Website designed by @coders.knowledge.

Website designed by @coders.knowledge.

How to Invest in 20s | 20ರ ವಯಸ್ಸಿನಿಂದ ಹೂಡಿಕೆ ಮಾಡುವುದು ಹೇಗೆ?

Watch Video

ಒಮ್ಮೆ ಒಬ್ಬ ವ್ಯಕ್ತಿಯು 16.2 ಮಿಲಿಯನ್ ಡಾಲರ್ನ ಲಾಟರಿ ಗೆಲ್ಲುತ್ತಾನೆ. ಭಾರತೀಯ ರೂಪಾಯಿಯಲ್ಲಿ ಇದರ ಮೌಲ್ಯ 120 ಕೋಟಿ ರೂಪಾಯಿ ಆಗುತ್ತದೆ ಮತ್ತು ಇದು 1988ರ ವಿಷಯವಾಗಿದೆ, ಹೀಗಾಗಿ ಆ ಸಮಯದಲ್ಲಿ ಒಂದು ಕೋಟಿಗೆ ಅಧಿಕ ಮೌಲ್ಯವಿತ್ತು. ಆಗಿದ್ದರೆ ಈ ವ್ಯಕ್ತಿ ತನ್ನ ಜೀವನವನ್ನು ಎಷ್ಟು ಖುಷಿಯಿಂದ ಜೀವಿಸಿರಬಹುದು ಮತ್ತು ಏನೇನನ್ನು ಸಾಧಿಸಿರಬಹುದು. ನಾನು ನಿಮಗೆ ಇದರ ಉತ್ತರ ನೀಡುತ್ತೇನೆ.

ಈತ ಲಾಟರಿ ಗೆದ್ದ ತಕ್ಷಣ ಇವರ ಸಂಬಂಧಿಕರು ಸ್ವಲ್ಪ ಹಣವನ್ನು ಈತನಿಗೆ ಕೇಳಿದರು. ಆಗ ಈತ ಕೊಡಲು ಒಪ್ಪದಿದ್ದಾಗ, ಅವರು ಇವನನ್ನು ಹೊಡೆಯಲು ಪ್ರಾರಂಭಿಸಿದರು, ಆದರೆ ಈ ವ್ಯಕ್ತಿ ಹೇಗೋ ಉಳಿದುಕೊಂಡ. ಸ್ವಲ್ಪ ದಿನದ ನಂತರ ಈತನ ಹೆಂಡತಿ ವಿಚ್ಛೇದನ(divorce) ನೀಡಿ, ಈತನ ಸಂಪತ್ತಿನ(wealth) ದೊಡ್ಡ ಭಾಗವನ್ನು ತೆಗೆದುಕೊಂಡು ಹೋದಳು. ಹೀಗೆ ಈತ ತನ್ನ ಜೀವನದಲ್ಲಿ ಒಟ್ಟಾರೆ ಏಳು ಬಾರಿ ಮದುವೆಯಾದ, ಏಕೆಂದರೆ ಹಿಂದಿನ ಆರು ಹೆಂಡತಿಯರು ಈತನಿಗೆ ವಿಚ್ಛೇದನ ನೀಡಿದ್ದರು.

investing in 20s kannada
investing in 20s

ಈತ ನಂತರ ಗೆಳೆಯರ ಜೊತೆ ಸೇರಿ ಬೇರೆ ಬೇರೆ ರೀತಿಯ ವ್ಯಾಪಾರವನ್ನು(business) ತೆರೆದನು. ಆದರೆ ಅದರಲ್ಲೂ ವಿಫಲನಾದ, ಇದು ಏಕೆಂದರೆ ಆತನಿಗೆ ವ್ಯಾಪಾರವನ್ನು ನಡೆಸುವ ಕೌಶಲ್ಯ(skill) ಇರಲಿಲ್ಲ. ಇದರ ನಂತರ ಈತ ವ್ಯಾಪಾರದಲ್ಲಿ ಹೂಡಿಕೆ ಮಾಡಿದ, ಆದರೆ ಅದು ಕೂಡ ಪೂರ್ತಿಯಾಗಿ ಬಿದ್ದು ಹೋಯಿತು(flop). ಏಕೆಂದರೆ ಅವನಿಗೆ ಒಳ್ಳೆಯ ವ್ಯಾಪಾರವನ್ನು ಗುರುತಿಸುವ ಕೌಶಲ್ಯ ಇರಲಿಲ್ಲ ಮತ್ತು ಹಣವನ್ನು ಎಲ್ಲಿ ಇಡಬೇಕೆಂಬ ಐಡಿಯಾನು ಇರಲಿಲ್ಲ. ಹೀಗಾಗಿ ನಂತರ ಉಳಿದ ಹಣವನ್ನು ಆತ ಬ್ಯಾಂಕಿನ ಸೇವಿಂಗ್ ಅಕೌಂಟ್, ಎಫ್‌ಡಿಯಲ್ಲಿ ಇಟ್ಟನು. ಆದರೆ ಅದು ಕೂಡ ಸಮಯದ ಜೊತೆ ಖಾಲಿಯಾಗುತ್ತಾ ಬಂದಿತು.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

ಈ ವ್ಯಕ್ತಿಯು ಸತ್ತಾಗ ಒಂದು ಮಿಲಿಯನ್ ಡಾಲರ್ನಷ್ಟು ಸಾಲವನ್ನು ತೆಗೆದುಕೊಂಡಿದ್ದ ಮತ್ತು ಆತನ ಜೀವನದ ಕೊನೆಯ ದಿನಗಳಲ್ಲಿ 450$ ನ ತಿಂಗಳಿನ ಆದಾಯದ ಮೇಲೆ ಜೀವಿಸುತ್ತಿದ. ಇದರ ಅರ್ಥ ಏನೆಂದರೆ ನೀವು ಒಳ್ಳೆಯ ಜೀವನ, ಇಲ್ಲ ಕೆಟ್ಟ ಜೀವನದ ಅಡಿಪಾಯವನ್ನು ನಿಮ್ಮ 20ರ ವಯಸ್ಸಿನಿಂದಲೇ ಪ್ರಾರಂಭಿಸುತ್ತೀರಾ.

ನೀವು ನಿಮ್ಮ 20ರ ವಯಸ್ಸಿನಲ್ಲಿ ಆಸಕ್ತಿ ತೋರಿಸುವ ವಿಷಯದ ಮೇಲೆ ಬದುಕಿನಲ್ಲಿ ಅನ್ವೇಷಿಸುತ್ತೀರಾ(explore). ನಿಮಗೆ ನಿಮ್ಮ 20ರ ವಯಸ್ಸಿನಲ್ಲಿ 10,000 ವನ್ನು ಹೂಡಿಕೆ ಮಾಡುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ನೀವು ಲಕ್ಷಗಟ್ಟಲೆ ಗಳಿಸಿದರು ಅದನ್ನು ನಿರ್ವಹಣೆ ಮಾಡುವುದು ನಿಮಗೆ ತಿಳಿದಿರುವುದಿಲ್ಲ. ಅಧಿಕ ಲಾಭ ಬಂದಿರುವುದರಿಂದ ನಿಮಗೆ ಗೊಂದಲವಾಗಬಹುದು.

ಹೀಗಾಗಿ ಈ ಲೇಖನದಲ್ಲಿ ನಾವು ನೀವು ಆರ್ಥಿಕವಾಗಿ ಅಷ್ಟೇ ಅಲ್ಲದೆ, ಒಂದು ಖುಷಿಯ ಜೀವನವನ್ನು ನಡೆಸಲು ಇರುವ ಮಾರ್ಗದ ಬಗ್ಗೆ ತಿಳಿಸುವೆವು. ಈ ಲೇಖನ ನಿಮಗೆಲ್ಲರಿಗೂ ತುಂಬಾ ಮೌಲ್ಯಯುತವಾಗಲಿದೆ. ಈ ಲೇಖನ ಓದಿದ ನಂತರ ನಿಮಗೆ ನಿಮ್ಮ ಹೂಡಿಕೆಯ ತಂತ್ರದ(strategy) ಮೇಲೆ ಅನುಮಾನ ಬರುವುದಿಲ್ಲ.

money management tips kannada
investing strategy

ಒಂದು ಸರಳ ಕಥೆಯ ಮೂಲಕ ನಾನು ನಿಮಗೆ ಹೂಡಿಕೆಯ ಒಂದು ಪ್ರಮುಖವಾದ ಪಾಠದ ಬಗ್ಗೆ ತಿಳಿಸಲಿದ್ದೇನೆ. ಇದರಲ್ಲಿ ನಾವು 3 ವ್ಯಕ್ತಿಗಳನ್ನು ತೆಗೆದುಕೊಳ್ಳುತ್ತೇವೆ. ಇವರು ಮೂವರು ಉತ್ತಮ ಸ್ನೇಹಿತರಾಗಿದ್ದು, ಒಳ್ಳೆಯ ಕೆಲಸದಲ್ಲಿ ಇರುವುದರಿಂದ ಪ್ರತಿ ತಿಂಗಳು 10 ಸಾವಿರ ಹೂಡಿಕೆ ಮಾಡುವ ಪ್ಲಾನ್ ಮಾಡುತ್ತಾರೆ. ಈ 10 ಸಾವಿರ ತಿಂಗಳಿಗೆ ಸಾಮಾನ್ಯ ಸಂಖ್ಯೆ ಆಗಿರುವುದರಿಂದ ನಾನು ಇದನ್ನು ಪರಿಗಣಿಸಿದ್ದೇನೆ. ಏಕೆಂದರೆ ನೀವು ಪ್ರತಿ ತಿಂಗಳು 10 ಸಾವಿರಕ್ಕಿಂತ ಅಧಿಕ ಅಥವಾ ಕಡಿಮೆ ಹೂಡಿಕೆ ಮಾಡುತ್ತಿರಬಹುದು. ಆದರೆ ನಿಮ್ಮ ಗಮನ ನಾವು ಈಗ ತಿಳಿಸುವ ಪರಿಕಲ್ಪನೆಯ(concept) ಮೇಲೆ ಇರಲಿ. ಏಕೆಂದರೆ ಮೂರು ಗೆಳೆಯರು ಸಮನಾದ ಹಣವನ್ನು ಹೂಡಿಕೆ ಮಾಡುತ್ತಾರೆ, ಆದರೆ ಬೇರೆ ಬೇರೆ ತಂತ್ರಗಳನ್ನು ಬಳಸುತ್ತಾರೆ. ಕೊನೆಯಲ್ಲಿ ಹಣದುಬ್ಬರಕ್ಕೆ(inflation) ಹೊಲಿಸಿಯು ಈ ಮೂವರ ಫಲಿತಾಂಶವನ್ನು ತಿಳಿಸಲಿದ್ದೇವೆ.

ಇದನ್ನು ಓದಿ: ರಾಬರ್ಟ್‌ ಕಿಯೋಸಾಕಿ ಅವರ ಎಲ್ಲಾ ಪುಸ್ತಕದ Summary

ಮೊದಲ ವ್ಯಕ್ತಿಯ ಹೆಸರು ಸನ್ನಿ(sunny). ಈತ ಮಧ್ಯಮ ವರ್ಗದ ಕುಟುಂಬದವನಾಗಿದ್ದಾನೆ. ಈತನ ಕುಟುಂಬದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಅಪಾಯಕಾರಿ ಎಂದು ಭಾವಿಸುತ್ತಾರೆ. ಹೀಗಾಗಿ ಇವರ ತಂದೆ ಎಫ್ಡಿಯಲ್ಲಿ ಹೂಡಿಕೆ ಮಾಡಲು ಹೇಳುತ್ತಾರೆ. ಇವರ ತಾಯಿ ಗೋಲ್ಡನಲ್ಲಿ ಹೂಡಿಕೆ ಮಾಡಲು ಹೇಳುತ್ತಾರೆ. ಈತ ತನ್ನ 10 ಸಾವಿರವನ್ನು ಎರಡು ಭಾಗವನ್ನಾಗಿ ಮಾಡುತ್ತಾನೆ. 5 ಸಾವಿರವನ್ನು ಎಫ್ಡಿಯಲ್ಲಿ ಹೂಡಿಕೆ ಮಾಡುತ್ತಾನೆ. ಅಲ್ಲಿ ಇತನಿಗೆ 7% ನಷ್ಟು ರಿಟರ್ನ್ ಸಿಗುತ್ತದೆ. ಇನ್ನು ಉಳಿದ 5 ಸಾವಿರವನ್ನು ಗೋಲ್ಡನಲ್ಲಿ ಹೂಡಿಕೆ ಮಾಡುತ್ತಾನೆ.

ಎರಡನೆಯವನು ಮೊಂಟಿ(monty), ಈತ ಆಧುನಿಕ ಕುಟುಂಬದಿಂದ(modern family) ಬರುತ್ತಾನೆ. ಅಲ್ಲಿ ಅವನಿಗೆ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದರ ಮೇಲೆ ಸ್ವತಂತ್ರವಿದೆ. ಆತ ಅಧಿಕ ಯೂಟೂಬ್ ವೀಡಿಯೋಗಳನ್ನು ನೋಡುತ್ತಾನೆ. ಆರ್ಥಿಕ ತಜ್ಞರ ಜೊತೆ ಮಾತನಾಡುತ್ತಾನೆ. ಕೊನೆಯಲ್ಲಿ ಅವನಿಗೆ ಒಂದು ತಂತ್ರ ತುಂಬಾ ಆಸಕ್ತಿಕರವೆನಿಸುತ್ತದೆ. ಅದುವೇ 50% ಇಕ್ವಿಟಿ ಮತ್ತು 50% ಡೆಪ್ಟ್ನಲ್ಲಿ ಹೂಡಿಕೆ ಮಾಡುವುದಾಗಿದೆ. ಆತ 5,000ರೂ ಅನ್ನು 7% ರಿಟರ್ನ್ ನೀಡುತ್ತಿದ್ದ ಮ್ಯೂಚುಯಲ್ ಫಂಡ್ನಲ್ಲಿ ಹಾಕಿದನು. ಇನ್ನು ಉಳಿದ 5000 ರೂಪಾಯಿಯನ್ನು ಡೆಪ್ಟ್ನಲ್ಲಿ ಹಾಕಿದನು.

personal finance kannada
investing plan

ಮೂರನೇಯವನು ರಾಕಿ(rocky), ಈತ ಸಂಪತ್ತು ಸೃಷ್ಟಿಯ ಮೇಲೆ ಅಧಿಕ ಆಸೆ ತೋರಿಸಿದ. ಏಕೆಂದರೆ ಆತನಿಗೆ ಬೇಗನೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬೇಕೆಂದಿತು. ಆತನಿಗೆ ಅವರ ಮಕ್ಕಳ ಮೇಲೆ ಅವಲಂಬಿತವಾಗುವ ಆಸೆ ಇರಲಿಲ್ಲ. ಹೀಗಾಗಿ ಅವನು ಕೆಲವು ಶ್ರೀಮಂತರ ಬಯೋಗ್ರಫಿಗಳನ್ನು ಓದಲು ಪ್ರಾರಂಭಿಸಿದ ಮತ್ತು ಮುಖ್ಯವಾಗಿ ವಾರೆನ್ ಬಫ್ಫೆಟ್(warren buffet) ಅವರ ಬದುಕಿನ ಬಗ್ಗೆ ಓದಿದ. ಆಗ ಅವನಿಗೆ "power of compounding" ಬಗ್ಗೆ ತಿಳಿಯುತ್ತದೆ.

ನಾವು ಶಾಲೆಯಲ್ಲಿ ಗಣಿತ ವಿಷಯದಲ್ಲಿ ಸಂಯುಕ್ತದ(compounding) ಕಷ್ಟಕರವಾದ ಪ್ರಶ್ನೆಯನ್ನು ಉತ್ತರಿಸುತ್ತೇವೆ. ಆದರೆ ಅದು ಬದುಕಿನಲ್ಲಿ ಎಲ್ಲಿ ಬಳಕೆಯಾಗುತ್ತದೆ ಎಂದು ನೋಡುವುದಿಲ್ಲ. ಆದರೆ ರಾಕಿಗೆ ಕಂಪೌಂಡಿಂಗ್ ಬಗ್ಗೆ ತಿಳಿದಿತ್ತು ಮತ್ತು ದೊಡ್ಡ ದೊಡ್ಡ ಶ್ರೀಮಂತರ ತಂತ್ರದ ಬಗ್ಗೆಯೂ ತಿಳಿದಿತು. ಹೀಗಾಗಿ ಅವನು 10 ಸಾವಿರವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ಯೋಚಿಸಿದ.

ಮೊದಲಿಗೆ ಅವನು ಎಮರ್ಜೆನ್ಸಿ ಫಂಡನ್ನು ತೆಗೆದು, ಬದಿಯಲ್ಲಿ ಇಟ್ಟುಕೊಂಡ ಮತ್ತು ಯಾವುದೇ ಫ್ಯಾನ್ಸಿ ಹೂಡಿಕೆ(fancy investing) ತಂತ್ರವನ್ನು ಬಳಸುವುದಿಲ್ಲವೆಂದುಕೊಂಡ. ಅವನು 10 ಸಾವಿರದ ಒಂದು ಸಿಪ್(sip) ಮಾಡುತ್ತಾನೆ. ಪ್ರಾರಂಭದಲ್ಲಿ ಇಂಡೆಕ್ಸ್ ಫಂಡ್ನಿಂದ ಹೂಡಿಕೆ ಮಾಡುತ್ತಾನೆ, ಬರಬರುತ್ತಾ ತನ್ನ ಷೇರು ಮಾರುಕಟ್ಟೆ ಜ್ಞಾನವನ್ನು ಸುಧಾರಿಸಿಕೊಳ್ಳುತ್ತಾನೆ. ಅವನು ಗೋಲ್ಡ್, ಎಫ್ಡಿ ಇಲ್ಲ ಯಾವುದೇ ರೀತಿಯ ಪಿಂಚಣಿ ಯೋಜನೆಯಾದ(pension scheme) ಪಿಪಿಎಫ್ ರೀತಿ, ಇಲ್ಲ ಉತ್ತಮ ಮ್ಯೂಚುಯಲ್ ಫಂಡ್ ಹುಡುಕಲು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಏಕೆಂದರೆ ಆತನ ಸಂಶೋಧನೆಯಲ್ಲಿ ಯಾವುದೇ ಶ್ರೀಮಂತ ವ್ಯಕ್ತಿ ಇವುಗಳಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಿಲ್ಲ. ಹೀಗಾಗಿ ಅವನು ಅವನ ಷೇರು ಮಾರುಕಟ್ಟೆಯ ಜ್ಞಾನವನ್ನು ಸುಧಾರಿಸಿಕೊಳ್ಳುವ ಬಗ್ಗೆ ಗಮನ ಹರಿಸಿದನು.

ಈ ಮೂರು ಸ್ನೇಹಿತರು 20ರ ವಯಸ್ಸಿನಿಂದ 50ರ ವಯಸ್ಸಿನ ತನಕ ಸಮನಾದ ಹಣವನ್ನು ಹೂಡಿಕೆ ಮಾಡುತ್ತಾರೆ. ಅದುವೇ ತಿಂಗಳಿಗೆ 10 ಸಾವಿರ ಅಂದರೆ 30 ವರ್ಷದಲ್ಲಿ 36 ಲಕ್ಷದಷ್ಟು ಹೂಡಿಕೆ ಮಾಡಿದಂತಾಗುತ್ತದೆ. ಈಗ ನಾವು ಈ ಮೂವರಿಗೆ ಅವರ ಹೂಡಿಕೆಯಿಂದ ಹೇಗೆಲ್ಲ ಲಾಭವಾಯಿತು ಎಂದು ತಿಳಿಯೋಣ.

ಇದನ್ನು ಓದಿ: ಷೇರು ಮಾರುಕಟ್ಟೆಯಿಂದ ಉತ್ತಮ ರಿಟರ್ನ್ಸ್ ಪಡೆಯುವುದು ಹೇಗೆ?

ತುಂಬಾ ವರ್ಷದ ನಂತರ ರಾಕಿ, ಆತನ ಗೆಳೆಯರನ್ನು ಪಾರ್ಟಿಗೆ ಅವರ ಮನೆಗೆ ಕರೆಯುತ್ತಾನೆ. ಸನ್ನಿ ಮತ್ತು ಮೊಂಟಿ ರಾಕಿಯ ಪರಿಸ್ಥಿತಿಯನ್ನು ನೋಡಿ ಆಶ್ಚರ್ಯಗೊಂಡರು. ರಾಕಿ ಒಂದು ದೊಡ್ಡ ಬಂಗಲೆಯಲ್ಲಿ ಇದ್ದನು. ಅವನ ಹತ್ತಿರ ಅನೇಕ ಐಷಾರಾಮಿ ಕಾರುಗಳು ಇದ್ದವು. ಆತ ಗಟ್ಟಿಮುಟ್ಟು(fit) ಕೂಡ ಇದ. ಇವೆಲ್ಲವನ್ನು ನೋಡಿ ಅವರು ಶಾಕ್ ಆಗುತ್ತಾರೆ. ಏಕೆಂದರೆ ರಾಕಿ ಕೂಡ ಅವರ ತರ ಕೆಲಸ ಮಾಡುತ್ತಿದ್ದ ಮತ್ತು ಆತನ ಸಂಬಳ ಕೂಡ ಅವರಷ್ಟೇ ಇತ್ತು.

beginners guide to investing in kannada
investing and money

ಸನ್ನಿ ಎಫ್ಡಿಯಲ್ಲಿ ಹೂಡಿಕೆ ಮಾಡುತ್ತಿದ್ದ 5,000 ವರ್ಷದಲ್ಲಿ 60,000ರೂ, 30 ವರ್ಷದಲ್ಲಿ 18 ಲಕ್ಷವಾಗುತ್ತದೆ. ಅದು 7%ನಲ್ಲಿ ಬೆಳೆದು 61 ಲಕ್ಷವಾಗುತ್ತದೆ. ಅವನ ಉಳಿದ 5,000ವನ್ನು ಹೂಡಿಕೆ ಮಾಡಿದ. ಅದರಿಂದ ಅವನಿಗೆ 8% ಕಾಂಪೌಂಡಿಂಗ್ ರಿಟರ್ನ್ ಸಿಗುತ್ತದೆ. ಏಕೆಂದರೆ ಭಾರತದಲ್ಲಿ ಕಳೆದ 20-30 ವರ್ಷದಿಂದ ಇಷ್ಟೆ ಇದೆ. ಹೀಗಾಗಿ ಆತನ 18 ಲಕ್ಷದ ಬಂಗಾರದ ಹೂಡಿಕೆ 74 ಲಕ್ಷವಾಗಿದೆ. ಅಂದರೆ ಈ 30 ವರ್ಷದಲ್ಲಿ 36 ಲಕ್ಷ ಹೂಡಿಕೆ ಮಾಡಿ, ಅವನ ಈಗಿನ ಪೋರ್ಟ್ಫೋಲಿಯಾದ ಮೌಲ್ಯ 1.35 ಕೋಟಿಯಷ್ಟಿದೆ. ಆದರೆ ಇದರಲ್ಲಿರುವ ಸಮಸ್ಯೆ ಏನೆಂದರೆ ಹಣದುಬ್ಬರ ಎಂಬುದರಿಂದ ಹಣದ ಮೌಲ್ಯವು ಕಡಿಮೆಗೊಳ್ಳುತ್ತದೆ.

ಒಂದು ವೇಳೆ ನಾವು ಭಾರತದಲ್ಲಿ 7.7% ನಷ್ಟು ಹಣದುಬ್ಬರ ಇದೆ ಎಂದುಕೊಂಡು, ಆತನ ರಿಟರ್ನ್ಗೆ ಸರಿಹೊಂದಿಸಿದ್ದರೆ, ಇಂದು 1.35 ಕೋಟಿಯ ಮೌಲ್ಯ 36 ಲಕ್ಷಕ್ಕೆ ಸಮವಾಗಿದೆ. ಇದರರ್ಥ ಅವನ ಹೂಡಿಕೆ ಬೆಳೆಯಲೇ ಇಲ್ಲ. ಈ 36 ಲಕ್ಷ ಅವನು ಆತನ ಬದುಕಿನಲ್ಲಿ ಉಳಿಸಿದ ಹಣವಾಗಿದೆ. ಏಕೆಂದರೆ ಎಫ್ಡಿ ಮತ್ತು ಗೋಲ್ಡ್ನಿಂದ ಬಂದ ರಿಟರ್ನ್ ಅಂತೆ, ಹಣದುಬ್ಬರ ಕೂಡ ಬೆಳೆಯಿತು. ಹೀಗಾಗಿ ಈ ಮೊತ್ತದಿಂದ ಅವನು ಶ್ರೀಮಂತನಾಗುವುದು ಸುಳ್ಳು, ನಿವೃತ್ತಿ(retirement) ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಭಾರತದ ಬ್ಯಾಂಕ್ನಲ್ಲಿ ಎಫ್ಡಿ, ಸೇವಿಂಗ್ ಅಕೌಂಟ್ನಲ್ಲಿ ಹೂಡಿಕೆ ಮಾಡುತ್ತಿರುವವರು ಶ್ರೀಮಂತರಾಗುತ್ತಿಲ್ಲ. ಏಕೆಂದರೆ ಅವರು ಹಣವನ್ನು ಉಳಿಸುತ್ತಿದ್ದಾರೆ ಹೊರತು ಹೂಡಿಕೆ ಮಾಡುತ್ತಿಲ್ಲ.

ಇನ್ನು ಮೊಂಟಿ ಬಗ್ಗೆ ತಿಳಿಸಿದ್ದಾರೆ. ಅವನು ಎರಡು ಕಡೆ ಹೂಡಿಕೆ ಮಾಡಿದ 5,000, 30 ವರ್ಷದ ನಂತರ 61 ಲಕ್ಷವಾಗುತ್ತದೆ. ಇನ್ನು ಉಳಿದ 5 ಸಾವಿರವನ್ನು ಇಕ್ವಿಟಿಯಲ್ಲಿ ಹೂಡಿಕೆ ಮಾಡಿದ. ಅಂದರೆ ಮ್ಯೂಚುಯಲ್ ಫಂಡ್ ಎಂದರ್ಥ. ಅದರಿಂದ ಅವನಿಗೆ 14%ನಷ್ಟು ರಿಟರ್ನ್ ದೊರೆಯಿತು. ಏಕೆಂದರೆ ಸೆನ್ಸೆಕ್ಸ್(sensex) ಕಳೆದ 10 ರಿಂದ 20 ವರ್ಷಗಳಿಂದ ಸರಾಸರಿ 14-15 ರಷ್ಟು ರಿಟರ್ನ್ ನೀಡಿದೆ. ಅವನು 1% ಅನ್ನು ವೆಚ್ಚದ ಅನುಪಾತವಾಗಿ(expense ratio) ಮ್ಯೂಚುಯಲ್ ಫಂಡ್ ಕಂಪನಿಗೆ ಪಾವತಿಸಿದ ಎಂದುಕೊಳ್ಳಿ. ಹೀಗಾಗಿ ಅವನ ಹೂಡಿಕೆ 30 ವರ್ಷದ ನಂತರ 2.4 ಕೋಟಿಯಷ್ಟು ಆಗುತ್ತದೆ. ಅಂದರೆ ಅವನ 10 ಸಾವಿರದ ತಿಂಗಳ ಹೂಡಿಕೆ, 30 ವರ್ಷದ ನಂತರ 3 ಕೋಟಿ ಆಗುತ್ತದೆ. ಇದರಲ್ಲಿ 2,40,00,000 ಇಕ್ವಿಟಿಯಿಂದ ಬಂದರೆ, 60 ಲಕ್ಷ ಡೆಬ್ಟ್ನಿಂದ ಬಂದಿದೆ. ನಾವು ಈ 3 ಕೋಟಿಯನ್ನು ಹಣದುಬ್ಬರದ ಜೊತೆಗೆ ಸರಿಹೊಂದಿಸಿದರೆ, ಇಂದು ಇದರ ಮೌಲ್ಯ 2 ಕೋಟಿಯಾಗುತ್ತದೆ. ಅದು ಕೆಟ್ಟದ್ದು ಅಲ್ಲ, ಏಕೆಂದರೆ ಇಂದಿನ ಸಮಯದಲ್ಲಿ 2 ಕೋಟಿ ಕೂಡ ಒಂದು ಒಳ್ಳೆಯ ಮೊತ್ತವಾಗಿದೆ.

ಆದರೆ ಮೊಂಟಿ ಮ್ಯೂಚುಯಲ್ ಫಂಡ್ ಬದಲು ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ, ಅಲ್ಲಿ ವೆಚ್ಚದ ಅನುಪಾತ(expense ratio) ಕಡಿಮೆ ಇರುತ್ತಿತ್ತು, ಇದರಿಂದ ಅವನಿಗೆ 14% ರಿಟರ್ನ್ ಬದಲು 15% ರಿಟರ್ನ್ಸ್ ಸಿಗುತ್ತಿತ್ತು. ಆ 1% ವ್ಯತ್ಯಾಸದಿಂದ ಆತನ ಇಕ್ವಿಟಿ ಪೋರ್ಟ್ಫೋಲಿಯೋ 2.4 ಕೋಟಿ ಬದಲು 3 ಕೋಟಿ ಆಗಿರುತ್ತಿತ್ತು. ಅಂದರೆ 60 ಲಕ್ಷದಷ್ಟು ವ್ಯತ್ಯಾಸವಿದೆ. ಅವನು ಆ 1% ರಿಟರ್ನ್ನಿಂದ ಆ ಮ್ಯೂಚುಯಲ್ ಫಂಡ್ ಕಂಪನಿಗೆ ಲಾಭ ಮಾಡಿಕೊಟ್ಟ. ಇನ್ನು ಪೂರ್ತಿ ಹಣವನ್ನು ಇಕ್ವಿಟಿಯಲ್ಲಿ ಹೂಡಿಕೆ ಮಾಡಿದ ಮೂರನೇ ಸ್ನೇಹಿತನ ಬಗ್ಗೆ ನೋಡೋಣ.

ಇದನ್ನು ಓದಿ: ಸ್ಟಾಕ್‌ನಲ್ಲಿ ಹೂಡಿಕೆ ಮಾಡುವ ಮೊದಲು ಇವುಗಳು ತಿಳಿದಿರಲಿ

ರಾಕಿಯ 10 ಸಾವಿರದ ಹೂಡಿಕೆ 30 ವರ್ಷದಲ್ಲಿ 15% ರಿಟರ್ನ್ಗೆ ಹೋಲಿಸಿದರೆ 6 ಕೋಟಿಯಷ್ಟು ಆಗಿದೆ. ಇನ್ನು ಹಣದುಬ್ಬರಕ್ಕೆ ಸರಿಹೊಂದಿಸಿದರೆ ಇದರ ಮೌಲ್ಯ 5 ಕೋಟಿಯಾಷ್ಟಗುತ್ತದೆ, ಇದು ಕೂಡ ಒಂದು ದೊಡ್ಡ ಮೊತ್ತವಾಗಿದೆ. ಏಕೆಂದರೆ 5 ಕೋಟಿಯಿಂದ ನೀವು ತುಂಬಾ ವಸ್ತುಗಳನ್ನು ಖರೀದಿಸಬಹುದು. ಆದರೆ ರಾಕಿ ಇಂಡೆಕ್ಸ್ ಫಂಡ್ ಬದಲು ಒಂದು ಸ್ಟಾಕ್ ಪೋರ್ಟ್ಫೋಲಿಯೋ ಮಾಡಿದ್ದನು. ಅದರಿಂದ ಅವನು ಯಾವಾಗಲೂ ಕಲಿಯುತ್ತಿದ್ದನು. ಇದರಿಂದ ಅವನ ಪೋರ್ಟ್ಫೋಲಿಯೋ 20% ನಷ್ಟು ರಿಟರ್ನ್ ನೀಡುತ್ತಿತ್ತು. ಹೀಗಾಗಿ ರಾಕಿಯ ಪ್ರತಿ ತಿಂಗಳ 10 ಸಾವಿರದ ಹೂಡಿಕೆ 30 ವರ್ಷದ ನಂತರ 17 ಕೋಟಿಯಷ್ಟಾಗುತ್ತದೆ. ಯಾರಿಗಾದರೂ ಷೇರು ಮಾರುಕಟ್ಟೆಯಿಂದ 20% ರಿಟರ್ನ್ ಪಡೆಯುವುದು ಕಠಿಣವೆನಿಸಿದರೆ, ನಾನು ಒಂದು ಸರಳ ಕಂಪನಿ ಉದಾಹರಣೆ ನೀಡುವೆ. ಇದು ಸ್ಟಾಕ್ ರೆಕಮೆಂಡೇಷನ್ ಅಲ್ಲ, ಕೇವಲ ಶೈಕ್ಷಣಿಕ ಉದ್ದೇಶದಿಂದ ತಿಳಿಸುತ್ತಿದ್ದೇನೆ. ಇದರಿಂದ ನಮ್ಮ ಭಾರತದಲ್ಲಿ 20% ರಿಟರ್ನ್ ನೀಡುವ ಅನೇಕ ಕಂಪನಿಗಳು ಇವೆ ಎಂದು ನಿಮಗೆ ಐಡಿಯಾ ಬರುತ್ತದೆ.

wealth creation tips kannada
stock analysis

ಡಾಬರ್ ಕಂಪನಿಯ ಸ್ಟಾಕ್ ಕಳೆದ 20 ರಿಂದ 30 ವರ್ಷದಲ್ಲಿ 20 ರಿಂದ 25ರಷ್ಟು ರಿಟರ್ನ್ ನೀಡಿದೆ. ಇದರಷ್ಟು ಸ್ಥಿರವಾಗಿ ಭಾರತದಲ್ಲಿ ಎಫ್ಡಿಯಾ ರಿಟರ್ನ್ ಕೂಡ ಇಲ್ಲ. ಏಕೆಂದರೆ ಎಫ್ಡಿಯ ಬಡ್ಡಿ ದರ(interest rate) ದೀರ್ಘವಧಿಯಲ್ಲಿ ತುಂಬಾ ಏರಿಳಿತವಾಗುತ್ತದೆ. ಆದರೆ ಈ ಸ್ಟಾಕ್ ಅನೇಕ ವರ್ಷಗಳಿಂದ 20 ರಿಂದ 25ರಷ್ಟು ರಿಟರ್ನ್ ನೀಡುತ್ತಾ ಬಂದಿದೆ.

ನೀವು 17 ಕೋಟಿಯನ್ನು ಹಣದುಬ್ಬರದ ಜೊತೆಗೆ ಸರಿಹೊಂದಿಸಿದ್ದಾರೆ, ಇದು 16 ಕೋಟಿ ಆಗುತ್ತದೆ. ಇದು ಒಂದು ಒಳ್ಳೆಯ ಮೊತ್ತವಾಗಿದೆ. ಇದರಲ್ಲಿನ ಆಸಕ್ತಿದಾಯಕ ವಿಷಯವೆಂದರೆ, ರಾಕಿ ಆತನ ಪೋರ್ಟ್ಫೋಲಿಯೋವನ್ನು ಮಾರುವ ಅವಶ್ಯಕತೆ ಇಲ್ಲ. ಏಕೆಂದರೆ ನೇರವಾದ ಸ್ಟಾಕ್ ಹೂಡಿಕೆಯಿಂದ ನಿಮಗೆ ಡಿವಿಡೆಂಟ್(dividend) ಸಿಗುತ್ತದೆ. ನಾವು 1% ಡಿವಿಡೆಂಟ್ ಆದಾಯವೆಂದುಕೊಂಡರೆ, ಈತನಿಗೆ ವರ್ಷಕ್ಕೆ 16 ಲಕ್ಷ ಆದಾಯವಾಗಿ ಸಿಗುತ್ತಿರುತ್ತದೆ. ಈ ಡಿವಿಡೆಂಟ್ ಆತನಿಗೆ ಪ್ರತಿವರ್ಷ ಸಿಗುತ್ತಿರುತ್ತದೆ. ಹೀಗಾಗಿ ಅವನು ಆ ಎಲ್ಲ ಐಷಾರಾಮಿ ವಸ್ತುಗಳಾದ ದುಬಾರಿ ಕಾರು, ವಿಮಾನ, ಮನೆಯ ಡೆಕೋರೇಷನ್ಗೆ ಈ ಡಿವಿಡೆಂಟ್ ಮೊತ್ತವನ್ನೇ ಬಳಸುತ್ತಿದ. ಇದಾಗಿದೆ "ultimate financial freedom" ಅವನಿಗೆ ಡಿವಿಡೆಂಟ್ ಸಿಕ್ಕಾಗಲೆಲ್ಲ ಮನೆಯನ್ನು ಪೈಂಟ್ ಮಾಡಿಸುತ್ತಿದ್ದ, ಇಲ್ಲ ಒಂದು ಒಳ್ಳೆಯ ಕಾರ್ ಖರೀದಿಸುತ್ತಿದ.

ಈ ಲೇಖನದ ಪ್ರಮುಖವಾದ ಪಾಠವೆನೆಂದರೆ, ನಾವು ರಾಕಿ ಮತ್ತು ಆತನ ಗೆಳೆಯರ ಆದಾಯ ಮತ್ತು ಜೀವನ ಮಟ್ಟದಲ್ಲಿ ಇಷ್ಟು ಭಿನ್ನವಾಗಲು ಕಾರಣ ಹುಡುಕಿದಾಗ ನೀವು ಈ ಲೇಖನ ಓದುತ್ತಿದ್ದರೆ ಗಮನಿಸಿರಬಹುದು, ಅದುವೇ ಶಿಕ್ಷಣವಾಗಿದೆ(education). ರಾಕಿ ಹೂಡಿಕೆಗೆ ಸಂಬಂಧಿಸಿದ 2-3 ಪುಸ್ತಕಗಳನ್ನು ಓದಿದ್ದರಿಂದ ಅಧಿಕ ಲಾಭ ಗಳಿಸಲು ಸಾಧ್ಯವಾಯಿತು. ಏಕೆಂದರೆ 14 ರಿಂದ 15% ಅಷ್ಟು ರಿಟರ್ನ್ ಜನರಿಗೆ ಮ್ಯೂಚುವಲ್ ಫಂಡ್ ಮತ್ತು ಇಂಡೆಕ್ಸ್ ಫಂಡ್ ಇಂದಲೇ ದೊರೆಯುತ್ತದೆ. ಆದರೆ 20% ರಿಟರ್ನ್ಗೆ, ಒಂದು ಸ್ಟಾಕ್ ಪೋರ್ಟ್ಫೋಲಿಯೋ ಮಾಡಲೇಬೇಕು. ಕೇವಲ 5 ರಿಂದ 6% ನಷ್ಟು ವ್ಯತ್ಯಾಸ ದೀರ್ಘವಧಿಯಲ್ಲಿ ಕೋಟೆಗಟ್ಟಲೆ ಆಗುತ್ತದೆ. ನಮ್ಮ ಕಥೆಯಲ್ಲಿ 11 ಕೋಟಿ ಆಗಿದೆ, ಅದು ನಿಧಾನವಾಗಿ ಸಮಯದ ಜೊತೆ ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ.

ಏಕೆಂದರೆ ರಾಕಿಯಾ ಸ್ನೇಹಿತರು ಅವನನ್ನು ಭೇಟಿಯಾಗಲು ಬಂದಾಗ, ರಾಕಿ ಒಮ್ಮೆ ಮನೆಯನ್ನು ನವೀಕರಿಸುತ್ತಿದ್ದ, ಒಮ್ಮೊಮ್ಮೆ ಒಂದು ಒಳ್ಳೆಯ ಆಂತರಿಕ ಡೆಕೋರೇಷನ್ ಮಾಡಿಸುತ್ತಿದ್ದ, ಇಲ್ಲ ಒಂದು ಹೊಸ ಕಾರ್ ಖರೀದಿಸುತ್ತಿದ. ಆದರೆ ಎಷ್ಟೋ ವರ್ಷಗಳಿಂದ ಅವನು ಕೆಲಸವನ್ನು ಮಾಡುತ್ತಿರಲಿಲ್ಲ. ಅದೇ ಸನ್ನಿ ಅವನ ಹಳೆಯ ಮನೆಯಲೇ ಜೀವಿಸುತ್ತಿದ್ದನು. ಇದು ಏಕೆಂದರೆ ಅವನು ಒಂದು ಬಿಗಿಯಾದ ಬಜೆಟ್ನಲ್ಲಿ ಜೀವಿಸುತ್ತಿರುತ್ತಾನೆ ಮತ್ತು ತಿಂಗಳ ಖರ್ಚಿಗೆ ಅವನಿಗೆ ಸರಿಹೊಂದಿಸಲು ಕಷ್ಟವಾಗುತ್ತಿರುತ್ತದೆ. ಆಗಿದ್ದ ಮೇಲೆ ಅವನ ಮನೆಯನ್ನು ನವೀಕರಿಸುವ ಬಗ್ಗೆ ಯೋಚಿಸುವುದೇ ಇಲ್ಲ.

ಇದನ್ನು ಓದಿ: ಮೊಡವೆಗಳಿಂದ ಶಾಶ್ವತ ಪರಿಹಾರಕ್ಕೆ 14 ಸಲಹೆಗಳು

ಹೀಗಾಗಿ ನೀವು ತಡವಾಗಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಅಂದರೆ 20ರ ವಯಸ್ಸಿನ ಬದಲು 30ರ ವಯಸ್ಸಿನಿಂದ ಪ್ರಾರಂಭಿಸಿದರೆ, ನಿಮಗೆ ದೀರ್ಘಾವಧಿಯಲ್ಲಿ ಎಷ್ಟು ನಷ್ಟವಾಗುತ್ತದೆ ಎಂದು ಯೋಚಿಸಲು ಸಾಧ್ಯವೇ ಆಗುವುದಿಲ್ಲ. ಅದೇ ರೀತಿ ಕಾಂಪೌಂಡಿಂಗ್ ಹೇಗೆ ಕೆಲಸ ಮಾಡುತ್ತದೆ? ಸ್ಟಾಕ್ ಹೇಗೆ ಕೆಲಸ ಮಾಡುತ್ತದೆ? ಎಂದು ನಿಮಗೆ ತಡವಾಗಿ ತಿಳಿದರು, ನಿಮಗೆ ಭವಿಷ್ಯದಲ್ಲಿ ಕೋಟಿಗಟ್ಟಲೆ ನಷ್ಟವಾಗುತ್ತದೆ. ಅದು ನಿಮಗೆ ತಿಳಿಯುವುದೇ ಇಲ್ಲ. ಹೀಗಾಗಿ "investment in education pays the highest dividend".

ಏಕೆಂದರೆ ಷೇರು ಮಾರುಕಟ್ಟೆಯಿಂದ ನಮಗೆ 1 ರಿಂದ 2 ರಷ್ಟು ಡಿವಿಡೆಂಡ್ ಸಿಗುತ್ತದೆ ಮತ್ತು ರಿಟರ್ನ್ 15 ರಿಂದ 20 ರಷ್ಟು ಸಿಗುತ್ತದೆ. ಆದರೆ ಒಳ್ಳೆಯ ರೀತಿಯಲ್ಲಿ ನೀವು ನಿಮ್ಮ ಮೇಲೆ ಹೂಡಿಕೆ ಮಾಡಿದರೆ ನಿಮ್ಮ ಚಿಕ್ಕ ಮೊತ್ತದಿಂದ ಲಕ್ಷಗಟ್ಟಲೆ ರಿಟರ್ನ್ಸ್ ಸಿಗಬಹುದು. ಹೀಗಾಗಿ ನಾನು ನನ್ನ ಬದುಕನ್ನು ಸೊನ್ನೆಯಿಂದ ಪ್ರಾರಂಭಿಸಿದರೆ ನನ್ನ ಮೊದಲ 10 ಸಾವಿರವನ್ನು ಪುಸ್ತಕಗಳಿಗೆ ಹೂಡಿಕೆ ಮಾಡುತ್ತಿದೆ. ಈ ರೀತಿಯಲ್ಲಿ ಹೂಡಿಕೆಗೆ ಸಂಬಂಧಿಸಿದ ಪುಸ್ತಕಗಳ ಸಾರಾಂಶವನ್ನು ತಿಳಿಯಲು ಮಾಹಿತಿ ತಾಣದಲ್ಲಿರುವ "summary" ಕೆಟಗರಿಗೆ ಹೋಗಿ. ಏಕೆಂದರೆ ಶ್ರೀಮಂತರು ಬಳಸುವ ತಂತ್ರವು ತುಂಬಾ ಓಪನ್ ಆಗಿದೆ. ಆದರೆ ಯಾರು ಅಷ್ಟು ಗಮನ ಹರಿಸುವುದಿಲ್ಲ. ಅಂದರೆ ಅವರು ತಮ್ಮ ಸಮಯ ಮತ್ತು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ತಿಳಿದಿರುತ್ತಾರೆ.

ಯಾವುದೇ ಹೂಡಿಕೆದಾರ ಯು.ಎಲ್.ಐ.ಪಿ, ಪಿ.ಪಿ.ಎಫ್, ಏನ್.ಪಿ.ಎಪ್, ಬಂಗಾರದ ಬಗ್ಗೆ ತಿಳಿಯಲು ಬಯಸುವುದಿಲ್ಲ ಮತ್ತು ಇವುಗಳಲ್ಲಿ ಹೂಡಿಕೆ ಕೂಡ ಮಾಡುವುದಿಲ್ಲ. ಆರ್ಥಿಕ ಸಂಸ್ಥೆಗಳು ತಿಳಿಸುವ ಈ ಎಲ್ಲಾ ಯೋಜನೆಗಳು(scheme) ಮಧ್ಯಮ ವರ್ಗದವರನ್ನು ಮಧ್ಯಮ ವರ್ಗದವರಾಗಿರುವಂತೆ ಮಾಡಲು ಮಾಡಿರುತ್ತಾರೆ. ಏಕೆಂದರೆ ಈ ಎಲ್ಲಾ ಯೋಜನೆಗಳಿಂದ ನಿಮಗೆ 8 ರಿಂದ 10% ನಷ್ಟು ಮಾತ್ರ ರಿಟರ್ನ್ಸ್ ಸಿಗುತ್ತದೆ. ನೀವು ಶ್ರೀಮಂತರಾಗಲು ಬಯಸಿದರೆ ಬಿಸಿನೆಸ್ ಅನ್ನು ಪ್ರಾರಂಭಿಸಿ, ಇಲ್ಲ ಯಾವುದಾದರೂ ವ್ಯಾಪಾರದಲ್ಲಿ ಅಂದರೆ ಒಳ್ಳೆಯ ಸ್ಟಾಕ್ನಲ್ಲಿ ಹೂಡಿಕೆ ಮಾಡಲು ನಿಮ್ಮ ಪೂರ್ತಿ ಗಮನವನ್ನು ಹಾಕಿರಿ. ಸಂಪತ್ತನ್ನು ರಚಿಸಲು ಈ ಫಾರ್ಮುಲಾ ತುಂಬಾ ಉಪಯುಕ್ತವಾಗಿದೆ.

ನೀವು ನಿಮ್ಮ ಹಣದ ಜೊತೆಗೆ ನಿಮ್ಮ ಆರೋಗ್ಯ, ಮನಸ್ಸು, ಸಂಬಂಧ ಮತ್ತು ಕಮ್ಯುನಿಟಿಯ ಮೇಲೂ ಹೂಡಿಕೆ ಮಾಡುತ್ತಿರಬೇಕು. ಏಕೆಂದರೆ ನೀವು ಆರ್ಥಿಕವಾಗಿ ಸಾಧಿಸಿದಾಗ, "calm mind, fit body and house full of love" ಈ ಮೂರನ್ನು ಹಣದಿಂದ ಗಳಿಸಲು ಸಾಧ್ಯವಿಲ್ಲ ಎಂದು ತಿಳಿಯುತ್ತೀರಾ. ಇದನ್ನು ನಾವು ಲೇಖನದ ಪ್ರಾರಂಭದಲ್ಲೇ ವಿಲಿಯಂ ಅವರ ಕಥೆಯಿಂದ ತಿಳಿದುಕೊಂಡೆವು. ಅಧಿಕ ಹಣ ಬಂದ ನಂತರ ಅವನ ಈ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು. ಅವನು ತುಂಬಾ ಖಿನ್ನತೆ ಮತ್ತು ಗಾಬರಿಯಲ್ಲಿ ಇರುತ್ತಿದ. ಅವನ ಆರೋಗ್ಯ ಕೆಡಲು ಪ್ರಾರಂಭಿಸಿತು ಮತ್ತು 6 ಬಾರಿ ವಿಚ್ಚೆದನವಾಯಿತು. ಇದು ಒಂದು ಒಳ್ಳೆಯ ಬದುಕಿನ ಉದಾಹರಣೆ ಆಗಿಲ್ಲ. ಹೀಗಾಗಿ ನೀವು 20s ನಲ್ಲಿ ಬೆಳೆಸಿಕೊಳ್ಳುವ ಅಭ್ಯಾಸಗಳನ್ನೇ ಕೊನೆವರೆಗೂ ತೆಗೆದುಕೊಂಡು ಹೋಗುತ್ತೀರಾ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

ಈಗಾಗಿ ನೀವು ಕನಿಷ್ಠ 3 ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಒಂದು ನಿಮ್ಮನ್ನು ಮಾನಸಿಕವಾಗಿ ಫಿಟ್ ಇರುವಂತೆ ಮಾಡಲು, ಇನ್ನೊಂದು ನಿಮ್ಮನ್ನು ಆರೋಗ್ಯಕರವಾಗಿ ಇರುವಂತೆ ಮಾಡಲು ಮತ್ತು ಮೂರನೇಯದು ನಿಮ್ಮನ್ನು ಖುಷಿಯಲ್ಲಿಡಲು. ಇದರಿಂದ ಅಧಿಕ ಲಾಭವಿದೆ. ಅಂದರೆ ನಿಮಗೆ ಅಧಿಕ ಹಣ ಬಂದಷ್ಟು ಜನರು ನಿಮಗೆ ಹಾನಿ ಮಾಡುವ ಬದಲು, ನಿಮ್ಮ ಯಶಸ್ಸಿಗಾಗಿ ಬೇಡಿಕೊಳ್ಳುತ್ತಾರೆ. ಹೀಗಾಗಿ ಎಲ್ಲವನ್ನು ನೀವು ನಿಮ್ಮ 20ರ ವಯಸ್ಸಿನಿಂದಲೇ ಪ್ರಾರಂಭಿಸಬೇಕು. ಏಕೆಂದರೆ ಎಲ್ಲದರಲ್ಲೂ ಕಾಂಪೌಂಡಿಂಗ್ನ ಮ್ಯಾಜಿಕ್ ನಡೆಯುತ್ತದೆ.

financial planning kannada
power of compounding

ನೀವು ಫೈನಾನ್ಸಿಯಲ್ ಫ್ರೀಡಂ ಸಾಧಿಸುತ್ತೀರಾ ಏಕೆಂದರೆ ನಮ್ಮ ವೆಬ್ಸೈಟ್ನ ಲೇಖನಗಳನ್ನು ಓದುತ್ತಿದ್ದೀರಾ. ಈ ವೈಯಕ್ತಿಕ ಹಣಕಾಸು ಮತ್ತು ಹೂಡಿಕೆ ನಿಮ್ಮ ಹವ್ಯಾಸವಾಗಿರಬಹುದು. 99% ಜನಗಳಿಗೆ ನೀವು ಅವರ ಹವ್ಯಾಸದ ಬಗ್ಗೆ ಕೇಳಿದರೆ, ಹಾಡು ಕೇಳುವುದು, ಇನ್ಸ್ಟಾದಲ್ಲಿ ರಿಲ್ಸ್ ನೋಡುವುದು, ನೆಫ್ಲಿಕ್ನಲ್ಲಿ ಸೀರಿಯಲ್ ನೋಡುವುದು, ಅವರ ಹವ್ಯಾಸವೆನ್ನುತ್ತಾರೆ ಮತ್ತು ನಂತರ ಅವರು ಅವರ ಬದುಕಿನಲ್ಲಿ ಇಷ್ಟು ಸಮಸ್ಯೆಗಳು ಏಕೆ ಇದೆ ಎಂದು ಯೋಚಿಸುತ್ತಾರೆ. ಕೋಟಿಗಟ್ಟಲೆ ಲಾಟರಿ ಗೆದ್ದ ವ್ಯಕ್ತಿಯು ಇಡೀ ಜಗತ್ತನ್ನು ಸುತ್ತಿದ್ದರು, ಒಂದು ದಿನ ಎಲ್ಲಾ ಕಳೆದುಕೊಂಡು ದುಃಖದಲ್ಲೇ ಇರುತ್ತಾನೆ. ಇದನ್ನು ನಾವು ಲೇಖನದ ಪ್ರಾರಂಭದಲ್ಲಿ ವಿಲಿಯಂ ಅವರ ಕಥೆಯ ಮೂಲಕ ತಿಳಿಸಿದೆವು.

ಅವರ ಕಥೆಯಲ್ಲಿ ಸೋಶಿಯಲ್ ಮೀಡಿಯಾ ಇರಲಿಲ್ಲ. ಆದರೆ ಭವಿಷ್ಯದಲ್ಲಿ ಈ ವಿಷಯ ಇನ್ನಷ್ಟು ಅತಿರೇಕವಾಗಲಿದೆ. ಯುವತಿಯರು ಆಕರ್ಷಕವಾಗಿ ಕಾಣಲು ಅಧಿಕ ಮೇಕಪ್ ಮಾಡಿಕೊಳ್ಳುತ್ತಾರೆ. ಯುವಕರು ಆರ್ಥಿಕವಾಗಿ ಸೊತಿದ್ದರು, ಶ್ರೀಮಂತರ ರೀತಿಯಲ್ಲಿ ಕಾಣಲು ಯೋಚಿಸುತ್ತಾರೆ. ಇಡೀ ಜಗತ್ತು ಚೆನ್ನಾಗಿ ಕಾಣಲು ಪ್ರಯತ್ನಿಸುತ್ತದೆ ಹೊರತು ಚೆನ್ನಾಗಿರಲು ಪ್ರಯತ್ನಿಸುವುದಿಲ್ಲ. ಈ ಟ್ರೆಂಡ್ ಇನ್ನಷ್ಟು ಅತಿರೇಕವಾಗಲಿದೆ. ಆದರೆ ಯಾರು ಅವರನ್ನು ಎಜುಕೇಟ್(educate) ಮಾಡಿಕೊಳ್ಳುತ್ತಿರುತ್ತಾರೋ ಮತ್ತು ಚೆನ್ನಾಗಿರಲು ಪ್ರಯತ್ನಿಸುತ್ತಾರೋ, ಬೇಗನೆ ಸಾಧಿಸುತ್ತಾರೆ ಮತ್ತು ಆರಾಮದಾಯಕ ಮತ್ತು ಖುಷಿಯ ಜೀವನವನ್ನು ನಡೆಸುತ್ತಾರೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sushma • February 24th,2023

One of the best article and thank you so much 👏