Watch Video
ಎಲೋನ್ ಮಸ್ಕ್(elon musk) ಅವರಿಗೆ ಅವರ ಫೋನಿನ ದಿನದ ಪರದೆಯ ಸಮಯ(screentime) ಎಷ್ಟು ಎಂದು ಕೇಳಲಾಯಿತು. ಇದರ ಉತ್ತರ ಏನ್ನಿರಬಹುದು? ಎಲೋನ್ ಮಸ್ಕ್, 21.8 ಕೋಟಿಗಿಂತ ಹೆಚ್ಚು ಅನುಯಾಯಿಗಳು ಇರುವ, ದಿನದಲ್ಲಿ 4 ಬಾರಿ ಟ್ವೀಟ್ ಮಾಡುವ, ನ್ಯೂರಲಿಂಕ್(neuralink), ಸ್ಪೇಸ್ ಎಕ್ಸ್(spacex) ಮತ್ತು ಟೆಸ್ಲಾ(tesla) ರೀತಿಯ ಕಂಪನಿಯನ್ನು ನಿರ್ವಹಿಸುತ್ತಿದ್ದಾರೆ. ಅವರ ಪರದೆಯ ಸಮಯ ಎಷ್ಟಿರಬಹುದು. ಇದಕ್ಕೆ ಎಲೋನ್ ಮಸ್ಕ್ ಹಿಂಜರಿದು(hesitate), "ತುಂಬಾ ಕೆಟ್ಟದಾಗಿದೆ" ಎಂದು ಹೇಳುತ್ತಾರೆ. ಅವರು, "ಕೇವಲ ಒಂದು ಗಂಟೆ" ಎನ್ನುತ್ತಾರೆ. ಇದಕ್ಕೆ ಸಂದರ್ಶಕ(interviewer) ಆಶ್ಚರ್ಯಗೊಂಡು, "ಅದು ಸುಳ್ಳು" ಎನ್ನುತ್ತಾನೆ. ಎಲೋನ್ ಮಸ್ಕ್ ಆತನಿಗೆ ತನ್ನ ಫೋನಿನ ಸ್ಕ್ರೀನ್ ಟೈಮ್ ತೋರಿಸಿದರು ಅದು 1 ನಿಮಿಷವಿತ್ತು.
ಸಾಮಾಜಿಕ ಮಾಧ್ಯಮದ ರಾಜ ಆಗಿರುವ, ಅನೇಕ ವ್ಯಾಪಾರಗಳು ಆನ್ಲೈನ್ ಇರುವ, ಯಾವಾಗಲೂ ಸುದ್ಧಿಯಲ್ಲಿ ಇರುವ ಎಲೋನ್ ಮಸ್ಕ್ ಸ್ವತಃ ಮೊಬೈಲ್ ಮೇಲೆ ಅಧಿಕ ಕಡಿಮೆ ಸಮಯವನ್ನು ವ್ಯಯ ಮಾಡುತ್ತಾರೆ. ಇದಕ್ಕಿಂತ ಆಶ್ಚರ್ಯವೆಂದರೆ ಎಲೋನ್ ಮಾಸ್ಕ್ ಅವರ ಅಧಿಕೃತ ಇನ್ಸ್ಟಾಗ್ರಾಮ್(instagram) ಖಾತೆಯು ಇಲ್ಲ. ಆದರೂ ಎಲೋನ್ ಮಾಸ್ಕ್, "ನಾನು ಒಂದು ಖಾಸಗಿ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದೇನೆ. ಅದು ಕೇವಲ ನನ್ನ ಕುಟುಂಬ ಮತ್ತು ಗೆಳೆಯರೂ ಕಳುಹಿಸುವ ಲಿಂಕ್ ನೋಡಲು ಇದೆ" ಎನ್ನುತ್ತಾರೆ. ಅದನ್ನು ಅವರು ಬಹಳ ಸಲ್ಪ ಸಮಯ ಬಳಸುತ್ತಾರೆ.
ಇದನ್ನು ಓದಿ: [TOXIC]ವಿಷಕಾರಿ ಜನರು ಹೇಗೆ ನಿಯಂತ್ರಣ ಮಾಡುತ್ತಾರೆನೀವು ಕಚೇರಿಯಿಂದ(office) ಸುಸ್ತಾಗಿ ಸಂಜೆ ಮನೆಗೆ ಬರುತ್ತೀರಾ ಎಂದು ಊಹಿಸಿ. ನೀವು ಒಂದು ಆಸಕ್ತಿದಾಯಕ ಮನೋಭಾವದಲ್ಲಿ(interesting attitude) ಮನೆಗೆ ಬರುತ್ತೀರಾ. ನೀವು ಕೆಲಸ ಮಾಡಲು ಪ್ರಾರಂಭಿಸುತ್ತೀರಾ. ಆಗ ಇನ್ಸ್ಟಾಗ್ರಾಮ್ ನಲ್ಲಿ "someone liked your post" ಎಂದು ನೋಟಿಫಿಕೇಶನ್ ಬರುತ್ತದೆ. ನೀವು, "ಯಾರು ನನ್ನ ಪೋಸ್ಟನ್ನು ಲೈಕ್ ಮಾಡಿದರು" ಎಂದು ಯೋಚಿಸುತ್ತೀರಾ. ನೀವು ಇನ್ಸ್ಟಾಗ್ರಾಮ್ ಓಪನ್ ಮಾಡಿ, ನಿಮ್ಮ ಗೆಳೆಯ ಪೋಸ್ಟ್ಗೆ ಲೈಕ್ ನೀಡಿರುವುದನ್ನು ನೋಡುತ್ತೀರಾ. ಆಗ ನಿಮಗೆ ಅದರಲ್ಲಿ ಒಂದು ಆಸಕ್ತಿದಾಯಕ ರೀಲ್ ಕಾಣಿಸುತ್ತದೆ ಮತ್ತು ನೀವು ಅದನ್ನು ಸ್ಕ್ರೋಲ್ ಮಾಡುತ್ತಾ ನೋಡುತ್ತಿರುತ್ತೀರಾ.
ಹೀಗೆ ಸಲ್ಪ ಸಮಯದ ನಂತರ ನಿಮ್ಮ ತಾಯಿ ಅಥವಾ ಹೆಂಡತಿ, "9:30 ಆಯಿತು, ಊಟ ತಯಾರಿದೆ, ನೀನು ಬಟ್ಟೆಯನ್ನು ಬದಲಾಯಿಸಲಿಲ್ಲ, ಬರೀ ಫೋನ್ನಲ್ಲಿ ಮುಳುಗಿರುತ್ತೀಯ" ಎಂದು ಹೇಳುತ್ತಾರೆ. ನೀವು ಒಂದು ಕ್ಷಣ ನಿಂತು ಗಡಿಯಾರದ ಕಡೆ ನೋಡುತ್ತೀರಾ. 9:30 ಆಗಿರುವುದನ್ನು ನೋಡಿ ಆಶ್ಚರ್ಯಗೊಳ್ಳುತ್ತೀರ ಮತ್ತು, "ಕೆಲಸವನ್ನೇ ಮಾಡುತ್ತಿದೆ" ಎನ್ನುತ್ತೀರಾ. ಆಗ ಮನೆಯವರು, "ನಮಗೂ ಸ್ವಲ್ಪ ಸಮಯ ನೀಡು" ಎನ್ನುತ್ತಾರೆ. ನೀವು ಅದಕ್ಕೆ, "ಸರಿ ಕೇವಲ ಕಚೇರಿಯ ಕೆಲಸವನ್ನೇ ಮಾಡುತ್ತಿದೆ" ಎನ್ನುತ್ತೀರಾ. ಆದರೆ ನಿಮಗೆ ಇದೆಲ್ಲಾ ಸುಳ್ಳು ಎಂದು ತಿಳಿದಿದೆ. ನೀವು ನಿಮಗಾಗಿ ಪ್ರತಿಜ್ಞೆ ಮಾಡುತ್ತೀರಾ, ಎದ್ದು ಶೌಚಾಲಯಕ್ಕೆ(washroom) ಹೋಗಿ, "ನಾಳೆಯಿಂದ ಈ ರೀತಿ ಮಾಡುವುದಿಲ್ಲ" ಎನ್ನುತ್ತೀರಾ. ಆದರೆ ನಂತರವೂ ಅದೇ ಸೈಕಲ್ ಪುನರವರ್ತನೆಯಾಗುತ್ತದೆ. ಒಂದೊಂದು ಸ್ವೈಪ್(swipe) ನಂತರ ನಿಮ್ಮ ಜೀವನದ ಒಂದೊಂದು ಭಾಗವು ಖಾಲಿಯಾಗುತ್ತಿದೆ.
