Watch Video
ಭಾರತ ಉಪಖಂಡದಲ್ಲಿ ಅಸ್ತಿತ್ವದಲ್ಲಿದ್ದ ಸಂಸ್ಕೃತಿ ಮತ್ತು ನಾಗರಿಕತೆಗಳಿಂದ ಕೂಡಿರುವ ಭಾರತೀಯ ಇತಿಹಾಸವು, ವಿದೇಶಿಯರನ್ನು ಒಳಗೊಂಡಂತೆ ಅನೇಕರಿಗೆ ಆಸಕ್ತಿಯ ವಿಷಯವಾಗಿದೆ. ಭಾರತೀಯ ಇತಿಹಾಸವನ್ನು ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಅಥವಾ ಆರ್ಥಿಕ 075ರೀತಿಯಲ್ಲಿ ಅಧ್ಯಯನ ಮಾಡಬಹುದು.
ಕಾಲಾನುಕ್ರಮವಾಗಿ ಭಾರತೀಯ ಇತಿಹಾಸವನ್ನು ಮೂರು ಅವಧಿಗಳಾಗಿ ವಿಂಗಡಿಸಬಹುದು. ಅವೆಂದರೆ ಪ್ರಾಚೀನ ಭಾರತ, ಮಧ್ಯಕಾಲೀನ ಭಾರತ ಮತ್ತು ಆಧುನಿಕ ಭಾರತ.
ಇದನ್ನು ಓದಿ: ಕರ್ನಾಟಕದ ಇತಿಹಾಸ20 ಲಕ್ಷ ವರ್ಷಗಳ ಹಿಂದೆ ಭಾರತೀಯ ಉಪಖಂಡದಲ್ಲಿ ಮೂಲ ಮಾನವರ(homo erectus) ಚಟುವಟಿಕೆಗಳು ಪ್ರಾರಂಭವಾದವು ಮತ್ತು ಕ್ರಿ.ಪೂ. 70,000 ಸಾವಿರದಿಂದ ಹೋಮೋ ಸ್ಯಾಪಿಯನ್ಸ್(homo sapiens) ಚಟುವಟಿಕೆಗಳು ಪ್ರಾರಂಭವಾಯಿತು. ಈ ಹೋಮೋ ಸ್ಯಾಪಿಯನ್ಸ್ ಗಳು ಬೇಟೆಗಾರರಾಗಿದ್ದರು.
ಭಾರತೀಯ ಉಪಖಂಡದ ಮೊದಲ ನಿವಾಸಿಗಳು ಈಶಾನ್ಯ ಭಾರತದ ನಾಗಸ್, ಪೂರ್ವಭಾರತದ ಸಂತಾಲರು, ಮಧ್ಯ ಭಾರತದ ಭಿಲ್ಸ್ ಮತ್ತು ಗೊಂಡರು, ದಕ್ಷಿಣ ಭಾರತದ ತೋಡರು ಇತ್ಯಾದಿ ಆದಿವಾಸಿಗಳಾಗಿರಬಹುದು. ಅವರಲ್ಲಿ ಹೆಚ್ಚಿನವರು ಮಾತನಾಡುವುದು ಮುಂಡಾ ಮತ್ತು ಗೋಡ್ವಿಯಂತಹ ಆಸ್ಟ್ರಿಕ್ ಮತ್ತು ಪೂರ್ವ ದ್ರಾವಿಡ ಭಾಷೆಗಳಾಗಿದ್ದವು. ದ್ರಾವಿಡರು ಮತ್ತು ಆರ್ಯರು ಉಪಖಂಡಕ್ಕೆ ನಂತರ ಬಂದ ವಲಸಿಗರು ಎಂದು ನಂಬಲಾಗಿದೆ.
ಪ್ರಾಚೀನ ಭಾರತವನ್ನು ಪ್ರಾಚೀನ ಶಿಲಾಯುಗ, ಮೆಸೊಲಿಥಿಕ್, ನವಶಿಲಾಯುಗ ಮತ್ತು ಚಾಲ್ಕೋಲಿಥಿಕ್ ಅವಧಿಯಂತೆಯು ಅಧ್ಯಯನ ಮಾಡಬಹುದು. ಈ ಅವಧಿ ಜನರು ಬಳಸಿದ ಕಲ್ಲು ಅಥವಾ ಲೋಹದ ಉಪಕರಣಗಳನ್ನು ಆಧರಿಸಿದೆ.
ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕಈ ಅವಧಿಯಲ್ಲೇ ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು8. ಸುಣ್ಣದ ಕಲ್ಲಿನಿಂದ ಮಾಡಿದ ಉಪಕರಣಗಳನ್ನು ಬಳಸಲಾಗುತ್ತಿತ್ತು. ಪ್ರಾಚೀನ ಶಿಲಾಯುಗದ ಪ್ರಮುಖ ತಾಣಗಳು: ಮಧ್ಯಪ್ರದೇಶದ ಬಿಂಬೇಡ್ಕಾ, ಹೂನ್ಸ್ಗಿ, ಕುರ್ನುಲ್ ಗುಹೆಗಳು, ನರ್ಮದಾ ಕಣಿವೆ, ಕಲಾದಗಿ ಜಲಾಶಯನ ಪ್ರದೇಶಗಳಾಗಿವೆ.
ಮೆಸೊಲಿಥಿಕ್ ಅವಧಿಯಲ್ಲಿ ಪ್ರಮುಖ ಹವಾಮಾನ ಬದಲಾವಣೆ ಸಂಭವಿಸಿದೆ. ಈ ಸಮಯದಲ್ಲೇ ಜಾನುವಾರು ಸಾಕಣೆ ಅಂದರೆ ಪ್ರಾಣಿಗಳ ಸಾಕಣೆ ಪ್ರಾರಂಭವಾಯಿತು. ಮೈಸೂರಿನ ಬ್ರಹ್ಮಗಿರಿ, ಗುಜರಾತ್‌ನ ನರ್ಮದಾ ಮೆಸೊಲಿಥಿಕ್ ಅವಧಿಯ ತಾಣಗಳಾಗಿವೆ.
ನವಶಿಲಾಯುಗದ ಅವಧಿಯಲ್ಲೇ ಕೃಷಿಯನ್ನು ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ಚಕ್ರವನ್ನು ಕಂಡುಹಿಡಿಯಲಾಯಿತು. ಇನಾಮಗಾಂವ್ ಈ ಅವಧಿಯ ಆರಂಭಿಕ ಗ್ರಾಮವಾಗಿದೆ.
ನವಶಿಲಾಯುಗದ ಪ್ರಮುಖ ತಾಣಗಳು ಕಾಶ್ಮೀರದಲ್ಲಿರುವ ಬುರ್ಜಹಾಂ ಮತ್ತು ಗುಫ್ಕ್ರಾಲ್, ಪಾಕಿಸ್ತಾನದಲ್ಲಿರುವ ಮೆಹರ್ ಗಾರ್ಡ್. ಬಿಹಾರದಲ್ಲಿರುವ ಚಿರಾಂಡ್, ತ್ರಿಪುರಾ ಅಥವಾ ಅಸ್ಸಾಂನಲ್ಲಿರುವ ದೌಜಲಿ ಹ್ಯಾಡಿಂಗ್. ಉತ್ತರ ಪ್ರದೇಶದಲ್ಲಿರುವ ಕೋಲ್ಡಿಹ್ವಾ, ಮಹಾಗರ. ಆಂಧ್ರಪ್ರದೇಶದಲ್ಲಿರುವ ಪೈಯಂಪಲ್ಲಿ. ಮಸ್ಕಿ, ಕೊಡೆಕಲ್, ಸಂಗನ ಕಲ್ಲೇರ್, ಉಟ್ನೂರು, ತಕ್ಕಳ ಕೋಟ ಆಗಿದೆ.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?ಸಿಂಧೂ ಕಣಿವೆ ನಾಗರೀಕತೆ ಕ್ರಿ.ಪೂ. 2,700 ರಿಂದ ಕ್ರಿ.ಪೂ. 1,900ರ ತನಕವಿತ್ತು. ಬ್ರಹ್ಮಗಿರಿ, ನವದಾತೋಲಿ, ಪಶ್ಚಿಮ ಬಂಗಾಳದಲ್ಲಿರುವ ಮಹಿಷಾದಾಲ್, ಗಂಗ ಪ್ರದೇಶದಲ್ಲಿರುವ ಚಿಕ್ರೆಂಡ್ನ ಸಂಸ್ಕೃತಿಗಳು ಈ ಅವಧಿಯಲ್ಲೇ ಬರುತ್ತವೆ.
ಕಬ್ಬಿಣದ ಯುಗದಲ್ಲೇ ವೈದಿಕ ಅವಧಿಯು ಪ್ರಾರಂಭವಾಯಿತು. ಜೈನ ಮತ್ತು ಬೌದ್ಧ ಧರ್ಮದ ಸ್ಥಾಪನೆಯಾಯಿತು. ಮಹಾಜನಪದಗಳು, ಸಿಂಧೂ ಕಣಿವೆಯ ನಂತರದ ದೊಡ್ಡ ನಾಗರಿಕತೆಯಾಗಿದೆ. ಹರ್ಯಾಂಕ ಕುಲದ ಬಿಂಬಿಸಾರದ ಮಗಧ ಸಾಮ್ರಾಜ್ಯ, ಕಲಾಶೋಕನ ಸಿಸುಂಗ ರಾಜವಂಶ, ಮಹಾಪದ್ಮನಂದ, ಧನನಂದ ಅವರ ನಂದ ಸಾಮ್ರಾಜ್ಯ, ಈ ಅವಧಿಯ ರಾಜವಂಶಗಳಾಗಿವೆ. ಇಷ್ಟೇ ಅಲ್ಲದೆ, ಪರ್ಷಿಯಾದ ಅಲೆಗ್ಜಾಂಡರ್ ಕೂಡ ಈ ಅವಧಿಯಲ್ಲೇ ಕ್ರಿ.ಪೂ. 327ರಲ್ಲಿ ಬರುತ್ತಾನೆ.
ಇದನ್ನು ಓದಿ: ಪುರಾತನ ಕಾಲದ ಕಠಿಣ ಶಿಕ್ಷೆಗಳುಚಂದ್ರಗುಪ್ತ ಮೌರ್ಯ, ಬಿಂದುಸಾರ, ಅಶೋಕ ಮೌರ್ಯ ಸಾಮ್ರಾಜ್ಯದ ಪ್ರಮುಖ ಆಡಳಿತಗಾರರಾಗಿದ್ದಾರೆ.
ಮೌರ್ಯ ಸಾಮ್ರಾಜ್ಯದ ನಂತರದ ಸಾಮ್ರಾಜ್ಯಗಳು,
ಕ್ರಿ.ಪೂ. 300ರಂದು ದಕ್ಷಿಣ ಭಾರತದಲ್ಲಿದ ರಾಜ್ಯಗಳೆಂದರೆ ಚೋಳ, ಚೇರ, ಪಾಂಡ್ಯರು ಆಗಿದ್ದಾರೆ.
ಗುಪ್ತರ ಅವಧಿಯನ್ನು ಶಾಸ್ತ್ರೀಯ ಅವಧಿಯೆಂದು ಕರೆಯಲಾಗುತ್ತದೆ. ಗುಪ್ತರ ಕಾಲದ ಪ್ರಮುಖ ಆಡಳಿತಗಾರ ಸಮುದ್ರಗುಪ್ತ ಆಗಿದ್ದಾರೆ. ಹರ್ಷವರ್ಧನ, ವಾಕಾಟಕರು, ಪಲ್ಲವರು, ಚಾಲುಕ್ಯರು, ಹಾಗೆಯೇ ಹೂಣೂರು, ಮೈತ್ರಕರು, ರಜಪೂತರು, ಸೇನಾಗಳು ಮತ್ತು ಚಾಹೌನರು, ಗುಪ್ತರ ನಂತರದ ಅಥವಾ ಸಮಕಾಲೀನ ಗುಪ್ತರು ಆಗಿದ್ದಾರೆ.
ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳುಕ್ರಿ.ಶ. 800 ರಿಂದ 1,200ರ ತನಕ ಪ್ರತೀಹಾರರು, ಪಾಲರು ಮತ್ತು ರಾಷ್ಟ್ರಕೂಟರು ತ್ರಿಪಕ್ಷೀಯ ಹೋರಾಟ ನಡೆಸಿದ್ದರು. ಕ್ರಿ.ಶ. 712ರಂದು ಮೊಹಮ್ಮದ್ ಬಿನ್ ಕಾಸಿಂನಿಂದ ದಾಳಿ ನಡೆಯಿತು.
ಈ ಅವಧಿಯಲ್ಲೇ ಭಾರತದಲ್ಲಿ ಇಸ್ಲಾಂ ಮತ್ತು ಸೂಫಿಸಂನ ಉದಯವಾಯಿತು. ಮಹಮ್ಮದ್ ಗಜಿನಿ, ಕ್ರಿ.ಶ. 1000 ರಿಂದ ಕ್ರಿ.ಶ. 1,027. ಮೊಹಮ್ಮದ್ ಘೋರಿ ಕ್ರಿ.ಶ. 1,175 ರಿಂದ ಕ್ರಿ.ಶ. 1,206ರ ತನಕ.
ಮಧ್ಯಕಾಲೀನ ಭಾರತದಲ್ಲಿದ ದಕ್ಷಿಣ ಭಾರತದ ಪ್ರಮುಖ ಸಾಮ್ರಾಜ್ಯಗಳು ಬಹಮನಿ ಮತ್ತು ವಿಜಯನಗರವಾಗಿದೆ.
ಇದನ್ನು ಓದಿ: ಕರ್ನಾಟಕದಲ್ಲಿ ನೋಡಬೇಕಾದ ಹತ್ತು ತಾಣಗಳುದೆಹಲಿ ಸುಲ್ತಾನರ ಅವಧಿಯಲ್ಲಿ ಕೆಳಗಿನ ರಾಜವಂಶಗಳು ಒಂದರ ನಂತರ ಒಂದರಂತೆ ಪ್ರವರ್ಧಮಾನಕ್ಕೆ ಬಂದವು.
ಮೊಗಲರಲ್ಲಿ ಎರಡು ರೀತಿ ಇದೆ. ಅದುವೇ ಮಹಾನ್ ಮೊಗಲರು ಮತ್ತು ನಂತರದ ಮೊಗಲರು. ಕ್ರಿ.ಶ. 1,526ರ ಬಾಬರ್ ನಿಂದ 1,707ರವರೆಗಿನ ಔರಂಗಜೇಬ್ ವರೆಗಿನ ಮೊಗಲರು ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಅವರನ್ನು ಮಹಾನ್ ಮೊಗಲರು ಎಂದು ಕರೆಯಲಾಗುತ್ತದೆ. ಕ್ರಿ.ಶ. 1,707 ರಿಂದ 1,857ರವರೆಗೆ ಆಳಿದ ಮೊಗಲರನ್ನು ನಂತರದ ಮೊಗಲರು ಎಂದು ಕರೆಯಲಾಗುತ್ತದೆ.
ಮಧ್ಯಕಾಲೀನ ಅವಧಿಯಲ್ಲೇ ಯುರೋಪಿಯನ್ನರ ಆಗಮನವಾಯಿತು ಮತ್ತು ಈ ಅವಧಿಯಲ್ಲಿ ಉತ್ತರ ಭಾರತದಲ್ಲಿ ಮರಾಠ ಮತ್ತು ಸಿಖ್ಖರ ಸಾಮ್ರಾಜ್ಯವಿತ್ತು.
ಇದನ್ನು ಓದಿ: ವಲ್ಡ್ ವಾರ್ 1ಕ್ರಿ.ಶ. 1,857 ರಂದು ಭಾರತದ ಮೊದಲ ಸ್ವಾತಂತ್ರ ಸಂಗ್ರಾಮವಾಯಿತು. ಕ್ರಿ.ಶ. 1,885 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಚನೆಯಾಯಿತು. ಕ್ರಿ.ಶ. 1,906ರಲ್ಲಿ ಮುಸ್ಲಿಂ ಲೀಗ್‌ನ ರಚನೆಯಾಯಿತು, 1,920 ರಂದು ಅಸಹಕಾರ ಚಳುವಳಿ, 1,930 ರಂದು ನಾಗರಿಕ ಅಸಹಕಾರ ಚಳುವಳಿ, 1,942 ರಂದು ಕ್ವಿಟ್ ಇಂಡಿಯಾ ಚಳುವಳಿ, 1,947 ರಂದು ಭಾರತದ ವಿಭಜನೆ, 1,946 ರಿಂದ 1,950 ರಂದು ಭಾರತದ ಸಾಂವಿಧಾನಿಕ ಅಭಿವೃದ್ಧಿ. ಭಾರತದ ಆರ್ಥಿಕ ಅಭಿವೃದ್ಧಿ, ಭಾರತ - ಪಾಕ್ ನಡುವಿನ ಯುದ್ಧ, ಬಾಂಗ್ಲಾದೇಶದ ರಚನೆ, ಭಾರತ ಚೀನ ನಡುವಿನ ಯುದ್ಧ, 1,991 ಹೊಸ ಆರ್ಥಿಕ ನೀತಿ. ಪರಮಾಣು, ಬಾಹ್ಯಾಕಾಶ ಮತ್ತು ರಕ್ಷಣಾ ಅಭಿವೃದ್ಧಿಯಾಗಿದೆ.
ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
Info Mind 18387
Info Mind 4227
Info Mind 4525
See all comments...
Anil • June 20th,2022
Nice