಾರೆ(fees charge). ಅಂದರೆ ನೀವು 1 ಲಕ್ಷ ಹೂಡಿಕೆ ಮಾಡಿದರೆ 98,000 ಹೂಡಿಕೆಯಾಗುತ್ತದೆ. ಉಳಿದ 2,000 ರೂಪಾಯಿ AMCಯಾದಗುತ್ತದೆ. ಈ ರೀತಿ ಅನೇಕ ಜನರ ಶುಲ್ಕದಿಂದ ಈ AMC ಕಂಪನಿಗಳು ನಡೆಯುತ್ತಿರುತ್ತದೆ. ಅವರು ನಿಮಗೆ ರಿಟರ್ನ್ಸ್ ನೀಡುತ್ತಾರೆ ಆದರೆ ನಿಮ್ಮಿಂದ 0- 2% ಶುಲ್ಕವನ್ನು ತೆಗೆದುಕೊಳ್ಳುತ್ತಾರೆ.
ಇದನ್ನು ಓದಿ: ETF ಹೂಡಿಕೆ ತಂತ್ರಹೊಸ ಕಂಪನಿ ಷೇರು ಮಾರುಕಟ್ಟೆಗೆ ಬಂದರೆ ipo ಪ್ರಾರಂಭಿಸುತ್ತಾರೆ. ಇದೇ ರೀತಿ ಮ್ಯೂಚುಯಲ್ ಫಂಡ್ ಹೊಸದಾಗಿ ಬಂದಾಗ NFO ಪ್ರಾರಂಭಿಸುತ್ತಾರೆ. ಅಂದರೆ new fund offering ಆಗಿದೆ.
AMC ಯಲ್ಲಿ ನೀವು ಹೂಡಿಕೆ ಮಾಡಿದಾಗ ಅವರು ನಿಮ್ಮ ಪರವಾಗಿ ಷೇರು ಮಾರುಕಟ್ಟೆಯಾಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ನಿಮಗೆ ಬಿಡಿಯನ್ನು(units) ನೀಡುತ್ತಾರೆ. ಇದನ್ನು ನಾವು NAV ಎನ್ನುತ್ತೇವೆ.
NFO ದಲ್ಲಿ ಮ್ಯೂಚುವಲ್ ಫಂಡ್ ಮ್ಯಾನೇಜರ್ ಈ ಸ್ಟಾಕ್ಗಳಲ್ಲೇ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ಅದು ಇನ್ನು ಮೇಲೆ ಹೋಗಬೇಕು ಅಷ್ಟೇ, ಹೀಗಾಗಿ ನಮ್ಮ ಪ್ರಕಾರ ನೀವು NFO ದಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಏಕೆಂದರೆ ನೀವು ಈಗಾಗಲೇ ಚೆನ್ನಾಗಿ ನಿರ್ವಹಿಸುತ್ತಿರುವ(perform) ಮ್ಯೂಚುವಲ್ ಫಂಡ್ನ ಟ್ರ್ಯಾಕ್ ರೆಕಾರ್ಡ್ ನೋಡಿ ಅದರಲ್ಲಿ ಹೂಡಿಕೆ ಮಾಡಬಹುದು.
ಇದನ್ನು ಓದಿ: ಷೇರುಗಳನ್ನು ಖರೀದಿಸದೆ ಶ್ರೀಮಂತರಾಗಿ(Index Fund)ಲಾರ್ಜ್ ಕ್ಯಾಪ್(large cap) ಕಂಪನಿಗಳೆಂದರೆ ಆನೆಗಳಿದ ಹಾಗೆ. ಇವುಗಳು ಎಲ್ಲಿಗೂ ಹೋಗುವುದಿಲ್ಲ. ನೀವು ಲಾರ್ಜ್ ಕ್ಯಾಪ್ನಲ್ಲಿ ಹೂಡಿಕೆ ಮಾಡಿದರೆ, ನೀವು ಮುಳುಗುವ ಸಾಧ್ಯತೆ ಕಡಿಮೆ ಇರುತ್ತದೆ.
ಮಿಡ್ ಕ್ಯಾಪ್(mid cap) ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ ಲಾರ್ಜ್ ಕ್ಯಾಪ್ಗಿಂತ ಕಡಿಮೆ ಇರುತ್ತದೆ. ಇವುಗಳು ಕುದುರೆಯ ರೀತಿ. ಕುದುರೆ ಆನೆಗಿಂತ ವೇಗವಾಗಿ ಓಡುತ್ತವೆ. ಅಂದರೆ ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ರಿಟರ್ನ್ಸ್ ಅನ್ನು ಮೀರಿಸಬಹುದು(outperform).
ಸ್ಮಾಲ್ ಕ್ಯಾಪ್ನಲ್ಲಿ(small cap) ಕೆಲವು ಕುದುರೆಗಳ ಜೊತೆ ಕತ್ತೆಗಳು ಇರುತ್ತವೆ. ಹೀಗಾಗಿ ಇದರಲ್ಲಿ ನಿಮ್ಮ ಅಪಾಯ(risk) ಹೆಚ್ಚುತ್ತದೆ. ಲಾರ್ಜ್ ಕ್ಯಾಪ್ನಲ್ಲಿ ಅಪಾಯ ಕಡಿಮೆ ಇರುತ್ತದೆ. ಮಿಡ್ ಕ್ಯಾಪ್ನಲ್ಲಿ ಲಾರ್ಜ್ ಕ್ಯಾಪ್ಗಿಂತ ಅಧಿಕ ಅಪಾಯ ಇರುತ್ತದೆ. ಆದರೆ ಸ್ಮಾಲ್ ಕ್ಯಾಪ್ ಮಿಡ್ ಕ್ಯಾಪ್ಗಿಂತ ಅಧಿಕ ಅಪಾಯಕಾರಿ ಇರುತ್ತದೆ. ಆದರೆ ಸ್ಮಾಲ್ ಕ್ಯಾಪ್ ಅಧಿಕ ಅಪಾಯಕಾರಿ ಇರುವಷ್ಟು ಅಧಿಕ ರಿಟರ್ನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ.
ಮಲ್ಟಿ ಕ್ಯಾಪ್(multi cap) ಮ್ಯೂಚುಯಲ್ ಫಂಡ್ನಲ್ಲಿ ಕಂಪನಿಗಳು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ನಲ್ಲೂ ಹೂಡಿಕೆ ಮಾಡುತ್ತವೆ. ಮಲ್ಟಿ ಕ್ಯಾಪ್ ಕಂಪನಿಗಳು ಎಷ್ಟು ಪರ್ಸೆಂಟ್ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ನಲ್ಲಿ ಹೂಡಿಕೆ ಮಾಡಿದ್ದೇವೆ ಎಂಬುದನ್ನು ತಿಳಿಸಬೇಕು.
ಫ್ಲೆಕ್ಸಿ ಕ್ಯಾಪ್ನಲ್ಲಿ(flexi cap) ಸ್ಮಾಲ್ ಕ್ಯಾಪ್ ಚೆನ್ನಾಗಿ ನಿರ್ವಹಣೆ ಮಾಡುತ್ತಿದರೆ ಅದರಲ್ಲಿ ಹೂಡಿಕೆ ಮಾಡುತ್ತಾರೆ. ಲಾರ್ಜ್ ಕ್ಯಾಪ್ ಚೆನ್ನಾಗಿ ನಿರ್ವಹಣೆ ಮಾಡುತ್ತಿದರೆ ಅದರಲ್ಲಿ ಹೂಡಿಕೆ ಮಾಡುತ್ತಾರೆ. ಅಂದರೆ ಅವರು ಸುಲಭವಾಗಿ ಮಾರ್ಪಾಡು(shuffle) ಮಾಡಬಹುದು.
ನೀವು ರಿಟರ್ನ್ ಕಡಿಮೆಯಿದ್ದು ಸುರಕ್ಷಿತ ಫಂಡ್ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಡೆಬ್ಟ್ ಫಂಡ್(debt fund) ನಿಮಗೆ ಸೂಕ್ತವಾಗಿದೆ.
