Website designed by @coders.knowledge.

Website designed by @coders.knowledge.

How to Increase Sperm Count Naturally? | ವೀರ್ಯಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ?

Watch Video

ನೀವು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿರಬಹುದು ಮತ್ತು ನಿಮ್ಮದೇ ಆದ ಕಾಳಜಿ ವಹಿಸುತ್ತಿರಬಹುದು. ಆದರೆ ನಿಮ್ಮ ಲೈಂಗಿಕ ಜೀವನದ ಕಾಳಜಿ ವಹಿಸುತ್ತಿದ್ದೀರಾ. ನಿಮ್ಮ ಶಿಶ್ನದ ಆರೋಗ್ಯವನ್ನು ಸುಧಾರಿಸಲು ನೀವು ಹಲವಾರು ವ್ಯಾಯಾಮಗಳನ್ನು ಮಾಡುತ್ತಿರಬೇಕು. ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪೌಷ್ಠಿಕ ಆಹಾರ ತಿನ್ನುತ್ತಿರಬಹುದು. ವೀರ್ಯದ ಶಕ್ತಿಯ ಬಗ್ಗೆ ನಾವು ಈಗಾಗಲೇ ಒಂದು ಲೇಖನದಲ್ಲಿ ತಿಳಿಸಿದ್ದೇವೆ. ಅದರಿಂದ ನೀವು ಒಂದು ಮಗುವನ್ನು ಹುಟ್ಟಿಸಬಹುದು ಎಂದಿದ್ದೇವು.

ವೀರ್ಯಗಳ ಸಂಖ್ಯೆ, ಅದರ ಚಲನಶೀಲತೆ ಮತ್ತು ಪರಿಮಾಣವು ಮಗುವನ್ನು ಹೊಂದುವ ನಿಮ್ಮ ಸಾಧ್ಯತೆಗಳಿಗೆ ನೇರ ಸಂಪರ್ಕವನ್ನು ಹೊಂದಿದೆ. ವೀರ್ಯವು ಮಗುವಿನ ಅರ್ಧದಷ್ಟು ಅನುವಂಶಿಕ ಮಾಹಿತಿಯನ್ನು ಸಾಗಿಸುತ್ತದೆ. ಹೀಗಾಗಿ ಆರೋಗ್ಯಕರ ಮಗುವನ್ನು ರಚಿಸಲು ನಿಮ್ಮ ವೀರ್ಯವನ್ನು ಆರೋಗ್ಯವಾಗಿಡಲು ಮುಖ್ಯವಾಗಿದೆ. ನಿಮ್ಮ ವೀರ್ಯದ ಆರೋಗ್ಯ ಮತ್ತು ಏಣಿಕೆಯನ್ನು ಸುಧಾರಿಸಲು ನೀವು ಈ ಲೇಖನದಲ್ಲಿ ತಿಳಿಸುವ ಆಹಾರಗಳನ್ನು ಪ್ರಯತ್ನಿಸಬಹುದು.

ಇದನ್ನು ಓದಿ: ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?

1. ಬಾಳೆಹಣ್ಣು.

is banana good for men fertility in kannada
banana

ಶಿಶ್ನದಂತೆ ಕಾಣುವ ಬಾಳೆಹಣ್ಣು ಆರೊಗ್ಯಕ್ಕೆ ಒಳ್ಳೆಯದಾಗಿದೆ. ವಿಟಮಿನ್ ಬಿ1, ವಿಟಮಿನ್ ಸಿ ಮತ್ತು ಮೆಗ್ನೀಶಿಯಂನಿಂದ ಸಮೃದ್ಧವಾಗಿರುವ ಬಾಳೆಹಣ್ಣುಗಳು ನಿಮ್ಮ ವೀರ್ಯದ ಎಣಿಕೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ. ಬಾಳೆಹಣ್ಣಿನಲ್ಲಿ ಲೈಂಗಿಕ ಹಾರ್ಮೋನ್ಗಳನ್ನು ನಿಯಂತ್ರಿಸುವ ಅಪರೂಪದ ಕಿಣ್ವ(enzyme) ಆದ ಬ್ರೊಮೊಲಿಯಾಡ್ ಕೂಡ ಇದೆ.

