Watch Video
ಈ ಭೂಮಿಯ ಮೇಲೆ ಅತ್ಯಂತ ದೈತ್ಯಾಕಾರದ ಡೈನೊಸೋರ್ಗಳು ಆಕ್ರಮಿಸಿದ್ದವು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಆ ಡೈನೊಸೋರ್ಗಳು 6.5 ಕೋಟಿ ವರ್ಷಗಳ ಹಿಂದೆ ಭೂಮಿಯ ಮೇಲೆ ಆದ ಅತಿದೊಡ್ಡ ಪ್ರಳಯದಿಂದ ನಾಶವಾದವು.
ಡೈನೊಸೋರ್ಗಳ ಸಾವಿನಿಂದ ಇಲ್ಲಿಯವರೆಗಿನ ದೃಶ್ಯಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ. ಹಾಗಿದ್ದರೆ ಬನ್ನಿ ಇಂದಿನಿಂದ ಆರು ಕೋಟಿ ವರ್ಷಗಳ ಹಿಂದೆ ಹೋಗೋಣ.
ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕಇಲ್ಲಿ ಅತಿದೊಡ್ಡ ಡೈನೊಸೋರ್(dinasour) ಭೂಮಿಯ ಮೇಲೆ ಆಳ್ವಿಕೆ ನಡೆಸುತ್ತಿವೆ. ಇವುಗಳು ನಡೆಯುವಾಗ ಭೂಮಿಯು ನಡುಗುವಂತಿರುತ್ತದೆ. ಈ ದೈತ್ಯ ಜೀವಿ ಭೂಮಿಯ ಮೇಲೆ 1.4 ಕೋಟಿ ವರ್ಷಗಳಿಂದ ಇದೆ.
ಈ ಡೈನೊಸೋರ್ ಗಳಲ್ಲಿ ಕೆಲವು ಸಸ್ಯಾಹಾರಿಗಳಾಗಿದ್ದರೆ, ಇನ್ನೂ ಕೆಲವು ಮಾಂಸಾಹಾರಿಗಳಾಗಿವೆ(non vegetarian). ಇವುಗಳಲ್ಲಿ ಕೆಲವು ತುಂಬಾ ಕ್ರೂರವಾಗಿದೆ.
ಭೂಮಿಯ ಈ ಶಾಂತ ವಾತಾವರಣದಲ್ಲಿ ಇವುಗಳು ಖುಷಿಯ ಜೀವನ ನಡೆಸುತ್ತಿವೆ. ಆದರೆ ದುರದೃಷ್ಟವಶಾತ್ ಇವುಗಳ ಹಣೆಬರಹವನ್ನು ಇಂದಿನಿಂದ ಹತ್ತು ಕೋಟಿ ವರ್ಷಗಳ ಹಿಂದೆಯೇ ಬರೆಯಲಾಗಿತ್ತು. ಇಂದಿನಿಂದ ಹತ್ತು ಕೋಟಿ ವರ್ಷಗಳ ಹಿಂದೆ ದೂರದ ಅಂತರಿಕ್ಷದಲ್ಲಿ ಒಂದು ಬಂಡೆ ಅಲೆದಾಡುತ್ತಿತ್ತು.
ಅಂತರಿಕ್ಷದಲ್ಲಿ ಅಲೆದಾಡುತ್ತಿದ್ದ ಆ ಬಂಡೆ ಸೂರ್ಯನ ಹತ್ತಿರ ಬರುತ್ತಿತ್ತು. ದಶಲಕ್ಷ ವರ್ಷಗಳ ಪ್ರಯಾಣದ ನಂತರ ಆ ಬಂಡೆಗೆ ಸೂರ್ಯನ ತನಕ ತಲುಪಲು ಒಂದು ಅಡಚಣೆಯನ್ನು ಪಾರು ಮಾಡಬೇಕಿತ್ತು. ಆ ಅಡಚಣೆಯೇ ಭೂಮಿಯಿಂದ(earth) 20 ಮಿಲಿಯನ್ ಕಿ.ಮೀ. ದೂರ ಇರುವ ಮಂಗಳ ಮತ್ತು ಗುರುಗ್ರಹದ ಮಧ್ಯದಲ್ಲಿರುವ ಕ್ಷುದ್ರಗ್ರಹ ಪಟ್ಟಿ(asteroid belt). ಅಂತರಿಕ್ಷದಲ್ಲಿ ಅಲೆದಾಡುತ್ತಿದ್ದ ಆ ಬಂಡೆ ಕ್ಷುದ್ರಗ್ರಹ ಪಟ್ಟಿಯಲ್ಲಿದ ಇನ್ನೊಂದು ಅತೀ ದೊಡ್ಡ ಬಂಡೆಗೆ ಡಿಕ್ಕಿ ಹೊಡೆಯಿತು.
ಇದರಿಂದ ಅಂತರಿಕ್ಷದಲ್ಲಿ ಅಲೆದಾಡುತ್ತಿದ್ದ ಆ ಬಂಡೆಯ ಮಾರ್ಗ ಬದಲಾಯಿತು ಮತ್ತು ಅದು ಗಂಟೆಗೆ 35,400 ಕಿಮೀನಷ್ಟು ವೇಗದಲ್ಲಿ ಭೂಮಿಯ ಕಡೆ ಬರುತ್ತದೆ. ಈಗ ಈ ಬಂಡೆ(asteroid) ಭೂಮಿಯಿಂದ 4 ಲಕ್ಷ ಕಿಮೀ ದೂರ ಇರುವ ಚಂದ್ರನಿಗೆ(moon) ಡಿಕ್ಕಿ ಹೊಡೆದು ನಾಶವಾಗಬಹುದು.
ಆದರೆ ಆ ಬಂಡೆಯ ವೇಗ ಎಷ್ಟಿದೆಯೆಂದರೆ ಚಂದ್ರನ ಗುರುತ್ವಾಕರ್ಷಣೆಗೆ ಅದನ್ನು ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಆ ಬಂಡೆ ಕೂಡ ಚಂದ್ರನ ಪಕ್ಕದಿಂದಲೇ ಹಾದು ಹೋಗುತ್ತದೆ. 40 ಕಿಮೀನಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಬಂಡೆ ಅತ್ಯಂತ ವೇಗದಲ್ಲಿ ಭೂಮಿಯ ಕಡೆ ಬರುತ್ತಿದೆ.
ಇದನ್ನು ಓದಿ: ಇತರ ಗ್ರಹಗಳಿಂದ ಸೂರ್ಯನ ನೋಟ ಹೇಗಿರುತ್ತದೆ?ಭೂಮಿ ಕೂಡ ಅದರ ಪ್ರಭಾವವನ್ನು ಈ ಬಂಡೆಯ ಮೇಲೆ ತೋರಿಸುತ್ತಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ಈ ಬಂಡೆಯ ವೇಗ ಇನ್ನಷ್ಟು ಹೆಚ್ಚಾಗಿದೆ. ಇದರ ವೇಗ ಗಂಟೆಗೆ 70,000 ಕಿ.ಮೀ ಆಗಿದೆ. ಈಗ ಈ ಬಂಡೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ.
ಈ ಬಂಡೆ ಚಿಕ್ಕದಿದಿದ್ದರೆ ಭೂಮಿಯ ವಾತಾವರಣ ಇದನ್ನು ಆಕಾಶದಲ್ಲಿ ನಾಶ ಮಾಡುತ್ತಿತ್ತು. ಆದರೆ ಈ ಬಂಡೆ(huge stone) ತುಂಬಾ ದೊಡ್ಡದಿದೆ. ಹೀಗಾಗಿ ಭೂಮಿಯ ವಾತಾವರಣ ಇದನ್ನು ಪೂರ್ತಿಯಾಗಿ ನಾಶಮಾಡಲು ಸಾಧ್ಯವಿಲ್ಲ.
ವಾತಾವರಣ ಈ ಬಂಡೆಯ ಮೇಲೆ ಘರ್ಷಣೆಯನ್ನು(friction) ನೀಡುತ್ತಿದೆ. ಇದರಿಂದ ಆ ಬಂಡೆ ಬೆಂಕಿಯ ಚೆಂಡಾಗಿ ಬದಲಾಗಿದೆ. ಇದರ ವೇಗ ಕೇವಲ ನಾಲ್ಕು ನಿಮಿಷದಲ್ಲೇ ಅಟ್ಲಾಂಟಿಕ್ ಮಹಾಸಾಗರವನ್ನು ಪಾರುಮಾಡುವಷ್ಟಿದೆ. ಇದರ ಬೆಳಕು ಭೂಮಿಯಲ್ಲಿ ಅದನ್ನು ನೋಡುವ ಎಲ್ಲಾ ಜೀವಿಯನ್ನು ಕುರುಡು(blind) ಮಾಡುವಷ್ಟಿದೆ.
ವೇಗದಲ್ಲಿ ಬರುತ್ತಿರುವ ಈ ಬೆಂಕಿಯ ಚೆಂಡು ಅದರ ಬೆಂಕಿಯಿಂದ ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿದೆ. ಅದನ್ನು ಭೂಮಿಯ ಮೇಲಿರುವ ಈ ಜೀವಿಗಳಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೆಕ್ಸಿಕೋದ ಒಂದು ಕಡೆ ಈ ಕ್ಷುದ್ರಗ್ರಹ(asteroid) ತುಂಬಾ ವೇಗದಲ್ಲಿ ಡಿಕ್ಕಿ ಹೊಡೆಯುತ್ತದೆ.
ಇದರ ಡಿಕ್ಕಿಯಿಂದ 35,000°C ನಷ್ಟು ಶಕ್ತಿ ವಿಸ್ಫೋಟವಾಗುತ್ತದೆ. ಡಿಕ್ಕಿ ಹೊಡೆದ ಜಾಗದಲ್ಲಿ 180 ಕಿ.ಮೀ. ಅಗಲ, 20 ಕಿ.ಮೀ. ಆಳದಷ್ಟು ಗುಂಡಿಯಾಗಿದೆ. ಈ ಡಿಕ್ಕಿಯ ನಂತರ ಆಕಾಶದಲ್ಲಿ ದೂಳಿನ ಮೋಡಗಳು ಕಾಣುತ್ತಿವೆ. ಈ ಡಿಕ್ಕಿಯಿಂದ ಬಂದ ವಿಕಿರಣ(radiation) 800 ಕಿ.ಮೀ. ತ್ರಿಜ್ಯದಲ್ಲಿರುವ(radius) ಎಲ್ಲ ಮರ, ಗಿಡ, ಜೀವಾಂಶಗಳನ್ನು ಬೂದಿ ಮಾಡಿದೆ.
ಇದನ್ನು ಓದಿ: ಭೂಮಿಯ ಏಳು ಅತಿದೊಡ್ಡ ಬಗೆಹರಿಯದ ರಹಸ್ಯಗಳುಕ್ಷುದ್ರಗ್ರಹ ಡಿಕ್ಕಿಹೊಡೆದು 16 ನಿಮಿಷ 40 ಸೆಕೆಂಡ್ ನಂತರವೂ 800 ಕಿ.ಮೀ. ತ್ರಿಜ್ಯದಲ್ಲಿರುವ ಎಲ್ಲಾ ಜೀವಜಂತುಗಳು ಬೂದಿಯಾಗುತ್ತಿವೆ. ಈ ಡಿಕ್ಕಿ ಎಷ್ಟು ಬಲಿಷ್ಟವೆಂದರೆ ಭೂಮಿಯ ಒಳಗೆ 16 ನಿಮಿಷ 40 ಸೆಕೆಂಡ್ ನಂತರ 11.1 ತೀವ್ರತೆಯ ಭೂಕಂಪ ತರಂಗ ಹುಟ್ಟಿದೆ.
