Website designed by @coders.knowledge.

Website designed by @coders.knowledge.

11 Study Principles for Students | ಕಡಿಮೆ ಸಮಯದಲ್ಲಿ ಹೆಚ್ಚು ಅಧ್ಯಯನ ಮಾಡುವುದು ಹೇಗೆ?

Watch Video

22 ವರ್ಷದ ಗೋಹಾರ್ ಖಾನ್ ಎಂಬುವರ ಆಯ್ಕೆಯು ಜಗತ್ತಿನ ಟಾಪ್ 6 ಕಾಲೇಜುಗಳಲ್ಲಿ ಆಗಿದೆ. ಲಇದರಲ್ಲಿ ಎಂಐಟಿ, ಯಾಲ್ ಮತ್ತು ಸ್ಟ್ಯಾನ್‌ಫೋರ್ಡ್ ಕೂಡ ಸೇರಿವೆ. ಇವರು ಓದಲು 11 ತತ್ವಗಳನ್ನು ಬಳಸುತ್ತಿದ್ದೆ ಎಂದು ತಿಳಿಸಿದ್ದಾರೆ. ಇವುಗಳನ್ನು ಯಾರಾದರೂ ಓದಲು ಬಳಸಿದರೆ, ಅವರು ನಿರೀಕ್ಷಿಸಿರುವ ಫಲಿತಾಂಶವನ್ನು ಪಡೆಯಬಹುದು ಮತ್ತು ನಾವು ಇಂದು ಈ ಲೇಖನದಲ್ಲಿ ಆ 11 ತತ್ವಗಳ ಬಗ್ಗೆಯೇ ಮಾತನಾಡದಿದ್ದೇವೆ.

ಇದನ್ನು ಓದಿ: ನಿಮ್ಮನ್ನು ಚುರುಕಾಗಿಸಲು 13 ದಿನನಿತ್ಯದ ಅಭ್ಯಾಸಗಳು

1. Text to audio notes.

text to audio notes study tips in kannada
text to audio notes

ನಾಳೆ ನಿಮ್ಮ ಆಫ್ಲೈನ್ ಪರೀಕ್ಷೆ ಇದೆ ಎಂದು ಯೋಚಿಸಿ ಮತ್ತು ಪರೀಕ್ಷೆ ಕೇಂದ್ರವನ್ನು ತಲುಪಲು ನಿಮಗೆ 1 ರಿಂದ 2 ಗಂಟೆಯಷ್ಟು ಸಮಯ ಬೇಕಾಗುತ್ತದೆ. ನೀವು ರೈಲು ಹತ್ತುತ್ತೀರಾ, ಮತ್ತು ನಿಮಗೆ ಕೂರಲು ಸೀಟ್ ಸಿಕ್ಕಿರುವುದಿಲ್ಲ, ಹೀಗಾಗಿ ನಿಮಗೆ ಪುಸ್ತಕವನ್ನು ತೆರೆಯಲು ಸಾಧ್ಯವಿಲ್ಲ. ಈ ಸಮಯದಲ್ಲಿ ಓದಲು ನಿಮ್ಮ ಫೋನ್‍ನಲ್ಲಿ, ಆ ಪಾಠದ ಒಂದು ಸ್ಕ್ರೀನ್ಶಾಟ್ ತೆಗೆದುಕೊಂಡಿರಿ ಮತ್ತು ಆ ಪೋಟೋಗಳನ್ನು google docನಲ್ಲಿ ತೆರೆಯಿರಿ. ನೀವು ಈ ರೀತಿ ಮಾಡಿದಾಗ ocr ಎಂದರೆ optical character recognizer ನಿಂದ ಆ ಪೋಟೋ ಪಠ್ಯಕ್ಕೆ(text) ಬದಲಾಗುತ್ತದೆ. ನೀವು ಮೊಬೈಲ್ ಸೆಟ್ಟಿಂಗ್ಗೆ ಹೋಗಿ speak screen ಆನ್ ಮಾಡಿ, ಇಯರ್ ಫೋನ್ ಹಾಕಿಕೊಂಡು, ಆ ನೋಟ್ಸ್‌ಗಳನ್ನು ಕೇಳುತ್ತೀರಿ. ಇದರಿಂದ ನಿಮ್ಮ ಸಮಯ ಉಳಿಯುತ್ತದೆ.

2. Blurting.

ನಿಮ್ಮ ಟೀಚರ್ ಪರೀಕ್ಷೆಯ ಫಲಿತಾಂಶವನ್ನು ಘೋಷಣೆ(annonce) ಮಾಡುತ್ತಾರೆ ಮತ್ತು ನಿಮ್ಮ ಗೆಳೆಯನಿಗೆ ಅಧಿಕ ಅಂಕ ಬಂದಿರುವ ಬಗ್ಗೆ ನಿಮಗೆ ತಿಳಿಯುತ್ತದೆ. ನೀವು "ಈತ ಅಷ್ಟು ಬುದ್ಧಿವಂತನಲ್ಲ, ಕೊನೆ ಬಾರಿ ಇವನದ್ದು ಮತ್ತು ನನ್ನದು ಸಮವಾದ ಅಂಕ ಬಂದಿತ್ತು" ಎಂದು ಯೋಚಿಸುತ್ತೀರಾ. ನೀವು ಅವನ ಹತ್ತಿರ ಹೋಗಿ ಅವನ ಸೀಕ್ರೆಟ್ ಓದುವ ತಂತ್ರದ ಬಗ್ಗೆ ಕೇಳುತ್ತೀರಾ? ಅನೇಕ ಬಾರಿ ಕೇಳಿದ ನಂತರ ಅವನು ಆ ತಂತ್ರದ ಬಗ್ಗೆ ತಿಳಿಸುತ್ತಾನೆ. ಅದುವೇ blurting. blurting ಎಂದರೆ ಪರೀಕ್ಷೆಯ ಮೊದಲು ನೋಟ್ಸ್ಗಳನ್ನು ಪರಿಷ್ಕರಿಸುವುದಾಗಿದೆ(revise). ಅವನಿಗೆ ನೆನಪಿಗೆ ಬರುವ ಎಲ್ಲಾ ವಿಷಯವನ್ನು ಬರೆಯುತ್ತಿದ. ಯಾವುದು ಅವನಿಗೆ ನೆನಪಿಗೆ ಬರುತ್ತಿರಲಿಲ್ಲವೋ ಅವುಗಳನ್ನು ನೋಟ್ಸ್ ತೆಗೆದು ಕೆಂಪು ಪೆನ್ನಲ್ಲಿ ಬರೆಯುತ್ತಿದ್ದ, ನಂತರ ಈ ಪ್ರಕ್ರಿಯೆಯನ್ನು ಓದುವುದು ಮುಗಿಯುವವರೆಗೂ ಪುನರಾವರ್ತಿಸುತ್ತಿದ.

ಇದನ್ನು ಓದಿ: ಎಂಟು ಪರಿಣಾಮಕಾರಿ ಅಧ್ಯಯನ ತಂತ್ರಗಳು

3. Box technique.

box technique study tip in kannada
box technique

ನೀವು ಈ ಬಾರಿ ಪರೀಕ್ಷೆಯಲ್ಲಿ ಟಾಪರ್ ಹಾಗೆ ಆಗುತ್ತೀರಾ. ಏಕೆಂದರೆ ನಿಮಗೆ ಬಾಕ್ಸ್ ಟೆಕ್ನಿಕ್ ಬಗ್ಗೆ ತಿಳಿದಿದೆ. ಬಾಕ್ಸ್ ಟೆಕ್ನಿಕ್ ಪ್ರಕಾರ, ನೀವು ಓದಲು ಐದು ಬಾಕ್ಸ್‌ಗಳನ್ನು ಇಡಿ. ಬಾಕ್ಸ್ 1ನಲ್ಲಿ ಇರುವ ನೋಟ್ಸ್‌ಗಳನ್ನು ಪ್ರತಿದಿನ ಪರಿಷ್ಕರಿಸಬೇಕು(revise). ಬಾಕ್ಸ್ 2ನಲ್ಲಿ ಇರುವ ನೋಟ್ಸ್‌ಗಳನ್ನು ಪ್ರತಿ 2 ದಿನಗಳಿಗೊಮ್ಮೆ ಪರಿಷ್ಕರಿಸಬೇಕು. ಬಾಕ್ಸ್ 3ನಲ್ಲಿ ಇರುವ ನೋಟ್ಸ್‌ಗಳನ್ನು ಪ್ರತಿ 4 ದಿನಗಳಿಗೊಮ್ಮೆ ಪರಿಷ್ಕರಿಸಬೇಕು. ಬಾಕ್ಸ್ 4ನಲ್ಲಿ ಇರುವ ನೋಟ್ಸ್‌ಗಳನ್ನು ಪ್ರತಿ 9 ದಿನಗಳಿಗೊಮ್ಮೆ ಪರಿಷ್ಕರಿಸಬೇಕು. ಬಾಕ್ಸ್ 5ನಲ್ಲಿ ಇರುವ ನೋಟ್ಸ್‌ಗಳನ್ನು ಪ್ರತಿ 14 ದಿನಗಳಿಗೊಮ್ಮೆ 4 ದಿನಗಳಿಗೊಮ್ಮೆ ಪರಿಷ್ಕರಿಸಬೇಕು. ಪ್ರಾರಂಭದಲ್ಲಿ ನಾವು ಎಲ್ಲಾ ನೋಟ್ಸ್‌ಗಳನ್ನು ಬಾಕ್ಸ್‌ 1ನಲ್ಲಿ ಹಾಕಬೇಕು. ನಾವು ಇದರಲ್ಲಿ ಇರುವ ನೋಟ್ಸ್‌ಗಳನ್ನು ಓದಿ, ಅದು ನಮಗೆ ನೆನಪಿನಲ್ಲಿದ್ದರೆ ನಾವು ಬಾಕ್ಸ್ 2ಗೆ ಅವುಗಳನ್ನು ಶಿಫ್ಟ್ ಮಾಡುತ್ತೇವೆ. ಯಾವುದೇ ಸಮಯದಲ್ಲಿ ನಮಗೆ ಒಂದು ಬಾಕ್ಸ್‌ನಲ್ಲಿ ಇರುವ ನೋಟ್ಸ್ ರಿವೈಸ್ ಮಾಡಲು ಸಾಧ್ಯವಾಗದಿದ್ದಾಗ ಅವುಗಳನ್ನು ಮತ್ತೆ ಬಾಕ್ಸ್ 1ಗೆ ಹಾಕಬೇಕು.

4. Move fast.

ನೀವು ಮತ್ತು ನಿಮ್ಮ ತರಗತಿಯ ಟಾಪರ್ ಸಮವಾದ ಗಂಟೆಗಳಷ್ಟು ಓದುತ್ತೀರಾ. ಆದರೆ ಅವನ ಮಾರ್ಕ್ಸ್ ಅಧಿಕವಿರುತ್ತದೆ. ಆದರೆ ಈ ಬಾರಿ ತರಗತಿಯ ಟಾಪರ್ ಆಶ್ಚರ್ಯಗೊಂಡಿದ್ದಾನೆ. ಏಕೆಂದರೆ ನಿಮ್ಮ ಅಂಕ ಅಧಿಕವಿದೆ. ಇದು ಏಕೆಂದರೆ ನೀವು ಮೂವ್ ಫಾಸ್ಟ್ ತಂತ್ರವನ್ನು ಬಳಸಿದ್ದೀರಾ. ನಿಮ್ಮ ಪರೀಕ್ಷೆ ಇರುವ ಸಮಯದಲ್ಲಿ ನೀವು ಮಲ್ಟಿಪಲ್ ಕ್ವೆಶ್ಚನ್ ಪೇಪರ್‌ಗಳನ್ನು ಬೇಗನೆ ಪರಿಹರಿಸುತ್ತೀರಿ. ನಿಮಗೆ ಇವುಗಳಲ್ಲಿ ಮೂರು ರೀತಿಯ ಪ್ರೆಶ್ನೆಗಳು ಸಿಗುತ್ತವೆ. ಒಂದು ನಿಮಗೆ ಗೊತ್ತಿರುವ ಪ್ರೆಶ್ನೆಗಳು, ಅವುಗಳ ಮುಂದೆ ನೀವು ca ಅಂದರೆ correct answer ಎಂದು ಬರೆಯುತ್ತೀರಾ.

ಎರಡನೆಯದಾಗಿ ನಿಮಗೆ ಬಾರದೇ ಇರುವ ಪ್ರೆಶ್ನೆಗಳನ್ನು ನೀವು ಓದಿ ಆಯ್ಕೆ ಮಾಡುತ್ತೀರಾ, ಅದರ ಮುಂದೆ cg ಎಂದು ಬರೆಯುತ್ತೀರಾ ಅಂದರೆ complete guess. ಇನ್ನು ಮೂರನೇಯದರಲ್ಲಿ ನೀವು ಆ ಪ್ರೆಶ್ನೆಗಳಲ್ಲಿ ಎರಡು ಆಯ್ಕೆಗಳನ್ನು ತೊಡೆದುಹಾಕುತ್ತೀರಾ. ಈಗ ನಿಮ್ಮ ಹತ್ತಿರ ಎರಡು ಆಯ್ಕೆಗಳು ಉಳಿಯುತ್ತವೆ. ಅವುಗಳಲ್ಲಿ ಒಂದನ್ನು ಊಹೆ ಮಾಡಿ, eg ಎಂದು ಬರೆಯುತ್ತೀರಾ ಅಂದರೆ educated guess ಎಂದರ್ಥ. ನಾವು ಎಲ್ಲ ಪ್ರಶ್ನೆಗಳನ್ನು ಪರಿಹರಿಸಿದ ನಂತರ cg ಮತ್ತು eg ಇರುವ ಪ್ರೆಶ್ನೆಗಳನ್ನು ಮತ್ತೊಮ್ಮೆ ರಿವೈಸ್ ಮಾಡುತ್ತೇವೆ.

ಇದನ್ನು ಓದಿ: ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

5. Tricks for maximum subjects.

tricks for maximum subjects in kannada
tricks for maximum subjects

ನೀವು ಇತಿಹಾಸ ವಿಷಯದ ಇಸವಿಗಳನ್ನು ಓದಿ ಓದಿ ಸುಸ್ತಾಗಿದ್ದಾರೆ, ಈ ಓದುವ ತತ್ವ ನಿಮ್ಮ ಕೆಲಸಕ್ಕೆ ಬರುತ್ತದೆ. ಅದುವೇ ಮೈಂಡ್ ಮ್ಯಾಪ್(mind map) ಆಗಿದೆ. ಅಂದರೆ ಇಸವಿಗಳನ್ನು ನೆನಪಿಟ್ಟುಕೊಳ್ಳುವ ಮೊದಲು ಯಾವ ವಿಷಯದ ಮೇಲೆ ಮಾತನಾಡುತ್ತಿದೆ ಎಂದು ನೋಡಿ. ಉದಾಹರಣೆಗೆ ನಾವು ಸ್ವಾತಂತ್ರ್ಯದ ಮೊದಲಿನ ಬಗ್ಗೆ ತಿಳಿಯಲು ಬಯಸಿದ್ದಾರೆ, "ಜನರು ಆ ಸಮಯದಲ್ಲಿ ಏನು ಮಾಡುತ್ತಿದ್ದರು, ಏನನ್ನು ಯೋಚಿಸುತ್ತಿದ್ದರು" ಎಂದು ಯೋಚಿಸಿ. ಇದರಿಂದ ಆ ಸಮಯದಲ್ಲಿ ನಡೆಯುತ್ತಿದ್ದ ಎಲ್ಲಾ ವಿಷಯಗಳು ನಿಮಗೆ ತರ್ಕವೆನ್ನಿಸಲಿ(logic).

ಇನ್ನು ಎರಡನೆಯದಾಗಿ cause effect relationship ಮಾಡಿ.bಅಂದರೆ ಯಾವುದಾದರೂ ದೊಡ್ಡ ಘಟನೆ ನಡೆದಾಗ, ಅದರಿಂದ ಇನ್ನೊಂದು ವಿಷಯಗಳು ಆಗುತ್ತವೆ. ಉದಾಹರಣೆಗೆ ವರ್ಲ್ಡ್ ವಾರ್ 2 ನಲ್ಲಿ ಜಪಾನ್ ಅಮೆರಿಕದ ಹಡಗುಗಳನ್ನು ಪೋರಲ್ ಹರ್ಬರ್ನಲ್ಲಿ ನಾಶ ಮಾಡಿದಾಗ, ಅಮೆರಿಕ ವರ್ಲ್ಡ್ ವಾರ್ 2 ನಲ್ಲಿ ಭಾಗವಹಿಸಿತ್ತು ಮತ್ತು ಕೊನೆಯದಾಗಿ ಜಪಾನ್ ಮೇಲೆ ಎರಡು ನ್ಯೂಕ್ಲಿಯರ್ ಬಾಂಬನ್ನು ಹಾಕಿದ್ದರು.

6. Most important document.

ಯಾರು ಸಿಲಬಸ್ ಮೇಲೆ ಗಮನ ಹರಿಸುತ್ತಾರೋ ಅವರ ಅಂಕ ಇತರರಿಗಿಂತ ಚೆನ್ನಾಗಿ ಬರುತ್ತದೆ. ನಮ್ಮ ಪುಸ್ತಕಗಳಲ್ಲಿ ಸಿಲಬಸ್ನಲ್ಲಿ ಇರುವುದಕ್ಕಿಂತ ಅಧಿಕ ಬರೆದಿರಬಹುದು. ಆದರೆ ನಾವು ಮೊದಲು ಅವುಗಳಲ್ಲಿ ಸಿಲಬಸ್ಗೆ ಇರುವ ಭಾಗಗಳನ್ನು ಮಾತ್ರ ಪೂರ್ಣ ಮಾಡುತ್ತೇವೆ ಮತ್ತು ಸಿಲಬಸಿಗೆ ಸಂಬಂಧಿಸಿದ ಹಳೆಯ ಪ್ರೆಶ್ನೆ ಪತ್ರಿಕೆಗಳನ್ನು ಪರಿಹರಿಸುತ್ತೇವೆ. ಇದಾದ ನಂತರ ನಮಗೆ ಆ ವಿಷಯದ ಮೇಲೆ ಇನ್ನಷ್ಟು ಆಸಕ್ತಿ ಇದ್ದರೆ ಹೆಚ್ಚುವರಿ ಕೆಲಸ ಮಾಡಬಹುದು.

ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?

7. Take small naps.

small naps for study in kannada
small naps

ಸಂಶೋಧಕರು 39 ವಿದ್ಯಾರ್ಥಿಗಳನ್ನು ತೆಗೆದುಕೊಂಡು, 2 ಗುಂಪಾಗಿ ಭಾಗ ಮಾಡಿದರು. ಗ್ರೂಪ್ a ನಲ್ಲಿ 20 ವಿದ್ಯಾರ್ಥಿಗಳು ಇದ್ದಾರೆ ಗ್ರೂಪ್ b ಯಲ್ಲಿ, 19 ವಿದ್ಯಾರ್ಥಿಗಳು ಇದ್ದರು. 12 ಗಂಟೆಗೆ ಎರಡು ಗುಂಪಿನ ಮೆಮೋರಿ ಟೆಸ್ಟ್ ತೆಗೆದುಕೊಳ್ಳಲಾಯಿತು ಮತ್ತು ಎರಡು ಗುಂಪಿನವರು ಈ ಪರೀಕ್ಷೆಯಲ್ಲಿ ಸಮವಾಗಿ ನಿರ್ವಹಿಸಿದರು. ಗ್ರೂಪ್ a ಅವರು ಮಧ್ಯಾಹ್ನ 2 ಗಂಟೆಗೆ 1.5 ಗಂಟೆಯ ನಿದ್ರೆ ಮಾಡಿದರು. ಅದೇ ಗ್ರೂಪ್ b ಯವರು 1.5 ಗಂಟೆಯಷ್ಟು ಗೇಮ್ ಆಡಿದರು. ನಂತರ ಸಂಜೆ 6 ಗಂಟೆಗೆ ಎರಡು ಗುಂಪುಗಳ ಮೆಮೋರಿ ಟೆಸ್ಟ್ ತೆಗೆದುಕೊಳ್ಳಲಾಯಿತು. 1.5 ಗಂಟೆ ಮಲಗಿದ ಗ್ರೂಪ್ a ಯವರು ಗ್ರೂಪ್‌ b ಗೆ ಹೋಲಿಸಿದರೆ, ಪರೀಕ್ಷೆಯಲ್ಲಿ ಚೆನ್ನಾಗಿ ನಿರ್ವಹಿಸಿದ್ದರು.

8. Ask and it shall be given.

ನೀವು ಪರೀಕ್ಷೆ ಹಿಂದಿನ ರಾತ್ರಿ ಓದಿರುತ್ತೀರಾ, ಆದರೆ ಅದು ಮುಂದಿನ ದಿನ ಪರೀಕ್ಷೆ ಬರೆಯುವ ಸಮಯದಲ್ಲಿ ನೆನಪಿಗೆ ಬರುವುದಿಲ್ಲ. ಇದು ಏಕೆಂದರೆ ನೀವು ತಪ್ಪು ರೀತಿಯಲ್ಲಿ ಓದಿರುತ್ತೀರಾ. ನೀವು ಓದಿರುವುದು ನಿಮಗೆ ನೆನಪಿರಬೇಕೆಂದರೆ 10 ರಿಂದ 15 ಪೇಜುಗಳನ್ನು ಓದಿ ಪುಸ್ತಕ ಮುಚ್ಚಿಟ್ಟು, ಇಲ್ಲಿಯವರೆಗೆ ಏನೇನು ಓದಿದ್ದೀರಾ ಎಂದು ನೆನಪಿಸಿಕೊಳ್ಳಬೇಕು. ನೀವು ಬೇಕಾದರೆ ಓದಿದ್ದನ್ನು ಬರೆಯಬಹುದು, ಆದರೆ ಪುಸ್ತಕ ನೋಡದೆ ಬರೆಯಬೇಕು.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

9. Keep Momentum.

keep momentum in studies in kannada
keep momentum

ನಿಮಗೆ ಶಾಲಾ ಅಥವಾ ಕಾಲೇಜಿನಿಂದ ಅಧಿಕ ಮನೆಗೆಲಸ ಸಿಗುತ್ತಿದೆಯೇ? ನೀವು ಆಗ ಮನೆಗೆ ಬಂದ ತಕ್ಷಣ ಮನೆಗೆಲಸ ಮುಗಿಸುವ ಬಗ್ಗೆ ಯೋಚಿಸುತ್ತೀರಾ ಮತ್ತು ಮನೆಗೆ ಬಂದ ನಂತರ ಮನೆಗೆಲಸ ಮಾಡಲು ಪ್ರಾರಂಭಿಸುತ್ತೀರಾ. ಆದರೆ ಯೂಟ್ಯೂಬ್ ಶಾಟ್ಸ್ ಇನ್‌ಸ್ಟಾಗ್ರಾಂ ರೀಲ್ಸ್ ರೀತೀಯ ವ್ಯಾಕುಲತೆಗಳಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಇದರಿಂದ ಹೊರಬರಲು ಇರುವ ಒಂದು ತಂತ್ರವೆಂದರೆ "do not lose momentum", ಅಂದರೆ ನೀವು ಒಮ್ಮೆ ಬರೆಯಲು ನಿರ್ಧರಿಸಿದ್ದಾರೆ, ಅದನ್ನು ಮುಗಿಸುವವರೆಗೂ ನಿಲ್ಲಬೇಡಿ. ಮಧ್ಯದಲ್ಲಿ ಯಾವುದಾದರೂ ಪ್ರಶ್ನೆಗೆ ಉತ್ತರ ಸಿಗಲಿಲ್ಲವೆಂದರೆ ಇಂಟರ್ನೆಟ್‌ನಲ್ಲಿ ಅದನ್ನು ಹುಡುಕಬೇಡಿ. ಬದಲಿಗೆ ಅದನ್ನು ಆಗ ಬಿಟ್ಟುಬಿಡಿ. ಮುಂದಿನ ಪ್ರೆಶ್ನೆಯನ್ನು ಪರಿಹರಿಸಿ. ನಿಮಗೆ ಬರುವ ಎಲ್ಲಾ ಪ್ರೆಶ್ನೆಗಳನ್ನು ಪರಿಹರಿಸಿದ ನಂತರ ಬಿಟ್ಟುಕೊಟ್ಟ ಪ್ರಶ್ನೆಗಳಿಗೆ ಉತ್ತರಿಸಿ.

10. Impressing teacher.

ಇಂಟರ್ನಲ್ ಅಸೆಸ್ಮೆಂಟ್ ಮಾರ್ಕ್ಸ್ ರೀತಿ ಶಿಕ್ಷಕರ ಕೈಯಲ್ಲಿ ನಮ್ಮ ಅಧಿಕ ವಿಷಯಗಳು ಇರುತ್ತವೆ. ಹೀಗಾಗಿ ಈ ತಂತ್ರದ ಪ್ರಕಾರ, ನೀವು ಇತರರಿಗೆ ಹೋಲಿಸಿದ್ದಾರೆ ಶಿಕ್ಷಕರ ದೃಷ್ಟಿಯಲ್ಲಿ ಸ್ವಲ್ಪ ಮೇಲೆ ಇರಬೇಕೆಂದು ತಿಳಿಸುತ್ತದೆ. ಇದರ ಅರ್ಥ ನೀವು ಶಿಕ್ಷಕರಿಗೆ ಕ್ಯಾಸೆಟ್ ಹಾಕಬೇಕು ಎಂದು ಹೇಳುತ್ತಿಲ್ಲ. ಬದಲಿಗೆ ಇದನ್ನು ಇನ್ನೊಂದು ಮಾರ್ಗದಲ್ಲಿ ಸಾಧಿಸಬಹುದು. ಶಾಲೆ ಅಥವಾ ಕಾಲೇಜು ಶುರುವಾಗಿ 1 ಅಥವಾ 2 ವಾರದ ನಂತರ, ನಿಮ್ಮ ಶಿಕ್ಷಕರಿಗೆ ಆ ಪಾಠಕ್ಕೆ ಸಂಬಂಧಿಸಿದ ನೋಟ್ಸ್ ಅನ್ನು ಮೇಲ್ ಮಾಡಿದ್ದಾರೆ, ಅವರ ಗಮನವನ್ನು ನಿಮ್ಮ ಹತ್ತಿರ ಆಕರ್ಷಿಸಬಹುದು.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

11. Notes taking.

notes taking study tips in kannada
notes taking

ಅನೇಕರು ತರಗತಿಯಲ್ಲಿ ನೋಟ್ಸ್ ತೆಗೆದುಕೊಳ್ಳುವಾಗ ದೊಡ್ಡ ತಪ್ಪನ್ನು ಮಾಡುತ್ತಾರೆ. ಅದೆಂದರೆ ಶಿಕ್ಷಕರು ಉಪನ್ಯಾಸ ನೀಡುವಂತೆ, ನೀವು ಅದನ್ನು ಬರೆದುಕೊಂಡು ಹೋಗುತ್ತೀರಾ. ಆದರೆ ಇದು ನೋಟ್ಸ್ ತೆಗೆದುಕೊಳ್ಳಲು ಇರುವ ಕೆಟ್ಟ ತಂತ್ರವಾಗಿದೆ. ಇದು ಏಕೆಂದರೆ ನೀವು ಕ್ಲಾರ್ಕ್ ರೀತಿ ಬಾಸ್ ಹೇಳುತ್ತಿರುವ ಎಲ್ಲವನ್ನು ಬರೆದುಕೊಳ್ಳುತ್ತೀರ ಮತ್ತು ನಿಮ್ಮ ಬುದ್ಧಿಶಕ್ತಿಯನ್ನು ಬಳಸುತ್ತಿಲ್ಲ. ನೋಟ್ಸ್ ತೆಗೆದುಕೊಳ್ಳಲು ಒಂದು ಉತ್ತಮ ತಂತ್ರವೆಂದರೆ ಶಿಕ್ಷಕರು ಹೇಳುತ್ತಿರುವುದನ್ನು ಆಗಲೇ ಅರ್ಥ ಮಾಡಿಕೊಂಡು ಚಿಕ್ಕದಾಗಿ ನೋಟ್ಸ್‌ನಲ್ಲಿ ಬರೆದುಕೊಳ್ಳಬೇಕು. ಇದರಿಂದ ನಾವು ಕಾನ್ಸೆಪ್ಟ್ ಮೇಲೆ ಗಮನ ಹರಿಸುತ್ತೀರಾ, ಹೊರತು ಪದಗಳ ಮೇಲೆ ಅಲ್ಲ.

Bonus Tip 1: Collaborate.

ಒಂದು ಗುಂಪು ಸೇರಿ ಹರಟೆ ಹೊಡೆಯುತ್ತಿರುವಾಗ ನೀವು ನಿಮ್ಮ ಸ್ನೇಹಿತೆ ಪರೀಕ್ಷೆಯ ಬಗ್ಗೆ ಮಾತನಾಡುತ್ತೀರಾ. ಅದಕ್ಕೆ ನೀವು ಹೇಳುತ್ತೀರಾ "ನಿನಗೆ ಅಧ್ಯಾಯ 6ರಲ್ಲಿ ಸಮಸ್ಯೆ ಇದೆ ಎಂದು ನನಗೆ ಗೊತ್ತು, ನಾನು ನಿನಗೆ ಆ ಅಧ್ಯಾಯದ ಪರಿಷ್ಕರಣೆ ಮಾಡಿಸುತ್ತೇನೆ". ಅದಕ್ಕೆ ನಿಮ್ಮ ಸ್ನೇಹಿತೆ, "ಅದ್ಯಾಯ 2ರಲ್ಲಿ ನೀನು ಅಷ್ಟು ಚೆನ್ನಾಗಿಲ್ಲವೆಂದು ನನಗೆ ತಿಳಿದಿದೆ. ನಾನು ನಿನಗೆ ಅದರ ರಿವಿಶನ್ ನೀಡುತ್ತೇನೆ" ಎಂದು ಹೇಳುತ್ತಾಳೆ. ನೀವಿಬ್ಬರು ರಿವಿಶನ್ ಮುಗಿಸುತ್ತೀರಾ ಮತ್ತು ಪರೀಕ್ಷೆಯಲ್ಲಿ ಒಟ್ಟಿಗೆ ಒಳ್ಳೆಯ ಅಂಕವನ್ನು ಪಡೆಯುತ್ತೀರಾ.

Bonus Tip 2: Elon musk technique.

elon musk technique study tips in kannada
elon musk technique

ನಿಮ್ಮ ಗೆಳೆಯರು ಎಲ್ಲಿಯಾದರೂ ಬರಲು ನಿಮಗೆ ತಿಳಿಸುತ್ತಾರೆ. ಆದರೆ ನೀವು ಬರಲು ನಿರಾಕರಿಸುತ್ತೀರಿ ಎಂದು ಅವರಿಗೆ ತಿಳಿದಿದೆ. ನೀವು ಎಲ್ಲ ಸಮಯ ಓದುತ್ತಲೇ ಇರುತ್ತೀರಾ ಎಂದು ಅವರು ಆಶ್ಚರ್ಯಗೊಂಡಿದ್ದಾರೆ. ಆದರೆ ನಿಮ್ಮ ಅಂಕ ಅವರಷ್ಟೇ ಬರುತ್ತದೆ. ಆಗಿದ್ದರೆ ನೀವು ಏನು ಮಾಡುತ್ತಿದ್ದೀರಾ. ನೀವು ಎಲೋನ್ ಮಾಸ್ಕ್ ಅವರ ಸಮಯ ನಿರ್ವಹಣೆ ತಂತ್ರವನ್ನು ಬಳಸಬಹುದು. ಇದನ್ನು time blocking ಎನ್ನಲಾಗುತ್ತದೆ. ಇದರಲ್ಲಿ ನಾವು ಗೂಗಲ್ ಕ್ಯಾಲೆಂಡರ್ನಲ್ಲಿ , ಈ ಸಮಯದಿಂದ ಇಷ್ಟು ಸಮಯದವರೆಗೆ ಈ ಕೆಲಸ ಮಾಡುತ್ತೇವೆ ಎಂದು ಗುರುತಾಕಬಹುದು. ಉದಾಹರಣೆಗೆ ಓದುವುದು, ಹೊಸದನ್ನು ಕಲಿಯುವುದು, ಇತ್ಯಾದಿ. ಒಂದೊಂದು ಕಾರ್ಯಕ್ಕೂ ನಾವು ವಿಭಿನ್ನವಾದ ಬಣ್ಣವನ್ನು ನೀಡಬಹುದು.

ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?

Bonus Tip 3: Accountability.

"ಇಂದು ಅಧಿಕ ಕೆಲಸ ಇದೆ" ಎಂದು ಯೋಚಿಸಿ ನೀವು ಮನೆಗೆ ಹೋಗುತ್ತೀರಾ. ಆದರೆ ಮನೆಯನ್ನು ತಲುಪಿದ ನಂತರ ನೀವು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತೀರಾ. ನೀವು ಯೂಟ್ಯೂಬ್ ಶಾರ್ಟ್ಸ್ ಅಥವಾ ಇನ್ಸ್ಟಾಗ್ರ್ಯಾಮ್ ರೀಲ್ಸ್ ನೋಡುತ್ತಾ ಊಟದ ಸಮಯ ಬರುವುದು ತಿಳಿಯುವುದೇ ಇಲ್ಲ. ನಿಮಗೂ ಈ ರೀತಿಯ ಸಂದರ್ಭ ಬಂದರೆ ಏನು ಮಾಡುತ್ತೀರಾ. ಇದಕ್ಕೆ ಇರುವ ಸುಲಭವಾದ ಪರಿಹಾರವೆಂದರೆ, ನಿಮ್ಮ ಗೆಳೆಯರು ಇಲ್ಲ ಕುಟುಂಬದವರಿಗೆ ನಿಮ್ಮ ಫೋನ್ ನೀಡಿ, "3 ಗಂಟೆ ನಾನು ಎಷ್ಟೇ ಕೇಳಿದರು, ಈ ಫೋನ್ ನನಗೆ ನೀಡಬೇಡಿ" ಎಂದು ತಿಳಿಸಿ.

Bonus Tip 4: Revision.

revision study tips in kannada
revision

ಯಾವುದೇ ಅಧ್ಯಾಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇರುವ ಮಾರ್ಗವೆಂದರೆ ಅದನ್ನು ಮೂರು ಬಾರಿ ರಿವಿಶನ್ ಮಾಡುವುದಾಗಿದೆ. ಅದರಲ್ಲಿ ಮೊದಲನೆಯದು ಕೋರ್ ಸೆಶನ್, ಎರಡನೇಯದು ರಿವಿವ್ ಸೆಷನ್ 1, ಇನ್ನು ಮೂರನೇಯದು ರಿವಿವ್ ಸೆಷನ್ 2 ಆಗಿದೆ. ಕೋರ್ ಸೆಶನ್ನಲ್ಲಿ, ನೀವು ನಿಮ್ಮ ಎಲ್ಲಾ ನೋಟ್ಸ್‌ಗಳನ್ನು ಓದಿ, ನಿಮ್ಮ ನೋಟ್ಸ್‌ನ ನೋಟ್ಸ್ ಮಾಡಿ ಓದಿ. ಇನ್ನು ರಿವಿವ್ ಸೆಷನ್ 1 ನಲ್ಲಿ ನೀವು ಬರೆದಿರುವ ನೋಟ್ಸ್‌ಗಳನ್ನು ಓದಿ. ಇನ್ನು ರಿವಿವ್ ಸೆಷನ್ 2 ನಲ್ಲಿ ಓದಿದ್ದನ್ನು ನೆನಪಿಟ್ಟುಕೊಳ್ಳಲು ಫ್ಲಾಶ್ ಕಾರ್ಡ್ ಮಾಡಿ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments