Website designed by @coders.knowledge.

Website designed by @coders.knowledge.

Investing Lessons from an Experienced Investor | ಅನುಭವಿ ಹೂಡಿಕೆದಾರನ ಹೂಡಿಕೆಯ ಪಾಠಗಳು

Watch Video

ಷೇರು ಮಾರುಕಟ್ಟೆಯಿಂದ ಶ್ರೀಮಂತರಾಗಲು ತುಂಬಾ ಜನ ಬರುತ್ತಾರೆ. ಆದರೆ ತಮ್ಮ ಬದುಕಿನಲ್ಲಿ ಇಲ್ಲಿಂದ ಅಧಿಕ ಸಂಪತ್ತನ್ನು(wealth) ಮಾಡುವವರು ಕಡಿಮೆ ಜನ ಇದ್ದಾರೆ. ಷೇರು ಮಾರುಕಟ್ಟೆಯ ಮೇಲೆ 26 ವರ್ಷ ಅನುಭವ(experience) ಇರುವ ವ್ಯಕ್ತಿಯು ಕೆಲವು ಪಾಠಗಳನ್ನು ತಿಳಿಸಿದ್ದಾರೆ. ಅದನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸಲಿದ್ದೇವೆ. ಈ ವ್ಯಕ್ತಿಯು ಟ್ರೇಡಿಂಗ್(trading) ಬಿಟ್ಟು ಹೂಡಿಕೆಯಿಂದ(investing) ಅಧಿಕ ಹಣವನ್ನು ಗಳಿಸಿದ್ದಾರೆ. ಟ್ರೇಡಿಂಗ್ನಿಂದಲೂ ಅಧಿಕ ಹಣವನ್ನು ಗಳಿಸಬಹುದು. ಆದರೆ ನಾವು ಇಂದು ಉಲ್ಲೇಕಿಸುತ್ತಿರುವ(reference) ವ್ಯಕ್ತಿಯು ಹೂಡಿಕೆಯಿಂದ ಹಣವನ್ನು ಗಳಿಸಿದ್ದಾರೆ.

ಇದನ್ನು ಓದಿ: "The Education of a Value Investor" ಪುಸ್ತಕದ ಸಾರಾಂಶ

1. What is the real definition of wealth?

what is trading and investing in stock market in kannada
investing and trading

ಅವರು ತಿಳಿಸುವ ಮೊದಲ ಪಾಠವು ಈ ರೀತಿ ಇದೆ. ಇಂದು ಸಂಪತ್ತಿನ ವ್ಯಾಖ್ಯಾನವೂ ಬದಲಾಗಿದೆ. ಪ್ರತಿಯೊಬ್ಬರು ಸಂಪತ್ತನ್ನು ಹಣಕ್ಕೆ ಸಂಬಂಧಿಸುತ್ತಾರೆ. ತುಂಬಾ ಹಣ ಇರುವ, ಲ್ಯಾಂಬೋರ್ಗಿನಿ(lamborgini) ಕಾರು ಮತ್ತು ಅನೇಕ ಇತರ ಕಾರುಗಳು, ಒಂದು ದೊಡ್ಡ ಬಂಗಲೆ ಇದ್ದರೆ ಅವನು ಸಂಪತ್ತುರಹಿತನೆಂದುಕೊಳ್ಳುತ್ತಾರೆ. ಆದರೆ ನಿಮಗೆ ಸಂತೋಷವನ್ನು ನೀಡುವುದು ನಿಜವಾದ ಸಂಪತ್ತಾಗಿದೆ. ತುಂಬಾ ಕಡಿಮೆ ಜನ ಭೌತಿಕ(materialistic) ಸಂತೋಷವನ್ನು ಪಡೆಯುತ್ತಾರೆ. ಅನೇಕರು "ನಾನು ಆ ಕಾರನ್ನು ಖರೀದಿಸಿದ ನಂತರ, ಇಲ್ಲ ಆ ಬಂಗಲೇ ಖರೀದಿಸಿದ ನಂತರ ಖುಷಿಯಾಗಿರುತ್ತೇನೆ" ಎಂದು ಹೇಳುತ್ತಾರೆ. ಆದರೆ ಆ ರೀತಿ ಆಗುವುದಿಲ್ಲ.

ಅದು ನಿಜವಾದ ಸಂಪತ್ತಾಗಿಲ್ಲ. ನೀವು ಆರೋಗ್ಯಕರವಾಗಿ(healthy) ಇದ್ದು ಸಾಮಾಜಿಕ ಬದುಕು(social life) ಇದ್ದು, ನಿಮ್ಮ ಪ್ರೀತಿ ಪಾತ್ರರ ಜೊತೆ ಖುಷಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಅಂದರೆ ನಿಮ್ಮ ಮನೆ, ಕೆಲಸ, ಯಾವುದೇ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಪೂರೈಸಿದರೆ(fulfill), ಅದು ನಿಮಗೆ ಮುಖ್ಯವಾಗುತ್ತದೆ ಮತ್ತು ಅದು ನಿಜವಾದ ಸಂಪತ್ತಾಗಿದೆ. ಕೊನೆಯಲ್ಲಿ ನಾವು ನಮ್ಮ ಹಣೆಬರಹವನ್ನು(destiny) ಕ್ರಮದಿಂದ(actions) ಬರೆಯುತ್ತೇವೆ.

2. How does lucky break work?

ಅನೇಕರು ಅದೃಷ್ಟವಂತ(lucky) ಎಂದು ಕೇಳಿರುತ್ತೀರಾ. ಆದರೆ ಅದೃಷ್ಟವಂತ ಇರಲು ಕೂಡ ಕ್ರಮವೂ ತುಂಬಾನೇ ಪ್ರಮುಖವಾಗಿದೆ. ಇದಕ್ಕೆ ಒಂದು ಉದಾಹರಣೆಯನ್ನು ತಿಳಿಸಿದರೆ, ಹೂಡಿಕೆಯಲ್ಲಿ ಅಧಿಕ ಸಂಪತ್ತು ಅದೃಷ್ಟದ ಸಮಯದಿಂದ(lucky break) ಆಗುತ್ತದೆ ಎಂದು ತಿಳಿಸುತ್ತಾರೆ ಮತ್ತು ಇದನ್ನು ತುಂಬಾ ಚೆನ್ನಾಗಿ ಅವರು ವಿವರಿಸಿದ್ದಾರೆ.

how does lucky break work in kannada
leaman brothers crisis

ಅವರಿಗೆ 2007-08 ರಂದು ಲೆಹ್ಮನ್ ಬ್ರದರ್ಸ್ ಕ್ರಿಸಿಸ್ನಿಂದ(lehman brothers crisis) ಅಧಿಕ ನಷ್ಟವಾಯಿತು. ಇದರಿಂದ ಹೂಡಿಕೆದಾರರ ಪೋರ್ಟ್ಫೋಲಿಯೋ 50 ರಿಂದ 60ರಷ್ಟು ಕೆಳಗೆ ಬಂದಿತು. ಆದರೆ ಆ ಸಮಯದ ಪಾಠಗಳು ಕೋವಿಡ್ ಸಮಯದಲ್ಲಿ ತಾಳ್ಮೆಯಿಂದ ಹೋಲ್ಡ್ ಮಾಡಿ, ಇನ್ನಷ್ಟು ಹಣವನ್ನು ಹಾಕಿ ದ್ವಿಗುಣಗೊಳಿಸಲು ಸಹಾಯ ಮಾಡಿತು. ಇಂಟರ್ನೆಟ್(internet) ಬದುಕಿನಲ್ಲಿ ಬಂದ ನಂತರ ಅದು ಅವರ ಅದೃಷ್ಟದ ಸಮಯವಾಗಿದೆ ಎಂದು ತಿಳಿಸುತ್ತಾರೆ.

ಅವರು 26 ವರ್ಷದಿಂದ ಈ ಹೂಡಿಕೆಯಲ್ಲಿ ಇರುವುದರಿಂದ, ಆಗಿನ ಸಮಯದಲ್ಲಿ ಇಂಟರ್ನೆಟ್ನ ಬಳಕೆ ಅಷ್ಟು ಇರಲಿಲ್ಲ. ಹೀಗಾಗಿ ಅವರಿಗೆ ಇದು ಅದೃಷ್ಟದ ಸಮಯವಾಗಿದೆ. ಇಂದು ನಾವು ನೋಡುವ ಅನೇಕ ಹಳೆ ಹೂಡಿಕೆದಾರರು ಈ ಇಂಟರ್ನೆಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡರು(adopt) ಮತ್ತು ಇದು ಅವರಿಗೆ ಆಟದ ಬದಲಾವಣೆಯಾಯಿತು(game change). ಇದಕ್ಕೂ ಮೊದಲು ಜನಗಳು ಕೈಯಾರೆ ಅನೇಕ ಆರ್ಥಿಕ ಪುಸ್ತಕಗಳನ್ನು ಓದುತ್ತಿದ್ದರು. ಆದರೆ ಇಂಟರ್ನೆಟ್ ಬಂದ ನಂತರ ಗೇಮ್ ಚೇಂಜ್ರ್ ಆಯಿತು. ಜನರು ಹೂಡಿಕೆಗೂ ಮೀರಿ ನೋಡಲು ಪ್ರಾರಂಭಿಸಿದರು. ಅಂದರೆ ಮೌಲ್ಯಮಾಪನವನ್ನು(valuation) ಬೇಗನೆ ಲೆಕ್ಕಾಚಾರ ಮಾಡುವುದೇಗೆ? ರೇಶಿಯೋಗಾಗಿ ಸ್ಪ್ರೆಡ್‌ಶೀಟ್‌ಗಳನ್ನು(spreadsheets) ಮಾಡುವುದು. ಈ ರೀತಿ ಸಾಕಷ್ಟು ವಿಷಯದ ಬಗ್ಗೆ ತಿಳಿದುಕೊಂಡರು.

ಇದನ್ನು ಓದಿ: "100 to 1 in the Stock Market" ಪುಸ್ತಕದ ಸಾರಾಂಶ

3. What is the compounding technique?

ಪ್ರತಿಯೊಬ್ಬರೂ ಷೇರು ಮಾರುಕಟ್ಟೆಯಲ್ಲಿ ಬೇಗನೆ ಹಣವನ್ನು ಗಳಿಸಲು ಬರುತ್ತಾರೆ ಎಂದು ಅವರು ಹೇಳುತ್ತಾರೆ. ಕಾಂಪೌಂಡಿಂಗ್(compounding) ನಿಮಗೆ ಬೇಗನೇ ಫಲಿತಾಂಶವನ್ನು ತೋರಿಸುವುದಿಲ್ಲ ಮತ್ತು ಇಲ್ಲೇ ಅನೇಕರು ತಪ್ಪನ್ನು ಮಾಡುತ್ತಾರೆ. ಅಂದರೆ ಅವರು ಎಚ್ಚರಿಕೆಯಲ್ಲಿ ಹೂಡಿಕೆಯನ್ನು ಮಾಡುವುದಿಲ್ಲ. ಅವರು ತಮ್ಮ ಉದ್ಯೋಗ, ವ್ಯಾಪಾರ ಮತ್ತು ಬದುಕಿನಿಂದ ಉದ್ವಿಗ್ನರಾಗಿರುವುದರಿಂದ ಬೇಗನೆ ಹಣ ಗಳಿಸುವ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಏಕೆಂದರೆ ಎಷ್ಟು ಬೇಗನೆ ಅವರು ಹಣವನ್ನು ಗಳಿಸುತ್ತಾರೋ, ಅಷ್ಟು ಬೇಗನೆ ಅವರ ಜೀವನದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಂಬಿರುತ್ತಾರೆ. ಇದು ಪ್ರತಿಯೊಬ್ಬರೂ ಮಾಡುವ ದೊಡ್ಡ ತಪ್ಪಾಗಿದೆ. ಇದರಿಂದಲೇ ಅನೇಕರು ಅಪಾಯಕಾರಿ ಹೂಡಿಕೆಗಳನ್ನು(risky investment) ಮಾಡುತ್ತಾರೆ.

4. Why are values important in life?

ನೀವು ಬದುಕಿನಲ್ಲಿ 3 ರಿಂದ 4 ವಿಷಯ ಕಲಿತ ನಂತರ ಮುಂದಿನ 20 ರಿಂದ 25 ವರ್ಷದಲ್ಲಿ ಅದರಿಂದ ಸಾಕಷ್ಟು ಹಣವನ್ನು ಗಳಿಸಬಹುದು ಎಂದು ಅವರು ಹೇಳುತ್ತಾರೆ. ಅದರಲ್ಲಿ ಮೊದಲನೆಯದ್ದು ಮೌಲ್ಯವಾಗಿದೆ(value). ನಾವು ಹಣಕ್ಕೆ ಮೌಲ್ಯವನ್ನು ನೀಡುವುದಿಲ್ಲ. ಕ್ರೆಡಿಟ್ ತೆಗೆದುಕೊಂಡು ಹಣವನ್ನು ವ್ಯರ್ಥ ಮಾಡುತ್ತಿರುತ್ತೇವೆ. ಅನೇಕರು ಬೇಗನೆ ಹಣವನ್ನು ಗಳಿಸಲು ಅಪಾಯಕಾರಿ ಹೂಡಿಕೆಗಳನ್ನು ಮಾಡುತ್ತಾರೆ. ಇಂಟ್ರಾಡೇ ಟ್ರೇಡಿಂಗ್(intraday trading) ಕೆಟ್ಟದ್ದು ಅಲ್ಲ. ಆದರೆ ನಿಮಗೆ ಅದರಲ್ಲಿ ಅಪಾಯವನ್ನು ನಿರ್ವಹಿಸಲು ಸಾಧ್ಯವಾಗಿಲ್ಲವೆಂದರೆ ಅದು ಒಳ್ಳೆಯದಲ್ಲ. ತ್ವರಿತ ಹಣ(quick money) ಕೆಟ್ಟದ್ದಲ್ಲ. ಇದರ ನಂತರ ನೀವು ಪಂಥ ಕಟ್ಟುವುದು(betting), ಜೂಜಾಡಿದರೆ(gambaling) ಅದು ಕೆಟ್ಟದಾಗಿದೆ.

what is money and its value in kannada
money value

ಹೀಗಾಗಿ ಮೊದಲು ನೀವು ಹಣದ ಮೌಲ್ಯವನ್ನು ತಿಳಿದುಕೊಳ್ಳಿ ನಂತರ ಅಪಾಯಕಾರಿ ಹೂಡಿಕೆಯಿಂದ ದೂರವಿರಿ. ನಿಮ್ಮನ್ನು ತರಬೇತು(educate) ಮಾಡಿಕೊಳ್ಳುತ್ತೀರಿ. ಯಾವಾಗಲೂ ಎಚ್ಚರಿಕೆಯಿಂದಿರಿ, "ನಾನು ಎಷ್ಟು ಹಣವನ್ನು ಮಾಡಬಹುದು" ಎಂದು ಯೋಚಿಸುವ ಬದಲು ಒಂದು ಆರ್ಥಿಕ ದುರಂತ(financial disaster) ಬಂದರೆ ಅದನ್ನು ಯಾವ ರೀತಿ ನಿರ್ವಹಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

ಇದನ್ನು ಓದಿ: ಪ್ರಮುಖ 7 ಹಣದ ಮೇಲಿನ ಪಾಠಗಳು

5. How do i get out of scarcity mentality?

ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ಕೊರತೆಯ ಮನಸ್ಥಿತಿಯಲ್ಲಿ(scarcity mindset) ಇದ್ದಾರೆ ಎಂದು ಅವರು ಹೇಳುತ್ತಾರೆ. ಕೊರತೆಯ ಮನಸ್ಥಿತಿ ಎಂದರೆ ಎಲ್ಲರಿಗೂ ಜಗತ್ತಿನಲ್ಲಿ ಹಣದ ಕೊರತೆ ಇದೆ. ಅವಕಾಶಗಳ(opportunity) ಕೊರತೆ ಇದೆ. ಇದರಿಂದಲೇ ಪ್ರತಿಯೊಬ್ಬರು ಇನ್ನೊಬ್ಬರ ಕಾಲನ್ನು ಎಳೆಯುತ್ತಿದ್ದಾರೆ.

ಅವರು ಸಾಮಾಜಿಕ ಮಾಧ್ಯಮವನ್ನು(social medium) ತುಂಬಾನೇ ಕಡಿಮೆ ನೋಡುತ್ತಾರೆ. ಏಕೆಂದರೆ ಮೀಡಿಯಾ ಇಂದು ತುಂಬಾನೇ ಋಣಾತ್ಮಕವಾಗಿದೆ(negative). ಇಂದು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷವನ್ನು(hate) ಅತಿಯಾಗಿ ಹರಡಿಸಲಾಗುತ್ತಿದೆ. ನೀವು ನಿಮ್ಮ ಹೂಡಿಕೆಗಾಗಿ ಸ್ವಾರ್ಥಿ(selfish) ಇರಲೇಬೇಕು. ಏಕೆಂದರೆ, "a negative mind cannot ever phosper as an investor". ಇದಕ್ಕಾಗಿ ಅವರು ರಾಕೇಶ್ ಜುಂಜುನ್ವಾಲಾ(rakesh jhunjhunwala) ಅವರ ಉದಾಹರಣೆ ನೀಡುತ್ತಾರೆ.

ರಾಕೇಶ್ ಅವರು ಭಾರತದ ವಿಷಯದಲ್ಲಿ ಯಾವಾಗಲೂ ಸಕಾರತ್ಮಕ ಇದ್ದರು. ಷೇರು ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಹಗರಣ(scam) ನಡೆಯುತ್ತಿದ್ದರು, ಅವರು ಯಾವಾಗಲೂ ಸಕಾರತ್ಮಕವಾಗಿ ಇರುತ್ತಿದ್ದರು. 2 ರಿಂದ 3 ದಶಕಗಳಲ್ಲಿ ಆರ್ಥಿಕ ತಪ್ಪುಗಳು(financial mistakes) ಆಗುತ್ತಿರುತ್ತವೆ. ಆದರೆ ನೀವು ಅವುಗಳಿಂದ ಯಾವಾಗಲು ಕಲಿಯುತ್ತಿರಬೇಕು. ಏಕೆಂದರೆ ನೀವು ಕಲಿತಷ್ಟು ವಿಕಸನಗೊಳ್ಳುತ್ತೀರಾ(evolve) ಮತ್ತು ಇದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು.

6. How can i get rich slowly investing?

how can i make a lot of money slowly in kannada
slowly rich

ನಿಧಾನವಾಗಿ ಶ್ರೀಮಂತರಾಗುವುದನ್ನು ನೀವು ಆಲಿಂಗನ(embrance) ಮಾಡಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ನೀವು ಅದನ್ನು ಅಳವಡಿಸಿಕೊಳ್ಳಬೇಕು. ನೀವು ತಾಳ್ಮೆಯಿಂದ ಇದ್ದು ಹೂಡಿಕೆಯ ಗುರಿಯಲ್ಲಿ ಸ್ಥಿರ(steady) ಇದ್ದಾಗ ಮಾತ್ರ ನಿಜವಾದ ಸಂಪತ್ತನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಹೂಡಿಕೆಯನ್ನು ಎಷ್ಟು ಸರಳ ಮಾಡಲು ಸಾಧ್ಯವೊ ಮಾಡಿಬಿಡಿ.

ಅವರು ಅಧಿಕ ಪುಸ್ತಕಗಳನ್ನು ಓದಲು ಮತ್ತು ಅನೇಕ ರೀತಿಯ ಅನುಪತಗಳ(ratio) ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲವೆನ್ನುತ್ತಾರೆ. ವಾರೆನ್ ಬಫೆಟ್(warren buffet) ರೀತಿಯ ಜನರು ಅವರ ಜ್ಞಾನವನ್ನು ಹೆಚ್ಚು ಮಾಡಿಕೊಳ್ಳಲು ಅಷ್ಟೊಂದು ಪುಸ್ತಕಗಳನ್ನು ಓದುತ್ತಾರೆ. ಆದರೆ ಅವರು ಮೂಲಭೂತ ನಿಯಮಗಳನ್ನು(fundamental rules) ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಾರೆ. ಉದಾಹರಣೆಗೆ ವಾರೆನ್ ಬಫೆಟ್ ಆಂತರಿಕ ಮೌಲ್ಯಕ್ಕಿಂತ(intrinsic value) ಕಡಿಮೆ ಇದ್ದರೆ ಸ್ಟಾಕ್ ಅನ್ನು ಖರೀದಿಸುತ್ತಾರೆ, ಅದಕ್ಕೆ ಮೀರಿದರೆ ಮಾರುತ್ತಾರೆ.

ಇದನ್ನು ಓದಿ: ಆರ್ಥಿಕವಾಗಿ ಸ್ವತಂತ್ರಗೊಳಿಸುವ 14 ಸ್ವತ್ತುಗಳು

7. What is patience in stock market?

does compounding work in stock market in kannada
compounding

ಕಾಂಪಾಂಡಿಂಗ್ ಎಂದಿಗೂ ರೇಖೀಯ(linear) ರೂಪದಲ್ಲಿ ಹೋಗುವುದಿಲ್ಲ. ಅಂದರೆ ಒಂದೇ ಗೆರೆಯಲ್ಲಿ ಹೋಗುವುದಿಲ್ಲ. ಅದರ ರಿಟರ್ನ್ಸ್ ನಿಶ್ಚಲವಿದ್ದು(stagnent) ಒಮ್ಮೆಲೆ ಗ್ರಾಫ್ ಮೇಲೆ ಹೋಗುತ್ತದೆ. ಆದರೆ ಅನೇಕರು ಅಲ್ಲಿಯ ತನಕ ಇರಬೇಕಾದ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ನಿಮ್ಮ ಹೂಡಿಕೆ, ಹಣ, ಸಂಬಂಧ, ಕೆಲಸ, ಷೇರು ಮಾರುಕಟ್ಟೆಯಲ್ಲಿ ಎಷ್ಟು ತಾಳ್ಮೆಯಿಂದ ಮತ್ತು ಉದಾರವಿರುವಿರೋ(generous) ಅಷ್ಟು ನಿಮಗೆ ಉತ್ತಮವಾಗಿದೆ.

8. Why 20s are the most important in terms of experiences?

ಅನೇಕರು ಸಂಖ್ಯೆಯನ್ನು(numbers) ಬೆನ್ನಟ್ಟುತ್ತಾರೆ ಎಂದು ಅವರು ಹೇಳುತ್ತಾರೆ. ಅಂದರೆ "ನನಗೆ 100 ಕೋಟಿ ಆಗಲಿ, 200 ಕೋಟಿ ಆಗಲಿ" ಎಂದು ಯೋಚಿಸುತ್ತಾರೆ. ಆದರೆ ಇದು ನಿಮಗೆ ಶಾಂತಿಯನ್ನು ನೀಡುವುದಿಲ್ಲ ಎಂದು ಅವರು ಹೇಳುತ್ತಾರೆ. ನಿಮ್ಮ 20s ಇಲ್ಲ 30s ನಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತೀರಾ. ನಿಮ್ಮ ಬದುಕಿನ ಅರ್ಧ ಭಾಗವನ್ನು ವಸ್ತುಗಳನ್ನು ಸಂಗ್ರಹಿಸುವಲ್ಲೇ ಕಳೆಯುತ್ತೀರಾ. ಇದಕ್ಕೆ ಒಂದು ಕಡೆ ನಮ್ಮ ಸಮಾಜವೇ ಕಾರಣವಾಗಿದೆ. ಏಕೆಂದರೆ ಇಲ್ಲಿ ಯಾರ ಹತ್ತಿರ ಎಷ್ಟು ಕಾರುಗಳಿವೆ, ಎಷ್ಟು ಬಂಗಲೆಗಳಿವೆ, ಎಷ್ಟು ಸಾಮಾಜಿಕ ಮಾಧ್ಯಮ ಫಾಲೋವರ್ಸ್ ಇದ್ದಾರೆ. ಈ ರೀತಿಯ ಮೌಲ್ಯಮಾಪನದಲ್ಲೇ(valuation) ನಿಮ್ಮ ಮೊದಲ ಭಾಗ ಕಳೆದು ಹೋಗುತ್ತದೆ. ಎರಡನೇ ಭಾಗ ಬಂದ ತಕ್ಷಣವೇ ನೀವು ಇವುಗಳು ಶಾಂತಿ ಪಡೆಯಲು ಅಗತ್ಯವಲ್ಲ ಎಂದು ತಿಳಿದುಕೊಳ್ಳುತ್ತೀರಾ. ಬದಲಿಗೆ ಇದು ನಿಮ್ಮ ಸಂತೋಷವನ್ನು ಕೊಲ್ಲಬಹುದು.

ಹೂಡಿಕೆದಾರರಾಗಿ ನೀವು ಮೊದಲು ಬದುಕುಳಿಯುವುದನ್ನು(survive) ಗುರಿ ಮಾಡಿಕೊಂಡಿರಬೇಕು ಎಂದು ಅವರು ಹೇಳುತ್ತಾರೆ. ಇದರ ನಂತರ ಸಂಪತ್ತನ್ನು ಗುಣಿಸುವುದು ಬರುತ್ತದೆ. ನೀವು ದೀರ್ಘವಧಿಯಲ್ಲಿ ಮಾರುಕಟ್ಟೆಯಲ್ಲಿ ಬದುಕುಳಿಯಲು ಸಾಧ್ಯವಾದರೆ, ನಿಮಗೆ ಎಷ್ಟು ಅನುಭವ ಆಗುತ್ತದೆ ಎಂದರೆ ಅಧಿಕ ಹಣವನ್ನು 4 ರಿಂದ 5 ವರ್ಷಗಳಲ್ಲೇ ಮಾಡುವಿರ.

ಏಕೆಂದರೆ ಇವರು ಕೂಡ ಮಾರುಕಟ್ಟೆಯಿಂದ ಸಂಪತ್ತನ್ನು ಹಂತಗಳಲ್ಲಿ ಮಾಡಿದ್ದಾರೆ ಹೊರತು ನಿರಂತರವಾಗಿ(continuosly) ಅಲ್ಲ. ಇವರು 4 ರಿಂದ 5 ವರ್ಷದಲ್ಲಿ ಅಧಿಕ ಸಂಪತ್ತನ್ನು ಮಾಡಿದ್ದಾರೆ. ಉಳಿದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬದುಕುಳಿಯುವುದು ಹೇಗೆ ಎಂಬುದರಲ್ಲೇ ಕಳೆದರು. ಹೀಗಾಗಿ ನೀವು ಕೂಡ ದೀರ್ಘಾವಧಿಗೆ ಮಾರುಕಟ್ಟೆಯಲ್ಲಿ ಬದುಕುಳಿಯುವ ಬಗ್ಗೆ ಯೋಚಿಸಿ. ಇದಕ್ಕಾಗಿ ಎಂದಿಗೂ ಸಾಲವನ್ನು ತೆಗೆದುಕೊಂಡು ಟ್ರೇಡ್ ಮಾಡಬೇಡಿ. ನೀವು ಸಾಲವನ್ನು ತೆಗೆದುಕೊಂಡು ಟ್ರೇಡ್ ಮಾಡಿದರೆ ಅದು ನೀವು ಮಾಡುವ ದೊಡ್ಡ ತಪ್ಪಾಗಿದೆ.

9. What are the top 3 priorities in life?

what are the top 3 priorities in life in kannada
priorities

ಇಂದಿನ ಸಮಾಜದಲ್ಲಿ ನಾವು ಯಾವುದಕ್ಕೆ ಆದ್ಯತೆ(priority) ನೀಡಬೇಕು. ನಾವು ಆರೋಗ್ಯ, ಸಂಬಂಧ, ಅಪಾಯ ನಿರ್ವಹಣೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ. ಏಕೆಂದರೆ ಇವುಗಳ ದೀರ್ಘಾವಧಿಯಲ್ಲಿ ಸಂಪತ್ತನ್ನು ಮಾಡಿಕೊಡುತ್ತವೆ. ಆದರೆ ನಾವು ಯಾವಾಗಲೂ ಹಣದ ಹಿಂದೆಯೇ ಓಡುತ್ತಿರುತ್ತೇವೆ.

10. What do you mean by continuous learning?

ಅವರು ಮುಂದುವರೆದ ಕಲಿಕೆಯ(continues learning) ಮೇಲೆ ಯಾವಾಗಲೂ ಗಮನ ಹರಿಸಬೇಕು ಹೇಳುತ್ತಾರೆ. ಇದು ವೈಯಕ್ತಿಕ ಮತ್ತು ವೃತ್ತಿಪರ(professional) ಬೆಳವಣಿಗೆಗೆ ತುಂಬಾನೇ ಪ್ರಮುಖವಾಗಿದೆ. ಅನೇಕರು ಕೇವಲ ವೃತ್ತಿಪರ ಬೆಳವಣಿಗಾಗಿ ಕಲಿಯುತ್ತಾರೆ. ಆದರೆ ಇದು ವೈಯಕ್ತಿಕ ಬೆಳವಣಿಗೆಗೂ ಮುಖ್ಯವಾಗಿದೆ. ಸ್ವಯಂ ಪ್ರತಿಫಲನ(self reflection) ಮಾಡುತ್ತಿರಬೇಕು. ಇವರು ತಮ್ಮ ಅನುಭವಗಳನ್ನು ಬರೆದಿಟ್ಟುಕೊಳ್ಳುತ್ತಾರೆ. ಯಾವುದೇ ರೀತಿಯ ವೀಕ್ಷಣೆ(obeservation) ಇದ್ದರೂ ಬರೆದಿಟ್ಟುಕೊಳ್ಳುತ್ತಾರೆ. ಇದು ಏಕೆಂದರೆ ನಮ್ಮ ಮೆದುಳಿನ ಜ್ಞಾಪಕ ಕ್ಷಮತೆ ಕಡಿಮೆ ಇರುತ್ತದೆ. ಹೀಗಾಗಿ ನಾವು ಎಷ್ಟು ಬರೆದಿಡಲು ಸಾಧ್ಯವೊ ಅಷ್ಟು ನೆನಪಿನಲ್ಲಿ ಇರುತ್ತದೆ.

ಇದನ್ನು ಓದಿ: "Secrets of the Millionaire Mind" ಪುಸ್ತಕದ ಸಾರಾಂಶ

Final lesson

ಕೊನೆಯದಾಗಿ ಅವರು ನೀವು ಅಧಿಕ ಹಣವನ್ನು ಮಾಡಲು ಬಯಸಿದರೆ ನಿಮ್ಮ ಹೂಡಿಕೆಯ ತಂತ್ರ ಎರವಲು(borrowed) ಆಗಿರಬಾರದು ಎಂದು ಹೇಳುತ್ತಾರೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಂದಾಣಿಕೆಯಾಗುವ ರೀತಿಯಲ್ಲಿ ಹೂಡಿಕೆಯ ತಂತ್ರಗಳನ್ನು ಮಾಡಿ. ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಸಿಗುವ ಸಲಹೆಗಳ ಮೇಲೆ ಹೂಡಿಕೆಯ ನೀತಿಯನ್ನು(policy) ಮಾಡುತ್ತಾರೆ. ನಿಮಗೆ ಹೂಡಿಕೆಯಲ್ಲಿ ಮುಂದುವರೆಯಬೇಕಿದ್ದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳಿ. ಇದರಲ್ಲಿ ಅಧಿಕ ಸಮಯ ಹೋಗುತ್ತದೆ. ನಾನು ಕೂಡ ನನ್ನ ವ್ಯಕ್ತಿತ್ವವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವು ವರ್ಷಗಳ ಹಿಂದಿಗಿಂತ, ಇಂದು ನನ್ನ ಬಗ್ಗೆ ನನಗೆ ತಿಳಿದಿದೆ. ಇದುವೇ ತುಂಬಾ ಪ್ರಮುಖವಾಗಿದ್ದು ಪ್ರತಿಯೊಬ್ಬ ಹೂಡಿಕೆದಾರನಿಗೆ ನಿರ್ಣಾಯಕವಾಗಿದೆ(crucial).

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments