Website designed by @coders.knowledge.

Website designed by @coders.knowledge.

4 learnings of book Learn to Earn | "ಲರ್ನ್ ಟು ಆರ್ನ್" ಪುಸ್ತಕದ 4 ಪ್ರಮುಖ ಹೂಡಿಕೆಯ ಕಲಿಕೆಗಳು.

Watch Video

ನೀವು ಹೂಡಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ಇಟ್ಟುಕೊಂಡಿದ್ದಾರೆ, ಪೀಟರ್ ಲಿಂಚ್(peter lynch) ಅವರ ಹೆಸರನ್ನು ಕೇಳಿರುತ್ತೀರಿ. ಪೀಟರ್ ಲಿಂಚ್ ಅಮೆರಿಕದ ಲೇಖಕ, ಹೂಡಿಕೆದಾರ ಮತ್ತು ಮ್ಯೂಚುಯಲ್ ಫಂಡ್ ಮ್ಯಾನೇಜರ್ ಆಗಿದ್ದಾರೆ.

ಇವರನ್ನು ಇತಿಹಾಸದ ಅತ್ಯುತ್ತಮ ಮ್ಯೂಚುಯಲ್ ಫಂಡ್ ಮ್ಯಾನೇಜರ್ ಎನ್ನಲಾಗುತ್ತದೆ. ಇವರು 1977 ರಿಂದ 1990 ರವರೆಗೆ ಮೆಗಲನ್ ಫಂಡನ್ನು ಫಂಡ್ ಮ್ಯಾನೇಜರ್ ಆಗಿ ನಿರ್ವಹಿಸಿದರು ಮತ್ತು ಈ 13 ವರ್ಷಗಳಲ್ಲಿ ಈ ಫಂಡ್ 29.2 ರಷ್ಟು CAGR ರಿಟರ್ನ್ ನೀಡಿದೆ.

ಇದಿಷ್ಟೇ ಅಲ್ಲದೆ ಇವರು ಅನೇಕ ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ. ಅವೆಂದರೆ "one upon wall street", "betting the street", "learn to earn". ಇಂದು ನಾವು ಅವರ ಪುಸ್ತಕವಾದ ಲರ್ನ್ ಟು ಆರ್ನಿನ 4 ಮುಖ್ಯ ಕಲಿಕೆಯ ಬಗ್ಗೆ ತಿಳಿಸುತ್ತಿದ್ದೇವೆ.

ಇದನ್ನು ಓದಿ: Rich Dad Poor Dadನ ಮುಖ್ಯ ಐದು ಕಲಿಕೆಗಳು

ಕಲಿಕೆ 1: ಹೂಡಿಕೆಯನ್ನು ಆದಷ್ಟು ಬೇಗನೆ ಪ್ರಾರಂಭಿಸಿ.

start investing early lesson in learn to earn book in kannada
start investing early

ಈ ಪುಸ್ತಕದಲ್ಲಿ ಲೇಖಕರು ನೀವು ಎಷ್ಟು ಬೇಗನೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಿರೋ ಅಷ್ಟು ನಿಮಗೆ ಒಳ್ಳೆಯದು ಎಂದು ಹೇಳುತ್ತಾರೆ. ಲೇಖಕರು ಈ ಪುಸ್ತಕದಲ್ಲಿ ನೀವು ಚಿಕ್ಕವರಿದ್ದಾಗಲೇ(young) ಹೂಡಿಕೆ ಮಾಡಲು ಅತ್ಯುತ್ತಮ ಸಮಯವಾಗಿದೆ ಎಂದು ಹೇಳುತ್ತಾರೆ.

ಏಕೆಂದರೆ ಈ ವಯಸ್ಸಿನಲ್ಲಿ ನಿಮ್ಮ ಮೇಲಿನ ಜವಾಬ್ದಾರಿ ಕಡಿಮೆ ಇರುತ್ತದೆ ಮತ್ತು ನೀವು ನಿಮ್ಮ ಗಳಿಕೆಯ ಬಹುಭಾಗವನ್ನು ಉಳಿಸಬಹುದು ಮತ್ತು ಹೂಡಿಕೆ ಮಾಡಬಹುದು ಮತ್ತು ನಿಮಗೆ ಆಗುವ ಖರ್ಚನ್ನು ಕಡಿಮೆ ಮಾಡಬಹುದು. ನಾವು ಯಾವಾಗಲೂ ಹಣದ ಭವಿಷ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು.

ಲೇಖಕರು ವಾರೆನ್ ಬಫೆಟ್ ಅವರ ಉದಾಹರಣೆ ನೀಡುವ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. ಅದೆಂದರೆ, ವಾರನ್ ಬಫೆಟ್ ಅವರಿಗೆ ಒಂದು ಟಿವಿಯ ಬೆಲೆ 400$ ಆಗಿರುವುದಿಲ್ಲ. ಬದಲಾಗಿ ಅದಕ್ಕಿಂತ ಹೆಚ್ಚಿನ ಮೌಲ್ಯದಾಗಿದೆ. ಇದು ಏಕೆಂದರೆ ವಾರೆನ್ ಬಫೆಟ್ ಹಣದ ಭವಿಷ್ಯದ ಮೌಲ್ಯದ ಬಗ್ಗೆ ತಿಳಿದಿದ್ದಾರೆ.

ನಾವು ಯಾವುದೋ ವಸ್ತು ಖರೀದಿಸುವ ಮೊದಲು ಈ ರೀತಿಯಲ್ಲಿ ಯೋಚನೆ ಮಾಡಿದರೆ ಅನವಶ್ಯಕ ವಸ್ತುಗಳನ್ನು ಖರೀದಿಸುವುದರಿಂದ ಉಳಿಯುತ್ತೇವೆ ಮತ್ತು ನಾವು ಸ್ವಲ್ಪ ಹಣವನ್ನು ಉಳಿಸುವುದರಿಂದ ಒಳ್ಳೆಯ ಕಂಪನಿಯನ್ನು ಹುಡುಕಿ, ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರ

ಕಲಿಕೆ 2: ಸ್ಟಾಕ್ ಪೀಕರ್ ದೃಷ್ಟಿಯಿಂದ ಈ ಜಗತ್ತನ್ನು ನೋಡಿ.

stockpicker seeing the world lesson in learn to earn book in kannada
see as stockpicker

ಈ ಪುಸ್ತಕದ ಎರಡನೇ ಕಲಿಕೆ ಅಕ್ಕಪಕ್ಕದ ಕಂಪನಿಗಳನ್ನು ಗಮನಿಸುವುದರ ಮೇಲಾಗಿದೆ. ಪೀಟರ್ ಲಿಂಚ್ ಪ್ರಕಾರ, ನೀವು ಒಬ್ಬ ಗ್ರಾಹಕನಾಗಿ ಕಂಪನಿಯ ಬಹು ವಿಷಯಗಳ ಮೇಲೆ ಗಮನಿಸಬಹುದು.

ಈಗಲೇ ಖರೀದಿಸಿ

ನಿಮಗೆ ಕಂಪನಿಯ ಯಾವುದಾದರೂ ವಸ್ತು ಇಷ್ಟವಾಯಿತೆಂದರೆ ನೀವು ಆ ಕಂಪನಿಯನ್ನು ಮುಂದಿನ ರಿಸರ್ಚ್ ಮಾಡಬಹುದು ಮತ್ತು ನೀವು ಗ್ರಾಹಕರ ದೃಷ್ಟಿಕೋನದಿಂದ, ನಿಮ್ಮ ಅಕ್ಕಪಕ್ಕದ ಜನರು ಆ ಕಂಪನಿಯ ವಸ್ತುಗಳನ್ನು ಖರೀದಿಸುತ್ತಾರೆಯೋ ಇಲ್ಲವೋ ಎಂದು ನೋಡಬಹುದು.

ಈ ಎಲ್ಲ ವಿಷಯದ ಜೊತೆಗೆ ನೀವು ಕಂಪನಿಯನ್ನು ಅದರ ಕಾಂಪಿಟೇಟರ್ ಜೊತೆಗೆ ಕಂಪೇರ್ ಮಾಡಬೇಕು. ಲೇಖಕರ ಪ್ರಕಾರ ನೀವು ಈ ರೀತಿಯ ಅಬ್ಸರ್ವೇಷನ್ ಮಾಡುವುದರಿಂದ ಕಂಪನಿಯ ಬಗ್ಗೆ ಅನೇಕ ವಿಷಯಗಳನ್ನು ತಿಳಿಯುತ್ತೀರಿ. ಆದರೂ ಅನೇಕರು ಇದರ ಲಾಭ ಪಡೆಯುವುದಿಲ್ಲ.

ಇದನ್ನು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ. ನೀವು ಒಬ್ಬ ಡಾಕ್ಟರ್ ಆಗಿದ್ದರೆ, ಯಾವ ಕಂಪನಿಯ ಔಷಧಿಗೆ ಡಿಮ್ಯಾಂಡ್ ಇದೆ ಎಂದು ಚೆನ್ನಾಗಿ ಗೊತ್ತಿರುತ್ತದೆ. ನೀವು ಬ್ಯಾಂಕಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಯಾವ ಬ್ಯಾಂಕ್ ಇಂಡಸ್ಟ್ರಿಯಲ್ಲಿ ಚೆನ್ನಾಗಿದೆ ಎಂಬುದು ತಿಳಿದಿರುತ್ತದೆ.

ನೀವು ಅಕ್ಕಪಕ್ಕದ ಕಂಪನಿಗಳನ್ನು ಈ ರೀತಿ ಗಮನಿಸಲು ಪ್ರಾರಂಭಿಸಿದಾಗ, ನಿಮ್ಮ ಹೂಡಿಕೆ ಮಾಡಲು ಒಂದು ಉಪಯುಕ್ತ ಇನ್ಸೈಡ್ ಸಿಗುತ್ತದೆ.

ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳು

ಕಲಿಕೆ 3: ಸಮಯದ ಮೇಲೆ ಷೇರು ಮಾರುಕಟ್ಟೆಯನ್ನು ನೋಡಬೇಡಿ.

do not time the stock market lesson in learn to earn book in kannada
do not time the market

ಅನೇಕ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ತಪ್ಪುಗಳನ್ನು ಮಾಡುತ್ತಾರೆ ಎಂದು ಲೇಖಕರು ಹೇಳುತ್ತಾರೆ. ಆ ತಪ್ಪು ಯಾವುದೆಂದರೆ ಹೂಡಿಕೆ ಮಾಡಲು ತಿದ್ದುಪಡಿಗೆ(correction) ಕಾಯುವುದು, ಇಲ್ಲ ತಮ್ಮ ಸ್ಟಾಕನ್ನು ಮಾರಲು ಮಾರುಕಟ್ಟೆಯ ಟಾಪ್‌ ಪ್ರೈಸ್ ಬಗ್ಗೆ ತಿಳಿದುಕೊಳ್ಳುವುದು.

ಆದರೆ ನಿಜ ಸಂಗತಿ ಏನೆಂದರೆ ಮಾರುಕಟ್ಟೆಯಲ್ಲಿ ತಿದ್ದುಪಡಿ ಯಾವಾಗ ಬರುತ್ತದೆ ಮತ್ತು ಮಾರುಕಟ್ಟೆಯ ಟಾಪ್ ಮತ್ತು ಬಾಟಮ್ ಪ್ರೈಸ್ ಯಾವುದು ಎಂದು ತಿಳಿಯಲು ಸಾಧ್ಯವಿಲ್ಲ.

ಲೇಖಕರ ಪ್ರಕಾರ, ನೀವು ಮಾರುಕಟ್ಟೆಯಲ್ಲಿ ಟಾಪ್ ಬಾಟಮ್ ನೋಡಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ, ನೀವು ಷೇರು ಮಾರುಕಟ್ಟೆಯ ಅನೇಕ ಅವಕಾಶಗಳನ್ನು(opportunity) ಮಿಸ್ ಮಾಡಿಕೊಳ್ಳುತ್ತೀರಾ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಅಧಿಕ ಸಮಯದವರೆಗೆ ಹೂಡಿಕೆ ಮಾಡುವುದರಿಂದ ಲಾಂಗ್ ಟರ್ಮ್ ಬೆನಿಫಿಟ್ಸ್ ಸಿಗುತ್ತದೆ.

ನೀವು 1954 ರಿಂದ 4 ದಶಕಗಳವರೆಗೆ ಪ್ರತಿ ತಿಂಗಳು SIP 500 ನಲ್ಲಿ ಇನ್ವೆಸ್ಟ್ ಮಾಡಿದ್ದರೆ, ನಿಮಗೆ 11.5 ರಷ್ಟು ವಾರ್ಷಿಕ ರಿಟರ್ನ್ ಸಿಗುತ್ತಿತ್ತು ಎಂದು ಲೇಖಕರು ಹೇಳುತ್ತಾರೆ.

ಅದೇ ಈ 40 ವರ್ಷಗಳಲ್ಲಿ ನೀವು ಅಧಿಕ ಲಾಭ ನೀಡಿದ 14 ತಿಂಗಳುಗಳನ್ನು ಮಿಸ್ ಮಾಡಿದರೆ ನಿಮಗೆ ಕೇವಲ 2.5 ರಷ್ಟು ವಾರ್ಷಿಕ ರಿಟರ್ನ್ ಸಿಗುತ್ತಿತ್ತು. ಹೀಗಾಗಿ ಸಮಯದನುಸಾರ ಹೂಡಿಕೆ ಮಾಡುವ ಬದಲು ಅಧಿಕ ಸಮಯ ಹೂಡಿಕೆ ಮಾಡಲು ಪ್ರಯತ್ನಿಸಿ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

ಕಲಿಕೆ 4: ಕಂಪನಿಯ ಆರ್ಥಿಕ ಸ್ಥಿತಿ ನೋಡಿ ಹೂಡಿಕೆ ಮಾಡಿ ಹೊರತು ಸ್ಟಾಕ್ ಪ್ರಸೈನಿಂದಲ್ಲ.

see company financial report lesson in learn to earn book in kannada
financial report

ಹೂಡಿಕೆ ಮಾಡುವಾಗ ನಾವು ಕೇವಲ ಶೇರ್ ಪ್ರೆಸೈ ನೋಡಿ ನಿರ್ಧಾರ ತೆಗೆದುಕೊಳ್ಳಬಾರದು ಎಂಬುದು ಈ ಪುಸ್ತಕದ ನಾಲ್ಕನೇ ಕಲಿಕೆಯಾಗಿದೆ. ನಾವು ಯಾವುದೇ ವಸ್ತು ಖರೀದಿಸುವಾಗ ಅದರ ಗುಣಮಟ್ಟ, ಬೆಲೆ ಮತ್ತು ಇನ್ನೂ ಅನೇಕ ವಿಷಯಗಳ ಬಗ್ಗೆ ಗಮನ ಹರಿಸುತ್ತೇವೆ.

ಅದೇ ರೀತಿಯೇ ನಾವು ಸ್ಟಾಕ್ ಖರೀದಿಸುವಾಗ, ನಾವು ಅದರ ಮ್ಯಾನೇಜ್ಮೆಂಟ್, ಅದರ ಬ್ಯುಸಿನೆಸ್, ಅದರ ಆನ್ಯುಯಲ್ ರಿಪೋರ್ಟ್ ಹೇಗಿದೆ ಇವೆಲ್ಲದರ ಬಗ್ಗೆ ಗಮನ ಹರಿಸಬೇಕು.

ಲೇಖಕರು ನೈಕ್ ಉದಾಹರಣೆ ನೀಡುವ ಮೂಲಕ ಇದರ ಬಗ್ಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 1987 ರಂದು ನೈಕ್ ಫೈನಾನ್ಶಿಯರ್ ರಿಪೋರ್ಟ್ ತುಂಬಾ ಚೆನ್ನಾಗಿತ್ತು. ಇದರಿಂದ ಇದರ ಸ್ಟಾಕ್‌ ಪ್ರೈಸ್ 7$ ನಿಂದ 12$ ಆಯಿತು. ಆದರೆ ಅಕ್ಟೋಬರ್ 1987 ರಂದು ಮಾರ್ಕೆಟ್ನಲ್ಲಿ ಬಿದ್ದಾಗ, ಆ ಕಂಪನಿಯ ಸ್ಟಾಕ್‌ ಪ್ರೈಸ್ ಮತ್ತೆ 7$ ಆಯಿತು.

ಆ ಸಮಯದಲ್ಲಿ ಕೇವಲ ಸ್ಟಾಕ್‌ ಪ್ರೈಸ್ ನೋಡಿ ನಿರ್ಧಾರ ಮಾಡುವ ಅನೇಕ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಿರಲಿಲ್ಲ. ಆದರೆ ಈ ಕಂಪನಿಯ ಆನ್ಯುಯಲ್ ರಿಪೋರ್ಟ್ ಓದಿದ ಹೂಡಿಕೆದಾರರಿಗೆ, ಕಂಪನಿಯ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿದೆ ಎಂಬುದು ತಿಳಿದಿತ್ತು.

ಅಂದಿನಿಂದ 5 ವರ್ಷಗಳವರೆಗೆ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ 12 ರಷ್ಟು ರಿಟರ್ನ್ ಸಿಕ್ಕಿತು. ಆದರೆ ಕೇವಲ ಸ್ಟಾಕ್‌ ಪ್ರೈಸ್ ನೋಡಿ ನಿರ್ಧಾರ ಮಾಡುವ ಹೂಡಿಕೆದಾರರು ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡರು. ಹೀಗಾಗಿ ನಾವು ಕಂಪನಿಯ ಸ್ಟಾಕ್‌ ಪ್ರೈಸ್ ಜೊತೆಗೆ ಅದರ ಆರ್ಥಿಕ ಸ್ಥಿತಿಯ ಬಗ್ಗೆಯೂ ತಿಳಿದುಕೊಳ್ಳಬೇಕು.

ಈಗಲೇ ಖರೀದಿಸಿ

ಇದಾಗಿತ್ತು ಈ ಪುಸ್ತಕದ ಟಾಪ್ 4 ಕಲಿಕೆ. ಈ 4 ಕಲಿಕೆಯಲ್ಲಿ ನಿಮಗೆ ಯಾವುದು ಉಪಯುಕ್ತವೆನಿಸಿತು ಎಂಬುದನ್ನು ಕಮೆಂಟ್ ಸೆಕ್ಷನ್ನಲ್ಲಿ ತಿಳಿಸಿ. ಹಾಗೆ ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ.

Mahithi Thana

More by this author

Similar category

Explore all our Posts by categories.

commenters

sagar kotabagi • March 6th,2022

Thank you sir