Website designed by @coders.knowledge.

Website designed by @coders.knowledge.

How to Remember Studied Things | ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

 0

 Add

Please login to add to playlist

Watch Video

ಯಾವುದಾದರೂ ಪುಸ್ತಕ ಕೊಟ್ಟು ಓದಲು ಹೇಳಿದರೆ ಎಲ್ಲರೂ ಓದುತ್ತಾರೆ. ಆದರೆ ಇಲ್ಲಿ ಬರುವ ವಿಷಯವೆಂದರೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ದೀರ್ಘಾವಧಿ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

ಈ ಆರ್ಟಿಕಲ್ ನ್ನು ಓದುತ್ತೀರಿ....

ನಮ್ಮ ಮೆದುಳು ಒಂದು ಹಾರ್ಡವೇರ್ ಇದ್ದ ಹಾಗೇ. ಮೆದುಳಿಗೆ ಯಾವ ವಿಷಯ ಇಂಪಾರ್ಟೆಂಟ್ ಅನ್ನಿಸುತ್ತದೆಯೋ ಅದನ್ನು ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ. ನೀವು ಓದುವಾಗ ಮೆದುಳು ಅದನ್ನು ತಾತ್ಕಾಲಿಕ ಮೆಮೊರಿಯಲ್ಲಿ ಹಾಕುತ್ತದೆ. ನೀವೇನಾದರೂ ಅದನ್ನು ಸ್ವಲ್ಪ ಹೊತ್ತು ಬಿಟ್ಟು ಓದಿಲ್ಲವೆಂದರೆ ನಿಮ್ಮ ಮೆದುಳು ಅದನ್ನು ತೆಗೆದುಹಾಕುತ್ತದೆ.

ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?

ಸೈಂಟಿಫಿಕ್ ಅನಾಲಿಸಿಸ್ ಪ್ರಕಾರ ನಾವು ಓದಿ ಅರ್ಧ ಗಂಟೆಗೆ ಅರ್ಧ ವಿಷಯವನ್ನು ಮರೆಯುತ್ತೇವೆ. ಹೀಗಾಗಿ ನಾವು ನಿಮಗೆ ಇಂದು ಓದುವ ರಿಪಿಟೇಶನ್ ಟೈಮಿಂಗ್ ಬಗ್ಗೆ ಹೇಳುತ್ತಿದ್ದೇವೆ.

how to remember what you read without taking notes in kannada
study first

ಓದಿದ್ದನ್ನು ಬೇಗನೆ ನೆನಪಿಟ್ಟುಕೊಳ್ಳಲು, ನಿಮ್ಮ ಮೊದಲನೇ ರಿಪಿಟೇಶನ್ ಓದಿದ ತಕ್ಷಣವೇ ಮಾಡಿ. ಎರಡನೇ ರಿಪಿಟೇಶನ್ 15- 20 ನಿಮಿಷವಾದ ಮೇಲೆ ಮಾಡಿ. ಮೂರನೇ ರಿಪಿಟೇಶನ್ 6-8 ಗಂಟೆಯಾದ ಮೇಲೆ ಮಾಡಿ. ನಾಲ್ಕನೇ ರಿಪಿಟೇಶನ್ 24 ಗಂಟೆಯಾದ ಮೇಲೆ ಮಾಡಿ.

ಈ ಮೆತೆಡ್ ಯೂಸ್ ಮಾಡಿ ನೀವು ಬೇಗನೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ನಿಮ್ಮ ರಿಪಿಟೇಶನ್ ಸಮಯದಲ್ಲಿ ಮೆದುಳಿಗೆ ಇದು ಇಂಪಾರ್ಟೆಂಟ್ ವಿಷಯ ಎನಿಸಿ, ಅದನ್ನು ಪರ್ಮನೆಂಟ್ ಮೆಮೊರಿಯಲ್ಲಿ ಹಾಕುತ್ತದೆ.

how to remember everything you read for the first time in kannada
remember studies

ಇನ್ನು ಓದಿದ್ದನ್ನು ದೀರ್ಘಾವಧಿ ನೆನಪಿಟ್ಟುಕೊಳ್ಳಲು ಈ ರೀತಿ ರಿಪಿಟೇಶನ್ ಮಾಡಿ. ನಿಮ್ಮ ಮೊದಲನೇ ರಿಪಿಟೇಶನ್ ಮೇಲೆ ಹೇಳಿದಂತೆ ಓದಿದ ತಕ್ಷಣವೇ ಮಾಡಿ. ಎರಡನೇ ರಿಪಿಟೇಶನ್ ಓದಿ 20- 30 ನಿಮಿಷವಾದ ಮೇಲೆ ಮಾಡಿ. ಮೂರನೇ ರಿಪಿಟೇಶನ್ ಓದಿ ಒಂದು ದಿನವಾದ ಮೇಲೆ ಮಾಡಿ.

ನಾಲ್ಕನೇ ರಿಪಿಟೇಶನ್ ಓದಿ 2- 3 ವಾರಗಳಾದ ಮೇಲೆ ಮಾಡಿ. ಇನ್ನು ಕೊನೆಯ ಐದನೇ ರಿಪಿಟೇಶನ್ ಓದಿ 2- 3 ತಿಂಗಳಾದ ಮೇಲೆ ಮಾಡಿ. ಈ ರಿಪಿಟೇಶನ್ ಟೆಕ್ನಿಕ್ ಬಳಸುವುದರಿಂದ ನೀವು ದೀರ್ಘಾವಧಿ ನಿಮ್ಮ ಮೆದುಳಿನಲ್ಲಿ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು.

how to remember what you read for long time in kannada
study tips

ಕೇವಲ ರಿಪಿಟೇಶನ್ ಅಲ್ಲದೆ ನೀವು ಈ ವಿಷಯದ ಮೇಲೆ ಗಮನ ಕೊಡಬೇಕು.

  • • ನೀವು ಓದಿದ್ದು ನಿಮಗೆ ಅರ್ಥವಾಗಬೇಕು.
  • • ಎಷ್ಟು ಬೇಕೋ ಅಷ್ಟೇ ಓದಿ.
  • • ಆಪೋಸಿಟ್ ಆಗಿ ಓದಿ, ಅಂದರೆ ಓದಿದ್ದನ್ನು ಉಲ್ಟಾ ಓದಿ. ಪರೀಕ್ಷೆಯಲ್ಲಿ ಒಂದು ಮರೆತು ಹೋದರೆ ಅಪೋಸಿಟ್ ಓದಿದು ನೆನಪಿಗೆ ಬರುತ್ತದೆ.
  • • ಓದುವಾಗ ನಿಮ್ಮ ಕೈ ಬೆರಳು ಬಳಸಿ, ಇದರ ಅರ್ಥ ಕೆಲವೊಂದು ರಿಪೀಟ್ ಆಗುವ ವರ್ಡ್ಸ್ ಗಳನ್ನು ನಿಮ್ಮ ಬೆರಳಿಗೆ ನೀಡಿ.
  • • ಓದಿದ್ದನ್ನು ಕಥೆ ಮಾಡಿ.
  • • ಓದಿದ್ದನ್ನು ರೆಕಾರ್ಡ್ ಮಾಡಿ ಕೇಳಿ.
  • • ವಿಜ್ಯುಯಲ್ಯಜ್, ಇದರ ಅರ್ಥ ನೀವು ಕೇವಲ ಓದುವ ಪುಟ ತೆಗೆದು ದಿನ ಓದಿ.
  • • ಅವಶ್ಯಕ ಮೆಟೆರಿಯಲ್ ಮಾತ್ರ ಓದಲು ತೆಗೆದುಕೊಳ್ಳಿ.
ಇದನ್ನು ಓದಿ: ಬೆಳಗಿನ ಅಧ್ಯಯನವು ಪರಿಣಾಮಕಾರಿಯಾಗಲು ಐದು ಕಾರಣಗಳು.

ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

commenters

sushma • November 29th,2022

ಉಪಯುಕ್ತ ಮಾಹಿತಿ.