2. ಡಾರ್ಕ್ ಚಾಕೊಲೇಟ್.

is dark chocolate good for sperm in kannada
dark chocolate

ನಿಮ್ಮ ವೀರ್ಯಗಳ ಎಣಿಕೆಗೆ ಕಾಮೋತ್ತೇಜಕ ಡಾರ್ಕ್ ಚಾಕಲೇಟ್ ಅದ್ಭುತವಾಗಿದೆ. ಇದು ಎಲ್-ಆರ್ಜಿನೈನ್(l-arginine) ಎಂಬ ಅಮೈನೋ ಆಮ್ಲವನ್ನು ಹೊಂದಿದೆ. ಈ ಅಮೈನೋ ಆಮ್ಲ ವೀರ್ಯದ ಪ್ರಮಾಣವನ್ನು ಸುಧಾರಿಸುತ್ತದೆ. ದಾಸಪ್ಪಡಾರ್ಕ್ ಚಾಕೊಲೇಟ್ನಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿರುವುದರಿಂದ ಅದನ್ನು ಅತಿಯಾಗಿಯೂ ತಿನ್ನಬೇಡಿ.

ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?

3. ಪಾಲಕ್.

does palak good for men fertility in kannada
palak

ಹಸಿರು ತರಕಾರಿಗಳನ್ನು ತಿನ್ನಲು ನಿಮಗೆ ಯಾವಾಗಲೂ ಸಲಹೆ ನೀಡಲಾಗುತ್ತದೆ ಮತ್ತು ಹಾಗೆ ಮಾಡಲು ಇಲ್ಲಿ ಇನ್ನೊಂದು ಕಾರಣವಿದೆ. ಪಾಲಕ್ನಲ್ಲಿ ಪೋಲಿಕ್ ಆಮ್ಲವಿದೆ, ಇದು ವೀರ್ಯಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಇದು ಆರೋಗ್ಯಕರ ವೀರ್ಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೋಲಿಕ್ ಆಮ್ಲದ ಮಟ್ಟವು ಕಡಿಮೆ ಆಗುವುದರಿಂದ ಅಸಹಜ ವೀರ್ಯ ಉತ್ಪಾದನೆ ಆಗುತ್ತದೆ. ಇದರಿಂದ ವೀರ್ಯಗಳಿಗೆ ಮೊಟ್ಟೆಯನ್ನು ತಲುಪಲು ಮತ್ತು ಅದನ್ನು ಭೇದಿಸಲು ಕಷ್ಟವಾಗುತ್ತದೆ. ಈ ವಿರೂಪಗೊಂಡ ವೀರ್ಯಗಳು ಮೊಟ್ಟೆಯನ್ನು ಫಲವತ್ತಾಗಿಸಿದರೆ ಜನ್ಮದೋಷಗಳು ಅಪಾಯವು ಹೆಚ್ಚಿರುತ್ತದೆ.

ಇದನ್ನು ಓದಿ: ಕಣ್ಣಿನ ಸಮಸ್ಯೆಗಳಿಗೆ ಪ್ರಮುಖ ಕಾರಣಗಳು

4. ಮೊಟ್ಟೆ.

can eating eggs increases sperm count in kannada
egg

ವಿಟಮಿನ್ ಇ ಮತ್ತು ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಮೊಟ್ಟೆಗಳು, ಆರೋಗ್ಯಕರ ವೀರ್ಯಗಳ ರಚನೆಗೆ ಸಹಾಯ ಮಾಡುತ್ತದೆ ಮತ್ತು ಅವುಗಳ ಚಲನಶೀಲತೆಯನ್ನು ಸುಧಾರಿಸುತ್ತದೆ. ಮೊಟ್ಟೆ ಕೋಶಗಳನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಬಲವಾದ ಮತ್ತು ಆರೋಗ್ಯಕರ ವೀರ್ಯ ಮೊಟ್ಟೆಯನ್ನು ಫಲವತ್ತಾಗಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

5. ಸಿಂಪಿ.

does oyster increases sperm fertility in kannada
oyster

ಸಿಂಪಿ ನಿಮ್ಮ ವೀರ್ಯಗಳಿಗೆ ಅದ್ಭುತವಾಗಿದೆ. ಇದು ಅತ್ಯಗತ್ಯ ಖನಿಜ ಸತುವುವನ್ನು ಹೊಂದಿರುತ್ತದೆ. ಇದು ಆರೋಗ್ಯಕರ ವೀರ್ಯ ಮತ್ತು ಟೆಸ್ಟೊಸ್ಟೆರಾನ್ ಮಟ್ಟವನ್ನು ಸುಧಾರಿಸಲು ಮುಖ್ಯವಾಗಿದೆ. ಸಿಂಪಿ ತಿನ್ನುವುದು ಖಂಡಿತವಾಗಿಯೂ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.

6. ಗೊಜಿ ಬೆರ್ರಿಗಳು.

is goji berries good for fertility in kannada
goji berries

ಚೀನಾದ ಒಂದು ಅಧ್ಯಯನದ ಪ್ರಕಾರ 42 ಪುರುಷರ ಗುಂಪಿಗೆ ಗೊಜಿ ಹಣ್ಣುಗಳನ್ನು ನೀಡಿದಾಗ, ಆ ಗುಂಪಿನಲ್ಲಿ ಶೇಕಡಾ 50 ರಷ್ಟು ಪುರುಷರಲ್ಲಿ ವೀರ್ಯಗಳ ಸಂಖ್ಯೆ ಒಂದು ತಿಂಗಳೊಳಗೆ ಸಾಮಾನ್ಯ ವ್ಯಾಪ್ತಿಯಿಂದ ಹೆಚ್ಚಾಗಿರುತ್ತದೆ. ಗೊಜಿ ಹಣ್ಣುಗಳು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವುದಲ್ಲದೆ, ವೀರ್ಯಗಳ ಉತ್ಪಾದನೆಗೆ ಸೂಕ್ತವಾದ ಸ್ಕ್ರೋಟಮ್ ಉಷ್ಣತೆಯನ್ನು ಸಹ ಉಳಿಸುತ್ತದೆ. ವೃಷಣದಲ್ಲಿರುವ ವೃಷಣಗಳಿಂದ ವೀರ್ಯ ಉತ್ಪತ್ತಿ ಆಗುತ್ತದೆ.

ಗೊಜಿ ಹಣ್ಣುಗಳು ಫ್ರೀ ರಾಡಿಕಲ್ನ ಹಾನಿಕಾರಕ ಪರಿಣಾಮಗಳಿಂದ ವೀರ್ಯವನ್ನು ರಕ್ಷಿಸುತ್ತದೆ ಮತ್ತು ವೀರ್ಯಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಭಾರತದಲ್ಲಿ ಗೊಜಿ ಹಣ್ಣುಗಳನ್ನು ನೀವು ಆನ್‌ಲೈನ್ ಮೂಲಕ ಖರೀದಿಸಬಹುದು.

ಇದನ್ನು ಓದಿ: ಜಗತ್ತಿನ 20 ತೂಕ ಸ್ನೇಹಿ ಆಹಾರಗಳು

7. ಬೆಳ್ಳುಳ್ಳಿ.

does garlic increases sperm count quickly in kannada
garlic

ಬೆಳ್ಳುಳ್ಳಿ ಒಂದು ಸೂಪರ್ ಆಹಾರವಾಗಿದ್ದು, ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಮತ್ತು ವಿಟಮಿನ್ ಬಿ6 ಕೂಡ ಇರುತ್ತದೆ. ಇದು ಆರೋಗ್ಯಕರ ವೀರ್ಯ ಉತ್ಪಾದನೆಗೆ ಮುಖ್ಯವಾಗಿದೆ. ಇದು ವೃಷಣಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ.

8. ವಾಲ್ನಟ್ಸ್.

can walnut increase sperm count in kannada
walnuts

ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ 2012ರಂದು ಪ್ರಕಟವಾದ ಅಧ್ಯಯನದ ಪ್ರಕಾರ, ಪುರುಷರು ಪ್ರತಿದಿನ 70 ಗ್ರಾಂ ವಾಲ್ನಟ್ಸ್ ಸೇವಿಸುವುದರಿಂದ ಅವರ ವೀರ್ಯದ ರೂಪ ವಿಜ್ಞಾನ, ಚಲನಶೀಲತೆ ಮತ್ತು ಚೈತನ್ಯವನ್ನು ಸುಧಾರಿಸುತ್ತದೆ ಎಂದು ಕಂಡುಕೊಂಡಿದೆ. ಎಲ್-ಆರ್ಜಿನೈನ್ನಿಂದಲೂ ಸಮೃದ್ಧವಾಗಿರುವ ವಾಲ್ನಟ್ಸ್ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳು

9. ಶತಾವರಿ.

does asparagus increase sperm count in kannada
asparagus

ವಿಟಮಿನ್ ಸಿ ಅಧಿಕವಾಗಿರುವ ಶತಾವರಿ ಮತ್ತೊಂದು ತರಕಾರಿಯಾಗಿದ್ದು, ವೀರ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಲ್ಲಿನ ವಿಟಮಿನ್ ಸಿ, ಫ್ರೀ ರಾಡಿಕಲ್ ವಿರುದ್ಧ ಹೋರಾಡುತ್ತದೆ ಮತ್ತು ನಿಮ್ಮ ವೀರ್ಯವನ್ನು ಸುರಕ್ಷಿತವಾಗಿರಿಸುತ್ತದೆ.

10. ದಾಳಿಂಬೆ.

does pomegranate increase men fertility in kannada
pomegranate

ನಿಮ್ಮ ವೀರ್ಯವನ್ನು ಆರೋಗ್ಯಕರವಾಗಿಸಲು ನೀವು ಬಯಸಿದರೆ ನೀವು ತಿನ್ನಬೇಕಾದ ಮತ್ತೊಂದು ಸೂಪರ್ ಫುಡ್ ದಾಳಿಂಬೆಯಾಗಿದೆ. ದಾಳಿಂಬೆ ಹಣ್ಣು ವೀರ್ಯದ ಗುಣಮಟ್ಟ ಮತ್ತು ವೀರ್ಯಗಳ ಸಂಖ್ಯೆಯನ್ನು ಸುಧಾರಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಮೂಲಕ ನಿಮ್ಮ ವೀರ್ಯವನ್ನು ಸುರಕ್ಷಿತವಾಗಿರುತ್ತದೆ. ವೀರ್ಯದ ಫಲವತ್ತತೆ ಹೆಚ್ಚಿಸಲು ದಾಳಿಂಬೆ ರಸವನ್ನು ಬಳಸಲಾಗುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

11. ಅಶ್ವಗಂಧ.

is ashwagandha good for men in kannada
ashwagandha

ಅಶ್ವಗಂಧ ಪ್ರಬಲ ಕಾಮೋತ್ತೇಜಕ ಮತ್ತು ನಿಮ್ಮ ವೀರ್ಯಗಳಿಗೆ ಅದ್ಭುತವಾಗಿದೆ. 2013 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಅಶ್ವಗಂಧ ವೀರ್ಯದ ಚಲನಶೀಲತೆ, ವೀರ್ಯದ ಪ್ರಮಾಣ ಮತ್ತು ಎಣಿಕೆಯನ್ನು ಸುಧಾರಿಸುತ್ತದೆ ಎಂದು ಕಂಡುಕೊಂಡಿದೆ. ಅಶ್ವಗಂಧವನ್ನು ಪುಡಿ ರೂಪದಲ್ಲಿ ಹಾಲಿನೊಂದಿಗೆ ಅಥವಾ ಕ್ಯಾಪ್ಸೂಲ್ ಆಗಿ ಬೆರೆಸಿ ಸೇವಿಸಬಹುದು.

ಹಕ್ಕುತ್ಯಾಗ(disclaimer): ಈ ಲೇಖನದಲ್ಲಿ ಪ್ರಸ್ತುತಪಡಿಸಲಾದ ವಿಷಯವು ಮಾಹಿತಿ ಆಧಾರವಾಗಿದೆ ಮತ್ತು ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಈ ಆಹಾರಗಳು ನಿಮ್ಮ ದೇಹದ ಮೇಲೆ ಬೀರಬಹುದಾದ ಪರಿಣಾಮಗಳಿಗೆ ವೆಬ್‌ಸೈಟ್ ಜವಾಬ್ದಾರನಾಗಿರುವುದಿಲ್ಲ. ಹೊಸದನ್ನು ಪ್ರಾರಂಭಿಸುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ ಎಂದು ಖಚಿತಪಡಿಸಿಕೊಳ್ಳಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments