Website designed by @coders.knowledge.

Website designed by @coders.knowledge.

Increase Your Time Value | ನಿಮ್ಮ ಸಮಯದ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ

Watch Video

ಈ ಲೇಖನದಲ್ಲಿ ನಾವು ಹೆಚ್ಚಿನ ಉತ್ಪಾದಕತೆಯನ್ನು(productivity) ಬೆಳೆಸುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ. ನೀವು ಇವುಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ, ಒಬ್ಬ ವಿಶೇಷ(special) ವ್ಯಕ್ತಿ ಆಗುತ್ತೀರಾ. "ನಿಮ್ಮ ಸಮಯದ ಮೌಲ್ಯವನ್ನು ಹೇಗೆ ಹೆಚ್ಚಿಸುವುದು" ಎಂಬುದು ನಮ್ಮ ಇವತ್ತಿನ ಪರಿಕಲ್ಪನೆಯಾಗಿದೆ(concept). ನೀವು ವಿಶೇಷವೆನಿಸಲು, ನಿಮ್ಮ ಸಮಯಕ್ಕೆ ಮೌಲ್ಯವಿರಬೇಕು. ನೀವು "ಆ ವ್ಯಕ್ತಿಯ ಸಮಯಕ್ಕೆ ಅಧಿಕ ಮೌಲ್ಯವಿದೆ, ಅವನ ಸಮಯ ಸುಲಭವಾಗಿ ಸಿಗುವುದಿಲ್ಲ" ಎಂದು ಕೇಳಿರುತ್ತೀರಾ. ಇಂದಿನಿಂದ ನಿಮಗೂ ಕೂಡ ಆ ರೀತಿಯೇ ಆಗಲಿದೆ.

ಮೊದಲು ನಾವು ನಿಮ್ಮ ಸಮಯದ ನಿಜವಾದ(actual) ಮೌಲ್ಯ ಏನೆಂದು ತಿಳಿಯೋಣ. ಒಬ್ಬ ಸರಾಸರಿ ವ್ಯಕ್ತಿ ಒಂದು ದಿನದಲ್ಲಿ 10 ಗಂಟೆ ಕೆಲಸ ಮಾಡುತ್ತಾನೆ. ಒಂದು ವೇಳೆ ನೀವು ವಾರದಲ್ಲಿ 5 ದಿನ ಕೆಲಸ ಮಾಡುತ್ತಿದ್ದರೆ, ವಾರದಲ್ಲಿ 50 ಗಂಟೆ ಕೆಲಸ ಮಾಡಿದಂತೆ. ವರ್ಷಕ್ಕೆ 52 ವಾರಗಳಿವೆ, ನಾವು 50 ವಾರಗಳನ್ನು ತೆಗೆದುಕೊಂಡು ಅದನ್ನು ಈ 50 ಗಂಟೆಯ ಜೊತೆ ಗುಣಿಸಿದರೆ(multiply), ವರ್ಷದಲ್ಲಿ ನೀವು 2,500 ಗಂಟೆಯಷ್ಟು ಕೆಲಸ ಮಾಡುತ್ತೀರಾ. ಒಂದು ವೇಳೆ ನೀವು ಈಗ ಕೆಲಸದಲ್ಲಿ ಇದ್ದರೆ ಸರಾಸರಿ 2,500 ಗಂಟೆಯಷ್ಟು ಸಮಯವನ್ನು ಅದಕ್ಕೆ ನೀಡುತ್ತಿದ್ದೀರಿ.

ಅಂದರೆ ನಿಮ್ಮಿಂದ ಒಂದು ಕಂಪನಿ 3 ಲಕ್ಷ ಗಳಿಸುತ್ತಿದೆ. ನೀವು ಒಂದು ವರ್ಷದಲ್ಲಿ ಅದನ್ನೇ ಮಾಡುತ್ತೀರಾ, ಹೀಗಾಗಿ ಆ ಕಂಪನಿಗೆ 36 ಲಕ್ಷ ಲಾಭ ದೊರೆಯುತ್ತದೆ. ಹಾಗಿದ್ದರೆ ನಿಮ್ಮ ಒಂದು ಗಂಟೆಯ ಮೌಲ್ಯವನ್ನು ಈ ರೀತಿ ಕ್ಯಾಲ್ಕುಲೇಟ್ ಮಾಡಬಹುದು, 36,00,000 / 2500 ಮಾಡಿದರೆ 1,440 ಬರುತ್ತದೆ. ಇದರ ಅರ್ಥ ನಿಮ್ಮ ಒಂದು ಗಂಟೆಯ ಮೌಲ್ಯ 1,440ರೂ ಆಗಿದೆ. ಇಂದು ನೀವು ಈ ಲೇಖನವನ್ನು ಓದುತ್ತಿದ್ದೀರಾ ಎಂದರೆ ನಿಮ್ಮ ದೊಡ್ಡ ದೊಡ್ಡ ಕನಸುಗಳಿವೆ. ನೀವು ಗಂಟೆಗೆ 1,440ರೂ ಅಷ್ಟೇ ಗಳಿಸಲು ಬಯಸುವುದಿಲ್ಲ. ಅದಕ್ಕಿಂತ ಅಧಿಕ ಗಳಿಸಲು ಬಯಸುತ್ತೀರಾ. ಇದಕ್ಕಾಗಿ ನೀವು ನಿಮ್ಮ ಸಮಯದ ಮೌಲ್ಯವನ್ನು ಹೆಚ್ಚಿಸಬೇಕು.

1,440ರೂ ನಿಮ್ಮ 1 ಗಂಟೆಯ ಮೌಲ್ಯವಾಗಿದ್ದರೆ, ನೀವು ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಿದ್ದರೆ, ಅದು 14,400ರೂ ಬರುತ್ತದೆ. ನಿಮ್ಮ ಒಂದು ದಿನದ ಮೌಲ್ಯವು 14,400 ಆಗಿದ್ದರೆ, ನೀವು ಏನನ್ನು ಮಾಡುತ್ತಿದ್ದೀರಾ ಎಂದು ನೋಡಿ. ನಿಮ್ಮ ಒಂದು ಗಂಟೆಯ ಮೌಲ್ಯ 1,440ರೂ ಎಂದು ನೀವು ಭಾವಿಸಿ, ನಿಮ್ಮ ಒಂದು ಗಂಟೆಯನ್ನು ಕಾರ್ ವಾಶ್ ಮಾಡಲು ನೀಡಿದರೆ, ಆಗ ನಿಮ್ಮ ಜೇಬಿನಿಂದ ಒಂದು 1,440ರೂ ತೆಗೆದು ಅದನ್ನು ಹರಿದು ಹಾಕಿ. ಏಕೆಂದರೆ ನೀವು ಇಷ್ಟು ಸಮಯವನ್ನು ವ್ಯರ್ಥ ಮಾಡಿದ್ದೀರಾ. ಒಬ್ಬ ವ್ಯಕ್ತಿ 50 ಇಲ್ಲ 100ರೂಗೆ ಕಡಿಮೆ ಸಮಯದಲ್ಲಿ ಮಾಡಬಹುದಾದ ಕೆಲಸವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡಿದ್ದೀರಾ.

ನೀವು ಇಂದು ಈ ಲೇಖನ ಓದುತ್ತಿದ್ದರೆ, ನಿಮ್ಮ ಒಂದು ಗಂಟೆಯ ಮೌಲ್ಯ 1,440ರೂ ಆಗಿರುವುದಿಲ್ಲ, ಬದಲಿಗೆ ಲಕ್ಷಗಟ್ಟಲೇ ಇರುತ್ತದೆ. ನೀವು ನಿಮ್ಮ ಕೆಲಸವನ್ನು ಮುಗಿಸಲು ಒಬ್ಬ ವ್ಯಕ್ತಿಗೆ ಹಣ ನೀಡಿದ್ದಾರೆ, ಆ ಸಮಯದಲ್ಲಿ ನಿಮ್ಮ ಹಣವನ್ನು ಹೆಚ್ಚಿಸುವಂತಹ ಇನ್ನಷ್ಟು ಮಾರ್ಗಗಳನ್ನು ಹುಡುಕಬೇಕು.

ನೀವು ಈ ಲೇಖನ ಓದುತ್ತಿದ್ದರೆ ನಿಮ್ಮ ಸಮಯವನ್ನು ಹೂಡಿಕೆ ಮಾಡುತ್ತಿದ್ದೀರಾ. ನೀವು ಹೂಡಿಕೆದಾರನ(investor) ರೀತಿಯ ಮನಸ್ಥಿತಿಯನ್ನು(mindset) ಇಟ್ಟುಕೊಂಡಿರಬೇಕೆಂದು "ಇಂಟಲಿಜೆಂಟ್ ಇನ್ವೆಸ್ಟರ್" ಪುಸ್ತಕದಲ್ಲಿ ತಿಳಿಸಲಾಗಿದೆ. ನಿಮ್ಮ ಸಮಯ ಉಳಿದಷ್ಟು, ನಿಮ್ಮ ಉತ್ಪಾದಕತೆ ಹೆಚ್ಚುತ್ತದೆ, ಮೌಲ್ಯವು ಹೆಚ್ಚುತ್ತದೆ ಮತ್ತು ನೀವು ಶ್ರೀಮಂತರಾಗುತ್ತೀರಾ.

ನೀವು ಕೆಲವೊಂದಿಷ್ಟು ಫೈನಾನ್ಸ್ಗೆ ಸಂಬಂಧಿಸಿದ ಮೋಟಿವೇಷನಲ್ ವೀಡಿಯೋಗಳನ್ನು ನೋಡಿದರೆ ನಿಮ್ಮ ಮೆದುಳು ನೊರಿಶ್(norish) ಆಗುತ್ತದೆ. ಅದೇ ನೀವು ಆ ಸಮಯವನ್ನು ಟಿವಿ ನೋಡಲು ಬಳಸಿದರೆ ನಿಮ್ಮ ಜೇಬಿನಿಂದ 1,440ರೂ ತೆಗೆದು ಹರಿದು ಹಾಕಿ. ನೀವು ಉತ್ಪಾದಕತೆಯ ಕೆಲಸವನ್ನು ಮಾಡದೆ ನಿಮ್ಮ ಸಮಯವನ್ನು ವ್ಯರ್ಥ ಮಾಡಿದ್ದೀರಾ. ಇಂದಿನಿಂದ ನೀವು ಒಂದು ಚಿಕ್ಕ ಮನಸ್ಥಿತಿಯನ್ನು ತನ್ನಿರಿ, ಈ ಮನಸ್ಥಿತಿಯು ಕೇವಲ 1% ಜನರ ಹತ್ತಿರ ಮಾತ್ರವಿದೆ. ಹೀಗಾಗಿಯೇ ಆ 1% ಜನರ ಜೊತೆ ಇರುವ ವಸ್ತುಗಳು 99%ನಷ್ಟು ಜನರೂ ಕನಸು ಕಾಣುವುದರಲ್ಲಿ ಮಾತ್ರ ಇರುತ್ತದೆ. ನೀವು ಆ 1%ಗೆ ಬರಬಹುದು. ಅದಕ್ಕೆ ಮೊದಲನೆಯದಾಗಿ, ನೀವು

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

1. Delegate ಆಗಬೇಕು.

what does being a delegate mean in kannada
delegate

ಪ್ರತಿನಿಧಿ(delegate) ಎಂದರೆ ಇತರರಿಗೆ ಕೆಲಸ ನೀಡುವುದು. ನೀವು ಮಾಡಲು ಸಾಧ್ಯವಾಗದ ಇಲ್ಲ, ಯಾರಾದರೂ ಬೇರೆಯವರು ಕಡಿಮೆ ಹಣ ತೆಗೆದುಕೊಂಡು ಆ ಕೆಲಸ ಮಾಡಬಹುದೆಂದರೆ ಆತನಿಗೆ ನೀಡಿ. ನಿಮಗೆ ಡೆಲಿಗೆಟ್ ಮಾಡಲು ವ್ಯಕ್ತಿ ಇದ್ದರೆ ಮಾಡಿಬಿಡಿ, ಒಂದು ವೇಳೆ ಡೆಲಿಗೆಟ್ ಮಾಡಲು ವ್ಯಕ್ತಿ ಇಲ್ಲದಿದ್ದರೆ ಆತನನ್ನು ಹುಡುಕಿ. ಏಕೆಂದರೆ ಎಲ್ಲಾ ಕೆಲಸವನ್ನು ನೀವೇ ಮಾಡಲು ಪ್ರಾರಂಭಿಸಿದರೆ, ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ಎಲ್ಲಾ ಕೆಲಸವನ್ನು ನೀವು ಮಾಡಲು ಸಾಧ್ಯವಿಲ್ಲ, ಕೇವಲ ಮುಖ್ಯವಾಗಿರುವ ಕೆಲಸವನ್ನು ಮಾತ್ರ ನೀವು ಮಾಡಬಹುದು. ನೀವು ನಿಮಗೆ ಮುಖ್ಯವಿರುವ ಕೆಲಸ ಏನೆಂದು ಯೋಚಿಸಲು ಪ್ರಾರಂಭಿಸಿರಿ.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

2. Say "no".

is it rude just to say no in kannada
say no

ನಾವು ವ್ಯಾಕುಲತೆ(distraction) ಅಧಿಕವಿರುವ ಜಗತ್ತಿನಲ್ಲಿ ಇರುತ್ತೇವೆ. ಚಿಕ್ಕ ವಯಸ್ಸಿನಿಂದಲೂ ನಮ್ಮ ಪೋಷಕರು ಅವರು ಹೇಳುವ ರೀತಿಯೇ ಮಾಡಿಕೊಂಡು ಬಂದಿದ್ದೇವೆ. ಒಂದು ವೇಳೆ ಅವರು ಹೇಳುವ ಕೆಲಸವನ್ನು ನಾವು ನಿರಾಕರಿಸಿದರೆ ನಮಗೆ ದುಃಖವಾಗುತ್ತಿತ್ತು. ಹೀಗಾಗಿ ಇಲ್ಲಿಯವರೆಗೂ ನೀವು ನಿರಾಕರಿಸುವ ಮನಸ್ಸನ್ನು ಹೊಂದಿಲ್ಲ. ಈ ಕಾರಣದಿಂದಾಗಿ ನೀವು ನಿಮ್ಮ ಜೀವನದಲ್ಲಿ ಮುಖ್ಯವಲ್ಲದ ಕೆಲಸವನ್ನು ಮಾಡಲು ಪ್ರಾರಂಭಿಸುತ್ತೀರಾ. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ ಮತ್ತು ಸಮಯದ ಮೌಲ್ಯ ಕುಗ್ಗುತ್ತದೆ. ಯಶಸ್ವಿಯಾದ ವ್ಯಕ್ತಿಗಳು ಕೆಲವೊಂದು ವಿಷಯಗಳಿಗೆ "no" ಎನ್ನಲು ಹಿಂಜರಿಯುವುದಿಲ್ಲ. ಏಕೆಂದರೆ ಅವರ ಮೆದುಳಿನಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂದು ಕ್ಲಿಯರ್ ಇರುತ್ತದೆ. ಆತ "ನನ್ನ ಸಮಯಕ್ಕೆ ಇಷ್ಟು ಮೌಲ್ಯವಿದೆ, ಈ ಕೆಲಸವನ್ನೇ ಮಾಡುವೆ" ಎಂದು ನಿರ್ಧರಿಸಿರುತ್ತಾನೆ.

ನಿಮ್ಮ ಮನೆಯಲ್ಲಿ ಯಾವುದಾದರು ಕೆಲಸ ಮಾಡಲು ಹೇಳಿದರೆ ನೀವು ನಿರಾಕರಿಸಿ, ಸಮಯದೊಂದಿಗೆ ಅವರಿಗೆ ನೀವು ಏಕೆ ನಿರಾಕರಿಸುತ್ತಿದ್ದೀರಿ ಎಂದು ತಿಳಿಯುತ್ತದೆ. ನಿಮಗೆ ಮುಖ್ಯ ಇರುವ ಕೆಲಸವನ್ನು ಬಿಟ್ಟು ಮುಖ್ಯವಲ್ಲದ ಕೆಲಸವನ್ನು ಮಾಡುತ್ತಿದ್ದರೆ ನೀವು ನಿಮ್ಮ ಸಮಯದ ಮೌಲ್ಯವನ್ನು ಕುಗ್ಗಿಸುತ್ತಿದ್ದೀರಾ. ಹೀಗಾಗಿ ನೀವು ಕೂತು ನಿಮ್ಮ ಸಮಯದ ಮೌಲ್ಯವನ್ನು ಹೆಚ್ಚಿಸುವ ಕೆಲಸ ಯಾವುದು ಎಂದು ಹುಡುಕಬೇಕು.

ಇದನ್ನು ಓದಿ: ಬೇಗನೆ ಶ್ರೀಮಂತರಾಗಲು 15 ಹಣದ ನಿಯಮಗಳು

3. How this can be done without you.

how it can be done without me famous thought in kannada
work without you

"ನಾನು ಇಲ್ಲದೆಯೇ ಈ ಕೆಲಸವನ್ನು ಹೇಗೆ ಮಾಡಬಹುದೆಂದು ನೀವು ಯಾವಾಗಲೂ ಯೋಚಿಸುತ್ತಿರಬೇಕು. ಈ ಪ್ರಶ್ನೆಯೇ ಜಗತ್ತಿನ ಎಷ್ಟೋ ಶ್ರೀಮಂತ ವ್ಯಕ್ತಿಗಳನ್ನು ಸೃಷ್ಟಿಸಿದೆ. ಈ ಪ್ರೆಶ್ನೆಗೆ ಸಂಬಂಧಿಸಿದ ಒಂದು ಕಥೆಯನ್ನು ನಾನು ನಿಮಗೆ ತಿಳಿಸುತ್ತೇನೆ, ಆಗ ನಿಮಗೆ ಈ ಪ್ರೆಶ್ನೆ ಏಕೆ ಶ್ರೀಮಂತರನ್ನು ಸೃಷ್ಟಿ ಮಾಡುತ್ತದೆ ಎಂದು ಅರ್ಥವಾಗುತ್ತದೆ.

ಒಬ್ಬ ಬಡ ವ್ಯಕ್ತಿ ದೇವರಿಗೆ "ನೀನು ಬಡವರಿಗೆ ಏನು ಸಹಾಯ ಮಾಡುವುದಿಲ್ಲ, ಕೇವಲ ಶ್ರೀಮಂತರಿಗೆ ಬೆಂಬಲ ನೀಡುತ್ತೀಯ" ಎಂದು ಹೇಳಲು ಪ್ರಾರಂಭಿಸಿದ. ಇದನ್ನು ಕೇಳಿ ದೇವರೇ ಪ್ರತ್ಯಕ್ಷವಾಗಿ "ನಿನ್ನ ಸಮಸ್ಯೆ ಏನೆಂದು" ಕೇಳಿದರು. ಅದಕ್ಕೆ ಆ ಬಡ ವ್ಯಕ್ತಿ ಸ್ವಲ್ಪ ಹೊತ್ತು ಸುಮ್ಮನಾಗಿ ಈ ರೀತಿ ಹೇಳಿದ, "ದೇವರೇ ನಾನು ಎಷ್ಟೋ ವರ್ಷಗಳಿಂದ ಬಡವನಾಗಿದ್ದೇನೆ. ನನ್ನ ಪರಿಹಾರದಲ್ಲಿ ಬಡತನವಿದೆ, ನನ್ನ ಸುತ್ತಮುತ್ತಲಿನ ಜನರು ಬಡವರಾಗಿದ್ದಾರೆ. ನಾನು ನನ್ನ ಜೀವನವನ್ನು ಕಷ್ಟದಲ್ಲಿ ಕಳೆಯುತ್ತಿದ್ದೇನೆ. ಅದೇ ನಾನು ಕೆಲಸ ಮಾಡುವ ಮನೆಯ ಮಾಲೀಕರು ತುಂಬಾ ಶ್ರೀಮಂತರಾಗಿದ್ದಾನೆ, ಅವನು ಖುಷಿಯಲ್ಲಿದ್ದಾನೆ, ಅವನ ಕುಟುಂಬದ ಜೊತೆ ಸಮಯವನ್ನು ಕಳೆಯುತ್ತಾನೆ. ನೀನು ಎಲ್ಲ ಐಶ್ವರ್ಯವನ್ನು ಆತನಿಗೆ ನೀಡುತ್ತಿದ್ದೀಯ. ನೀನು ಬಡವರಿಗೆ ಅನ್ಯಾಯ ಮಾಡುತ್ತಿದ್ದೀಯ". ಅದಕ್ಕೆ ಭಗವಂತ "ಆಗಿದ್ದರೆ ನಾನು ಅವನನ್ನು ಬಡವನಾಗಿ ಮಾಡುತ್ತೇನೆ, ನಾನು ಆತನ ಎಲ್ಲಾ ಹಣವನ್ನು ತೆಗೆದುಕೊಳ್ಳುತ್ತೇನೆ. ಆದರೆ, ಅವನು ಮತ್ತೊಮ್ಮೆ ಶ್ರೀಮಂತನಾಗುತ್ತಾನೆ" ಎಂದು ಹೇಳುತ್ತಾನೆ.

ಭಗವಂತ ಆ ಸಮಯದಲ್ಲೇ ಇಬ್ಬರನ್ನು ಒಂದೇ ಕಡೆ ಇಟ್ಟು ಇಬ್ಬರಿಂದಲೂ ಎಲ್ಲವನ್ನು ತೆಗೆದುಕೊಂಡ. ಬಡವನ ಹತ್ತಿರ ತೆಗೆದುಕೊಳ್ಳಲು ಏನೂ ಇರಲಿಲ್ಲ. ಆದರೆ ಶ್ರೀಮಂತನ ಬಂಗಲೆ, ಕಾರು ಎಲ್ಲವನ್ನು ತೆಗೆದುಕೊಂಡ. "ಈಗ ಇಬ್ಬರ ಹತ್ತಿರ 0 ಬ್ಯಾಲೆನ್ಸ್ ಇದೆ. ಈಗ ಇಬ್ಬರೂ ಸಮವಾಗಿದ್ದೀರ" ಎಂದು ಹೇಳಿ ದೇವರು ಮಾಯವಾದರೂ.

ಆ ಬಡ ವ್ಯಕ್ತಿ ಈತನು ಬಡವನಾದ ಎಂದು ತಿಳಿದು ಖುಷಿ ಪಟ್ಟ. ಈ ಬಡ ವ್ಯಕ್ತಿ, ಶ್ರೀಮಂತನ ಜೊತೆ ಮಾತನಾಡಿದಾಗ ಶ್ರೀಮಂತನಾಗಿದ್ದ ವ್ಯಕ್ತಿ "ನಮ್ಮ ಹತ್ತಿರ ಹಣವಿಲ್ಲ, ನಮ್ಮ ಪರಿವಾರಕ್ಕೂ ಆಹಾರವನ್ನು ನೀಡಬೇಕು, ಹೀಗಾಗಿ ಒಂದು ಕೆಲಸವನ್ನು ಮಾಡೋಣ". ಇಬ್ಬರು ಅಲ್ಲೇ ಇದ್ದ ನದಿಯಲ್ಲಿ ಮೀನನ್ನು ಹಿಡಿಯಲು ಹೋದರು, ನಂತರ ಸಂಜೆ ಅದನ್ನು ಮಾರಿ ಹಣ ತೆಗೆದುಕೊಂಡು ಮನೆಗೆ ಬರುತ್ತಿದ್ದರು. 400 ಗಳಿಸಿದ ಬಡ ವ್ಯಕ್ತಿ ಆತನ ಕುಟುಂಬದವರಿಗೆ ಒಂದು ದೊಡ್ಡ ಔತಣವನ್ನು ನೀಡಿದ. ಶ್ರೀಮಂತ ವ್ಯಕ್ತಿ ಅಷ್ಟೇ ಗಳಿಸಿದ, ಆದರೆ ಅವರ ಕುಟುಂಬದವರ ಊಟಕ್ಕಾಗಿ ಕೇವಲ 100ರೂ ಅನ್ನು ಮಾತ್ರ ಖರ್ಚು ಮಾಡಿದನು ಮತ್ತು ಉಳಿದ 300ರೂ ಅನ್ನು ಉಳಿಸಿದ.

ಮುಂದಿನ ದಿನ ಅವರು ಮತ್ತೊಮ್ಮೆ ಮೀನನ್ನು ಹಿಡಿಯಲು ಹೋದರು. ಇಬ್ಬರು ಮತ್ತೊಮ್ಮೆ 400 ಗಳಿಸಿದರು. ಆದರೆ ಈಗ ಮತ್ತೊಮ್ಮೆ ಆ ಬಡ ವ್ಯಕ್ತಿ 400ರೂನ ಪಾರ್ಟಿ ನೀಡಿದನು. ಶ್ರೀಮಂತ ವ್ಯಕ್ತಿ ಈಗಲೂ 100ರೂ ಅನ್ನು ಮಾತ್ರ ಖರ್ಚು ಮಾಡಿದ. ಹೀಗೆ ಎಷ್ಟೋ ದಿನಗಳು ಕಳೆದವು. ಸ್ವಲ್ಪ ದಿನದ ನಂತರ "ನಾನು ಇಲ್ಲದೆಯೇ ಈ ಕೆಲಸವನ್ನು ಹೇಗೆ ಮಾಡಬಹುದು" ಎಂದು ಶ್ರೀಮಂತ ವ್ಯಕ್ತಿ ಯೋಚಿಸಲು ಪ್ರಾರಂಭಿಸಿದ. ಆಗ ಆತ ಒಬ್ಬ ವ್ಯಕ್ತಿಯನ್ನು ಕರೆದು "ನಾನು ನಿನಗೆ ದಿನಕ್ಕೆ 200ರೂ ನೀಡುತ್ತೇನೆ. ನೀನು ನನ್ನ ಜೊತೆ ಮೀನು ಹಿಡಿಯಲು ಬಾ, ನಾನು ಮೀನನ್ನು ತೆಗೆದುಕೊಂಡು ನಿನಗೆ ಹಣ ನೀಡುತ್ತೇನೆ" ಎಂದು ಹೇಳಿದ.

ಇಬ್ಬರು ಮೀನನ್ನು ಹಿಡಿಯಲು ಹೋದರು. "ಬಡ ವ್ಯಕ್ತಿ ಒಬ್ಬನೇ ಹೋಗಿ, 400ರೂ ಅನ್ನು ಖರ್ಚು ಮಾಡುತ್ತಿದ್ದ. ಶ್ರೀಮಂತ ವ್ಯಕ್ತಿ 800ರೂ ಗಳಿಸಿದ, 200ರೂ ಆ ವ್ಯಕ್ತಿಗೆ ನೀಡಿ 600ರೂ ಉಳಿಸಿದ. ಅದರಲ್ಲಿ 100ರೂ ಅಷ್ಟು ಅವರ ಪರಿವಾರಕ್ಕೆ ಊಟ ನೀಡಿ, 500ರೂ ಉಳಿಸಿದ. ನಿನ್ನೆ ತನಕ 300ರೂ ಉಳಿಸುತ್ತಿದ್ದ ಆತ, ಇಂದು 500ರೂ ಉಳಿಸಿದ. ಆ ಶ್ರೀಮಂತ ವ್ಯಕ್ತಿ ಮತ್ತೊಮ್ಮೆ "ನಾನು ಇಲ್ಲದೆ ಈ ಕೆಲಸವನ್ನು ಹೇಗೆ ಮಾಡಬಹುದು" ಎಂದು ಕೇಳಿಕೊಂಡ, ಮುಂದಿನ ಬಾರಿ ಇದೇ ರೀತಿ ಆತ 3 ಜನರನ್ನು ಕರೆದುಕೊಂಡು ಹೋದ, ನಂತರ 6 ಜನರನ್ನು, ಅದರ ನಂತರ 10 ಜನ. ಒಂದು ತಿಂಗಳ ನಂತರ ಆತ 20 ಜನರನ್ನು ಕರೆದುಕೊಂಡು ಹೋದ. ಆದರೆ ಬಡ ವ್ಯಕ್ತಿ ಈಗಲೂ ಒಬ್ಬನೇ ಹೋಗುತ್ತಿದ್ದ.

1 ವರ್ಷದ ನಂತರ ಶ್ರೀಮಂತ ವ್ಯಕ್ತಿ ಆ ಏರಿಯಾದಲ್ಲಿ ಎಲ್ಲಾ ಮೀನು ಹಿಡಿಯುವ ಜನರನ್ನು ಕರೆದುಕೊಂಡು ಹಣವನ್ನು ಗಳಿಸಲು ಪ್ರಾರಂಭಿಸಿದ. 2 ವರ್ಷದ ನಂತರ ಆ ನಗರದಲ್ಲಿ ಅತಿ ಹೆಚ್ಚು ಮೀನು ಹಿಡಿಯುವವರ ಪಟ್ಟಿಯಲ್ಲಿ ಆ ಶ್ರೀಮಂತ ವ್ಯಕ್ತಿಯ ಹೆಸರು ಬಂದಿತು. 5 ವರ್ಷದ ನಂತರ ಶ್ರೀಮಂತ ವ್ಯಕ್ತಿ ಮೀನು ಹಿಡಿಯುವ ಒಂದು ದೊಡ್ಡ ಕಂಪನಿಯನ್ನೇ ತೆರೆದನು. ಇವೆಲ್ಲ ಅವನು ಕೇಳಿಕೊಂಡ ಪ್ರಶ್ನೆಯಾದ "ನಾನು ಇಲ್ಲದೆ ಈ ಕೆಲಸವನ್ನು ಹೇಗೆ ಮಾಡಬಹುದು" ಎಂಬುವುದರಿಂದ ಸಾಧ್ಯವಾಯಿತು.

ನಿಮಗೂ ಈಗ ಈ ರಹಸ್ಯದ(secrate) ಬಗ್ಗೆ ತಿಳಿಯಿತು ನೀವು ಈ ಪ್ರೆಶ್ನೆಯನ್ನು ಕೇಳಿಕೊಳ್ಳುತ್ತಿದ್ದರೆ, ನಿಮ್ಮ ಸಮಯದ ಮೌಲ್ಯವು ಹೆಚ್ಚುತ್ತದೆ ಮತ್ತು ಶ್ರೀಮಂತ ವ್ಯಕ್ತಿಯ ರೀತಿಯ ಮನಸ್ಥಿತಿ ಬಂದಾಗ, ನಿಮಗೆ ನಿಮ್ಮ ಒಂದು ಗಂಟೆಯ ಮೌಲ್ಯ, 1,440ರೂ ಅಲ್ಲವೆಂದು ತಿಳಿಯುತ್ತದೆ, ಅದು ಲಕ್ಷಗಟ್ಟಲೇ ಇರಬಹುದು. ವಾರೆನ್ ಬಫೆಟ್ ಅವರು ಈ ರೀತಿಯಲೇ ಯೋಚಿಸಿ ಒಂದು ದಿನಕ್ಕೆ ಎಷ್ಟೋ ಕೋಟಿ ಗಳಿಸುತ್ತಾರೆ. ಈ ಪ್ರೆಶ್ನೆಯನ್ನೇ ದೀರುಬಾಯ್ ಅಂಬಾನಿ, ರತನ್ ಟಾಟಾ ಇನ್ನು ಯಾವುದೇ ದೊಡ್ಡ ಬಿಸಿನೆಸ್ ಮ್ಯಾನ್ ತಮ್ಮ ಜೀವನದಲ್ಲಿ ಕೇಳಿಕೊಂಡಿದ್ದಾರೆ. ನಿಮಗೆ ಈಗ ಶ್ರೀಮಂತರಾಗಲು ಇರುವ ರಹಸ್ಯದ ಬಗ್ಗೆ ತಿಳಿದಿದೆ. ಇದನ್ನು ನೀವು ಬದುಕಿನ ಯಾವುದೇ ವಿಷಯಕ್ಕೆ ಅನ್ವಯಿಸಬಹುದು(apply) ಮತ್ತು ನೀವು ಇದನ್ನು ಖಂಡಿತವಾಗಿಯೂ ಸಾಧಿಸಬಹುದು.

ಕೊನೆಯದಾಗಿ ನಿಮಗೆ 3 ಸಲಹೆಗಳ ಬಗ್ಗೆ ತಿಳಿದಿದೆ. ಅದೆಂದರೆ, ಕೆಲಸಕ್ಕೆ ಡೆಲಿಗೆಟ್ ಮಾಡುವುದು, "no" ಎಂದು ಹೇಳುವುದು ಮತ್ತು "ನಾನು ಇಲ್ಲದೆಯೂ ಇದನ್ನು ಸಾಧಿಸುವುದು ಹೇಗೆ?" ಎಂದು ಕೇಳಿಕೊಳ್ಳುವುದು. ಈ ಮೂರು ವಿಷಯಗಳ ಮೇಲೆ ನೀವು ಕೆಲಸ ಮಾಡಿದಾಗ ನಿಮ್ಮ ಸಮಯದ ಮೌಲ್ಯವು ಹೆಚ್ಚುತ್ತದೆ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments