Watch Video
ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ವೀರ್ಯದ(semen) ಮಹತ್ವ ಏನಾಗಿದೆ? ವೀರ್ಯ, ಇದರ ಕೆಲವು ಆಸಕ್ತಿಕರ ವಿಷಯದ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಹೀಗಾಗಿ ಲೇಖನವನ್ನು ಕೊನೆವರೆಗೂ ಓದಿ. ವೀರ್ಯ ಎಂದ ತಕ್ಷಣ ಕೆಲವರು ನಗಬಹುದು, ನಾಚಿಕೆ ಪಡಬಹುದು. ಆದರೆ ನಿಮ್ಮ ಭೂಮಿಯ ಮೇಲಿನ ಅಸ್ತಿತ್ವದ ಆಧಾರವೇ ವೀರ್ಯವಾಗಿದೆ. ಭೂಮಿ ಮೇಲೆ ಇರುವ ಎಲ್ಲ ಜೀವಿಗಳಿಗೆ ಕಾರಣ ಈ ವೀರ್ಯವಾಗಿದೆ. ವೀರ್ಯವನ್ನು ಉಳಿಸಿ ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಏನಾದರೂ ಬದಲಾವಣೆ ತರಬಹುದೇ? ಇದರ ಶಕ್ತಿ ಎಷ್ಟಿದೆ? ನಾವು ತಮ್ಮ ವೀರ್ಯವನ್ನು ಉಳಿಸಿ ಏನೇನು ಮಾಡಬಹುದು?
ವೀರ್ಯದ ಶಕ್ತಿಯ ಬಗ್ಗೆ ನಿಮಗೆ ಸುಳಿವು ನೀಡಬೇಕೆಂದರೆ, ಅದು ನಿಮ್ಮ ಒಳಗೆ ಇರುವ ಒಂದು ಅಣು ಶಕ್ತಿ(nuclear power) ಎನ್ನಬಹುದು. ನಿಮ್ಮ ದೇಹ ಮೂಳೆ - ಮಾಂಸದಿಂದ ಸಮೃದ್ಧವಾಗಿದೆ. ಇದರ ಶೇಕಡಾ 50ರಷ್ಟು ರಚನೆಗೆ ಕಾರಣ ಈ ವೀರ್ಯ ಅಲ್ಲವೇ! ಉತ್ತರ ಹೌದು. ನಾವು ಮತ್ತು ನಿಮ್ಮ ಅಸ್ತಿತ್ವ ವೀರ್ಯವಿಲ್ಲದಿದ್ದರೆ ಸಾಧ್ಯವೇ ಆಗುತ್ತಿರಲಿಲ್ಲ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುಭೂಮಿಯ ಮೇಲೆ ಜನಿಸಿದ ಮಹಾನ್ ಪುರುಷರು, ಮಹಾನ್ ಯೋಧರು ಅವರೆಲ್ಲರ ಅಸ್ತಿತ್ವದ ಕಾರಣ ವೀರ್ಯವೇ ಆಗಿದೆ. ನಮ್ಮಲ್ಲಿ 5 ಇಂದ್ರಿಯಗಳಿವೆ, ಅವುಗಳ ಮೂಲಕ ನಾವು ಸೆನ್ಸ್(sense) ಮಾಡುತ್ತೇವೆ. ನಮ್ಮ ಶರೀರದಲ್ಲಿರುವ ಶಕ್ತಿಗಿಂತ ನಮ್ಮ ಸಂಕೀರ್ಣ(complex) ಮೆದುಳು, ಇದು ಹೇಗೆ ಆಯಿತು?
ನಮ್ಮ ದೇಹದಲ್ಲಿ ಭೌತಿಕ ಮತ್ತು ಅಭೌತಿಕವಾಗಿ ಅನೇಕ ಸಂಭವನೆ ನಡೆಯುತ್ತವೆ. ಭೌತಿಕವಾಗಿ ನೀವು ನಿಮ್ಮ ಶರೀರದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನಿಮಗೆ ಇಷ್ಟವಾಗುವ ರೂಪಕ್ಕೆ ತರಬಹುದು. ಇದರ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಮೊದಲ ದಿನ ಜಿಮ್‌ನಲ್ಲಿ ಬಾಡಿ ಬಿಲ್ಡರ್ ಕಡಿಮೆ ತೂಕವನ್ನು ಎತ್ತುತ್ತಿರುತ್ತಾನೆ. ಆದರೆ ಬರ ಬರುತ್ತ ಕಠಿಣ ಅಭ್ಯಾಸದಿಂದ ಆತ ಅಧಿಕ ತೂಕವನ್ನು ಎತ್ತಲು ಪ್ರಾರಂಭಿಸುತ್ತಾನೆ. ಇದರ ಅರ್ಥ ಅವನು ತನ್ನ ಶರೀರದ ತಕತ್ತನ್ನು ಬದಲಿಸಿದ್ದಾನೆ. ಹೀಗೆ ಭೌತಿಕವಾಗಿ ನಮ್ಮ ದೇಹದಲ್ಲಿ ಹಲವಾರು ಕ್ಷಮತೆಗಳು ಇರುತ್ತವೆ.
ಆದರೆ ವೀರ್ಯದ ಶಕ್ತಿಯ ಸಾಮರ್ಥ್ಯ ಅಧಿಕವಾಗಿದೆ. ವೀರ್ಯ ಒಂದು ಹೊಸ ಜೀವವನ್ನು ಸೃಷ್ಟಿಸಬಹುದು. ಯಾವುದೇ ವ್ಯಕ್ತಿಯನ್ನು ಅಸ್ತಿತ್ವಕ್ಕೆ ತರಬಹುದು. ವೀರ್ಯವನ್ನು ಯೋಗಿಕ್ ಭಾಷೆಯಲ್ಲಿ "ವಜ್ರೋಲಿ(vajroli)" ಎನ್ನಲಾಗುತ್ತದೆ. ಅಂದರೆ ತುಂಬಾ ಕಠೋರ ಎಂದರ್ಥ. ನೀವು ವೀರ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ಕಲಿತರೆ, ಅದು ಈ ಜಗತ್ತಿನ ಶಕ್ತಿಶಾಲಿ ವಸ್ತುಗಳಲ್ಲಿ ಒಂದಾಗಿದೆ. ಇದು ಅದ್ಭುತವಾದ ಪರಿಣಾಮವನ್ನು ನೀಡುತ್ತದೆ. ಆದರೆ ಇದನ್ನು ನೀವು ಹೇಗೆ ಉಪಯೋಗಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಂತಿದೆ.
ನೀವು ಇದನ್ನು ಮಗುವನ್ನು ಹುಟ್ಟಿಸಲು ಬಳಸಬಹುದು ಅಥವಾ ಇದನ್ನು ಹಾಳು ಮಾಡಬಹುದು. ಆದರೆ ಈ ವೀರ್ಯವನ್ನು ದೇಹದಲ್ಲೇ ಉಳಿಸಿಕೊಂಡರೆ ಅದರ ತಾಕತ್ತು ಏನಾದರೂ ಇದೆಯೇ ಎಂಬ ಪ್ರಶ್ನೆ ನಿಮಗೆ ಬರಬಹುದು. ವೈಜ್ಞಾನಿಕವಾಗಿ ಇದರ ಉತ್ತರ ಇಲ್ಲವಾದರೂ ಆಯುರ್ವೇದದಲ್ಲಿ ಇದರ ತಾಕತ್ತಿನ ಬಗ್ಗೆ ತಿಳಿಸಲಾಗಿದೆ.
ಇದನ್ನು ಓದಿ: ಸಮಯ ನಿರ್ವಹಣೆಗೆ ಹತ್ತು ಸಲಹೆಗಳುನೀವು ದಿನನಿತ್ಯ ಕೆಲಸವನ್ನು ಮಾಡಲು ನಿಮ್ಮ ದೇಹದಲ್ಲಿ ಶಕ್ತಿ ರೂಪಗೊಳ್ಳುತ್ತದೆ. ನೀವು ಯಾವುದೇ ಕೆಲಸ ಮಾಡಲು ಈ ಶಕ್ತಿಯ ಅವಶ್ಯಕತೆ ಇದೆ. ಆದರೆ ನಿಮ್ಮ ದೇಹದಲ್ಲಿ ಒಂದು ವೀರ್ಯವನ್ನು ಮಾಡಲು ಬೇರೆ ತರಹದ ಶಕ್ತಿಯ ಬಳಕೆ ಆಗುತ್ತದೆ. ಆ ಶಕ್ತಿಯ ತಾಕತ್ತಿನ ಬಗ್ಗೆ ತಿಳಿಸಬೇಕೆಂದರೆ ಅದರಿಂದ ಒಂದು ಹೊಸ ಜನ್ಮವನ್ನು ನೀಡಬಹುದು.
ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳಿಗೆ ವೀರ್ಯ ಕೂಡ ಕಾರಣ ಆಗಿರಬಹುದು. ನೀವು ದಿನವಿಡೀ ಕೆಲಸ ಮಾಡಿ, ಇಲ್ಲ ವ್ಯಾಯಾಮ ಮಾಡಿದ ನಂತರ ನಿಮ್ಮ ದೇಹ ತುಂಬಾ ಸುಸ್ತಾಗುತ್ತದೆ. ಇದೇ ರೀತಿಯೇ ಕಾಮದ ನಂತರವೂ ನಿಮ್ಮ ದೇಹಕ್ಕೆ ಸುಸ್ತಾಗುತ್ತದೆ. ಇದರ ಅರ್ಥ ನೀವು ಒಮ್ಮೆ ಸಂಭೋಗ ಮಾಡಿದ ನಂತರ ನಿಮ್ಮ ದೇಹದ ಅಧಿಕ ಶಕ್ತಿ ಹೋಗುತ್ತದೆ ಮತ್ತು ಈ ಶಕ್ತಿಯ ಪ್ರಭಾವ ಬೇರೆ ರೀತಿಯಲ್ಲೇ ಆಗುತ್ತದೆ. ನಿಮಗೆ ಸುಸ್ತಾದ ಕಾರಣ ನಿದ್ದೆ ಬರುತ್ತದೆ. ಆಗಿದ್ದರೆ ನಿಮ್ಮ ದೇಹದಿಂದ ಎಷ್ಟು ಶಕ್ತಿಯನ್ನು ಹಾಳು ಮಾಡಿದ್ದೀರಿ ಎಂದು ಯೋಚಿಸಿ.
ಈಗ ಬರುವ ಪ್ರಶ್ನೆ ಏನೆಂದರೆ, ಇದನ್ನು ಆಧ್ಯಾತ್ಮಿಕವಾಗಿ ಹೇಗೆ ಬಳಸುವುದು? ನಿಮಗೆ ಕಾಮದ ಬಗ್ಗೆ ಯೋಚನೆ ಬಂದು ಸರಿಯಾಗಿ ವೀರ್ಯವನ್ನು ತಡೆದರೂ, ಅದು ಇನ್ನೂ ರಭಸವಾಗಿ ಹೊರಗೆ ಬರುತ್ತದೆ. ಇದನ್ನು ಸರಳವಾಗಿ ಹೇಳಬೇಕೆಂದರೆ ಇದು ನಿಮ್ಮ ನಿಯಂತ್ರಣದಲ್ಲಿ(control) ಇರುವುದಿಲ್ಲ. ಕೋಪಗೊಳ್ಳುವುದು ಇದನ್ನು ನಿಯಂತ್ರಿಸಲು ಇರುವ ಒಂದು ವಿಧಾನ ಎನ್ನಬಹುದು. ಒಬ್ಬ ವ್ಯಕ್ತಿ ತುಂಬಾ ಕೋಪಗೊಂಡಿದ್ದರೆ, ತುಂಬಾ ಆಕ್ರಮಣಕಾರಿ(aggreesive) ಆಗಿದ್ದರೆ, ಒಂದು ಕಡೆ ಅದರ ಕಾರಣ ವೀರ್ಯದ ತಡೆಗಟ್ಟುವಿಕೆ ಎನ್ನಬಹುದು. ಅವನು ವೀರ್ಯವನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುತ್ತಾನೆ. ಇದು ಪತಿ ಪತ್ನಿಯ ಜಗಳಕ್ಕೂ ಕಾರಣವಾಗಬಹುದು. ಆಗಿದ್ದರೆ ಈ ವೀರ್ಯದ ಶಕ್ತಿಯನ್ನು ಹೇಗೆ ರೂಪಾಂತರ(transform) ಮಾಡುವುದು?
ನೀವು ಯಾವುದೇ ಶಕ್ತಿಯನ್ನು ರೂಪಾಂತರ ಮಾಡಲು ಬಯಸಿದರೆ, ಮೊದಲು ಅದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ನೀವು ಇದನ್ನು ಅರ್ಥಮಾಡಿಕೊಂಡರೆ ವೀರ್ಯದ ಶಕ್ತಿಯನ್ನು ರೂಪಾಂತರ ಮಾಡಬಹುದು ಮತ್ತು ಸರಿಯಾಗಿ ಉಪಯೋಗಿಸಿಕೊಳ್ಳಬಹುದು. ಇದನ್ನು ಮಾಡಲು ಇರುವ ಮೊದಲ ರೀತಿ ಏನೆಂದರೆ ಧ್ಯಾನ. ನೀವು ಧ್ಯಾನ ಮಾಡುವಾಗ ನಿಮ್ಮ ಗಮನವನ್ನು ಈ ಮೂಲಾಧಾರದ ಮೇಲೆ ಇಡಿ. ಆ ಶಕ್ತಿ ಅಲ್ಲಿಂದಲೇ ಉತ್ಪನ್ನವಾಗುತ್ತದೆ.
ಇವು ಧ್ಯಾನ ಮಾಡುತ್ತಾ ಅಲ್ಲಿ ಗಮನಿಸುತ್ತಿರುವಾಗ ಅಲ್ಲಿನ ಶಕ್ತಿ ನಿಮ್ಮ ದೇಹದ ಮೇಲೆ ಅಂದರೆ ಮೆದುಳಿನ ಹತ್ತಿರ ಹೋಗುತ್ತದೆ ಎಂದು ನೀವು ಭಾವಿಸಬೇಕು. ಅದು ನಿಮ್ಮ ದೇಹದ ಬೆನ್ನಿನ ಮೂಳೆಯ ಭಾಗದಿಂದ ಹೋಗುತ್ತದೆ. ನೀವು ಪ್ರತಿದಿನ ಪದ್ಮಾಸನದಲ್ಲಿ ಕೂತು, ಈ ರೀತಿ ಧ್ಯಾನ ಮಾಡಿದರೆ ನಿಮ್ಮ ವೀರ್ಯದ ಶಕ್ತಿ ಮೆದುಳಿನ ಹತ್ತಿರ ಹೋಗುತ್ತದೆ. ಇದರಿಂದ ನಿಮ್ಮ ಬುದ್ಧಿಯ ವಿಕಸನವಾಗುತ್ತದೆ ಮತ್ತು ನೀವು ಸಾಮಾನ್ಯ ವ್ಯಕ್ತಿಯಿಂದ ಒಬ್ಬ ಬುದ್ಧಿಶಾಲಿ ವ್ಯಕ್ತಿಯಾಗಿ ಬದಲಾಗುತ್ತಿರ.
ಇನ್ನೊಂದು ರೀತಿ ನಿಮಗೆ ಕಾಮದ ಯೋಚನೆ ಬಂದರೆ ನೀವು ಧ್ಯಾನಕ್ಕೆ ಕೂತು ನಿಮ್ಮ ಉಸಿರಿನ ಮೇಲೆ ಗಮನ ಹರಿಸಿ. ನಿಮ್ಮ ಉಸಿರು ಒಳಗೆ ಹೋಗುವುದನ್ನು ಗಮನಿಸಿ, ಹೊರಗೆ ಬರುವುದನ್ನು ಗಮನಿಸಿ, ಹೀಗೆ ಗಮನಿಸುತ್ತಾ ಇರಿ. ಈ ರೀತಿ ಅಭ್ಯಾಸ ಮಾಡುತ್ತಿದ್ದರೆ ನಿಮ್ಮ ಕಾಮದ ಯೋಚನೆ ಹೋಗುತ್ತದೆ. ಆದರೆ ಇದರ ಕೆಲವು ವ್ಯಾಪ್ತಿ(range) ಇರುತ್ತದೆ. ಆ ವ್ಯಾಪ್ತಿ ದಾಟಿದ ನಂತರ ಇದು ಕೆಲಸ ಮಾಡುವುದಿಲ್ಲ. ಇದರ ಶಕ್ತಿಯ ಬಗ್ಗೆ ನಿಮಗೆ ಈ ರೀತಿ ಅರ್ಥ ಮಾಡಿಸುತ್ತಿದ್ದೇವೆ.
ಅತ್ಯಂತ ಬುದ್ಧಿಶಾಲಿಯಾದ ಸ್ವಾಮಿ ವಿವೇಕಾನಂದರು ಕೆಲವೇ ಗಂಟೆಗಳಲ್ಲಿ ಎಷ್ಟೆಷ್ಟು ದೊಡ್ಡ ದೊಡ್ಡ ಪುಸ್ತಕಗಳನ್ನು ಓದಿ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಅಮೇರಿಕದಲ್ಲಿ ಅವರು ಅವರ ಬುದ್ಧಿಯ ಒಂದು ಒಳ್ಳೆಯ ಪ್ರದರ್ಶನ ನೀಡಿದರು. ಅದು ಇಡೀ ಜಗತ್ತನ್ನೇ ಬೆರಗುಗೊಳಿಸಿತು. ಅವರಿಗೆ ಈ ಶಕ್ತಿ ಅವರ ವೀರ್ಯದ ಶಕ್ತಿಯೆಂದಲೇ ಬಂದಿರಬಹುದು ಮತ್ತು ಅವರೊಬ್ಬ ಅಸಾಧಾರಣ ವ್ಯಕ್ತಿ ಆದರು.
ನೀವು ಇತಿಹಾಸದ ಪುಸ್ತಕ ತೆರೆದರೆ ಅನೇಕ ಬ್ರಹ್ಮಚಾರಿಗಳು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರ ಹತ್ತಿರ ಇತರರಿಗಿಂತ ವಿಭಿನ್ನ ಶಕ್ತಿ ಇದ್ದವು. ಇದರಲ್ಲಿ ಪಟ್ಟಿ(list) ತುಂಬ ದೊಡ್ಡದಿದೆ. ಅದರಲ್ಲಿ ಕೆಲವರ ಬಗ್ಗೆ ತಿಳಿಸಬೇಕೆಂದರೆ ಬಾಬಾ ಲೋಕನಾಥ್, ಸ್ವಾಮಿ ವಿವೇಕಾನಂದ, ಓಶೋ, ಸದ್ಗುರು ಇತ್ಯಾದಿ. ನೀವು ಹೋಗಿ ಇವರ ಜೀವನದ ಬಗ್ಗೆ ರಿಸರ್ಚ್ ಮಾಡಿದರೆ ನಿಮಗೆ ಇವರ ಒಂದು ವಿಶಿಷ್ಟ ವಿಷಯದ ಬಗ್ಗೆ ತಿಳಿಯುತ್ತದೆ.
ಮಹಾನ್ ಬುದ್ಧ ಕೂಡ ಬ್ರಹ್ಮಚರ್ಯವನ್ನು ಪಾಲನೆ ಮಾಡಿದರು. ಅವರು ಮೊದಲಿಗೆ ವಿವಾಹಿತರಾಗಿ ಒಂದು ಮಗುವನ್ನು ಹೊಂದಿದ್ದರು. ಆದರೆ ಅವರು ತಮ್ಮ ಅರಮನೆಯನ್ನು ತೊರೆದು ಸತ್ಯವನ್ನು ಹುಡುಕಲು ಹೊರಟಾಗ, ಅವರು ಸನ್ಯಾಸಿ ಆಗಿ ಬ್ರಹ್ಮಚರ್ಯದ ಪಾಲನೆ ಮಾಡಿದರು. ಹಾಗಂತ ಇದಕ್ಕೆ ನೀವು ಬ್ರಹ್ಮಚರ್ಯವನ್ನು ಪಾಲಿಸಲೇಬೇಕು ಎನ್ನುವಂತಿಲ್ಲ. ವಿವಾಹಿತರಾದ ಅನೇಕ ಜನರೂ ಕೂಡ ಅವರ ಬುದ್ಧಿಯ ವಿಕಸನ ಮಾಡಿಕೊಂಡಿರುವ ಅನೇಕ ಉದಾಹರಣೆಗಳಿವೆ. ಆದರೂ ಬ್ರಹ್ಮಚರ್ಯದಲ್ಲಿ ಇರುವವರು ಇದರಲ್ಲಿ ತುಂಬಾ ಮುಂದುವರಿದಿದ್ದಾರೆ ಎಂಬುದು ನಮ್ಮ ನಂಬಿಕೆಯಾಗಿದೆ. ನೀವು ಈ ಟ್ರಿಕ್ಕನ್ನು ಒಮ್ಮೆ ಪರೀಕ್ಷಿಸಿ ನೋಡಿದರೆ ನಿಮ್ಮಲ್ಲೇ ಆಗುವ ಬದಲಾವಣೆ ಬಗ್ಗೆ ಅರಿತುಕೊಳ್ಳುತ್ತೀರಿ. ನಿಮಗೆ ಎಲ್ಲ ಪ್ರಶ್ನೆಗೆ ಉತ್ತರ ಸಿಗುತ್ತಾ ಹೋಗುತ್ತದೆ. ನಿಮ್ಮ ಬುದ್ಧಿಯ ವಿಕಸನವಾಗುತ್ತದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.
See all comments...
kirankumar b • September 30th,2022
Good information