ನೀವು 100 ವರ್ಷದವರಾಗಿದ್ದೀರಾ ಎಂದುಕೊಳ್ಳಿ. ಯಮರಾಜ ನಿಮ್ಮ ಹತ್ತಿರ ಬಂದು ನಿನ್ನನ್ನು ಕರೆದುಕೊಂಡು ಹೋಗುವ ಮೊದಲು, "ಎಲ್ಲಿ ಎಲ್ಲಿ ಸಮಯ ಕಳೆದಿರುವೆ ನೋಡೋಣ" ಎನ್ನುತ್ತಾರೆ. ಅದರಲ್ಲಿ 100 ರಲ್ಲಿ 33 ವರ್ಷ ನಿದ್ದೆಯಲ್ಲಿ ಹೋಗಿದೆ, 7 ವರ್ಷ ಶೌಚಾಲಯ ಅಥವಾ ಪ್ರಯಾಣದಲ್ಲಿ ಹೋಗಿದೆ, 15 ವರ್ಷ ಟಿವಿ ಮತ್ತು ಮೊಬೈಲ್ ಅನ್ನು ಸ್ಕ್ರೋಲ್ ಮಾಡುವುದರಲ್ಲಿ ಹೋಗಿದೆ, 4 ವರ್ಷ ಕುಟುಂಬದ ಜೊತೆ ಮತ್ತು ನಿನ್ನ ಕನಸಿನ ಕೆಲಸದ ಮೇಲೆ 1 ಅಥವಾ 2 ವರ್ಷ ಕಳೆದಿರುತ್ತೀರಾ. ಅಂದರೆ ಗರಿಷ್ಟ ಸಮಯ ನೀವು ಸ್ಕ್ರೋಲ್ ಮಾಡುತ್ತಿದ್ದೀರಿ ಅಷ್ಟೇ, ನೀವು ಆಗ, "ನಾನು ಬದುಕಿದಾದರೂ ಯಾವಾಗ" ಎಂದು ಯೋಚಿಸುತ್ತೀರಾ.
ನೀವು ನಿಮ್ಮ ಕನಸಿನ ಜೀವನವನ್ನು ನಡೆಸಲು ಯಮರಾಜನಿಗೆ ಒಂದು ಅವಕಾಶಕ್ಕಾಗಿ ಬೇಡಿಕೊಳ್ಳುತ್ತೀರಾ. ನೀವು ಅಧಿಕ ಕೇಳಿಕೊಂಡ ನಂತರ ಅವರು ಒಪ್ಪುತ್ತಾರೆ. "ಆದರೆ ಈ ಬಾರಿ ನಿನ್ನ ಬದುಕನ್ನು ವ್ಯರ್ಥ ಮಾಡಬೇಡ" ಎನ್ನುತ್ತಾರೆ. ನೀವು ಭೂತಕಾಲಕ್ಕೆ ಹೋಗಿ, ಈಗಿನ ವಯಸ್ಸಿಗೆ ಬರುತ್ತೀರಾ. ನಿಮ್ಮ ಕಣ್ಣಿನಿಂದ ನೀರು ಬರುತ್ತಿದೆ. ನಿಮಗೆ ಬೇಕಾದ ಒಂದು ಅವಕಾಶ ದೊರೆತಿದೆ. ನಿಮ್ಮ ಆ ಸಮಯ ಈಗ ಪ್ರಾರಂಭವಾಗುತ್ತಿದೆ.
ಯಮರಾಜನಿಂದ 2ನೇ ಅವಕಾಶ ತೆಗೆದುಕೊಂಡು ನೀವು ಮನೆಗೆ ಬಂದು ಈ ಪರದೆಯ ಸಮಯಕ್ಕೆ ಏನು ಮಾಡಬೇಕೆಂದು ಯೋಚಿಸುತ್ತೀರಾ? ಮತ್ತು ಈ ಸಂಶೋಧನಾ ಪ್ರಬಂಧ(research paper) ನೋಡುತ್ತೀರಾ. ಇದರಲ್ಲಿ ಇರುವ ವಿಷಯಗಳನ್ನು ಓದಿ ನಿಮಗೆ ಆಶ್ಚರ್ಯವಾಗುತ್ತದೆ. ಇದರಲ್ಲಿ 11,800 ಮಕ್ಕಳ ಮೇಲೆ 2 ವರ್ಷ ಅಧ್ಯಯನ ಮಾಡಲಾಗಿತ್ತು. ಇವರ ಮಾನಸಿಕ ಆರೋಗ್ಯ, ಮೆದುಳಿನ ಸ್ಕ್ಯಾನ್, ಮ್ಯಾಗ್ನೆಟಿಕ್ ರೆಸೋನೆನ್ಸ್ ಆಂಜಿಯೋಗ್ರಫಿಯನ್ನು(MRA) ಸ್ಕ್ಯಾನ್ ಮಾಡಲಾಯಿತು. ಕೆಲವು ಮಕ್ಕಳು ಟಿವಿ ಇಲ್ಲ ರೀಲ್ಸ್ ನೋಡುತ್ತಿದ್ದರು, ಕೆಲವರು ವೀಡಿಯೋ ಗೇಮ್ಸ್ ಮತ್ತು ಕೆಲವರು ಸಾಮಾಜಿಕ ಮಾಧ್ಯಮ ನೋಡುವುದರಲ್ಲೇ ಸಮಯ ಕಳೆಯುತ್ತಿದ್ದರು. ಹೀಗಾಗಿ ಈ ಸಂಶೋಧನೆಗಳು ಈ ಮಕ್ಕಳನ್ನು 3 ವಿಧಗಳಾಗಿ ಭಾಗ ಮಾಡುತ್ತಾರೆ.
ಮೊದಲನೆಯದಾಗಿ, ನಿಷ್ಕ್ರಿಯ ಸ್ಕ್ರೋಲಿಂಗ್(passive scrolling) ಅಂದರೆ ಅತಿಯಾಗಿ ತೊಡಗಿಸಿಕೊಳ್ಳದೆ ಕೇವಲ ಸ್ಕ್ರೋಲ್ ಮಾಡುತ್ತಿರುವ ಮಕ್ಕಳು. ಅಂದರೆ ಇವರುಗಳು ಯಾವುದೇ ಪೋಸ್ಟ್ ಇಲ್ಲ ಕಮೆಂಟ್ ಮಾಡುತ್ತಿಲ್ಲ. ಬದಲಿಗೆ ರೀಲ್ಸ್ಗಳನ್ನು ನೋಡುತ್ತಿರುವವರಷ್ಟೇ. ಇವರಗಳ ಮುಖ್ಯ ನಡವಳಿಕೆ ನಿಯಮ ಉಲ್ಲಂಘನೆಯಾಗಿದೆ(rule breaking). ಅಂದರೆ ಇವರು ಶಾಲೆಯನ್ನು ಬಂಕ್ ಮಾಡುವವರು, ಸುಳ್ಳು ಹೇಳುವವರಾಗಿದ್ದಾರೆ.
ಎರಡನೆಯದಾಗಿ ಅತಿಯಾಗಿ ವೀಡಿಯೋ ಗೇಮ್ಸ್ ಆಡುವ ಮಕ್ಕಳು. ದಿನಕ್ಕೆ 3 ಗಂಟೆಗೂ ಅಧಿಕ ವೀಡಿಯೋ ಗೇಮ್ಸ್ ಆಡುವ ಮಕ್ಕಳು ಒಂಟಿತನವನ್ನು(loneliness) ಅನುಭವಿಸುತ್ತಿದ್ದರು. ಅವರಿಗೆ ಅಧಿಕ ಗಾಬರಿಯಾಗುತ್ತದೆ ಮತ್ತು ಒತ್ತಡದಿಂದ(pressure) ತುಂಬಿರುತ್ತಾರೆ. ಅವರ ಮೆದುಳಿನ ಮೆಮೊರಿಗೆ ಕಾರಣವಾದ ಹಿಪೊಕ್ಯಾಂಪಸ್(hippocampus) ಭಾಗವು ಕುಗ್ಗುತ್ತಿರುತ್ತದೆ(shrink).
ಇನ್ನು ಮೂರನೇಯದಾಗಿ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯುವ ಮಕ್ಕಳು. ಇವರುಗಳು ಅಧಿಕ ಬಹುಕಾರ್ಯ(multitask) ಮಾಡುವವರಾಗಿದ್ದಾರೆ, ಅಂದರೆ ಇನ್ಸ್ಟಾಗ್ರಾಮ್(instagram), ವಾಟ್ಸಪ್ಪ್(whatsapp), ನೆಫ್ಲಿಕ್ಸ್ (netflix) ಎಲ್ಲವನ್ನು ಒಮ್ಮೆಲೇ ಬಳಸುತ್ತಿದ್ದರು. ಇವರು ಬದುಕಿನಲ್ಲಿ ತುಂಬಾ ಗೊಂದಲಗಳಿಂದ(distractions) ಕೂಡಿದ್ದರು. ಇದರಿಂದ ಇವರಿಗೆ ಇತರರ ಜೊತೆ ಭಾವನಾತ್ಮಕ ಬಾಂಧವ್ಯ(emotional bonding) ಬೆಳೆಸಿಕೊಳ್ಳಲು ಕಷ್ಟವಾಗಿತ್ತು. ಹಾಗಿದ್ದರೆ ಇವುಗಳ ಪರಿಹಾರವೇನು?
ಇದನ್ನು ಓದಿ: ಕೇಂದ್ರೀಕೃತ ಯಶಸ್ಸನ್ನು ಸಾಧಿಸಲು Deep Work ನ ಅಗತ್ಯ ನಿಯಮಗಳುಒಬ್ಬ ಉದ್ಯಮಿಯನ್ನು(entrepreneur) ಭೇಟಿ ಮಾಡಿದೆ. ಅವರ ತತ್ವಶಾಸ್ತ್ರ(philosophy), ಆಲೋಚನಾ ವಿಧಾನದ(thinking way) ಬಗ್ಗೆ ತಿಳಿದುಕೊಂಡೆ. ಅವರು ನನ್ನ ಬಗ್ಗೆ ಕೇಳಿದಾಗ ಮಾಹಿತಿ ತಾಣ(mahithi thana) ವೆಬ್ಸೈಟ್, ಇನ್ಫೋ ಮೈಂಡ್(info mind) ಬಗ್ಗೆ ತಿಳಿಸಿದೆ. ಅವರಿಗೆ ಸಂತೋಷವಾಯಿತು. ಅವರು ಚಾನಲ್ ಅನ್ನು ಹುಡುಕಲು ಹೋದರು. ಇದಕ್ಕಾಗಿ ಅವರು ಕ್ರೋಮ್ ಬ್ರೌಸರ್(chrome browser) ತೆರೆದು, ಅಜ್ಞಾತ ಟ್ಯಾಬ್(incognito tab) ತೆರೆದು, ಅಲ್ಲಿ ಯೂಟ್ಯೂಬ್ ತೆರೆದು, ನಮ್ಮ ಚಾನೆಲ್ನ ಹೆಸರನ್ನು ಟೈಪ್ ಮಾಡಿದರು. ನಾನು ಇದನ್ನು ನೋಡಿ ತುಂಬಾ ಉತ್ಸಾಹಭರಿತನಾಗಿ, "ಅಜ್ಞಾತ ಟ್ಯಾಬ್(incognito tab) ಏಕೆ ತೆರೆದಿರಿ" ಎಂದು ಕೇಳಿದೆ.
ಅದಕ್ಕೆ ಅವರು, "ನನಗೆ ಈ ಸಾಮಾಜಿಕ ಮಾಧ್ಯಮದ ಅಲ್ಗಾರಿದಮ್(algorithm) ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದಿದೆ. ಒಮ್ಮೆ ನೀವು ಮುಖ್ಯ ವಿಷಯದಿಂದ(main content) ದಾರಿ ತಪ್ಪಿ ಇತರ ವಿಷಯಗಳನ್ನು ನೋಡಿದರೆ, ಈ ಅಲ್ಗಾರಿದಮ್ ಪದೇ ಪದೇ ಆ ವಿಷಯಗಳನ್ನು ನಿಮಗೆ ತೋರಿಸುತ್ತವೆ ಮತ್ತು ನೀವು ನಿಮಗೆ ಬೇಕಿರುವ ವಿಷಯ ನೋಡುವುದರಿಂದ ದಾರಿ ತಪ್ಪುವ ಬಗ್ಗೆ ತಿಳಿಯುವುದಿಲ್ಲ. ನಾನು ಕೇವಲ ವ್ಯವಹಾರ(business) ಮತ್ತು ತಂತ್ರಜ್ಞಾನಕ್ಕೆ(technology) ಸಂಬಂಧಿಸಿದ ವಿಷಯಗಳನ್ನು ನೋಡಲು ಒಂದು ಹೊಸ ಇಮೇಲ್ ಐಡಿ ಮಾಡಿದ್ದೇನೆ. ಇದರಿಂದ ನನ್ನ ಮನಸ್ಸು ಅದರ ಮೇಲೆ ಗಮನ ಹರಿಸುತ್ತದೆ. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳು ನನಗೆ ವ್ಯವಹಾರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ತೋರಿಸುತ್ತವೆ. ಇದರಿಂದ ನಾನು ಅಧಿಕ ಗಮನ ಹರಿಸಬಹುದು" ಎಂದು ಹೇಳಿದರು. ಇದುವೇ ನಮ್ಮ ಮೊದಲನೇ ಕಲಿಕೆಯಾಗಿದೆ. ಅದೆಂದರೆ ನಾವು ನಮ್ಮ 2 ಇಮೇಲ್ ಐಡಿ ಮಾಡಬೇಕು.
ಮೊದಲನೇ ಇಮೇಲ್ ಐಡಿಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನೀವು ಸಾಧಿಸಬೇಕಿರುವ ವಿಷಯಗಳು ಇರಲಿ. ಇನ್ನೊಂದು ಇಮೇಲ್ ಐಡಿಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮನರಂಜನೆ(entertainment) ವೀಡಿಯೋಗಳನ್ನು ನೋಡಲು ಇರಲಿ. ಇದರಿಂದ ನಾವು ಯಾವಾಗಲೂ ಗಮನ ಹರಿಸುತ್ತೇವೆ. ಆದರೆ ಮೊದಲ ಇಮೇಲ್ ಐಡಿಯಾ ಸಾಮಾಜಿಕ ಮಾಧ್ಯಮವನ್ನು ಶುದ್ಧವಾಗಿ ಸಾಧಿಸಲು ಬೇಕಿರುವ ವಿಷಯಗಳನ್ನು ನೋಡಲು ಬಳಸಬೇಕು. ಇದರಲ್ಲಿ ಯಾವುದೇ ರೀತಿಯ ಬೇಡದ ಲಿಂಕ್(unwanted link) ಮೇಲೆ ಕ್ಲಿಕ್ ಮಾಡಬೇಡಿ. ಇದರಿಂದ ಮೆದುಳಿನಲ್ಲಿ ಒಂದು ಪ್ರತಿಕ್ರಿಯೆ ಲೂಪ್(feedback loop) ಸಕ್ರಿಯವಾಗಿ ಲಿಂಕನ್ನು ಕ್ಲಿಕ್ ಮಾಡಲೇ ಇಲ್ಲ ಬೇಡವೇ ಎಂದು ಯೋಚಿಸುತ್ತದೆ.
ನಿಮಗೆ Ai ಮೇಲೆ ಅಧಿಕ ಆಸಕ್ತಿ ಇದೇ ಎಂದುಕೊಳ್ಳಿ. ನೀವು ಆ ಮೊದಲ ಇಮೇಲ್ ಐಡಿಯ ಯೂಟ್ಯೂಬ್ನಲ್ಲಿ, "what is an Ai agent" ಎಂದು ಟೈಪ್ ಮಾಡುತ್ತೀರಾ. ನಿಮಗೆ ಹಲವಾರು ಸಂಬಂಧಿತ ವೀಡಿಯೋಗಳು ಸಿಗುತ್ತವೆ. ನಿಮಗೆ ಹಲವು ವಿಷಯಗಳು ಅರ್ಥವಾಗುತ್ತದೆ. ಇದರಿಂದ ನೀವು ಪ್ರಚೋದನೆಗೊಂಡು ಇನ್ನೂ ಅಧಿಕ ವೀಡಿಯೋಗಳನ್ನು ನೋಡಲು ಪ್ರಾರಂಭಿಸುತ್ತೀರಾ. ಇದರಿಂದ ನೀವು ಗೊಂದಲಕೊಳ್ಳಗಾಗುತ್ತೀರಾ. ಇದರ ಅರ್ಥ ನೀವು 1 ಇಲ್ಲ 2 ಐಡಿಯಾಗೆ ಸಂಬಂಧಿಸಿದ ವೀಡಿಯೋಗಳನ್ನು ನೋಡಿ ಮತ್ತು ಇದರ ಮುಂದಿನ ಹಂತ ಕ್ರಮಕ್ಕೆ(actions) ಸಂಬಂಧಿಸಿರಬೇಕು.
ಇದರಲ್ಲಿ ಮೊದಲ ಹಂತ Ai ಏಜೆಂಟ್ ಏನೆಂದು ಅರ್ಥ ಮಾಡಿಕೊಳ್ಳುವುದಾಗಿದೆ. ಇದರ ನಂತರ ಅಂತರ್ಜಾಲದಲ್ಲಿ(internet), "how we can create a small Ai agent?" ಎಂಬುದನ್ನು ನೋಡಬೇಕು. ಅದನ್ನು ನಮ್ಮ ಬದುಕಿನಲ್ಲಿ ಎಲ್ಲಿ ಬಳಸಬಹುದು ಎಂಬುದನ್ನು ತಿಳಿಯಬೇಕು. ನೀವು ಇದನ್ನು ಮಾಡಿದರೆ ಸರಿಯಾದ ದಿಕ್ಕನಲ್ಲಿ ಇರುವಿರಾ ಎಂದರ್ಥ.
ನಿರ್ ಇಯಲ್(nir eyal) ಅವರ ಹೂಕೆಡ್(hooked) ಪುಸ್ತಕದಲ್ಲಿ, ಒಂದು ಅಪ್ಲಿಕೇಶನ್ ಮಾಡುವಾಗ ಅದನ್ನು ಬಳಕೆದಾರ ತೊಡಗಿಸಿಕೊಳ್ಳುವಿಕೆ(user engage) ಆಗುವ ರೀತಿ ಹೇಗೆ ಮಾಡಬೇಕೆಂಬುದನ್ನು ತಿಳಿಸಲಾಗಿದೆ. ಇದರಲ್ಲಿ ಲೇಖಕರು ವೇರಿಯಬಲ್ ಡೋಪಮೈನ್(variable dopamine) ಎಂಬುವ ಪರಿಕಲ್ಪನೆಯ ಬಗ್ಗೆ ತಿಳಿಸಿದ್ದಾರೆ. ಇದರ ಅರ್ಥ ಜನರಲ್ಲಿ ಆಸೆಯನ್ನು ಸೃಷ್ಟಿ ಮಾಡುವುದಾಗಿದೆ. ಇದಕ್ಕಾಗಿ ನೀವು ಅವರಿಗೆ ಒಳ್ಳೆಯ ಪ್ರತಿಫಲ(reward) ನೀಡಬೇಕು. ಉದಾಹರಣೆಗೆ, ಇನ್ಸ್ಟಾಗ್ರಾಮ್ನಲ್ಲಿ ನೀವು ಇಷ್ಟಪಡುವ ಪೋಸ್ಟ್, ಎರಡನೆಯದಾಗಿ ಒಂದು ಕೆಟ್ಟ ಪೋಸ್ಟ್ ತೋರಿಸಿ, ಇದರ ನಂತರ ಒಳ್ಳೆಯ ಪೋಸ್ಟ್, ನಂತರ ಕೆಟ್ಟ ಪೋಸ್ಟ್. ಈ ರೀತಿಯಾಗಿ ನೀವು ಈ ವೇರಿಯಬಲ್ ಡೋಪಮೈನ್ ಬಳಸಿಕೊಂಡು ಅದರ ಸುತ್ತಿನ(cycle) ಜೊತೆ ಆಟವಾಡಬಹುದು.
ನೀವು ಈ ಹೂಕೆಡ್ ಪುಸ್ತಕವನ್ನು ಓದಿದರೆ ಒಳ್ಳೆಯ ಉತ್ಪನ್ನ ವ್ಯಕ್ತಿ(product person) ಆಗುತ್ತೀರಾ. ಆದರೆ ನಾವು ವೀಡಿಯೋಗಳನ್ನು ನೋಡುವವರಾಗಿದ್ದರೆ ಈ ವಿಷಯಗಳು ನಮ್ಮನ್ನು ಮೂರ್ಖನನ್ನಾಗಿ ಮಾಡುತ್ತವೆ. ಹೀಗಾಗಿ ಮುಂದಿನ ಪರಿಹಾರವನ್ನು ನೀವು ಅನುಸರಿಸಬೇಕು, ಅದುವೇ.
ಇದನ್ನು ಓದಿ: ಜೀವನ ಸುಲಭಗೊಳಿಸುವ 12 ಮಾನಸಿಕ ಸಂಗತಿಗಳುಅಂದರೆ ನಾವು ನಮ್ಮ ಮೊಬೈಲ್ ಫೋನ್ ಬಳಸುವುದನ್ನು ನಿಲ್ಲಿಸಬೇಕು. ಇದಕ್ಕಾಗಿ ನೀವು ಈ 3 ತಂತ್ರಗಳನ್ನು ಬಳಸಬಹುದು. ಅದರಲ್ಲಿ ಮೊದಲನೆಯದಾಗಿ ಪರದೆಯನ್ನು(screen) ಕಪ್ಪು ಮತ್ತು ಬಿಳಿ(black & white) ಮಾಡುವುದಾಗಿದೆ. ಇದಕ್ಕಾಗಿ ನೀವು setting ನಲ್ಲಿ, accessibility ಗೆ ಹೋಗಿ, visibility enhancement ನಲ್ಲಿ, color correction ಆನ್ ಮಾಡಿ. ನೀವು ಕೇವಲ ಬಣ್ಣ ಬದಲಾಯಿಸುವುದರಿಂದ ಈ ಮೊಬೈಲಿನ ಶಕ್ತಿ ಬಹುತೇಕ ಶೂನ್ಯವಾಗಿದೆ.
ಇನ್ನು ಎರಡನೆಯದಾಗಿ ಪೊಮೋಡೊರೊ ತಂತ್ರವನ್ನು(pomodoro technique) ಬಳಸಿ. ಅಂದರೆ 25 ನಿಮಿಷಗಳ ಅಧಿವೇಶನದಲ್ಲಿ(session) ಕೆಲಸ ಮಾಡುವುದಾಗಿದೆ. ಇದಕ್ಕಾಗಿ ನೀವು ಝೆನ್ ಮೋಡ್(zen mode) ಬಳಸಬಹುದು. ಇದರಲ್ಲಿ ನೀವು 50 ನಿಮಿಷಗಳ ಸಮಯ ಸೆಟ್ ಮಾಡಿದರೆ, ಆ 50 ನಿಮಿಷ ಯಾರು ನಿಮಗೆ ಕರೆ ಮಾಡಲು ಸಾಧ್ಯವಿಲ್ಲ ಮತ್ತು ನೀವು ಬೇಕೆಂದರು ಫೋನನ್ನು ಬಳಸಲು ಸಾಧ್ಯವಾಗುವುದಿಲ್ಲ. ನಮ್ಮ ಮೆದುಳಿಗೆ ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಮುಳುಗಿರುವುದು ತಿಳಿಯುವುದಿಲ್ಲ ಮತ್ತು ನೋಟಿಫಿಕೇಶನ್ ಬರೆದಿರುವುದು ತಿಳಿಯುವುದಿಲ್ಲ.
ಇನ್ನು ಮೂರನೇಯದಾಗಿ ನೀವು ಕನಿಷ್ಠ ಅಪ್ಲಿಕೇಶನ್(minimalist app) ಬಳಸಬಹುದು. ಇದು ನಿಮ್ಮ ಫೋನ್ ಮೂಕನ(dumb) ರೀತಿ ಕಾಣವ ರೀತಿ ಮಾಡುತ್ತದೆ.
ಇದನ್ನು ಓದಿ: ಥಿಂಕ್ ಮತ್ತು ಗ್ರೋ ರಿಚ್ ಪುಸ್ತಕದ ಸಾರಾಂಶವ್ಯಾಯಾಮ ಮಾಡಿದ ತಕ್ಷಣ ನಿಮ್ಮ ಮೆದುಳಿನಲ್ಲಿ bdnf ಬಿಡುಗಡೆಯಾಗುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿವೆ. ಇದನ್ನು ಪವಾಡ ರಸ(miracle juice) ಎನ್ನಲಾಗುತ್ತದೆ. bdnf ಎಂದರೆ brian derived neurotrophic factor, ಇದರಿಂದ ಹೊಸ ನರ ಸಂಪರ್ಕ(neural connection) ಆಗಬಹುದು. ಇದರಿಂದ ನಾವು ಬೇಗನೆ ಮತ್ತು ಒಳ್ಳೆಯ ಯೋಚನೆ ಮಾಡಬಹುದು ಮತ್ತು ಸಂತೋಷವನ್ನು ಪಡುತ್ತೇವೆ. ಸಾಮಾಜಿಕ ಮಾಧ್ಯಮದಿಂದ ಕಡಿಮೆಗೊಳ್ಳುವ ಹಿಪ್ಪೋಕ್ಯಾಂಪಸ್ ಗಾತ್ರವು ವ್ಯಾಯಾಮದಿಂದ ದೊಡ್ಡದಾಗುತ್ತದೆ.
ಇನ್ನು ಈ ಲೇಖನವನ್ನು ಮುಗಿಸಬೇಕೆಂದರೆ ಈ ಸಾಮಾಜಿಕ ಮಾಧ್ಯಮವನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮವನ್ನು ಒಂದು ಉಪಕರಣದ(tool) ರೀತಿ ಬಳಸಿ. ಈ ಉಪಕರಣವನ್ನು ಬಳಸಿಕೊಂಡು ನಿಮ್ಮ ಮೆದುಳನ್ನು ಬೆಳೆಸಿ ಹೊರತು ಕೊಳೆತು ಹೋಗಲು ಅಲ್ಲ. ಇದಕ್ಕಾಗಿ ನಾವು 4 ಪರಿಹಾರದ ಬಗ್ಗೆ ತಿಳಿಸಿದೆವು. ಅದರಲ್ಲಿ ಮೊದಲನೆಯದ್ದು 2 ಇಮೇಲ್ ಐಡಿ ಮಾಡುವುದು, ಎರಡು ಸಾಮಾಜಿಕ ಖಾತೆ, ಒಂದು ನಮ್ಮ ಗುರಿಗಾದರೆ ಮತ್ತೊಂದು ಮನರಂಜನೆಗಾಗಿ ಬಳಸಿ.
ಎರಡನೆಯದಾಗಿ ಗುರಿಯಲ್ಲಿ 1 ಇಲ್ಲ 2 ವೀಡಿಯೋ ನೋಡಿದ ನಂತರ ಕಾರ್ಯಗತಗೊಳಿಸುವ(execution) ವೀಡಿಯೋಗಳನ್ನು ನೋಡಬೇಕು ಮತ್ತು ಅದು ಎಷ್ಟೇ ಚಿಕ್ಕದೇ ಇದ್ದರು, ಸಣ್ಣ ಅಪ್ಲಿಕೇಶನ್ ಮಾಡಲು ಪ್ರಯತ್ನಿಸಬೇಕು.
ಮೂರನೆಯದಾಗಿ ನಡವಳಿಕೆ ನಿಯಂತ್ರಣದ(behaviour control) ಬಗ್ಗೆ ತಿಳಿಸಿದೆವು. ಅದರಲ್ಲಿ ಮೂರು ರೀತಿಯ ಬಗ್ಗೆ ತಿಳಿಸಿದೆವು, ಅವೆಂದರೆ ಆಳವಾದ ಝೆನ್ ಸ್ಥಿತಿ, ಕಪ್ಪು ಮತ್ತು ಬಿಳಿ ಪರದೆ ಮತ್ತು ಕನಿಷ್ಠ ಅಪ್ಲಿಕೇಶನ್. ಇನ್ನು ಕೊನೆಯದಾಗಿ ವ್ಯಾಯಾಮ ಮಾಡಲು ತಿಳಿಸಿದೆವು. ಇದು ನಿಮಗೆ ಸಂತೋಷವನ್ನು ನೀಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.
Explore all our Posts by categories.