Watch Video
ರಾತ್ರಿಯಲ್ಲಿ ನಿದ್ರಿಸಲು ನಿಮಗೆ ತೊಂದರೆ ಇದ್ದರೆ, ನೀವು ಒಬ್ಬಂಟಿಯಾಗಿಲ್ಲ. ಜಗತ್ತಿನಾದ್ಯಂತ ಸುಮಾರು 35 ರಿಂದ 50ರಷ್ಟು ವಯಸ್ಕರು ನಿದ್ರಾಹೀನತೆಯನ್ನು ಅನುಭವಿಸುತ್ತಿದ್ದಾರೆ. ಅನೇಕ ಜನರಿಗೆ ನಿದ್ದೆ ಬಾರದೆ ಇರಲು ಕಾರಣ ಒತ್ತಡವಾಗಿದೆ. ಏಕೆಂದರೆ, ಒತ್ತಡದಿಂದ ಆತಂಕ ಮತ್ತು ಉದ್ವೇಗಕ್ಕೆ ಕಾರಣವಾಗಿ, ನಿದ್ರಿಸುವುದು ಕಷ್ಟವಾಗುತ್ತದೆ. ಒತ್ತಡದಲ್ಲಿ ನಿದ್ದೆ ಮಾಡಿದರೆ ನಿಮಗೆ ಎದ್ದ ತಕ್ಷಣ ಅಷ್ಟು ವಿಶ್ರಾಂತಿ ಸಿಕ್ಕ ಹಾಗೆ ಅನಿಸುವುದಿಲ್ಲ.
ಇದನ್ನು ಓದಿ: ಯಶಸ್ಸು ಕಾಣಲು ಚಾಣಕ್ಯರ ನಾಲ್ಕು ನೀತಿಗಳುಉತ್ತಮ ನಿದ್ದೆ ಮಾಡಲು ಧ್ಯಾನ ನಿಮಗೆ ಸಹಾಯ ಮಾಡುತ್ತದೆ. ಧ್ಯಾನದಿಂದ ನಿಮ್ಮ ಮನಸ್ಸು ಮತ್ತು ದೇಹ ಶಾಂತಗೊಳ್ಳುತ್ತದೆ. ಮಲಗುವ ಮುನ್ನ ಧ್ಯಾನ ಮಾಡುವುದರಿಂದ ನಿಮ್ಮ ನಿದ್ರಾಹೀನತೆ ಕಡಿಮೆಮಾಡಲು ಸಹಾಯಮಾಡುತ್ತದೆ. ನಿದ್ರೆಯ ವಿವಿಧ ರೀತಿಯ ಧ್ಯಾನವನ್ನು ಇಲ್ಲಿ ನಾವು ತಿಳಿಸುತ್ತಿದ್ದೇವೆ.
ನೀವು ಧ್ಯಾನ ಮಾಡುವಾಗ ವಿವಿಧ ರೀತಿಯ ದೈಹಿಕ ಬದಲಾವಣೆಗಳು ಸಂಭವಿಸುತ್ತದೆ. ಈ ಬದಲಾವಣೆಗಳು ನಿಮ್ಮ ದೇಹದಲ್ಲಿನ ನಿರ್ದಿಷ್ಟ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವ ಮೂಲಕ ನಿದ್ರೆಯನ್ನು ಪ್ರಾರಂಭಿಸುತ್ತದೆ.
ಜಮಾ ಇಂಟರ್ನಲ್ ಮೆಡಿಸಿನ್ ಟ್ರಸ್ಟೆಡ್ ಸೋರ್ಸ್‌ನಲ್ಲಿ ಪ್ರಕಟವಾದ 2015ರ ಅಧ್ಯಯನವೊಂದರಲ್ಲಿ, ನಿದ್ರೆಯ ಸಮಸ್ಯೆ ಇರುವ 49 ವಯಸ್ಕರಿಗೆ 3 ವಾರಗಳ ಕಾಲ ಧ್ಯಾನ ಮಾಡಿ ನಿದ್ರಿಸಲು ತಿಳಿಸಲಾಗಿತ್ತು. 3 ವಾರದ ನಂತರ ಅವರ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗಿತ್ತು. ಸಂಶೋಧಕರ ಪ್ರಕಾರ, ಧ್ಯಾನವು ಹಲವಾರು ವಿಧಗಳಲ್ಲಿ ಸಹಾಯ ಮಾಡುತ್ತದೆ. ನಿದ್ರೆಯ ಸಮಸ್ಯೆಗಳು ಒತ್ತಡ ಮತ್ತು ಚಿಂತನೆಯಿಂದ ಉಂಟಾಗುತ್ತದೆ. ಧ್ಯಾನ ಮಾಡುವುದರಿಂದ ಒತ್ತಡ ಮತ್ತು ಚಿಂತನೆ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲದೆ ಧ್ಯಾನವು, ನಿದ್ರೆ ಬರಿಸುವ ಮೆಲಟೋನಿನ್ ಹಾರ್ಮೋನನ್ನು ಹೆಚ್ಚಿಸುತ್ತದೆ, ಹೃದಯಬಡಿತವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಸಕ್ರಿಯಗೊಳಿಸುತ್ತದೆ.
ಇದನ್ನು ಓದಿ: ಪರೀಕ್ಷೆಯ ಮುಂಚೆ ಓದುವುದು ಹೇಗೆ?ಧ್ಯಾನವು ಸರಳ ಅಭ್ಯಾಸವಾಗಿದ್ದು, ಅದನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದು. ಧ್ಯಾನ ಮಾಡಲು ನಿಮ್ಮ ಕೆಲವು ನಿಮಿಷಗಳು ಬೇಕು ಅಷ್ಟೇ. ಧ್ಯಾನದ ದಿನಚರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಧ್ಯಾನಕ್ಕಾಗಿ ಸಮಯವನ್ನು ನಿಗದಿ ಪಡಿಸುವ ಮೂಲಕ, ನೀವು ಅದರ ಪ್ರಯೋಜನಗಳನ್ನು ಆನಂದಿಸುವ ಸಾಧ್ಯತೆಯಿದೆ.
ನೀವು ಮಲಗಿ ಧ್ಯಾನ ಮಾಡಲು ಬಯಸಿದರೆ, ಮೊದಲು ಆರಾಮದಾಯಕ ಸ್ಥಿತಿಯಲ್ಲಿ ಮಲಗಿ ಕಣ್ಣು ಮುಚ್ಚಿ.
ಈ ಮಲಗುವ ಧ್ಯಾನವನ್ನು "ಡೀಪ್ ಸ್ಲೀಪಿಂಗ್" ಎಂದು ಕರೆಯಲಾಗುತ್ತದೆ. ಈ ರೀತಿ ನಿದ್ರಿಸುವುದರಿಂದ ನಿಮ್ಮ ದೇಹಕ್ಕೆ ವಿಶ್ರಾಂತಿ ಪೂರ್ತಿಯಾಗಿ ಸಿಗುತ್ತದೆ.
ನಿದ್ರೆಗೆ ಧ್ಯಾನ ಮಾಡಲು ನೀವು ಪ್ರಯತ್ನಿಸುತ್ತಿರುವಾಗ, ತಾಳ್ಮೆಯಿಂದಿರಿ. ಡೀಪ್ ಸ್ಲೀಪಿಂಗ್ ಮಾಡುವ ಮುಂಚೆ ನೀವು ಮೊದಲು 3 ರಿಂದ 5 ನಿಮಿಷ ಕುಳಿತಿರುವ ಸ್ಥಿತಿಯಲ್ಲಿ ಧ್ಯಾನಮಾಡಿ. ಕಾಲಾಂತರದಲ್ಲಿ ನೀವು ಧ್ಯಾನದ ಸಮಯವನ್ನು 15 ರಿಂದ 20 ನಿಮಿಷಗಳಿಗೆ ಹೆಚ್ಚಿಸಬಹುದು. ನಿಮ್ಮ ಮನಸ್ಸನ್ನು ಶಾಂತಗೊಳಿಸುವುದು ಹೇಗೆ ಎಂದು ಕಲಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
Explore all our Posts by categories.
Mahithi Thana 1083
Mahithi Thana 851
See all comments...
sathish kumar • February 11th,2022
Tqu