ಇದನ್ನು ಓದಿ: ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳುವೆಚ್ಚದ ಅನುಪಾತ(expense ratio) ಹೊರತುಪಡಿಸಿ ಮ್ಯೂಚುಯಲ್ ಫಂಡ್ ಕಂಪನಿಗಳು ಇನ್ನೊಂದು ರೀತಿಯಲ್ಲಿ ಹಣವನ್ನು ಗಳಿಸುತ್ತವೆ, ಅದುವೇ ಎಕ್ಸಿಟ್ ಲೋಡ್(exit load). ನೀವು ಲಾಕ್ ಇನ್ ಅವಧಿಗಿಂತ(lock in period) ಮುಂಚೆಯೇ ಹಣವನ್ನು ಮ್ಯೂಚುಯಲ್ ಫಂಡ್ನಿಂದ ಹಿಂತೆಗೆದುಕೊಂಡರೆ(withdraw) ಅದಕ್ಕೆ ಎಕ್ಸಿಟ್ ಲೋಡ್ ಕಡಿತಗೊಳ್ಳುತ್ತದೆ. ಎಕ್ಸಿಟ್ ಲೋಡ್ ಅಂದರೆ ದಳ್ಳಾಳಿ(commision) ಆಗಿದೆ. ಇದು ಕೂಡ 0 ಇಂದ 4% ಇರುತ್ತದೆ, ಸರಾಸರಿ 1% ಇರುತ್ತದೆ.
ಉದಾಹರಣೆಗೆ ನೀವು 25,000 ರೂ ಅನ್ನು ಕೂಡಿಸಿದ್ದೀರಾ ಎಂದುಕೊಳ್ಳಿ. ನಿಮಗೆ 6 ತಿಂಗಳಲ್ಲಿ 25,000 ರೂ ಬೇಕು. ನಿಮಗೆ 1% ಎಕ್ಸಿಟ್ ಲೋಡ್ ಬಿದ್ದರೆ, 250 ರೂ ಕಡಿತಗೊಂಡು ಉಳಿದ ಹಣ ನಿಮಗೆ ಸಿಗುತ್ತದೆ.
ನೀವು ದೀರ್ಘಾವಧಿಗೆ ಹೂಡಿಕೆ ಮಾಡುತ್ತಿದ್ದರೆ ಎಕ್ಸಿಟ್ ಲೋಡ್ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ಎಕ್ಸಿಟ್ ಲೋಡ್ ಕೆಲವು ವರ್ಷಗಳಿಗೆ ಮಾತ್ರ ಇರುತ್ತದೆ.
ನೀವು ಹೂಡಿಕೆ ಮಾಡುವ ಮೊದಲು ಎಷ್ಟು ಸಮಯಕ್ಕೆ(time) ಹೂಡಿಕೆ ಮಾಡಲು ಬಯಸಿದ್ದೀರಾ ಎಂಬುದನ್ನು ತಿಳಿಯಬೇಕು. ನೀವು ನಿಮ್ಮ ಗುರಿಯ ಬಗ್ಗೆ ತಿಳಿದುಕೊಂಡು, ಮ್ಯೂಚುಯಲ್ ಫಂಡ್ನಲ್ಲಿ ಏಕೆ ಹೂಡಿಕೆ ಮಾಡುವಿರಾ ಎಂಬುದನ್ನು ತಿಳಿಯಬೇಕು.
