10 Powerful Medicinal Plants | 10 ಅತ್ಯಂತ ಶಕ್ತಿಯುತ ಔಷಧೀಯ ಸಸ್ಯಗಳು
Info Mind 19074
Watch Video
ಮನಸ್ಸು(mind) ಮತ್ತು ಭಾವನೆ(emotion) ನಿಯಂತ್ರಣ ಮಾಡುವುದು ಹೇಗೆ? ಜೀವನದಲ್ಲಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಗಮನ(focus) ಹರಿಸಲು ಮನಸ್ಸು ಮತ್ತು ಎಮೋಶನ್ ನಿಯಂತ್ರಣ ಹೊಂದಿರುವುದು ತುಂಬಾ ಮುಖ್ಯವಾಗಿದೆ. ನಿಮ್ಮ ಜೀವನದಲ್ಲಿ ಸಾಧಿಸಲು ಗಮನ ಮತ್ತು ಮನಸ್ಥಿತಿ(mindset) ಒಂದು ಮುಖ್ಯ ಸ್ಥಾನವನ್ನು ಹೊಂದಿದೆ.
ಇದನ್ನು ಓದಿ: ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?ಗಮನ ಮತ್ತು ಮನಸ್ಥಿತಿ ಮೇಲೆ ಈ ಲೇಖನವನ್ನು ಮಾಡಲು ನಾವು ವಿಷಯಗಳನ್ನು ಹುಡುಕುತ್ತಿದ್ದಾಗ ನಮಗೆ ಭಗವದ್ಗೀತೆಯಲ್ಲೇ ಇದರ ಉತ್ತರ ದೊರೆಯಿತು. ಈ ಮನಸ್ಸು ಮತ್ತು ಭಾವನೆಯ ಬಗ್ಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳುತ್ತಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಹೀಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ಕುರುಕ್ಷೇತ್ರದಲ್ಲಿ ಅರ್ಜುನ ಶ್ರೀಕೃಷ್ಣನಿಗೆ, "ನನಗೆ ಇಷ್ಟವಿಲ್ಲದಿದ್ದರೂ ಯಾವ ವ್ಯಕ್ತಿ ನನ್ನಿಂದ ಪಾಪ ಮಾಡಿಸುತ್ತಿದ್ದಾನೆ, ನಾನು ಏಕೆ ಫೋಕಸ್ ಮಾಡಲು ಸಾಧ್ಯವಾಗುತ್ತಿಲ್ಲ, ನಾನು ಏಕೆ ನನ್ನ ಗುರಿಯಿಂದ ಕಾರ್ಯಭಂಗ(distract) ಆಗುತ್ತೇನೆ, ನನಗೆ ಏಕೆ ಮನಸ್ಸನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಕೇಳುತ್ತಾನೆ.
ಅರ್ಜುನ ಕೇಳಿದ ಈ ಪ್ರಶ್ನೆ ನಿಮಗೂ ಅನ್ವಯಿಸಬಹುದು. ಇದರ ಮೇಲಿನ ಉತ್ತರವನ್ನು ಶ್ರೀಕೃಷ್ಣ ತುಂಬಾ ಸ್ಪಷ್ಟವಾಗಿ ಯಾವುದೇ ವ್ಯಕ್ತಿಗೆ ಅನ್ವಯಿಸುವ ರೀತಿಯಲ್ಲಿ ತಿಳಿಸಿದ್ದಾರೆ. ಅರ್ಜುನ ಕೇಳಿದ ಪ್ರಶ್ನೆಗೆ ಶ್ರೀಕೃಷ್ಣ, "ನಿನ್ನ ಪೂರ್ತಿ ಜ್ಞಾನ ಕಾಮಾದಿಂದ ಮುಚ್ಚಲ್ಪಟ್ಟಿದೆ. ಈ ಕಾಮಾವು ಅನೇಕ ಜ್ಞಾನಿಗಳ ಶತ್ರುವಾಗಿದೆ. ಈ ಕಾಮಾ ಎಂದಿಗೂ ಕಡಿಮೆಯಾಗುವುದಿಲ್ಲ. ಈ ಕಾಮದಿಂದಲೇ ಕಾರ್ಯಭಂಗ ಆಗುತ್ತಿದೆ" ಆಗಿದ್ದರೆ, ಕಾಮ ಎಂದರೇನು?
ತುಂಬಾ ಜನ ಇದನ್ನು ಕೇವಲ ಲೈಂಗಿಕ ಆಸೆ ಎಂದುಕೊಳ್ಳುತ್ತಾರೆ. ಆದರೆ ಕೇವಲ ಲೈಂಗಿಕ ಆಸೆ ಅಲ್ಲದೆ, ನಿಮ್ಮ ಗುರಿಗೆ ಸಂಬಂಧಿಸದ ಯಾವುದೇ ರೀತಿಯ ಆಸೆಯು ಕಾಮಾವಾಗಿದೆ. ಇದರ ಉದಾಹರಣೆ ಹೇಳಬೇಕೆಂದರೆ, ಒಬ್ಬ ದೇವರ ಭಕ್ತನಿಗೆ ಅವನ ಭಕ್ತಿಗಿಂತ ಬೇರೆ ಯಾವುದೇ ವಿಷಯ ಕಾಮವಾಗಿದೆ.
ನಾನು ದೊಡ್ಡ ಕಾರು ಖರೀದಿಸಬೇಕು, ನಾನು ಗೋಲ್ಗಪ್ಪಾ ತಿನ್ನಬೇಕು ಎಂದು ನೀವು ಯೋಚಿಸುವುದು ಕಾಮವಾಗಿದೆ. ಒಂದು ಸ್ತ್ರೀ ಜೊತೆ ಸಂಬಂಧ ಬೆಳೆಸಬೇಕು ಎಂದು ನೀವು ಯೋಚಿಸಿದರೆ, ನೀವು ಆ ಸ್ತ್ರೀ ಎಂಬ ಕಾಮದಲ್ಲೇ ಇರುತ್ತೀರಾ. ಹೀಗಾಗಿ ಕಾಮವೆಂದರೆ ಗುರಿಗೆ ಸಂಬಂಧಿಸದ ಆಸೆಗಳಾಗಿವೆ. ಇದು ನಿಮ್ಮನ್ನು ಬಲೆ(trap) ಮಾಡುತ್ತದೆ. ಈ ಕಾಮಾ ಒಂದು ರೀತಿ ಅಗ್ನಿ ಇದ್ದ ಹಾಗೆ, ಇದು ಎಷ್ಟು ದೊಡ್ಡ ಅಗ್ನಿ ಎಂದರೆ ನೀವು ತುಪ್ಪ ಸುರಿದಷ್ಟು ಹೆಚ್ಚುತ್ತಿರುತ್ತದೆ.
ನಿಮಗೆ ದೇಹದಲ್ಲಿ ಕಡಿತವಾದಾಗ ತುರಿಸಿಕೊಂಡರೆ ಅದು ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಲೈಂಗಿಕತೆಯ ಇಚ್ಛೆ ಬಂದು ಅದನ್ನು ಮಾಡಿದ ನಂತರವೂ, ಅದರ ಆಸೆ ಕಡಿಮೆಯಾಗುವುದಿಲ್ಲ. ಬದಲಿಗೆ ಇನ್ನೂ ಹೆಚ್ಚುತ್ತದೆ. ಮದ್ಯ ಕುಡಿದ ನಂತರ ಅದನ್ನು ಕಡಿಮೆ ಮಾಡಬೇಕೆಂದು ಅನ್ನಿಸುವ ಬದಲು, ಮುಂದಿನ ದಿನ ಮತ್ತಷ್ಟು ಕುಡಿಯಬೇಕು ಎಂದು ಅನಿಸುತ್ತದೆ. ಧೂಮಪಾನ ಮಾಡಿದ ನಂತರ ಮುಂದಿನ ದಿನ ಮತ್ತೊಮ್ಮೆ ಮಾಡೋಣ ಎಂದು ಅನಿಸುತ್ತದೆ. ಹೀಗೆ ಯಾವುದೇ ವ್ಯಸನಕಾರಿ ವಿಷಯಗಳನ್ನು ಮಾಡಿದ ನಂತರ ಅದನ್ನು ಮತ್ತಷ್ಟು ಮಾಡಬೇಕು ಎಂದೆನಿಸುತ್ತದೆ. ಅದುವೇ ಅಗ್ನಿಗೆ ತುಪ್ಪ ಸುರಿದಷ್ಟೂ ಹೆಚ್ಚಾದಂತೆ!
ಅರ್ಜುನನಿಗೆ ಈಗ ಅವನ ಶತ್ರು ಕಾಮಾವೆಂದು ತಡೆಯುತ್ತದೆ ಮತ್ತು ಅದನ್ನು ನಾಶ ಮಾಡಬೇಕು ಎಂದು ಯೋಚಿಸುತ್ತಾನೆ. ಆದರೆ ಈ ಕಾಮಾ ಎಲ್ಲಿ ಇರುತ್ತದೆ. ಇದರ ಒಂದು ವಿಳಾಸ(address) ಇರಬೇಕಲ್ಲವೇ! ನಿಮಗೆ ನಿಮ್ಮ ಶತ್ರುವಿನ ಬಗ್ಗೆ ತಿಳಿದರೆ ಅವನನ್ನು ನಾಶ ಮಾಡಬಹುದು. ಅದಕ್ಕೆ ನಿಮಗೆ ಅವನ ವಿಳಾಸ ಗೊತ್ತಿರಬೇಕು. ಅರ್ಜುನ ಈ ಕಾಮಾ ಎಲ್ಲಿ ಇರುತ್ತದೆ ಎಂದು ಶ್ರೀಕೃಷ್ಣನಿಗೆ ಕೇಳುತ್ತಾರೆ. ಅದಕ್ಕೆ ಶ್ರೀಕೃಷ್ಣ ಈ ರೀತಿ ಉತ್ತರ ನೀಡಿದರು, "ಈ ಕಾಮವು ಇಂದ್ರಿಯ, ಮನಸ್ಸು ಮತ್ತು ಬುದ್ಧಿಯಲ್ಲಿ ಇರುತ್ತದೆ".
ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?ನೀವು ಇಂದ್ರಿಯ, ಮನಸ್ಸು ಮತ್ತು ಬುದ್ಧಿಯನ್ನು ಶುದ್ಧೀಕರಿಸಿದರೆ ಅದು ಶುದ್ದಿಯಾಗುತ್ತದೆ. ಒಂದು ವೇಳೆ ನೀವು ಇಂದ್ರಿಯ, ಮನಸ್ಸು, ಬುದ್ಧಿಯನ್ನು ಶುದ್ದಿ ಮಾಡದಿದ್ದರೆ ಅದು ನಿಮ್ಮ ಜ್ಞಾನವನ್ನು ಮುಚ್ಚುವಷ್ಟು ಮೋಹಿತಗೊಳಿಸುತ್ತದೆ. ಈಗ ನಮಗೆ ಇದರ ವಿಳಾಸದ ಬಗ್ಗೆ ತಿಳಿಯಿತು, ಆಗಿದ್ದರೆ ಇದನ್ನು ಸರಿಪಡಿಸುವುದು ಹೇಗೆ?
ಇದನ್ನು ಸರಿಪಡಿಸಲು ನೀವು ನಿಮ್ಮ ಇಂದ್ರಿಯವನ್ನು ನಿಯಂತ್ರಣ ಅಥವಾ ರೆಗ್ಯುಲೇಟ್ ಮಾಡಬೇಕು ಎಂದು ಶ್ರೀಕೃಷ್ಣ ಹೇಳುತ್ತಾರೆ. ಇಂದ್ರಿಯವೆಂದರೆ ನಿಮ್ಮ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮವಾಗಿದೆ. ನೀವು ನಿಮ್ಮ ಇಂದ್ರಿಯಗಳನ್ನು ರೆಗ್ಯುಲೇಟ್ ಮಾಡದೇ ಇದ್ದರೆ ಈ ಕಾಮಾವು ನಿಮ್ಮ ಜ್ಞಾನ ಮತ್ತು ವಿಜ್ಞಾನವನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ.
ನಿಮ್ಮ ಜೀವನದಲ್ಲಿ ನೀವು ಏನನ್ನು ಕೇಳುತ್ತೀರಿ, ಏನನ್ನು ಓದುತ್ತೀರಿ, ಯಾರ ಜೊತೆ ಇರುತ್ತೀರಿ, ಯಾವ ಸಿನಿಮಾ ನೋಡುತ್ತೀರಿ, ಯಾವ ಹಾಡು ಕೇಳುತ್ತೀರಿ, ನಿಮ್ಮ ಸ್ನೇಹಿತರು ಯಾರು, ನೀವು ಯಾವ ಪುಸ್ತಕಗಳನ್ನು ಓದುತ್ತೀರಿ ಎಂಬುದು ತುಂಬಾ ಮುಖ್ಯವಾಗಿದೆ. ಎಸಿಗೆ ಇರುವ ರಿಮೋಟ್ ರೀತಿಯೇ, ಫ್ಯಾನಿಗೆ ಇರುವ ರೆಗ್ಯುಲೇಟರ್ ರೀತಿಯೇ, ನೀವು ನಿಮ್ಮ ಇಂದ್ರಿಯಕ್ಕೆ ರೆಗ್ಯುಲೇಟರ್ ಆಗಬೇಕು. ನಿಮ್ಮ ಇಂದ್ರಿಯವನ್ನು ರೆಗ್ಯುಲೇಟ್ ಮಾಡಬೇಕು.
ರೆಗ್ಯುಲೇಟರ್ ಇಲ್ಲದೇ ಇರುವ ಫ್ಯಾನ್ ದುಃಖಕ್ಕೆ ಕಾರಣವಾಗಬಹುದು. ಏಕೆಂದರೆ ಬೇಸಿಗೆಯಲ್ಲಿ ಅದು ಚೆನ್ನಾಗೆನಿಸಿದರು, ಚಳಿಗಾಲದಲ್ಲಿ ಅದು ದುಃಖ ನೀಡುತ್ತದೆ. ನೀವು ನಿಮ್ಮ ಇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮವನ್ನು ರೆಗ್ಯುಲೇಟ್ ಮಾಡಬೇಕು. ನೀವು ಇವುಗಳನ್ನು ರೆಗ್ಯುಲೇಟ್ ಮಾಡಿದಾಗ ನಿಮ್ಮೊಳಗೆ ಅನಾವಶ್ಯಕ ವಿಷಯಗಳು ಹೋಗುವುದಿಲ್ಲ. ಇದರಿಂದ ನಿಮ್ಮ ಗುರಿಗೆ ಸಂಬಂಧಿಸದ ವಸ್ತುಗಳಿಂದ ಡಿಸ್ಟ್ರಕ್ಟ್ ಆಗುವುದನ್ನು ನೀವು ನಿಲ್ಲಿಸಬಹುದು.
ನೀವು ದಿನನಿತ್ಯ ನೀರು ಕುಡಿಯುವಾಗ ಅದನ್ನು ಕುಡಿಯುತ್ತಿರುತ್ತೀರಿ, ಅದನ್ನು ಬಿಟ್ಟು ಆ ಸಮಯದಲ್ಲಿ ಬೇರೆ ಯೋಚನೆ ಮಾಡುವುದಿಲ್ಲ. ಇದೇ ರೀತಿಯ ನೀವು ಇತರ ಕೆಲಸಗಳನ್ನು ಮಾಡುವಾಗ ನಿಮ್ಮ ಇಂದ್ರಿಯಗಳಲ್ಲಿ ಇತರ ವಿಷಯಗಳನ್ನು ಒಳ ಬರಲು ಬಿಡಬೇಡಿ.
ನಿಮ್ಮಲ್ಲಿ ಜಾಗೃತ ಮನಸ್ಸು(conscious mind) ಮತ್ತು ಉಪಪ್ರಜ್ಞೆ ಮನಸ್ಸು(subconscious mind) ಎಂದು 2 ಮೈಂಡ್ ಅಥವಾ ಮನಸ್ಸು ಇದೆ. ಇಂದ್ರಿಯಗಳ ಆಸೆ ಉಪಪ್ರಜ್ಞೆ ಮನಸ್ಸಿನಲ್ಲಿ ಬರುತ್ತದೆ. ನಿಮ್ಮ ಬುದ್ಧಿ ಜಾಗೃತ ಮನಸ್ಸು ಆಗಿದೆ. ನಿಮ್ಮ ಮನಸ್ಸು ಉಪಪ್ರಜ್ಞೆ ಮನಸ್ಸು ಆಗಿದೆ. ಇಂದ್ರಿಯಗಳು ನಿಮ್ಮ ಮನಸ್ಸಿನಲ್ಲಿ ಪ್ರವೇಶಿಸಲು ಇರುವ ದ್ವಾರಗಳಾಗಿವೆ. ನಿಮ್ಮ ಇಂದ್ರಿಯದಿಂದಾಗಿ ನಿಮ್ಮ ಕಾಮಾದ ಯೋಚನೆ ಮನಸ್ಸನ್ನು ಮುಟ್ಟುತ್ತದೆ. ಅದಕ್ಕಾಗಿಯೇ ಶ್ರೀಕೃಷ್ಣ ಇಂದ್ರಿಯವನ್ನು ಕಂಟ್ರೋಲ್ನಲ್ಲಿ ಹಿಡಿದಿಟ್ಟುಕೊಳ್ಳುವಂತೆ ತಿಳಿಸುತ್ತಾರೆ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುನನಗೆ ಬೇಕಾಗಿರುವ ವಿಷಯವಿದರೆ ಕೇಳುತ್ತೇನೆ, ನನಗೆ ಬೇಡದೇ ಇರುವ ವಿಷಯಗಳನ್ನು ಕೇಳುವುದಿಲ್ಲ. ನನಗೆ ಬೇಕಾಗಿರುವುದನ್ನು ತಿನ್ನುವೆನು, ಇಲ್ಲದಿದ್ದರೆ ತಿನ್ನುವುದಿಲ್ಲ. ನನಗೆ ಬೇಕಾದ್ದನ್ನೇ ಮಾಡುವೆ, ಕೇಳುವೆ, ಗುರಿಗೆ ಸಂಬಂಧಿಸದಿರುವುದನ್ನು ಬಿಟ್ಟು ಬೇರೇನೂ ಕೇಳುವುದಿಲ್ಲ. ಈ ರೀತಿಯಾಗಿ ನೀವು ನಿಮ್ಮ ಜೀವನದಲ್ಲಿ ಗುರಿಯನ್ನು ಸಾಧಿಸಲು ಪೋಕಸ್ ಆಗಿ ಇರಬೇಕಾಗಿರುತ್ತದೆ. ಮೊದಲಿಗೆ ನಿಮಗಿಷ್ಟವಾದುದ್ದನ್ನು ಬಿಡಲು ಕಷ್ಟವೆನಿಸಿದರೂ, ಅಭ್ಯಾಸದಿಂದ ಇದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತದೆ.
ನೀವು ಈ 5 ಇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮವನ್ನು ನಿಮ್ಮ ಗುರಿಗೆ ಕೇಂದ್ರೀಕರಿಸಿದರೆ, ನಿಮ್ಮ ಗುರಿಯನ್ನು ಸಾಧಿಸಲು ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ರೀತಿಯಲ್ಲಿ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಮೈಂಡ್ ಕಂಟ್ರೋಲ್ ಮಾಡಿ ಗುರಿಯನ್ನು ಸಾಧಿಸುವ ಒಂದು ದಾರಿಯ ಬಗ್ಗೆ ತಿಳಿಸಿದ್ದಾರೆ.
ಎಷ್ಟೋ ಲೇಖನಗಳಿಗೆ ನೀವು ಪ್ರಾಯೋಜಕ(sponsor) ಮಾಡುವುದನ್ನು ನೋಡಿರುತ್ತೀರಾ. ಅದೇ ರೀತಿಯೇ ನಮ್ಮ ಈ ಲೇಖನಕ್ಕೆ ಪ್ರಾಯೋಜಕ ಭಗವದ್ಗೀತೆ. ಈ ಲೇಖನದ ಮೂಲಕ ನಾವು ನಿಮ್ಮಲ್ಲಿ ಕೇಳಿಕೊಳ್ಳುವುದು ಏನೆಂದರೆ, ಭಗವದ್ಗೀತೆಯನ್ನು ಕೇವಲ ಒಂದು ಧಾರ್ಮಿಕ ಪುಸ್ತಕ ಎಂದು ಭಾವಿಸದೆ, ಓದಿ ಅರ್ಥಮಾಡಿಕೊಳ್ಳಿ. ಇದರಲ್ಲಿ ಅರ್ಜುನ ಕೇಳುವ ಪ್ರಶ್ನೆಗಳಿಗೆ ಬುದ್ಧಿಶಾಲಿಯಾದ ಶ್ರೀಕೃಷ್ಣ ಉತ್ತರ ನಿಮ್ಮ ಜೀವನಕ್ಕೂ ಅನ್ವಯಿಸುತ್ತದೆ
ಕೊನೆಯದಾಗಿ ನಿಮ್ಮ ಮನಸ್ಸು ಹೇಳುವಂತೆ ಮಾಡಿ, ಅದರ ಗುಲಾಮ ಆಗಬೇಡಿ. ನಿಮ್ಮ ಬುದ್ಧಿಯಿಂದ ಮನಸ್ಸನ್ನು ಕಂಟ್ರೋಲ್ ಮಾಡಿ. ನಿಮ್ಮ ಬುದ್ಧಿಗೆ ಬೇಕಾದ್ದನ್ನು ಮಾತ್ರ ಮನಸ್ಸಿಗೆ ಕೇಳಿ, ಮನಸ್ಸು ಅದನ್ನು ಮಾತ್ರ ನೀಡುತ್ತದೆ. ಇಲ್ಲವಾದಲ್ಲಿ ಮನಸ್ಸು ಮರ್ಕಟನಂತೆ ವರ್ತಿಸಿ ನಿಮ್ಮ ಗುರಿಯನ್ನು ಹಾಳುಮಾಡುತ್ತದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...