Website designed by @coders.knowledge.

Website designed by @coders.knowledge.

How to Drive a Car | ಕಾರನ್ನು ಓಡಿಸುವುದು ಹೇಗೆ?

 0

 Add

Please login to add to playlist

Watch Video

ಕಾರು ಕಲಿಯಲು ತಿಂಗಳುಗಟ್ಟಲೆ ಬೇಕಾಗಿಲ್ಲ. ಚಾಲನೆಗೆ(driving) ಧೈರ್ಯ ಬೇಕು.

1. ವ್ಯಕ್ತಿ ಪರಿಚಯ.

ನಾವು ಭೇಟಿ ಮಾಡಿದ ವ್ಯಕ್ತಿಯ ಹೆಸರು ಅಮರ್ ಆಗಿದೆ. ಇವರಿಗೆ ಈ ಕೆಲಸ ತುಂಬಾ ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ. ಇವರ ಹತ್ತಿರ ಡ್ರೈವಿಂಗ್ ಕಲಿತವರು ಕಂಡಕ್ಟರ್ ಮತ್ತು ಡ್ರೈವರ್ ಆಗಿದ್ದು ಕೆಎಸ್ಆರ್ಟಿಸಿ, ಬಿಎಂಟಿಸಿಯಲ್ಲೂ ಕೆಲಸ ಮಾಡಿದ್ದಾರೆ. ಕೆಲವರು ಸ್ವಂತ ದುಡಿದು ಕ್ಯಾಬ್ ರೀತಿ ಬ್ಯುಸಿನೆಸ್ ಮಾಡಿದ್ದಾರೆ. ಇವರ ಬಳಿ 60ರ ನಂತರ ರಿಟೈರಾದವರು ಬಂದು ಡ್ರೈವಿಂಗ್ ಕಲಿಯುತ್ತಿದ್ದಾರೆ. ಅವರನ್ನು ನೋಡಿ ಇವರಿಗೆ ಹೆಮ್ಮೆ ಇದೆ ಎಂದು ಹೇಳುತ್ತಾರೆ. ಇವರ ಮೊದಲ ಬ್ಯಾಚ್ ಮುಂಜಾನೆ 4 ಗಂಟೆಯಿಂದ ಪ್ರಾರಂಭವಾಗುತ್ತದೆ.

2. ಕಾರಿನ ಮೇಲಿನ ಮೂಲಭೂತ ವಿವರಣೆ.

ಎಲ್ಲರೂ ಕಾರನ್ನು ಓಡಿಸುವುದನ್ನು ಕಲಿಯಲು ಬಯಸುತ್ತಾರೆ, ಆದರೆ ಅದರ ಮೇಲಿನ ಮೂಲಭೂತ ಮಾಹಿತಿಗಳನ್ನು ತಿಳಿದುಕೊಳ್ಳಲು ಬಯಸುವುದಿಲ್ಲ. ಕಾರನ್ನು ಕಲಿಯುವುದು ಎಷ್ಟು ಮುಖ್ಯವೋ ಅದರ ಮೂಲಭೂತ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಕಾರಿನ ಮೂಲಭೂತ ಮಾಹಿತಿಗಳ ಬಗ್ಗೆ ತಿಳಿಯಲು ಮೇಲಿರುವ ವೀಡಿಯೋವನ್ನು ನೋಡಿ. ಅದರಲ್ಲಿ ಬ್ಯಾಟರಿಯಲ್ಲಿನ ಆಯಿಲ್ ಎಲ್ಲಿ ಹಾಕಬೇಕು, ನೀರು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಕಾರು ಓಡಿಸುವ ಮೊದಲು ಪವರ್ ಸ್ಟೇರಿಂಗ್ ಆಯಿಲ್, ಬ್ರೇಕ್ ಆಯಿಲ್, ಇಂಜಿನ್ ಆಯಿಲ್ ನೋಡಬೇಕು. ನಮ್ಮ ದೇಹಕ್ಕೆ ರಕ್ತವೆಷ್ಟು ಮುಖ್ಯವೋ, ಕಾರಿಗೂ ಇಂಜಿನ್ ಆಯಿಲ್ ಅಷ್ಟೇ ಮುಖ್ಯವಾಗಿದೆ. ಎಂಜಿನ್ ಆಯಿಲ್ ದಪ್ಪ ಕೂಡ ಇರಬಾರದು. ಏಕೆಂದರೆ ಇದರಿಂದ ಇಂಜಿನ್ಸ್ struck ಆಗುತ್ತದೆ. ಇನ್ನು ಮುಂದೆ ನೀವು ರೇಡಿಯೇಟರ್ ನೋಡಬೇಕು. ಅದನ್ನು ಬಳಸುವಾಗ ನೀವು ಜಾಗ್ರತರಾಗಿರಬೇಕು. ಇದಕ್ಕೆ ಮೇಲಿರುವ ವೀಡಿಯೋವನ್ನು ಒಮ್ಮೆ ನೋಡಿ.

3. ಕಾರಿನ ಕಲಿಕೆ.

how to drive a car in kannada
staring

ಕಾರು ಓಡಿಸುವ ಮೊದಲು ಸೀಟ್ ಮೇಲೆ ಕೂತುಕೊಂಡು, ಸೀಟ್ ಬೆಲ್ಟ್ ಅನ್ನು ಹಾಕಿಕೊಳ್ಳಬೇಕು. ಕಾರಿನ 4 ಬಾಗಿಲು ಮುಚ್ಚಿದೆಯೇ ಎಂದು ನೋಡಬೇಕು. ಚಾಲನೆಯಲ್ಲಿ ಮೊದಲು ಸ್ಟೇರಿಂಗ್ ಅನ್ನು ಹೇಗೆ ಹಿಡಿಯಬೇಕೆಂದು ಕಲಿಯಬೇಕು. ಇದಕ್ಕಾಗಿ ಒಂದು ಉಪಾಯ ತಿಳಿಸಿದ್ದಾರೆ. ಅದುವೇ ಹತ್ತು ಗಂಟೆ ಹತ್ತು ನಿಮಿಷ(10:10). ಅಂದರೆ ಸ್ಟೇರಿಂಗ್ ಮೇಲೆ ನಿಮ್ಮ ಕೈ 10 ಗಂಟೆ 10 ನಿಮಿಷದ ಮುಳ್ಳಿನ ರೀತಿ ಇರಬೇಕು. ಇದರ ಬಗ್ಗೆ ವಿವರವಾಗಿ ತಿಳಿಯಲು ನೀವು ಮೇಲಿರುವ ವೀಡಿಯೋವನ್ನು ನೋಡಲೇಬೇಕು.

ಸ್ಟೇರಿಂಗ್ ವೀಲ್ನ ಎಡಭಾಗದಲ್ಲಿ ಇರುವುದು ಇಂಡಿಕೇಟರ್ ಸೂಚಿಸುತ್ತದೆ. ಅದು ಮಳೆ ಬಂದಾಗ ನೀರನ್ನು ಒರೆಸುವ ವೈಪರ್ ಆಗಿದೆ. ಇನ್ನೂ ಸ್ಟೇರಿಂಗ್ ವೀಲ್ನ ಬಲಭಾಗದಲ್ಲಿ ಇಂಡಿಕೇಟರ್, dim & diff, high beam, low beam ರೀತಿಯ ಕಂಟ್ರೋಲ್‌ಗಳು ಇರುತ್ತವೆ.

speedometer of car in kannada
speedometer

ಇನ್ನೂ ಸ್ಪೀಡೋಮೀಟರ್ ಬಗ್ಗೆ ತಿಳಿಸಿದ್ದಾರೆ. ಸ್ಪೀಡೊಮೀಟರ್ನಲ್ಲಿ ಕಾಣುವ CH, ಅದರಲ್ಲಿ C ಎಂದರೆ cool, H ಎಂದರೆ hot. ನೀವು ನಿಮ್ಮ ಕಾರು coolನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇನ್ನೂ ಮಧ್ಯದಲ್ಲಿರುವುದು ಸ್ಪೀಡೋಮೀಟರ್, ನೀವು ಎಷ್ಟು ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದ್ದೀರಾ ಎಂದು ತಿಳಿಸುತ್ತದೆ. ಇನ್ನೂ ಅದರ ಪಕ್ಕ ಇರುವುದು ನಿಮ್ಮ ಕಾರಿನಲ್ಲಿ ಎಷ್ಟು ಪೆಟ್ರೋಲ್ ಅಥವಾ ಡೀಸೆಲ್ ಇದೆಯೆಂದು ತಿಳಿಸುತ್ತದೆ.

ನಿಮ್ಮ ಕಾರು ನ್ಯೂಟ್ರಾನ್ನಲ್ಲಿ ಇದೆಯೆಂಬುದನ್ನು ಸ್ಪೀಡೋಮೀಟರ್ ನೋಡಿ ಖಚಿತಪಡಿಸಿಕೊಳ್ಳಿ. ಸ್ಪೀಡೊಮೀಟರ್ನಲ್ಲಿ ಯಾವುದೇ ರೆಡ್ ಲೈಟ್ ಕಂಡರೆ, ನಿಮ್ಮ ಕಾರು ಓಡಿಸಲು ಯೋಗ್ಯವಿಲ್ಲ ಮತ್ತು ಏನೋ ಸಮಸ್ಯೆ ಇದೆ ಎಂದರ್ಥ.

abc of car in kannada
abc

ಇನ್ನು ನಿಮ್ಮ ಪಾದದ ಸ್ಥಳದಲ್ಲಿ ABC ಎಂಬ 3 ಕಂಟ್ರೋಲ್ಗಳು ಇವೆ. ABC ಎಂದರೆ accelarator, break ಮತ್ತು clutch ಆಗಿದೆ. ಡ್ರೈವಿಂಗ್ ಮಾಡುವವರಿಗೆ ಇದರ ಬಗ್ಗೆ ಪೂರ್ತಿಯಾಗಿ ಅರಿವಿರಬೇಕು. clutch ಇಂಜಿನ್ ಅನ್ನು ಸುರಕ್ಷಿತವಾಗಿರಿಸುತ್ತದೆ. break ಇಂಜಿನ್ ಜೊತೆಗೆ ಚಾಲಕನ ಜೀವವನ್ನು ಉಳಿಸುತ್ತದೆ. accelarator ನಿಮ್ಮ ಕಾರಿನ ವೇಗವನ್ನು ಕಂಟ್ರೋಲ್ ಮಾಡಲು ಸಹಕಾರಿಯಾಗಿದೆ.

ಒಂದು ದಿನ ಸ್ಟೇರಿಂಗ್, ಒಂದು ದಿನ ಕ್ಲಚ್, ಒಂದು ದಿನ ಬ್ರೇಕ್, ಒಂದು ದಿನ ಆ್ಯಕ್ಸಿಲರೇಟರ್, ಒಂದು ದಿನ ಗಿಯರ್ ಬಗ್ಗೆ ಕಲಿತರೆ, ನೀವು 5 ದಿನದಲ್ಲೇ ಕಾರು ಓಡಿಸುವುದನ್ನು ಕಲಿಯಬಹುದು. ನೀವು ಕಾರಿನ ರೀತಿ ಯಾವುದೇ 4 ವೀಲರ್ ಕಲಿತರೆ, ಯಾವುದೇ ರೀತಿಯ 4 ವೀಲರ್ ವಾಹನಗಳನ್ನು ಓಡಿಸಬಹುದು.

ರಾತ್ರಿಯ ಸಮಯದಲ್ಲಿ ನೀವು ಕಾರು ನಿಲ್ಲಿಸಲು ಬಯಸಿದಾಗ, ನಿಮ್ಮ ಕಾರನ್ನು ಬದಿಗೆ ನಿಲ್ಲಿಸಿ ಡಿಮ್ & ಡಿಪ್ ಲೈಟ್(dim & dip light) ಆನ್ ಮಾಡಬೇಕು. ಇದು ಅಪಘಾತವನ್ನು ತಪ್ಪಿಸುತ್ತದೆ.

