Website designed by @coders.knowledge.

Website designed by @coders.knowledge.

7 Money Traps of 20s | 20ರ ವಯಸ್ಸಿನಲ್ಲಿ ನಿಮ್ಮ ಹಣ ಖರ್ಚಗುವ 7 ಬಲೆಗಳು

Watch Video

ನಿಮ್ಮ ಇಪ್ಪತ್ತರ ವಯಸ್ಸಿನಲ್ಲಿ ಹಣವು ನೀರಿನಂತೆ ಖರ್ಚಾಗುತ್ತಿರುತ್ತದೆ. ನೀವು ನಿಮ್ಮ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಿ, ಉಳಿಸಿಕೊಳ್ಳುವುದು ತುಂಬಾ ಮುಖ್ಯ. ಇದು ನಿಮಗೆ ಒಳ್ಳೆಯದೇ. ನಾವು ಸದ್ಯಕ್ಕೆ ಈ ಲೇಖನದಲ್ಲಿ ನಿಮ್ಮ ಹಣ ಖರ್ಚಾಗುವ 7 ಬಲೆಗಳ ಬಗ್ಗೆ ತಿಳಿಸುತ್ತಿದ್ದೇವೆ. ಹೀಗಾಗಿ ಈ ಲೇಖನ ಲೇಖನವನ್ನು ಕೊನೆತನಕ ಓದಿ.

1. ದುಬಾರಿ ಜನರು.

expensive people money trap in kannada
Expensive People

ನೀವು ಕೆಲವು ಜನರೊಂದಿಗೆ ಗೆಳೆತನ ಬೆಳೆಸಿಕೊಂಡರೆ ಅವರಿಗೆ ದುಬಾರಿ ಉಡುಗೊರೆ, ದುಬಾರಿ ಜಾಗಗಳಿಗೆ ಕರೆದುಕೊಂಡು ಹೋಗುವುದು ಈ ರೀತಿ ಮಾಡುತ್ತೀರಾ. ಇದರ ಪರಿಣಾಮದ ಬಗ್ಗೆ ನಿಮಗೆ ಮೊದಲಿಗೆ ತಿಳಿಯುವುದಿಲ್ಲ. ನಿಮ್ಮ ಇಪ್ಪತ್ತರ ವಯಸ್ಸಿನಲ್ಲಿ ನಿಮ್ಮ ಹಣವನ್ನು ಗಳಿಸುವುದು ಮತ್ತು ಉಳಿಸುವುದು ಬಹು ಮುಖ್ಯವಾಗಿದೆ. ನೀವು ಉಳಿಸಿದ ಹಣವನ್ನು ಸರಿಯಾದ ಸಮಯದಲ್ಲಿ ಹೂಡಿಕೆಯಲ್ಲಿ ಹಾಕಬೇಕು. ನಿಮ್ಮಿಂದ ತುಂಬಾನೇ ನಿರೀಕ್ಷಿಸುವ ಕೆಲವು ಜನರು ಇರುತ್ತಾರೆ. ಅವರೊಂದಿಗೆ ಹೇಗಿರಬೇಕೆಂಬ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇವೆ.

ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್

2. ತೋರಪಡಿಸುವಿಕೆ(show off).

show off money trap in kannada
Expensive Cloths

ಚೆನ್ನಾಗಿ ಕಾಣಲು ಯಾರಿಗೆ ತಾನೆ ಇಷ್ಟವಿರುವುದಿಲ್ಲ. ಚೆನ್ನಾಗಿ ಕಾಣಲು ದುಬಾರಿ ಬಟ್ಟೆಗಳನ್ನು ಖರೀದಿಸುವುದು, ದುಬಾರಿ ಉಪಕರಣಗಳನ್ನು ಖರೀದಿಸುವುದು, ನಿಮ್ಮ ಆಯ್ಕೆ(choice) ಇರಬಹುದು. ಆದರೆ ಇದು ಒಂದು ರೀತಿ ಹಣದ ಬಲೆ(money trap) ಆಗಿದೆ. ಉದಾಹರಣೆಗೆ ನೀವು 10,000 ಗಳಿಸುತ್ತೀರಿ ಎಂದುಕೊಳ್ಳಿ. ಈ 10,000 ದೊಡ್ಡ ಭಾಗವನ್ನು ನೀವು ದುಬಾರಿ ಕೈಗಡಿಯಾರ, ದುಬಾರಿ ಬಟ್ಟೆ ಖರೀದಿಸಲು ಬಳಸುತ್ತೀರಾ. ಇದರಿಂದ ನೀವು ಕೆಲವು ದಿನ ಚೆನ್ನಾಗಿ ಕಾಣಬಹುದು. ಆದರೆ ನಿಮ್ಮ ಜೇಬಿನಿಂದ ಹಣ ಖಾಲಿಯಾದರೆ ನಿಮ್ಮ ಮುಖದಲ್ಲಿನ ಖುಷಿಯೇ ಇರುವುದಿಲ್ಲ. ಹೀಗಾಗಿ ಸ್ವಲ್ಪ ಸಮಯದವರೆಗೆ ಆದರೂ ದುಬಾರಿ ವಸ್ತುಗಳ ಬದಲು ಕಡಿಮೆ ಬೆಲೆಯ ವಸ್ತುಗಳನ್ನು ಖರೀದಿಸಿ. ಉದಾಹರಣೆಗೆ 500₹ ಬಟ್ಟೆಯನ್ನು ಖರೀದಿಸುವ ಬದಲು 200₹ ಬಟ್ಟೆಯನ್ನು ಖರೀದಿಸಿ. ಯಾರೂ ನಿಮ್ಮನ್ನು ಜಡ್ಜ್(judge) ಮಾಡುವುದಿಲ್ಲ.

ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?

ಜನರು ಮನುಷ್ಯ ಯಾವ ರೀತಿ ಇದ್ದಾನೆ ಎಂಬುದರ ಮೇಲೆ ಜಡ್ಜ್ ಮಾಡುತ್ತಾರೆ ಹೊರತು, ಅವನ ಹತ್ತಿರ ಇರುವ ವಸ್ತುಗಳಿಂದಲ್ಲ. ಒಂದು ದಿನ ನಿಮ್ಮ ಹತ್ತಿರ ಎಷ್ಟು ಹಣ ಇರುತ್ತದೆಯೆಂದರೆ ಜನಗಳಿಗೆ ನೀವು ತೊರಪಡಿಸುವಂತೆ ಕಾಣುತ್ತೀರಾ. ಆದರೆ ಅವರಿಗೆ ನಿಮ್ಮ ನೀವು ತೋರಿಸುವುದಕ್ಕಿಂತ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿದೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ನೀವು ಅದನ್ನು ನಿರ್ಮಾಣ ಮಾಡಿ ಕೇವಲ ತೊರಪಡಿಸುತ್ತಾ ಕೂರಬೇಡಿ.

3. ದುಬಾರಿ ಫೋನ್ ಮತ್ತು ವಿದ್ಯುತ್ ಉಪಕರಣಗಳು.

expensive smartphones money trap in kannada
Expensive Phones

ಎಲ್ಲಾರಿಗೂ ದುಬಾರಿ ಸ್ಮಾರ್ಟ್ ಫೋನ್ ಬೇಕೇ ಬೇಕು. ಅದು ತಪ್ಪಲ್ಲ. ಆದರೆ ನಿಮ್ಮ ಗಳಿಕೆ ನಿಮ್ಮ ಖರ್ಚಿಗಿಂತ ಹೆಚ್ಚಿರಬೇಕು. 20,000 ಗಳಿಸುವವರು 10,000ದಿಂದ 15,000 ರೂಪಾಯಿಯ ಸ್ಮಾರ್ಟ್ ಫೋನ್ ಖರೀದಿಸುತ್ತಾರೆ. ನೀವು 50,000 ಸ್ಮಾರ್ಟ್ ಫೋನ್ ಖರೀದಿಸಲು ಬಯಸುತ್ತೀರ. ಆದರೆ ನಿಮಗೆ ಬೇಕಾದ ಕೆಲಸ ಕೇವಲ 10,000ದಿಂದ 14,000 ಸ್ಮಾರ್ಟ್ ಫೋನ್‍ನಲ್ಲಿ ನಡೆಯುವುದಾದರೆ ಅದುವೇ ಸಾಕು. ಸ್ಮಾರ್ಟ್ ಫೋನ್ ಅಷ್ಟೇ ಅಲ್ಲದೆ ಜನರು ದುಬಾರಿ ಇಯರ್ ಫೋನ್‍ನಂತಹ ಉಪಕರಣಗಳನ್ನು ಖರೀದಿಸುತ್ತಾರೆ. ಈ ರೀತಿಯ ದುಬಾರಿ ಖರ್ಚನ್ನು ನಿಲ್ಲಿಸಿ. ನಿಮ್ಮ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿ.

ಇದನ್ನು ಓದಿ: ಜಪಾನ್ ಜಗತ್ತಿಗಿಂತ ವರ್ಷಗಳಷ್ಟು ಏಕೆ ಮುಂದಿದೆ?

4. ನಿಮ್ಮ ಗೆಳೆಯರಿಗೆ ಸಾಲ ನೀಡುವುದು.

giving loan to friends money trap in kannada
Giving Loan

ಜನರು ನಿಮಗೆ ಸಾಲ ಕೇಳಲು ಬಂದಾಗ ಮತ್ತು ನೀವು ಅವರಿಗೆ ಹಣ ಕೇಳಲು ಹೋದಾಗ ತುಂಬಾನೇ ಬದಲಾಗುತ್ತಾರೆ. ಇದರ ಅರ್ಥ ಅವರ ವರ್ತನೆ(attitude) ಬದಲಾಗುತ್ತದೆ. ನಿಮ್ಮ ಹಣ ಹಿಂತಿರುಗಿಸುವ ವಿಷಯ ಬಂದಾಗ ಅವರು ನಿಮ್ಮ ಬಾಸ್ ಆಗುತ್ತಾರೆ. ನೀವು ಯಾವುದೇ ವಯಸ್ಸಿನಲ್ಲಿ ಇದ್ದರೂ ನಿಮಗೆ ಹಣವನ್ನು ಕೇಳುವ ಜನರು ಇದ್ದೇ ಇರುವರು. ಅವರು ನಿಮ್ಮ ಗೆಳೆಯರು, ಕುಟುಂಬಸ್ಥರು ಅನೇಕರು ಇರಬಹುದು. ಹೀಗಾಗಿ ನೀವು ಯಾರಿಗೂ ಹಣವನ್ನು ಕೊಡಬೇಡಿ. ಒಂದು ವೇಳೆ ಯಾರಾದರೂ ಹಣ ಕೇಳಿದರೆ ಅವರ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ಕೈಯಲ್ಲಿ ಆದಷ್ಟು ಹಣ ನೀಡಿ. ಆದರೆ ಅವರಿಗೆ ಹಿಂತಿರುಗಿಸಲು ಕೇಳಬೇಡಿ. ಇನ್ನೂ ಇತರರಿಗೆ ನೀವು ಯಾರಿಗೂ ಸಾಲ ನೀಡುವುದಿಲ್ಲ ಎಂದು ಹೇಳಿ ಬಿಡಿ. ಇದರಿಂದ ನೀವು ಕೇವಲ ಒಂದು ಬಾರಿ ಕೆಟ್ಟವರಾಗುತ್ತೀರಾ, ಆದರೆ ಜೀವನ ಪರ್ಯಂತ ರಾಜನ ರೀತಿ ಇರುತ್ತೀರಾ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳು

5. ಕ್ರೆಡಿಟ್ ಕಾರ್ಡ್‌ನ ಅತಿಯಾದ ಬಳಕೆ.

credit card overuse money trap in kannada
Credit Card Overuse

ನಿಮಗೆ ಕೆಲಸ ಸಿಕ್ಕ ನಂತರ ಕ್ರೆಡಿಟ್ ಕಾರ್ಡ್ ಕೂಡಾ ಸಿಗುತ್ತದೆ. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ, ಆದರೆ ಅತಿಯಾಗಿ ಬಳಸಬೇಡಿ. ಕ್ರೆಡಿಟ್ ಕಾರ್ಡ್ ಇರುವುದು ಉತ್ತಮ. ಅದನ್ನು ಸ್ವೈಪ್ ಮಾಡುವಾಗ ನಿಮ್ಮ ಉಳಿತಾಯ ಖಾತೆಯಲ್ಲಿ(savings account) ಅಷ್ಟು ಹಣ ಇದೆಯೇ ಎಂಬುದನ್ನು ಯೋಚಿಸಿ. ಡೆಬಿಟ್ ಕಾರ್ಡ್‌ನಿಂದ ಮಾಡಲಾಗದ ವರ್ಗಾವಣೆಯನ್ನು ನೀವು ಕ್ರೆಡಿಟ್ ಕಾರ್ಡ್‌ನಿಂದ ಮಾಡಿದರೆ ನೀವು ಒಂದು ಬಲೆಯಲ್ಲಿ(trap) ಸಿಕ್ಕಿಕೊಳ್ಳುತ್ತೀರಿ. ಈ ಬಲೆ 20ರ ವಯಸ್ಸಿನಲ್ಲಿ ಅಧಿಕವಾಗಿದೆ. ಹೀಗಾಗಿ ಇದರಿಂದ ಉಳಿದುಕೊಳ್ಳಿ.

ಇದನ್ನು ಓದಿ: ಸಮಯ ಸಾಲುತ್ತಿಲ್ಲವೆಂದರೆ 8*3 ಮಾರ್ಗ ಬಳಸಿ

6. ಹೂಡಿಕೆ ಮಾಡದಿರುವುದು.

not investing money trap in kannada
Not Investing

ಹೂಡಿಕೆಯನ್ನು ನೀವು ಎಷ್ಟು ಬೇಗನೇ ಪ್ರಾರಂಭಿಸುತ್ತೀರೋ, ಅಷ್ಟೂ ಅದರ ಲಾಭವಿದೆ. ಹೂಡಿಕೆಯಲ್ಲಿ ಕಾಂಪೌಂಡಿಂಗ್ ಸಂಯೋಜಿತ ಇನ್ಟರೆಸ್ಟ್(compounding interest) ನಿಮ್ಮ ಹಣವನ್ನು ಕನಿಷ್ಠ ಎರಡರಷ್ಟು ಮಾಡಬಹುದು. ಒಬ್ಬ 20ರ ವಯಸ್ಸಿನಿಂದ ಪ್ರತಿ ತಿಂಗಳು 5000 ಹೂಡಿಕೆ ಮಾಡಲು ಪ್ರಾರಂಭಿಸಿ, ಅವನ 70ರ ವಯಸ್ಸಿನಲ್ಲಿ ನಿವೃತ್ತಿ(retire) ಆಗುತ್ತಾನೆ. ಅವನು 50 ವರ್ಷಗಳಿಗೆ ಹೂಡಿಕೆ ಮಾಡುತ್ತಾನೆ. ಹೀಗೆ 30ರ ವಯಸ್ಸಿನಲ್ಲಿ ಪ್ರಾರಂಭಿಸಿ 70ರ ವಯಸ್ಸಿನ ತನಕ, 40 ವರ್ಷ ಹೂಡಿಕೆ ಮಾಡುವವನಿಗಿಂತ ಲಾಭದಲ್ಲಿ ಈ 20ನೇ ವಯಸ್ಸಿನವನು ತುಂಬಾನೇ ಮುಂದಿರುತ್ತಾನೆ. ಅವರಿಬ್ಬರ ನಡುವೆ ತುಂಬಾ ವ್ಯತ್ಯಾಸವಿರುತ್ತದೆ. ಆ ವ್ಯತ್ಯಾಸ ನಿಮಗೆ ಅಚ್ಚರಿ ನೀಡುತ್ತದೆ.

ಇದನ್ನು ಓದಿ: ಭೂಮಿಯ ಜನ್ಮದಿಂದ ಜೀವಿಗಳ ಅಸ್ತಿತ್ವದ ತನಕ

7. ತಿರುಗಾಡುವುದು.

expensive travel money trap in kannada
Going Out

ಸಿನಿಮಾ, ಹೋಟೆಲ್, ಪಾರ್ಕ್‌ಗೆ ಹೋಗುವುದು ತಪ್ಪಲ್ಲ. ನಿಮ್ಮ ಜೀವನವನ್ನು ಆನಂದಿಸಬೇಕು. ಆದರೆ ಅದು ನಿಮಗೆ ದುಬಾರಿಯಾದರೆ ಅಷ್ಟು ಒಳ್ಳೆಯದಲ್ಲ. ನೀವು ನಿಮ್ಮ 20ರ ವಯಸ್ಸಿನಲ್ಲಿ ಏನು ಮಾಡುತ್ತೀರಾ ಎಂಬುದು ನಿಮ್ಮ 30, 40, 50ರ ಜೀವನವನ್ನು ತಿಳಿಸುತ್ತದೆ. ಜೀವನ ಸಾಗುತ್ತಿರುವಾಗ ಬದುಕಿನಲ್ಲಿ ಸಮಸ್ಯೆಗಳು ದೊಡ್ಡದಾಗುತ್ತ ಹೋಗುತ್ತವೆ ಮತ್ತು ಖರ್ಚು ಕೂಡ ಅದನ್ನೇ ಅನುಸರಿಸುತ್ತದೆ. ಹೀಗಾಗಿ ನೀವು ತಿರುಗಾಡಿ, ಆದರೆ ದುಬಾರಿ ಖರ್ಚು ಮಾಡಿಕೊಂಡು ತಿರುಗಾಡಬೇಡಿ. ನೀವು ಒಂದು ಪ್ರವಾಸಕ್ಕೆ(trip) ಹೋಗುತ್ತೀರಾ. ಅಲ್ಲಿ ತುಂಬಾ ಖರ್ಚಾಗುತ್ತದೆ. ಅದನ್ನು ಮತ್ತೆ ಗಳಿಸಲು ನೀವು ಹಲವಾರು ತಿಂಗಳು ಕಷ್ಟಪಡುತ್ತೀರಿ. ಹೀಗಾಗಿ ನೀವು ಇದರ ಭಾರವನ್ನು ಹೊರಬೇಡಿ. ದುಬಾರಿ ಜಾಗಗಳಿಗೆ ನೀವು ಗಳಿಸುವ ತನಕ ಹೋಗದಿರುವುದು ಒಳ್ಳೆಯದು. ಅಲ್ಲಿಗೆ ಹೋದರು ನೀವು ತುಂಬಾ ಖರ್ಚು ಮಾಡಬೇಕು ಎಂಬುದು ಇರುವುದಿಲ್ಲ. ಹೀಗಾಗಿ ನಿಮ್ಮ ತಿಂಗಳ ಖರ್ಚಿನ ಬಗ್ಗೆ ಒಂದು ಪುಸ್ತಕದಲ್ಲಿ ಬರೆಯಿರಿ ಮತ್ತು ಖರ್ಚನ್ನು ನಿರ್ವಹಿಸಿ.

ಕೊನೆಯಲ್ಲಿ ತಿಳಿಸುವುದಾದರೆ ಎಲ್ಲರಿಗೂ ಖರ್ಚು ಇದ್ದೇ ಇರುತ್ತದೆ. ಅದನ್ನು ಯಾವ ರೀತಿ ನಿಭಾಯಿಸುವುದು ಎಂಬುದು ನಿಮ್ಮ ಮೇಲೆ ಬಿಟ್ಟಿದೆ. ನಾವು ನಿಮಗೆ ಕೇವಲ ಸಲಹೆ ನೀಡಲು ಸಾಧ್ಯ. ಆದರೆ ಅದನ್ನು ಅಳವಡಿಸಿಕೊಳ್ಳುವುದು ನಿಮ್ಮ ಮೇಲೆ ನಿಂತಿದೆ.

Mahithi Thana

More by this author

Similar category

Explore all our Posts by categories.

No Comments