ನೀವು ನಿವೃತ್ತಿಗಾಗಿ(retirement) ಹೂಡಿಕೆ ಮಾಡಿದರೆ 30 ವರ್ಷಕ್ಕಿಂತ ಹೆಚ್ಚಿರುತ್ತದೆ. ಇದೇ ರೀತಿ ಸಮಯದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ನೀವು 5 ವರ್ಷದಲ್ಲಿ 1 ಕೋಟಿ ಗಳಿಸಲು ಬಯಸಬಹುದು. ಹೀಗಾಗಿ ಸಮಯವನ್ನು ನಿಗದಿಪಡಿಸುವುದು ತುಂಬಾ ಮುಖ್ಯವಾಗಿದೆ. ಸಮಯ ಎಲ್ಲವನ್ನು ಬದಲಿಸುತ್ತದೆ. ಸಂಯುಕ್ತಕ್ಕೂ(compounding) ಇದು ಮುಖ್ಯವಾಗಿದೆ. ನೀವು ಅಧಿಕ ಸಮಯ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ಸ್ ಪಡೆಯುತ್ತೀರಾ. ನೀವು ಅಪಾಯದ ಬಗ್ಗೆಯೂ ನೋಡಬೇಕು. ನಿಮ್ಮ ಹೂಡಿಕೆಯ ಸಮಯ ಅಧಿಕವಿದ್ದರೆ ಅದು ಯಾವುದೇ ಮ್ಯೂಚುಯಲ್ ಫಂಡ್ ಆದರೂ ಒಳ್ಳೆಯ ರಿಟರ್ನ್ ನೀಡೇ ನೀಡುತ್ತದೆ. ನಿಮ್ಮ ಹೂಡಿಕೆಯ ಸಮಯ 2 ವರ್ಷ ಇದ್ದರೆ ಡೆಬ್ಟ್ ಮ್ಯೂಚುಯಲ್ ಫಂಡ್ ನಿಮಗೆ ಸೂಕ್ತವಾಗಿದೆ. 2 ವರ್ಷಕ್ಕಿಂತ ಅಧಿಕವಿದ್ದರೆ ಇಕ್ವಿಟಿ ಮ್ಯೂಚುಯಲ್ ಫಂಡ್ಸ್ ಸೂಕ್ತವಾಗಿದೆ. ನಿಮ್ಮ ಹೂಡಿಕೆಯ ಸಮಯ ತುಂಬಾ ಇದ್ದರೆ ಅಧಿಕ ಅಪಾಯ ತೆಗೆದುಕೊಳ್ಳಬಹುದು. ಅದೇ ಹೂಡಿಕೆಯ ಸಮಯ ಕಡಿಮೆ ಇದ್ದರೆ ಕಡಿಮೆ ಅಪಾಯ ತೆಗೆದುಕೊಳ್ಳಬಹುದು.
ನಿಮ್ಮ ಹೂಡಿಕೆಯ ಸಮಯ ಅಧಿಕವಿದ್ದರೆ ಲಾರ್ಜ್ ಕ್ಯಾಪ್ನಲ್ಲಿ ಹೂಡಿಕೆ ಮಾಡಬೇಡಿ. 3 ರಿಂದ 5 ವರ್ಷಗಳಿಗೆ ಹೂಡಿಕೆ ಮಾಡಿದರೆ ಮಿಡ್ ಕ್ಯಾಪ್ ಆಯ್ಕೆ ಮಾಡಿ. 5 ವರ್ಷದ ಮೇಲೆ ಹೂಡಿಕೆ ಮಾಡಲು ಬಯಸಿದರೆ ಸ್ಮಾಲ್ ಕ್ಯಾಪ್, ಮಲ್ಟಿ ಕ್ಯಾಪ್(multi cap) ಮತ್ತು ಫ್ಲೆಕ್ಸಿ ಕ್ಯಾಪ್(flexi cap) ಸೂಕ್ತವಾಗಿದೆ.
ಇದನ್ನು ಓದಿ: "100 to 1 in the Stock Market" ಪುಸ್ತಕದ ಸಾರಾಂಶಆಕ್ಟಿವ್ ಫಂಡ್(active fund), ಇದನ್ನು ಸಕ್ರಿಯವಾಗಿ ನಿರ್ವಹಣೆ ಮಾಡಲಾಗುತ್ತದೆ. ಈ ರೀತಿಯ ಮ್ಯೂಚುಯಲ್ ಫಂಡ್ನ ವೆಚ್ಚದ ಅನುಪಾತ(expense ratio) ಅಧಿಕವಿರುತ್ತದೆ. ಪ್ಯಾಸಿವ್ ಫಂಡ್(passive fund), ಇದನ್ನು ಅಧಿಕ ನಿರ್ವಹಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಇದರಲ್ಲಿ ನಿಫ್ಟಿ 50, ನಿಫ್ಟಿ ನೆಕ್ಸ್ಟ್ 50 ರೀತಿಯ ಇಂಡೆಕ್ಸ್ ಫಂಡ್ಗಳಲ್ಲೇ ಹೂಡಿಕೆ ಮಾಡುತ್ತಾರೆ. ಹೀಗಾಗಿ ಈ ಪ್ಯಾಸಿವ್ ಫಂಡ್ನ ವೆಚ್ಚದ ಅನುಪಾತ ಕಡಿಮೆ ಇರುತ್ತದೆ.
ವಾರೆನ್ ಬಫೆಟ್(warren buffet) ಒಂದು ನಿಧಿ ಮನೆಗೆ(fund house) "ಅಮೆರಿಕದ s&p 500 ಇಂಡೆಕ್ಸ್ ರಿಟರ್ನ್ ಅನ್ನು ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು. ಇದರ ಫಲಿತಾಂಶ ವಾರೆನ್ ಬಫೆಟ್ ಕಡೆಗೆ ಇತ್ತು. ಇಂಡೆಕ್ಸ್ ರಿಟರ್ನ್, ಸಕ್ರಿಯವಾಗಿ ನಿರ್ವಹಿಸಲಾದ ನಿಧಿಯ(actively managed fund) ರಿಟರ್ನ್ ಅನ್ನು ಸೋಲಿಸಿತು. ಹೀಗಾಗಿ ಇಂಡೆಕ್ಸ್ನಲ್ಲಿ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ನೀವು ಬೇಕಾದರೆ ಇಂಡೆಕ್ಸ್ನಿಂದ ಇನ್ವೆಸ್ಟಿಂಗ್ ಅನ್ನು ಪ್ರಾರಂಭಿಸಬಹುದು.
ನಿಮ್ಮ ಹೂಡಿಕೆಯ ಸಮಯ ಅಧಿಕವಿದ್ದರೆ ನೀವು ಇಂಡೆಕ್ಸ್ ಹೊರಗೂ ಹೂಡಿಕೆ ಮಾಡಬಹುದು. ಹೀಗಾಗಿ ಹೂಡಿಕೆಯ ಸಮಯ ಅಧಿಕವಿದ್ದರೆ ಫ್ಲೆಕ್ಸಿ ಕ್ಯಾಪ್ ಫಂಡ್ ನಿಮಗೆ ಒಳ್ಳೆಯ ರಿಟರ್ನ್ಸ್ ನೀಡುತ್ತದೆ.
ನೀವು ಇಂಡೆಕ್ಸ್ನಲ್ಲಿ ಹೂಡಿಕೆ ಮಾಡಿದರೆ, ಲಾರ್ಜ್ ಕ್ಯಾಪ್ನಲ್ಲಿ ಹೂಡಿಕೆ ಮಾಡಿದಂತೆ. ಇದರಿಂದ ನೀವು ಕಡಿಮೆ ವೆಚ್ಚದ ಅನುಪಾತದಲ್ಲಿ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೀರಾ. ಈಗ ನೀವು ಮ್ಯೂಚುಯಲ್ ಫಂಡ್ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು.
ನೀವು ಮ್ಯೂಚುಯಲ್ ಫಂಡ್ ಆಯ್ಕೆ ಮಾಡುವಾಗ ಅದರ 5 ವರ್ಷದ ರಿಟರ್ನ್ಸ್ ನೋಡಿ, ವೆಚ್ಚದ ಅನುಪಾತ(expense ratio), ಎಕ್ಸಿಟ್ ಲೋಡ್(exit load) ನೋಡಿ, ಆ ಫಂಡಿನ ಪರಿಶೀಲನಾಪಟ್ಟಿ(checklist) ನೋಡಿ, ಆ ಫಂಡನ್ನು ಯಾರು ನಿರ್ವಹಿಸುತ್ತಿದ್ದರೆ, ಅವರ ಪ್ರೊಫೈಲ್ ಏನು ಎಂಬುದನ್ನು ನೋಡಿ. ನಿಮ್ಮ ಫಂಡಿನ ಹೋಲಿಕೆ(peer comparision) ಮಾಡಿ. ಆಗ ನಿಮಗೆ ಅಧಿಕ ಆಯ್ಕೆ ಸಿಗುತ್ತವೆ. ಇದರ ನಂತರ ಎಲ್ಲಿ ಹೂಡಿಕೆ ಮಾಡಬೇಕೆಂಬುದನ್ನು ನೀವು ನಿರ್ಧಾರ ಮಾಡಬಹುದು. ನೀವು ಗ್ರೋ(groww) ರೀತಿಯ ಅಪ್ಲಿಕೇಶನ್ನಿಂದ(application) ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು.
ಇದನ್ನು ಓದಿ: One Up On Wall Street ಪುಸ್ತಕದ ಸಾರಾಂಶ Part- 1ಅನೇಕರು sip ಅಥವಾ lumpsum, ಯಾವುದರಲ್ಲಿ ಹೂಡಿಕೆ ಮಾಡಬೇಕೆಂದು ಕೇಳುತ್ತಾರೆ. ಮಾರುಕಟ್ಟೆ ಬದಿಯಲ್ಲಿ(sideways) ಹೋಗುತ್ತಿದರೆ, sip ಸೂಕ್ತವಾಗಿದೆ. ಅದೇ ಮಾರುಕಟ್ಟೆ ತುಂಬಾ ಕೆಳಗೆ ಇದೆ ಎಂದು ನಿಮಗೆ ಅನಿಸಿದರೆ, ಉದಾಹರಣೆಗೆ ಕೋರೋನ ಸಮಯದಲ್ಲಿ ಮಾರುಕಟ್ಟೆ ಕೆಳಗೆ ಬಂದಿತು. ಆಗ ನಿಮ್ಮ ಹತ್ತಿರ 5 ಲಕ್ಷದಷ್ಟು ಮೊತ್ತ ಇದ್ದರೆ lumpsum ಹೂಡಿಕೆ ಸೂಕ್ತವಾಗಿದೆ.
ಯಾರಾದರೂ ಒಮ್ಮೆಲೇ 5 ಲಕ್ಷ ಹೂಡಿಕೆ ಮಾಡಿ ಅದಕ್ಕೆ 15% ನಷ್ಟು ರಿಟರ್ನ್ ದೊರೆತರೆ, 30 ವರ್ಷದಲ್ಲಿ 3 ಕೋಟಿಯಷ್ಟು ಇರುತ್ತದೆ. ಅದೇ 15% ಬದಲು 16% ರಿಟರ್ನ್ ದೊರೆತರೆ, 4 ಕೋಟಿಯಷ್ಟು ರಿಟರ್ನ್ ಸಿಗುತ್ತದೆ. ಅದೇ 18% ಅಷ್ಟು ರಿಟರ್ನ್ ದೊರೆತರೆ, 7 ಕೋಟಿರೂ ರಿಟರ್ನ್ ಸಿಗುತ್ತದೆ.
ಲಾರ್ಜ್ ಕ್ಯಾಪ್ನಲ್ಲಿ ನಿಮಗೆ ಸರಾಸರಿ 12% ನಷ್ಟು ರಿಟರ್ನ್ ದೊರೆಯುತ್ತದೆ. ಮಿಡ್ ಕ್ಯಾಪ್ನಲ್ಲಿ ಸರಾಸರಿ 15% ನಷ್ಟು ರಿಟರ್ನ್ ದೊರೆಯುತ್ತದೆ. ಇನ್ನು ಸ್ಮಾಲ್ ಕ್ಯಾಪ್ನಲ್ಲಿ 18% ತನಕ ರಿಟರ್ನ್ ದೊರೆಯುವ ಸಾಧ್ಯತೆ ಇರುತ್ತದೆ.
ಈ ಲೇಖನದಲ್ಲಿ ಮ್ಯೂಚುಯಲ್ ಫಂಡ್ ಅನ್ನು ಅರ್ಥ ಮಾಡಿಸಲು ಪ್ರಯತ್ನಿಸಿದ್ದೇವೆ. ನಿಮಗೆ ಮ್ಯೂಚುಯಲ್ ಫಂಡ್ ಬಗ್ಗೆ ಅಧಿಕ ತಿಳಿಯಿತು ಎಂದು ನಂಬುತ್ತೇವೆ. ಷೇರು ಮಾರುಕಟ್ಟೆಯ ಬಗ್ಗೆ ತಿಳಿಯಲು ನಮ್ಮ finance ವರ್ಗದಲ್ಲಿ ಇರುವ ಲೇಖನಗಳನ್ನು ಓದಿ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...