ಕಾರನ್ನು ಪ್ರಾರಂಭ ಮಾಡಲು ಸ್ಟೇರಿಂಗ್ ಅನ್ನು ಹಿಡಿಯಬೇಕು. ಸ್ಟೇರಿಂಗ್ ಕಾರನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇನ್ನೂ ಕಾಲಿನ ಕೆಳಗೆ ಇರುವ ಎಕ್ಸಲೇಟರ್ ಮತ್ತು ಕ್ಲಚ್ಚನ್ನು ಒಟ್ಟಿಗೆ ಒತ್ತಿದರೆ ಅದು ಕಿರಿ ಕಿರಿ ಶಬ್ದವನ್ನುಂಟು ಮಾಡುತ್ತದೆ. ನಿಮ್ಮ ಎಡಗಾಲನ್ನು ಕ್ಲಚ್ ಗಾಗಿ ಮತ್ತು ಬಲಗಾಲನ್ನು ಬ್ರೇಕ್ ಮತ್ತು ಆ್ಯಕ್ಸಿಲರೇಟರ್ಗಾಗಿ ಬಳಸಬೇಕು.

ಕ್ಲಚ್ಚನ್ನು ಅದುಮಿ ಆ್ಯಕ್ಸಿಲೇಟರ್ ರಿಲೀಸ್ ಮಾಡುತ್ತಾ ಬರಬೇಕು. ಇದರಿಂದ ಕಾರು ಮುಂದೊಗಲು ಪ್ರಾರಂಭಿಸುತ್ತದೆ. ಬ್ರೇಕ್ ಒತ್ತುವಾಗ ಆ್ಯಕ್ಸಿಲರೇಟರ್ ಅನ್ನು ಒತ್ತಬಾರದು. ಗಿಯರ್ ಬಳಸುವ ಸಂದರ್ಭದಲ್ಲಿ ಕ್ಲಚ್ಚನ್ನು ಸಂಪೂರ್ಣವಾಗಿ ಒತ್ತಿರಬೇಕು. ಕ್ಲಚ್ಚನ್ನು ಸಂಪೂರ್ಣವಾಗಿ ಒತ್ತಿಲ್ಲದಿದ್ದರೆ ಗಿಯರ್ ಬೀಳುವುದಿಲ್ಲ. ಗಿಯರನ್ನು ನಯವಾಗಿ(smooth) ಬಳಸಬೇಕು. ಇಲ್ಲದಿದ್ದರೆ ಗಿಯರ್ ಬಾಕ್ಸ್ ಸಮಸ್ಯೆ ಉಂಟಾಗುತ್ತದೆ. ಗಿಯರ್ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಮೇಲಿನ ವಿಡಿಯೋವನ್ನು ನೋಡಿ.

ಕಾರು ಪ್ರಾರಂಭಿಸುವಾಗ ನ್ಯೂಟ್ರಲ್ ನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ನೀವು ಕಾರು ಚಲಾಯಿಸುವಾಗ ರಸ್ತೆಯ ಎಡಭಾಗದಲ್ಲಿ ಚಲಿಸಬೇಕು. ಬಲ ಅಥವಾ ಎಡಭಾಗದ ದಿಕ್ಕುಗಳನ್ನು ಬದಲಾಯಿಸುವಾಗ ಲೆಫ್ಟ್ ರೈಟ್ ಇಂಡಿಕೇಶನ್ ಆನ್ ಮಾಡಬೇಕು. ಕಾರಿನ ಸೈಡ್ ಮಿರರ್ ಗಳು ಚಾಲಕನಿಗೆ ಮೂರನೇ ಕಣ್ಣು ಇದ್ದ ಹಾಗೆ.

ಕಾರು ಚಲಾಯಿಸುವಾಗ ರಸ್ತೆ ಮೇಲೆಯ ಗಮನ ಇರಬೇಕು. ಕೊನೆಯದಾಗಿ ಕಾರನ್ನು ನಿಲ್ಲಿಸಲು ಕ್ಲಚ್ಚನ್ನು ಸಂಪೂರ್ಣವಾಗಿ ಒತ್ತಿ ಗೇರನ್ನು ಹಿಂದೆ ತೆಗೆದುಕೊಳ್ಳುತ್ತ ಬನ್ನಿ.

ಮೇಲೆ ನೀಡಿರುವ ವಿಡಿಯೋವನ್ನು ನೀವೂ ಒಮ್ಮೆ ಪೂರ್ತಿಯಾಗಿ ನೋಡಿದರೆ ನಿಮಗೆ ಕಾರು ಓಡಿಸುವ ಒಂದು ಮೂಲಭೂತ ಐಡಿಯಾ ಸಿಗುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

Punya • August 9th,2023

😊 good job sir