ಭೂಮಿಯ ಹಲವು ಕಡೆ ಭೂಕಂಪವಾದ ಕಾರಣ ಸಮುದ್ರದ ದೊಡ್ಡ ಅಲೆಗಳು ಬರಲು ಪ್ರಾರಂಭಿಸಿದವು. ಈ ಸುನಾಮಿ ಬದುಕುಳಿದ ಕೆಲವೊಂದು ಜೀವಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಈ ಭೂಕಂಪ ಜ್ವಾಲಾಮುಖಿಗಳನ್ನು(volcano) ಸಕ್ರಿಯಗೊಳಿಸಿದೆ. ಇದರಿಂದ ಭೂಮಿಯ ಬೇರೆ ಬೇರೆ ಭಾಗದಲ್ಲಿರುವ ಡೈನೊಸೋರ್ ಮತ್ತು ಇತರ ಜೀವಾಂಶಗಳು ನಾಶವಾಗುತ್ತಿದೆ. ಈಗ ಸದ್ಯಕ್ಕೆ ಹಾರುವ ಡೈನೊಸೋರ್ಗಳು(flying dinasour) ನೆಲದಲ್ಲಿನ ಅಪಾಯದಿಂದ ಉಳಿದು ಹಾರುತ್ತಿವೆ.
ಇದನ್ನು ಓದಿ: ಸಾಗರದಲ್ಲಿ ನೀವು ಕಾಣುವ ಹತ್ತು ಮಾರಕ ಜೀವಿಗಳುಭೂಮಿಯ ಎಲ್ಲ ಕಡೆ ಮಹಾಪ್ರಳಯ ವಿಸ್ತರಿಸಿದೆ. ಕೇವಲ 40 ನಿಮಿಷದಲ್ಲೇ ಅರ್ಧಕ್ಕೂ ಹೆಚ್ಚು ಜೀವ ಸಂಕುಲ ನಾಶವಾಗಿದೆ. ಕೇವಲ ಹಾರುತ್ತಿರುವ ಡೈನೊಸೋರ್ ಮಾತ್ರ ಉಳಿದಿದೆ. ಆದರೆ ಆ ಕ್ಷುದ್ರಗ್ರಹ ಡಿಕ್ಕಿ ಹೊಡೆದಿದ್ದರಿಂದ ಬಂದ ಧೂಳು ಭೂಮಿಯ ಗುರುತ್ವಾಕರ್ಷಣೆಯಿಂದ(gravitation) ಮಳೆಯ ರೀತಿ ಬೀಳುತ್ತಿವೆ. ಇದು ಆಕಾಶದಲ್ಲಿ ಹಾರುತ್ತಿರುವ ಡೈನೋಸಾರ್ ಗಳನ್ನು ನಾಶ ಮಾಡಿತು.
ಆ ಡಿಕ್ಕಿಯ ವಿಸ್ಫೋಟದಿಂದ ಒಂದು ದೊಡ್ಡ ಧೂಳಿನ ರಾಶಿ ಭೂಮಿಯ ಇನ್ನೊಂದು ಕಡೆ ಗಂಟೆಗೆ 6000 ಕಿ.ಮೀ. ವೇಗದಲ್ಲಿ ಹೋಗುತ್ತಿದೆ. ಈ ಧೂಳು ಭೂಮಿಯ ವಾತಾವರಣದಲ್ಲಿ ಎಷ್ಟೋ ಮೇಲೆ ಕೂಡ ಹೋಗಿದೆ. ಇದರಿಂದ ಸೂರ್ಯನ ಬೆಳಕು ಭೂಮಿಯ ನೆಲವನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ.
ಇದನ್ನು ಓದಿ: ನಿಮಗೆ ಸಾಗರದ ಬಗ್ಗೆ ಗೊತ್ತಿರದ ಏಳು ಗುಪ್ತ ಸಂಗತಿಗಳುಆಕಾಶದಲ್ಲಿ ದೂಳಿನ(dust) ದೊಡ್ಡ ದೊಡ್ಡ ಮೋಡಗಳು ಆವರಿಸಿದವು. ನಾಲ್ಕು ದಿಕ್ಕಿನಲ್ಲಿ ಕತ್ತಲಿದೆ ಸುನಾಮಿಯ ದೊಡ್ಡ ಅಲೆ ಮತ್ತು ಜ್ವಾಲಾಮುಖಿಗಳು ಎಲ್ಲವನ್ನೂ ನಾಶಮಾಡುತ್ತೀವೆ.
ಭೂಮಿಯ ತಾಪಮಾನ 200° ತನಕ ತಲುಪಿದೆ. ಇದರಿಂದ ಉಲ್ಕೆಯ ಪ್ರಭಾವದಿಂದ ಉಳಿದ ಜಾಗದಲ್ಲಿದ್ದ ಡೈನೋಸೋರ್ ಗಳು ಕೂಡ ಸಾಯುತ್ತಿವೆ. 1.4 ಕೋಟಿ ವರ್ಷ ಭೂಮಿಯಲ್ಲಿ ರಾರಾಜಿಸುತ್ತಿದ್ದ ಈ ಡೈನೋಸೋರ್ ಗಳು, ಈಗ ಈ ಭೂಮಿಯನ್ನು ಎಂದೆಂದಿಗೂ ಬಿಟ್ಟುಹೋಗಿವೆ.
ಶೇಕಡಾ 75ರಷ್ಟು ಜೀವಿಗಳು ನಾಶವಾಗಿದೆ. ಹಳೆಯ ಮನೆಯನ್ನು ಕೆಡವಿ ಹೊಸ ಮನೆಯನ್ನು ಮನುಷ್ಯರು ನಿರ್ಮಿಸುವಂತೆ, ಪ್ರಕೃತಿ ಹಳೆಯ ಜಾತಿಯನ್ನು ನಾಶ ಮಾಡಿ ಹೊಸ ಜಾತಿಗೆ ದಾರಿಮಾಡಿಕೊಡುತ್ತದೆ. ಆ ಹೊಸ ಜಾತಿಯೇ ಸಸ್ತನಿಗಳು(mammels), ಅಂದರೆ ನಮ್ಮ ಪೂರ್ವಜರು.
ಇವುಗಳ ವಿಕಾಸದ ಹಂತದಲ್ಲೇ ನಾವು ಬಂದಿದ್ದೇವೆ. ಈ ಪ್ರಾಣಿಗಳು ಈ ಪ್ರಳಯದಿಂದ ಆದ ಶಾಖದಿಂದ ಉಳಿದುಕೊಳ್ಳಲು ನೆಲದ ಒಳಗೆ ಇರುತ್ತಿದ್ದವು. ಇವುಗಳು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಎಲ್ಲವನ್ನು ತಿನ್ನಲು ಪ್ರಾರಂಭಿಸಿದವು.
ಇದು ಡೈನೊಸೋರ್ಗಳ ಅಂತ್ಯದೊಂದಿಗೆ ನಾವು ಮನುಷ್ಯರು ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಭೂಮಿಯ ಮೇಲೆ ಸಮಯ ಸಾಗುತ್ತಿತ್ತು ಸಮಯದೊಂದಿಗೆ ಸಸ್ತನಿಗಳು ವಿಕಸನಗೊಂಡವು.
ಇದನ್ನು ಓದಿ: ಪಿರಮಿಡ್‌ಗಳನ್ನು ಏಕೆ ಮತ್ತು ಹೇಗೆ ಮಾಡಲಾಯಿತು?ಮಹಾಪ್ರಳಯದ 1 ಲಕ್ಷ ವರ್ಷದ ನಂತರ ಭೂಮಿಯ ಮೇಲೆ ಡೈನೋಸೋರ್ ಗಳ ಅಸ್ತಿತ್ವವೇ ಹೋಯಿತು ಮತ್ತು ಪ್ರಕೃತಿ(nature) ಈಗ ಹೊಸ ಯುಗಕ್ಕಾಗಿ ತಯಾರಿ ನಡೆಸುತ್ತಿತ್ತು. ಈ ಸಸ್ತನಿಗಳು ಸ್ವಲ್ಪ ದೊಡ್ಡದಾಗಿದ್ದವು. ಆದರೆ ಈಗಿನ ಮನುಷ್ಯನ ರೀತಿ ಇರಲಿಲ್ಲ.
ಇಂದಿನಿಂದ 4 ಕೋಟಿ 70 ಲಕ್ಷ ವರ್ಷಗಳ ಹಿಂದೆ ಭೂಮಿಯ ವಾತಾವರಣ ಈಗಿನ ರೀತಿ ಸಾಮಾನ್ಯವಾಗಿತ್ತು. ಆ ಸಮಯದಲ್ಲಿ ಭೂಮಿಯ ತಾಪಮಾನ 24° C ಇತ್ತು ಮತ್ತು ದೊಡ್ಡ ದ್ವೀಪ(island)ಗಳು ತಮ್ಮ ತಮ್ಮ ಜಾಗವನ್ನು ತೆಗೆದುಕೊಂಡಿದ್ದವು.
ಆದರೆ ಆಗ ಭೂಮಿಯ ಮೇಲಿನ ಪ್ಲೇಟ್ ಟೆಕ್ಟೋನಿಕ್ಸ್ ನಿಂದ(plate tectonics) ನೆಲದ ಭಾಗವು ಅನೇಕ ಭಾಗವಾಯಿತು. ನಮ್ಮ ಭಾರತದ ಮಹಾದ್ವೀಪ ತೆವಳುತ್ತಾ ಏಷ್ಯಾಖಂಡದ ಜತೆ ಕೂಡಿತು ಮತ್ತು ಈ ಡಿಕ್ಕಿಯಿಂದ ಜಗತ್ತಿನ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್‌ನ ನಿರ್ಮಾಣವಾಯಿತು.
ಈ ವಿಶಾಲವಾದ ಪರ್ವತಗಳಲ್ಲಿ ಬೀಳುವ ಮಂಜಿನಿಂದ ನದಿಗಳು(river) ಹುಟ್ಟಿದವು ಮತ್ತು ಈ ನದಿಗಳೇ ಇಂದು ಜಗತ್ತಿನ ಅರ್ಧಕ್ಕೂ ಹೆಚ್ಚು ಜೀವಸಂಕುಲಕ್ಕೆ ನೀರನ್ನು ಪೂರೈಸುತ್ತಿವೆ. ಭೂಮಿಯು ನಮ್ಮ ಸ್ವಾಗತಕ್ಕೆ ಕಾಯುತ್ತಿದೆ. ಆದರೆ ನಾವು ಮನುಷ್ಯರು ಇಲ್ಲಿ ಬರಲು ಇನ್ನೂ ತುಂಬಾ ಸಮಯವಿದೆ.
ಇದನ್ನು ಓದಿ: ಕಳೆದುಹೋದ ಪ್ರಾಚೀನ ಭಾರತದ ಐದು ತಂತ್ರಜ್ಞಾನಗಳುಇಂದಿನಿಂದ 40 ಲಕ್ಷ ವರ್ಷಗಳ ಹಿಂದೆ ನಮ್ಮ ಪೂರ್ವಜರು ಬೇರೆ ಬೇರೆ ರೀತಿಯ ಪ್ರಾಣಿಗಳಾಗಿ ವಿಕಸನಗೊಂಡಿದ್ದರು. ಅವುಗಳಲ್ಲೇ ಒಂದಾಗಿದೆ Apes. ಇವುಗಳು ಆಫ್ರಿಕಾದ ಪೂರ್ವ ಭಾಗದಲ್ಲಿ ಹರಡಿರುವ ಕಾಡಿನಲ್ಲಿ ವಾಸಿಸುತ್ತಿದ್ದವು.
Apesಗಳು ಯಾವಾಗಲು ಮರದ ಮೇಲೆ ಇರುತ್ತಿದ್ದವು ಮತ್ತು ಹಣ್ಣುಗಳನ್ನು ತಿಂದು ಜೀವಿಸುತ್ತಿದ್ದವು. ಆದರೆ ಒಂದು ಘಟನೆ ಈ Apesಗಳನ್ನು ಮರಗಳನ್ನು ಬಿಟ್ಟು ನೆಲದ ಮೇಲೆ ನಡೆಯುವಂತೆ ಮಾಡಿತು.
ಪ್ಲೇಟ್ ಟೆಕ್ಟೋನಿಕ್ಸ್ ನಿಂದಾಗಿ ದ್ವೀಪಗಳು ಜಾರಿದ ಕಾರಣ, ಆಫ್ರಿಕಾದ ಪೂರ್ವ ಭಾಗದಲ್ಲಿರುವ ಕಾಡಿನಲ್ಲಿ ಒಂದು ಪರ್ವತದ ನಿರ್ಮಾಣವಾಯಿತು. ಅದನ್ನು ನಾವು ಇಂದು ರಿಫ್ಟ್ ವ್ಯಾಲಿ(rift valley) ಎಂದು ಕರೆಯುತ್ತೇವೆ. ಈ ಚಿಕ್ಕ ಪರ್ವತಗಳಿಂದಾಗಿ ಅಲ್ಲಿರುವ ಕಾಡಿಗೆ ಮಳೆ ಬೀಳುವುದು ಕಡಿಮೆಯಾಯಿತು.
ಇದರಿಂದ ನಿಧಾನವಾಗಿ ಅಲ್ಲಿನ ಕಾಡು ನಾಶವಾಗುತ್ತಾ ಬಂತು. ಕಾಡಿನ ನಾಶದಿಂದ ಈ Apesಗಳಿಗೆ ಆಹಾರದ ಕೊರತೆ ಉಂಟಾಯಿತು. ಈ ಸಮಸ್ಯೆಯನ್ನು ನಿವಾರಿಸಲು ಇವುಗಳು ಮರಗಳಿಂದ ಇಳಿದು ನೆಲದ ಮೇಲೆ ಬರಬೇಕಾಯಿತು.
ಭೂಮಿಯ ಮೇಲೆ ಮೊದಲು ಕಾಲಿಟ್ಟ ನಮ್ಮ ಪೂರ್ವಜರು Artipetekas Ramidus ಎಂದು ತಜ್ಞರು(expert) ಹೇಳುತ್ತಾರೆ. ಇವುಗಳ ದೇಹದ ಎತ್ತರ 4 ಅಡಿ ಇದ್ದು, ಮೆದುಳು ಕಿತ್ತಳೆಯ ಅಕಾರದಷ್ಟಿತ್ತು. ಮೊದಲಿಗೆ ಇವುಗಳು ನಾಲ್ಕು ಕಾಲಿನಿಂದ ನಡೆಯುತ್ತಿದ್ದವು.
ಆದರೆ ದಶಲಕ್ಷ ವರ್ಷದ ವಿಕಸನದಲ್ಲಿ ಇವುಗಳು ಎರಡು ಕಾಲಿನಲ್ಲಿ ನಡೆಯುವುದನ್ನು ಕಲಿತವು. ಸಮಯದೊಂದಿಗೆ ಇವುಗಳ ಮೆದುಳು ವೇಗವಾಗಿ ವಿಕಸನಗೊಳ್ಳುತ್ತಿತ್ತು ಮತ್ತು ಇವುಗಳು ಮುಂಚೆಗಿಂತ ಬುದ್ಧಿವಂತರಾಗುತ್ತಾ ಬಂದವು.
ಇದೇ ರೀತಿ ವಿಕಸನಗೊಳ್ಳುತ್ತಾ ಇವುಗಳು ಕಲ್ಲಿನಿಂದ ಆಯುಧಗಳನ್ನು(stone weapon) ಮಾಡಲು ಕಲಿತವು. ಇದರಿಂದ ಬೇಟೆಯಾಡಲು ಸುಲಭವಾಯಿತು. ಇದರ ನಂತರ ನಮ್ಮ ಪೂರ್ವಜರು ಬೆಂಕಿಯನ್ನು ಕಂಡುಹಿಡಿದು ಅದನ್ನು ನಿಯಂತ್ರಣ ಮಾಡುವುದನ್ನು ಕಲಿತರು.
ನಮ್ಮ ಪೂರ್ವಜರು ಬೆಂಕಿಯನ್ನು(fire) ಕಂಡು ಹಿಡಿದದ್ದು ಮಹತ್ವದ್ದಾಗಿದೆ. ಏಕೆಂದರೆ ಅದು ಚಳಿಯಲ್ಲಿ ಶಾಖ ನೀಡುತ್ತಿತ್ತು ಮತ್ತು ಕತ್ತಲನ್ನು ಓಡಿಸಲು ಬೆಳಕು ನೀಡುತ್ತಿತ್ತು.
ಈಗ ಅವರು ಹಸಿ ಮಾಂಸವನ್ನು ಬೆಂಕಿಯಲ್ಲಿ ಬೇಯಿಸಿ ತಿನ್ನಲು ಪ್ರಾರಂಭಿಸಿದರು. ಇದರಿಂದ ಅವರಿಗೆ ಮಾಂಸವನ್ನು ಜಗಿಯಲು ಮತ್ತು ಉಳಿಸಲು ಮೊದಲಿಗಿಂತ ಉತ್ತಮವಾಯಿತು. ಆಹಾರ ಬೇಯಿಸಲು ಬಳಸುತ್ತಿದ್ದ ಬೆಂಕಿ ಈಗ ಅವರ ತಲೆ ಓಡಿಸಲು ಬಳಸಲಾಯಿತು.
ಇದರಿಂದ ಅವರ ಮೆದುಳಿನ ವಿಕಾಸ ವೇಗಗೊಂಡಿತು ಮತ್ತು ಈಗ ನಮ್ಮ ಮಾನವನ ಹೋಮೋ ಎರೆಕ್ಟಸ್(homo erectus) ಜಾತಿ ಅಸ್ತಿತ್ವಕ್ಕೆ ಬಂದಿತು.
ತಮ್ಮ ಸುರಕ್ಷತೆಗೆ ಪರಿವಾರ ಮತ್ತು ಸಮೂಹದ ಜೊತೆ ಇದ್ದ ಮೊದಲ ಮಾನವ ಹೋಮೋ ಎರೆಕ್ಟಸ್. ಇವರು ತಮ್ಮ ಮಾತನ್ನು ಇತರರಿಗೆ ತಿಳಿಸಲು ವಿವಿಧ ರೀತಿಯ ಶಬ್ದಗಳನ್ನು ಮಾಡಲು ಪ್ರಾರಂಭಿಸಿದರು ಮತ್ತು ಹೀಗೆ ಮುಂದುವರೆಯುತ್ತಾ ನಮ್ಮ ಪೂರ್ವಜರು ಭಾಷೆಯ(language) ನಿರ್ಮಾಣ ಮಾಡಿದರು. ಭಾಷೆಯ ನಿರ್ಮಾಣವೇ ವಿಕಾಸನದ ಕೊನೆಯ ಹಂತವಾಗಿತ್ತು.
ಇದನ್ನು ಓದಿ: ಭಾರತದ ಮೇಲೆ ಎಂಟು ಅದ್ಭುತ ಸಂಗತಿಗಳುಇದರ ನಂತರ ಇಂದಿನಿಂದ 2 ಲಕ್ಷ ವರ್ಷಗಳ ಹಿಂದೆ ನಾವು ವಿಕಸನಗೊಂಡು ಈಗ ಹೋಮೋ ಸ್ಯಾಪಿಯನ್ಸ್(homo sapien) ಆಗಿದ್ದೇವೆ. ಭೂಮಿಯ ಮೇಲೆ ಅತ್ಯಂತ ಬುದ್ಧಿಶಾಲಿ ಜೀವಿಯಾದ ಕಾರಣ ನಾವು ಎಲ್ಲವನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡೆವು ಮತ್ತು ಅಂದಿನಿಂದ ಇಲ್ಲಿಯವರೆಗೆ ಭೂಮಿಯ ಮೇಲೆ ನಮ್ಮ ಮನುಷ್ಯರ ರಾಜ್ಯವೇ ನಡೆಯುತ್ತಿದೆ.
ಸ್ನೇಹಿತರೇ ಇದುವೇ ಡೈನೊಸೋರ್ ನ ಅಂತ್ಯದಿಂದ ಮನುಷ್ಯರ ಅಸ್ತಿತ್ವದ ಕಥೆ. ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.
Explore all our Posts by categories.
Info Mind 18267
Info Mind 4162
Info Mind 4471
Info Mind 11913
See all comments...
sumit • January 6th,2023
Amazing and very interesting .